ಜಗತ್ತೆಲ್ಲಾ ಕೊರೋನಾದಿಂದ ಆಗಿರುವ ತೊಂದರೆಯನ್ನು ತಡೆದುಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯನ್ನು ನಾವಿಂದು ನೋಡುತ್ತಿದ್ದೇವೆ. ಆದರೆ, ಚೀನಾ ಕೊರೋನಾ ಕುರಿತ ಮಾಹಿತಿಯನ್ನು ತನ್ನಲ್ಲಿಯೇ ಮುಚ್ಚಿಟ್ಟುಕೊಂಡು ಪ್ರಪಂಚದ ಕೊಟ್ಯಾಂತರ ಜನರನ್ನು ಹೆದರಿಸಿ ದಾರಿ ತಪ್ಪಿಸುತ್ತಿದೆ. ಕೊರೋನಾ ಹಬ್ಬಲು ಶುರುವಾದ ಮೊದಲ 2 ವಾರಗಳಲ್ಲಿ ಚೀನಾ ಈ ವಿಚಾರವನ್ನು ತನ್ನ ದೇಶದ ಜನರಿಗೆ ಬಹಿರಂಗ ಪಡಿಸಿರಲಿಲ್ಲ. ಚೀನಾ, ತನ್ನ ದೇಶದಲ್ಲಾದ ಸಾವು ಮತ್ತು ಈ ವೈರಸ್ ನ ಕುರಿತ ಮಾಹಿತಿಯನ್ನು ತನ್ನಲ್ಲಿಯೆ ಇಟ್ಟುಕೊಂಡಿದೆ ಮತ್ತು ಇದರ ಕುರಿತು ತಪ್ಪು ಮಾಹಿತಿಯನ್ನು ಜಗತ್ತಿನಾದ್ಯಂತ ಹರಡಿಸುತ್ತಿದೆ ಎಂದು ಅಮೇರಿಕಾ ಆರೋಪಿಸುತ್ತದೆ.
ಅಮೇರಿಕಾದ ಎಂಟರ್ಪ್ರೈಸ್ ಇಸ್ಟಿಟ್ಯೂಟಿನ, ಡೆರೆಕ್ ಸಿಸ್ಸರ್ಸ್, ಚೀನಾದಲ್ಲಿ 2.9 ಮಿಲಿಯನ್ ಕೊರೋನಾ ಪ್ರಕರಣಗಳು ಇತ್ತು ಎಂದು ಅಂದಾಜಿಸುತ್ತಾರೆ. ಬೀಜಿಂಗ್ನ ಅಂಕಿ ಅಂಶಗಳ ಪ್ರಕಾರ ಕಳೆದ 2-3 ತಿಂಗಳುಗಳಲ್ಲಿ ಚೀನಾದಲ್ಲಿ 80 ಸಾವಿರಕ್ಕೂ ಅಧಿಕ ಮೊಬೈಲ್ ಸಿಮ್ ಕಾರ್ಡ್ಗಳು ನಿಶ್ರಿಯವಾಗಿವೆ. ಹೀಗಿದ್ದರೂ ಚೀನಾ, ತನ್ನ ಬಳಿ ಇರುವ ಖಚಿತ ಮಾಹಿತಿಯನ್ನು ಹೊರಹಾಕುತ್ತಿಲ್ಲ. ಎಪ್ರಿಲ್ 8 ರಂದು, 3 ತಿಂಗಳ ನಂತರ, ಸಾಮಾನ್ಯ ಜನಜೀವನಕ್ಕೆ ತೆರೆದುಕೊಂಡ ವೂಹಾನಲ್ಲಿ ಸುಮಾರು 4362 ಜನ ಸತ್ತಿರಬಹುದು ಎಂದು ಚೀನಾದ ಸರ್ಕಾರ ಪ್ರಕಟಣೆ ಹೊರಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಅಮೇರಿಕಾ ಹಾಗೂ ಇತರ ರಾಷ್ಟ್ರಗಳು ಕೊರೋನಾ ಕುರಿತಾದ ಉತ್ತಡ ತಂದ ನಂತರವಷ್ಟೇ ಈ ಸಂಖ್ಯೆ ಬಿಡುಗಡೆಯಾಗಿದೆ. ಈ ಸಂಖ್ಯೆ ಕೂಡ ಅನುಮಾನಾಸ್ಪದವಾಗಿದೆ. ಚೀನಾದಲ್ಲಿ ಸುಮಾರು 2.1 ಕೋಟಿ ಅಷ್ಟು ಕೊರೊನಾ ಸಾವು ಸಂಭವಿಸಿರಬಹುದು ಎಂದು ಅಮೇರಿಕಾದ ಗುಪ್ತಚರ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೌದು, ಈ ಅಂಕಿ ಅಂಶಗಳ ಕುರಿತ ಮಾಹಿತಿ ಜಗತ್ತಿಗೆ ನಿಜಕ್ಕೂ ಮುಖ್ಯ. ಚೀನಾದಲ್ಲಿ ಹರಡಿರುವ ಪ್ರಕರಣಗಳ ಸಂಖ್ಯೆ ಮತ್ತು ಅವರುಗಳ ಜಾಗವನ್ನು ತಿಳಿಯದೆ ಈ ರೋಗದ ಲಕ್ಷಣ ಮತ್ತು ಹರಡುವಿಕೆಯನ್ನು ಅಂದಾಜಿಸಲು ಬಹಳ ಕಷ್ಟ. ಇದರ ಕುರಿತು ಖಚಿತವಾದ ಮಾಹಿತಿ ಇಲ್ಲದೆ, ಲಾಕ್ಡೌನ್ ಅನ್ನು ಎಂದು ಸಡಿಲ ಮಾಡಿದರೆ ಸುರಕ್ಷಿತ ಎಂದು ಅಂದಾಜು ಮಾಡಲಾಗುವುದಿಲ್ಲ.  ಪ್ರಪಂಚದಲ್ಲಿ ಯಾರೂ ಕೂಡ ಮೊದಲ ಪ್ರಯತ್ನದಲ್ಲೇ ಸಫ಼ಲರಾಗುತ್ತಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಚೀನಾದಿಂದ ಈ ವೈರಸ್ನ ಕುರಿತು ನೈಜ ಅಂಕಿ ಅಂಶ ಹೊರಬಂದರೆ ಅನೇಕ ದೇಶಗಳು ಮುಂದೆ ಸಂಭವಿಸಬಹುದಾದ ತಪ್ಪುಗಳನ್ನು ತಡೆಯಬಹುದಾಗಿದೆ. ಮೊದಲ 2-3 ವಾರ ಕೊರೋನಾ ವಿಚಾರವನ್ನು ಮುಚ್ಚಿಟ್ಟುಕೊಂಡು ಚೀನಾ ದೊಡ್ಡ ಅಪರಾಧವನ್ನು ಮಾಡಿತು. ಅದರ ಪರಿಣಾಮವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಈಗಲೂ ಚೀನಾ, ತನ್ನ ಬಳಿ ಇರುವ ಮಾಹಿತಿಯನ್ನು ಮುಚ್ಚಿಟ್ಟು, ಜಗತ್ತು ಸುಧಾರಿಸಿಕೊಳ್ಳುವ ಪ್ರಕ್ರಿಯೆಯನ್ನು ತಡೆ ಹಿಡಿಯುತ್ತಿದೆ.
ಚೀನಾದ 'Communist Party of China' ತನ್ನದ್ದೇ ಜನರ ದಿಕ್ಕು ತಪ್ಪಿಸಲು ರಾಷ್ಟ್ರೀಯತೆಯ ಭಾವನೆಯನ್ನು ಮುಂದಿಟ್ಟುಕೊಂಡು ಈ ಮಹಾಮಾರಿಯ ಕುರಿತ ಮಾಹಿತಿಯನ್ನು ಮರೆಮಾಚುವುದು, ಇದರ ಕುರಿತ ಚರ್ಚೆ ಮಾಡದಂತೆ ಆಜ್ಞೆ ಹೊರಡಿಸುವ ತಂತ್ರವನ್ನು ಬಳಸುತ್ತಿದೆ. ಈ ಕ್ರಮಗಳಿಂದಾಗಿ ಚೀನಾದ ಆರ್ಥಿಕತೆ ಕುಸಿಯುವತ್ತ ಮುಖಮಾಡಿದೆ ಮತ್ತು ಜಗತ್ತಿನ ಎದುರು ತನ್ನ ಹೆಸರನ್ನು ಹಾಳು ಮಾಡಿಕೊಳ್ಳುತ್ತಿದೆ. ಜಗತ್ತಿನ ದೊಡ್ಡ ರಾಷ್ಟ್ರವಾಗಿ ಬೆಳೆದ ಚೀನಾ, ಈ ಕ್ರಮಗಳಿಂದಾಗಿ ತಮ್ಮ ವ್ಯಾವಹಾರಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾರೆ. ಕೊರೋನಾ, ಚೀನಾದಲ್ಲಿ ಹುಟ್ಟಿದ್ದು ಎಂಬ ಸತ್ಯವನ್ನು ಅವರು ಅಲ್ಲಗೆಳೆಯುವುದಕ್ಕೆ ಸಾಧ್ಯವಿಲ್ಲ. ಆದರೆ, ಈ ವೈರಸ್ನ ಕುರಿತು ನಿಖರವಾದ ಮಾಹಿತಿಯನು ಕೊಡದಿದ್ದಲ್ಲಿ ಜಗತ್ತಿನ ಹೂಡಿಕೆದಾರರು ಇವರನ್ನು ಹೇಗೆ ನಂಬುತ್ತಾರೆ ಎಂಬುದು ಪ್ರಶ್ನಾತೀತ.
ಕೆಲವು ದಶಕಗಳಿಂದಲೂ ಜಗತ್ತಿನಲ್ಲಿ 'China Products' ಎಂದರೆ "ಕಳಪೆ" ಎಂದು ಪ್ರಚಲಿತವಾಗಿದೆ. ಕೊರೋನಾ ಮಹಾಮಾರಿಯನ್ನು ನಾವು ಗೆದ್ದಿದ್ದೇವೆ ಎಂದು ಕೊಚ್ಚಿಕೊಳ್ಳುವ ಚೀನಾಕ್ಕೆ ಈ ಸಂದರ್ಭದಲ್ಲಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಒದಗಿತ್ತು. ಆದರೆ, ಚೀನಾ ತನ್ನ ಕುತಂತ್ರ ಮತ್ತು ಕಪಟ ಬುದ್ದಿಯನ್ನು ಇಲ್ಲೂ ತೋರ್ಪಡಿಸಿತು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಸ್ಪೈನ್, ಕೊರೋನಾ ಟೆಸ್ಟಿಂಗ್ ಕಿಟ್ಗಳನ್ನು ಚೀನಾದಿಂದ ಆಮದು ಮಾಡಿಕೊಂಡಿತ್ತು. ಆ ಕಿಟ್ಗಳು ಕೇವಲ 30% ರಷ್ಟು ಮಾತ್ರ ಕೊರೋನಾ ವೈರಸ್ಸನ್ನು ಕಂಡು ಹಿಡಿಯಲು ಶಕ್ಯ ಎಂದು ಮಾರ್ಚ್ 30ರ ಹೊತ್ತಿಗೆ ಅಲ್ಲಿನ ತಜ್ಞರು ಅದನ್ನು ತಿರಸ್ಕರಿಸುತ್ತಾರೆ. ಇದೇ ಸಮಯದಲ್ಲಿ ಕ್ರೆಝ್ ರಿಪಬ್ಲಿಕ್ ಕೂಡ ಚೀನಾದಿಂದ ಆಮದಾದ ಕಿಟ್ಗಳು ಶೇಕಡ ೮೦ರಷ್ಟು ಕಳಪೆ ಗುಣಮಟ್ಟದ್ದೆಂದು ತಿರಸ್ಕರಿಸುತ್ತದೆ. ನೆನಪಿರಲಿ, ಅಷ್ಟು ಹೊತ್ತಿಗಾಗಲೇ ಸ್ಪೈನಿನಲ್ಲಿ 80000ಕ್ಕೂ ಅಧಿಕ ಪ್ರಕರಣಗಳು ಮತ್ತು ೩೦೦೦ಕ್ಕೂ ಹೆಚ್ಚು ಸಾವು ದಾಖಲಾಗಿದ್ದವು.
ಅಷ್ಟರಲ್ಲಿ ಭಾರತವೂ ಸಹ ಸುಮಾರು 10000 ವಿಂಟಿಲೇಟರ್ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ಮುಂದಾಗಿತ್ತು. ಎಪ್ರಿಲ್ 5 ರಂದು ಚೀನಾದಿಂದ ಆಮದಾದ Personal Protection Equipment (PPE) ಅನ್ನು ಭಾರತ ಗ್ವಾಲಿಯರ್ ನ DRDO ಲ್ಯಾಬಿನಲ್ಲಿ ಪರೀಕ್ಷಿಸಿತು. ಶೇಖಡ 30 ರಷ್ಟು ಕಿಟ್ಗಳು ಕಳಪೆ ಗುಣಮಟ್ಟದ್ದು ಎಂದು ವರದಿ ಪ್ರಕಟಿಸಿ ಅದರ ಉಪಯೋಗವನ್ನು ತಿರಸ್ಕರಿಸಿತು. 15 ಎಪ್ರಿಲ್ ಸುದ್ದಿಯ ಪ್ರಕಾರ, ಸುಮಾರು 6.5 ಲಕ್ಷ ಟೆಸ್ಟ್ ಕಿಟ್ಗಳು ಚೀನಾದಿಂದ ಭಾರತಕ್ಕೆ ಬರಲು ತಯಾರಾಗಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ಅನುಮಾನವಾಗಿದೆ.  "ಚೀನಾ ತನ್ನ ಗೆಳೆಯ" ಎಂದು ಹೇಳಿಕೊಳ್ಳುವ ಪಾಕೀಸ್ತಾನಕ್ಕೂ ಸಹ ಚೀನಾ ಮೋಸ ಮಾಡಿದೆ. ಉತೃಷ್ಟ ಮಟ್ಟದ N-95 ಮಾಸ್ಕ್ಗಳನ್ನು ಕೊಡುವುದಾಗಿ ಹೇಳಿದ್ದ ಚೀನಾ, ಪಾಕೀಸ್ತಾನಕ್ಕೆ ಉಳಡುಪುಗಳಿಂದ ತಯಾರಿಸಿದ ಮಾಸ್ಕ್ಗಳನ್ನು ಕಳಿಸಿಕೊಟ್ಟಿದೆ. ಇದನ್ನು ಲಾಹೋರಿನ ಸ್ಥಳೀಯ ಸುದ್ದಿವಾಹಿನಿ ಬಿತ್ತರಿಸಿತು. ಇದು ಪಾಕಿಸ್ತಾನಕ್ಕೆ ಚೀನಾ ಮಾಡಿದ ಅವಮಾನವೋ ಅಥವಾ ಚೀನಾ ತನ್ನ ಕಾಲಿನ ಮೇಲೆ ತಾನೆ ಕೊಡಲಿ ಏಟು ಹಾಕಿಕೊಂಡಿತೋ ಎಂದು ಕಾಲವೇ ಉತ್ತರಿಸಬೇಕು. ನೇಪಾಳವೂ ಸಹ ಕೊರೋನಾ ಟೆಸ್ಟ್ ಕಿಟ್ ಮತ್ತು ವೆಂಟಿಲೇಟರ್ಗಾಗಿ ಚೀನಾದ ಖಾಸಗಿ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವೊಂದನ್ನು ಮುರಿದುಕೊಂಡಿದೆ.
ಕೊರೋನಾದ ಈ ಸಂಕಷ್ಟದ ದಿನಗಳ ನಡುವೆ ಚೀನಾ ತನ್ನ ವಿಸ್ತರಣಾ ಬುದ್ಧಿಯನ್ನು ತೋರ್ಪಡಿಸಿದೆ. ದಕ್ಷಿಣ ಚೀನಾ ಸಮುದ್ರದ ಹತ್ತಿರ ಚೀನಾದ ಹಡಗು ವಿಯಟ್ನಾಂ ಹಡಗಿಗೆ ಗುದ್ದಿ ಅದನ್ನು ಮುಳುಗಿಸಿದೆ. ಈ ಸುದ್ದಿಯನ್ನು ಚೀನಾದ ಪತ್ರಿಕೆಯಾದ 'South China Morning Post (SCMP)' ಎಪ್ರಿಲ್ 3 ರಂದು ಪ್ರಕಟಿಸಿತ್ತು. ಆ ಪ್ರದೇಶದಲ್ಲಿ ಚೀನಾ ತನ್ನ ಪಾರುಪತ್ಯ ಹೆಚ್ಚಿಸಿಕೊಳ್ಳಲು ಮತ್ತು ವಿಯಟ್ನಮಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ ಎಂಬುದು ಗಮನಿಸಬೇಕಾದ ಅಂಶ.
ಕೊರೋನಾದ ಈ ಸಂಕಷ್ಟದ ದಿನಗಳ ನಡುವೆ ಚೀನಾ ತನ್ನ ವಿಸ್ತರಣಾ ಬುದ್ಧಿಯನ್ನು ತೋರ್ಪಡಿಸಿದೆ. ದಕ್ಷಿಣ ಚೀನಾ ಸಮುದ್ರದ ಹತ್ತಿರ ಚೀನಾದ ಹಡಗು ವಿಯಟ್ನಾಂ ಹಡಗಿಗೆ ಗುದ್ದಿ ಅದನ್ನು ಮುಳುಗಿಸಿದೆ. ಈ ಸುದ್ದಿಯನ್ನು ಚೀನಾದ ಪತ್ರಿಕೆಯಾದ 'South China Morning Post (SCMP)' ಎಪ್ರಿಲ್ 3 ರಂದು ಪ್ರಕಟಿಸಿತ್ತು. ಆ ಪ್ರದೇಶದಲ್ಲಿ ಚೀನಾ ತನ್ನ ಪಾರುಪತ್ಯ ಹೆಚ್ಚಿಸಿಕೊಳ್ಳಲು ಮತ್ತು ವಿಯಟ್ನಮಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ ಎಂಬುದು ಗಮನಿಸಬೇಕಾದ ಅಂಶ.
500 ಮಿಲಿಯನ್ ಡಾಲರ್ ಅಷ್ಟು ಹಣವನ್ನು ಚೀನಾದ ಸರ್ಕಾರ ಮತ್ತು 'ಚೈನಾ ಡೆವೆಲೊಪ್ಮೆಂಟ್ ಬಾಂಕ್' ಸಾಲವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಶ್ರೀಲಂಕಾದ ಹಣಕಾಸು ಸಚಿವ ಕಳೆದ ವಾರ ಹೇಳಿದ್ದರು. ಹೆಚ್ಚು ಬಡ್ಡಿದರದಲ್ಲಿ ಸಾಲ ಕೊಟ್ಟು, ಸಾಲ ತೀರಿಸಲಾಗದ ದೇಶಗಳನ್ನು ಆಳುವುದು ಚೀನಾದ ಕುತಂತ್ರ ಇತ್ತೀಚೆಗೆ ಎಲ್ಲೆಡೆ ಕಾಣಿಸಿಕೊಂಡಿದೆ. ಕಳೆದ 3-4 ದಿನಗಳಲ್ಲಿ ಪಾಕೀಸ್ತಾನದಿಂದ ಭಾರತಕ್ಕೆ ನುಸುಳುಕೋರರು ಬರುತ್ತಿರುವುದು ಮತ್ತು ಭಾರತದ ಸೈನಿಕರು ಅವರನ್ನು ತಡೆಯುತ್ತಿದ್ದಾರೆ ಎಂಬ ಸುದ್ದಿ ಪ್ರಚಲಿತವಾಗಿದೆ. ಜಗತ್ತಿಗೆ ಹೋಲಿಸಿದರೆ ಭಾರತ ಕೊರೋನಾ ವಿಚಾರದಲ್ಲಿ ತಕ್ಕ ಮಟ್ಟಿಗೆ ಸುರಕ್ಷಿತವಾಗಿದೆ. ಭಾರತ, ಅಮೇರಿಕಾ ಸೇರಿದಂತೆ ಜಗತ್ತಿನ 20ಕ್ಕೂ ಹೆಚ್ಚಿನ ಮಿತ್ರ ರಾಷ್ಟ್ರಗಳಿಗೆ ಹಯ್ಡ್ರಾಕ್ಸಿಕ್ಲೊರೋಕ್ವಿನೈನ್ ಔಷಧವನ್ನು ಕಳಿಸಿಕೊಟ್ಟಿದೆ. ಈ ಔಷಧದಿಂದ ಕೊರೋನಾ ರೋಗ ಗುಣವಾಗದಿದ್ದರೂ ಜಗತ್ತಿಗೆ ಭಾರತದ ಮೇಲಿನ ವಿಶ್ವಾಸ ಹೆಚ್ಚಲು ಇದು ಕಾರಣವಾಗಿದೆ. ಭಾರತ ತನ್ನ ಸಹಜ ಸ್ಥಿತಿಗೆ ಮರಳಿದರೆ ಅರ್ಥಿಕವಾಗಿ ಚೀನಾಕ್ಕೆ ಅದು ಬಲು ದೊಡ್ಡ ಹೊಡೆತ. ಜಗತ್ತಿನ ಹೂಡಿಕೆದಾರರು ಚೀನಾದಿಂದ ಹೊರಬಂದು ಭಾರತದೆಡೆಗೆ ಮುಖಮಾಡಿದರೆ ಅಚ್ಚರಿ ಅಲ್ಲ. ಈ ಕಾರಣದಿಂದಾಗಿ ಪಾಕಿಸ್ತಾನದ ಭಯೋತ್ಪಾದನೆಗೆ ಚೀನಾ ಕುಮ್ಮಕ್ಕು ಕೊಡುತ್ತಿರಬಹುದು ಎಂದು ಸಹ ಅನುಮಾನ ವ್ಯಕ್ತವಾಗುತ್ತಿದೆ.
ಅದಾಗಲೇ, ಜಪಾನ್ ಸರ್ಕಾರ ತನ್ನ ಉತ್ಪಾದನ ಘಟಕಗಳನ್ನು ಚೀನಾದಿಂದ ತನ್ನ ದೇಶಕ್ಕೆ ವರ್ಗಾಯಿಸಲು ಸುಮಾರು 2.2 ಬಿಲಿಯನ್ ಡಾಲರ್ ಅಷ್ಟು ಮೊತ್ತವನ್ನು ಘೋಷಣೆ ಮಾಡಿದೆ. ಚೀನಾದ ಹುವಾಯ್ ಕಂಪನಿಗೆ ತನ್ನ ದೇಶದಲ್ಲಿ ನಿರ್ಬಂಧ ಹೇರಬೇಕು ಎಂದು ಬ್ರಿಟನ್ ಹೇಳಿಕೆ ಕೊಟ್ಟಿದೆ. ಯೂರೋಪಿನಾದ್ಯಂತ ತನ್ನ ಕಬಂದಬಾಹುವನ್ನು ಚಾಚಿರುವ ಚೀನಾವನ್ನು ಎದುರಿಸಲು ಆಂಗ್ಲರಿಗೆ ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ನೋಡಬೇಕಾಗಿದೆ. ಆಫ಼್ರಿಕಾ ಖಂಡದಲ್ಲಿ ಹೂಡಿಕೆ ಮಾಡಿರುವ ಚೀನಾ ವಿರುದ್ಧ ಕೀನ್ಯಾ ದನಿ ಎತ್ತಿದೆ. ಕೊರೋನಾ ಕಾರಣದಿಂದಾಗಿ ಹೊಸ ನಿಯಮಗಳ ಮೂಲಕ ಚೀನಾ, ಅಲ್ಲಿನ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಕೀನ್ಯಾ ದೇಶದ ವಿದೇಶಾಂಗ ಕಾರ್ಯದರ್ಶಿ ರೆಚೆಲೆ ಒಮಾಮೊ ತಿಳಿಸಿದ್ದಾರೆ. ಕೊರೋನಾವನ್ನು ಹುಟ್ಟುಹಾಕಿ, ಜಗತ್ತನ್ನು ಕಾಡುತ್ತಿದೆ ಚೀನಾ. ಜಗತ್ತಿನ ದೇಶಗಳು ಕೊರೋನಾ ವಿರುದ್ಧದ ನಂತರ ಅಯೋಗ್ಯ ಚೀನಾ ವಿರುದ್ಧ ಹೋರಾಡಲು ಸಜ್ಜಾಗಬೇಕು. ಇಲ್ಲದಿದ್ದಲ್ಲಿ ತನ್ನ ಕುಯುಕ್ತಿ ಮತ್ತು ಕುಟಿಲತೆಯ ಮೂಲಕ ಜಗತ್ತಿನ ದಾರಿ ತಪ್ಪಿಸುತ್ತದೆ ಚೀನಾ.



Good information
ReplyDelete