January 10, 2022

ಅದು ಭದ್ರತಾ ವೈಫಲ್ಯವಲ್ಲ ಪೂರ್ವನಿಯೋಜಿತ ಷಢ್ಯಂತ್ರ!

ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಇಬ್ಬರು ಪ್ರಧಾನ ಮಂತ್ರಿಗಳ ಹತ್ಯೆಯಾಗಿದೆ ಮತ್ತು ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಅಸುನೀಗಿದ್ದಾರೆ. ದೇಶದ ನಾಯಕರೊಬ್ಬರನ್ನು ಈ ರೀತಿ ಕಳೆದುಕೊಳ್ಳುವುದು ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಹುದು. ಅಂತಹ ಸಂದರ್ಭದಲ್ಲಿ ದೇಶದ ಜನ, ವಿರೋಧ ಪಕ್ಷಗಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಅತೀ ಮುಖ್ಯವಾಗುತ್ತದೆ. ಮೊನ್ನೆ ದೇಶ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಮಂಗಳವಾರ ಪ್ರಧಾನಿ ಮೋದಿ ಪಂಜಾಬಿನ ಹುಸೇನ್ ವಾಲದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಹೋಗಬೇಕಾಗಿತ್ತು. ಹೆಲಿಕಾಪ್ಟರ್ ಮೂಲಕ ತೆರಳಬೇಕಿದ್ದ ಪ್ರಧಾನಿ ಪ್ರತಿಕೂಲ ಹವಾಮಾನದ ಕಾರಣ ರಸ್ತೆ ಮೂಲಕ ತೆರಳಬೇಕಾಗುತ್ತದೆ. ನಿಗದಿತ ಸ್ಥಳದಿಂದ 30 ಕಿ.ಮೀ. ಹಿಂದೆ ಇದ್ದ ಫೈ-ಓವರ್ ಮೇಲೆ ಪ್ರತಿಭಟನಾಕಾರರು ದಾರಿಗೆ ಅಡ್ಡವಾಗಿ ನಿಲ್ಲುತ್ತಾರೆ. ಸುಮಾರು 15-20 ನಿಮಿಷ ಪ್ರಧಾನಮಂತ್ರಿ ಅಲ್ಲೇ ಸಿಲುಕಿ, ಇನ್ನು ಮುಂದುವರೆಯುವುದು ಸರಿಯಿಲ್ಲ ಎಂದು ಹಿಂದಿರುಗುತ್ತಾರೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 'ನಾನು ಭತಿಂದಾ ಏರ್ಪೋರ್ಟ್ ಗೆ ಜೀವಂತವಾಗಿ ಹಿಂದಿರುಗಿದಕ್ಕಾಗಿ ನಿಮ್ಮ ಸಿ.ಎಂ.ಗೆ ಧನ್ಯವಾದಗಳನ್ನು ತಿಳಿಸಿ' ಎಂದು ಪ್ರಧಾನಿ ಹೇಳಿದರು ಎಂದು ಏ.ಎನ್.ಐ ವರದಿ ಮಾಡಿದೆ. ಪ್ರಧಾನಿಯೊಬ್ಬರು ತಮ್ಮದೇ ದೇಶದ ರಾಜ್ಯವೊಂದರ ಬಗ್ಗೆ ಹೀಗೆ ಹೇಳಬೇಕಾದರೆ ಪರಿಸ್ಥಿತಿಯ ಗಂಭೀರತೆಯನ್ನು ಮತ್ತು ಅಲ್ಲಿ ನಡೆದಿರಬಹುದಾದ ವ್ಯವಸ್ಥಿತ ಸಂಚನ್ನು ಊಹಿಸಿಕೊಳ್ಳಿ.

ANI Reporting Modi's Statement at Airport

ಇಂದಿರಾ ಗಾಂಧಿಯ ಹತ್ಯೆ ನಡೆದಾಗ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 2800 ಸಿಖ್ಖರನ್ನು ದೆಹಲಿಯಲ್ಲಿ ಮತ್ತು ದೇಶದಾದ್ಯಂತ 3400 ಸಿಖ್ಖರನ್ನು ಕೊಲ್ಲಲಾಯ್ತು. ಆದರೆ ಖಾಸಗಿ ಸಂಸ್ಥೆಯೊಂದು ಎಂಟರಿಂದ ಹದಿನೇಳು ಸಾವಿರ ಸಿಖ್ಖರನ್ನು ಹತ್ಯೆ ಮಾಡಲಾಯ್ತು ಎಂದು ಅಂದಾಜಿಸುತ್ತದೆ. ಇಡೀ ದೇಶ ಈ ಹತ್ಯೆಯನ್ನು ಖಂಡಿಸುತ್ತದೆ. ಇದೇ ರೀತಿ 1991 ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದಾಗ ಈ ದೇಶದ ಭೂಸೇನೆ, ನೌಕಸೇನೆ, ದೂರದರ್ಶನ, ರೇಡಿಯೋ ಮಾಧ್ಯಮ, ಪೊಲೀಸ್ ಇಲಾಖೆ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಎಲ್.ಟಿ.ಟಿ.ಇ. ವಿರುದ್ಧ ತಿರುಗಿ ಬೀಳುತ್ತದೆ. ಕರ್ನಾಟಕದ ಪೊಲೀಸ್ ತೀವ್ರವಾಗಿ ತನಿಖೆ ನಡೆಸಿ ರಾಜೀವ್ ಹಂತಕರು ಕೋಣನಕುಂಟೆಯ ಮನೆಯಲ್ಲಿರುವುದನ್ನು ಪತ್ತೆ ಹಚ್ಚುತ್ತಾರೆ. ನಂತರ ಬದುಕಿದ್ದ ಅರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ ನಿಧನದ ಪ್ರಕರಣದಲ್ಲಿ ದೇಶದ ಜನ ಮತ್ತಿ ವಿರೋಧ ಪಕ್ಷ ಒಕ್ಕೋರಲಿನಿಂದ ತೀವ್ರ ತನಿಖೆಗೆ ಆಗ್ರಹಿಸಿತಾದರೂ ಆಡಳಿತ ಪಕ್ಷದ ನಡೆ ಅನುಮಾಸ್ಪದವಾಗೇ ಇತ್ತು. ಅವರ ಸಾವಿಗೆ ಕಾರಣ ಹೃದಯಾಘಾತ ಎಂದು ಹೇಳಿತು. ಅವರ ಸಾವು ಇಂದಿಗೂ ನಿಗೂಢವಾಗೆ ಉಳಿದಿದೆ. ಹಲವರು ಹಲವು ರೀತಿಯ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ.


Security Breach During PM's Visit to Punjab

ಈಗ ಮೊನ್ನೆ ನಡೆದ ಘಟನೆಗಳನ್ನು ಮತ್ತು ವಿರೋಧ ಪಕ್ಷಗಳ ಪ್ರತಿಕ್ರಿಯೆಗಳನ್ನು ಗಮನಿಸೋಣ. ಪಂಜಾಬಿನ ಹುಸೇನ್ ವಾಲಾಕ್ಕೆ ಹೋಗಬೇಕಾಗಿದ್ದ ಪ್ರಧಾನಿ ಮೋದಿ ಪಂಜಾಬಿನ ಭತಿಂದಾ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಹೆಲಿಕಾಪ್ಟರ್ ಮೂಲಕ ತೆರಳಬೇಕಿದ್ದವರು ಪ್ರತಿಕೂಲ ಹವಾಮಾನದ ಕಾರಣ ರಸ್ತೆ ಮಾರ್ಗವಾಗಿ ತೆರಳುವ ತೀರ್ಮಾನವಾಗಿತ್ತದೆ. ಇದಕ್ಕಾಗಿ ಪ್ರಧಾನಿ 30 ನಿಮಿಷ ಕಾಯಬೇಕಾಗುತ್ತದೆ. ರಸ್ತೆ ಮೂಲಕ ನಿಗದಿತ ಸ್ಥಳ ತಲುಪಲು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ಬೇಕಿತ್ತು. ಪಂಜಾಬಿನ ಡಿಜಿಪಿ ಮತ್ತು ಪೊಲೀಸರಿಂದ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಂಡ ನಂತರ ಪ್ರಧಾನಿ ಮತ್ತು ತಂಡ ರಸ್ತೆಯ ಮೂಲಕ ಪ್ರಯಾಣಿಸಲು ಮುಂದಾಗುತ್ತಾರೆ. ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ 30 ಕಿ.ಮೀ. ದೂರದಲ್ಲಿ ಪ್ರಧಾನಿ ಮೋದಿ ಹಾಗೂ ಅವರ ಬೆಂಗಾವಲು ಪಡೆ ಫ್ಲೈಓವರ್ ತಲುಪಿದಾಗ ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ತಡೆದಿರುವುದು ಕಂಡುಬಂದಿದೆ. ಪ್ರಧಾನಿಯವರು 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿದರು. ಪ್ರಧಾನಿಯ ಪ್ರಯಾಣದ ಮಾರ್ಗ ಮತ್ತು ಯೋಜನೆಯನ್ನು ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ಮುಂಚಿತವಾಗಿ ತಿಳಿಸಲಾಗಿದೆ. ಕಾರ್ಯವಿಧಾನದ ಪ್ರಕಾರ, ಅವರು ಲಾಜಿಸ್ಟಿಕ್ಸ್, ಭದ್ರತೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿತ್ತು. ಸರ್ಕಾರವು ಯಾವುದೇ ಸುರಕ್ಷಿತ ಕ್ರಮ ಮತ್ತು ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಿರಲಿಲ್ಲ. ಪ್ರಧಾನಿ ತೆರಳುವ ಮಾರ್ಗದ ವಿಚಾರ ಇಲ್ಲಿ ಸೋರಿಕೆಯಾಗಿರುವುದು ಕಂಡುಬರುತ್ತದೆ ಮತ್ತು ಸೂಕ್ತ ಭದ್ರತೆಯನ್ನು ನಿಯೋಜಿಸಿರಲಿಲ್ಲ! ಈ ವಿಚಾರದಲ್ಲೂ ಕೂಡ ಭದ್ರತಾ ವೈಫಲ್ಯ ಎದ್ದು ಕಾಣುತ್ತದೆ. ನೆನಪಿಡಿ, ಪಾಕಿಸ್ತಾನದ ಗಡಿ ಪ್ರಧಾನಿ ಟ್ರಾಫಿಕ್ ಅಲ್ಲಿ ಸಿಲುಕಿದ ಜಾಗಕ್ಕಿಂತ ಕೇವಲ 10 ಕಿ.ಮೀ. ದೂರದಲ್ಲಿತ್ತು!


ಪಂಜಾಬಿನಲ್ಲಿ ಇರುವುದು ಕಾಂಗ್ರೇಸ್ ಸರ್ಕಾರ. ಪ್ರಧಾನಿಮಂತ್ರಿಯನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿ ಬದಲು ಮಂತ್ರಿಯೊಬ್ಬರು ಬಂದಿದ್ದರು. ತಮ್ಮ ಕಛೇರಿಯಲ್ಲಿ ಇಬ್ಬರು ಅಧಿಕಾರಿಗಳಿಗೆ ಕೋವಿಡ್ ಬಂದಿರುವ ಕಾರಣ ಮುಖ್ಯಮಂತ್ರಿ ತೆರಳಿಲ್ಲ ಎಂಬ ಕಾರಣ ಕೊಟ್ಟರು. ಆದರೆ, ರಾತ್ರಿ ಎಲ್ಲರೊಂದಿಗೆ ಪತ್ರಿಕಾಗೋಷ್ಟಿಯನ್ನು ನಡೆಸಿದ್ದಾರೆ ಮತ್ತು ಅವರ ಮಾತುಗಳು ಸೂಕ್ಷ್ಮವಾಗಿ ಇದ್ದಂತೆ ತೋರಲೇ ಇಲ್ಲ. ಪ್ರತಿಕುಲ ಹವಾಮಾನದ ಕಾರಣ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗದಲ್ಲಿ ತರಳುವ ಮುನ್ನ ಅಲ್ಲಿನ ಪೊಲೀಸ್ ವ್ಯವಸ್ಥೆಯ ಅನುಮೊದನೆ ಇರುತ್ತದೆ. ಹಾಗಿದ್ದೂ ಪ್ರಧಾನಿಯೊಬ್ಬರು ತೆರಳುವ ಮಾರ್ಗಯಲ್ಲಿ 300-400 ಪ್ರತಿಭಟನಾಕಾರರು ಜಮಾವಣೆಯಾಗಿದ್ದಾದರೂ ಹೇಗೆ? ಅಥವಾ ಅಷ್ಟು ಜನ ಇದ್ದದ್ದು ಗೊತ್ತಿದ್ದರೂ ಅಲ್ಲಿನ ಡಿಜಿಪಿ ಪ್ರಧಾನಿಯವರಿಗೆ ಅನುಮೋದನೆ ಮಾಡಿದ್ದಾದರೂ ಯಾಕೆ? ಫ್ಲೈ-ಓವರ್ ಮೇಲೆ ಪ್ರಧಾನಿ ಅವರ ಗಾಡಿ ಸಿಲುಕಿದ ಮೇಲೆ ದಾರಿಯನ್ನು ತೆರವು ಮಾಡಲು ಪೊಲೀಸರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಪ್ರಧಾನಿಯ ಭದ್ರತಾ ಸಿಬ್ಬಂದಿಗಳಿಗೆ ಸುಮಾರು 45 ನಿಮಿಷಗಳು ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಭಾಜಾಪ ಆರೋಪಿಸಿದೆ.


ಕಾಂಗ್ರೇಸ್ ಅಂತೂ ತೀರ ಕೆಳಮಟದಲ್ಲಿ ಪ್ರತಿಕ್ರಯಿಸಿದೆ. ಭಾರತೀಯ ಯುವಾ ಕಾಂಗ್ರೇಸಿನ ಅಧ್ಯಕ್ಷ 'ಹೌ ಈಸ್ ದಿ ಜೋಶ್' ಎಂದು ಧಿಮಾಕಿನಿಂದ ಟ್ವೀಟ್ ಕೂಡ ಮಾಡಿದ್ದಾರೆ. ಮೋದಿಯವರ ರಾಲಿಗೆ ಕುರ್ಚಿಗಳು ಖಾಲಿ ಇದ್ದ ಕಾರಣ ಈ ರೀತಿ ಟ್ವೀಟ್ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕುರ್ಚಿಗಳು ಖಾಲಿ ಇರಲಿಲ್ಲ ಮತ್ತು ಅಲ್ಲಿ ಮಳೆ ಬರುತ್ತಿದ್ದ ವೀಡಿಯೋ ಸಾಕ್ಷ್ಯಗಳು ಈಗ ಹೊರಬರುತ್ತಿವೆ. ನವಜೋತ್ ಸಿದ್ಧು ಮತ್ತಿತರ ಕೆಲವು ಕಾಂಗ್ರೇಸ್ ನಾಯಕರು ಇದೊಂದು ರಾಜಕೀಯ ನಾಟಕ ಎಂದೆಲ್ಲಾ ಮಾತಾಡಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ನಾಚಿಕೆ ಇಲ್ಲದೆ ಸರ್ದಾರ್ ಪಟೇಲರ ಮಾತಾದ 'ಕರ್ತವ್ಯಕ್ಕಿಂತ ಜೀವದ ಬಗ್ಗೆ ಹೆಚ್ಚು ಕಾಳಜಿವಹಿಸುವವನು ಭಾರತದಂತಹ ದೇಶದಲ್ಲಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದು' ಎಂಬುದನ್ನು ತಮ್ಮ ಟ್ವಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ ಖಾಲಿಸ್ತಾನಿ ಎಂಬ ಭಯೋತ್ಪಾದಕರು ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ತಡೆದವರಿಗೆ 80 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು! ಕಳೆದ ವರ್ಷ ಡಿಸೆಂಬರ್ ಅಲ್ಲಿ ಫ್ಲೈ-ಓವರ್‌ ಮೇಲೆ ಪ್ರಧಾನಿ ಮೋದಿಯವರನ್ನು ಹೇಗೆ ನಿರ್ಬಂಧಿಸಬೇಕು ಎಂಬುದನ್ನು ತೋರಿಸುವ ಕೆಲವು ಅನಿಮೇಟೆಡ್ ವೀಡಿಯೊಗಳು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿವೆ.


Punjab CM Channi Quoting Sardar Patel's Statement

ಕಾಂಗ್ರೇಸ್ ಅಂತೂ ತೀರ ಕೆಳಮಟದಲ್ಲಿ ಪ್ರತಿಕ್ರಯಿಸಿದೆ. ಭಾರತೀಯ ಯುವಾ ಕಾಂಗ್ರೇಸಿನ ಅಧ್ಯಕ್ಷ 'ಹೌ ಈಸ್ ದಿ ಜೋಶ್' ಎಂದು ಧಿಮಾಕಿನಿಂದ ಟ್ವೀಟ್ ಕೂಡ ಮಾಡಿದ್ದಾರೆ. ಮೋದಿಯವರ ರಾಲಿಗೆ ಕುರ್ಚಿಗಳು ಖಾಲಿ ಇದ್ದ ಕಾರಣ ಈ ರೀತಿ ಟ್ವೀಟ್ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕುರ್ಚಿಗಳು ಖಾಲಿ ಇರಲಿಲ್ಲ ಮತ್ತು ಅಲ್ಲಿ ಮಳೆ ಬರುತ್ತಿದ್ದ ವೀಡಿಯೋ ಸಾಕ್ಷ್ಯಗಳು ಈಗ ಹೊರಬರುತ್ತಿವೆ. ನವಜೋತ್ ಸಿದ್ಧು ಮತ್ತಿತರ ಕೆಲವು ಕಾಂಗ್ರೇಸ್ ನಾಯಕರು ಇದೊಂದು ರಾಜಕೀಯ ನಾಟಕ ಎಂದೆಲ್ಲಾ ಮಾತಾಡಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ನಾಚಿಕೆ ಇಲ್ಲದೆ ಸರ್ದಾರ್ ಪಟೇಲರ ಮಾತಾದ 'ಕರ್ತವ್ಯಕ್ಕಿಂತ ಜೀವದ ಬಗ್ಗೆ ಹೆಚ್ಚು ಕಾಳಜಿವಹಿಸುವವನು ಭಾರತದಂತಹ ದೇಶದಲ್ಲಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದು' ಎಂಬುದನ್ನು ತಮ್ಮ ಟ್ವಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ ಖಾಲಿಸ್ತಾನಿ ಎಂಬ ಭಯೋತ್ಪಾದಕರು ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ತಡೆದವರಿಗೆ 80 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು! ಕಳೆದ ವರ್ಷ ಡಿಸೆಂಬರ್ ಅಲ್ಲಿ ಫ್ಲೈ-ಓವರ್‌ ಮೇಲೆ ಪ್ರಧಾನಿ ಮೋದಿಯವರನ್ನು ಹೇಗೆ ನಿರ್ಬಂಧಿಸಬೇಕು ಎಂಬುದನ್ನು ತೋರಿಸುವ ಕೆಲವು ಅನಿಮೇಟೆಡ್ ವೀಡಿಯೊಗಳು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿವೆ.

2024 ರಲ್ಲಿ ಶತಾಯ ಗತಾಯ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಭಾರತ ವಿರೋಧಿ ಶಕ್ತಿಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಈ ಘಟನೆಗಳೆಲ್ಲಾ ಅದಕ್ಕೆ ಪೂರ್ವ ತಯಾರಿಯಂತಿದೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟಿನ ಮುಂದಿನ ನಡೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

***********************************

References:

1. Khalistan Terror Group Had Announced Rs 80 Lakh Reward For Blocking PM Modi
2. Khalistanis had shared animated video showing how they want to block PM Modi

1 comment:

  1. Sir nicely pointed out the flaws of Congress party, the loopholes of our system, grave internal threat that we are facing within the Country day to day through foreign funded NGOs. I feel nothing is possible unless Modiji brings in a major change in system, the way police functions, the way politicians function, the way court, lawyers and Supreme court functions....it's high time now to wrap up British law & orders & their style of functioning too, and there has to be a law to fix responsibility of the system and also each & every citizen, society should become corruption free. Once this happens, it's a dream comes true for India and our Bharat will touch sky heights & become Vishwaguru in all aspects, leaving behind the current world order only to watch Bharat cluelessly.��

    ReplyDelete