ಕನ್ಯಾಕುಮಾರಿ - ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ...
ಈ ಸಾಲುಗಳು ಅಕ್ಷರ ಸಹ ನಿಜವೆಂದು ಸ್ವಾಮೀಜಿಯ ಬಂಡೆಯ ಮೇಲೆ ನಿಂತಾಗ ಅನುಭವಕ್ಕೆ ಬರುತ್ತದೆ. #InspirePravas ತಂಡದ ಮೊದಲ ಪ್ರವಾಸ ಕನ್ಯಾಕುಮಾರಿಯಾಗಿತ್ತು. ನಾನು ಬದುಕಿನಲ್ಲಿ ಸ್ವಯಂಪ್ರೇರಿತನಾಗಿ, ಮನಸ್ಪೂರ್ತಿಯಾಗಿ  ಹೊರಟ ಮೊದಲನೆ ಪ್ರವಾಸ ಇದಾಗಿತ್ತು. ಹಿಂದೆ ಕೂಡ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಹೋಗಿದ್ದೇನಾದರೂ ಅದು ಪ್ರವಾಸ ಎಂದಷ್ಟೇ ಕರೆಯಬಹುದು. ಇದು ಕಹಿ ಎನಿಸಿದರೂ ಸತ್ಯ. ಅಂದಹಾಗೆ, ಸತ್ಯ ಯಾವಾಗಲು ಕಹಿ.
11-06-2015 ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಡುವುದಾಗಿತ್ತು. ಅನೂಪ್ ಒಬ್ಬ ಮಾತ್ರ ನನಗೆ ಪರಿಚಯವಿದ್ದ. ನಾನು, ಅವನು ಮೆಜಸ್ಟಿಕ್ ರೈಲು ನಿಲ್ದಾಣಕ್ಕೆ ಹೋದೆವು. ಅಲ್ಲಿ ಹೋದಾಗ ಕೆಲವು ಜನ ಬಂದ್ದಿದ್ದರು. ಚಕ್ರವರ್ತಿ ಅಣ್ಣ, ನಿತ್ಯಾ ಅಣ್ಣ ಬರುವರು ಎಂದು ನಂಬಿಕೆ ಇತ್ತು ಆದರೆ ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವರುಗಳು ಬರುವುದಿಲ್ಲ ಎಂದು. ನಿರಾಸೆ ಆಯಿತು, ಇರಲಿ ನಾವು ನಾವೇ ಹೋಗುವ ಎಂದು ಅಂದುಕೊಂಡೆ. ಮನಸ್ಸು ಉತ್ಸಾಹದಿಂದ ತುಂಬಿಹೋಗಿತ್ತು.  ಸುಮಾರು 40 - 45 ಜನ ಬಂದಿದ್ದರು, ರೈಲು ಹತ್ತುವಷ್ಟರಲ್ಲೇ ಒಂದ್ದಿಬ್ಬರು ಪರಿಚಯವಾದರು. ಪರಿಚಯವೆಂದರೇ ಮುಖ ಪರಿಚಯವಷ್ಟೆ, ಹೆಸರು ಖಂಡಿತ ನೆನಪಿನಲ್ಲಿ ಉಳಿಯಲಿಲ್ಲ. ರಾತ್ರಿ ತನಕ ಬೇರೆಯವರಾರು ಪರಿಚಯವಾಗಲ್ಲಿಲ್ಲ. ಊಟವಾಯಿತು, ನಾ ಪುಸ್ತಕ ಓದುತ್ತಿದ್ದೆ, ಸಂದೇಶ್ (Conductor) ಬಂದು ಹಾಡಿನ ಕಾರ್ಯಕ್ರಮ ನಡೆಯುತ್ತಿದ್ದೆ ಬನ್ನಿ ಎಂದ. ಎಲ್ಲರೂ ಇದ್ದ ಬೋಗಿಗೆ ಹೋದೆ. ದೇಶ ಭಕ್ತಿ, ಭಾವ ಗೀತೆ ಹಾಡುಗಳನ್ನು ಮಾತ್ರ ಹೇಳುತ್ತಿದ್ದರು. ಕೇಳಿ ಬಹಳ ಸಂತೋಷವಾಯಿತು. ಹೀಗೆ ಹೇಳುತ್ತಾ ಹೋದರೆ ಸರಿ ಬರುವುದಿಲ್ಲ. ವಿಷಯಗಳನ್ನು ವಿಂಗಡಿಸಿ ಮಾತಾಡುವುದು ಸರಿ ಎಂದನಿಸುತ್ತದೆ.
ಮಾತು ಕಥೆ (ಹರಟೆಯ ಮೆಲಕು)...
ನಮ್ಮ ಮನೆಗಳಲ್ಲಿ ನಾವುಗಳು ಹೇಗೊ ತಿಳಿಯದು ಆದರೆ ಇಲ್ಲಿ ಮಾತ್ರ ತುಂಬ ಮಾತಾಡಿದೆವು. ರಾತ್ರಿ ಎಲ್ಲ ಮಾತಾಡಿದೆವು. ನಿದ್ರೆ ಎಂಬುದನ್ನು ಮಾತಿನ ಓಘದಲ್ಲಿ ಮರೆತೇ ಹೋದೆವು. ಮಾತಿನ ವಿಚಾರಗಳು ವಿಧ ವಿಧವಾಗಿರಲಿಲ್ಲ ಆದರೆ ಏನೇ ಮಾತಾಡಿದರೂ ಅದು ದೇಶ ಮತ್ತು ಧರ್ಮದ ಕುರಿತಾಗಿತ್ತು.

- ವಾಪಸ್ಸು ಬರಬೇಕಾದರೆ ನಮ್ಮ ನಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದೆವು, ಆ ಮಾತು ಕೂಡ ಧರ್ಮದೆಡೆಗೆ ಹೋಯಿತು.
 - ನಡೆದು ಹೋಗಬೇಕಾದರೂ ಸಹ ಅದರದ್ದೇ ಮಾತು.
 - ರಾತ್ರಿ 12-1 ಗಂಟೆ ತನಕ ಸಹ ಮತ್ತೆ ಅದೇ ಮಾತು.
 - ಮತಾಂತರ (ಇದರ ಬಗ್ಗೆ ಮುಂದೆ ಮಾತಾಡುತ್ತೇನೆ)
 - ಅಣ್ಣನ 'ಜಾಗೋ ಭಾರತ್', 'ವಿಶ್ವಗುರು', 'ನರೇಂದ್ರ ಮೋದಿ'... ಇತಂಹುದೇ ಮಾತು
 
ಕೆಲವರಿಗೆ ಸಾಹ್ಯವಾಗಿತ್ತೋ ಏನೋ ನನಗೆ ಗೊತ್ತಿಲ್ಲ ಆದರೆ ನನಗೆ ಮಾತ್ರ ಅದು ನನ್ನ ಮನಸ್ಸಿನ ಮಾತಾಗಿತ್ತು. ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಮನಸ್ಸಿಗೆ ಬರಲಿಲ್ಲ. ಒಂದು ರೀತಿ ನಾನು ನಾನಾಗಿ ಇದ್ದೆ ಎಂಬುದು ಸಂತೋಷಕರವಾದ ವಿಷಯ.
ಮರುತ ಮಲೈ...
ಭಾರತಮಾತೆಯ ಪಾದದಲ್ಲಿರುವ ಒಂದು ಬೆಟ್ಟ. ಅದನ್ನು ಹತ್ತಿವುದೆ ಒಂದು ರೀತಿ ಮಜ. ನಮ್ಮೆಲ್ಲರಿಗೂ ಹಿರಿಯರದಂತಹ ಚಂದ್ರಣ್ಣ ನಮ್ಮೆಲ್ಲರನ್ನು ನಾಚಿಸುವ ರೀತಿಯಲ್ಲಿ ಹತ್ತಿದರು. ಅವರನ್ನು ನಾವು ರಾಕ್ಷಸ ಎಂದಿದ್ದು ಉಂಟು. ತುಂಬ ದಿನಗಳಾದ ಮೇಲೆ ನಾ ಈ ರೀತಿ ಬೆಟ್ಟ ಹತ್ತಿದ್ದು. ವಿಶೇಷವೆಂದರೆ ಅದನ್ನು ಹತ್ತಿದ ಮೇಲು ನನಗೆ ಸುಸ್ತು ಕಾಣಿಸಲಿಲ್ಲ. ಮೇಲೆ ನಾವು ಚಂದ್ರಣ್ಣನ ಶಾಲನ್ನೇ (ಆ ಬಟ್ಟೆಯನ್ನು ಏನೆಂದು ಹೇಳಬೇಕು ಎಂದು ನನಗೆ ತಿಳಿದಿಲ್ಲ ಹಾಗಾಗಿ ಶಾಲು ಎಂದುಬಳಸಿದ್ದೇನೆ) ಒಂದು ಕೋಲಿಗೆ ಕಟ್ಟಿ ಭಗವದ್ವಜದ ತರಹ ಕಾಣುವಂತೆ ಮಾಡಿದೆವು. ಅದನ್ನು ಹಿಡಿದು ಹಾರಾಡಿಸಬೇಕಾದರೆ ಆನಂದವೋ ಆನಂದ. ಹಾರಾಡುವ ಧ್ವಜವನ್ನು ನೋಡಿದಾಗ ಹಿಂದುತ್ವ ಮೇಲೆಳುತ್ತದೆ, ಭಾರತ ಖಂಡಿತ ಭವ್ಯವಾಗುತ್ತದೆ ಎಂದು ಮನಸ್ಸಿಗನ್ನಿಸಿತು. ಇಳಿಯಬೇಕದರೆ ನಾನು, ಮನೋಜ, ಸಂದೇಶ ಮತ್ತೊಬ್ಬರು ಒಟ್ಟಿಗೆ ಬಂದೆವು (ಮತ್ತೊಬ್ಬರ ಹೆಸರು ನೆನಪಿಲ್ಲ ಕ್ಷಮಿಸಿ). ನಮ್ಮಗಳ ಸ್ವಂತ ಪರಿಚಯ ಮಾಡಿಕೊಂಡೆವು. ಹಲವು ವಿಚಾರಗಳನ್ನು ಹಂಚಿಕೊಂಡೆವು. ಅವರಿಗೆ ಧನ್ಯವಾದಗಳು.

Photo ಹಾಗು Selfie ಭರಾಟೆ...
ಇದರ ಬಗ್ಗೆಯಂತೂ ಹೇಳಲೇಬೇಕು. ನಮ್ಮ ಬದುಕಿನ ಅಪೂರ್ವ ಕ್ಷಣಗಳನ್ನು ನೆನಪಿಸುವುದೇ ಇವುಗಳು.ಹೊರಟಾಗಿಂದಲೂ, ವಾಪಸ್ಸು ರೈಲು ಹತ್ತುವ ತನಕ ಫೋಟೊ ತೆಗೆದಿದ್ದೆ ತೆಗೆದ್ದಿದ್ದು. ನಮ್ಮ ತಂಡದಲ್ಲಿ 3 ಜನರ ಬಳಿ DSLR ಕ್ಯಾಮೆರ ಇತ್ತು. ಇದು ಕಾರಣ ಹೊದಲೆಲ್ಲ ಸಮಯ ಜಾಸ್ತಿಯಾಗುತ್ತಿತ್ತು. ಸುಂದರ ದೃಶ್ಯಗಳ ಜೊತೆಗೆ ನಮ್ಮ ಚಿತ್ರಗಳನ್ನು ತೆಗೆಯುವುದು ಒಂದು ಪ್ರಮುಖ ವಿಚಾರವಾಗಿತ್ತು. 'ಪದ್ಮನಾಭ ಅರಮನೆ'ಯಲ್ಲಿ ನಾನು, ಅರುಣ, ಸಂದೇಶ ಫೋಟೊ ತೆಗೆಯುತ್ತಾ ಹಿಂದೆ ಉಳಿದೆವು. ಎಲ್ಲರು ಮುಂದೆ ಮುಂದೆ ನೋಡಿಕೊಂಡು ಹೋಗುತ್ತಿದ್ದರು. ನಾವು ಮಾತ್ರ ಬೇರೆಯೆ ಗುಂಪಾಗಿ ಉಳಿದೆವು. ಅಲ್ಲಿ ಬಂದವಲ್ಲಿ ಒಬ್ಬರು 'Are you guys professional photographers?' ಎಂದು ಕೇಳಿದುಂಟು.

ಅದಲ್ಲದೇ ನಾವು 'Engineers' ಎಂದು ಅವರು ಹೇಳಿದರು. ನಾನು ಮತ್ತು ಅರುಣ ಇಂಜಿನೀರಿಂಗ್ ಪದವಿಧರರು ಆದರೆ ಸಂದೇಶ್ 'CA'  ಮಾಡುತ್ತಿದ್ದವನು. ಜನರ ದೃಷ್ಟಿಯಲ್ಲಿ ಇಂಜಿನೀರಿಂಗ್ ಓದಿದವರೆಲ್ಲ ಫೋಟೊ ತೆಗೆಯುವುದು ಹವ್ಯಾಸ ಮಾಡಿಕೊಂಡಿರುತ್ತಾರೆ ಎಂಬುದಾಗಿದೆ. ಇದು '3 Idiots' ಸಿನಿಮಾದ ಪ್ರಭಾವ ಎಂದುಕೊಂಡೆ.
ಇನ್ನು Selfie... ಛಾಯಾಗ್ರಹಣ ಮಾಡಲು ಬೇಸರ ಬರಬೇಕು ಅಷ್ಟರ ಮಟ್ಟಿಗೆ ಇದು ಜೋರಾಗಿತ್ತು. ವಾಪಸ್ಸು ಬೆಂಗಳೂರಿಗೆ ಬಂದು ರೈಲು ಇಳಿದ ಮೇಲೂ ಇದರ ಭರಾಟೆ ನಿಲ್ಲಲಿಲ್ಲ....!!!
ಊಟ... ತಿಂಡಿ...
ಇದರ ಬಗ್ಗೆ ಎರಡು ಮಾತೇ ಇಲ್ಲ. ಒಂದೆ ಮಾತಲ್ಲಿ ಹೇಳುವುದಾದರೆ 'ಅದ್ಭುತ'. ಬೇರೆ ಏನು ಹೇಳಲು ಪದಗಳು ಸಿಗುತಿಲ್ಲ. ವಾಪಸ್ಸು ಹೊರಡುವ ದಿನವಂತು ಹಬ್ಬದಡಿಗೆ ಮಾಡಿದ್ದರು. ಪಲ್ಯ, ಕೊಸಂಬರಿ, ಹೋಳಿಗೆ, ಜಾಮೂನು, ಅನ್ನ ಹುಳಿ, ಮೊಸರು ಇದೆಲ್ಲಕ್ಕಿಂತಲೂ ಚೆನ್ನಾಗಿದ್ದದ್ದು ಉಪ್ಪಿನಕಾಯಿ. ಭಟ್ಟಗುಗಳಿಗೆ ನನ್ನ ಧನ್ಯವಾದಗಳು ಈ ಮೂಲಕ.

ಮತಾಂತರ...
ನಾವು ಇಲ್ಲಿಂದ ಹೊರಟಾಗಲೇ ರೈಲಿನಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಂಡ್ಡಿದ್ದ ಒಬ್ಬ ವ್ಯಕ್ತಿ ಸಿಕ್ಕಿದ. ನಮ್ಮಗಳ ಜೊತೆ ವಾದ ಮಾಡಲು ಬಂದ. ನಮ್ಮ ತಂಡದಲ್ಲಿ ಓದಿಕೊಂಡಿದ್ದವರು ಜಾಸ್ತಿ. ಮೊದಲೆ ಅಣ್ಣನ ಮಾತುಗಳಿಂದ ಪ್ರೇರೆಪಣೆಗೊಂಡಿದ್ದವರು. ಅವ ಒಬ್ಬ, ನಾವು 6 ಜನ, ವಾದದಲ್ಲಿ ಅವನೇ ಸೋಲಬೇಕಾಯಿತು. ವಾದದ ವಿಚಾರಗಳು ಎಲ್ಲರಿಗು ತಿಳಿದ್ದದ್ದೆ, ಅದನ್ನು ಮತ್ತೆ ಬಿಡಿಸಿ ಹೇಳುವ ಅಗತ್ಯವಿಲ್ಲ.

ನಾವುಗಳು ಇಳಿದು ಕೊಂಡಿದ್ದ ಸ್ಥಳದ ಮುಂದಿನ ರಸ್ತೆಯಲ್ಲಿಒಂದು ಈಗರ್ಜಿ (Church) ಇತ್ತು. ಅಲ್ಲಿ ಎನೋ ಸಮಾರಂಭವಂತೆ, ಆದ ಕಾರಣ ಜೋರಾಗಿ ಮೈಕ್ ಹಾಕಿದ್ದರು. ನಮಗೆ ಮೊದಲೇ ಕೇಳಲು ಇಷ್ಟವಿಲ್ಲ, ಅದರೊಂದಿಗೆ ಅದು ಕೇಳಲು ಸಹನೀಯವಾಗಿರಲಿಲ್ಲ. ನಮ್ಮ ಹುಡುಗರು ಮಾರನೆ ದಿವಸ ಅದರ ತಂತಿಗಳನ್ನು ಕಿತ್ತುಹಾಕಿದರು.
- ನಮ್ಮ ದೇವಸ್ಥಾನಗಳಲ್ಲಿ 'ಗರುಡ ಕಂಬ'ದ ಮಾದರಿಯಲ್ಲೇ ಅವರುಗಳೂ ಕಂಬವನ್ನು ನೆಟ್ಟಿದ್ದರು.
 - ನಾದಸ್ವರವೂ ಉಪಯೋಗಿಸುತ್ತಿದ್ದರು, ಒಂದು ಹಂತದಲ್ಲಿ 'ಗಟ್ಟಿಮೇಳವೂ' ಕೇಳಿಬಂತು...!!!
 - ನಮ್ಮಲ್ಲಿ ಪಲ್ಲಕ್ಕಿ ಉತ್ಸವ ಮಾಡುವ ಹಾಗೆ ಅವರು ಕೂಡ ಏಸುವಿನ ವಿಗ್ರಹದೊಂದಿಗೆ ಮಾಡಿದರು....!!! ನಾವು ಉಳಿದುಕೊಂಡಿದ್ದ ಹೊಟೇಲಿನಿಂದ ಅವರುಗಳಿಗೆ ಉಚಿತ ನೀರು ಸರಭರಾಜು. ಅವರುಗಳೋ, ನೀರು ಕುಡಿದು ಬಾಟೆಲುಗಳನ್ನು ಅಲ್ಲಿ ಎಸೆದು ಹೋದರು. ಅವರ ಯೋಗ್ಯತೆಯೆ ಅಷ್ಟು ಎಂದುಕೊಡೆ.
 - ಸಮುದ್ರ ಕಡೆಗೆ ಹೊದಾಗ ಅಲ್ಲೊಬ್ಬ ಏನೋ ಚೀಟಿ ಕೊಡುತ್ತಿದ್ದ. ಏನು ಎಂದು ನೋಡಿದಾಗ ಅದೊಂದು ಸಣ್ಣ 'ಬೈಬಲ್'. ಎಷ್ಟರ ಮಟ್ಟಿಗೆ ತಮ್ಮ ಧರ್ಮ ಪ್ರಚಾರ ಹಾಗು ಮತಾಂತರ ನಡೆದಿದೆ ಎಂದು ಅಂದಾಜು ಮಾಡಿದೆ. ಅದನ್ನು ನೆನೆದೆ ಗಾಬರಿಯಾಯಿತು.
 - ನಮ್ಮ ಮಾತುಗಳಲ್ಲಿ ಹೆಚ್ಚು ಕಮ್ಮಿ ಈ ವಿಚಾರವಾಗಿಯೇ ಇತ್ತು. ಈ ವಿಚಾರವೂ ಕೆಲವರಿಗೆ ಸಹನೀಯವಾಗಿರಲಿಲ್ಲ.
 
ಹಾಸ್ಯ ಸನ್ನಿವೇಶ....
ಇದರ ಬಗ್ಗೆ ಮಾತಾಡುವುದು ಎಂದರೆ ಮನೋಜನ ಬಗ್ಗೆ ಹೇಳುವುದು ಎಂದರ್ಥ. ಇದು ನನ್ನ ಅನಿಸಿಕೆ ಅಷ್ಟೆ, ಇದು ತಪ್ಪು ಇರಬಹುದು. ತಪ್ಪಿದಲ್ಲಿ ಮನೋಜರವರು ಕ್ಷಮಿಸಬೇಕು.
ಇದರ ಬಗ್ಗೆ ಮಾತಾಡುವುದು ಎಂದರೆ ಮನೋಜನ ಬಗ್ಗೆ ಹೇಳುವುದು ಎಂದರ್ಥ. ಇದು ನನ್ನ ಅನಿಸಿಕೆ ಅಷ್ಟೆ, ಇದು ತಪ್ಪು ಇರಬಹುದು. ತಪ್ಪಿದಲ್ಲಿ ಮನೋಜರವರು ಕ್ಷಮಿಸಬೇಕು.
 - ಉಪವಾಸ:
ಏಕಾದಶಿಯ ಕಾರಣ ಮನೋಜ ಎರಡನೇ ದಿವಸ ಊಟ, ತಿಂಡಿ ಮಾದಲಿಲ್ಲ. ಆದರೆ ರಾತ್ರಿ 2 ಚಪಾತಿ ತಿಂದ (ನಮಗೆ ಗೊತ್ತಿರುವ ಹಾಗೆ. ಹೆಚ್ಚು ತಿಂದನೋ ತಿಳಿಯದು..!!!). ಈ ವಿಚಾರದಲ್ಲಿ ಅವನ ಕಾಲೆಳೆಯಲು ಶುರುಮಾಡಿದೆವು. ಅದು ಅವನ್ನನ್ನು ಆಡಿಕೊಂಡ ಹಾಗಿತ್ತು. ಆದರೂ ಅದು ನಗು ತರಿಸುವ ವಿಚಾರವಾಗಿತ್ತು.

 - ಉನೋ (UNO):
ಈ ಆಟವಾಡಬೇಕಾದರೆ ನಾ ಇರಲ್ಲಿಲ್ಲ. ಸಂದೇಶ್ ಹೇಳಿದಹಾಗೆ, ನಾ ಅರ್ಥ ಮಾಡಿಕೊಂಡ ಹಾಗೆ ಹೇಳುತ್ತೇನೆ. ಆಡಬೇಕಾದರೆ ಅನೂಪ್ 'Selfie' ತೆಗಿಯಲು ಶುರುಮಾಡಿದ. ಹಾಗಿ ಮಾಡುವುದರೊಂದಿಗೆ ಮನೋಜನ ಹತ್ತಿರವಿರುವ ಕಾರ್ಡ್ ಯಾವುದು ಎಂದು ತಿಳಿಯುತ್ತಿತ್ತು. ಈ ವಿಚಾರ ಅವನಿಗೆ ಗೊತ್ತಾಗಲೇ ಇಲ್ಲ. ಒಟ್ಟಿನಲ್ಲಿ ಆಟಾಡಿದ ಮಂದಿ ತುಂಬ ಸಂಭ್ರಮಿಸಿದ್ದಾರೆ.

 - ಚಡ್ಡಿ ಪ್ರಸಂಗ:
ನಾವು ತಿಂಡಿ ತಿನ್ನುತ್ತಿದ್ದೆವು. ಮೇಲೆ ಕೋಣೆಯ ಗೋಡೆಗೆ ಮನೋಜ ತನ್ನ ಚಡ್ಡಿಯನ್ನು ಲಾಡಿಯಿಂದ ಕಟ್ಟಿ ಒಣಗಲು ಹಾಕಿದ್ದ. ಹೊರಗೆ ಹೊರಡುವ ಮುನ್ನ ಯಾರೊ ಒಬ್ಬರು ಅದನ್ನು ಒಳಗೆ ಇಡುತ್ತಿದ್ದರು ಅಂತ ಕಾಣುತ್ತದೆ. ಅವರು ಲಾಡಿಯ ಗಂಟು ತೆಗೆಯುತ್ತಿದ್ದರು. ಮನೋಜ ಇದನ್ನು ಗಮನಿಸಿದ. 'ಚಡ್ಡಿ ಬಿಚ್ಚಬೇಡ, ಚಡ್ಡಿ ಬಿಚ್ಚಬೇಡ' ಎಂದು ಕೂಗಿದ. ಅದನ್ನು ಕೇಳಿ ನಮಗೆ ನಗುವೊ ನಗು. ಅದನ್ನು ನೆನಸಿಕೊಂಡರೆ ಈಗಲು ನಗು ಬರುತ್ತದೆ.

 - ಮಾವಿನಕಾಯಿ ಪ್ರಸಂಗ:
ಇದಕ್ಕೆ ನಾನು, ಸಂದೇಶ್, ಅರುಣ ಪ್ರತ್ಯಕ್ಷ ಸಾಕ್ಷಿಗಳು.
ವಿವೇಕಾನಂದರ ಬಂಡೆ ನೋಡಿಕೊಂಡು ವಾಪಸ್ಸು ಬಂದೆವು. ಕೆಲವರು 'ಶಾಪಿಂಗ್' ಎಂದು ಹೋದರು. ನಾವು 4 ಜನ (ನಾನು, ಮನೋಜ, ಸಂದೇಶ್, ಅರುಣ)  ಮಾವಿನಕಾಯಿ ತಿನ್ನುತ್ತಾ ಬರುತ್ತಿದ್ದೆವು. ಮನೋಜ ಬೇಗ ತಿಂದು ಮುಗಿಸಿ ಕಸವನ್ನು ಎಸೆಯಲು ಹೋಗಿತ್ತಿದ್ದ. ದಾರಿಯಲ್ಲಿ ಯಾರೋ ಮಾವಿನಕಾಯಿ ಹಿಡಿದು ಬರುತ್ತಿದ್ದರು. ಇವ ನೋಡಲಿಲ್ಲ ಎಂದು ತೊರುತ್ತದೆ, ಅದನ್ನು ತೆಗೆದುಕೊಳ್ಳಲು ಹೋದ. ಅವರು ಇವನಿಗಲ್ಲ ಎಂದು ತಿರುಗಿಸಿಕೊಂಡರು. ಇವ ಬಿಡಲಿಲ್ಲ, ನನಗೆ ಬೇಕೇ ಬೇಕು ಎನ್ನುವ ರೀತಿ ಒಂದು ಚೂರು ತೆಗೆದುಕೊಂಡ. ಆ ವ್ಯಕ್ತಿ ಒಂದು ರೀತಿ ಯಾರಿವನು ಎಂದು ವಿಚಿತ್ರವಾಗಿ ನೋಡುತ್ತಿದ್ದ.
ಇವ ತಿನ್ನಲು ಹೋಗಿ ತಲೆ ಎತ್ತಿದ, ಇವರು ಯಾರೊ ಅಪರಿಚಿತರು ಎಂದು ತಿಳಿದು 'ಸಾರಿ, ಸಾರಿ' ಎಂದು ವಾಪಸ್ಸು ಇಡಲು ಮುಂದಾದ. ಅವರು ಇರಲಿ ಪರವಾಗಿಲ್ಲ ಎಂದು ಹೊರಟುಹೋದರು. ಇವನು ಆ ಮಾವಿನ ಚೂರನ್ನು ತಿಂದೆಬಿಟ್ಟ. ನಮಗೆ ನಗು ತಡೆಯಲಾಗಲಿಲ್ಲ. ನಂತರ ಇದನ್ನೇ ಎಲ್ಲರಿಗೂ ಹೇಳುತ್ತ ಮನೋಜನನ್ನ ರೇಗಿಸಲು ಪ್ರಾರಂಭಿಸಿದೆವು.
ಸಮುದ್ರ ತೀರ...
ಕನ್ಯಾಕುಮಾರಿಯ ಸಮುದ್ರ ತೀರ ತುಂಬ ವಿಶಿಷ್ಟವಾದದ್ದು, ಅಷ್ಟೆ ಭಯಾನಕವೂ ಹೌದು. ಕಾರಣ ಬಂಡೆಗಳು ಜಾಸ್ತಿ.
ಕನ್ಯಾಕುಮಾರಿಯ ಸಮುದ್ರ ತೀರ ತುಂಬ ವಿಶಿಷ್ಟವಾದದ್ದು, ಅಷ್ಟೆ ಭಯಾನಕವೂ ಹೌದು. ಕಾರಣ ಬಂಡೆಗಳು ಜಾಸ್ತಿ.
 - ಹಿಂದು ಮಹಾಸಾಗರ, ಅರಬ್ಬಿ ಸಮುದ್ರ, ಬಂಗಾಳ ಸಮುದ್ರಗಳು ಸೇರುವ ಜಾಗವಿದು. ಜಗತ್ತಿನ ಯಾವುದೇ ಭಾಗದಲ್ಲಿ ಇಂತಹ ಅದ್ಭುತ ಕಾಣಲು ಸಾಧ್ಯವಿಲ್ಲ ಎನ್ನಿಸುತ್ತದೆ. ಚಕ್ರವರ್ತಿ ಅಣ್ಣ ಹೇಳುವ ಮಾತು 'ಸಮುದ್ರ ಬೇಕೆಂದರೆ ದಕ್ಷಿಣಕ್ಕೆ ಬನ್ನಿ, ತಾಯಿ ಭಾರತಿಯ ಪಾದಗಳನ್ನು 3 ಸಮುದ್ರಗಳು ತೊಳೆಯುತ್ತದೆ.'. ಈ ಮಾತುಗಳ ದೃಶ್ಯವನ್ನು ಅಕ್ಷರ ಸಹ ಅಲ್ಲಿ ಕಾಣಬಹುದು. ಒಂದು ರೀತಿಯಲ್ಲಿ ಸತ್ಯದ ಸಾತ್ಷಾತ್ಕಾರವಾದಂತಾಗುತ್ತದೆ.
 - 1.5 - 2 ಕೀ.ಮಿ ಅಂತರದಲ್ಲಿ ಸುರ್ಯಾಸ್ತ, ಸುರ್ಯೋದಯ, ಎರಡೂ ಕಾಣಬಹುದಾದ ಅಪರೂಪದ ಸ್ಥಳ. ಬೆಳ್ಳಗ್ಗೆ 5:30 ಹೊತ್ತಿಗೆ ಸುರ್ಯೋದಯ ನೋಡಲು ಹೋದೆವು. ಸ್ವಲ್ಪ ಮೋಡವು ಇತ್ತು. ಸುರ್ಯನ ಬೆಳಕೆನ ಆಟವನನ್ನು ನೋಡುವುದೇ ಚೆನ್ನ. ರವಿ ಪೂರ್ವ ದಿಕ್ಕಿನಲ್ಲಿ ಏಳುವುದನ್ನು ನೋಡಿದಾಗ 'ಅಂಬರವೇರಿ, ಅಂಬರವೇರಿ ಸೂರ್ಯನು ಬಂದಾನೊ...' ಎಂಬ ಹಾಡು ನೆನಪಿಗೆ ಬಂತು.
ಹಿಂದುತ್ವದ ಸೂರ್ಯ ಹೀಗೆ ಬೆಳಗಬೇಕು ಎನ್ನುವ ಆಸೆ ಮನಸಲ್ಲಿ ಮೂಡಿತು. ಅಂದಿನ ಸೂರ್ಯ ತುಂಬಾ ವಿಶೇಷವಾಗಿ ಕಾಣಿಸಿದ. ಕೈ ಎತ್ತಿ ಮುಗಿಯುವ ಹಾಗಿತ್ತು ಆ ದೃಶ್ಯ. ಸುಮಾರು ಅರ್ಧ ಗಂಟೆಗಳ ಕಾಲ ಆ ಪ್ರಕೃತಿ ಸೌಂದರ್ಯವನ್ನು ಸವಿದೆವು.
ಹಿಂದುತ್ವದ ಸೂರ್ಯ ಹೀಗೆ ಬೆಳಗಬೇಕು ಎನ್ನುವ ಆಸೆ ಮನಸಲ್ಲಿ ಮೂಡಿತು. ಅಂದಿನ ಸೂರ್ಯ ತುಂಬಾ ವಿಶೇಷವಾಗಿ ಕಾಣಿಸಿದ. ಕೈ ಎತ್ತಿ ಮುಗಿಯುವ ಹಾಗಿತ್ತು ಆ ದೃಶ್ಯ. ಸುಮಾರು ಅರ್ಧ ಗಂಟೆಗಳ ಕಾಲ ಆ ಪ್ರಕೃತಿ ಸೌಂದರ್ಯವನ್ನು ಸವಿದೆವು.
ಸ್ವಾಮಿ ವಿವೇಕಾನಂದರ ಬಂಡೆ...
ಇದೊಂದು ಪವಾಡ ಮಾಡಬಹುದಾದಂತಹ ಸ್ಥಳ. ಹೌದು, ಅದು ಸ್ವಾಮೀಜಿಯವರ ಶಕ್ತಿಯೇ ಇರಬೇಕು. 3 ದಿನಗಳಿಂದ ಆ ಬಂಡೆಯಮೇಲೆ ಹೋಗುವುದಾದರು ಎಂದು? ಎಂದನ್ನಿಸುತ್ತಿತ್ತು. ಅಲ್ಲಿಗೆ ಹೋಗಲು ಮನಸ್ಸು ಹಾತೊರೆಯುತ್ತಿತ್ತು. ಹೊರಗೆ ತೋರಿಸಿಕೊಳ್ಳಲಿಲ್ಲ ಅಷ್ಟೆ. ಆ ಬಂಡೆಯ ಮೇಲಿ ನಿಂತು ಭಾರತ ಮಾತೆಯನ್ನು ನೋಡಬೇಕೆಂಬ ಕನಸು ನನಸಾಯಿತು. ಬಿಸಿಲು ಹೆಚ್ಚು ಆದರೂ ತಂಪಾಗಿತ್ತು, ಕಾರಣ ವಿವೇಕಾನಂದರು. ಆ ಬಿಸಿಲಿನಲ್ಲಿ ಆ ಪುಣ್ಯಾತ್ಮ, ಸಮುದ್ರದಲ್ಲಿ ಈಜಿ, 3 ದಿವಸ ತಾಯಿ ಭಾರತಿಗಾಗಿ ಕಣ್ಣೀರಿಟ್ಟು ಧ್ಯಾನ ಮಾಡಿದನ್ನು ಅಲ್ಲಿ ನಿಂತು ನೆನೆಯುವುದೆ ಒಂದು ಅದ್ಭುತ ಅನುಭವ.

ವಿವೇಕಾನಂದರ ಮೂರ್ತಿಯನ್ನು ನೋಡಿ, ಧ್ಯಾನ ಮಂದಿರದಲ್ಲಿ ಧ್ಯಾನಮಾಡಿ, ಬಂಡೆಯ ಮೇಲೆ ನಿಂತಾಗ ಆಗುವ ಅನುಭವವನ್ನು ಅನುಭವಿಸಿಯೇ ತಿಳಿಯಬೇಕು. ನನಗಂತು ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆ ಅನುಭವ ನಮ್ಮ ಕಲ್ಪನೆಗೂ ಮೀರಿದ್ದು. ಒಂದು ರೀತಿ ವಿದ್ಯುತ್ ಸಂಚಾರವಾದಂತಾಯಿತು. ಹೃದಯ ಹಗುರವಾಗಿತ್ತು. ಮನಸ್ಸು ತಿಳಿಯಾಗಿತ್ತು. ಸ್ವಲ್ಪ ಎಚ್ಚರಿಕೆಯಿಂದ ಧ್ಯಾನ ಮಾಡಿದ್ದಿದ್ದೆ ಆದರೆ ಸಾಕ್ಷಾತ್ ವಿವೇಕಾನಂದರೆ ಕಾಣಿಸುತ್ತಿದ್ದರು ಆನ್ನಿಸುತ್ತದೆ. ಮನಸ್ಸಿನ ಜಡತ್ವ ನಿವಾರಣೆ ಆಗಿತ್ತು. ಬೇರೆಯವರಿಗೆ ನನ್ನಲ್ಲಿ ಆದ ಬದಲಾವಣೆ ಕಾಣುತ್ತದೋ ಏನೊ ತಿಳಿಯದು ಆದರೆ ನನ್ನೊಳಗಾದ ಬದಲಾವಣೆ ನನಗೆ ಚೆನ್ನಾಗೆ ಅನುಭವಕ್ಕೆ ಬಂತು. ಸ್ವಾಮೀಜಿಯವರ ಶಕ್ತಿ ಅಪಾರ ಎಂದು ಕೇಳಿದ್ದೆ, ಈಗ ಅನುಭವಕ್ಕೆ ಬಂತು.
ವಾಪಸ್ಸು ಹೊರಡಬೇಕಾದರೆ 3 ದಿನಗಳು ಇಷ್ಟು ಬೇಗ ಮುಗಿಯಿತಲ್ಲ ಎಂಬ ಭಾವ ಆವರಿಸಿತ್ತು. ಬೆಂಗಳೂರಿನಿಂದ ಹೋಗಬೇಕಾದರೇ ಒಬ್ಬ ಸ್ನೇಹಿತ (ಅನೂಪ್) ಮಾತ್ರ ಪರಿಚಯವಿದ್ದ. ವಾಪಸ್ಸು ಬರಬೇಕಾದರೆ 45 ಅಣ್ಣ/ತಮ್ಮ/ಅಕ್ಕ/ತಂಗಿಯರು ಸಿಕ್ಕಿದರು! ಇದು ಆ ದೇವತಾ ಮನುಷ್ಯನ ಪ್ರೇರಣೆಯೆ ಸರಿ. ಅದರಲ್ಲೂ ಕೆಲವರು ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದ್ದರು. ಇಂತಹ ಅನುಭವಕ್ಕೆ ಜೊತೆಯಾದ ಎಲ್ಲರಿಗೂ ನನ್ನ ಅತ್ಯಂತ ಪ್ರೀತಿ ಪೂರಕವಾದ ಧನ್ಯವಾದಗಳು.