ದೇಶದೆಲ್ಲೆಡೆ ಕೊರೋನಾದ ಎರಡನೆ ಅಲೆ ಬಗ್ಗೆ ಸುದ್ದಿ. ದಿನಕ್ಕೆ 3 ಲಕ್ಷದಷ್ಟು ಜನರಿಗೆ ಸೋಂಕು ತಗುಲಿರುವುದು ಸಾಬೀತಾಗುತ್ತಿದೆ. ಮೊದಲನೆ ಅಲೆಗೆ ಹೋಲಿಸಿದಲ್ಲಿ ಈ ಬಾರಿ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ಎದುರಾಗಿದೆ. ಎಲ್ಲೆಡೆ ಆಮ್ಲಜನಕ ಹಾಗೂ ರೆಮ್ಡಿಸೀವರ್ ಔಷದ ಕೊರತೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಇದೆ. ಆದರೆ, ವಾಸ್ತವಾಂಶ ಇಷ್ಟು. ಜಗತ್ತಿನ ಕೆಲವು ರಾಷ್ಟ್ರಗಳಿಗೆ ಹೋಲಿಿಸಿದಲ್ಲಿ ಭಾರತದಲ್ಲಿ ಸಾವಿನ ಪ್ರಮಾಣ ಇಂದಿಗೂ ಕಮ್ಮಿಯೇ ಇದೆ. ಪ್ರತಿ 10 ಲಕ್ಷ ಸೋಂಕಿತರಿಗೆ ಅಮೇರಿಕದಲ್ಲಿ 1769 ಪ್ರಾಣ ಕಳೆದುಕೊಂಡ್ಡಿದ್ದಾರೆ, ಬ್ರಜಿಲ್ ನಲ್ಲಿ 1829, ಯು.ಕೆ. ಅಲ್ಲಿ 1869. ಆದರೆ, ಭಾರತದಲ್ಲಿ 140 ಮಾತ್ರ! ದುರಾದೃಷ್ಟವಶಾತ್ ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ಕೋವಿಡ್ ಎರಡನೆ ಅಲೆಯಿಂದಾಗಿ ಭಾರತ ತತ್ತರಿಸುತ್ತಿದೆ ಎಂದು ಜಾಗತಿಕ ಮಟದಲ್ಲಿ ಸುದ್ದಿ ಮಾಡುತ್ತಿದೆ. ಅಮೇರಿಕಾದ 'ದಿ ನ್ಯೂ ಯಾರ್ಕ್ ಟೈಮ್ಸ್' ಅಂತೂ ಭಾರತಲ್ಲಿ ಹೆಣ ಸುಡುವುದು ನಿಲ್ಲುತ್ತಿಲ್ಲ ಎಂಬಂತಹ ಸುದ್ದಿಯನ್ನು ಪತ್ರಿಕೆಯ ಮುಖಪುಟವನ್ನಾಗಿ ಪ್ರಕಟಿಸಿದೆ. ಇದರೂಟ್ಟಿಗೆ ವಾಕ್ಸಿನ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ರಫ್ತು ಮಾಡುವುದರಲ್ಲಿ ತಕರಾರು ಮಾಡಿದೆ.
ಭಾರತದ ಪರವಾಗಿದ್ದ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೆ ಕೊರೋನಾ ಕುರಿತು ಚೀನಾದ ವಿರುದ್ಧ ಮಾತುಗಳು ನಿಂತೇ ಹೋಗಿದೆ. ಬೈಡನ್ ಅಂತೂ ಚೀನಾದ ಪರವಾಗಿ ಅಲ್ಲದಿದ್ದರೂ ಅವರ ಕುರಿತು ಮೃದುವಾದ ಧೋರಣೆ ತೋರಿರುವುದಂತೂ ನಿಜ. ಚೀನಾಕ್ಕೂ ಅದೇ ಬೇಕಿತ್ತು. ಕೊರೋನಾದ ಎರಡನೇ ಅಲೆಯ ಈ ಸಂದರ್ಭದಲ್ಲಿ ಅಮೇರಿಕಾ ಭಾರತಕ್ಕೆ ರಫ್ತು ಮಾಡಬೇಕಿದ್ದ ಲಸಿಕೆಗೆ ಬೇಕಿದ್ದ ಕಚ್ಚಾವಸ್ತುಗಳನ್ನು ತಡೆಹಿಡಿಯಿತು. ಅಮೇರಿಕಾದಲ್ಲಿ ಮೊದಲನೆ ಆಲೆಯ ಸಂದರ್ಭದಲ್ಲಿ 50 ದಶಲಕ್ಷ ಹೈಡ್ರಾಕ್ಸಿಕ್ಲೊರೋಕ್ವೈನ್ ಔಷಧವನ್ನು ಭಾರತ ರಫ್ತು ಮಾಡಿತ್ತು. ಈ ನಡೆಗೆ ಅಂದಿನ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಧನ್ಯವಾದವನ್ನು ತಿಳಿಸಿದ್ದರು. ಆದರೀಗ, ಅಮೇರಿಕಾ ಆ ಕೃತಜ್ಞತೆಯನ್ನು ಉಳಿಸಿಕೊಳ್ಳಲಿಲ್ಲ. ಅಮೇರಿಕಾ ತನ್ನ ಪಕ್ಕದ ರಾಷ್ಟ್ರಗಳಿಗೆ ಲಸಿಕೆ ಕೊಡುವ ಬದಲು ಅಗತ್ಯಕ್ಕಿಂತ ಹೆಚ್ಚು ಲಸಿಕೆಯನ್ನು ಸಂಗ್ರಹಿಸಿಟ್ಟುಕೊಂಡಿದೆ. ಈ ವಿಚಾರ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಂತೆ, ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ಭಾರತ ಅಮೇರಿಕಾ ಸಂಬಂಧದ ಕುರಿತಂತೆ, ಭಾರತದಲ್ಲಿ ತಾಂಡವ ಆಡುತ್ತಿರುವ ಕೊರೋನಾ, ನರಳುತ್ತಿತುವ ಭಾರತ ಎಂದೆಲ್ಲಾ ಒಂದರ ಹಿಂದೆ ಒಂದಂತೆ ಲೇಖನಗಳನ್ನೂ, ಕಾರ್ಟೂನ್ ಚಿತ್ರಗಳನ್ನು ಪ್ರಕಟಿಸಲು ಮುಂದಾಯಿತು. ತನ್ನ ದೇಶಕ್ಕೆ ಬರುವವರು ತನ್ನದೇ ಲಸಿಕೆಯನ್ನು ಹಾಕಿಸಿಕೊಂಡು ಬರಬೇಕು ಎಂಬಂತಹ ವೀಸಾ ನಿಯಮಗಳನ್ನು ತರುವ ನಿಟ್ಟಿನಲ್ಲಿದೆ ಚೀನಾ. ಇನ್ನೊಬ್ಬರ ಚಿತೆಯ ಮೇಲೆ ಊಟ ಬೇಯಿಸಿಕೊಂಡು ತಿನ್ನುವ ಮನಸ್ಥಿತಿ ಚೀನಾದ್ದು!
ಭಾರತ ಇಂದು ನಿಜಕ್ಕೂ ಬಲಾಢ್ಯವಾಗಿದೆ. ತನ್ನ ಆಂತರಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವತ್ತ ಬಹಳಷ್ಟು ಗಮನ ಹರಿಸಿದೆ. ಗುಜರಾತಿನ ಸ್ವಾಮೀ ನಾರಾಯಣ ಮಂದಿರ 300 ಜನರಿಗೆ ಹಾಸಿಗೆ, ಆಮ್ಲಜನಕ ಮತ್ತು ಕೆಲವರಿಗೆ ಐ.ಸಿ.ಯು. ವ್ಯವಸ್ಥೆ ಮಾಡಿದೆ, ಪುರಿ ಜಗನ್ನಾಥ ಮಂದಿರ ಕೋವಿಡ್ ಆರೈಕೆ ಕೇಂದ್ರದ ವ್ಯವಸ್ಥೆ ಮಾಡಿಕೊಂಡಿದೆ, ಅಷ್ಟೇ ಅಲ್ಲದೆ ಸರ್ಕಾರದ ಪರಿಹಾರ ನಿಧಿಗೆ 1.5 ಕೋಟಿಯಷ್ಟು ಹಣವನ್ನು ದಾನ ಮಾಡಿದೆ.ಮುಂಬೈ ಅಲ್ಲಿ ಪವನಧಾಮ ಮಂದಿರ 100ಕ್ಕೂ ಹೆಚ್ಚು ಹಾಸಿಗೆಯಿರುವ ಆಸ್ಪತ್ರೆಯನ್ನು ನಿರ್ಮಾಣ ಮಾಡಿದೆ. ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಮೆಡಿಕಲ್ ಕಾಲೇಜೊಂದರಲ್ಲಿ ಆಮ್ಲಜನಕ ಘಟಕದ ನಿರ್ಮಾಣಕ್ಕೂ ತಯಾರಿ ನಡೆಸಿದೆ. ಭಾರತದ ಎರಡು ಸಂಸ್ಥೆ ಕೊವಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ಎಂಬ ಲಸಿಕೆಯನ್ನು ತಯಾರಿಸಿದ್ದಾರೆ. ಐ.ಸಿ.ಎಂ.ಆರ್. ಪ್ರಕಾರ ಬ್ರಿಟನ್, ಬ್ರಜಿಲ್, ದಕ್ಷಿಣ ಆಫ್ರಿಕದ ಕೋವಿಡ್ ಸಂತತಿ ವಿರುದ್ಧ ಕೂಡ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಯಶಸ್ವಿಯಾಗಿದೆ ಎಂಬ ವರದಿ ಬಿಡುಗಡೆ ಮಾಡಿತು. ಎರಡೂ ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಕೊರೋನಾ ಬಂದಿರುವ ಪ್ರಮಾಣ 0.04% ರಷ್ಟು ಮಾತ್ರ!
ಫಾರ್ಮಾ ಉದ್ಯಮದಲ್ಲಿ ಭಾರತ ಅಗ್ರಣಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ ಕಾರಣವೇ ಇಂದು ಭಾರತ 60 ಮಿಲಿಯನ್ಗೂ ಹೆಚ್ಚು ಡೋಸ್ ಲಸಿಕೆಯನ್ನು 70 ದೇಶಗಳಿಗೆ ರಫ್ತು ಮಾಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆಗೆ 4500 ಕೋಟಿಯಷ್ಟು ಹಣವನ್ನು ಎರಡು ಲಸಿಕಾ ಉತ್ಪನ್ನ ಸಂಸ್ಥೆಗಳಿಗೆ ಘೋಷಿಸಿದೆ. ದೇಶದೆಲ್ಲೆಡೆ ಆಸ್ಪತ್ರೆಗಳಲ್ಲಿನ ಹಾಸಿಗೆ, ಆಮ್ಲಜನಕ, ರೆಮ್ಡಿಸೀವರ್ ಔಷಧದ ಲಭ್ಯತೆ ಬಗ್ಗೆ ಆನ್ಲೈನ್ ಕಡತವನ್ನು ಬಿಡುಗಡೆ ಮಾಡಿ 5 ನಿಮಿಷಕ್ಕೊಮ್ಮೆ ಆ ಕಡತವನ್ನು ನವೀಕರಿಸಲಾಗುವಂತೆ ಮಾಡಿದೆ. ಈ ಕಡತವನ್ನು ನಮ್ಮ ಮೊಬೈಲ್ ಮೂಲಕವೇ ನೋಡಬಹುದಾದ ವ್ಯವಸ್ಥೆ ರೂಪುಗೊಂಡಿದೆ.ಆಮ್ಲಜನಕ ಉತ್ಪಾದನೆಗೆ ಸರ್ಕಾರ ಒತ್ತು ಕೊಟ್ಟಿದೆ. ದೆಹಲಿಯಲ್ಲಿ 8 ಆಮ್ಲಜನಕ ಘಟಕವನ್ನು ತೆರೆಯಲು ನಿರ್ಧಾರ ಮಾಡಿದೆ. ಐ.ಎಫ್.ಎಫ್.ಸಿ.ಒ. 30 ಕೋಟಿ ಹಣ ಹೂಡಿಕೆ ಮಾಡಿ ಗುಜರಾತ್, ಉತ್ತರ ಪ್ರದೇಶ, ಒಡಿಸಾದಲ್ಲಿ 4 ಆಮ್ಲಜನಕ ಘಟಕಗಳನ್ನು 15 ದಿನಗಳಲ್ಲಿ ಸ್ಥಾಪಿಸುವುದಾಗಿ ಹೇಳಿದೆ. ರಿಲಯನ್ಸ್ ಕಂಪನಿ 700 ಟನ್ ರಷ್ಟು ಅಮ್ಲಜನಕವನ್ನು ಮಹಾರಾಷ್ಟ್ರದಲ್ಲಿ ಸರಬರಾಜು ಮಾಡುತ್ತಿದ್ದಾರೆ. ರತನ್ ಟಾಟ 500 ಕೋಟಯಷ್ಟು ದೇಣಿಗೆಯನ್ನು ಕೊರೋನಾ ವಿರುದ್ಧ ಹೋರಾಡಲು ಕೊಡುವುದಾಗಿ ಹೇಳಿದ್ದಾರೆ. 
 
  
ಅಮೇರಿಕಾ, ಚೀನಾ ಭಾರತದ ವಿರುದ್ದ ಮಾತಾಡಿದರೂ ಫ್ರಾನ್ಸ್, ರಷ್ಯಾ, ಬ್ರಿಟನ್, ಸಿಂಗಾಪುರ ನಮ್ಮ ಸಹಾಯಕ್ಕೆ ನಿಂತಿದೆ.  ಅಮೇರಿಕಾದಲ್ಲೇ ಇರುವ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರಂ ಪಿಚೈ ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ 135 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.  
  
ಜರ್ಮನಿ ಕೂಡ ಕೆಲ ದಿನಗಳ ಹಿಂದೆ 'ಔಷಧ ಉತ್ಪಾದನೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಲು ಯೂರೊಪ್ ಕಾರಣ' ಎಂಬಂತಹ ಮಾತು ಹೇಳಿದ್ದರು. ಭಾರತದ ರಾಜತಾಂತ್ರಿಕತೆ ಮತ್ತು ಇತರ ರಾಷ್ಟ್ರ ಸಹಾಯಕ್ಕೆ ನಿಂತಿರುವುದನ್ನು ನೋಡಿ ಜರ್ಮನಿ ಸಹಾಯಕ್ಕೆ ಮುಂದಾಗಿದೆ. ಅಮೇರಿಕಾ ಜೋ ಬೈಡನ್, ಭಾರತದ ಸಹಾಯ ನೆನೆದು ಈಗ ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾನೆ. ಕಷ್ಟಕಾಲದಲ್ಲಿ ಹೊರದೇಶದವರಿಗೆ ಸಹಾಯ ಕೇಳಿದಾಗ ತಮಗಾಗುವ ಪ್ರಯೋಜನವನ್ನು ಪಡೆದುಕೊಳ್ಳಲು ನೋಡುತ್ತದೆ. ಅಮೇರಿಕಾ ಮತ್ತು ಚೀನಾ ದೇಶಗಳಂತೂ ಇಂತಹ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಇತರ ದೇಶಗಳನ್ನು ನಿಯಂತ್ರಿಸಲು ಮುಂದಾಗುತ್ತದೆ. ಕಷ್ಟದ ಪರಿಸ್ಥಿತಿ ಇತರ ದೇಶದ ಮುಂದೆ ಕೈಚಾಚುವ ಬದಲು ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು, ನಮಗೆ ಬೇಕಾಗಿರುವ ವಸ್ತುಗಳನ್ನು ನಾವೇ ತಯಾರು ಮಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ಆತ್ಮನಿರ್ಭರ ಭಾರತಕ್ಕೆ ಒತ್ತು ಕೊಡುವ ಅಗತ್ಯ ಈಗ ಬಂದಿದೆ.



