July 13, 2022

ಭಾರತ ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ?

ಭಾರತದ ಸ್ವಾತಂತ್ರ್ಯಕ್ಕೆ ಈಗ 75 ವರ್ಷ. ದೇಶದಾದ್ಯಂತ ಅಮೃತ ಮಹೋತ್ಸವವನ್ನು ವಿವಿಧ ರೂಪದಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಒಂದು ದೇಶವಾಗಿ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳಿವೆ. ಅದರಲ್ಲಿ ಪ್ರಮುಖವಾದ ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುವ ಪ್ರಯತ್ನ ಇದು. ನಮ್ಮ ದೇಶ ಸ್ವಾತಂತ್ರ್ಯ ಪಡೆದುಕೊಂಡದ್ದು 1947 ಆಗಸ್ಟ್ 15 ರಂದು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಪಡೆದುಕೊಂಡಿತು ಎಂದಾದರೆ ಭಾರತ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದಾದರೂ ಯಾವಾಗ? ಈ ಪ್ರಶ್ನೆಗೆ ಉತ್ತರವನ್ನು ಇತಿಹಾಸದ ಗರ್ಭದಲ್ಲಿ ಹುಡುಕುವ ಪ್ರಯತ್ನ ಮಾಡಬೇಕಷ್ಟೇ. ನಮ್ಮ ಪಠ್ಯಕ್ರಮ ಐತಿಹಾಸಿಕ ಘಟನೆಗಳನ್ನು ವರ್ಷಾನುಸಾರ ಬರೆಯುವುದನ್ನು ತಿಳಿಸಿತೇ ಹೊರತು ಘಟನೆಯ ಹಿನ್ನೆಲೆ ಮತ್ತು ಅದರಲ್ಲಿ ಅಡಗಿರುವ ಅರ್ಥವನ್ನು ತಿಳಿಸಲೇ ಇಲ್ಲ. ಹಾಗಾಗಿ ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಿಜಕ್ಕೂ ಅಗತ್ಯವಿದೆ.

Akhand Bharat

ನಮ್ಮ ಪಠ್ಯ ಪುಸ್ತಕಗಳ ಪ್ರಕಾರ ಭಾರತದ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುವುದೇ 1857 ರ ಸಿಪಾಯಿ ದಂಗೆ ಮೂಲಕ. ಆದರೆ, ಅ ಐತಿಹಾಸಿಕ ಘಟನೆಯನ್ನು ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರು. ಅಲ್ಲಿಯವರೆಗೆ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಗೆ ಒಳಪಟ್ಟಿದ್ದ ಭಾರತ ಸಂಗ್ರಾಮದ ಸೋಲಿನ ನಂತರ ನೇರವಾಗಿ ಇಂಗ್ಲೆಂಡಿನ ರಾಣಿಯ ಆಳ್ವಿಕೆಗೆ ಒಳಪಟ್ಟಿತು. ಇದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾದರೆ ಭಾರತ ಸ್ವಾತಂತ್ರ್ಯ ಕಳೆದುಕೊಂಡದ್ದು ಇದಕ್ಕೂ ಮುನ್ನ ