ಅದೊಂದು ಸಂಜೆ ಮನೆಯಲ್ಲಿ ಕೂತಿದ್ದೆ, ಆಗಸದಲ್ಲಿ ಕಪ್ಪನೆ ಮೋಡ ಕವಿದಿತ್ತು ಜೊತೆಗೆ ಜಿಟಿ ಜಿಟಿ ಮಳೆ. ಮನೆಯೊಳಗೆ ಕತ್ತೆಲೆ ಆವರಿಸುತ್ತಿತ್ತು ಆದರೂ, ಮಳೆಯಿಂದ ಮನಸ್ಸು ತಿಳಿಯಾಗಿತ್ತು. ಏನೇ ಹೇಳಿ ಆ ಮನಸ್ಸು ಎಂಬುದು ಮರ್ಕಟವೇ ಸರಿ. ಬೇಡವಾದದ್ದು, ಬೇಕಾದದ್ದು, ಕೆಲಸಕ್ಕೆ ಬಾರದಿದ್ದು, ಮತ್ತೊಂದು ಮಗದೊಂದು ಯೋಚನೆಗಳು ಬರುತ್ತಲೇ ಹೋದವು. ಕೊನೆಗೆ, ನಮ್ಮ ಸುತ್ತ ಮುತ್ತ ಇರುವ ವ್ಯಕ್ತಿತ್ವಗಳ ಸಂಬಂಧಗಳ ಬಗೆಗೆ ನನ್ನ ಯೋಚನ ಲಹರಿ ಹರಿಯಿತು. ಅಮ್ಮ, ಅಜ್ಜಿ, ಮಾವ, ಅತ್ತೆ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಅತ್ತಿಗೆ, ಭಾವ, ಬಾಳ ಸಂಗಾತಿ, ಸೋದರ ಸೋದರಿಯಂತಿರುವ ಸ್ನೇಹಿತರು ಮತ್ತು ಸ್ನೇಹಿತರು. ಅಬ್ಬ...!!! ಎಷ್ಟು ಸಂಬಂಧಗಳು, ಎಷ್ಟು ಭಾವನೆಗಳು. ಇವೆಲ್ಲ ಎಷ್ಟು ಗಟ್ಟಿಯಾಗಿ ಉಳಿಯತ್ತೆ ಅಥವಾ ಇಲ್ಲ ? ಯಾಕೆ, ಈ ದಿನಗಳಲ್ಲಿ ವಿಚ್ಚೇದನಗಳು ಜಾಸ್ತಿ? ಸ್ನೇಹಿತರ ನಡುವೆ ಮನಸ್ತಾಪ ಯಾಕೆ ? ಅನ್ನುವಲ್ಲಿಗೆ ನನ್ನ ಯೋಚನೆ ಹರಿಯಿತು. ನನಗೆ ತೋಚಿದ್ದು, ನಾನು ಕಂಡುಕೊಂಡಿದ್ದನ್ನು ಮುಂದಿಡುತ್ತಿದ್ದೇನೆ.
ಈ ವಿಚಾರವನ್ನು ಎರಡು ಸಂಬಂಧಗಳ ಉದಾಹರಣೆಯೊಂದಿಗೆ ವಿವರಿಸಲು ಪ್ರಯತ್ನಿಸುತ್ತೇನೆ.
೧. ಸ್ನೇಹ ಸಂಬಂಧ:
ನಮ್ಮ ಸಮಾಜದಲ್ಲಿ ಸಂಬಂಧಿಕರನ್ನು ಬಿಟ್ಟು ಮಿಕ್ಕ ಪರಿಚಯಸ್ತರನ್ನು ಸ್ನೇಹಿತರು ಎಂದು ಕರೆಯುವುದು ವಾಡಿಕೆ. ಕೆಲವರಿಗೆ ನಾವು ಹತ್ತಿರವಾಗುತ್ತೇವೆ್. ಈ ಹತ್ತಿರ ಆಗೋದಾದರೂ ಹೇಗೆ ಅನ್ನೋದು ನನ್ನ ಪ್ರಶ್ನೆ. ನಾನು ನೋಡಿರುವ ಮಟ್ಟಿಗೆ ನಮ್ಮ ಯೋಚನ ಲಹರಿ ಹೊಂದಾಣಿಕೆಯಾದರೆ, ಅವರಿಂದ ನಮಗೆ ಸಹಾಯವಾಗಿ ಕೃತಜ್ಞತೆ ಎಂದು, ಹೀಗೆ ಮತ್ಯಾವುದೋ ಸದುದ್ದೇಶದಿಂದಲೋ, ದುರುದ್ದೇಶದಿಂದಲೋ ನಮ್ಮಲ್ಲಿ ಸ್ನೇಹ ಸಂಬಂಧ ಬೆಳೆಯುತ್ತದೆ. ದುರುದ್ದೇಶವಿದ್ದಲ್ಲಿ ತಪ್ಪು ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಮತ್ತು ಅಂತಹ ಸಂಬಂಧಗಳು ಅನೇಕ ದಿನಗಳು ಉಳಿಯುವುದಿಲ್ಲ ಅನ್ನುವುದು ಸತ್ಯ. ನನ್ನ ಚಿಂತನೆ ಇದರ ಕುರಿತಲ್ಲ. ಸ್ನೇಹದ ಮೂಲ ವ್ಯಾಖ್ಯಾನದ ಕುರಿತು.

 "A friend is one who accepts as you are" - "ನಮ್ಮನ್ನು ನಾವಿರುವ ಹಾಗೆ ಒಪ್ಪಿಕೊಳ್ಳುವವರೇ ಸ್ನೇಹಿತರು". ಈ ವ್ಯಾಖ್ಯಾನ ನನಗೆ ತುಂಬ ಹಿಡಿಸಿತು. ಈ ರೀತಿ ಸ್ನೇಹ ಸಂಬಂಧ ಬೆಳೆಯುವುದು ಸಾಧ್ಯವಾ ? ಇದಕ್ಕೆ ಉತ್ತರ ಹುಡುಕೋದು ಸ್ವಲ್ಪ ಕಷ್ಟವೇ ಆಯಿತು. ನನಗೆ ತಿಳಿದಿರುವ ಪುರಾಣದ ಕಥೆಯ ಮೂಲಕ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಪಟ್ಟೆ.
- ದುರ್ಯೋಧನನಿಗೆ ಅರ್ಜುನನ್ನು ಎದುರಿಸುವ ಒಂದು ಶಕ್ತಿ ಬೇಕಿತ್ತು. ಅದ್ದರಿಂದ, ಕರ್ಣನಿಗೆ ಆಶ್ರಯ ಕೊಟ್ಟ. ಇನ್ನು ಕರ್ಣ ಕೃತಜ್ಞತ ಭಾವದಿಂದ ಅವನೊಟ್ಟಿಗೆ ಇದ್ದ ಅನ್ನೋದು ಸತ್ಯ. ದುರ್ಯೋಧನ ಆಶ್ರಯ ಕೊಡದೆ ಇದ್ದಿದ್ದರೆ ಅವರಿಬ್ಬರಲ್ಲಿ ಅಂತಹ ಒಂದು ಬಾಂಧವ್ಯ ಇರುತ್ತಿತ್ತು ಎಂದು ನನಗಂತು ಅನ್ನಿಸುವುದಿಲ್ಲ. 
 - ಅದೇ ರೀತಿ ದ್ರೋಣ ಮತ್ತು ದೃಪದನ ಸ್ನೇಹ. ದೃಪದ ಅರ್ಧ ರಾಜ್ಯ ಕೊಡುತ್ತಾನೆ ಎಂಬ ಕಾರಣಕ್ಕೆ ದ್ರೋಣ ಅವನ ಸ್ನೇಹ ಉಳಿಸಿಕೊಂಡಿದ್ದ. ಯಾವಾಗ ದೃಪದ, ರಾಜ್ಯ ಕೊಡಲ್ಲ ಅನ್ನುತ್ತಾನೊ ಆಗ ಅವರ ಸ್ನೇಹ ಶಾಶ್ವತವಾಗಿ ಮುರಿದು ಬೀಳುತ್ತದೆ. ವೈರಿಗಳು ಆಗಿಬಿಡುತ್ತಾರೆ. ಇದು ದುರುದ್ದೇಶದ ಸ್ನೇಹ ಸಂಬಂಧಕ್ಕೆ ಒಂದು ಉದಾಹರಣೆ.
 - ಹಾಗೆ ನೋಡಿದರೆ, ಅದೇ ಮಹಾಭಾರತದಲ್ಲಿ ಕೃಷ್ಣ ಮತ್ತು ಸುಧಾಮನ ಸ್ನೇಹ ಆದರ್ಶಪ್ರಾಯವಾದದ್ದು ಅನ್ನಿಸುತ್ತದೆ. ಇಬ್ಬರೂ ಒಟ್ಟಿಗೆ ಓದುತ್ತಿದ್ದವರು ಹೌದು. ಆದರೆ ಇಬ್ಬರಲ್ಲೂ ಪರಸ್ಪರ ಯಾವ ನಿರೀಕ್ಷಣೆ ಇರಲಿಲ್ಲ. ಸುಧಾಮನ ಬಡತನ ಕೃಷ್ಣನ ಸ್ನೇಹಕ್ಕೆ ತಡೆಗೋಡೆ ಅನ್ನಿಸಲಿಲ್ಲ. ಕೃಷ್ಣ ಶ್ರೀಮಂತ, ಅವನಿಂದ ಏನಾದರು ಸಿಗುತ್ತದೆ ಎಂಬ ಉದ್ದೇಶ ಸುಧಾಮನಿಗೆ ಇತ್ತು ಅಂತ ನನಗನ್ನಿಸುವುದಿಲ್ಲ.
 
ಆದರೆ, ನಮ್ಮ ಸಮಾಜ ಸ್ನೇಹ ಎಂದರೆ ಕರ್ಣ, ದುರ್ಯೋಧನ ಆದರ್ಶ ಎನ್ನುವುದುಂಟು. ಹಾಗಾದರೆ ಅದರರ್ಥ ಏನು ? ನಾವು ಸ್ನೇಹವನ್ನು ಲಾಭ, ಸಹಾಯ ಮತ್ತು ಕೃತಜ್ಞತೆಯ ತಳಹದಿ ಮೇಲೆ ಕಟ್ಟುತ್ತೇವೆ ಮತ್ತು ಅದಕ್ಕೆ ಬೆಲೆ ಕೊಡುತ್ತೇವೆ ಅಂತಾಗುತ್ತದೆ. ಅದು ಸರಿಯೋ ತಪ್ಪೋ ಅನ್ನುವುದಕ್ಕಿಂತ ಅಂತಹ ಸ್ನೇಹ ಸಂಬಂಧ ಎಷ್ಟು ದಿವಸ ಜೀವಂತವಾಗಿರುತ್ತದೆ ಎಂಬುದು ನನ್ನ ಕಾಳಜಿ.
೨. ಪ್ರೇಮ, ಪ್ರೀತಿ, ಜೀವನ ಸಂಗಾತಿ:
ನಮ್ಮ ಬಾಳಲ್ಲಿ ಜೀವನ ಸಂಗಾತಿ ಸಿಗಬೇಕು ಅನ್ನೋ ಕಾರಣಕ್ಕೆ ನಾವುಗಳು ನಾನಾ ರೀತಿ ಪ್ರಯತ್ನಗಳನ್ನು ಮಾಡುತ್ತೇವೆ. ಅರೇಂಜ್ ಮದುವೆ ಅಥವಾ ಪ್ರೇಮ ವಿವಾಹ ಎಂಬ ಪದ್ಧತಿಗಳ ಮೂಲಕ. ಇವೆರಡರ ಪದ್ಧತಿಗಳನ್ನು ತುಲನೆ ಮಾಡುವ ಉದ್ದೇಶ ಈಗಿಲ್ಲ.
"ಅವರೊಂದಿಗಿನ ಹೊಂದಾಣಿಕೆ ಇದೆಯಾ ಇಲ್ಲವ ? ನನ್ನ ಜೀವನ ಶೈಲಿಗೆ ಅವರು ಹೊಂದಿಕೊಂಡು ಹೋಗುತ್ತಾರ ? ಅವರ ಅಭ್ಯಾಸ, ಹವ್ಯಾಸಗಳು ನನ್ನ ಅಭಿರುಚಿಗೆ ತಕ್ಕಂತೆ ಇದೆಯಾ ? ಅವರ ಸಂಪಾದನೆ ಚೆನ್ನಾಗಿದ್ದಿಯ ? ಒಳ್ಳೆ ಕಡೆ ಕೆಲಸ ಇದಿಯಾ? ಹುಡುಗನಿಗೆ ಅಪ್ಪ ಅಮ್ಮ ಇದ್ದಾರ ? ಹುಡುಗಿಗೆ ಅಣ್ಣ ತಮ್ಮ ಇಲ್ಲವಾದರೆ ಅವರ ತಂದೆ ತಾಯಿಯ ಜವಾಬ್ದಾರಿ ನಮ್ಮ ಮೇಲೆ ಬರುತ್ತದೆ ಎಂಬ ದೂರಾಲೋಚನೆ". ಯಾರನ್ನಾದರೂ ಸಂಗಾತಿ ಎಂದು ಒಪ್ಪಿಕೊಳ್ಳಬೇಕಾದರೆ ಈ ರೀತಿಯ ಪ್ರಶ್ನೆಗಳು, ಆಲೋಚನೆಗಳು ಬರುವುದು ಸಹಜ. ಅರೇಂಜ್ ಮದುವೆಗಳಲ್ಲಿ ಅಪ್ಪ ಅಮ್ಮಂದಿರು ಈ ರೀತಿ ಯೋಚಿಸುತ್ತಾರೆ, ಪ್ರೇಮ ವಿವಾಹದಲ್ಲಿ ನಮ್ಮ ಮನಸ್ಸಿನಲ್ಲಿ ಈ ರೀತಿ ಯೋಚನೆ ಬರುತ್ತದೆ. ಇದು ನನ್ನ ಜ್ಞಾನದ ಮಿತಿಯಲ್ಲಿ ಸಮಾಜವನ್ನು ಅರಿತುಕೊಂಡಿರುವ ರೀತಿ. ಇದು ತಪ್ಪು ಇರಬಹುದು ಮತ್ತೂ ಎಲ್ಲರೂ ಹೀಗೆ ಅಂತಲೂ ನನ್ನ ಅಭಿಪ್ರಾಯವಲ್ಲ.
"ನಾನಿನಗೋಸ್ಕರ" ಅನ್ನುವ ತ್ಯಾಗದ ಕಲ್ಪನೆ ಬದಲು "ನೀನನಗೋಸ್ಕರ" ಎಂಬ ಸ್ವಾರ್ಥ ನಮ್ಮ ಸಮಾಜದ ಒಳಹೊಕ್ಕಿದೆ. ಮದುವೆಗಾಗಿ ಹೆಣ್ಣು ಅಥವಾ ಗಂಡನ್ನು ನೋಡುವುದು ಅನ್ನುವುದೇ ಒಂದು ರೀತಿ ಸಹ್ಯವಾಗುವುದಿಲ್ಲ. ಯಾರೊಬ್ಬರನ್ನು ಏನಾದರೊಂದು ಕಾರಾಣದೊಂದಿಗೆ "ನೀವು ನನಗೆ ಒಪ್ಪಿಗೆ ಆಗಿಲ್ಲ" ಅನ್ನುವುದಾದರೂ ಹೇಗೆ ? ಯಾರನ್ನಾದರು ಒಪ್ಪಲು ಅಥವಾ ತಿರಸ್ಕರಿಸಲು ನಾವ್ಯಾರು ? ನಮಗೇನಿದೆ ಹಕ್ಕು ? ಒಬ್ಬರನ್ನು ಒಪ್ಪಲಿಲ್ಲ ಎಂಬ ಕಾರಣಕ್ಕೆ ಮತ್ತೊಬ್ಬರನ್ನು ನೋಡುವುದು ಹೇಗೆ ಸಹ್ಯವಾಗುತ್ತದೆ ಈ ಸಮಾಜಕ್ಕೆ ? ನಾವು ಬಟ್ಟೆ ಖರೀದಿ ಮಾಡಲಿಕ್ಕೆ ಒಂದು ಅಂಗಡಿಗೆ ಹೋಗುತ್ತೇವೆ. ಅಲ್ಲಿ ನಮಗೆ ಬಟ್ಟೆಗಳು ಹಿಡಿಸಲಿಲ್ಲವೆಂದರೆ ಮತ್ತೊಂದು ಅಂಗಡಿಗೆ ಹೋಗುತ್ತೇವೆ. ಎರಡಕ್ಕೂ ಏನು ವ್ಯತ್ಯಾಸವೇ ಕಾಣಿಸುತ್ತಿಲ್ಲ ಮತ್ತು ಸಹ್ಯವೂ ಆಗಿತ್ತಿಲ್ಲ ನನ್ನ ಅಲ್ಪ ಮತಿಗೆ.
ಸಂಗಾತಿಯೇ ಆಗಲಿ, ಸ್ನೇಹಿತರೇ ಆಗಲಿ, ಮತ್ಯಾವುದೇ ಸಂಭಂದವಾಗಲಿ, ಯಾವುದರ ತಳಹದಿಯ ಮೇಲೂ ನಿಲ್ಲಬಾರದು. ಬದಲಾಗಿ ಪ್ರೀತಿ, ಸ್ನೇಹವೇ ನಮ್ಮ ಬದುಕಿನ ತಳಹದಿಯಾಗಬೇಕು. ಪ್ರೀತಿ, ಪ್ರೇಮ, ಮಮತೆ, ಸ್ನೇಹ ತನ್ನಷ್ಟಕ್ಕೆ ತಾನೆ ಆಗಬೇಕು. ನಾವು ಪ್ರಯತ್ನ ಪೂರಕವಾಗಿ ಮಾಡುವಂತಾಗಬಾರದು. ಮಾಡುವುದನ್ನು ಕೆಲಸ ಅನ್ನುತ್ತಾರೆ, ತನ್ನಷ್ಟಕ್ಕೆ ತಾನೆ ಸಹಜವಾಗಿ ಆಗುವುದನ್ನು ಭಾವನೆ ಅನ್ನುತ್ತಾರೆ. ಬದುಕಿನ ಸಂಬಂಧಗಳು ಸಹಜತೆಯಿಂದ ಕೂಡಿರಬೇಕು. ಸ್ವಾರ್ಥದ ನಿರೀಕ್ಷಣೆಯ ತಳಹದಿಯ ಮೇಲೆ ಬೆಳೆಸಬಾರದು. "ಅಮ್ಮ" ಎಂದರೆ ಪ್ರೀತಿ, ಮಮತೆ, ಕರುಣೆ, ವಾತ್ಸಲ್ಯ, ಕೋಪ, ದುಃಖ, ಅಳು, ನಗು ಸಹಜವಾಗಿ ವ್ಯಕ್ತವಾಗುತ್ತದೆ, ಯಾರು ಕೂಡ ಪ್ರಯತ್ನ ಪೂರಕವಾಗಿ ಪ್ರೀತಿ ತೋರುವುದಿಲ್ಲ. ಹೀಗೆ ಪ್ರತಿಯೊಂದು ಸಂಬಂಧದಲ್ಲೂ ಭಾವನೆಗಳು ಸಹಜವಾಗಿ ವ್ಯಕ್ತವಾಗಬೇಕು. ಪ್ರಯತ್ನಪೂರಕವಾಗಿ, ಸ್ವಾರ್ಥದ ನಿರೀಕ್ಷಣೆಗಳೊಂದಿಗೆ ತೋರ್ಪಡಿಕೆಯಾಗಬಾರದು. ಸಂಬಂಧಗಳು ಬದುಕಿನ ಬಂಧನ ಆಗಬಾರದು ಅದು ಬದುಕಿನ ಬೆಸುಗೆ ಆಗಬೇಕು. ಬದುಕಿನ ಸಾರ್ಥಕತೆ ಅಡಗಿರುವುದೇ ಸಹಜತೆಯಲ್ಲಿ.