December 5, 2022

ಕರ್ಮ ಸಿದ್ಧಾಂತ ನಂಬದಿದ್ದರೂ ಕರ್ಮ ಹಿಂದಿರಿಗಿಸುತ್ತದೆ!

ಪುನರ್ಜನ್ಮ ಹಾಗೂ ಕರ್ಮ ಸಿದ್ಧಾಂತ ನಂಬುವಂತಹ ಒಂದು ಧರ್ಮ ಅಂದರೆ ಹಿಂದೂ ಧರ್ಮ ಮಾತ್ರ. ಇತರ ಸೆಮೆಟಿಕ್ ರಿಲಿಜನ್ ಗಳ ಅನುಯಾಯಿಗಳು, ಕಮ್ಯುನಿಸ್ಟರು ಈ ರೀತಿಯ ಒಳ್ಳೆಯ ಕಲ್ಪನೆ ಇಟ್ಟುಕೊಂಡೇ ಇಲ್ಲ. ನಾವು ಮಾಡಿದ ಒಳಿತಾಗಲಿ, ಕೇಡಾಗಲಿ ನಮಗೆ ಒಂದಲ್ಲ ಒಂದು ದಿವಸ ಅಥವಾ ಮತ್ತೊಂದು ಜನ್ಮದಲ್ಲಾದರೂ ನಮಗೆ ಹಿಂದಿರುಗುತ್ತದೆ ಎಂಬುದು ಸತ್ಯ. ಮಹಾಭಾರತದಲ್ಲಿ ನಾವೆಲ್ಲಾ ಭೀಷ್ಮರ ಕಥೆಯನ್ನು ಕೇಳಿದ್ದೇವೆ. ವಸಿಷ್ಠರ ಬಳಿಯಿದ್ದ ಹಸುವನ್ನು ಕರೆದುಕೊಂಡು ಹೋಗಬೇಕಾದಾಗ ದ್ಯೂ ಎಂಬ ವಟು ಮುಳ್ಳಿನ ದೊಣ್ಣೆಯಿಂದ ಒಂದು ಏಟು ಹೊಡೆಯುತ್ತಾನೆ. ಇದರ ಕಾರಣದಿಂದಾಗಿಯೇ ಮುಂದಿನ ಜನ್ಮದಲ್ಲಿ ಗಂಗಾಪುತ್ರನಾಗಿ ಜನಿಸಿದ ಭೀಷ್ಮರ ಅಂತ್ಯ ಶರಶಯ್ಯೆ ಮೇಲೆ ಆಯಿತು. ದ್ಯೂ ಹೊಡೆದದ್ದು ಒಂದು ಏಟು ಆದರೆ, ಭೀಷ್ಮಾಚಾರ್ಯರಿಗೆ ಚುಚ್ಚಿದ್ದು ನೂರಾರು ಬಾಣಗಳು! 

ಬಾಲವುಡ್ ನಟ ಆಮಿರ್ ಖಾನನ ಸ್ಥಿತಿಯನ್ನು ನೋಡಿ. ಪ್ರಧಾನಿ ಮೋದಿಯವರನ್ನು ರಾಜಕೀಯದ ಕಾರಣಕ್ಕಾಗಿ ಟೀಕೆ ಮಾಡುವ ಭರದಲ್ಲಿ ಭಾರತದಲ್ಲಿ ಅಸಹಿಷ್ಟುತೆ ಇದೆ, ಇಲ್ಲಿರಲು ನನ್ನ ಹೆಂಡತಿಗೆ ಭಯವಾಗುತ್ತದೆ ಎಂದಿದ್ದ. ಮುಂಬೈನಲ್ಲಿ ಸರಣಿ ಬಾಂಬ್ ಸ್ಪೋಟ, ರೈಲು ಸ್ಪೋಟಗಳು, ತಾಜ್ ಹೋಟೆಲ್ ಮೇಲಿನ ದಾಳಿ ನಡೆದಾಗ ಆಗದಿದ್ದ ಭಯ ಆತನಿಗೆ 2016ರಲ್ಲಿ ಆಗಿತ್ತು. 2022ರಲ್ಲಿ ಅಂದರೆ, ಆರು ವರ್ಷವಾದರೂ ಜನ ಮರೆಯಲಿಲ್ಲ, ಆತನ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಅನ್ನು ಜನರು ಸರಾಸಗಟಾಗಿ ತಿರಸ್ಕರಿಸಿದರು. 'ನನಗೆ ನಟನೆಯಿಂದ ಕೆಲವು ದಿನಗಳ ಕಾಲ ಬಿಡುವು ಬೇಕು' ಎಂದು ಈಗ ಆತ ಮನೆ ಸೇರಿದ್ದಾನೆ.

ಕಳೆದ ವಾರ ಗೋವಾದಲ್ಲಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟ್ ಆಫ್ ಇಂಡಿಯಾ ಅನ್ನುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯಸ್ಥ ಇಸ್ರೇಲಿನ ನಾದವ್ ಲ್ಯಾಪಿಡ್ ಅನ್ನುವ ಎಡಪಂಥಿಯ ಭಾರತದಾದ್ಯಂತ ಸಂಚಲನ ಮೂಡಿಸಿದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಅಸಭ್ಯ ಎಂದು ತನ್ನ ಹೊಲಸು ಮನಸ್ಥಿತಿಯ ಮಾತುಗಳನ್ನು ಅಡಿದ. ಇಸ್ರೇಲಿನಲ್ಲಿ ಯಹೂದಿಗಳ ಮೇಲೆ ನಡೆದ ನರಮೇಧಕ್ಕೆ ಸಮನಾದದ್ದು ಕಾಶ್ಮೀರಿ ಪಂಡಿತರ ಮೇಲೆ ನಡೆದ ನರಮೇಧದ ಭೀಕರತೆ! ಅದನ್ನು ನೋಡಿ ಭಾರತದಲ್ಲಿ ಪ್ರಕಾಶ್ ರಾಜ್ ಅಂತಹವರು, ತಲೆಕೆಟ್ಟ ಎಡಚರರು ಟ್ವಿಟ್ಟರ್ ನಲ್ಲಿ ಜಗತ್ತನ್ನೇ ಗೆದ್ದವರಂತೆ ಸಂಭ್ರಮಿಸಿದರು. 'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದರೆ ಅದು ಮೂಸುವುದು ಹೇಸಿಗೆಯನ್ನೇ' ಅನ್ನುವುದು ಇಂತಹವರನ್ನು ನೋಡಿಯೇ! ಲ್ಯಾಪಿಡ್ ನ ಹೊಲಸು ಮಾತಿಗಾಗಿ ಸಮಾಜ ಖಾರವಾಗಿ ಪ್ರತಿಕ್ರಯಿಸಿತು. ಇಸ್ರೇಲಿನ ರಾಯಭಾರಿ ನಾಓರ್ ಗಿಲೋನ್ ಭಾರತದ ಕ್ಷಮೆ ಕೇಳುತ್ತಾ ಲ್ಯಾಪಿಡ್ ಗೆ 'ನಾಚಿಕೆಯಾಗಬೇಕು' ಎಂದು ಸಭ್ಯವಾಗಿಯೇ ಛೀಮಾರಿ ಹಾಕಿದ್ದಾರೆ! ರೇಷ್ಮೆ ಬಟ್ಟೆಯನ್ನು ಸುತ್ತಿ ಚಪ್ಪಲಿಯಲ್ಲಿ ಹೊಡೆಸಿಕೊಂಡ ಸ್ಥಿತಿ ಲ್ಯಾಪಿಡ್ ನದು. ಭಾರತದ ವಿರುದ್ಧ ಮಾತಾಡಿದರೆ ತಕ್ಕ ಶಾಸ್ತಿಯಾಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು!

Nadav Lapid has apologized for his remark on The Kashmir Files.

ಈಗ ಕಮ್ಯೂನಿಸಂ ಅನ್ನೇ ಉಸಿರಾಡುತ್ತಿರುವ ಚೀನಾ ಕಡೆ ನೋಡೋಣ. ಜಗತ್ತಿನ ಅರ್ಥಿಕತೆ ತನ್ನ ಹಿಡಿತದಲ್ಲಿ ಇರಬೇಕು ಎಂದು ಅನೇಕ ರಾಷ್ಟ್ರಗಳಿಗೆ ಹೆಚ್ಚು ಬಡ್ಡಿಗೆ ಸಾಲವನ್ನು ಕೊಟ್ಟಿತು, ಪತ್ರಿಕೆಗಳು ತನ್ನ ಪರವಾಗಿ ಇರುವಂತೆ ನೋಡಿಕೊಂಡಿತು, ವಿಶ್ವವಿದ್ಯಾಲಯಗಳಲ್ಲಿ ಚೀನಾ ಪರವಾದ ವಿಚಾರ ಬೋಧನೆಯಾಗುವಂತೆ ನೋಡಿಕೊಂಡಿದೆ. ಪಶ್ಚಿಮ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ದಿಸಿಕೊಳ್ಳುವ ಇರಾದೆಯಿಂದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಪ್ರಾರಂಭಿಸಿತು. ಅಹಂಕಾರ ಹಾಗೂ ಕೊಬ್ಬಿನಿಂದ ಮೆರೆಯುತ್ತಿದ್ದ ಚೀನಾಕ್ಕೆ ಶನಿ ತಾನೇ ಹುಟ್ಟು ಹಾಕಿದ ಕರೋನಾ ರೂಪದಲ್ಲಿ ವಕ್ಕರಿಸಿತು. ಈ ರೋಗದ ಕಾರಣ ಚೀನಾ ಜಗತ್ತು ತನ್ನ ಮೇಲಿಟ್ಟಿದ್ದ ಅಲ್ಪ ಸ್ವಲ್ಪ ವಿಶ್ವಾಸ, ನಂಬಿಕೆಯನ್ನೂ ಕಳೆದುಕೊಂಡಿತು. ಲಸಿಕೆಯ ಕಾರಣಕ್ಕೋ, ಎಲ್ಲರಿಗೂ ರೋಗವನ್ನು ಸಹಿಸಿಕೊಳ್ಳುವ ಶಕ್ತಿ ಬಂದಿರುವ ಕಾರಣಕ್ಕೋ ಪ್ರಪಂಚದಾದ್ಯಂತ ಎಲ್ಲಿಯೂ ಸಹ ಕರೋನಾದ ಬಗ್ಗೆ ಮಾತೇ ಇಲ್ಲ. ಜಗತ್ತಿನ ವ್ಯಾಪಾರ ವಹಿವಾಟು, ಟೂರು, ಪ್ರಯಾಣ, ಸಭೆ ಸಮಾರಂಭ, ಕ್ರೀಡಾಕೂಟಗಳು ಮೊದಲಿನಂತೆ ನಡೆಯಲು ಪ್ರಾರಂಭವಾಗಿದೆ. ಆದರೆ, ಚೀನಾದಲ್ಲಿ ಮಾತ್ರ ಕರೋನಾ ಹಾಗೂ ಅರ್ಥಿಕತೆಯ ಕಾರಣ ಏನೂ ಸರಿ ಇಲ್ಲದ ಪರಿಸ್ಥಿತಿ ಉಂಟಾಗಿದೆ.

ದೇಶವನ್ನು ಕರೋನಾ ಮುಕ್ತ ಮಾಡಬೇಕೆಂದು ಚೀನಾದ ಅಧ್ಯಕ್ಷ ಝೀರೋ ಕೋವಿಡ್ ಪಾಲಿಸಿ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ. ಕರೋನಾ ರೋಗಿಗಳನ್ನು ಮನೆಯಲ್ಲೇ ಬಂಧನದಲ್ಲಿಟ್ಟ. ಜಗತ್ತೆಲ್ಲಾ ಮುಕ್ತವಾಗಿರಬೇಕಾದರೆ ತಾವೊಬ್ಬರು ಮಾತ್ರ ಬಂಧನದಲ್ಲಿರುವುದನ್ನು ಯಾರು ತಾನೇ ಸಹಿಸುತ್ತಾರೆ? ಚೀನೀ ನಾಗರೀಕ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾನೆ. ಶಾಂಘೈ, ಬೀಜಿಂಗ್ ಸೇರಿದಂತೆ ಚೆಂಗ್ ಡು, ಲಾನ್ ಜೌ, ವೈರಸ್ ನಗರ ವೂಹಾನ್ ನಲ್ಲೂ ಸಹ ಅನೇಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. 'ನಮಗೆ ಮಾಸ್ಕ್ ಬೇಡ, ಕೋವಿಡ್ ಪರೀಕ್ಷೆ ಬೇಡ, ಸ್ವಾತಂತ್ರ್ಯ ಬೇಕು' ಎಂಬ ಕೂಗು ವ್ಯಾಪಕವಾಗುತ್ತಿದೆ. ಕಳೆದ ಗುರುವಾರ ಅಪಾರ್ಟ್ಮೆಂಟ್ ಗೆ ಬೆಂಕಿ ಬೀಳಲು ಲಾಕ್ಡೌನ್ ಕಾರಣ ಎಂಬ ಸುದ್ಧಿ ಈಗ ಹೊರ ಬರುತ್ತಿದೆ. ಭಾನುವಾರದ ಹೊತ್ತಿಗೆ ನೆರೆದಿದ್ದ ಜನ ಖಾಲಿ ಹಾಳೆ ಹಿಡಿದು ಪ್ರತಿಭಟನೆಗೆ ಮುಂದಾದರು. 'ನಮಗೆ ಜೀವಮಾನದ ಆಡಳಿತಗಾರರು ಬೇಡ, ಸರ್ವಾಧಿಕಾರಿಗಳು, ರಾಜರು ಬೇಡ' ಎಂಬ ಘೋಷಣೆಗಳು ಎಲ್ಲೆಡೆ ಹರಡುತ್ತಿದೆ. ಉಯ್ಘುರ್ ಮುಸಲ್ಮಾನರನ್ನು ಚೀನಾ ನಡೆಸಿಕೊಳ್ಳುತ್ತಿರುವ ಬಗೆಗೆ ವಿಶ್ವಸಂಸ್ಥೆ ಹಾಗೂ ಅಮೇರಿಕಾ ಗಂಭೀರವಾದ ಆಕ್ಷೇಪ ವ್ಯಕ್ತಪಡಿಸಿದೆ.

china's Mismanaged Zero Covid Policy Endangers Tibetan Lives 

ಚೀನಾದ ಆರ್ಥಿಕ ಪರಿಸ್ಥಿತಿಯೂ ಸಹ ಅಷ್ಟೇನು ಸರಿ ಇಲ್ಲ. ಕಳೆದ ವರ್ಷದ ಅನುಸಾರ ಚೀನಾದ ದೊಡ್ದ ರಿಯಲ್ ಎಸ್ಟೇಟ್ ಕಂಪನಿಯಾದ ಎವರ್ಗ್ರಂಡ್ ಮೇಲಿರುವ ಸಾಲ ಮುನ್ನೂರು ಬಿಲಿಯನ್ ಡಾಲರ್! ಈ ಕಂಪನಿ ದಿವಾಳಿ ಎಂದು ಘೋಷಿಸಿಕೊಂಡ ನಂತರ ಚೀನಾದ ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿದೆ. ಮೊದಲೆಲ್ಲಾ ಚೀನಾದ ಸುದ್ದಿ ಅತ್ಯಂತ ದುರ್ಲಭವಾಗಿತ್ತು. ಆದರೆ ಈಗ ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೀಡಿಯೊಗಳು ಸಹ ಹೊರಬರುತ್ತಿವೆ ಎಂಬುದು ಗಂಭೀರವಾಗಿ ಗಮನಿಸಬೇಕಾದ ಅಂಶ. ಇವೆಲ್ಲವೂ ಕ್ಸೀ ಜೀಪಿಂಗ್ ಚೀನಾ ಮೇಲಿನ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾನೆ ಎಂಬುದರ ಸೂಚನೆ!

ಭಾರತದ ಬಗ್ಗೆ ಏನಾದರೂ ಮಾತಾಡಿ ದಕ್ಕಿಸಿಕೊಳ್ಳಬಹುದು ಎಂದುಕೊಂಡವರಿಗೆ ಆಗಿಂದಾಗೆ ಅಥವಾ ಆರು ವರ್ಷಗಳ ನಂತರವಾದರೂ ಸೂಕ್ತ ಉತ್ತರ ಸಿಗುತ್ತದೆ. ಜೀವನ ಪರ್ಯಂತ ತಾನೇ ದೇಶದ ಸರ್ವಾಧಿಕಾರಿಯಾಗಿರಬಹುದು ಎಂದುಕೊಂಡವನ ಕುರ್ಚಿ ಈಗಲೇ ಅಲ್ಲಾಡತೊಡಗಿದೆ. ಜಗತ್ತನ್ನೇ ಆಡಿಸುತ್ತೇನೆ ಅನ್ನುತ್ತಿದ್ದ ಚೀನಾ ಈಗ ಆರ್ಥಿಕವಾಗಿ ಕುಸಿತ ಕಾಣುತ್ತಿದೆ. ಇದರ ಒಟ್ಟಾರೆ ಅರ್ಥವಿಷ್ಟೇ ನೀವು ನಂಬಿ ಅಥವಾ ಬಿಡಿ ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ತಕ್ಕುದಾದ ಪ್ರತಿಕ್ರಿಯೆ ಕರ್ಮ ಹಿಂದಿರಿಗಿಸುತ್ತದೆ, ಕಾಲದಲ್ಲಿ ವ್ಯತ್ಯಾಸವಾಗಬಹುದಷ್ಟೆ.

***********************************************************
References: