June 23, 2014

ಸಾಗರದಾಚೆ

ಅಂದು 11 March 2014, ಮೊದಲಸಲ ನನ್ನ 24 ವರ್ಷದ ಜೀವನದಲ್ಲಿ ಮನೆಯಿಂದ ಹೊರಗೆ ಹೊರಟಿದ್ದೆ Germanyಗೆ. Office ಕೆಲಸ ಎಂಬುದಷ್ಟೇ ಕಾರಣ. ಹೊರದೇಶ, ಹೊಸಭಾಷೆ, ಹೊಸ ಸಂಸೃತಿ ಹೇಗೆ ಹೊಂದಿಕೊಳ್ಳಬಹುದು ಎಂಬ ದುಗುಡ, ಅದಕ್ಕಿಂತಲೂ ಹೆಚ್ಚಾಗಿ, ಭಯ, ನನಗಲ್ಲ ಅಮ್ಮನಾಗಿತ್ತು. ನನಗೋ ಒಬ್ಬನೇ ಇರುವುದಕ್ಕಿಂತ ಅಡುಗೆ ನಾನೇ ಮಾಡಿಕೊಳ್ಳಬೇಕಲ್ಲ ಎನ್ನುವುದಷ್ಟೇ ಚಿಂತೆಯಾಗಿತ್ತು. ಮಿಕ್ಕವಿಚಾರವೆಲ್ಲ ಏನು ಅನಿಸುತ್ತಿರಲ್ಲಿಲ್ಲ. ರಾತ್ರಿ 1 ಗಂಟೆಗೆ ಅಮ್ಮ, ಕೃಷ್ಣ ಮಾವ, ಸಿಂಹನೊಂದಿಗೆ Airportಗೆ ಹೊರಟೆ. ಹೋಗಬೇಕಾದರೆ ಭಾರತವನ್ನು miss ಮಾಡಿಕೊಳ್ಳುತ್ತಿದ್ದೆ ಎಂದು ಅನಿಸಿತು.

ಮೊದಲ flight journey, ಆದರೂ ಅಂತ excitement ಇರಲಿಲ್ಲ. Qatar airwaysನಲ್ಲಿ ಹೊರಟ್ಟಿದ್ದೆ. Flight take off ಆಗಬೇಕಾದರೆ ಕೆಲವರ ಮುಖದಲ್ಲಿ ಗಾಬರಿ, ಹೆದರಿಕೆ ಕಾಣಿಸಿತು ಆದರೆ, ನನಗೆ ಅಂತದ್ದೇನು ಆಗಲ್ಲಿಲ್ಲ. ಹೋಗಬೇಕಾದರೆ ಮಧ್ಯದಲ್ಲಿ ಕುಡಿಯಲು, ತಿನ್ನಲು ಸಮಯಕ್ಕೆ ಸರಿಯಾಗಿ ತಂದುಕೊಡುತ್ತಿದ್ದರು. ಪಕ್ಕದಲ್ಲಿದ್ದವರನ್ನು ಮಾತಾಡಿಸುತ್ತಿದ್ದೆ. ಹಾಗೆ, ಸಮಯಕಳೆಯಿತು. 4:30 ಗಂಟೆ ಪ್ರಯಾಣದ ನಂತರ Dohaದಲ್ಲಿ ಇಳಿದೆವು. ಅಲ್ಲಿನ airport ತುಂಬ ದೊಡ್ಡದಾಗಿತ್ತು. ಬಹುಶಃ 3 terminal ಇದ್ದಿರಬಹುದು, ಒಂದೊಂದು terminal 30 gates ಇತ್ತು. ನಾನು terminal 1 ರಿಂದ 2ಗೆ ಹೋಗಬೇಕಿತ್ತು. Germanyಗೆ ಹೋರಟ್ಟಿದ್ದ 3 ಜನ ಪರಿಚಯವಾಗಿದ್ದರು, ನಾವು ಒಟ್ಟಿಗೆ flightನಿಂದ ಇಳಿದೆವು. Terminal 2ಗೆ ಹೊಗುವುದಕ್ಕೆ Benz bus ಬಂತು. ಅಲ್ಲಿ 1 ಗಂಟೆ ಸಮಯವಿತ್ತು. ಆ airport ಒಂದು ರೀತಿ ದೊಂಭಿಯಾಗಿತ್ತು. ತುಂಬಾ ಜನ ನೋಡಿ ಸುಸ್ತಾಗಿತ್ತು ಅಲ್ಲಿ ಸುತ್ತಾಮುತ್ತಾ ನೋಡಿದರೆ ಆ ದೇಶದ ಶ್ರೀಮಂತಿಕೆ ತಿಳಿಯುತ್ತಿತ್ತು. Petroleum ಅವರ ಆದಾಯದ ಮೂಲ ಎಂಬುದು ಮನಸ್ಸಿಗೆ ಬಂತು.

ಅಲ್ಲಿಂದ Germanyಗೆ ಹೊರಟೆವು, flightನಿಂದ ಹೊರಗೆ ದೃಶ್ಯ ಮನೋಹರವಾಗಿತ್ತು. Doha airport ಸಮುದ್ರ ತೀರದಲ್ಲಿ ನಿರ್ಮಾಣವಾಗಿತ್ತು, ನೋಡಿ ಖುಷಿಯಾಯಿತು. ಈ ಸಲ ನನ್ನ ಪಕ್ಕದಲ್ಲಿ ಯಾರೋ Chinaದವರು ಕೂತಿದ್ದರು. ಅವರಿಗೆ English ಬರುತ್ತಿರಲ್ಲಿಲ್ಲ, ಅವರ ಭಾಷೆ ನನಗೆ ತಿಳಿಯದಾಗಿತ್ತು ಆದ್ದರಿಂದ ಮಾತಾಡುವ ಪ್ರಮೇಯವೇ ಬರಲಿಲ್ಲ. ಏನು ಮಾಡಲು ತೋಚಲಿಲ್ಲ, ರಾತ್ರಿ ಎಚ್ಚರವಾಗಿದ್ದೆ ಆದ್ದರಿಂದ ನಿದ್ರೆಗೆ ಜಾರಿದೆ. ಸಂಜೆಗೆ ನಾವು Frankfurt airport ತಲುಪಿದೆವು. Doha airport ಅಷ್ಟು ದೊಡ್ಡದಾಗಿರಲ್ಲಿಲ್ಲ. ಆದರೆ Europe ದೇಶದ ಶ್ರೀಮಂತಿಕೆ ಎದ್ದುಕಾಣುತ್ತಿತ್ತು.
 
Frankfurt ನಲ್ಲಿ luggage collect ಮಾಡಿಕೊಂಡು train ticket ತೆಗೆದುಕೊಂಡು Stuttgart ಗೆ ಹೊರಟೆವು. Train ತುಂಬಾ ವೇಗವಾಗಿ ಹೋಗುತ್ತಿತ್ತು (ಸುಮಾರು 300 kph). ಹೊರಗೆ ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು; ಹುಲ್ಲುಹಾಸಿಗೆ ಎಂತ್ತಿತ್ತು. ಒಂದೇ ಎತ್ತರಕ್ಕೆ ಸಮಾನವಾಗಿ ಬೆಳೆದ ಹುಲ್ಲು, ನೋಡಿ ಆಶ್ಚರ್ಯವಾಯಿತು, ಅದ್ಭುತ ಎನ್ನಿಸಿತು. ಎಲ್ಲೋ ಅಲ್ಲೊಂದು ಇಲ್ಲೊಂದು ಮನೆ ಕಾಣಿಸಿತು. ನನಗೂ ಅಷ್ಠೋತ್ತಿಗೆ ಪ್ರಯಾಣ ಸಾಕಾಗಿತ್ತು. Stuttgart ಗೆ ಬಂದು taxi ಮಾಡಿಕೊಂಡು room ತಲುಪುವಷ್ಟರಲ್ಲಿ ರಾತ್ರಿ 7:00 ಆಗಿತ್ತು. ತಿನ್ನುವುದಕ್ಕೆ ಏನು ಮಾಡಿದೆ ಎಂದು ಮರೆತು ಹೋಗಿದೆ.

ಇನ್ನು ಹೀಗೆ ಹೇಳುತ್ತಾ ಹೋದರೆ ದಿನಚರಿ ಆಗುತ್ತದೆ. ಅದರ ಬದಲು ನಾನು ನೋಡಿದ ಜಾಗ ಮತ್ತು ಆ ಜಾಗಗಳಿಗೆ ಹೋದಾಗ ಆದ ಅನುಭವಗಳನ್ನು ಬಿಚ್ಚಿಡುತ್ತೇನೆ.
 
ನಾನು ಇದ್ದ 3 ತಿಂಗಳಲ್ಲಿ Germany ಬಗ್ಗೆ ನನಗೆ ಅನಿಸಿದ್ದು, ಶಿಸ್ತು ಎಂಬ ಪದಕ್ಕೆ Germany ಎಂಬುದನ್ನು ಸಮಾನಾರ್ಥಕವಾಗಿ ಬಳಸಬಹುದು. ಶಿಸ್ತು ಎನ್ನುವುದನ್ನು ಅಲ್ಲಿಯ ಜನಗಳು ಪಾಲಿಸುವುದಲ್ಲದೇ ಅವರು ಸಾಕಿರುವ ಪ್ರಾಣಿಗಳಿಗೂ ಕಲಿಸುತ್ತಾರೆ. ಉದಾಹರಣೆಗಳು ಬೇಕಾದಷ್ಟು ಕೊಡಬಹುದು, ಕೇವಲ ಎರಡನ್ನು ಮಾತ್ರ ಹೇಳುತ್ತೇನೆ. ರಸ್ತೆ ದಾಟಲು ಕೆಲವು ಜಾಗಗಳನ್ನು ಮಾಡಿರುತ್ತಾರೆ. ಅದೇನೇ ಆಗಲಿ ಜನರು ಅಲ್ಲಿಗೇ ಹೋಗಿ ರಸ್ತೆ ದಾಟುತ್ತಾರೆ. ರಸ್ತೆ ದಾಟುತ್ತಿದ್ದರೆ ಗಾಡಿಗಳು 50ಮಿ ಹಿಂದೆ ನಿಲ್ಲುತ್ತಿತ್ತು. ಇನ್ನು Zebra crossingನಲ್ಲಿ ರಸ್ತೆದಾಟಬೇಕಾದರೆ ಎರಡನೇ ಯೋಚನೆ ಮಾಡದೆ ದಾಟಬಹುದು. ಗಾಡಿಗಳು ನಾವು ದಾಟುವ ತನಕ ಕಾಯುತ್ತವೆ, ಪಾದಾಚಾರಿಗಳಿಗೆ ತುಂಬಾ ರಕ್ಷಣೆ ಆ ದೇಶ ಒದಗಿಸುತ್ತದೆ. The major means of transport is train. ಆ ವ್ಯವಸ್ಥೆ ತುಂಬಾ ಚೆನ್ನಾಗಿದೆ. 10 ನಿಮಿಷಕ್ಕೆ ಒಂದು train ಖಂಡಿತ ಬರುತ್ತದೆ. ಎಲ್ಲಾ ನಿಲ್ದಾಣಗಳಲ್ಲು mapಗಳಿರುತ್ತದೆ. Train ಬರುವ ಸಮಯವನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಅದು ಹೇಳುವ ಸಮಯಕ್ಕೆ train ಬರುತ್ತಿತ್ತು. ಒಂದೇ ಒಂದು ನಿಮಿಷ ಕೂಡ ವ್ಯತ್ಯಾಸನಾಗುತ್ತಿರಲ್ಲಿಲ್ಲ. ನಾವು stop ತಲುಪುವುದು 1 ನಿಮಿಷ ತಡವಾಯಿತೆಂದರೆ train miss ಆಯಿತು ಎಂದೆ ಅರ್ಥ.

ನಮ್ಮಲ್ಲಿರುವಂತೆ ನಿರ್ವಾಹಕ (conductor) ಇರುವುದಿಲ್ಲ. ಪ್ರತಿ ನಿಲ್ದಾಣದಲ್ಲೂ ATM machine ತರಹದ್ದು ಒಂದು ಇರುತ್ತದೆ, ಅಲ್ಲಿ ದುಡ್ಡು ಹಾಕಿ ticket ತೆಗೆದುಕೊಳ್ಳಬೇಕು. ನಾನು ನೋಡಿದ ಮಟ್ಟಿಗೆ checking ಅಂತ ಯಾರು ಬರುತ್ತಿರಲ್ಲಿಲ್ಲ. ಆದರೆ ಪ್ರತಿಯೊಬ್ಬರು ticket ತೆಗೆದುಕೊಳ್ಳುತ್ತಾರೆ. ಅದನ್ನು ನೋಡಿದರೆ ಶಿಸ್ತು ಎನ್ನುವುದು ಅವರಿಗೆ ರಕ್ತಗತವಾಗಿ ಬಂದಿದೆ ಎಂದು ತೋರುತ್ತದೆ. ಬಹುಶಃ ಅಲ್ಲಿನ ಶಿಕ್ಷೆ, ಶಿಸ್ತು ಕ್ರಮಗಳ ಕಾರಣವೂ ಆಗಿರಬಹುದು ಆದರೆ ಜನರು ಶಿಸ್ತಿನಿಂದ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯನಾದ ವಿಷಯ. Parisಗೆ ಹೋಗಿದಾಗ ಅಲ್ಲಿನ ಕ್ರಮವನ್ನು ನೋಡಿದೆ. ಅಲ್ಲಿ trainಗಳು ನೆಲಮಾಳಿಗೆಯಲ್ಲಿ ಓಡಾಡುತ್ತದೆ. ಮೇಲೆ ticket ತೆಗೆದುಕೊಂಡು ನೆಲಮಾಳಿಗೆಗೆ ಹೋಹುವ ಮೊದಲು ticket swipe ಮಾಡಿ ಹೋಗಬೇಕು. ಆದರೆ ಕೆಲವರು ticket ತೆಗೆದುಕೊಳ್ಳದೆ gate ಜಿಗಿದು ಹೋಗುತ್ತಿದ್ದರು. Germany ಇಂದ Parisಗೆ ಇರೋದು 450 ಕಿ.ಮಿ, ಅಷ್ಟಕ್ಕೆ ಎಷ್ಟೋಂದು ವ್ಯತ್ಯಾಸ ಅಂದುಕೊಂಡು.

