February 23, 2022

ಕಾಂಗ್ರೇಸ್ ಕಾಲದ ಮತ್ತೊಂದು ಬಹುಕೋಟಿ ಹಗರಣ

ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಹತ್ತು ವರ್ಷಗಳ ಕಾಲ ಕಾಂಗ್ರೇಸಿನ ಯೂಪಿಎ ಸರ್ಕಾರವಿತ್ತು. ದಿನ ಬೆಳಗಾದರೆ ಯಾವುದಾದರೂ ಹಗರಣದ ಸುದ್ಧಿಯೊಂದು ಕಿವಿಗೆ ಅಪ್ಪಳಿಸುತ್ತಿತ್ತು. 2ಜಿ ಸ್ಪೆಕ್ಟ್ರಂ, ಕಾಮನ್ವೆಲ್ತ್, ಆದರ್ಶ ಹೌಸಿಂಗ್ ಸೊಸೈಟಿ, ಸತ್ಯಂ ಕಂಪ್ಯೂಟರ್ಸ್ ಹಗರಣ. ಹೀಗೆ ಕೆಲವನ್ನು ಹೆಸರಿಸಬಹುದು ಆದರೆ ಪಟ್ಟಿ ದೊಡ್ಡದಿದೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಬಹುಕೋಟಿ ರೂಪಾಯಿಗಳ ಸಾಲ ಪಡೆದದ್ದು ಸಹ ಇದೇ ಯೂಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ. ಈಗ ಮತ್ತೊಂದು ಬಹುಕೋಟಿ ಹಗರಣದ ವಿರುದ್ಧ ಕೇಸ್ ದಾಖಲಾಗಿದೆ. ಕಳೆದ ಬುಧವಾರ ಜಾರಿ ನಿರ್ದೇಶನಾಲಯವು ಗುಜರಾತ್ ಮೂಲದ ಎಬಿಜಿ ಶಿಪ್‌ಯಾರ್ಡ್ ಕಂಪನಿ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಈ ಹಗರಣ ಮೊತ್ತ 22,842 ಕೋಟಿ ರೂಪಾಯಿಗಳು!

ABG Shipyard Limited under CBI Scanner
 
ಎಬಿಜಿ ಒಂದು ಶಿಪ್ ಯಾರ್ಡ್ ಕಂಪನಿ. ಸುಮಾರು 20 ಟನ್ ತೂಕದ ಹಡಗುಗಳನ್ನು ತಯಾರಿಸುವ ಮತ್ತು ದುರಸ್ತಿ ಮಾಡುವ ಸಾಮರ್ಥ್ಯ ಹೊಂದಿರುವ ಭಾರತದ ಅತೀದೊಡ್ಡ ಖಾಸಗಿ ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ. ಇಂತಹ ಕಂಪನಿಗಳಿಗೆ ತಮ್ಮ ವ್ಯವಹಾರವನ್ನು ನಿರ್ವಹಿಸಲು ದೇಶದ ಹಣಕಾಸು ಸಂಸ್ಥೆಗಳ ಬೆಂಬಲ ಅಗತ್ಯವಿರುತ್ತದೆ. ಅಂತೆಯೆ ಈ ಕಂಪನಿಗೂ ಸಹ ಭಾರತದ 28 ಬ್ಯಾಂಕುಗಳು ಸಾಲವನ್ನು ನೀಡಿತು. ಸಾಲ ಪಡೆದುಕೊಳ್ಳುವುದರಲ್ಲಿ ಏನು ಸಮಸ್ಯೆ ಇರಲಿಲ್ಲ. ಒಪ್ಪಂದದ ಪ್ರಕಾರ ಸಾಲವನ್ನು ಕಂತುಗಳಲ್ಲಿ ಹಿಂತಿರುಗಿಸಬೇಕಿತ್ತು. ಆದರೆ, ಈ ಕಂಪನಿ ಸಾಲವನ್ನು ಹಿಂದಿರುಗಿಸುವ ಲಕ್ಷಣ ಕಾಣಿಸಲಿಲ್ಲ. ಆದರೂ ಸಹ ಬ್ಯಾಂಕುಗಳು ಮತ್ತೆ ಮತ್ತೆ ಸಾಲವನ್ನು ನೀಡಿತು. ಸಾಲದ ಮೊತ್ತ 15 ಸಾವಿರ ಕೋಟಿ, ಬಡ್ಡಿ ಸೇರಿ 22 ಸಾವಿರ ಕೋಟಿ ರೂಪಾಯಿಗೂ ಹೆಚ್ಚಾಯಿತು. 2013 ನವೆಂಬರಲ್ಲಿ ಈ ಕಂಪನಿಯ ಅಕೌಂಟ್ ಅನ್ನು ಕಾರ್ಯ ನಿರ್ವಹಿಸದ ಖಾತೆ ಎಂದು ವರ್ಗೀಕರಿಸಲಾಯಿತು. 2014 ರಲ್ಲಿ ಕಂಪನಿ ಪುನಶ್ಚೇತನಗೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಅವರ ಅಕೌಂಟನ್ನು ನಿರ್ಬಂಧಿಸಲಾಯಿತು. ಸಾಲಕೊಟ್ಟ ಬ್ಯಾಂಕ್ 2018 ರಲ್ಲಿ ಈ ಅಂಡ್ ವೈ ಎಂಬ ಲೆಕ್ಕ ಪರಿಶೋಧನಾ ಸಂಸ್ಥೆಗೆ ಆಡಿಟ್ ನಡೆಸಲು ತಿಳಿಸುತ್ತಾರೆ. ಈ ಸಂಸ್ಥೆ ಪರಿಶೀಲನೆ ನಡಿಸಿ ಇಲ್ಲೊಂದು ಬಹುಕೋಟಿ ರೂಪಾಯಿ ಹಗರಣ ನಡೆದಿದೆ ಎಂಬುದನ್ನು ಬಹಿರಂಗ ಪಡಿಸುತ್ತದೆ. ನಂತರ 2019 ರಲ್ಲಿ ಸಿಬಿಐ ಈ ಕಂಪನಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಇವರಿಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸುತ್ತದೆ.

ಪ್ರಕರಣದ ಪ್ರಮುಖ ಆರೋಪಿ ಕಂಪನಿಯ ಛೇರ್ಮನ್ ರಿಷಿ ಕಮಲೇಶ್ ಮತ್ತು ಇತರ ಪ್ರಮುಖ ಆರೋಪಿಗಳು ಸಿಗದಿದ್ದಾಗ ಸಿಬಿಐ ಲುಕ್ ಔಟ್ ನೋಟಿಸ್ ಜಾರಿ ಮಾಡುತ್ತದೆ. ಇದಾಗುತ್ತಿದ್ದಂತೆ ಕಾಂಗ್ರೇಸಿನ ವಕ್ತಾರ ಸುರ್ಜೇವಾಲ ಈ ಪ್ರಕರಣವನ್ನು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿ ಟ್ವೀಟ್ ಮಾಡಿದ್ದಾರೆ.

Tweets of Congress Spokesperson Randeep Surjewala
 
1985 ರಲ್ಲಿ 278 ಕೋಟಿ ರೂಪಾಯಿಯ ಬಂಡವಾಳದೊಂದಿಗೆ ಶುರುವಾದ ಈ ಕಂಪನಿ 2010 ಹೊತ್ತಿಗೆ 5394 ಕೋಟಿಯಷ್ಟು ವಹಿವಾಟು ಮಾಡುತ್ತದೆ. 2009 ರಲ್ಲಿ ಹನ್ನೊಂದು ವಾಟರ್ ಜೆಟ್ ಇಂಟರ್ಸೆಪ್ಟರ್ ತಯಾರಿಸುವ ಅವಕಾಶ ಈ ಕಂಪನಿಗೆ ಸಿಗುತ್ತದೆ. 2010 ರ ಅಕ್ಟೋಬರಲ್ಲಿ ವೆಸ್ಟರ್ನ್ ಇಂಡಿಯಾ ಶಿಪ್ ಯಾರ್ಡ್ ಲಿಮಿಟೆಡ್ ಎನ್ನುವ ಮತ್ತೊಂದು ಕಂಪನಿಯನ್ನು ಸ್ವಾಧೀನಪಡಿಸಿಕೊಂಡು ಗೋವಾದಲ್ಲಿ ಹಡಗು ದುರಸ್ತಿ ಘಟಕವನ್ನು ನಿರ್ವಹಿಸುತ್ತಿದೆ. ಇದರ ಹಿಂದೆ ಬಂಡವಾಳ ಹಾಕಿದ್ದು ಈ ದೇಶದ ಬ್ಯಾಂಕುಗಳು ಮತ್ತು ಸಾರ್ವಜನಿಕ ವಲಯದ ಘಟಕಗಳು. 2011 ರಲ್ಲಿ 9700 ಕೋಟಿ ರೂಪಾಯಿ ಮೌಲ್ಯದ ಎರಡು ನೌಕಾದಳದ ಹಡಗನ್ನು ನಿರ್ಮಾಣ ಮಾಡುವ ಟೆಂಡರ್ ಈ ಕಂಪನಿಯ ಪಾಲಾಗುತ್ತದೆ. ಮುಂದಿನ ವರ್ಷ 500 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಮತ್ತೆ ಇದೇ ಕಂಪನಿಯ ಪಾಲಾಗುತ್ತದೆ. ಬ್ಯಾಂಕುಗಳಿಂದ ಸಾಲ ಪಡೆದ ಈ ಕಂಪನಿ ಹಣವನ್ನು ಹಿಂದಿರುಗಿಸದಿದ್ದರೂ ಮತ್ತೆ ಮತ್ತೆ ಸಾಲ ಪಡೆದುದ್ದರ ಹಿಂದೆ ಇರುವ ಕೈವಾಡ ಯಾರದ್ದು ಎಂಬುದು ಪ್ರಶ್ನೆಯಾಗಿದೆ.

ಈ ಹಗರಣದ ಬಗ್ಗೆ ಅಂದಿನ ಕಾಂಗ್ರೇಸ್ ಸರ್ಕಾರ ಎಳ್ಳಷ್ಟೂ ತಲೆಕೆಡಿಸಿಕೊಂಡಿರಲಿಲ್ಲ. 2014 ತನಕ ಸರ್ಕಾರದ ಯಾವುದೇ ಸಂಸ್ಥೆ ಇದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಹಾಗೆ ನೋಡಿದರೆ ಈ ಪ್ರಕರಣದ ಹಿಂದೆ ಬಿದ್ದು, ಪರಿಹರಿಸಲು ಮುಂದಾದದ್ದು ಮೋದಿ ಸರ್ಕಾರವೇ. ಸಾರ್ವಜನಿಕ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಇಂತಹವರ ವಿರುದ್ಧ ಸರ್ಕಾರ, ಹಣಕಾಸು ಸಂಸ್ಥೆ, ಸಾರ್ವಜನಿಕರು ಒಂದಾಗುವ ಅಗತ್ಯವಿದೆ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು ಎನ್ನುವಂತೆ ತಾವು ಹಗರಣಕ್ಕೆ ಅವಕಾಶ ಮಾಡಿಕೊಟ್ಟು ಪ್ರಕರಣ ಹೊರಬರುತ್ತಿದ್ದಂತೆ ಈಗಿನ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಕಾಂಗ್ರೇಸ್ ನಾಯಕರ ವರ್ತನೆಯಾಗಿದೆ! ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಇಲ್ಲವಾದರೂ ಅವರ ಆಡಳಿತದಲ್ಲಿ ನಡೆದಿರುವ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ ಅಷ್ಟೇ!

***********************************************************

References:

February 12, 2022

ಅವರನ್ನು ಭಡಕಾಯಿಸೋದು ತುಂಬಾ ಸುಲಭ!

ಒಂದು ಕಾಲವಿತ್ತು, ಗುರುಗಳು ಮತ್ತು ವಿದ್ಯಾರ್ಥಿಗಳ ನಡುವೆ ಪಠ್ಯದ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ತರಗತಿಯಲ್ಲಿ ಅರ್ಥವಾಗದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಗುರುಗಳಿಗೆ ಪ್ರಶ್ನೆ ಕೇಳಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೆ ಕಳೆದ ವಾರದಿಂದ ರಾಜ್ಯಾದ್ಯಂತ ಕೆಲವು ಮಕ್ಕಳು ಗುರುಗಳಿಗೆ ಎದುರು ಮಾತಾಡುವ, ಪಾಠ ಮಾಡುವ ಮಟ್ಟಕ್ಕೆ ಇಳಿದ್ದಿದ್ದಾರೆ. ಹೌದು, ಇಳಿದ್ದಿದ್ದಾರೆ ಎಂದೇ ಹೇಳಬೇಕು. ಗುರುಗಳ ಎದುರು ವಾಗ್ವಾದ ಮಾಡುತ್ತಿರುವುದು ವಿಜ್ಞಾನ ಅಥವಾ ಗಣಿತದ ವಿಚಾರಕ್ಕೆ ಅಲ್ಲ. ಶಿಕ್ಷಣಕ್ಕಿಂತ ಧರ್ಮ ಮುಖ್ಯ, ಶಾಲೆಗೆ ಬರುವಾಗ ಹಿಜಾಬ್ ಧರಿಸಿಯೇ ಬರುತ್ತೇವೆ ಎಂಬ ವಿಚಾರಕ್ಕೆ! ಈ ಹಿಜಾಬ್ ವಿಚಾರ ರಾಜ್ಯಾದ್ಯಂತ ರಾಡಿ ಎಬ್ಬಿಸಿಬಿಟ್ಟಿದೆ. ಗಮನಿಸಬೇಕಾದ ಅಂಶವೆಂದರೆ ಈ ಹಿಜಾಬ್ ವಿವಾದ ಶುರುವಾಗಿದ್ದು ಉಡುಪಿಯ ಸರ್ಕಾರಿ ಕಾಲೇಜಿನ 5-6 ವಿದ್ಯಾರ್ಥಿನಿಯರಿಂದ!

This is where it all started

ಇಷ್ಟು ವರ್ಷಗಳಿಂದ ಕರ್ನಾಟಕದ ಮಟ್ಟಿಗೆ ಇಲ್ಲದ ಒಂದು ವಿವಾದ ಹೊಸದಾಗಿ ಶುರುವಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳು ಕಾಲೇಜಿಗೆ ಹಿಜಾಬ್ ಧರಿಸಿಯೇ ಬರಬೇಕು ಎಂದು. ವಿವಾದ ಹೊಸದಾದರೂ ವಿಚಾರ ಹಳೆಯದ್ದೇ ಮತ್ತು ವಿವಾದ ಹುಟ್ಟಿರುವ ಸಮಯವೂ ಹಳೆಯದ್ದೇ. ವಿಧಾನಸಭೆ ಚುಣಾವಣೆ ಎದುರಾದಾಗಲೆಲ್ಲಾ ಒಂದಲ್ಲಾ ಒಂದು ವಿವಾದ ಹುಟ್ಟಿಕೊಂಡು ತೀವ್ರಸ್ವರೂಪ ಪಡೆದುಕೊಳ್ಳುವುದು ಸಹಜವೆಂಬಂತೆ ಆಗಿದೆ. ನೆನಪಿಸಿಕೊಳ್ಳಿ, ಎಂ ಕಲಬುರ್ಗಿ ಹತ್ಯೆ ಪ್ರಕರಣ, ಅಸಹಿಷ್ಣುತೆ, ಅವಾರ್ಡ್ ವಾಪ್ಸಿ, ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣ, ಸಿಎಎ ನೆಪದಲ್ಲಿ ಶಹೀನ್ ಭಾಗ್, ಕಳೆದ ವರ್ಷ ನಡೆದ ಸೋಕಾಲ್ಡ್ ರೈತರ ಪ್ರತಿಭಟನೆ. ಈಗ, 10ನೇ ತಾರೀಖಿನಿಂದ ಪಂಚರಾಜ್ಯಗಳಾದ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್ ಮತ್ತು ಉತ್ತರಪ್ರದೇಶದಲ್ಲಿ ಚುಣಾವಣೆ ಶುರುವಾಗಲಿದೆ. ಅದೇ ಸಮಯದಲ್ಲಿ ಹಿಜಾಬ್ ವಿವಾದ. ಮುಂದಿನ ವರ್ಷ ಕರ್ನಾಟಕದಲ್ಲಿ ಚುಣಾವಣೆ ಇದೆ. ರಾಜ್ಯದ ಜನತೆ ಇನ್ನೂ ಏನೇನು ನೋಡಬೇಕೊ?

ವಿಚಾರವೊಂದನ್ನು ತೆಗೆದುಕೊಂಡು ವಿವಾದವನ್ನಾಗಿ ಪರಿವರ್ತಿಸುವ ವ್ಯವಸ್ಥೆ ಪಕ್ಕಾ ರೂಪುಗೊಂಡಿದೆ. ಈ ಹಿಜಾಬ್ ವಿಚಾರವನ್ನೇ ನೋಡಿ, ಮೊದಲು ಉಡುಪಿಯ ಕಾಲೇಜಿನಲ್ಲಿ ಶುರುವಾಯಿತು. ಯಾವಾಗ ಕಾಲೇಜು ಅಡಳಿತ ಮಂಡಳಿ ಗಟ್ಟಿಯಾಗಿ ನಿಂತರೋ ಆಗ ವಿದ್ಯಾರ್ಥಿನಿಯರ ಪೋಷಕರು ಪ್ರತಿಭಟನೆಗೆ ಬಂದರು. ಜಿಲ್ಲಾಡಳಿತ ವಿವಾದವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ವಿವಾದ ಮಾಡಲೇಬೇಕು ಎಂದು ತೀರ್ಮಾನಿಸಿದ್ದವರಿಗೆ ಅರ್ಥಮಾಡಿಸುವುದಾದರು ಏನು ಮತ್ತು ಹೇಗೆ? ನಂತರ ಇತರ ಜಿಲ್ಲೆಗಳಿಗೂ ಈ ವಿವಾದ ಹಬ್ಬಿತು. ಶಿವಮೊಗ್ಗದಲ್ಲಿ 2 ದಿನಗಳ ಕಾಲ ನಿಶೇದಾಜ್ಞೆ ಕೂಡ ಲಾಗು ಆಗಿ ಸಾರ್ವಜನಿಕ ಕಾರ್ಯಕ್ರಮಗಳು ರದ್ದಾದವು, 3 ದಿನಗಳ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರು. ಈ ಹಿಜಾಬ್ ಧರಿಸಲೇಬೇಕು ಎಂದು ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಮಾಡುವ, ಸಮಾನತೆಯಿಂದ ಬದುಕುವ ಬದಲಿಗೆ ತಾವು ಮುಸ್ಲೀಮರು, ಎಲ್ಲರಿಗಿಂತಲೂ ಭಿನ್ನ ಎಂಬ ತೋರಿಕೆ ಹೆಚ್ಚಾಗಿದೆ. ಅವರು ಹಿಜಾಬ್ ಬೇಕೆಂದು ಗಲಾಟೆ ಶುರು ಮಾಡಿದರು. ನಾವು ಯಾರಿಗೇನು ಕಮ್ಮಿ ಎಂದು ಹಿಂದೂ ಹುಡುಗರು ಕೇಸರಿ ಶಾಲು ಹೊದ್ದು ರಸ್ತೆಗೆ ಇಳಿದರು. ಈ ಕೇಸರಿ-ಹಿಜಾಬ್ ಜಗಳದ ನಡುವೆ ವಿದ್ಯಾಭಾಸವಾಯಿತು ಅಷ್ಟೇ. ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಹೈರಾಣಾಗಿದ್ದ ಬದುಕು ಮತ್ತೆ ಚೇತರಿಸಿಕೊಳ್ಳುವ ಹೊತ್ತಲ್ಲಿ ಇಂತಹ ಪ್ರತಿಭಟನೆ, ಗಲಾಟೆ ಮಾಡುವವರು ಎಂತಹ ಹೀನ ಮನಸ್ಥಿತಿ ಇರಬೇಕು ಯೋಚಿಸಿ.

ಕೆಲ ವರ್ಷಗಳ ಹಿಂದೆ ದಲಿತರ ಹೆಗಲ ಮೇಲೆ ಕೋವಿ ಇಟ್ಟು ಗುಂಡು ಹಾರಿಸುವ ಕೆಲಸ ಮಾಡಿದ ರಾಜಕೀಯ ಮತ್ತು ಇತರ ಸಮಯ ಸಾಧಕರು ಈಗ ಮಕ್ಕಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಕಳೆದ ವರ್ಷ ಜನವರಿ 26 ರಂದು ಕೆಂಪುಕೋಟೆಯಲ್ಲಿ ನಡೆದ ರಾದ್ಧಾಂತ ನೆನಪಿರಬೇಕಲ್ಲ. ಆಗ ಮಾತನಾಡದಿದ್ದ ಕಾಂಗ್ರೇಸ್ ಮುಖಂಡರು ಈಗ ಶಿವಮೊಗ್ಗದ ಧ್ವಜಸ್ತಂಭವೊಂದರಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಬಾವುಟವನ್ನು ಹಾರಿಸಿದರು ಎಂಬ ಹುರುಳಿಲ್ಲದ ಆರೋಪವನ್ನು ಹಿಂದೂಗಳ ಮೇಲೆ ಮಾಡುವುದನ್ನು ಮರೆಯಲಿಲ್ಲ. ಆದರೆ, ಆ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದದ್ದು ಗಣರಾಜ್ಯೊತ್ಸವ ಮತ್ತು ಸ್ವತಂತ್ರ್ಯ ದಿನಗಳಂದು ಮಾತ್ರ ಎಂದು ಅಲ್ಲಿನ ಎಸ್.ಪಿ. ಸ್ಪಷ್ಟನೆ ಕೊಟ್ಟಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹವರು ರಾಷ್ಟ್ರಧ್ವಜದ ಗೌರವದಿಂದ ಮಾತಾಡಿದಾಗಲೇ ಅನುಮಾನ ವ್ಯಕ್ತವಾಗುವುದು!

ಜಾತಿ, ಮತ ಅಥವಾ ಧರ್ಮವನ್ನು ಪಾಲಿಸುವುದಕ್ಕೆ ಯಾರದ್ದೂ ಆಕ್ಷೇಪವಿಲ್ಲ. ಆದರೆ, ಅದರ ಪರಿಪಾಲನೆ ನಮ್ಮ ನಮ್ಮ ಮನೆಗಳಲ್ಲಿ ಇರಬೇಕೆ ಹೊರತು ಸಮಾನತೆಯ ಸಂಕೇತವಾದ ಶಾಲೆಗಳಲ್ಲಿ ಈ ರೀತಿ ಧರ್ಮವನ್ನು ತರುವುದು ನಿಜಕ್ಕೂ ಖಂಡನೀಯ. ಕಟ್ಟರ್ ಇಸ್ಲಾಂ ದೇಶಗಳಲ್ಲಿ, ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಹಿಜಾಬ್ ಬೇಡ ಎಂಬ ಕೂಗು ಏಳುತ್ತಿದೆ ಅಂತಹುದರಲ್ಲಿ ಭಾರತದಲ್ಲಿ ಈ ವಿವಾದ ಎದ್ದಿರುವುದು ನಿಜಕ್ಕೂ ವಿಷಾದನೀಯ. ವಿದ್ಯಾರ್ಥಿಗಳಿಗೆ 'ಈ ಕೇಸರಿ ಶಾಲು, ಹೋರಾಟ, ರಾಜಕೀಯ ಯಾಕೆ ನಿನಗೆ? ನೀನಾಯಿತು ನಿನ್ನ ಓದಾಯಿತು ಅಂತ ಇರು' ಎಂದು ಹೇಳುವ ಹಿಂದೂ ಪೋಷಕರನೇಕರನ್ನು ನಾವು ಕಾಣಬಹುದು. ಆದರೆ 'ಈ ಹಿಜಾಬ್, ಪ್ರತಿಭಟನೆ, ಅಲ್ಲಾ ಹೋ ಅಕ್ಬರ್ ಅನ್ನೊದೆಲ್ಲಾ ಬಿಟ್ಟು ಓದು, ವಿದ್ಯಾಭ್ಯಾಸ ಮುಖ್ಯ' ಎಂದು ಹೇಳುವ ಮುಸಲ್ಮಾನ್ ಎಷ್ಟು ಜನ ಇದ್ದಾರೆ? ಅನ್ನುವುದು ಪ್ರಶ್ನೆ.

Women from the 41st generation direct descendant of Prophet Mohammad


Afghanistan women protest against Burqa culture

ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಪರವಾಗಿ ಅಲ್ಲಾ ಹೋ ಅಕ್ಬರ್ ಎಂದು ಆಕ್ರೋಶದಿಂದ ಕೇಸರಿ ತೊಟ್ಟ ವಿದ್ಯಾರ್ಥಿ ಪಡೆ ಎದುರಿಗೆ ಕೂಗುತ್ತಾ ಓಡಾಡಿದ ವೀಡಿಯೋ ಎಲ್ಲೆಡೆ ಹರಿದಾಡಿತು. ಈ ಕ್ರಮಕ್ಕಾಗಿ ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್ ಆಕೆಗೆ 5 ಲಕ್ಷ ರೂಪಾಯಿ ಬಹುಮನವನ್ನು ಘೋಷಿಸಿದೆ! ಆಕೆಯನ್ನು ಹುಲಿ, ನಿರ್ಭೀತೆ ಎಂದೆಲ್ಲಾ ಕೆಲವರು ಹೊಗಳಿದ್ದಾರೆ. ಈ ಘಟನೆಯ ಕುರಿತು ಉತ್ತರಪ್ರದೇಶದ ಗೋಸಂರಕ್ಷ ಫೈಜ್ ಖಾನರ ಮತಾಡುತ್ತಾ 'ಆಕೆ ಹಿಂದೆ ಇದ್ದದ್ದು ಹಿಂದೂ ಹುಡುಗರು ಹಾಗಾಗಿ ಆಕೆ ಈಗಲೂ ಆರಾಮಾಗಿ ಇದ್ದಾಳೆ ಮತ್ತು ಖ್ಯಾತಿಯನ್ನು ಪಡೆಯುತ್ತಿದ್ದಾಳೆ. ಇದೇ ರೀತಿ ಪಾಕಿಸ್ತಾನದಲ್ಲೋ ಅಥವಾ ಇಲ್ಲೆಲ್ಲೋ ಮುಸಲ್ಮಾನರ ಎದುರಿಗೆ ಜೈ ಶ್ರೀರಾಮ್ ಎಂದು ಕೂಗಿದ್ದರೆ ಆಕೆ ಬದುಕುತ್ತಿದ್ದಳಾ? ಜೈ ಶ್ರೀರಾಮ್ ಬಿಡಿ, ತಮ್ಮದೇ ಜನರ ನಡುವೆ ನಾನು ಬುರ್ಖಾ ಹಾಕಲ್ಲ ಎಂದಿದ್ದರೆ ಆಕೆಯನ್ನು ಕಲ್ಲು ಹೊಡೆದು ಸಾಯಿಸುತ್ತಿದ್ದರು' ಎಂದು ಹೇಳಿದರು. ಇದು ಸಹಜ ಮತ್ತು ಸತ್ಯಕ್ಕೆ ದೂರವಾದ ಮಾತಲ್ಲ!

ಇದೆಲ್ಲದರ ನಡುವೆ ನಾವು ಮರೆತು ಹೋದದ್ದು ಎಂದರೆ ತಮಿಳುನಾಡಿದ ಲಾವಣ್ಯ ಸಾವಿನ ಪ್ರಕರಣ. ಆಕೆಯ ಸಾವು ನಮ್ಮ ರಕ್ತವನ್ನು ಬೆಚ್ಚಗಾಗಿಸಲಿಲ್ಲ. ಆದರೆ, ಫೇಸ್ಬುಕ್ಕಿನಲ್ಲಿ ಹಾಕಿದ ಒಂದು ಪೊಸ್ಟ್ ಕಾರಣವಾಗಿಟ್ಟುಕೊಂಡು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣ ನಡೆಸಿದರು, ಹಿಂದೂ ದೇವರ ಪಾದದ ಹತ್ತಿರ ಖುರಾನ್ ಇಟ್ಟಿದ್ದರು ಎಂಬ ವೀಡಿಯೋ ಕಾರಣ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ಮಾಡಿದರು, ಫೈಗಂಬರರ ಕಾರ್ಟೂನ್ ಚಿತ್ರ ಬಿಡಿಸಿದ ಕಾರಣ ಫ್ರಾನ್ಸಿನಲ್ಲಿ ಶಿಕ್ಷಕರೊಬ್ಬರ ತಲೆಯನ್ನು ಕಡಿದರು. ಈಗಲೂ ಸಹ ಹಿಜಾಬ್ ವಿವಾದ ಶುರುವಾದದ್ದು ಕೇವಲ 6 ವಿದ್ಯಾರ್ಥಿನಿಯರ ಕಾರಣದಿಂದಾಗಿ. ಇದನ್ನೆಲ್ಲಾ ಗಮನಿಸಿದರೆ ಅವರಿಗೆ ಧರ್ಮವೆಂಬುದು ನಿಜಕ್ಕೂ ಅಫೀಮಿದ್ದಂತೆ. ಅವಕಾಶವಾದಿಗಳ ಒಂದು ಸಣ್ಣ ಕಿಡಿ ಸಾಕು ವಿವಾದಗಳು ಹೊತ್ತಿಕೊಳ್ಳಲು. ಅದಕ್ಕೆ ಹೇಳಿದ್ದು ಅವರನ್ನು ಭಡಕಾಯಿಸೋದು ತುಂಬಾ ಸುಲಭ ಎಂದು.

***********************************************************

References: