January 1, 2019

ಸ್ಮರಣೆ






















ಅವಳೊಂದು ಕನಸಿನ ಕೂಸಂತೆ
ಮನಸ್ಸೊಂದು ಜೇನಿನ ಸಿಹಿಯಂತೆ |
ಕಣ್ತೆರೆದರೆ ಸುಮ ಅರಳಿದಂತೆ
ನಕ್ಕರೆ ಭುವಿ ಸ್ವರ್ಗವಾದಂತೆ ||

ಚೆಲುವಲ್ಲಿದೆ ನವ ವಸಂತದ ಸೊಗಡು
ಹಂಸವು ನಾಚುವ ಬಳುಕಿನ ಬೆಡಗು |
ಮುನಿದ ಮೊಗವು ಗೋಧೂಳಿ ಆಗಸದ ಸೊಬಗು
ನನ್ನಂತರಂಗದ ಭಾವ ಕುಲುಕಿದೆ ಆ ನಗುವು ||

ಜೊತೆಗಿರಲು ಅಂತರಂಗದ ಭಾವ ಪಸರಿಸಿತು
ಮಡಿಲಲ್ಲಿ ಮಲಗಿರೆ ಹೃದಯ ಹಗುರಾಯಿತು |
ನನ್ನೊಲವಿನ ಪ್ರೇಮ ಬಿಡಿಸದ ಬಂಧವಾಯಿತು
ಅಗಲಿಕೆಯ ನೋವಲ್ಲಿ ನಗುವು ಮರೆಯಾಯಿತು ||

ಮನದೊಳಗಿದೆ ನೆನಪೆಂಬ ಹೂರಣ
ಒಂಟಿತದ ಭಾವ ಎಂದೆಂದಿಗೂ ಧಾರುಣ |
ನಲಿವೊಂದಿಗಿನ ನೋವಿಗೆ ಪ್ರೀತಿಯೇ ಕಾರಣ
ನಾವಿಕನಿಲ್ಲದ ನೌಕೆಯಲ್ಲಿ ಸಾಗಿದೆ ಬದುಕಿನ ಪಯಣ ||