May 25, 2021

ಜಗತ್ತಿಗೆ ಸಂಕಟ ತಂದು ಸಂಭ್ರಮಿಸುತ್ತಿರುವ ಚೀನಾ!

ಕೊರೋನಾ ಎಂಬ ಮಹಾಮಾರಿ ಒಂದು ರೀತಿ ವಿಶ್ವಯುದ್ಧವಾಗಿ ಪರಿಣಮಿಸಿದೆ. 2020 ರಿಂದ ನಮ್ಮ ಜೀವನವು ತೀವ್ರವಾಗಿ ಬದಲಾಗಿದೆ. ಆರ್ಥಿಕವಾಗಿ ಜಗತ್ತು ಕುಸಿದಿದೆ. ಜನನ ಪ್ರಮಾಣದ ಹೆಚ್ಚಳ, ವಿಚ್ಚೇದನ , ಬೊಜ್ಜು, ಮಾನಸಿಕ ಖಿನ್ನತೆ, ಮದ್ಯಪಾನ, ಅಪರಾಧ, ನಿರುದ್ಯೋಗ, ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಸಂಶೋಧನೆಗಳು ಸೂಚಿಸುತ್ತಿವೆ. ಭಾರತ, ಜಪಾನ್ ಅಥವಾ ಬ್ರೆಜಿಲ್ನಂತಹ ಯಾವುದಾದರು ದೇಶವು ಇಂತಹ ಮಾರಕ ವೈರಸ್ ಅನ್ನು ತನ್ನ ಭೂಭಾಗದಿಂದ ಪಾರಾಗಲು ಬಿಟ್ಟಿದ್ದೇ ಆಗಿದ್ದಲ್ಲಿ ಇಂದು ಅಂತರಾಷ್ಟ್ರೀಯವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲ್ಪಡುತ್ತಿತ್ತು. ಆದರೆ, ಜಗತ್ತಿನಲ್ಲಿ ಇಷ್ಟೊಂದು ಸಾವು ನೋವುಗಳಿಗೆ ಕಾರಣವಾಗಿರುವ ಕೊರೋನಾದ ಜನ್ಮಸ್ಥಳವಾದ ಚೀನಾ ಇಂದಿನವರಿಗೂ ಯಾವುದೇ ಶಿಕ್ಷೆ ಅನುಭವಿಸಿಲ್ಲ. ಪ್ರಪಂಚದಾದ್ಯಂತ ಜನರೆಗೆ ಸೋಂಕು ತಗುಲಿದ ನಂತರ, ಚೀನೀ ಕಮ್ಯುನಿಸ್ಟ್ ಪಾರ್ಟಿ (ಸಿ.ಸಿ.ಪಿ) ತನ್ನ ಒಂದು ಪ್ರಕಟಣೆಯ ಮೂಲಕ ಸಿನಿಕತನದಿಂದ "ವಿಶ್ವದ ಎಲ್ಲರನ್ನೂ ಜೊತೆಯಾಗಿಸುವ ಅಪರೂಪದ ಸನ್ನಿವೇಶ ಕೊರೋನಾ ಮಹಾಮಾರಿ" ಎಂದು ಹೇಳಿತು.

ಚೀನಾ ಕೋವಿಡ್ ಅನ್ನು ತಾನು ತಡೆದುಕೊಳ್ಳುವುದಲ್ಲದೇ ವೈರಸ್ಸಿನ ಉಗಮದ ಬಗ್ಗೆ ಪ್ರತ್ಯೇಕವಾದ, ಸಮಗ್ರವಾದ ತನಿಖೆಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಮಾಹಾಮಾರಿ ತಂದೊಡ್ಡಿರುವ ಈ ಪರಿಸ್ಥಿತಿಯನ್ನು ಚೀನಾ ತನ್ನ ಆರ್ಥಿಕ ಲಾಭಕ್ಕಾಗಿ ಬಳಸಿಕೊಂಡಿದೆ. ಇದೇ ಸಂದರ್ಭದಲ್ಲಿ ಚೀನಾದ ರಫ಼್ತಿನ ಪ್ರಮಾಣ ದಾಖಲೆ ಏರಿಕೆ ಕಂಡಿದೆ. ಇದಕ್ಕೆ ಪೂರಕವಾಗಿ ಪರಗ್ವೆ ಒಂದು ಉದಾಹರಣೆ ಕೊಡುತ್ತದೆ. ತನಗೆ ಲಸಿಕೆ ಕೊಡಬೇಕಾದರೆ ತಾನು ತೈವಾನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಚೀನಾ ಹೇಳಿತ್ತು ಎಂಬ ವಿಚಾರವನ್ನು ಪರಗ್ವೆ ಮಾರ್ಚ್ 22 ರಂದು ಬಹಿರಂಗ ಪಡಿಸಿತು.

The Economic Times reports spike in chinese export during Covid pandemic

ಇದಲ್ಲದೇ ಮತ್ತೊಂದು ಸೂಕ್ಷ್ಮವಾದ ವಿಚಾರವನ್ನು ಇಲ್ಲಿ ಗಮನಿಸಬೇಕು. ಕೊರೋನಾ ಹುಟ್ಟಿದ್ದು ಚೀನಾದ ಮಧ್ಯಭಾಗದಲ್ಲಿರುವ ವೂಹಾನಿನಲ್ಲಿ. ವೈರಾಣು ಹುಟ್ಟಿದ ದೇಶವನ್ನು ಹೊರತುಪಡಿಸಿ ಜಾಗತಿಕವಾಗಿ ತಡೆಯಲಾಗದಂತೆ ಹರಡಿರುವುದು ಸ್ಪಷ್ಟವಾಗಿದೆ. ಚೀನಾ ಈ ರೋಗದಿಂದ ಕನಿಷ್ಟ ಪ್ರಮಾಣದಲ್ಲಿ ಸಾವು ನೋವು ಅನುಭವಿಸಿರುವ ದೇಶವಾಗಿದೆ. ಸಧ್ಯದ ಲೆಕ್ಕದ ಪ್ರಕಾರ 90 ಸಾವಿರ ಪ್ರಕರಣ ಮತ್ತು 4 ಸಾವಿರದಷ್ಟು ಸಾವಿನ ಸಂಖ್ಯೆ ಚೀನಾದ್ದು! ನೆರೆಯ ರಾಷ್ಟ್ರಗಳಾದ ಜಪಾನ್ - ಕೊರಿಯಾ ಇಂದ ಹಿಡಿದು ನೇಪಾಳ - ಭಾರತದವರೆಗೆ ಕೊರೋನಾ ತಾಂಡವವಾಡುತ್ತಿರಬೇಕಾದರೆ ಚೀನಾದಲ್ಲೇ ಹುಟ್ಟಿದ ಕೊರೋನಾ ಹೆಚ್ಚಿನ ಪರಿಣಾಮ ಬೀರದಂತೆ ಕಾಪಾಡಿ ಕೊಂಡಿರುವುದು ಹೇಗೆ ಎಂಬುದು ಆಶ್ಚರ್ಯವಾಗಿದೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊರೋನಾದ ಮೂಲವನ್ನು ತಿಳಿದುಕೊಳ್ಳುವ ಎಲ್ಲಾ ಪ್ರಯತ್ನಗಳಿಗೂ ಚೀನಾ ವ್ಯವಸ್ಥಿತವಾಗಿ ಅಡ್ಡಯಾಯಿತು. ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಕುರಿತು ತನಿಖೆಗೆ ಚೀನಾಕ್ಕೆ ಹೋಗುವ 1 ವಾರದ ಮುನ್ನ ಚೀನಾದಲ್ಲಿ ಇದ್ದಿಕ್ಕಿದ್ದ ಹಾಗೆ ಮಳೆಗಾಲವಲ್ಲದ ಸಮಯದಲ್ಲೂ ಪ್ರವಾಹ ಬಂದಿದ್ದು ಗಮನಿಸಬೇಕಾದ ಅಂಶ. ವೈರಸ್ಸಿನ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಕೊಡುವುದನ್ನು ಚೀನಾ ನಿರಾಕರಿಸಿತು ಬದಲಾಗಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎಪ್ರಿಲ್ 30 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊರೋನಾ ಎರಡನೆ ಅಲೆಯಿಂದ ಉಂಟಾಗಿರುವ ಅನಾಹುತ ಕುರಿತು ಸಹಾನುಭೂತಿ ಪತ್ರವನ್ನು ಕಳುಹಿಸಿದರು. ಚೀನಾ ತನ್ನ ಜಾಗತಿಕ ಪ್ರಭಾವದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಿದಂತೆ ಚೀನಾ ವೈರಸ್ಸಿನ ಉಗಮದ ಕುರಿತ ಚರ್ಚೆಯನ್ನು ನಿಗ್ರಹಿಸಲು ಬಹುತೇಕ ಯಶಸ್ವಿಯಾಗಿದೆ. ಜಗತ್ತಿನ ಗಮನವನ್ನು ವೈರಸ್ಸಿನ ರೂಪಾಂತರದ ಮೇಲೆ, ನಿರ್ದಿಷ್ಟ ದೇಶಗಳೊಂದಿಗೆ ಗುರುತಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಮಾಧ್ಯಮಗಳು ಸಹ 'ಭಾರತೀಯ ರೂಪಾಂತರಿ, ಬ್ರೆಜಿಲ್ ರೂಪಾಂತರಿ, ದಕ್ಷಿಣ ಆಫ಼್ರಿಕಾ ರೂಪಾಂತರಿ' ಎಂದೆಲ್ಲಾ ಉಲ್ಲೇಖ ಮಾಡಿವೆ. ದೆಹಲಿಯ ಮುಖ್ಯಮಂತ್ರಿ ಇತ್ತೀಚೆಗೆ ಸಿಂಗಾಪುರದ ರೂಪಾಂತರದ ಬಗ್ಗೆ ಮಾತಾಡಿ ಸುದ್ದಿಯಾದರು. ಆದರೆ, ಇದೇ ಮಾಧ್ಯಮಗಳು ವುಹಾನಿನಲ್ಲಿ ಹುಟ್ಟಿದ ಕೊರೊನಾಕ್ಕೆ 'ಚೀನೀ ವೈರಸ್' ಎಂದು ಉಲ್ಲೇಖಿಸುವುದಿಲ್ಲ. ಚೀನಾದ ಚೇಲಾಗಳು ಎನ್ನಬಹುದಾದ ಕಮ್ಯೂನಿಸ್ಟರು ಚೀನಾ ವಿರುದ್ಧ ಒಂದೇ ಒಂದು ಪದವನ್ನು ಮಾತಾಡಿದ್ದು ಇತಿಹಾಸದಲ್ಲೇ ಇಲ್ಲ. ಚೀನಾ ವೈರಸ್ ಎಂದು ಕರೆಯುವುದನ್ನು ಆಕ್ಷೇಪಿಸಿದ ಪಾಶ್ಚಿಮಾತ್ಯ ಮಾಧ್ಯಮಗಳು ಹೊಸ ರೂಪಾಂತರಿಗಳನ್ನು ಅವು ಹುಟ್ಟಿದ ದೇಶಗಳ ಜೊತೆ ಹೆಸರಿಸುತ್ತಿವೆ. 

ಇದೆಲ್ಲದರ ನಡುವೆ ಲದಾಖ್ ಪ್ರಾಂತ್ಯದಲ್ಲಿ ಚೀನಾ ಮತ್ತೊಮ್ಮೆ ಹೆಚ್ಚು ಸೈನಿಕರನ್ನು ತರಬೇತಿ ಎಂದು ಜಮಾಮಾಡಿದೆ. ಮೇ 11ರ ಉಪಗ್ರಹದ ಚಿತ್ರದ ಪ್ರಕಾರ ಪಾಂಗಾಂಗ್ ಸರೋವರದ ಪೂರ್ವಕ್ಕೆ ಹತ್ತಿರವಾಗಿರುವ ಕ್ಸಿಂಗಿಯಾಂಗ್-ಟಿಬೆಟ್ ಹೆದ್ದಾರಿಯಲ್ಲಿರುವ ರುಟೋಗ್ ಕೌಂತೆಯಲ್ಲಿ ಚೀನಾದ ಸೈನ್ಯ ಜಮಾವಣೆಗೊಂಡಿರುವುದು ಸ್ಪಷ್ಟವಾಗಿದೆ. ಭಾರತದ ಫ಼ಾರ್ವರ್ಡ್ ಸ್ಥಳದ 75-100 ಕೀ.ಮೀ. ದೂರದಲ್ಲಿ ಚೀನೀ ಸೈನ್ಯ ಮೂಲಸೌರ್ಯಗಳನ್ನು ಹೆಚ್ಚಿಸಿಕೊಳ್ಳುವತ್ತಾ ಗಮನಹರಿಸಿದೆ. ಭಾರತೀಯ ಸೈನ್ಯದ ಮಾಹಿತಿ ಪ್ರಕಾರ ಹೋತಾನ್ ಮತ್ತು ಕಾಶ್ಗರ್ ವಾಯುನೆಲೆಗಳಲ್ಲಿ ಯುದ್ಧ ವಿಮಾನಗಳ ಸಂಖ್ಯೆ ಏರಿಳಿತ ಕಾಣುತ್ತಲೇ ಇದೆ. ಭಾರತದ ಜೊತೆ ಮಾತುಕತೆಯ ಸಂದರ್ಭದಲ್ಲೂ ಸಹ ಚೀನಾ ಗೋಗ್ರಾ ಮತ್ತಿತರ ಎತ್ತರದ ಪ್ರದೇಶಗಳಿಂದ ಇಳಿದು ದೂರವಿರಲು ಹಿಂದೇಟು ಹಾಕಿತು. ಚೀನೀ ಸೈನ್ಯ ಹಿಂದಕ್ಕೆ ಹೋದರೆ ಮಾತ್ರ ವಿಸರ್ಜನೆ ಪ್ರಕ್ರಿಯೆಯನ್ನು ಪರಿಗಣಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ಲದಾಖ್ ಪ್ರಾಂತ್ಯದಲ್ಲಿ ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳು ಈಗಾಗಲೇ ನಿಯೋಜನೆಗೊಂಡಿವೆ.

Reports showing chinese troops at Rutog County

ಕೊರೋನಾಕ್ಕೆ ಔಷಧವೆಂದು ಚೀನಾ 'ಸೀನೋವಾಕ್' ಎಂಬ ಲಸಿಕೆಯನ್ನು ಇತರ ದೇಶಗಳಿಗೆ ಮಾರಾಟ ಮಾಡುತ್ತಿದೆ. ಬ್ರಜಿಲ್, ಟಕ್ರಿ ಇದಾಗಲೇ ಚೀನಾದ ಲಸಿಕೆ ಸರಿಯಾದ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿವೆ. ಸಿಂಗಾಪುರ, ಫ಼ಿಲಿಫ಼ೈನ್ಸ್,  ಮಲೇಷ್ಯಾ ಚೀನಾದಿಂದ ಲಸಿಕೆ ಆಮದು ಮಾಡಿಕೊಂಡಿದ್ದರೂ ಲಸಿಕೆಯ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಡು ಸಾಬೀತಾದರೆ ಮಾತ್ರ ಅದನ್ನು ಅನುಮೋದಿಸುತ್ತೇವೆ ಎಂದಿದೆ.

ALJAZEERA reports the low effectiveness of chinese vaccine

ಸಮೋವಾದ ಪ್ರಧಾನಿ ಚೀನಾದ 100 ಮಿಲಿಯನ್ ಡಾಲರ್ ಬಂದರು ಯೋಜನೆಯನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಚೀನಾದ ಆಕ್ರಮಣಶೀಲತೆಗೆ ವಿರುದ್ಧವಾಗಿ ನಿಲ್ಲುವ ಪೆಸಿಫಿಕ್ ದ್ವೀಪಗಳ ಸಾಲಿಗೆ ಸಮೋವಾ ಸೇರಿಕೊಂಡಿದೆ. ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸುವುದಕ್ಕೆ ಚೀನಾದೊಂದಿಗಿನ ಹೂಡಿಕೆ ಒಪ್ಪಂದವನ್ನು ಸ್ಥಗಿತಗೊಳಿಸಲು ಯೂರೋಪಿನ ಒಕ್ಕೂಟ ತನ್ನ ಸಂಸತ್ತಿನಲ್ಲಿ ಅನುಮೋದಿಸಿದೆ.

Samoa's new leader scraps china funded port project

ಜಗತ್ತಿಗೆ ಸಂಕಟವನ್ನು ತಂದೊಡ್ಡಿ ತಾನು ಸಂಭ್ರಮಿಸುತ್ತಿದೆ ಚೀನಾ! ಇದನ್ನು ಕಟ್ಟಿಹಾಕಲು ಕ್ವಾಡ್ ರಾಷ್ಟ್ರಗಳು ಮತ್ತು ಯುರೋಪಿನ ರಾಷ್ಟ್ರಗಳು ಒಂದಾಗಬೇಕಿದೆ. ಕರ್ಮ ಸಿದ್ಧಾಂತದ ಪ್ರಕಾರ ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇ ಬೇಕು. ಹಾಗೆ, ಜಗತ್ತಿಗೆ ಕೋರೋನಾ ಎಂಬ ಸಂಕಷ್ಟವನ್ನು ತಂದೊಡ್ಡಿದ ಚೀನಾ ಮುಂದೆ ಅನುಭವಿಸಲೇಬೇಕು.

No comments:

Post a Comment