ನಾನು ಹೋಗಿದ್ದ ಪ್ರಮುಖ ಸ್ಥಳಗಳು: Paris, Munich, Heidelberg, Shinsheim Museum, Oberstdorf, Bad Urach, Black forest, Wiehelma.

Paris:
Eiffel tower ಚೆನಾಗಿತ್ತು. ಅದನ್ನು ಕಟ್ಟಿದವರ ಶ್ರಮಕ್ಕೆ hats off. ಅಲ್ಲಿ ಸೂರ್ಯಾಸ್ತವಾಗುವುದು ತುಂಬ ತಡ. ರಾತ್ರಿ 9:30 ನಂತರ ಸ್ವಲ್ಪ ಕತ್ತಲೆ ಎನ್ನುವ ಹಾಗಾಯಿತು. Tower lightnings ನೋಡಿಕೊಂಡು ಬಂದೆವು. ಮೈಸೊರು ಅರಮನೆಗೆ ದೀಪ ಹಾಕಿದರೆ ಇದಕ್ಕಿಂತ ಚೆಂದ ಎಂದು ಆ ಕ್ಷಣ ಅನ್ನಿಸಿತು. ಅಲ್ಲಿಗೆ ಹೋಗಿ ಬರುವ ಹಲವರು, ಹಲವು ರೀತಿಯಲ್ಲಿ ಹೊಗಳುವುದನ್ನು ಕೇಳಿದ್ದೇನೆ, ಆದರೆ ನನಗೆ ಹೊಗಳುವುದಕ್ಕಾಗಲಿ, ವರ್ಣಿಸುವುದಕ್ಕಾಗಲಿ ಸ್ಪೂರ್ತಿ ಸಿಗಲಿಲ್ಲ, ಅದೇನು ಅದ್ಭುತ ಅನ್ನಿಸಲಿಲ್ಲ.

Munich: 
ಇಲ್ಲಿ ಪ್ರಮುಖವಾಗಿ ನೋಡಲೇಬೇಕಾದ ಜಾಗಗಳೆಂದರೆ Dachau concentration camp, Olympic stadium, BMW museum (office), Duestche Museum ಮತ್ತು ಒಂದು Castle (ಹೆಸರು ನೆನಪಿಲ್ಲ). ಸಮಯದ ಅಭಾವದಿಂದ ನಾವು Dachau concentration camp, Olympic stadium, BMW museum ಮಾತ್ರ ನೋಡಲು ಸಾಧ್ಯವಾಯಿತು.
 
Dachau camp ಒಂದು ಐತಿಹಾಸಿಕ ಸ್ಥಳ. Adolf Hitler ಸ್ಥಾಪಿಸಿದ campಗಳಲ್ಲಿ ಬಹುದೋಡ್ಡ camp ಇದಾಗಿತ್ತು. ಅಲ್ಲಿ ಹಳೆ photos, ಅಲ್ಲಿನ ಶಿಕ್ಷೆಗಳ ಸ್ವರೂಪ, ನಡೆದ ಘಟನಾವಳಿಗಳೂ, ಎಲ್ಲವನ್ನು ವಿವರವಾಗಿ ಪ್ರದರ್ಶಿಸಿದ್ದರು. ಅಲ್ಲಿನ ಬಲಿಪಶುಗಳು (ಖೈದಿಗಳು ಎಂದು ಕರೆಯುವುದು ಸಮಂಜಸವಲ್ಲ) ಉಪಯೋಗಿಸುತ್ತಿದ್ದ ತಟ್ಟೆ, ಹಾಸಿಗೆ (ಒಂದರೆಡು) ಇಟ್ಟಿದ್ದರು. ಅದಷ್ಟನ್ನು ವಿವರವಾಗಿ ನೋಡುವಷ್ಟುರಲ್ಲಿ 4 ಗಂಟೆಗಳಾಗಿತ್ತು. ಆತ ನಡೆಸಿದ ಹತ್ಯಾಕಾಂಡದ ತಾಣವಾದ Gas Chamber ಕೂಡ ನೋಡಿದೆ. ಆ ಜಾಗ ನೋಡಿದ ಮೇಲೆ ಆತ ಎಷ್ಟು ಕ್ರೂರಿಯಾಗಿದ್ದಿರಬಹುದು ಎಂದು ಅನ್ನಿಸಿತು.
ಹಾಗಾದರೆ Hitler ಏನು ಒಳ್ಳೆ ಕೆಲಸವೇ ಮಾಡಿಲ್ಲವ? ಎಂದು ಯೋಚನೆ ಬಂತು. ಹಾಗೆ ವಿವರಗಳನ್ನು Googleನಲ್ಲಿ ಹುಡುಕುತ್ತಾ ಹೋದೆ Germanyಯಲ್ಲಿ ಈಗಿರುವ transportation facilityಯನ್ನು ಶುರುಮಾಡಿದ್ದು ಅವನೇ, ಇನ್ನು ಅನೇಕ ಕೆಲೆಸಗಳನ್ನು ಮಾಡಿದ್ದಾನೆ. ಆದರೆ, ಆತ ಮಾಡಿದ್ದು Jewsರ ಹತ್ಯಾಕಾಂಡ. ಎರಡನೇ ಮಹಾಯುದ್ಧದ ನಂತರ America, France, USSR, England ದೇಶಗಳು Germanyಯ ಅಭಿವೃದ್ಧಿಗಾಗಿ ನಾಲ್ಕು ಭಾಗಗಳಾಗಿ ಹಂಚಿಕೊಂಡರು. 1945 ನಂತರ ಒಂದೆರಡು ವರ್ಷಗಳು Hitler ಬದುಕಿದ್ದರೆ ಅವನು ನಡೆಸಿದ ಹತ್ಯಾಕಾಂಡ ಇಷ್ಟು ಬೆಳಕಿಗೆ ಬರುತ್ತಿರಲಿಲ್ಲ. Hitler ಬಗ್ಗೆ ಚರ್ಚೆ ಮಾಡುವುದರೊಂದಿಗೆ ಒಂದು ಒಳ್ಳೆ ಜಾಗ ನೋಡಿದ ತೃಪ್ತಿ ನನಗೆ ಸಿಕ್ಕಿತು.

Heidelberg and Shinsheim Museum:
ಈ museumನಲ್ಲಿ ಹಳೆ ಕಾರುಗಳು, Planeಗಳು, ವಿಶ್ವಮಹಾಯುದ್ಧದಲ್ಲಿ ಉಪದೋಗಿಸಿದ ಬಂಕರ್ ಗಳು, ಹೀಗೆ automotive ಗೆ ಸಂಬಂಧ ಪಟ್ಟ ವಸ್ತುಗಳನ್ನು ಆಲ್ಲಿ ಪ್ರದರ್ಶನ ಮಾಡಿದ್ದರು. ಅದನೆಲ್ಲಾ ನೋಡುವಷ್ಟರಲ್ಲಿ ಐದು ಗಂಟೆಗಳ ಕಾಲ ಹಿಡಿಯಿತು. ತುಂಬಾ ಚೊಕ್ಕವಾಗಿ ನಿರ್ವಹಣೆ ಮಾಡಿದ್ದರು. ಅದನ್ನು ನೋಡಿ ತುಂಬಾ ಖುಷಿಯಾಯಿತು.

Heidelberg ನಲ್ಲಿ ಒಂದು castle (ಅರಮನೆ)ಗೆ ಹೋಗಿದ್ದೆವು. ಅಲ್ಲಿನ ಸಾಂಸ್ಕೃತಿಕ ಪ್ರದೇಶ ಒಂದನ್ನು ನೋಡಿದ ಹಾಗಾಯಿತು. ಚೊಕ್ಕವಾಗಿ, ವೈಭವವಾಗಿತ್ತು, ಆದರೆ ಕಲಾತ್ಮಕವಾಗಿರಲ್ಲಿಲ್ಲ. ಮತ್ತೊಮ್ಮೆ ಮೈಸೂರು ಅರಮನೆ ನೆನಪಾಯಿತು. ಇಲ್ಲಿನ ಅರಮನೆಯಲ್ಲಿರುವ ಒಂದು ಕಂಬಕ್ಕೆ ಅಲ್ಲಿನ ಅರಮನ್ನು ಹೋಲಿಕೆ ಮಾಡುವುದಕ್ಕಾಗುವುದಿಲ್ಲ. ಕಲೆಯ ಬಗ್ಗೆ ಮಾತಾಡಬೇಕಾದರೆ Paris ಬಗ್ಗೆ ಹೇಳಲೇಬೇಕು. Parisನ ರಸ್ತೆ, ರಸ್ತೆಗಳಲ್ಲಿ ಚಿತ್ರಕಲೆ ರಾರಾಜಿಸುತ್ತದೆ. ಸೀನ್ ನದಿಯ ತೀರದಲ್ಲಿ ಅನೇಕ ಕಟ್ಟಡಗಳು Franceನ ಸಂಸ್ಕೃತಿಯನ್ನು ಬಿಂಬಿಸುತ್ತಿತ್ತು. ಸೇತುವೆಯ ಗೋಡೆಗಳ ಮೇಲೆ ಕೆತ್ತನೆಗಳು ಚೆನ್ನಾಗಿತ್ತು.

Germany ಮತ್ತು France ಎರಡೂ ಕಡೆ ಒಂದು ಸಮಾನವಾದ ನಂಬಿಕೆಯನ್ನು ಕಂಡೆ. ಗಂಡು, ಹೆಣ್ಣುಗಳ ಹೆಸರನ್ನು ಒಂದು ಬೀಗದ ಮೇಲೆ ಬರೆದು ಸೇತುವೆಗಳಿಗೆ ಆ ಬೀಗವನ್ನು ಹಾಕಿ, ಅದರ ಕೀಲಿಕೈಗಳನ್ನು ಬೆಸಾಕುವುದು. ಇದು Eiffel towerನಲ್ಲೂ ಕಾಣಬಹುದು. ಗಂಡು ಹೆಣ್ಣುಗಳ ಸಂಬಂಧ ಶಾಶ್ವತವಾಗಿರಲಿ ಎಂಬ ಒಂದು ನಂಬಿಕೆ.

ನಮ್ಮಲ್ಲಷ್ಟೇ ಅಲ್ಲ, ಅವರಲ್ಲೂ ಕೂಡ ಈ ರೀತಿಯ ನಂಬಿಕೆಗಳಿವೆ ಎಂದು ನನಗೆ ತಿಳಿಯಿತು, ನೋಡಿ ಖುಷಿಯೂ ಆಯಿತು.

ಮತ್ತು ಕೆಲವು ಜಾಗಗಳಿಗೆ ಹೋಗಿದ್ದೆವು Oberstdorf, Bad Urach, Black forest, Wiehelma. ಇವು ಹಿಮಾಚ್ಚಾದಿತ ಪ್ರದೇಶ, ಕಾಡು, ಬೆಟ್ಟ ಮತ್ತು ಮೃಗಾಲಯಗಳಾಗುತ್ತು. ಹೇಳುವಷ್ಟು ವಿಷೇಷವಾಗಿರಲ್ಲಿಲ್ಲ. ನಮ್ಮ ಹಿಮಾಲಯ, ಮಲೆನಾಡು, ಜೋಗಗಳ ಮುಂದೆ ಇವೆಲ್ಲ ಏನೇನು ಇಲ್ಲ ಎನ್ನಿಸಿತು. ಹೀಗೆ ಹೋಲಿಸಬಾರದು ಆದರೆ, ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಮ್ಮಲ್ಲಿ ಇಲ್ಲದಿರುವುದು ಏನು ಇಲ್ಲ ಎನ್ನುವುದು ನಮಗೆ ತಿಳಿಯಬೇಕು.
 
ಅದೊಂದು ದಿನ ಕೋಣೆಗೆ ಬಂದ ಮೇಲೆ ಎನೋ ಒಂದು ರೀತಿ ಖುಷಿ, ಸಮಾಧಾನವಾಗುತ್ತಿತ್ತು. ಎನಿರಬಹುದು? ಎಂದು ಆ ಕ್ಷಣಕ್ಕೆ ಹೊಳೆಯಲಿಲ್ಲ. ಕೆಲ ಹೊತ್ತು ಯೋಚಿಸಿದೆ. ಅಂದು ಹೊರಗೆ ಹೋಗಿದ್ದಾಗ ಭಿಕ್ಷುಕನೊಬ್ಬನಿಗೆ 1 Euro ಭಿಕ್ಷೆ ಹಾಕಿದ್ದೆ. ಸಾಮಾನ್ಯವಾಗಿ ನಾನು ಭಿಕ್ಷೆ ಹಾಕುವವನಲ್ಲ, ಅಥವಾ ಹಾಕಿದ್ದರೂ ಆ ದಿನ ನನಗಾದ ಖುಷಿ ಎಂದು ಆಗಿರಲ್ಲಿಲ್ಲ. ಐರೋಪ್ಯ ರಾಷ್ಟ್ರದ ಒಬ್ಬನಿಗೆ ಭಾರತೀಯನಾದ ನಾನು ಭಿಕ್ಷೆ ಹಾಕದ್ದು...!!! ಇದು ನನ್ನ ಸಂತೋಷಕ್ಕೆ ಕಾರಣ, ಅವರು ನಮ್ಮ ಹತ್ತಿರ ಬೇಡಬೇಕು, ಇದು ನಮಗೆ ಹೆಮ್ಮೆಯ ವಿಚಾರ.

ನಾನು ನೋಡಿದ ಹಾಗೆ ಇಡೀ Germanyಯಲ್ಲಿ ಹರಿಯುವುದು ಒಂದೇ ನದಿ; Nekar. ಅಲ್ಲಿ ಎಲ್ಲಾ ರೈಲುಗಳು ವಿದ್ಯುತ್ಚಾಲಿತ. ಮನುಷ್ಯರಿಗಿಂತ ಯಂತ್ರಗಳು ಕೆಚ್ಚಿನ ಕೆಲಸಗಳು ನಿರ್ವಹಿಸುತ್ತದೆ. ನಾನು ನೋಡಿದ ಅಷ್ಟೂ ಜಾಗಗಳಲ್ಲಿ ರಸ್ತೆ ಉಬ್ಬು (hump) ಇರಲಿಲ್ಲ. Railway gateಗಳು ಇರಲಿಲ್ಲ. ಇದ್ದರು ಕೆಲವು highwayಗಳಲ್ಲಿ ಮಾತ್ರ ಇತ್ತು. ಒಂದು ಕಡೆಯಂತೂ 5 ರೈಲು ಹಳಿಗಳು ಒಂದನ್ನೊಂದು ಹಾದು ಹೋಗುತ್ತದೆ, ಆದರೆ, ಅಲ್ಲಿ signal ಬಿಟ್ಟರೆ ಏನು ಇಲ್ಲ ಮತ್ತು ಒಂದೂ ಅಪಘಾತ ಇದುವರೆಗೂ ಸಂಭವಿಸಿಲ್ಲ...!!!

ನನ್ನ ಸ್ನೇಹಿತನೊಬ್ಬ ಅಲ್ಲಿಗೆ ಬಂದಿದ್ದ. Officeಗೆ ನಡೆದು ಹೋಗಿದ್ದೆವು ನಾನು ಸುಮ್ಮನೆ ಕೇಳಿದೆ " ಹೇಗೆ ಅನಿಸುತ್ತದೆ" ಎಂದು. ನನಗೆ ಅಷ್ಟರಲ್ಲಿ ಅಮ್ಮ, ಮನೆ, ನಮ್ಮವರನೆಲ್ಲ ಬಿಟ್ಟು ಬಂದು ಸಕಾಗಿತ್ತು. ವಾಪಸ್ಸು ಬಂದರೆ ಸಾಕು ಎನ್ನುವ ಹಾಗಿದ್ದೆ. ಆತ - "ಇಲ್ಲಿ ಒಂದು ಸಣ್ಣ ಮನೆ ಮಾಡಿಕೊಂಡು ಆರಾಮಾಗಿ ಜೀವನ ಸಾಗಿಸಬಹುದು" ಎಂದ. ಹೌದು, ನಮಗೆ ಅಲ್ಲಿ ಸಿಗುವ ಸೌಲತ್ತುಗಳನ್ನು ನೋಡಿ ಹಾಗೆನ್ನಿಸುವುದು ಸಹಜ. ಆದರೆ, ನಮ್ಮ ದೇಶವನ್ನು ಆ ರೀತಿ ಮಾರ್ಪಾಡು ಮಾಡಬೇಕು ಎಂದು ಯಾರಿಗು ಅನಿಸುವುದಿಲ್ಲವ? ಇದೇ ರೀತಿ ಉತ್ತರಗಳನ್ನು ಕೆಲವರು ಹೇಳಿದನ್ನು ಕೇಳಿದ್ದೇನೆ. ಇಲ್ಲಿ ಓದಿ, ಬೆಳೆದು ವಿದ್ಯಾಭ್ಯಾಸ ಮುಗಿಸಿ ಕೊನೆಗೆ ಹೊರ ದೇಶದಲ್ಲಿ  ಜೀವನ ನಡೆಸುವುದು ಮತ್ತು ಅಲ್ಲಿಯವರಿಗಾಗಿ ದುಡಿಯುವುದು. ಇದರಲ್ಲಿ ಯಾವ ಪುರುಷಾರ್ಥವಿದೆಯೋ ನನಗೆ ತಿಳಿಯದು. Great Indians...!!!

ನಮ್ಮ ದೇಶದಲ್ಲಿ ಒಂದು BMW ಕಾರ್ ನೋಡಿದರೆ ವಾಹ್ ಎನ್ನುತ್ತಿದ್ದೆ. ಅಲ್ಲಿ BMW ಎಂದರೆ ನಮ್ಮಲ್ಲಿ Maruthi ಕಾರ್ ಇದ್ದಹಾಗೆ. ನೋಡಿ ನೋಡಿ ಬೇಸರವಾಗಿತ್ತು. ನಾನು ಕೆಲೆಸ ಮಾಡುತ್ತಿದ್ದ ಕಾರುಗಳು Audi, Benz, VW, Fiat, Landrover ಇವೆಲ್ಲಾ ಅವರಿಗೆ ಸಾಮಾನ್ಯವಾಗಿತ್ತು. ಅಲ್ಲಿಯ ಮಟ್ಟಿಗೆ ಶ್ರೀಮಂತರು ಎಂದು ಹೇಳಬೇಕಾದರೆ ಅವರ ಹತ್ತಿರ Porsche / Ferrari / Lamborghini ಈ ಮಾದರಿಯ ಕಾರುಗಳು ಇರಬೇಕು. ಇದನ್ನು ನೋಡಿ ಅವರ ಆರ್ಥಿಕ ಭಲಾಡ್ಯತೆಯನ್ನು ಅಂದಾಜಿಸಬಹುದು.

ಅಲ್ಲಿಗೆ ಹೋದ ದಿವಸ Benz ಕಾರಲ್ಲಿ ಮುಂದೆ ಕೂತು ಹೋಗುತ್ತಿದ್ದೆ. ಅಲ್ಲಿ driving ಎಡಗಡೆ. ನಾನು ಬಲಕ್ಕೆ ಕೂತಿದ್ದೆ; ಅಂದರೆ ನಮ್ಮ ದೇಶದಲ್ಲಿ ಅದು driver seat. ಒಂದು ತಿರುವಿನಲ್ಲಿ ಎದುರಿಗೆ bus ಬಂತು, ನನಗೆ ಗಾಬರಿಯಾಗಿ steering wheelಗಾಗಿ ಒಂದು ಕ್ಷಣ ಹುಡುಕಾಡಿದೆ. ನಂತರ ನನಗೆ ವಾಸ್ತವ ಹೊಳೆಯಿತು, ನಂತರ ನಗು ಬಂತು.

ವಾಪಸ್ಸು ಬರಬೇಕಾದರೆ BMWನಲ್ಲಿ ನಾನು ನನ್ನ ಸ್ನೇಹಿತ ಬಂದೆವು. ಇಬ್ಬರಿಂದಲೂ 22 Euros ತೆಗೆದುಕೊಂಡ, ಇಬ್ಬರಿಗೂ 40 euro bill ಹಾಕಿಕೊಟ್ಟ. ಅವನಿಗೆ ಹೇಗೆ ಸರಿತೂಗುತ್ತದೆ ತಿಳಿಯದು. ಆದರೆ, ಭ್ರಷ್ಟಾಚಾರ ಅಲ್ಲೂ ಇದೆ ಎಂದಾಯಿತು. Stuttgart to Frankfurt 205 ಕಿ.ಮಿ ಇರಬಹುದು, train ನಲ್ಲಿ 50 ನಿಮಿಷಗಳಲ್ಲಿ ತಲುಪಿದೆವು. ಈ ರೀತಿಯ ವೇಗವಾದ train ನಮ್ಮ ದೇಶಕ್ಕೆ ಎಂದು ಬರುವುದು ಎಂದು ಯೋಚಿಸುತ್ತಲೇ ಭಾರತಕ್ಕೆ ಬಂದು ಇಳಿದೆ.