January 17, 2015

ಮತಾಂತರ - ಒಂದು ವಿಷಸರ್ಪ

1. ಇತ್ತೀಚೆಗೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದಾಗ ಆ ಮನೆಯ ಮಗಳು 'ಸಾಂತ ಕ್ಲಾಸ್'ನ ವೇಷವನ್ನು ಧರಿಸಿ ನಮ್ಮ ಶಾಲೆಯಲ್ಲಿ 'Christmas' ಅನ್ನು ಆಚರಿಸಿದೆವು ಎಂದು ಹೇಳಿದಳು. ಆ ಮಗುವಿನ ಮುಖದಲ್ಲಿ ಸಂತೋಷ, ತಾನು ಧರಿಸಿದ್ದ ವೇಷದ ಬಗ್ಗೆ ಹೆಮ್ಮೆ ಕಾಣುತ್ತಿತ್ತು. ಜೊತೆಗೆ ಆ ಮಗು ನನ್ನ ಕೈಯಲ್ಲಿ 'The Bible' ಎಂಬ ಸಣ್ಣ ಪುಸ್ತಕವೊಂದನ್ನು ತಂದು ಕೊಟ್ಟಿತು.

2. ಕೆಲವು ದಿನಗಳ ಹಿಂದೆ ನಗರದ ವಿಜಯನಗರದಲ್ಲಿರುವ ಶಾಲೆಯ ಮುಂದೆ ಯಾವುದೋ ಕೆಲಸಕ್ಕಾಗಿ ಹೋಗುತ್ತಿದ್ದೆ. ಅಲ್ಲೊಂದು ಮುಸಲ್ಮಾನ ಹುಡುಗರ ಗುಂಪು ಒಬ್ಬ ಹುಡುಗನೊಂದಿಗೆ ಜಗಳವಾಗುತ್ತಿತ್ತು (ಬಹುಶಃ ಹಿಂದು ಹುಡುಗನೆಂದು ತೋರುತ್ತಿತ್ತು). ಏನೆಂದು ವಿಚಾರಿಸಲು ಹೊರಟೆ, ಅಷ್ಟರಲ್ಲಿ ಆ ಶಾಲೆಯ ಕೆಲವರು ಬಂದು ಅವರನೆಲ್ಲ ಚದುರಿಸಿದರು. ಈ ವಿಚಾರವಾಗಿ ಅಲ್ಲಿದ್ದ ಅಂಗಡಿಯೊಬ್ಬನನ್ನು ವಿಚಾರಿಸಿದೆ. "ಯಾರೋ ಒಬ್ಬ ಹಿಂದು ಹುಡುಗ, ಮುಸಲ್ಮಾನರ ಒಬ್ಬ ಹುಡುಗಿಯನ್ನು ಶಾಲೆಯಲ್ಲಿ ಮಾತಾಡಿಸಿದ ಎಂಬ ಕಾರಣಕ್ಕೆ ಈ ಗಲಾಟೆ. ಈ ರೀತಿ ಇಲ್ಲಿ ತುಂಬ ದಿನಗಳಿಂದ ನಡೆಯುತ್ತಿದೆ. ಶಾಲೆಯ ಪ್ರಾಂಶುಪಾಲರು ಯಾವುದೇ ಕ್ರಮವನ್ನು ಕೈಗೊಳ್ಳುತಿಲ್ಲ. ಬದಲಾಗಿ ಈ ವಿಚಾರ ಶಾಲಾ ಆವರಣದಿಂದ ಹೊರಗೆ ನಡೆಯುವ ವಿಚಾರ ಆದ್ದರಿಂದ ನಮಗೂ ಈ ಘಟನೆಗಳಿಗೂ ಯಾವುದೇ ಸಂಭಂದವಿಲ್ಲ ಎಂದು ಸುಮ್ಮನ್ನಿದ್ದಾರೆ".
 
Religious conversion by Christian Missionaries

ಮೇಲಿನ ಎರಡೂ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೇ, 'ಮತಾಂತರದ' ಕಪ್ಪು ಚಾಯೆ ನಮ್ಮ ಸಮಾಜವನ್ನು ಆಕ್ರಮಿಸುತ್ತಿರುವುದು ಗೊಚರವಾಗುತ್ತದೆ. ಈ ಮುಲಕ ನಮ್ಮ ಸಮಾಜವನ್ನು, ಭಾರತೀಯರ ಏಕತೆಯ ಭಾವನೆಯನ್ನು ಒಡೆಯುವ ಪ್ರಯತ್ನವೆಂದೇ ಹೇಳಬಹುದು. ಹಾಗು ಒಬ್ಬ ದುರ್ಬಲ ಮನಸ್ಸಿನ ವ್ಯಕ್ತಿಯು ತನ್ನ ತಾಯಿ ಧರ್ಮವನ್ನು (ಹಿಂದುತ್ವ) ತೊರೆದು, ಬೇರೊಂದು (೧. ಕ್ರೈಸ್ತ ೨. ಇಸ್ಲಾಮ್) ಧರ್ಮಕ್ಕೆ ಮಾತಾಂತರಗೊಳ್ಳಲು ಪ್ರೇರೆಪಿಸುತ್ತದೆ. ಈ ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು 'ವಿಭಜಿಸಿ ಆಳುವ' ತಂತ್ರ ಆಂಗ್ಲರ ಪದ್ದತಿಯಾಗಿತ್ತು. ಆದರೆ ಈಗ ಅಂದರೆ ಸ್ವಾತಂತ್ರ್ಯ ಬಂದು ೬೭ ವರ್ಷಗಳಾದರೂ ನಾವು ನಮ್ಮವರ ಕೆಳಗೇ ಗುಲಾಮರು...!!!

ಹಿಂದುಸ್ತಾನವೆಂಬ ದೇಶವನ್ನು 'ಇಂಡಿಯ' ಎಂದು ಬದಲಾಯಿಸಿದವರು ಆಂಗ್ಲರು. ಇದಕ್ಕೆ ಕಾರಣ ಮುಲತಃ ಕಾರಣ ಆಂಗ್ಲ ನಾಡಿನಿಂದ ಬಂದ ಕ್ರೈಸ್ತ ಪಾದ್ರಿಗಳು ಹಾಗು ಇಸ್ಲಾಮ್ ರಾಜ್ಯಗಳಿಂದ ಬಂದ ಮೊಘಲರು. ಹೊರನೊಟಕ್ಕೆ ಇಬ್ಬರ ಉದ್ದೇಶ ಸಾಮ್ರಾಜ್ಯ ಸ್ಥಾಪನೆ ಹಾಗು ವ್ಯಾಪಾರವಾಗಿದ್ದರೂ ಸಹ ಮೂಲ ಉದ್ದೇಶ; ಧರ್ಮ ಪ್ರಚಾರ ಹಾಗು ಮತಾಂತರ. ಹೊರದೇಶದವರು ಈ ಮತಾಂತರದ ತತ್ವವನ್ನು ಚೆನ್ನಾಗಿ ಉಪಯೋಗಿಸಿಕೊಂಡರು.
 
ಇದೇ ಬೇದಭಾವದಿಂದಲೆ ಗಂಡುಗಲಿಗಳ ನಾಡಾದ ಚಿತ್ರದುರ್ಗವನ್ನು ಆಳಿದ 'ಮದಕರಿನಾಯಕ'ನನ್ನು ಹೈದರಲಿ ಸೋಲಿಸುವಂತಾಯಿತು. ಆಂಗ್ಲರು ಕೂಡ ಭಾರತವನ್ನು ೨೫೦ ವರ್ಷಗಳು ಆಳಿ, ಲೂಟಿ ಮಾಡುವಂತಾಯಿತು. ಇದು ಸ್ವಾತಂತ್ರ್ಯ ಪೂರ್ವದ ಕಥೆಯಾದರೆ, ಮೇಲೆ ಹೇಳಿದ ೨ ಘಟನೆಗಳು ಇಂದಿನ ಸಮಾಜದ ಸಣ್ಣ ನಿದರ್ಶನವಷ್ಟೇ. ೧೯೪೭ ಆಗಸ್ಟ್ ೧೫ರ ನಂತರ, ಸ್ವಾತಂತ್ರ್ಯದ ಕಿಚ್ಚನ್ನ ಉಳಿಸಿಕೊಂಡು ಭಾರತವನ್ನು ಬೆಳಗಿಸಿ ಮತ್ತೆ ಜಗದ್ಗುರುವನ್ನಾಗಿ ಬೆಳಗಿಸಬೇಕಿತ್ತು. ಆದರೆ, ಇಂದಿನ ಸ್ಥಿತಿಯನ್ನು ಗಮನಿಸಿದರೆ 'ಸ್ವಾತಂತ್ರ್ಯದ ಕಿಚ್ಚು' ಎಂಬ ಪದದ ಅರ್ಥವನ್ನೆ ಮರೆತಂತಿದೆ. ಇದಕ್ಕೆಲ್ಲ ಮುಲಭೂತ ಕಾರಣವೆಂದರೆ ಮತ ಹಾಗು ಧರ್ಮಗಳ ಮೇಲೆ ನಮ್ಮ ಸಮಾಜದ ಒಗ್ಗಟ್ಟನ್ನು ಮುರಿಯುತ್ತಿದ್ದಾರೆ.

ಹಾಗಾಗಿ ನಾವು ಒಂದಾಗಬೇಕು, 'ಅನೇಕತೆಯಲ್ಲಿ ಏಕತೆ' ಎಂಬ ಮಂತ್ರವನ್ನು ಜಪಿಸಬೇಕು.ಈ ರೀತಿಯ ಮಾತುಗಳನ್ನು ಉಪಯೋಗಿಸಿಕೊಂಡು ಎಲ್ಲ ರಾಜಕೀಯ ವ್ಯಕ್ತಿಗಳು, ಬುದ್ಧಿಜೀವಳು ನಮ್ಮಲ್ಲಿ ಒಡಕು ತರುತ್ತಿದ್ದರೇ ಹಾಗು ತಾವುಗಳು ಬೆಳೆಯುತ್ತಿದ್ದಾರೆ. ಇವರುಗಳ ಮಾತು ನಂಬಿಕೊಂಡು ನಾವುಗಳು ಹಾಳಾಗುತ್ತಿದ್ದೇವೆ. ನಮ್ಮ ಮೂಲಕ ಮತ್ತೆ ನಮ್ಮವರ ಕೆಳಗೆ ಭಾರತವನ್ನು ದಾಸರನ್ನಾಗಿ ಮಾಡುತ್ತಿದ್ದಾರೆ.

ಇದಕ್ಕೆಲ್ಲ ಪರಿಹಾರವೇನು? ಎಂಬ ಪ್ರಶ್ನೆ ನನ್ನನ್ನು ಹಲವು ಸಲ ಕಾಡಿದೆ. ಇದಕ್ಕೆ ಉತ್ತರವಾಗಿ ನನಗೆ ಹೊಳೆದಿದ್ದು
  • ಭಾರತದಲ್ಲಿ ಮತ್ತೆ ಹಿಂದುತ್ವವನ್ನು ಸ್ಥಾಪಿಸಬೇಕು.
  • 'ಇಂಡಿಯ'ವನ್ನು ಮತ್ತೆ 'ಹಿಂದುಸ್ಥಾನ'ವನ್ನಾಗಿ ಪರಿವರ್ತಿಸಬೇಕು.
ಇದು ಸಾಧ್ಯವೇ? ಎಂಬ ಪ್ರಶ್ನೆಯೂ ನನ್ನನ್ನು ಕಾಡಿತು. ಸಾಧ್ಯ ಎಂಬ ಆತ್ಮವಿಶ್ವಾಸವಿತ್ತು. ಇದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸಿದಾಗ ನನಗೆ ಹಲವು ತೊಡಕುಗಳು ಕಾಣಿಸಿದವು. ಈಗಿನ ತಲೆಮಾರಿನವರನ್ನು ತಿದ್ದುವುದಕ್ಕಿಂತ ಮುಂದಿನ, ಎಳೆವಸ್ಸಿನ ತಲೆಮಾರಿನವರನ್ನು ತಿದ್ದುವುದು ಹೆಚ್ಚು ಸಮಂಜಸವೆನ್ನಿಸಿತು. ಆದೆರೆ ಈ ಕಾರ್ಯಕ್ಕೂ ಹಲವು ತೊಡಕುಗಳು ಕಾಣಿಸಿತು. ಆ ತೊಡಕುಗಳು ಹೊರಗಿನಿಂದ ಬಂದವುಗಳಲ್ಲ, ಬದಲಾಗಿ ನಮಗೆ ನಾವೇ ಸೃಷ್ಠಿಸಿಕೊಂಡಿರಿವುದು. ನಮ್ಮ ಸ್ಥಿತಿ ಚಕ್ರವ್ಯುಹದಲ್ಲಿ ಸಿಕ್ಕಿಹಾಕಿಕೊಂಡಿರುವ ಅಭಿಮನ್ಯುವಂತಾಗಿದೆ.

ಕೆಲವೊಂದು ಉದಾಹರಣೆಗಳನ್ನು ಕೊಡಲುಬಯಸುತ್ತೇನೆ.

1. ನಮ್ಮಲ್ಲಿ  ಹಲವು ಶಾಲೆಗಳಲ್ಲಿ 'Chirstmas' ಹಬ್ಬವನ್ನು ಆಚರಿಸುವುದನ್ನು ನೋಡಿದ್ದೇವೆ. ನಾನು ಸಹ ಅಂತಹುದೆ ಶಾಲೆ ಇಂದ ಬಂದವನು. ಆದರೆ ಯಾವುದಾರು ಶಾಲೆಯಲ್ಲಿ ಗಣೇಶ ಹಬ್ಬವನ್ನಾಗಲಿ, ಶಿವಾಜಿ ಮಹರಾಜರ ಜಯಂತಿಯನ್ನಾಗಲಿ, ಗುರುನಾಕರ ಜಯಂತಿಯಾಗಲಿ ಆಚರಿಸುವುದುಂಟೆ?

2. ಭಾರತಕ್ಕೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಚಂದ್ರಶೇಖರ ಆಜ಼ಾದ್, ಭಗತ್ ಸಿಂಗ್, ವಿನಾಯಕ ದಾಮೊದರ್ ಸಾವರ್ಕರ್, ರಾಂ ಪ್ರಸಾದ್ ಬಿಸ್ಮಿಲ್ ಮತ್ತು ಮುಂತಾದವರು. ಇಂತವರನ್ನು ನಾವು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಲು ಯಾವುದಾದರು ಶಾಲೆ ಅಥವಾ ಶಿಕ್ಷಕರಾಗಲಿ ಪ್ರಯತ್ನ ಪಟ್ಟಿದ್ದಾರೆಯೇ? ನನ್ನ ಮಟ್ಟಿಗೆ ಹೇಳುವುದಾದರೆ ನಾನು ಓದಿದ ಶಾಲೆಯ ಶಿಕ್ಷಕರಿಗೆ ಮೇಲೆ ಹೇಳಿರುವ ಹೆಸರುಗಳ ಪರಿಚಯವುದೇ ಅನುಮಾನ. ಭಾರತದ ಸ್ವಾತಂತ್ಯ ಇತಿಹಾಸ ನನಗೆ ಪರಿಚಯವಾದದ್ದೆ ನಾನು ಶಾಲ ಪುಸ್ತಕದ ಹೊರತಾಗಿ ಇತರ ಪುಸ್ತಕಗಳನ್ನು ಓದಿದ ಮೇಲೆಯೆ.

3. ನಮ್ಮ ದೇಶದ ಹಬ್ಬವಾದ: ಸ್ವಾತಂತ್ರ್ಯ ದಿವಸವನ್ನು ಇತ್ತೀಚೆಗೆ ಕೆಲವು ಶಾಲೆಗಳು  ಆಚರಿಸದೇ ಆ ದಿನ ರಜೆಯನ್ನಾಗಿ ಘೋಷಣೆ ಮಾಡಿರುವುದನ್ನು ಕಾಣಬಹುದಾಗಿದೆ. ವಿದ್ಯಾ ದೇವತೆಯಾದ ಸರಸ್ವತಿಯನ್ನು ಆರಾಧಿಸುವ ಹಬ್ಬವಾದ: ಸರಸ್ವತಿ ಪೂಜೆಯನ್ನು ಎಷ್ಟು ಶಾಲೆಗಳು ಆಚರಿಸುತ್ತದೆ?

4. ನಮ್ಮ ಸರ್ಕಾರ ಕೂಡ ಹಾಗೆಯೇ ಇದೆ. ಒಂದರಿಂದ ಹತ್ತನೇ ತರಗತಿಯವರೆಗೂ ಭಾರತದ ಸ್ವಾತಂತ್ಯ್ರ ಇತಿಹಾಸವೆಂದರೆ ಬರಿ ಗಾಂಧಿ, ನೆಹರು. ೧೮೫೭ರಲ್ಲಿ ನಡೆದ 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ವನ್ನು ಸಿಪಾಯಿ ದಂಗೆ ಎಂದು ಆಂಗ್ಲರು ಕರೆದರು. ಆದರೆ, ನಾವು ಇಂದಿಗೂ ಸಹ ಅದನ್ನು ಸಿಪಾಯಿ ದಂಗೆ ಎಂದೇ ಪಠಿಸುತ್ತೆದ್ದೇವೆ ಎಂಬುದು ವಿಷಾದನೀಯ. ಶಾಲೆಗಳಲ್ಲಿ ಹೇಳಿಕೊಟ್ಟದ್ದಷ್ಟೇ ಸತ್ಯವೆಂದು ನಂಬಿದ್ದರೆ ನಾನು ಸಹ ಇಂದಿಗೂ ಎಲ್ಲರ ತರಹ ಸಿಪಾಯಿ ದಂಗೆ ಎಂದೆ ಭಾವಿಸುತ್ತಿದ್ದೆ.

5. ನಮ್ಮಲ್ಲಿ ಸರ್ವಧರ್ಮ ಸಮ್ಮೇಳನಗಳು ನಡೆಯುವುದನ್ನು ನೋಡಿದ್ದೇವೆ. ವೇದಿಕೆಯ ಮೇಲೆ ಎಲ್ಲಾ ಧರ್ಮದ ಪ್ರಚಾರಕರು ತಮ್ಮ ತಮ್ಮ ಧರ್ಮದ ಬಗ್ಗೆ ಮಾತಾಡುತ್ತಾರೆ. ಆದರೆ, ಅದನ್ನು ಕೇಳಿಸಿಕೊಳ್ಳುವ ಮಂದಿ ಮಾತ್ರ ಹಿಂದುಗಳು. ಇದೇ ಸರ್ವಧರ್ಮ ಸಮ್ಮೇಳನವನ್ನು ಚರ್ಚಿನಲ್ಲೋ ಅಥವ ಮಸೀದಿಯಲ್ಲೊ ಮಾಡಿರುವ ನಿದರ್ಶನ ಒಂದು ಇಲ್ಲ. ಎಲ್ಲಾ ಧರ್ಮದ ವಿಚಾರವನ್ನು ಹಿಂದುಗಳಿಗೆ ಮಾತ್ರವೋ? ಇತರ ಧರ್ಮಗಳಿಗೆ ನಮ್ಮ ವಿಚಾರವನ್ನು ಏಕೆ ತಿಳಿಸಿಕೊಡುವುದಿಲ್ಲ?

6. ಇತ್ತಿಚೆಗೆ ಕೇರಳದಲ್ಲಿ ನಡೆದ ಮರುಮತಾಂತರದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದ್ದೆ. ಮೂಲತಃ ಹಿಂದುಗಳಾಗಿದ್ದ ಬೇರೆ ಧರ್ಮವನ್ನು ಪಾಲಿಸುತ್ತಿದ್ದವರನ್ನು ಮತ್ತೆ ಹಿಂದು ಧರ್ಮಕ್ಕೆ ಕರೆತರುತ್ತಿದ್ದಾರೆ. ಇದರಲ್ಲಿ ಏನು ತಪ್ಪು? ಗೂಡು ಬಿಟ್ಟು ಹೋದ ಹಕ್ಕಿಯನನ್ನು ಮತ್ತೆ ತನ್ನ ಗೂಡಿಗೆ ಕರೆತರುವುದು ತಪ್ಪೆ? ಇದನ್ನು ತಪ್ಪು, ಅಪರಾಧ ಎನ್ನುವುದಾದರೆ. ಹಿಂದುಗಳನ್ನು ಬೇರೆ ಧರ್ಮಕ್ಕೆ ಮತಾಂತರಗೊಳಿಸುವುದು ಅಷ್ಟೇ ಅಥವಾ ಅದಕ್ಕಿಂತಲೂ ಘೋರವಾದ ಅಪರಾಧ.

ಈ ಮರು ಮತಾಂತರ ಎಂಬ ವಿಚಾರ ಶುರುವಾದದ್ದು ಇಂದಲ್ಲ. ೧೯೨೦-೩೦ರ ಆಸಿನಲ್ಲಿ, ಅಂಡಮಾನ್ ಜೈಲಿನಲ್ಲಿ 'ಕಾಲಾ ಪಾನಿ' (ಕರಿ ನೀರು) ಎಂಬ ಶಿಕ್ಷೆಗೆ ಒಳಗಾಗಿದ್ದ 'ವಿನಾಯಕ ದಾಮೋದರ ಸಾವರ್ಕರ್' ರವರು ಅಲ್ಲಿ ನಡೆಯುತ್ತಿದ್ದ ಮತಾಂತರವೆಂಬ ಪಿಡುಗನ್ನು ಕಂಡು 'ಮರುಮತಾಂತರ' ಕ್ಕೆ ಚಾಲನೆ ನೀಡಿದರು. ಇದು ಆಂಗ್ಲರ ಮಟ್ಟಿಗೆ ತಪ್ಪಿರಬಹುದು ಆದರೆ, ನಮ್ಮದೇ ದೇಶ, ನಮ್ಮದೇ ಧರ್ಮದವರಾದಂತಹ 'ಕಾಂಗ್ರೇಸ್' ಪಕ್ಷದವರಿಗೆ ಇದು ತಪ್ಪಾಗಿ ಕಾಣಿಸುತ್ತಿದೆ! ಅವರಿಗೆ ಹಿಂದುಗಳನ್ನು ಮತಾಂತರ ಮಾಡುವುದು ತಪಲ್ಲ, ಆದರೆ, ನಮ್ಮವರನ್ನು ವಾಪಸ್ಸು ನಮ್ಮ ಧರ್ಮಕ್ಕೆ ಕರೆತಂದರೇ, ಅದು ತಪ್ಪು. 
 
ಇದರ ನಡುವೆ ತಮ್ಮ ರಾಜಕೀಯದ ಕುರ್ಚಿಯನ್ನು ಭದ್ರಗೊಳಿಸಿಕೊಳ್ಳಲು, ಹಿಂದುಗಳ ಒಗ್ಗಟ್ಟನ್ನು ಒಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. BHP - ಭಾರತೀಯ ಹಿಂದು ಪರಿಷತ್ ಎಂಬ ಹೊಸ ಸಂಸ್ಥೆಯನ್ನು ಜನವರಿ ೧೫, ೨೦೧೬ ರಂದು ಹುಟ್ಟುಹಾಕುತ್ತಿದ್ದಾರೆ. ಇದು 'ವಿಶ್ವ ಹಿಂದು ಪರಿಷತ್' ಸಂಸ್ಥೆಯ ವಿರುದ್ಧ ಪಕ್ಷದಂತೆ ಕೆಲಸಮಾಡುತ್ತೆ ಎಂದು ಯಾರಾದರು ಊಹಿಸಬಹುದು.

ಇದೆಲ್ಲದರ ನಡುವೆಯೂ ಭಾರತವನ್ನು 'ಜಗದ್ಗುರು' ಮಾಡಬೇಕಾದರೆ ಯಾವುದೇ ರಾಜಕೀಯದ ಆಮಿಷಕ್ಕೆ ಒಳಗಾಗದೆ, ನಾವೆಲ್ಲರೂ ಭಾರತಿಯರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಹಿಂದು ಧರ್ಮಕ್ಕೆ ಬರುವವರನ್ನು ಸ್ವಾಗತಿಸಿ. ಇತರ ಧರ್ಮದವರನ್ನು ಒಪ್ಪಿಕೊಳ್ಳಿ, ಆದರೆ, ಅವರು ನಮ್ಮ ಮೇಲೆ ಸವಾರಿ ಮಾಡದ ಹಾಗೆ ನಮ್ಮ ಸತ್ವವನ್ನು ಉಳಿಸಿಕೊಳ್ಳೋಣ. 'ಇಂಡಿಯಾ'ವನ್ನು ಮತ್ತೆ 'ಹಿಂದುಸ್ತಾನ'ವನ್ನಾಗಿಸಿ ಮತ್ತೊಮ್ಮೆ ಭಾರತ ಜಗದ್ಗುರುವನ್ನಾಗಿಸೋಣ.