November 16, 2021

ಚೀನಾ; ಒಳಗೆ ಹುಳುಕು ಹೊರಗೆ ಕೆಡುಕು

ಕರೋನಾ ಬಂದ ನಂತರ 2020ರ ತನಕ ತನ್ನ ಮನಸೋ ಇಚ್ಛೆ ಆಟವಾಡುತ್ತಿದ್ದ ಚೀನಾ ಈ ವರ್ಷ ಜಗತ್ತಿನೆದುರು ತಣ್ಣಗಾದಂತೆ ಇದೆ. ಈ ವರ್ಷ ನಡೆದ ವಿಶ್ವಸಂಸ್ಥೆಯ ಅಧಿವೇಶನದಲ್ಲಾಗಲಿ, ಜಿ-20 ಸಮಾವೇಶದಲ್ಲಾಗಲಿ, ಕಳೆದ ವಾರ ನಡೆದ ಗ್ಲಾಸ್ಗೋ ಹವಾಮಾನ ಸಮ್ಮೇಳನದಲ್ಲಾಗಲಿ ಚೀನಾದ ಹಾಜರಾತಿ ಇರಲಿಲ್ಲ! ಚೀನಾ ಒಂದು ಕಡೆ ತೈವಾನ್ ಮೇಲೆ ದಾಳಿ ಮಾಡುವ ಪ್ರಯತ್ನದಲ್ಲಿದೆ, ಮತ್ತೊಂದು ಕಡೆ ಪಾಕಿಸ್ತಾನಕ್ಕೆ ಅತ್ಯಾಧುನಿಕವಾದ, ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಯುದ್ಧನೌಕೆಯೊಂದನ್ನು ಕೊಟ್ಟಿದೆ, ಮತ್ತು ಇನ್ನೂ ಎರಡು ನೌಕೆಗಳನ್ನು ಕೊಡುವ ಯೋಜನೆ ಇದೆ. ಇದಲ್ಲದೆ ಚೀನಾ ಪಾಕಿಸ್ತಾನಕ್ಕೆ ದೊಡ್ಡಮೊತ್ತದ ಸಾಲವನ್ನು ಕೊಟ್ಟಿದೆ. ನೆನಪಿಡಿ, ಯೂರೋಪು ಸಾಲದ ಮೇಲೆ ಹಾಕುವ ಬಡ್ಡಿ ಶೇ1.1 ಆದರೆ, ಚೀನಾ ಹಾಕಿರುವ ಬಡ್ಡಿ ಶೇ3.5 ರಷ್ಟು! ಅಮೆರಿಕಾವೇನಾದರೂ ವಿರಮಿಸಿದರೆ ಜಗತ್ತನ್ನು ಆಳುತ್ತೇವೆ ಎನ್ನುತ್ತಿದ್ದ ಚೀನಾ ಈಗ ಜಾಗತಿಕ ಮಟ್ಟದ ಸಭೆ ಮತ್ತು ವ್ಯವಹಾರಗಳಿಂದ ದೂರ ಉಳಿಯುತ್ತಿದೆ ಎಂಬುದು ಅಚ್ಚರಿಯ ಸಂಗತಿ. ಜಾಗತಿಕ ಸಭೆಗಳಿಗೆ ಗೈರಾಗುತ್ತಿರುವ ಚೀನಾ ಮಾಡುತ್ತಿರುವುದಾದರು ಏನು? ಹಾಗೆಂದು ಆಂತರಿಕವಾಗಿ ಚೀನಾದಲ್ಲಿ ಎಲ್ಲವೂ ಸರಿ ಇದೆ ಎನ್ನಬಹುದ ಎಂಬುದು ಪ್ರಶ್ನೆ.

china delivers largest, most advanced warship to Pakistan

ಈ ವರ್ಷದ ಪ್ರಾರಂಭದಲ್ಲಿ ದೃಢತೆ ಮತ್ತು ಬೆಳೆವಣಿಗೆ ತೋರಿಸುತ್ತಿದ್ದ ಚೀನಾದ ಆರ್ಥಿಕತೆ ಮೂರನೇ ತ್ರೈಮಾಸಿಕದಲ್ಲಿ ಅತ್ಯಂತ ಕಡೆಮೆ ಬೆಳವಣಿಗೆಯಾಗಿದೆ. ಇದಕ್ಕೆ ಒಂದು ಕಡೆ ಪ್ರಕೃತಿ ಕಾರಣವಾದರೆ ಮತ್ತೊಂದು ಕಡೆ ಇದು ಚೀನಾ ಸರ್ಕಾರದ ಸ್ವಯಂಕೃತಾಪರಾಧ ಕೂಡ. ಸೆಪ್ಟಂಬರ್ ಅಲ್ಲಿ ಚೀನಾದ ಪೂರ್ವಭಾಗದಲ್ಲಿ ಭೀಕರವಾದ ಮಳೆ, ಪ್ರವಾಹ ಮತ್ತು ಭೂಕುಸಿತ ಉಂಟಾಯಿತು. ಬೇಸಿಗೆ ಕಾಲದಲ್ಲೂ ಸಹ ಹಿಮ ಬಿದ್ದಿದೆ! ಇದನ್ನು ಚೀನಾ ನಿರೀಕ್ಷಿಸಿರಲಿಲ್ಲ. ಚೀನಾ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಹೆಚ್ಚಾಗಿ ಅವಲಂಬಿಸಿದೆ. ತಾನು ಕಲ್ಲಿದ್ದಲ ಬೃಹತ್ ಉತ್ಪಾದಕನಾಗಿದ್ದರೂ ಸಹ ಪ್ರಮುಖವಾಗಿ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಕ್ವಾಡ್ ಮೇಲಿನ ಕೋಪದಿಂದಲೋ ಅಥವಾ ಸ್ಕಾಟ್ ಮೋರಿಸನ್ ಕರೋನಾ ವಿಚಾರವಾಗಿ ಚೀನಾ ವಿರುದ್ಧ ಮಾತಾಡುತ್ತಿದ್ದ ಎಂಬ ಕಾರಣಕ್ಕೋ ಚೀನಾ ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತು. ಇದರಿಂದ ದೇಶದಲ್ಲಿ ವಿದ್ಯುತ್ ಉತ್ಪಾದನೆ ಇಳಿಯಿತು. ಇದರ ಹೊಡೆತ ಸಾಮಾನ್ಯ ಜನತೆ ಮೇಲೆ ಬಿತ್ತು. ಇದಕ್ಕಾಗಿ ಬೇರೆ ದೇಶದಿಂದ ಕಲ್ಲಿದ್ದಲು ತರಿಸಿದರಾದರೂ ಅವುಗಳ ಗುಣಮಟ್ಟ ತಕ್ಕದ್ದಾಗಿರಲಿಲ್ಲ. ಇದೇ ಸಮಯಕ್ಕೆ ಚಳಿಗಾಲವೂ ಬಂತು. ಸರ್ಕಾರ ಡೀಸೆಲ್ ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯಕ್ಕೆ ಮುಂದಾಯಿತು. ತನ್ನ ಮಿಲಿಟರಿ ಉತ್ಪಾದನಾ ಘಟಕಗಳನ್ನು ಮಧ್ಯಚೀನಾ ಪ್ರಾಂತ್ಯಕ್ಕೆ ವರ್ಗಾಯಿಸಿತು. ಆಗಸ್ಟಿನಲ್ಲಿ ಕೆಲವು ಹೈಪರ್ಸಾನಿಕ್ ಮಿಸೈಲ್ಗಳನ್ನು ಸಹ ಅದು ಪರೀಕ್ಷಿಸಿದೆ. ಇದಲ್ಲದೇ ಉತ್ತರ ಚೀನಾ ಭಾಗದಲ್ಲಿ 300ಕ್ಕೂ ಹೆಚ್ಚು ಮಿಸೈಲ್ಗಳನ್ನು ಸಹ ತಯಾರಿಸಿದೆ. ಈ ರೀತಿ ಬಹುಪಾಲು ವಿದ್ಯುತ್ತನ್ನು ಮಿಲಿಟರಿ ಉದ್ದೇಶಗಳಿಗೆ ಬಳೆಸಲಾಯಿತು. ಈ ಕಾರಣದಿಂದಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಡೀಸೆಲ್ಲಿನ ಬೆಲೆ ಹೆಚ್ಚಾದ ಕಾರಣ ಟ್ರಕ್ಗಳಿಗೆ ಡೀಸೆಲ್ ಸಿಗಲಿಲ್ಲ ಹಾಗಾಗಿ, ಅವುಗಳ ಸಂಚಾರ ನಿಂತು ಆಹಾರ ಪೂರೈಕೆಯ ಸಮಸ್ಯೆ ಎದುರಾಯಿತು. ಇದನ್ನು ಸುಧಾರಿಸಲು ತನ್ನ ಆಹಾರ ಸುಧಾರಣ ಕ್ರಮವನ್ನು ಚೀನಾ ಬದಲಾಯಿಸಿತು. ಅತೀ ಹೆಚ್ಚು ಆಹಾರವನ್ನು ಆರ್ಡರ್ ಮಾಡುವುದು ಅಥವಾ ಅತೀಯಾಗಿ ತಿನ್ನುವ ವೀಡಿಯೊಗಳನ್ನು ಹಂಚಿಕೊಂಡರೆ 1500 ಡಾಲರ್ಗಳಷ್ಟು ದಂಡ ಹಾಕುವ ನಿಯಮಗಳನ್ನು ಸಹ ತಂದರು! ಇಷ್ಟೆಲ್ಲಾ ಇದ್ದರೂ ಸಹ ಚೀನಾ ತೈವಾನ್ ವಿರುದ್ಧ ದಾಳಿ ಮಾಡಲು ತಯಾರಿ ನಡೆಸಿಯೇ ಇದೆ. ಆದರೆ, ತೈವಾನಿನ ಭದ್ರತಾ ಅಧಿಕಾರಿಯ ಮಾತಿನಂತೆ ಇನ್ನು 4 ವರ್ಷ ಚೀನಾ ತೈವಾನಿನ ಮೇಲೆ ದಾಳಿ ಮಾಡುವುದಿಲ್ಲ ಎಂಬುದು ತಕ್ಕ ಮಟ್ಟಿಗೆ ಸಮಾಧಾನಕರವಾದ ವಿಚಾರ.

ಚೀನಾದ ಈಗಿನ ಸೈನಿಕರಿಗೆ ಯುದ್ಧದ ಅನುಭವ ಕಮ್ಮಿ. ಚೀನಾ ಕೊನೆಯ ಬಾರಿ ಯುದ್ಧ ಮಾಡಿದ್ದು 1979ರಲ್ಲಿ ವಿಯಟ್ನಾಂ ವಿರುದ್ಧ. ಅದನ್ನು ಸಹ ಚೀನಾ ಸೋತಿತ್ತು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಭಾರತದ ವಿರುದ್ಧ ಕೂಡ ಅದಕ್ಕೆ ಸೋಲಾಯಿತು. ಮೊದಲು ಯಾರು ಸತ್ತಿಲ್ಲ ಎಂದ ಚೀನಾ ಎಂಟು ತಿಂಗಳ ನಂತರ ನೂರಕ್ಕೂ ಹೆಚ್ಚು ಸೈನಿಕರು ತೀರಿಕೊಂಡಿದ್ದಾರೆ ಎಂದಿತು. ಬೆಟ್ಟದ ಕಣಿವೆಗಳಲ್ಲಿ ಯುದ್ಧ ಮಾಡುವ ಸಾಮರ್ಥ್ಯ ಚೀನಾದ ಇಂದಿನ ಸೈನಿಕರಿಗೆ ಇಲ್ಲ. ಸೈನಿಕ ದಳದ ಈ ದೌರ್ಬಲ್ಯದ ಕಾರಣ ತನ್ನ ವಾಯುಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹಸರಿಸಿತು. ಮಧ್ಯ ಮತ್ತು ಪಶ್ಚಿಮ ಟಿಬೆಟ್ ಭಾಗದಲ್ಲಿ 10 ಏರ್ಸ್ಟ್ರಿಪ್ಗಳನ್ನು ನಿರ್ಮಿಸಿದೆ ಮತ್ತು 20 ಸಾವಿರ ಟಿಬೆಟ್ಟಿಯರನ್ನಿಗೆ ಸೈನಿಕ ತರಬೇತಿಯನ್ನು ಕೊಟ್ಟು ಸೈನ್ಯಕ್ಕೆ ಸೇರಿಸಿಕೊಂಡಿದೆ. ಒಂದು ಮೂಲದ ಪ್ರಕಾರ ಚೀನಾಕ್ಕಿಂತ ಪಾಕಿಸ್ತಾನಕ್ಕೆ ಯುದ್ಧದ ಅನುಭವ ಹೆಚ್ಚಿರುವ ಕಾರಣ ಚೀನಾದ ಸೈನಿಕದಳಗಳನ್ನು ಪಾಕಿಸ್ತಾನದ ಕರ್ನಲ್ಗಳು ಮುನ್ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಅಲ್ಲಿ 300 ಸೈನಿಕರು ಭಾರತದ ಗಡಿಯ ಹತ್ತಿರ ಗಸ್ತು ಹೊಡೆದ್ದಿದ್ದಾರೆ. ಅಕ್ಟೋಬರಿನಲ್ಲಿ ಅರುಣಾಚಲದಲ್ಲಿ 100 ಸೈನಿಕರು ಈ ರೀತಿ ಗಸ್ತು ಹೊಡೆದಿದ್ದಾರೆ. ಅಂದರೆ, ಗಡಿ ಪ್ರದೇಶದಲ್ಲಿ ಚೀನಾ ಭಾರತದ ವಿರುದ್ಧ ಮತ್ತು ಅತ್ತ ತೈವಾನ್ ಜೊತೆ ಯುದ್ಧದ ತಯಾರಿಯಲ್ಲಿರುವಂತಿದೆ. ಏನೇ ಆದರೂ ಭಾರತ ಸಿದ್ಧವಾಗಿದೆ ಎಂಬುದು ಸಮಾಧಾನಕರವಾದ ಸಂಗತಿ. ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ 'ನಮಗೆ ಪಾಕಿಸ್ತಾನಕ್ಕಿಂತಲೂ ಚೀನಾ ಪ್ರಮುಖ ಶತ್ರು ಮತ್ತು ಭದ್ರತಾ ತೊಡಕಾಗಿದೆ' ಎಂದು ಚೀನಾದ ನಡೆಗಳನ್ನು ಗಮನಿಸುತ್ತಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಇನ್ನು ಸಾಗರದ ವಿಚಾರಕ್ಕೆ ಬಂದರೆ ಭಾರತ ಇಂಡಿಯನ್ ಓಷನ್ ಭಾಗದಲ್ಲಿ ಬಹಳಷ್ಟು ಬಲವಾಗಿದೆ ಮತ್ತು ಚೀನಾವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಸೆಪ್ಟಂಬರ್ ನಲ್ಲಿ ಥೈಲ್ಯಾಂಡ್ ಕ್ರಾ ಕಾಲುವೆ ಯೋಜನೆಯನ್ನು ರದ್ದುಗೊಳಿಸಿರುವುದು ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದನ್ನು ಗಮನಿಸಿ ಚೀನಾ ಭಾರತವನ್ನು ತಡೆಯಲು ಪಾಕಿಸ್ತಾನಕ್ಕೆ ಸಹಕಾರ ಕೊಡುತ್ತಾ ಮತ್ತೆ ಹಳೆ ಚಾಳಿಯನ್ನು ಶುರುಮಾಡಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನಕ್ಕೆ ಯುದ್ಧನೌಕೆಯೊಂದನ್ನು ಕೊಟ್ಟಿದ್ದು. 'ನಾಯಿ ಹಸಿದಿತ್ತು, ರೊಟ್ಟಿ ಹಲಸಿತ್ತು' ಎನ್ನುವಂತಿದೆ ಚೀನಾ-ಪಾಕಿಸ್ತಾನದ ಸಂಬಂಧ.

ಚೀನಾ ಆಂತರಿಕವಾಗಿ ಕುಸಿಯುತ್ತಿದೆ ಎಂಬುದಕ್ಕೆ ಇನ್ನೂ ಒಂದು ನಿದರ್ಶನವಿದೆ. ಅಕ್ಟೋಬರ್ 21 ರಿಂದ ಒಂದು ವಾರದಲ್ಲಿ ಹತ್ತು ಕಡೆ ಬಾಂಬ್ ಸ್ಫೋಟಗಳಾಗಿವೆ. ರಸ್ತೆಯಲ್ಲಿನ ಟ್ರಕ್ಗಳಲ್ಲಿ, ರೆಸ್ಟುರಾಗಳಲ್ಲಿ, ಎರಡು ಪ್ರಮುಖ ವಿಶ್ವವಿದ್ಯಾಲಯದ ಲ್ಯಾಬ್ಗಳಲ್ಲಿ ಸ್ಫೋಟಗಳಾಗಿವೆ. ಈ ಬಾಂಬ್ ಸ್ಫೋಟಗಳಿಗೆ ಕಾರಣ ತಿಳಿದುಬಂದಿಲ್ಲ. ಜನರ ಹಿತಾಸಕ್ತಿಯನ್ನು ಕಡೆಗಣಿಸಿ ತನ್ನ ಪ್ರಭುತ್ವವನ್ನು ಉಳಿಸಿಕೊಂಡು ಇತರರ ಮೇಲೆ ಯುದ್ಧ ಮಾಡುವ ಮನಸ್ಥಿತಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನದ್ದು. ಬದುಕಿರುವವರೆಗೂ ತಾನೇ ಅಧ್ಯಕ್ಷನಾಗಿರಬೇಕು ಎಂಬುದು ಆತನ ಉದ್ದೇಶ. ಅಲ್ಲಿನ ಜನರು ಆತನ ವಿರುದ್ಧ ತಿರುಗಿಬಿದ್ದಿದ್ದಾರ ಎಂಬ ಪ್ರಶ್ನೆ ಮೂಡುತ್ತಿದೆ. ಸೆಪ್ಟೆಂಬರ್ ನಲ್ಲಿ ಕ್ಸಿ ಹತ್ಯೆ ಮಾಡುವ ಸಂಚು ನಡೆದಿತ್ತು ಎಂಬ ಸುದ್ಧಿ ಸಹ ಇದೆ! ಇದರ ಮುಂದುವರೆದ ಭಾಗವಾಗಿ ಅಲ್ಲಿನ ಪಶ್ಚಿಮ ಕಮಾಂಡರನ್ನು ಹತ್ಯೆ ಮಾಡಿಸಲಾಗಿದೆ.

ಇದೆಲ್ಲವನ್ನು ಗಮನಿಸಿದರೆ ಚೀನಾದೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಗೋಚರವಾಗುತ್ತಿದೆ. ಆದರೂ ಭಾರತ ಮತ್ತು ತೈವಾನ್ ವಿರುದ್ಧ ಅದು ಯುದ್ಧ ತಯಾರಿ ಮಾಡಿಕೊಳ್ಳುತ್ತಿದೆ. ಜಗತ್ತಿಗೆ ಕರೋನಾವನ್ನು ರಫ್ತು ಮಾಡಿ ಸಾವು, ನಷ್ಟಗಳಿಗೆ ಕಾರಣವಾದ ಚೀನಾ ಈಗ ಒಳಗಿಂದಲೇ ಒಡೆಯುತ್ತಿದೆ. ಒಬ್ಬರಿಗೆ ಕೇಡು ಬಗೆದರೆ ನಮಗೆ ಕೇಡಾಗುತ್ತದೆ ಎಂಬುದಕ್ಕೆ ಚೀನಾ ಇತ್ತೀಚಿನ ನಿದರ್ಶನ.

 

10 bomb blasts across china in a week of October month
 
References:
  1. china Delivers New Warship to Pakistan  
  2. Now, it is Illegal to Order Too Much Food in china 
  3. Explosion at Restaurant in NE china    
  4. High Intensity Blasts Rock china before CCP's 6th Plenary 
  5. Big Blow to china as Thailand Scraps KRA Canal Project 
  6. chinese President xi jinping Escaped an Assassination? 
  7. china Power Cuts: What is Causing Country's Blackouts?

November 5, 2021

ದೀಪಾವಳಿ ಹೊತ್ತು ಮಾತ್ರ ಪರಿಸರ ಕಾಳಜಿ ಯಾಕೆ...?

ಕೆಲವರಿಗೆ ಹಿಂದೂ ಹಬ್ಬಗಳು ಬಂದರೆ ಯಾವತ್ತೂ ಇಲ್ಲದ ಸಾಮಾಜಿಕ ಕಾಳಜಿ, ಪರಿಸರ ಕಾಳಜಿ ಬರುತ್ತದೆ. ಅದರಲ್ಲೂ ದೀಪಾವಳಿ ಹಬ್ಬ ಬಂತೆಂದರೆ 'ಪಟಾಕಿ ಹೊಡೆಯಬೇಡಿ, ಪರಿಸರ ಹಾಳು ಮಾಡಬೇಡಿ' ಎಂದೆಲ್ಲಾ ಉಪದೇಶ ಮಾಡಲು ಮುಂದಾಗುತ್ತಾರೆ. ಇತ್ತೀಚೆಗೆ ವಿರಾಟ್ ಕೋಹ್ಲಿ ನಮಗೆಲ್ಲಾ ಉಪದೇಶ ಮಾಡಲು ಮುಂದಾದನ್ನು ನಾವು ಗಮನಿಸಬಹುದು. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಹೊಸವರ್ಷ ಅಥವಾ ಜಾಗತಿಕ ಮಟ್ಟದಲ್ಲಿ ನಡೆಯುವ ಇವೆಂಟ್ಗಳಾದ ಒಲಂಪಿಕ್ಸ್, ಫ಼ೂಟ್ಬಾಲ್ ಅಥವಾ ಕ್ರಿಕೇಟ್ ವಿಶ್ವಕಪ್ ನಡೆಯುವ ಸಂದರ್ಭಗಳಲ್ಲಿ ಲೆಕ್ಕವಿಲ್ಲದಷ್ಟು ಪಟಾಕಿ ಹೊಡೆಯುತ್ತಾರೆ ಆಗ ಮಾತ್ರ ಇದೇ ಗಣ್ಯರು ಮಾತಾಡುವುದಿಲ್ಲ. ಇವರದ್ದೆಲ್ಲಾ ಬರೀ ಬೂಟಾಟಿಕೆ, ಹಿಂದೂ ಧರ್ಮದ ವಿರುದ್ಧ ಯಾರೇನೇ ಮಾತಾಡಿದರು ದಕ್ಕಿಸಕೊಳ್ಳಬಹುದು ಎಂಬ ದಾರ್ಷ್ಟ್ಯ. ಇರಲಿ ಬಿಡಿ ವಿಚಾರ ಅದಲ್ಲ, ನಮ್ಮ ಪರಿಸರ ಹಾಳಾಗುತ್ತಿರುವುದಕ್ಕೆ ನೈಜ ಕಾರಣಗಳನ್ನು ನಾವು ವಿಷ್ಲೇಶಿಸಬೇಕಿದೆ.

ನಮ್ಮ ಭೂಮಿಯನ್ನು ಆ ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತಿರುವುದು ಓಝೋನ್ ಪರದೆ. ಇದು ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಪರದೆ. ಸೂರ್ಯನ ಅಪಾಯಕಾರಿ ಅತೀನೇರಳೆ ಕಿರಣಗಳನ್ನು ಹೀರಿಕೊಂಡು, ಅದು ಮುಂದುವರೆಯದಂತೆ ಭೂಮಿಯನ್ನು ರಕ್ಷಿಸುತ್ತದೆ. ಈ ಪರದೆಯ ಕಾರಣ ನಾವು ಅನೇಕ ಭೀಕರ ರೋಗಗಳಿಂದ ಪಾರಾಗಿದ್ದೇವೆ. ಆದರೆ, ಜಗತ್ತು ಆಧುನೀಕರಣವಾಗಿ ಕೈಗಾರಿಕಾ ಕ್ರಾಂತಿಯಾದವು, ಅನೇಕ ಕಾರ್ಖಾನೆಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ನಮ್ಮ ಪರಿಸರ ಮಲಿನವಾಗತೊಡಗಿತು. ಕ್ಲೋರೋಫ಼್ಲೋರೊ ಕಾರ್ಬನ್ (CFC) ಎಂಬ ರಾಸಾಯನಿಕ ಈ ಓಝೋನ್ ಪರದೆಯನ್ನು ಬಹುವಾಗಿ ನಾಶ ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಈ ರಾಸಾಯನಿಕ ಅನಿಲ ಓಝೋನ್ ಪರದೆಯನ್ನು ನಾಶಮಾಡಲು ತಂಪು ವಾತಾವರಣದ ಅವಶ್ಯಕತೆ ಇದೆ. ಅಂತಹ ವಾತಾವರಣವಿರುವುದು ದಕ್ಷಿಣ ಧ್ರುವದಲ್ಲಿ. ಜಗತ್ತಿನ ಎಲ್ಲಾ ಮೂಲೆಗಳಿಂದ ಹರಿದುಬರುವ ಮಾಲಿನ್ಯಕಾರಕ ಅನಿಲಗಳು ದಕ್ಷಿಣ ಧ್ರುವದಲ್ಲಿ ಓಝೋನ್ ಪರದೆಯನ್ನು ನಾಶಮಾಡಲು ಶುರುಮಾಡಿತು. ಕ್ಲೋರೋಫ಼್ಲೋರೋ ಕಾರ್ಬನ್ ಹೆಚ್ಚಲು ಮೂಲಕಾರಣವೇ ಕೈಗಾರಿಕಾ ಕ್ರಾಂತಿ. ನಮ್ಮ ಅನುಕೂಲಕ್ಕೆ ತಕ್ಕಂತೆ ಏ.ಸಿ, ರೆಫ಼್ರಿಜಿರೇಟರ್ಗಳಂತಹ ಸೌಲಭ್ಯಗಳು ಹೆಚ್ಚಿತು. ಓಝೋನ್ ರಂಧ್ರ ಎಂದರೆ ಅದು ಅಕ್ಷರಶಃ ರಂಧ್ರವಲ್ಲ. ಪದರದ ಒಂದು ಭಾಗ ತೆಳುವಾಗಿದೆ ಎಂದರ್ಥ. ಇದು 1985 ರಲ್ಲಿ ದಕ್ಷಿಣಧ್ರುವದಲ್ಲಿ ಕಂಡುಬಂತು. ಮಾನವ ನಿರ್ಮಿತ ಈ ಅನಾಹುತವನ್ನು ತಡೆಗಟ್ಟಲು ಜಾಗತಿಕ ಮಟ್ಟದಲ್ಲಿ 1987 ರಲ್ಲಿ ಮಾಂಟ್ರಿಯಾಲ್ ಒಪ್ಪಂದವನ್ನು ಜಾರಿಗೆ ತರುತ್ತಾರೆ. ಈ ಒಪ್ಪಂದದ ಪ್ರಕಾರ ಓಝೋನ್ ಗೆ ಹಾನಿಮಾಡುವ ಸಿ,ಎಫ಼್.ಸಿ.ಯಂತಹ ಅನಿಲಗಳನ್ನು ಹೊರಸೂಸುವ ಉಪಕರಣಗಳನ್ನು ತಯಾರು ಮಾಡದಂತೆ ಉದ್ಯಮಗಳಿಗೆ ತಾಕೀತು ಮಾಡಿತು. ಇದರ ಪ್ರಕಾರ ಏ.ಸಿ., ಫ಼್ರಿಡ್ಜ್ ತಯಾರಿಕೆ ನಿಲ್ಲಿಸಬೇಕಿತ್ತು. ಆದರೆ, ಮಾನವ ಅನುಕೂಲ ಸಿಂಧುವಾಗಿಬಿಟ್ಟಿದ್ದ. ಸಿ.ಎಫ಼್.ಸಿ ರಹಿತ ಉಪಕರಣಗಳನ್ನು ತಯಾರು ಮಾಡಲು ಮುಂದಾದ. ಈ ಒಪ್ಪಂದದ ಮಹತ್ವವನ್ನು ಸಾರುತ್ತಾ ಪ್ರತಿವರ್ಷ ಸೆಪ್ಟಂಬರ್ 16 ಓಝೋನ್ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಒಳ್ಳೆಯ ಸಂಗತಿ ಎಂದರೆ ಪ್ರಸಕ್ತ ಸನ್ನಿವೇಶದಲ್ಲಿ ಓಝೋನನ್ನು ಹಾಳುಮಾಡುವ ಅನಿಲಗಳನ್ನು ಬಿಡುಗಡೆ ಮಾಡದ ವಿದ್ಯುತ್ ಉಪಕರಣಗಳನ್ನು, ಯಂತ್ರಗಳು ತಾಯಾರಾಗಿವೆ ಮತ್ತು ಬಳಕೆಯಲ್ಲಿವೆ. ವೈಜ್ಞಾನಿಕ ಸಮೀಕ್ಷೆಗಳ ಪ್ರಕಾರ ಈಗಿರುವ ವಾತಾವರಣದ ಗುಣಮಟ್ಟ ಮುಂದುವರೆದರೆ 2060 ವೇಳೆಗೆ ಓಝೋನ್ ರಂಧ್ರ ಕಾಣೆಯಾಗುತ್ತದೆ ಮತ್ತು ಪರದೆ ಅದರ ಹಿಂದಿನ ಅರೋಗ್ಯವಾದಂತಹ ಸ್ಥಿತಿ ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಓಝೋನ್ ಪದರಗಳನ್ನು ಸರಿಪಡಿಸುವ ಅಥವಾ ತೆಳ್ಳಗಾಗಿಸುವ ಯಾವುದೇ ಪ್ರಕ್ರಿಯೆ ಸಹ ತಲೆಮಾರುಗಳ ಸಮಯವನ್ನು ಬೇಡುತ್ತದೆ ಎಂಬ ಎಚ್ಚರ ನಮಗೆ ಮೂಡಬೇಕಿದೆ. ಓಝೋನ್ ತೆಳುವಾದರೆ ಮುಂದಿನ ತಲೆಮಾರುಗಳ ಭವಿಷ್ಯವೂ ತೆಳುವಾದಂತೆಯೇ.

Satellite monitoring revealing that the area of ozone depletion at south pole

ಕಳೆದ ವಾರ ಗ್ಲಾಸ್ಗೋವ್ ನಲ್ಲಿ ನಡೆದ ಜಿ20 ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹವಾಮಾನ ವೈಪರಿತ್ಯವನ್ನು ತಡೆಗಟ್ಟುವಲ್ಲಿ ನಮ್ಮ ದೇಶದ ದೃಷ್ಟಿಕೋನ ಮತ್ತು ಹೆಜ್ಜೆಗಳ ಕುರಿತು ಜಗತ್ತನ್ನು ಉದ್ದೇಶಿಸಿ ಮಾತಾಡಿದರು. ನಮ್ಮ ಎಲ್ಲಾ ಯೋಜನೆಗಳು ಕೂಡ ಪ್ರಪಂಚಕ್ಕೆ ಒಳಿತು ಮಾಡುವ ಯೋಜನೆಗಳೇ ಆಗಿವೆ ಮತ್ತು 2070 ರ ವೇಳೆಗೆ ಕಾರ್ಬನ್ ಹೊರಸೂಸುವ ಪ್ರಮಾಣವನ್ನು ಶೂನ್ಯಕ್ಕೆ ತರುವುದು ನಮ್ಮ ಗುರಿಯಾದೆ ಎಂದರು. ಇದು ಸೇರಿದಂತೆ ಇತರ ಬೇರೆ ಬೇರೆ ವಿಚಾರವನ್ನು ಹಂಚಿಕೊಂಡರು. ಭಾರತೀಯ ಜೀವನಶೈಲಿ ಮತ್ತು ಸಂಸ್ಕೃತಿ ಪರಿಸರದಿಂದ ಪ್ರೇರೇಪಿತವಾಗಿದೆ. ಜಗತ್ತು ಭಾರತೀಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳನ್ನು ಉದ್ದೇಶಿಸಿತ್ತಾ ಭಾರತ ತನ್ನ ಗುರಿ ಹಾಕಿಕೊಂಡಂತೆ ಜಗತ್ತಿನ ದೊಡ್ಡ ರಾಷ್ಟ್ರಗಳೂ ಕೂಡ ಪರಿಸರ ಕಾಳಜಿ ಮತ್ತು ತಂತ್ರಜ್ಞಾನ ವರ್ಗಾವಣೆಯ ಕುರಿತು ಸ್ಪಷ್ಟ ಗುರಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಭಾರತ 2030 ರ ವೇಳೆಗೆ ಫ಼ಾಸಿಲ್ ಫ಼್ಯೂಲ್ ರಹಿತ ಇಂಧನದ ಮೂಲಗಳಿಂದ 500 ಗಿಗಾವ್ಯಾಟ್ ಶಕ್ತಿ ಉತ್ಪಾದಿಸುವ ಗುರಿ ಹೊಂದಿದೆ, ಅದೇ ವೇಳೆಗೆ ಭಾರತವು ತನ್ನ ಅಗತ್ಯತೆಯ 50% ಶಕ್ತಿಯನ್ನು ನವೀಕರಿಸಹುದಾದ ವಸ್ತುಗಳಿಂದ ಪೂರೈಕೆ ಮಾಡಿಕೊಳ್ಳುತ್ತದೆ. ಈ ಗುರಿಯನ್ನು ತಲುಪಲು 2030 ಹೊತ್ತಿಗೆ 1 ಬಿಲಿಯನ್ ಟನ್ ಅಷ್ಟು, ಕಾರ್ಬನನ್ನು ಹೊರಸೂಸುವುದನ್ನು ಮತ್ತು ಇಂಗಾಲದ ಮೇಲೆ ಹೂಡುವ ಹಣವನ್ನು 45% ಭಾರತ ಕಮ್ಮಿ ಮಾಡುತ್ತದೆ ಎಂದು ಘೋಷಿಸಿದರು. ಇದೇ ವೇಳೆಗೆ ರೈಲ್ವೇ ಇಲಾಖೆ 40 ಬಿಲಿಯನ್ ಟನ್ ಅಷ್ಟು ಕಾರ್ಬನನ್ನು ಹೊರಸೂಸುವುದನ್ನು ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿದೆ. ಚೀನಾ ಮತ್ತು ಇತರ ದೇಶಗಳನ್ನು ಕುರಿತು 'ಭಾರತ ಜಗತ್ತಿನ 17% ರಷ್ಟು ಹೊಂದಿದ್ದರೂ ಇಂಧನ ಹೊರಸೂಸುತ್ತಿರುವುದು 5% ರಷ್ಟು ಮಾತ್ರ' ಎಂದು ಪರೋಕ್ಷವಾಗಿ ಎಚ್ಚರಿಸುತ್ತಾರೆ. ಜಗತ್ತಿಗೆ ಮಾದರಿಯಾಗಿ, ಗುರುವಾಗಿ ಮಾರ್ಗದರ್ಶನ ಮಾಡುವ ಮಟ್ಟಕ್ಕೆ ಭಾರತ ಬೆಳೆದಿರುವುದನ್ನು ನಾವಿಂದು ಗಮನಿಸಬಹುದು. ಜಗತ್ತಿನ ಅನೇಕ ದೇಶಗಳು ಪ್ಲಾಸ್ಟಿಕನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿ ಸಾಗರವನ್ನು ಕಲುಷಿತಗೊಳಿಸುತ್ತಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ ಅಮೇರಿಕಾ, ಜರ್ಮನಿ, ಬ್ರಜಿಲ್, ಜಪಾನ್ ಕ್ರಮವಾಗಿ ಮುಂದಿನ ಐದು ಸ್ಥಾನದಲ್ಲಿದೆ ಪಾಕೀಸ್ತಾನ ಮತ್ತು ರಷ್ಯಾ ಕೂಡ ಮೊದಲ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಓಝೋನ್ ಪರದೆ ತೆಳುವಾಗಲು ಅತ್ಯಂತ ಹೆಚ್ಚು ಕೊಡುಗೆ ನೀಡುತ್ತಿರುವ ರಾಷ್ಟ್ರ ಯಾವುದು ಗೊತ್ತೇ? ಚೀನಾ. ಆದರೆ, ಚೀನಾ ಮಾತ್ರ ಹವಾಮಾನ ವೈಪರಿತ್ಯಕ್ಕೆ ತಾನು ಕಾರಣವಲ್ಲ, ತಾನು ಆಧುನಿಕತೆಗೆ ತೆರೆದುಕೊಳ್ಳುವ ಮುನ್ನ ಈ ಸಮಸ್ಯೆಯಿತ್ತು ಎಂಬತಹ ಬೇಜವಾಬ್ದಾರಿ ಮಾತುಗಳನ್ನು ಆಡಿದೆ. ಜಗತ್ತಿಗೆ ಒಳಿತು ಮಾಡುವ ಯೋಗ್ಯತೆ ಇಲ್ಲದಿದ್ದರೂ ಈ ರೀತಿಯ ಮಾತಾಡುವುದರಲ್ಲಿ ಎತ್ತಿದ ಕೈ ಚೀನಾ.

Top most countries contributing with plastic pollution

chinese media stating that it is not responsible for Climatic Issues

ಪರಿಸರ ಮಾಲಿನ್ಯ ಮತ್ತು ಅದರ ಸಂರಕ್ಷಣೆ ಎಂದರೆ ಬಹಳ ಸೂಕ್ಷ್ಮವಾದ ವಿಚಾರ. ಜಾಗತಿಕ ಮಟ್ಟದಲ್ಲಿ ಇದರ ಕುರಿತು ಬಹಳಷ್ಟು ಚರ್ಚೆ ಮತ್ತು ತಕ್ಕ ಕ್ರಮಗಳು ಆಗುತ್ತಿರುವುದು ಒಳ್ಳೆಯ ಸಂಗತಿ. ಭಾರತ ಜಾಕತಿಕವಾಗಿ ಈ ವಿಚಾರದಲ್ಲೂ ಮುಂದಾಳತ್ವ ವಹಿಸುವುದು ಒಳಿತು. ಕರೋನಾದ ಕಾರಣ 2 ವರ್ಷದಿಂದ ಸ್ಥಗಿತಗೊಂಡಿದ್ದ ಪಟಾಕಿ ಉದ್ಯಮ ಈಗ ಮತ್ತೆ ಗರಿಗೆದರಿದೆ. ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಭಾರತದಲ್ಲಿ ಆದ ವಹಿವಾಟು 1.25 ಲಕ್ಷ ಕೋಟಿ! ವ್ಯಾಪಾರಿಗಳ ಮನೆಯವರಿಗೆ ಇದು ನಿಜಕ್ಕೂ ದೀಪಾವಳಿಯೇ ಸರಿ. ಎಲ್ಲಾ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ. ಹಾಗೆ ಜಾಗತಿಕ ಮಟ್ಟದಲ್ಲಿ ಪರಿಸರ ಕುರಿತು ಚರ್ಚೆ ನಡೆಯಬೇಕಾದರೆ ಕೆಲವು ಮಂದಿ ದೀಪಾವಳಿ ಹಬ್ಬದ ದಿನಗಳಂದು ಮಾತ್ರ ಪರಿಸರ ಮಲಿನವಾಗುತ್ತದೆ ಎನ್ನುವ ರೀತಿ ಮಾತಾಡುತ್ತಿದ್ದಾರೆ. ನಮ್ಮ ಪ್ರಧಾನಿ 50 ವರ್ಷಗಳಷ್ಟು ಮುಂದಿನ ಯೋಜನೆ ಮಾಡುತ್ತಿದ್ದರೆ ಇಲ್ಲಿನ ಕೆಲವು ನಾಯಕರು ಅನ್ನಿಸಿಕೊಂಡವರು 2024 ರ ಚುಣಾವಣೆ ಎದುರಿಸುವ ಬಗ್ಗೆ ಚಿಂತಿಸುತ್ತಿದ್ದಾರೆ! ನಾಯಕರು ಧೀರ್ಘವಾದದ್ದನ್ನು ಯೋಚಿಸಬೇಕು. ಹಿಂದೂ ಧರ್ಮವನ್ನು ತೆಗಳುವುದು, ಕೆಲವು ಸಾಮಾಜಿಕ ಸಂಘ ಸಂಸ್ಥೆಗಳ ಸೆಲೆಕ್ಟೀವ್ ಕಾಳಜಿ ನಿಲ್ಲಬೇಕು. ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಮ್ಮದಾಗಬೇಕು.

CAIT statement on business during Deepavali across India