April 29, 2022

ಸೌಹಾರ್ದತೆಯ ಪಾಠ ನಿಜಕ್ಕೂ ಅಗಬೇಕಾಗಿರುವುದು ಯಾರಿಗೆ?

ಹಿಂದೂ ಈಗ ಜಾಗೃತವಾಗಿದ್ದಾನೆ. ತನ್ನ ಮೇಲೆ ನೇರ ಹಾಗೂ ಪರೋಕ್ಷವಾಗಿ ಆಗುತ್ತಿರುವ ದಬ್ಬಾಳಿಕೆಯ ವಿರುದ್ಧ ದನಿ ಎತ್ತುತ್ತಿದ್ದಾನೆ. ಶಾಲಾ ಸಮವಸ್ತ್ರದ ಪರವಾಗಿ ಹೈಕೋರ್ಟ್ ತೀರ್ಪು ಬಂದಾಗ ನೆಲದ ಕಾನೂನನ್ನು ಗೌರವಿಸದೇ ಒಂದು ಸಮುದಾಯದ ಕೆಲವರು ತಮ್ಮ ವ್ಯಾಪಾರವನ್ನು ಬಂದ್ ಮಾಡಿದರು. ಇದರ ಬೆನ್ನಲ್ಲೇ ಹರ್ಷನ ಕೊಲೆ ಘಟಿಸಿತು, ಆತನ ಶವಯಾತ್ರೆ ಸಮಯದಲ್ಲಿ ಅಹಿತಕಾರಿ ಘಟನೆಗಳು ನಡೆಯಿತು. ಈ ಎಲ್ಲಾ ಘಟನೆ ಹಾಗೂ ಮುಖ್ಯವಾಗಿ ನಮ್ಮ ನೆಲದ ಕಾನೂನನ್ನು ಗೌರವಿಸದಿರುವುದು ಹಿಂದೂವನ್ನು ಒಗ್ಗೂಡಿಸಿಬಿಟ್ಟಿತು. ಹಲಾಲ್ ವಿಚಾರ ಬಂದ ಮೇಲೆ ಹಿಂದೂ ಸಮಾಜ ಅರ್ಥಿಕವಾಗಿ ಗಮನ ಹರಿಸಲು ಪ್ರಾರಂಭಿಸಿತು. ಜಾತ್ರೆ ಸಂದರ್ಭದಲ್ಲಿ ಮುಸಲ್ಮಾನರು ದೇವಾಲಯಗಳ ಹತ್ತಿರ ವ್ಯಾಪಾರ ಮಾಡಬಾರದು, ಹಲಾಲ್ ಬದಲು ಜಟ್ಕಾ ಮಾಂಸವನ್ನು ಕೊಳ್ಳುವ ಸಂಕಲ್ಪ ಮಾಡಿದರು, ಇದರ ಬೆನ್ನಲ್ಲೇ ದೇಶದ ಕೆಲವು ರಾಜ್ಯಗಳಲ್ಲಿ ಹನುಮ ಜಯಂತಿ ದಿವಸ ನಡೆದ ಜಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು. ಈಗ ಅಕ್ಷಯ ತೃತೀಯ ಬರುತ್ತಿದೆ. ಹಿಂದೂಗಳು ಒಡವೆಯನ್ನು ಹಿಂದೂ ಅಂಗಡಿಯಲ್ಲೇ ಖರೀದಿ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದು ಜಾಗೃತಿಯ ಸಂಕೇತವಾದರೂ ಸೌಹರ್ದತೆಯ ಲಕ್ಷಣವಂತೂ ಅಲ್ಲ. ಹಾಗಾದರೇ ಸೌಹಾರ್ದತೆಯ ಪಾಠ ಆಗಬೇಕಾಗಿರುವುದು ಯಾರಿಗೆ?

ಈ ಪ್ರಶ್ನೆಗೆ ಉತ್ತರ ಹೇಳಲು ಇತಿಹಾಸದ ಕೆಲವು ಪುಟಗಳನ್ನು ಅವಲೋಕಿಸುವುದು ಅವಶ್ಯ. ಅಲೆಕ್ಶಾಂಡರ್ ನ ಕಾಲದಿಂದ ಹಿಡಿದು ಸ್ವಾತಂತ್ರ್ಯ ಬರುವವರೆಗೂ ಅಸಂಖ್ಯ ಆಕ್ರಮಣಗಳು ಭಾರತದ ಮೇಲಾಗಿದೆ. ಗ್ರೀಕರು, ಶಖರು, ಕುಶಾನರು, ಹೂಣರು ನಮ್ಮ ದೇಶದ ಸಾಮಾನ್ಯ ಜನರ ಮೇಲೆ ಬರ್ಬರವಾಗಿ ಆಕ್ರಮಣ ಮಾಡುತ್ತಾರೆ. ಕಾಲಕ್ರಮದಲ್ಲಿ ಈ ದಾಳಿಕೋರರನ್ನು ಎದುರಿಸಿ, ಅವರ ಹುಟ್ಟಡಗಿಸಿ ಭಾರತ ಅವರೆಲ್ಲರನ್ನೂ ತನ್ನೊಳಗೆ ಜೀರ್ಣೀಸಿಕೊಳ್ಳುತ್ತದೆ. ಅವರೆಲ್ಲರೂ ಭಾರತದ ಸಂಸ್ಕೃತಿಯೊಂದಿಗೆ ಏಕರಸವಾಗುತ್ತಾರೆ. ಭಾರತ ತಾನಾಗೇ ಯಾರ ಮೇಲೂ ಏರಿಹೋಗದೇ ತನ್ನ ಮೇಲೆ ಆಕ್ರಮಣ ಮಾಡಿದವರನ್ನು ಎದುರಿಸಿ, ಹಿಂದೂ ಸಂಸ್ಕೃತಿಯನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ.  ಹತ್ತನೇ ಶತಮಾನದ ಹೊತ್ತಿಗೆ ಭಾರತದ ಮೇಲೆ ಅರಬ್ಬಿನ ಮುಸಲ್ಮಾನರ ಆಕ್ರಮಣ ಪ್ರಾರಂಭವಾಗುತ್ತದೆ. ಘೋರಿ, ಘಜ್ನಿ, ಅಫ್ಘ್ನನ್ನರು, ಮೊಘಲರು, ಕಿಲ್ಜೀ, ತುಗ್ಲಕ್ ಸಂತತಿ ಹೀಗೆ ಒಬ್ಬರ ಹಿಂದೆ ಒಬ್ಬರು ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಾರೆ. ಇವರ ಆಕ್ರಮಣದ ಉದ್ದೇಶ ಲೂಟಿ ಮಾಡುವುದಷ್ಟೇ ಆಗಿರಲಿಲ್ಲ ಬದಲಾಗಿ ಈ ದೇಶದ ಅಸ್ಮಿತೆ, ಸಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದ್ದಂತಹ ದೇವಾಲಯಗಳನ್ನು ನಾಶ ಮಾಡುವುದಾಗಿತ್ತು. ಪ್ರತಿಯೊಬ್ಬ ದಾಳಿಕೋರನು ತನ್ನನ್ನು ತಾನು ಬುತ್ಷಿಕನ್; ಮೂರ್ತಿ ಭಂಜಕ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಿದ್ದ.

ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ಕಾಶಿ, ಮಥುರಾ, ಅಯೋಧ್ಯೆ, ಕಾಶ್ಮೀರ, ಸೋಮನಾಥ ದಲ್ಲಿನ ದೇವಾಲಯಗಳನ್ನು ಭಂಗಿಸಿ, ಮಂದಿರದ ಅವಶೇಷಗಳನ್ನೇ ಬಳಸಿ ಮಸೀದಿ ನಿರ್ಮಾಣ ಮಾಡಿದರು. ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಕೆಳಗೆ ಇದದ್ದು ದೇವಸ್ಥಾನ ಎಂಬುದನ್ನು ಸುಪ್ರೀಂ ಕೋರ್ಟು ಕೂಡ ಒಪ್ಪಿದೆ. ಕಾಶಿ ಮತ್ತು ಮಥುರಾ ದೇವಾಲಯಗಳ ಎದುರು ಮಸೀದಿ ಇರುವುದು ಇಗಲೂ ಕಾಣಬಹುದು. ಸಾಮಾನ್ಯವಾಗಿ ಶಿವನ  ದೇವಸ್ಥಾನಗಳಲ್ಲಿ ಗರ್ಭಗುಡಿ ಎದುರು ಮುಖವಾಗಿ ನಂದಿ ಇರುತ್ತದೆ ಆದರೆ ಕಾಶಿಯಲ್ಲಿ ನಂದಿಯ ಹಿಂಬದಿಯಲ್ಲಿ ಗರ್ಭಗುಡಿ ಇದೆ ಹಾಗೂ ಎದುರಲ್ಲಿ ಮಸೀದಿ ಇದೆ. ಔರಂಗಜೇಬನ ಆಕ್ರಮಣದ ಕಾರಣ ವಿಶ್ವನಾಥ ಭಾವಿಗೆ ಹಾರಿದ ಎಂಬ ಕಥೆ ಅಲ್ಲಿನ ಜನ ಹೇಳುತ್ತಾರೆ. ಭಂಜನವನ್ನು ತಡೆಯಲು ಮೂಲವಿಗ್ರಹವನ್ನು ಭಾವಿಗೆ ಹಾಕಿ ನಂತರ ಬೇರೆ ಕಡೆಗೆ ಸಾಗಿಸಿರುವ ಸಾಧ್ಯತೆ ಇದೆ. ಕಾಶಿಯ ಗಲ್ಲಿಗಳ ಅನೇಕ ಮನೆಗಳಲ್ಲಿ ಶಿವನ ಲಿಂಗದ ಪೂಜೆ ನಡೆಯುತ್ತದೆ. ಪ್ರತಿಯೊಂದು ಮನೆಯೂ ಸಹ ಒಂದು ವಿಧದಲ್ಲಿ ದೇವಸ್ಥಾನವೇ ಸರಿ.

ಕಾಶ್ಮೀರದ ಇತಿಹಾಸ ಎಲ್ಲಕ್ಕಿಂತಲೂ ಬರ್ಬರವಾದದ್ದು. ಹಿಂದುಗಳ ಮೇಲೆ ನರಮೇಧ ಪ್ರಾರಂಭವಾದದ್ದು 14ನೇ ಶತಮಾನದಿಂದ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ನರಮೇಧಗಳ ಪ್ರತಿ ಹಂತದಲ್ಲೂ ಪಂಡಿತರ ಕಗ್ಗೊಲೆ, ಅತ್ಯಾಚಾರ, ದೇವಸ್ಥಾನಗಳ ನಾಶ ಎಗ್ಗಿಲ್ಲದೆ ನಡೆದವು. ಮೊಘಲರ ಅಡಳಿತದಲ್ಲಿ ಹಿಂದೂವಾಗಿರಲು ಜೆಜಿಯಾ ಕಂದಾಯ ಕಟ್ಟಬೇಕಾಗಿತ್ತು. ಮೊಘಲರ ದೌರ್ಜನ್ಯದ ವಿರುದ್ಧ ತಿರುಗಿಬಿದ್ದ ಸಂತ ಗುರು ತೇಗ್ ಬಹದ್ದೂರ್ ಅವರ ತಲೆಯನ್ನು ಔರಂಗಜೇಬ್ ಕಡಿಸುತ್ತಾನೆ. ಅವರ ಸಹಚರ ಸಹೋದರರಾದ ಭಾಯ್ ಮತಿದಾಸ್ ಮತ್ತು ಭಾಯ್ ಸತಿದಾಸರನ್ನು ಸಹ ದೆಹಲಿಯ ಚಾಂದಿನಿ ಚೌಕ್ ಅಲ್ಲಿ ಕೊಲ್ಲಿಸುತ್ತಾರೆ. ಭಾರತದಲ್ಲಿ ಸಂತರೊಬ್ಬರ ತಲೆ ಕಡಿಯಲಾಯಿತು ಅನ್ನುವುದು ಖೇದಕರ ವಿಚಾರ. ಸ್ವಾತಂತ್ರ್ಯ ನಂತರ ಸಹ ಪಂಡಿತರ ಪರಿಸ್ಥಿತಿ ಸುಧಾರಿಸಲಿಲ್ಲ, ಅವರ ನಿರಂತರವಾದ ಸಾಮೂಹಿಕ ವಲಸೆಗೆ ಕಾಶ್ಮೀರ ಸಾಕ್ಷಿಯಾಯಿತು. ಇದಕ್ಕೆ ನಮ್ಮ ವ್ಯವಸ್ಥೆ ಕೂಡ ಕಾರಣವಾದವು. ಕಾಶ್ಮೀರದಲ್ಲಿ ಆರ್ಟಿಕಲ್ 370 ಇಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಅಧಃಪತನ, ಜಮೀನ್ದಾರಿ ಪದ್ಧತಿಯ ರದ್ದತಿ ಹಾಗೂ ಯಾವುದೇ ಪರಿಹಾರ ಸಿಗದ ಕಾರಣ ಅನೇಕ ಪಂಡಿತ ಭೂಮಾಲಿಕರು ಬಡವರಾದರು, ಉನ್ನತ ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಪಂಡಿತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಲ್ಲಿ ತಾರತಮ್ಯ. 1990ರಲ್ಲಿ ನಡೆದ ನರಮೇಧವಂತೂ ಅತ್ಯಂತ ಭೀಕರ. ಅದರ ಸಣ್ಣ ಎಳೆಯನ್ನು ದಿ ಕಾಶ್ಮಿರ್ ಫೈಲ್ಸ್ ಚಿತ್ರದಲ್ಲಿ ನೋಡಿದ್ದೇವೆ. ಕರ್ನಾಟಕದ ವಿಚಾರಕ್ಕೆ ಬಂದರೆ ಚಿತ್ರದುರ್ಗ, ಹಂಪಿ, ಕೊಡಗಿನಲ್ಲಿ ನಡೆದದ್ದು ಇಂತಹ ನರಮೇಧವೇ. ಅನಕ್ಷರಸ್ತರಿಗಿಂತಲೂ ಅಕ್ಷರಸ್ತ ಮುಸಲ್ಮಾನರಿಂದಲೇ ಕಾಶ್ಮೀರದಲ್ಲಿ ಕೊಲೆ ಮತ್ತು ಅತ್ಯಾಚಾರದಂತಹ ಹೀನ ಕೃತ್ಯ ನಡೆಯಿತು ಎಂಬುದು ನೆನಪಿನಲ್ಲಿಡಬೇಕಾದ ಅಂಶ.

ದೇಶದೆಲ್ಲೆಡೆ ಇರುವ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಅಜಾನ್ ಕೂಗುತ್ತಾರೆ. ಜೊತೆಗೆ ಧ್ವನಿವರ್ಧಕವನ್ನೂ ಬಳಸುತ್ತಾರೆ. ಎಲ್ಲರಿಗೂ ಕೇಳುವಂತೆ ಅಲ್ಲಾ ಒಬ್ಬನೇ ದೇವರು ಎಂದು ಅಜಾನ್ ಕೂಗುತ್ತಾರೆ. ಸರ್ವಧರ್ಮ ಸಮನ್ವಯದ ಸಂಕೇತವಾದ ಈ ದೇಶದಲ್ಲಿ ಈ ರೀತಿ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಸುವುದು ಹೇರಿಕೆ ಎಂದು ಅವರಿಗೆ ಅನ್ನಿಸಲೇ ಇಲ್ಲ! ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ, ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾರಣವಾದದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್. ಸಾಮಾಜಿಕ ಜಾಲತಾಣವೆಂಬುದು ಕೆಲಸಕ್ಕೆ ಬಾರದ ವಿಚಾರ, ಅರ್ಥವಿಲ್ಲದ್ದು ಎಂಬುದನ್ನು ಮನೆಯಲ್ಲಿ ಹಿರಿಯರು ಹೇಳಿದನ್ನು ಅನೇಕ ಸಲ ನಾವೇ ಕೇಳಿದ್ದೇವೆ. ಆದರೆ, ಇಂತಹ ಪೋಸ್ಟುಗಳು ಸಮುದಾಯವೊಂದನ್ನು ಕೆರಳಿಸುತ್ತದೆ ಎಂದರೆ ಅವರ ಮನಸ್ಥಿತಿಯನ್ನು ಒಮ್ಮೆ ಯೋಚಿಸಿ.

ಜಾಗೃತವಾಗಿರುವ ಹಿಂದೂ ಸಮಾಜ ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತಿಕ್ರಯಿಸಲು ಮುಂದಾಗಿದೆ. ಈಗ ಒಂದಷ್ಟು ಜನರಿಗೆ ಬಿಸಿ ತಾಗಿ ಶಾಂತಿ, ಸೌಹಾರ್ದತೆ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದಾರೆ. ಜನರ ಮೇಲೆ ಆದ ದೌರ್ಜನ್ಯಕ್ಕಿಂತ ಕಲ್ಲಂಗಡಿ ಹಾಳಾಗಿದ್ದೆ ದೊಡ್ಡ ವಿಚಾರ ಅನ್ನುವ ರೀತಿ ಮಾತಾಡುತ್ತಾರೆ ರಾಜಕೀಯದ ನಾಯಕರು. ಪ್ರಗತಿಯ ದೃಷ್ಟಾರರು ಎಂದು ತಮ್ಮನ್ನು ಕರೆದುಕೊಳ್ಳುವ ಕಮ್ಯುನಿಸ್ಟರಿಗೆ ಹಿಂದೂ ಜಾಗೃತಗೊಂಡಿರುವುದು ಹೃದಯ ಬಿರಿಯುವ, ಹೊಟ್ಟೆ ಉರಿಸುವ ವಿಚಾರ. ಐತಿಹಾಸಿಕವಾಗಿ ನಡೆದ ಪ್ರಮಾದವನ್ನು ತಿದ್ದಿಕೊಂಡು, ನೆಲದ ಕಾನೂನಿಗೆ ಗೌರವ ಕೊಟ್ಟು ಎಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬುದು ನಮ್ಮ ಮಂತ್ರವಾಗಬೇಕು. ಶಾಂತಿ, ಸೌಹಾರ್ದತೆ ಎಂಬುದು ಹಿಂದೂವಿಗೆ ರಕ್ತಗತವಾಗಿದೆ. ಇನ್ನೂ ಆ ಪಾಠ ಆಗಬೇಕಾಗಿದದ್ದು ಮುಸಲ್ಮಾನರಿಗೆ. ಕಲಿಸಲು ಸಮಾಜ ತಯಾರಿದೆ ಆದರೆ ಅವರು ಕಲಿಯಲು ತಯಾರಾಗಬೇಕು ಅಷ್ಟೇ!

April 3, 2022

ಹಿಜಾಬ್ ಆಯ್ತು ಈಗ ಹಲಾಲ್!

ಕಳೆದ ತಿಂಗಳು ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಶುರುವಾಯಿತು. ಕರೋನಾ ಕಳೆದು, ಶಾಲೆಗಳೆಲ್ಲಾ ಶುರುವಾದ ಸಂದರ್ಭದಲ್ಲಿ ವಿದ್ಯೆಗಿಂತ ಧರ್ಮದ ಆಚರಣೆ ಮುಖ್ಯವೆಂದು ಹೊಸದೊಂದು ಬೇಡವಾದ ವಿವಾದವನ್ನು ಆರು ಮುಸಲ್ಮಾನ್ ವಿದ್ಯಾರ್ಥಿನಿಯರು ಶುರು ಮಾಡಿದರು. ಇದನ್ನು ಕೇಸರಿ-ಹಿಜಾಬ್ ಸಂಘರ್ಷ ಎಂದು ಕೆಲವರು ದಾರಿ ತಪ್ಪಿಸಲು ಪ್ರಯತ್ನ ಪಟ್ಟರಾದರೂ ಅದು ನಿಲ್ಲಲಿಲ್ಲ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆ ಹಿಂದೂ ಸಮಾಜವನ್ನು ಒಟ್ಟು ಮಾಡಿತು. ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯದ ಚುಣಾವಣೆ ನಡೆಯಬೇಕಾದರೆ, ಪರೀಕ್ಷೆ ಇನ್ನೊಂದು ತಿಂಗಳಿರಬೇಕಾದಾಗ ಆ ಆರು ವಿದ್ಯಾರ್ಥಿನಿಯರು 'ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ' ಎಂದು ಹೈಕೋರ್ಟ್ ಮೆಟ್ಟಿಲು ಹತ್ತಿದರು. ಅಲ್ಲಿ ನಡೆದ ವಾದ ವಿವಾದವನ್ನು ಯೂಟ್ಯೂಬಿನಲ್ಲಿ ಬಿತ್ತರಿಸಲಾಯಿತು. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಎಂದು ನಿರೂಪಿಸುವಲ್ಲಿ ಅರ್ಜಿದಾರರು ಸೋತಿದ್ದಾರೆ ಎಂದು ಕೋರ್ಟು ತೀರ್ಪುಕೊಟ್ಟು ಸಮವಸ್ತ್ರದ ತತ್ವವನ್ನು ಎತ್ತಿಹಿಡಿಯಿತು.

ಕೋರ್ಟ್ ತೀರ್ಪು ಬರುವವರೆಗೂ ಸಂವಿದಾನ, ಕಾನೂನು ಎಂದೆಲ್ಲಾ ಮಾತಾಡುತ್ತಿದ್ದ ಧರ್ಮಾಂದರು ತೀರ್ಪಿನ ನಂತರ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದರು, ತೀರ್ಪಿನ ವಿರುದ್ಧ ಮುಸಲ್ಮಾನರು ಬಂದ್ ಮಾಡಿದರು. ಇದು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮತ್ತು ನೆಲದ ಕಾನೂನು ಗೌರವಿಸುವ ಎಲ್ಲರನ್ನು ಒಟ್ಟು ಮಾಡಿತು. ಇದರ ನಡುವೆ ವಿವೇಕ್ ಅಗ್ನಿಹೋತ್ರಿ ರವರ 'ದಿ ಕಾಶ್ಮೀರ್ ಫೈಲ್ಸ್' ದೇಶದೆಲ್ಲಡೆ ಸಂಚಲನ ಎಬ್ಬಿಸಿತು. ಚಿತ್ರದಲ್ಲಿ ತೋರಿಸಿರುವುದು ಪಂಡಿತರ ಏಳನೇ ಹತ್ಯಾಕಾಂಡದ ಝಲಕ್ ಅಷ್ಟೇ. ಹಲವರು ಹಿಂದಿನ ಆರೂ ಹತ್ಯಾಕಾಂಡದ ಬಗ್ಗೆ ಓದಲು ಶುರು ಮಾಡಿದ್ದಾರೆ. ಈ ಚಿತ್ರವೂ ಹಿಂದೂ ಸಮಾಜವನ್ನು ಒಟ್ಟು ಮಾಡಲು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಏನೇ ಹೇಳಿ,  ಹಿಂದೂ ಸಮಾಜ ಜಾಗೃತವಾಗಿರುವುದಂತೂ ನಿಜ. ಈಗ ಕರ್ನಾಟಕದ ಅನೇಕ ಕಡೆ ಜಾತ್ರೆ ಮತ್ತು ಊರ ಹಬ್ಬ ನಡೆಯುತ್ತಿದೆ. ಇದರಲ್ಲಿ ಮುಸಲ್ಮಾನರು ವ್ಯಾಪಾರ ಮಾಡುವಂತ್ತಿಲ್ಲ ಎಂದು ಎಲ್ಲಾ ಹಿಂದೂಗಳು ತೀರ್ಮಾನಿಸಿ ಸಾರ್ವಜನಿಕವಾಗಿ ಫಲಕವನ್ನು ಹಾಕುವಷ್ಟು ತಾಕತ್ತು ತೋರಿದ್ದಾರೆ. ಮೂರ್ತಿ ಪೂಜೆಯನ್ನು ದ್ವೇಷಿಸುವ ಮುಸಲ್ಮಾನರಿಗೆ ಹಿಂದೂಗಳ ಜಾತ್ರೆಯಲ್ಲಿ ಏನು ಕೆಲಸ ಎಂದು ಕೇಳುವಷ್ಟು ಜಾಗೃತವಾಗಿದ್ದಾನೆ. ಈಗ ಮಾತ್ರ ಸಂವಿದಾನ, ಸೌಹಾರ್ದತೆ, ಸಾಮರಸ್ಯದ ಮಾತುಗಳು ಹೊರಬರುತ್ತಿವೆ. ಈ ಸೌಹಾರ್ದಯುತ ಮಾತುಗಳು ಹಲಾಲ್ ವಿಚಾರದಲ್ಲಿ ಮಾತ್ರ ಬರುವುದಿಲ್ಲ ಎಂಬುದು ಇವರುಗಳ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ.

