ಕೊನೆಗೂ ಆ ದಿನ ಬಂದೇ ಬಂದ್ದುಬಿಟ್ಟಿತ್ತು, ಅಂದು 01 Oct 2015. ಯುವಾ ಬ್ರಿಗೇಡ್ ಆಯೋಜಿಸಿದ್ದ 'LOC ಸಾಹಸ ಯಾತ್ರೆ'ಗೆ ಹೊರಡುವ ದಿನ ಬಂದ್ದೇಬಿಟ್ಟಿತು. ಹೊರಡುವ  3-4ಗಳ ಹಿಂದಿನಿಂದ ನಾನಂತೂ ತುಂಬ ಉತ್ಸುಕನಾಗಿದ್ದೆ. ರಾತ್ರಿ ಮಲಗುವಾಗ ಅನ್ನುವುದಕ್ಕಿಂತ ದಿನವಿಡಿ ಯಾತ್ರೆ ಹೇಗಿರಬಹುದು ಎಂಬುದರ ಬಗ್ಗೆಯೆ ಯೋಚಿಸುತ್ತಿದ್ದೆ. ಯಾತ್ರೆಗಿಂತಲೂ ಮಿಗಿಲಾಗಿ 'ಚಕ್ರವರ್ತಿ' ಅಣ್ಣ ನಮ್ಮೊಂದಿಗೆ ಬರುತ್ತಾರೆ ಎಂಬುದು ಹೆಚ್ಚು ಖುಷಿ ತರುತ್ತಿದ್ದ ವಿಚಾರ. ಹಿಂದಿನ ದಿವಸ ಆಫೀಸಿನಿಂದ ಬೇಗ ಬಂದು ಹೊರಡಲು ತಯಾರಿ ಮಾಡಿಕೊಂಡೆ. ಹೇಳಬೇಕಾಗಿಲ್ಲ ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ...!!!
![]()  | |
| The Logo | 
ಅಂದು ಮಧ್ಯಾಹ್ನ 1:40 ಕ್ಕೆ ರೈಲನ್ನು ಹತ್ತುವ ಮೂಲಕ ನಮ್ಮ ಯಾತ್ರೆ ಶುರುವಾಯಿತು. ಮೊದಲು ಮೊಳಗಿತು 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆ. ನಮ್ಮ ಬೋಗಿಯಲ್ಲಿ ಭೈರವಿ (ನನ್ನ ಚಿಕ್ಕಮ್ಮನ ಮಗಳು) ಶಾಲೆಯ ಮಕ್ಕಳು ಇದ್ದರು. ಆ ಮಕ್ಕಳು ಇದ್ದಿದ್ದರಿಂದ ನಮಗೂ ಪ್ರಯಾಣ ಬೇಸರವಾಗಲಿಲ್ಲ. ಇದಕ್ಕಾಗಿ ಆ ಮಕ್ಕಳಿಗೆ ಧನ್ಯವಾದಗಳು. ರೈಲಿನಲ್ಲಿ 'ಸ್ವಚ್ಚ ಭಾರತ ಅಭಿಯಾನ' ಮಾಡಲಾಯಿತು. ಹಾಡುಗಳೊಂದಿಗೆ ಮಕ್ಕಳ ಜೊತೆಗೂಡಿದೆವು. ಸಾವರ್ಕರ್ ಮತ್ತು ಮದನ್ ಲಾಲ್ ಧಿಂಗ್ರನ ನಾಟಕ ಮಾಡಿದೆವು. ಬರೋಬ್ಬರಿ 48 ಗಂಟೆಗಳ ಪಯಣ ಸುಗಮವಾಗಿ ಮುಗಿದಿತ್ತು. ಎಲ್ಲರೂ ದೆಹಲಿ ತಲುಪಿದೆವು. ಮತ್ತೆ 1 ದಿನದಲ್ಲಿ ಶ್ರೀನಗರ ತಲುಪಿದೆವು. ಅಲ್ಲಿ ಸಿಕ್ಕಿದರು ನಮಗೆ 'ಚಕ್ರವರ್ತಿ' ಅಣ್ಣ. ದಿನಚರಿಯಂತೆ ಹೇಳುವುದಕ್ಕಿಂತ ನೋಡಿದ ಸ್ಥಳಗಳ ಹಾಗು ಅಲ್ಲಿ ನನಗಾದ ಅನುಭವವನ್ನು ತಿಳಿಸಲು ಇಷ್ಟಪಡುತ್ತೇನೆ.
ಜಮ್ಮು ಮತ್ತು ಕಾಶ್ಮೀರ
ಭಾರತದ ಶಿರ ಎಂದು ಕರೆಯಲ್ಪಡುವ ಈ ಭೂಭಾಗವನ್ನು 'ಭೂ ಲೋಕದ ಸ್ವರ್ಗ' ಎಂದು ಕರೆಯಬಹುದು. ಆಹ, ಆ ಪರ್ವತ ಶ್ರೇಣಿಗಳು, ಕಣ್ಣು ಹಾಯಿಸದಲ್ಲೆಲ್ಲ ನದಿ, ಬೆಟ್ಟ. ಆ ಬೆಟ್ಟಗಳು ಭಯಂಕರವೂ ಹೌದು, ರಮಣೀಯವೂ ಹೌದು ಮತ್ತು ವರ್ಣಾತೀತವೂ ಹೌದು. ಕಣ್ಣಿಗಂತು ಹಬ್ಬವೇ ಹಬ್ಬ. ಶ್ರೀನಗರದ ಆ ಉದ್ಯಾನವನಗಳನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಅಣ್ಣ ಹೇಳಿದಂತೆ ಬೆಂಗಳೂರಿಗಿಂತ ಶ್ರೀನಗರಕ್ಕೆ 'ಉದ್ಯಾನ ನಗರ' ಎಂದು ಹೆಚ್ಚು ಸೂಕ್ತವೆನ್ನಿಸುತ್ತದೆ.

ಶಂಕರಾಚಾರ್ಯಯರ ಪೀಠ ಕೂಡ ಸುಂದರವಾಗಿತ್ತು. ಅಲ್ಲಿ, ಅಣ್ಣ ಆಚಾರ್ಯರು ಬರೆದಿರುವ ಶ್ಲೋಕವನ್ನು ಅರ್ಥಗರ್ಭಿತವಾಗಿ ಹೇಳಿಕೊಟ್ಟರು. ಭಕ್ತಿ ಎಂಬುದು ನನಗರಿವಿಲ್ಲದಂತೆ ಮನಸ್ಸನ್ನು ತುಂಬಿಕೊಂಡಿತು. ಆ ಸ್ಥಳದ ಮಹತ್ವನವನ್ನು ತಿಳಿದುಕೊಂಡೆವು. ಆ ಪೀಠದ ಮೇಲೆ ನಿಂತು ನೋಡಿದಾಗ ಇಡೀ ಶ್ರೀನಗರವನ್ನು ನೋಡಿದ ಹಾಗಾಯಿತು.
ದಾಲ್ ಸರೋವರ
ಇಲ್ಲಿ ದೋಣಿ ವಿಹಾರ ಮಾಡಿದೆವು. ಬೆಟ್ಟಗಳ ನಡುವಿನಲ್ಲಿ, ನೀರಿನ ಮಧ್ಯದ್ದಲ್ಲಿ ಮನಸ್ಸಿಗೆ ನೆಮ್ಮದಿಯ ಅನುಭವವಾಯಿತು. ತಿಳಿ ನೀರಿನಲ್ಲಿ ಕೈ ಆಡಿ ಸುತ್ತ ಇದ್ದೇವು. ಎಲ್ಲರೂ ತಮ್ಮದೇ ಆದ ಲೋಕದಲ್ಲಿ ಮೈ ಮರೆತ್ತಿದ್ದರು. ಹಲವರು ಫೋಟೊ ತೆಗೆಯುವುದರಲ್ಲಿ ತಲ್ಲೀನವಾಗಿದ್ದರು. ಸೂರ್ಯಾಸ್ತವಂತೂ ತುಂಬ ಕಾವ್ಯಮಯವಾಗಿತ್ತು. ಕವಿಗಳಿಗೆ ಸ್ಪೂರ್ತಿದಾಯಕ ಸ್ಥಳ ಎಂದನ್ನಿಸಿತು.

ಖೀರ್ ಭವಾನಿ ದೇವಸ್ಥಾನ
ಇದು ಕಾಶ್ಮೀರದಲ್ಲಿರುವ ಒಂದು ಹಿಂದು ದೇವಾಲಯ. ಇಲ್ಲಿಗೆ ಬಂದಿದ್ದು ನಮ್ಮ ಪ್ರವಾಸದ ಕಡೆಯ ದಿನಗಳಲ್ಲಿ. ಯಾರೊ 'ಗೋರಿಪಾಳ್ಯದಿಂದ ಬಸವನಗುಡಿಗೆ ಬಂದಹಾಗಾಯಿತು' ಎಂದರು. ಅ ದೇವಾಲಯ ನೋಡಲು ಸಾಧಾರಣವಾಗಿ ಇತ್ತು. ಅಂತಹ ವಿಶೇಷವಾಗಿರಲಿಲ್ಲ. ಆದರೆ ಅಲ್ಲಿ ಮರಗಳ ಸಮೂಹವಿದೆ. ಅಲ್ಲಿ ಕತ್ತೆತ್ತು ನೋಡಿದಾಗ ಭಾರತ ಕಾಣಿಸುತ್ತದೆ. ಇದನ್ನು Facebook ಅಲ್ಲಿ ನೋಡಿದ್ದೆ, ಈಗ ಕಣ್ಣಾರೆ ನೋಡುವ ಭಾಗ್ಯ ಸಿಕ್ಕಿತು. ಭಾರತ ದರ್ಶನವಾದಂತಾಯಿತು. ಆ ದೇವಾಲಯದ ಹಿನ್ನಲೆಯನ್ನು ಅಣ್ಣ ನಮಗೆ ತಿಳಿಸಿಕೊಟ್ಟರು.

ಅಷ್ಟರಲ್ಲಿ, ಮುಸಲ್ಮಾನರ 'ಅಲ್ಲಾ ಹೋ...' ಶುರುವಾಯಿತು. ಅದೇ ಸಮಯಕ್ಕೆ ದೇವಾಲಯದಲ್ಲಿ 'ಓಂ' ಶುರುವಾಯಿತು. ಅದು ವಿಶೇಷವಾಗಿತ್ತು. ಇದೆಲ್ಲಕ್ಕಿಂತ ವಿಶೇಷ ಆ ಜಾಗದಲ್ಲಿ 'ಸ್ವಾಮೀ ವಿವೇಕಾನಂದ'ರು ತಮ್ಮ ಕೊನೆಯ ಕೆಲವು ದಿನಗಳು ಅಲ್ಲಿ ಕಳೆದಿದ್ದರು ಎಂಬುದು. ಈ ಪ್ರದೇಶದಲ್ಲಿ ಸೈನಿಕರನ್ನು ಕಂಡರೆ ಕಲ್ಲು ಹೊಡೆಯುತ್ತಾರೆ ಎಂದು ಕೇಳಿದ್ದೆ. ಈ ದೇವಾಲಯವೊಂದು ಸೈನಿಕರ ಬೇಸ್ ಕ್ಯಾಂಪ್. ದೇವಾಲಯಕ್ಕೆ ಸೈನಿಕರು ಕಾವಲು, ಸೈನ್ಯಕ್ಕೆ ದೈವ ಕಾವಲು. ಇದನ್ನೆ 'ಧರ್ಮೋ ರಕ್ಷತಿ ರಕ್ಷಿತಃ' ಎನ್ನುವುದು ಎಂದು ಅಣ್ಣ ನಮಗೆ ತಿಳಿಸಿಕೊಟ್ಟರು. 
ಕಾರ್ಗಿಲ್
ಯುದ್ಧ ಭುಮಿಯಲ್ಲಿ ನಿಲ್ಲುವುದೇ ಒಂದು ಪುಣ್ಯ. 'ಚಕ್ರವರ್ತಿ' ಅಣ್ಣನ ಮಾತುಗಳಲ್ಲಿ ಕಾರ್ಗಿಲ್ ಯುದ್ಧದ ಬಗ್ಗೆ ಹೇಳುವುದನ್ನು ಕೇಳಿದ್ದೆ, ಈಗ, ಆ ಜಾಗದಲ್ಲಿ ನಿಂತಾಗ ಆ ಘಟನೆಗಳು ನನ್ನ ಕಣ್ಮುಂದೆ ಬಂದವು. ಆ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕಾಗುವುದಿಲ್ಲ, ಅನುಭವಿಸಬೇಕಷ್ಟೆ. ಅಲ್ಲಿ ಸೈನಿಕನೊಬ್ಬ ಕಾರ್ಗಿಲ್ ಯುದ್ಧದ ಘಟನೆಗಳನ್ನು ವರ್ಣನೆ ಮಾಡಿದಾಗ ಬಹುತೇಕ ಮಂದಿಯ ಕಣ್ಣು ತೇವವಾಗಿತ್ತು. ಒಂದು ಕ್ಷಣದಲ್ಲಿ 'ವಿಕ್ರಂ ಬಾತ್ರ, ಮನೋಜ್ ಕುಮಾರ ಪಾಂಡೆ, ಯೋಗಿಂದರ್ ಸಿಂಗ್, ಸೌರಭ್ ಕಾಲಿಯ, ಅಜಯ್ ಅಹುಜ, ಸಂಜಯ್ ಕುಮಾರ್' ಮತ್ತಿತರು ಕಣ್ಮುಂದೆ ಹಾದು ಹೋದರು. ನಾನು ರೈಲಿನಲ್ಲಿ ಅಣ್ಣನ 'ಕಾರ್ಗಿಲ್ ಕದನ ಕಥನ' ಓದುತ್ತಾ ಬಂದೆ. ಅದು ಕೂಡ ನನ್ನ ಭಾವನೆಗಳು ಉಕ್ಕುವುದಕ್ಕೆ ಪೂರಕವಾಗಿತ್ತು.

ಖಾರ್ದುಂಗ್ಲ ಪಾಸ್
ಇದು ಜಗತ್ತಿನಲ್ಲಿ ಅತೀ ಎತ್ತರವಾದ ಗಾಡಿ ಓಡಿಸಬಹುದಾದ ಜಾಗ (18264 ಅಡಿ). ಇಲ್ಲಿಗೆ ಹೋಗಿ ಬರುವುದು ಎಂದರೆ ಎರಡೆರಡು ಜನ್ಮ ಪಡೆದಂತೆ. ಅಲ್ಲಿ ಆಮ್ಲ ಜನಕ ಕಡಿಮೆ, ನಮಗಂತೂ ಉಸಿರಾಟವೇ ಕಷ್ಟವಾಯಿತು. ಅಲ್ಲಿದ್ದ ಸೈನಿಕರೊಬ್ಬರು ಬಂದು ನಮಗೆ ಬೇಗ ಅಲ್ಲಿಂದ ಹೊರಡಲು ಹೇಳಿದರು. ಆಗ ನನಗನ್ನಿಸಿತು 'ನಮಗೆ ಅರ್ಧ ತಾಸು ಇರುವುದು ಕಷ್ಟ. ಇನ್ನು ಅಲ್ಲಿ ಕಾವಲು ಕಾಯುವುದು ಮತ್ತು ಅದಕ್ಕಿಂತ ಕಠಿಣವಾದ ಪ್ರದೇಶ ಸಿಯಾಚಿನಲ್ಲಿ ಯುದ್ಧ ಮಾಡುವುದು ಹೇಗಪ್ಪ?' ಎಂದು. ಈ ಕಾರಣಕ್ಕಾಗಿ ಭಾರತದ ಸೈನಿಕರಿಗೆ ನನ್ನ ಮನಸ್ಪೂರಕವಾದ ಧನ್ಯವಾದಗಳು. ಅವರನ್ನು ನೆನೆದಾಗಲೆಲ್ಲ ನನ್ನ ಕಣ್ಣು ತೇವವಾಗುತ್ತದೆ. ಇಲ್ಲಿಂದಲೇ ಅವರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.

ಆರ್ಮಿ ಬೇಸ್ ಕ್ಯಾಂಪ್
ನಾವು ಕಾರ್ಗಿಲ್ ಹಾಗು ಲಡಾಕ್ ನಲ್ಲಿ 3 ಬೇಸ್ ಕ್ಯಾಂಪ್ ಗಳಿಗೆ ಬೇಟಿ ಕೊಟ್ಟಿದೆವು. ಇದರ ಜೊತೆಗೆ 'ಅಮನ್ ಕಮಾನ್ ಸೇತು' ಗೆ ಹೋಗಿದ್ದೆವು.
ಅಮನ್ ಕಮನ್ ಸೇತು ಎಂಬುದು 'ಭಾರತ' ಮತ್ತು 'ಪಿ.ಒ.ಕೆ' ನಡುವಿನ ಸೇತು. ಅಲ್ಲಿ ಪಾಕೀಸ್ತಾನದ ಸೈನಿಕರು ನಮ್ಮನ್ನು ಗಮನಿಸುತ್ತಿದ್ದರು. ಅಲ್ಲಿ ನಮ್ಮ ಪಾಕೀಸ್ತಾನದ ನಡುವೆ ನಡೆಯುವ ವ್ಯಾಪಾರವನ್ನು ನೋಡುವ ಭಾಗ್ಯ ನಮ್ಮದಾಯಿತು. ಅಲ್ಲಿಂದ ಬಂದ ಲಾರಿಗಳನ್ನು ನೋಡಿದರೆ ಜಾತ್ರೆ ಲಾರಿ ನೋಡಿದ ಹಾಗಾಯಿತು.
ಧೃವ ಎಂಬ ಹೇಲಿಕಾಪ್ಟರ್ ನಲ್ಲಿ ನಮ್ಮನ್ನು ಕೂರಿಸಿ ಅದರ ಕಾರ್ಯಾಚರಣೆಯನ್ನು ನಮಗೆ ತಿಳಿಸಿಕೊಟ್ಟರು. ಅಲ್ಲಿ ಸೈನಿಕರಿಂದ ಸಿಕ್ಕ ಸ್ವಾಗತ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಅವರ ಪ್ರೀತಿ ಹಾಗು ನಮ್ಮನ್ನು ತಬ್ಬಿಕೊಂಡಾಗ ಆಗ ಆನಂದ ಮತ್ತೆಂದು ಅನುಭವಿಸಲು ಸಾಧ್ಯವಿಲ್ಲ...!!! ಅವರೊಂದಿಗೆ ಮಾತಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದೆ ಹೇಳಬೇಕು.

ಚಕ್ರವರ್ತಿ ಅಣ್ಣನ ಬೈಠಕ್...
ಅಣ್ಣನ ಮಾತುಗಳು ಒಂದು ಗ್ರಂಥವೇ ಸರಿ. ಅವರು ಹೇಳಿಕೊಟ್ಟ ವಿಚಾರಗಳು ಒಂದು ಪಠ್ಯ ಪುಸ್ತಕ ಓದಿದಂತಾಯಿತು. ಕೆಲವು ಪ್ರಶ್ನೆಗಳು ಕೇಳಿದೆ, ಅಣ್ಣನಿಂದ ಸಮರ್ಥವಾದ ಉತ್ತರವೂ ಸಿಕ್ಕಿತು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು ಎಂದು 1008 'ರಾಮ ನಾಮ' ಜಪ ಮಾಡಿದೆವು. ಅದಕ್ಕು ಮುಂಚೆ ಎಲ್ಲರೂ 'ಓಂಕಾರ' ಹೇಳಿದೆವು. ಅಲ್ಲೊಂದು ಅದ್ಭುತ ಲೋಕ ಸೃಷ್ಟಿಯಾಗಿತ್ತು. ಸಿಂಧು ನದಿ ಕೂಡ ಭಾರತಕ್ಕೆ ಸೇರಲೇಂದು ಆ ನದಿಯ ದಡದಲ್ಲಿ ಪೂಜೆ ಮಾಡಿದೆವು. ಪವಿತ್ರವಾದ ಸಿಂಧು ನದಿಯ ನೀರನ್ನು ತೆಗೆದುಕೊಂಡು ಬಂದೆ ತೀರ್ಥವೆಂದು ಸೇವಿಸಲು. ಇಡೀ ಯಾತ್ರೆಗೆ ಒಂದು ಧಾರ್ಮಿಕ ನೆಲೆಗಟ್ಟು ಮೂಡಲು ಅಣ್ಣನ ಸಾನಿಧ್ಯ ಕಾರಣವಾಗಿತ್ತು.
ಇದರೊಂದಿಗೆ ಕಾಶ್ಮೀರ ನೆಲದ ಕಾವು ನಮಗೆ ತಿಳಿಯಿತು. ನಾವು ಹೋಗಿದ್ದ 'Winger ಮತ್ತು Tempo traveler' ಅನ್ನು ಸುಟ್ಟುಹಾಕಿದ್ದರು. ಅದನ್ನು ನೋಡಿ ಅಲ್ಲಿನ ಜನ ಜೀವನ ಅರ್ಥವಾಯಿತು. ಅಲ್ಲಿನ ಭೀಕರತೆ ನಮಗೆ ಅರ್ಥವಾಯಿತು.

ಒಂದೇ ಮಾತಿನಲ್ಲಿ ಹೇಳಬೇಕಾದರೆ ಈ ಯಾತ್ರೆಗೆ ಹೋಗಿ ಬಂದ್ದಿದ್ದು ಹಲವು ಜನ್ಮಗಳ ಪುಣ್ಯ. ನಾನು ಪುಣ್ಯ ಮಾಡಿದ್ದೇನೆ ಎಂಬುದು ಖಾತ್ರಿಯಾಯಿತು. ಭಾರತದ ಕೋಟ್ಯಾಂತರ ಜನಗಳ ನಡುವೆ ಈ ಯಾತ್ರ ಮಾಡಿದ ನಾವು 104 ಜನರು ಪುಣ್ಯವಂತರೆ ಸರಿ. ಹೋಗಬೇಕಾದರೆ 'India Gate' ನೋಡಿದೆವು. ವಾಪಸ್ಸು ಬರಬೇಕಾದರೆ ದೆಹಲಿಯಲ್ಲಿ 1 ದಿನ ಸಮಯವಿತ್ತು. ನಾವು ಆಗ್ರ ಮತ್ತು ಮಥುರ ಗೆ ಹೋಗಿ ಬಂದೆವು. ತಾಜ್ ಮಹಲ್, India gate ಎಲ್ಲ ನೀರಸ ಎನ್ನಿಸಿತು. ಸೈನಿಕರ ಜೀವನದ ಮೌಲ್ಯಕ್ಕೂ ಈ ಕಟ್ಟಡಕ್ಕೂ ಹೋಲಿಕೆ ಮಾಡುವುದೇ ಸರಿ ಇಲ್ಲ. ಸೈನಿಕನ ಜೀವನ ದೈವತ್ವಕ್ಕೆ ಸಮಾನವಾದುದು.
ಸೈನಿಕನಿಗೊಂದು ಸಲಾಮ್... ಭಾರತ್ ಮಾತಾ ಕೀ ಜೈ... ವಂದೇ ಮಾತರಂ...