07/11/2019 ರಂದು ಕಚೇರಿ ಅಲ್ಲಿ ಒಂದು ತರಬೇತಿ ಕಾರ್ಯಾಗಾರಕ್ಕೆ (training workshop) ಹೋಗಿದ್ದೆ. ತರಬೇತುಗಾರರನ್ನು ತಯಾರಿಸುವ ತರಬೇತಿ ಅರ್ಥಾತ್ Train the Trainers. ಒಂದಷ್ಟು ತತ್ವಗಳನ್ನು ಹೇಳಿ ತರಬೇತಿ ಸಮಯದಲ್ಲಿ ಹೇಗಿರಬೇಕು, ಸಮಯದ ಮಹತ್ವದ ಬಗ್ಗೆ ಇಡೀ ದಿವಸ ಕ್ಲಾಸ್ ರೂಮ್ ಪಾಠ ಆಗತ್ತೆ ಎಂದು ತಿಳಿದಿದ್ದೆ. ಆದರೆ, ಅಲ್ಲಿ ನಾನು ಕಲಿತಿದ್ದೆ ಬೇರೆ. ವಿಚಾರ ಹಳೆಯದಾದರೂ ಕಲಿತ ರೀತಿ ಹೊಸದಾಗಿತ್ತು.
ನಮ್ಮಲ್ಲಿ ನಾಲ್ಕು ತರಹದ ಜನ/ಇರುತ್ತಾರೆ
ತಂಪು ಅಥವಾ ತಣ್ಣಗಿನ ವಾತಾವರಣದಲ್ಲಿ ಏಕಾಗ್ರತೆ ಹೆಚ್ಚು ಎಂಬುದು ಅನುಭವದಿಂದ ತಿಳಿದಿದ್ದೆ. ಆದರೆ, ಮತ್ತೊಬ್ಬರಿಗೆ ಹೇಳಲು ಬರುತ್ತಿರಲಿಲ್ಲ. ಅಲ್ಲೊಂದು ಅದ್ಭುತವಾದ ಉದಾಹರಣೆ ಕೊಟ್ಟರು. 'ತಪಸ್ಸು ಮಾಡಲು ಹಿಮಾಲಯಕ್ಕೆ ಹೋಗುತ್ತಾರೋ ಅಥವಾ ಮರುಭೂಮಿಗೆ ಹೋಗುತ್ತಾರೋ?' ಎಂದು ಕೇಳಿದಾಗ ಎಷ್ಟು ಸರಳ ಮತ್ತು ಅದ್ಭುತ ಅನ್ನಿಸಿತು.
"ನಾನೂ ಸರಿ ನೀನು ಸರಿ" ಅನ್ನುವ ಒಂದು ತತ್ವ ಭಾರತ ಅಥವಾ ಹಿಂದೂ ಧರ್ಮ ಹೇಳುವುದೇ ಆಗಿದೆ. ಎಲ್ಲ ಮಾರ್ಗಗಳು ಒಂದೇ ಭಗವಂತನೆಡೆಗೆ ಹೋಗುತ್ತದೆ ಎಂಬ ಹಿಂದೂ ತತ್ವ ಎಲ್ಲ ಕಡೆ ಪ್ರಚಲಿತ ಎಂಬುದು ಸಾಬೀತಾಯಿತು.
Body, Mind, Thoughts, Action ಬಗೆಗೆ ಮಾತಾಡಿದರು. ಇದು ನನಗೆ ಚೆನ್ನಾಗೆ ಅರ್ಥವಾಯಿತು. ಭಾರತೀಯ ವೇದ ಪರಂಪರೆ ಹೇಳಿದ ತತ್ವವೇ ಅದು. ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ಬುದ್ಧಿಮಯ ಕೋಶ ವಿಜ್ಞಾನಮಯ ಕೋಶ, ಆನಂದಮಯ ಕೋಶ.
ಈ ತರಬೇತಿ ಜರ್ಮನ್ ಮಾದರಿ ಆದ್ದರಿಂದ ಬುದ್ಧಿಮಯ ಕೋಶದ ತನಕ ವಿಚಾರ ದಾಖಲಾಗಿದೆ. ಭಾರತೀಯ ವೇದ ಪರಂಪರೆಯನ್ನು ನಾವು ಅರ್ಥೈಸಿಕೊಂಡು ಪಾಲಿಸುವುದೇ ಆದರೆ ಬುದ್ದಿ ಮಟ್ಟವನ್ನು ಮೀರಿ ಆನಂದದ ಮಟ್ಟವನ್ನು ತಲುಪುವ ಪ್ರಯತ್ನ ಮಾಡಬಹುದು. ಭಾರತೀಯ ಪರಂಪರೆ ಅರ್ಥಾತ್ ವೇದ ಪರಂಪರೆ ನಿಜಕ್ಕೂ ಆಳದಲ್ಲಿ ಅಧ್ಯಯನ ಮಾಡಬೇಕು. ಭಗವದ್ಗೀತೆಯನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದ್ಭುತವನ್ನು ಸಾಧಿಸಬಹುದು.
ಒಟ್ಟಾರೆ ನನಗೆ ಈ ತರಬೇತಿ ಮತ್ತು ಭಾರತೀಯ ಪರಂಪರೆ ಅದ್ಭುತ ಅನ್ನಿಸಿತು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ "ನಾನು ಚಿಕ್ಕವನಾದರೆ ಏನು ಓದುವುದಿಲ್ಲ. ಬದಲಾಗಿ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದನ್ನು ಅಭ್ಯಾಸ ಮಾಡುತ್ತೇನೆ" ಎಂದು. ಹಾಗೆ, ಈ ರೀತಿಯ ತರಬೇತಿ ನಮಗೆ ವಿದ್ಯೆ ಕಲಿಸುವ ಮೊದಲೇ ಆಗಿದ್ದರೆ ಒಳಿತು.
ನಮ್ಮಲ್ಲಿ ನಾಲ್ಕು ತರಹದ ಜನ/ಇರುತ್ತಾರೆ
- ನಾನು ಸರಿ, ನೀನು ಸರಿಯಿಲ್ಲ.
 - ನಾನು ಸರಿಯಿಲ್ಲ, ನೀನು ಸರಿ.
 - ನಾನೂ ಸರಿಯಿಲ್ಲ, ನೀನು ಸರಿಯಿಲ್ಲ.
 - ನಾನೂ ಸರಿ, ನೀನೂ ಸರಿ.