ಕೆಲವು ವರ್ಷಗಳ ಹಿಂದೆ ಝೊಮಾಟೋ ಗ್ರಾಹಕನೊಬ್ಬ ಡೆಲಿವರಿ ಮಾಡುವವ ಮುಸಲ್ಮಾನ್ ಎಂಬ ಕಾರಣಕ್ಕೆ ತನ್ನ ಆರ್ಡರ್ ಅನ್ನು ರದ್ದುಗೊಳಿಸಿದ್ದು ನೆನಪಿರಬೇಕಲ್ಲ. ಊಟಕ್ಕೆ ಧರ್ಮವಿಲ್ಲ ಎಂದು ಶುರು ಮಾಡಿದ ಝೊಮಾಟೋ,  ಗ್ರಾಹಕರು ಅವರ ವಿರುದ್ಧ ಆಪ್ ಮೂಲಕ ಮಾತಾಡಲು ಪ್ರಾರಂಭಿಸಿದಾಗ ಇದು 'ಬೇಡಿಕೆ ಮತ್ತು ಪೂರೈಕೆ' ಎಂಬ ವಾದವನ್ನು ಮುಂದಿಟ್ಟು, ಜಟ್ಕಾ ಮಾಂಸವನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತೇವೆ ಎಂದು ನುಣುಚಿಕೊಂಡರು. ಹಲಾಲ್ ಮಾಂಸವನ್ನು ಒಪ್ಪಿಕೊಳ್ಳುವ ಮುಸಲ್ಮಾನರು ದೇಶದ ಜನಸಂಖ್ಯೆಯ ಶೇಕಡ 15 ರಷ್ಟು ಮಾತ್ರ. ಆದರೆ, ಭಾರತದಲ್ಲಿ ಮಾರಾಟವಾಗುವ ಹಲಾಲ್ ಮಾಂಸದ ಅನುಪಾತ ಹೆಚ್ಚಿದೆ ಮತ್ತು ಪ್ರತಿ ವರ್ಷವೂ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಅಂಶ.

ಹಲಾಲ್ ಉತ್ಪನ್ನಗಳು ಇಸ್ಲಾಂ ಆರ್ಥಿಕತೆಯ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಶರಿಯಾ ಕಾನೂನಿನ ಪ್ರಕಾರ ಬ್ಯಾಂಕುಗಳಾಗಲಿ, ಯಾರೇ ಆಗಲಿ ಬಡ್ಡಿ ವ್ಯವಹಾರ ಮಾಡುವ ಹಾಗಿಲ್ಲ. 1983 ಯಲ್ಲಿ ಮಲೇಷ್ಯಾದಲ್ಲಿ ಶರಿಯಾ ಕಾನೂನಿಗೆ ಅನುಗುಣವಾಗಿ ಪ್ರಾರಂಭವಾದ ಬ್ಯಾಂಕ್ ಆಫ್ ಇಸ್ಲಾಂ ಮಲೇಷ್ಯಾ ಬೆರ್ಹಾದ್ ಅನ್ನು ಭಾರತ ಸೇರಿದಂತೆ ಇಸ್ಲಾಮೇತರ ದೇಶಗಳು ಈ ಬ್ಯಾಂಕಿನ ವ್ಯವಸ್ಥೆಯನ್ನು ಮಾನ್ಯ ಮಾಡಲಿಲ್ಲ. 2006 ರಲ್ಲಿ ಹಲಾಲ್ ಉದ್ಯಮವನ್ನು ಉತ್ತೇಜಿಸಲು ಮಲೇಷ್ಯಾದಲ್ಲಿ ಹಲಾಲ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಲಾಯಿತು. 2013 ರಲ್ಲಿ, ಕೌಲಾಲಂಪುರದಲ್ಲಿ ವಿಶ್ವ ಹಲಾಲ್ ಸಂಶೋಧನೆ ಮತ್ತು ಹಲಾಲ್ ಫೋರಮ್ ಶೃಂಗಸಭೆಯನ್ನು 'ಹಲಾಲ್ ಆರ್ಥಿಕತೆ'ಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿದ್ದರು. ಈ ಶೃಂಗಸಭೆಯಲ್ಲಿ ಹಲಾಲ್ ಉದ್ಯಮ, ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ ನಡುವಿನ ಹೆಚ್ಚಿನ ಸಹಕಾರದ ಮೂಲಕ ವಿಶ್ವಾದ್ಯಂತ ಹಲಾಲ್ ಉತ್ಪನ್ನಗಳ ಬಳಸುವಿಕೆಯನ್ನು ಹೆಚ್ಚಿಸುವ ತೀರ್ಮಾನ ಮಾಡಿದರು. ಹಲಾಲ್ ಉದ್ಯಮವು ಉತ್ಪನ್ನಗಳ ಉತ್ಪಾದನೆಯಿಂದ ಹಿಡಿದು ಗ್ರಾಹಕರಿಗೆ ತಲುಪುವವರೆಗಿನ ಎಲ್ಲಾ ಅಂಶಗಳನ್ನು ನಿಯಂತ್ರಿಸುತ್ತದೆ. ಹಲಾಲ್ ಆರ್ಥಿಕತೆ ಈ ಮೂಲಕ ಎಲ್ಲೆಡೆ ವ್ಯಾಪಕವಾಗುತ್ತಿದ್ದಂತೆ ಇಸ್ಲಾಂ ಆರ್ಥಿಕತೆಯನ್ನು ಬಲಗೊಳಿಸಬೇಕು ಎಂಬುದನ್ನು ತೀರ್ಮಾನಿಸಲಾಯಿತು. ಇದಲ್ಲದೆ ಹಲಾಲ್ ಉತ್ಪನ್ನದಿಂದ ಬರುವ ಲಾಭಾಂಶವನ್ನು ಮತ್ತಷ್ಟು ಹಲಾಲ್ ಉತ್ಪನ್ನಗಳಿಗಾಗಿ ಹಾಗೂ ಇಸ್ಲಾಂ ಆರ್ಥಿಕತೆಯ ಬಲವರ್ಧನೆಗಾಗಿ ವಿನಿಯೋಗಿಸಲಾಗುತ್ತದೆ. ಈ ಎಲ್ಲಾ ವ್ಯವಹಾರಗಳು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಮಲೇಷ್ಯಾ ಒಂದರಲ್ಲೇ ಈ ಕ್ರಮದಿಂದಾಗಿ 2000 ರಲ್ಲಿ 6.9% ರಷ್ಟಿದ್ದ ಇಸ್ಲಾಮಿಕ್ ಬ್ಯಾಂಕಿಂಗ್ ಮಾರುಕಟ್ಟೆಯ ಪಾಲುದಾರಿಕೆ 2011ರ ಹೊತ್ತಿಗೆ  22% ಗೆ ಏರುತ್ತದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆದ ಉದ್ಯಮವೆಂದರೆ ಹಲಾಲ್!

ಇದು ಇಷ್ಟಕ್ಕೆ ನಿಲ್ಲದ ವಿಚಾರ. ಕೆಲ ವರ್ಷಗಳ ಹಿಂದೆ ಸೌಂದರ್ಯವರ್ಧಕಗಳನ್ನು ಹರಾಮ್ ಎಂದು ಪರಿಗಣಿಸಲಾಗಿತ್ತು ಆದರೆ, ಈಗ ಹಲಾಲ್ ಸೌಂದರ್ಯವರ್ಧಕಗಳು ಸಹ ಲಭ್ಯವಿದೆ. ಹಲಾಲ್ ಉದ್ಯಮ ವ್ಯಾಪಕವಾಗುತ್ತಿರುವುದಕ್ಕೆ ಉದಾಹರಣೆಗಳನ್ನು ಬಹಳಷ್ಟು ಕೊಡಬಹುದು. ಮಾಂಸ ಮತ್ತು ಸಸ್ಯಾಹಾರ ಪದಾರ್ಥಗಳು, ಚಾಕಲೇಟ್ಗಳು, ಸಿಹಿತಿಂಡಿಗಳು, ಸೋಪು, ಶಾಂಪೂ, ಲಿಪ್ಸ್ಟಿಕ್, ಟೂತ್ ಪೇಸ್ಟ್, ಯುನಾನಿ, ಆಯುರ್ವೇದದ ಔಷಧ ಪದಾರ್ಥಗಳು, ಹಿಮಾಲಯ ಡ್ರಗ್ಸ್ ಅಂತಹ ಕಂಪನಿಗಳು, ಜೇನುತುಪ್ಪ, ಡಾಮಿನೋಸ್ ಪಿಜ್ಜ, ಮೆಕ್ಡೊನಾಲ್ಡಿನ ಬರ್ಗರ್ಗಳೂ ಸಹ ಹಲಾಲ್ ಪ್ರಮಾಣಿಕೃತವಾಗಿದೆ. ಕೇರಳದ ಕೊಚಿಯಲ್ಲಿ ಹಲಾಲ್ ಪ್ರಮಾಣಿಕೃತವಾದ, ಶರಿಯಾ ಕಾನೂನಿಗೆ ಅನುಗುಣವಾದ ಅಪಾರ್ಟ್ಮೆಂಟ್ ಸಹ ಇದೆ! ಇಲ್ಲಿ ಪ್ರತ್ಯೇಕವಾದ ಈಜುಕೊಳ, ಪ್ರಾರ್ಥನಾ ಮಂದಿರ, ಮೆಕ್ಕಾದ ವಿರುದ್ಧ ದಿಕ್ಕಿಗೆ ಮುಖಮಾಡಿರುವಂತಹ ಶೌಚಾಲಯ, ನಮಾಝ್ ಮಾಡುವ ಸಮಯಕ್ಕೆ ಎಚ್ಚರಿಸುವಂತಹ ಗಡಿಯಾರಗಳು ಸಹ ಇದೆ! ಹಲಾಲ್ ಪ್ರಮಾಣಿಕೃತ ಆಸ್ಪತ್ರೆ ಹಾಗೂ ಡೇಟಿಂಗ್ ಅಪ್ಗಳೂ ಬಂದಿವೆ. ಇಸ್ಲಾಮಿಕ್ ರಾಷ್ಟ್ರಗಳೊಂದಿಗಿನ ವ್ಯವಹಾರಕ್ಕಾಗಿ ಇದು ಅವಶ್ಯ ಎಂಬ ಉತ್ತರ ಸಮಾಜಕ್ಕೆ ಹೇಳುವಂತಹ ಸಮಜಾಯಿಶಿ.

Halal Certificate of Himalaya Drug Company

ಹಿಜಾಬ್ ನಿಂದ ಶುರುವಾದ ಗಲಾಟೆ ಸಧ್ಯಕ್ಕೆ ಹಲಾಲ್ ವರೆಗೂ ಬಂದಿದೆ. ಪಂಚರಾಜ್ಯ ಚುಣಾವಣೆ ಸಮಯದಲ್ಲಿ ಶುರುವಾದ ಈ ವಿವಾದಗಳು ಮೇಲುನೋಟಕ್ಕೆ ರಾಜಕೀಯದ ಮೇಲಾಟ ಎಂದು ತೋರಿದರೂ ಒಳಗಿರುವುದು ಧರ್ಮದ ಕಾವು. ಕಾಂಗ್ರೇಸ್ ಪಕ್ಷವಂತೂ ಹಿಜಾಬ್ ವಿಚಾರದಲ್ಲಿ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದು ಮುಸಲ್ಮಾನರಿಗೆ ಬೇಸರ, ಆತುರಕ್ಕೆ ಬಿದ್ದು ಬೇಕಾಬಿಟ್ಟಿ ಮಾತಾಡಿ ಹಿಂದೂ ಸಮಾಜದ ವಿರೋಧವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಹನ್ನೊಂದನೇ ಶತಮಾನದಿಂದ ಇಸ್ಲಾಮಿನ ಆಕ್ರಮಣಕ್ಕೆ ಒಳಗಾದ ಹಿಂದೂ ಸಮಾಜ ಸ್ವಾತಂತ್ಯ ನಂತರವೂ ಈ ರಾಜಕೀಯದ ತುಷ್ಟೀಕರಣದ ಕಾರಣ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದೆ. ಈಗ ಹಿಂದೂ ಸಮಾಜ ಜಾಗೃತವಾಗಿದೆ, ತನ್ನ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗುವುದನ್ನು ಸಹಿಸುವುದಿಲ್ಲ. ಸಾಮರಸ್ಯ ಎನ್ನುವುದು ಎರಡು ಕೈಗಳು ಸೇರಿ ಹೊಡೆಯುವಂತಹ ಚಪ್ಪಾಳೆ. ಇತಿಹಾಸದಲ್ಲಿ ನಡೆದ ಘಟನೆಗಳು, ಪ್ರಮಾದಗಳನ್ನು ಅರಿತು, ಒಪ್ಪಿಕೊಂಡು ಮತ್ತೆ ಅಂತಹ ತಪ್ಪುಗಳಾಗದಂತೆ ಎಲ್ಲರೂ ಒಟ್ಟಿಗೆ ಮುಂದುವರೆಯಬೇಕಾಗಿದೆ.

***********************************************************

References: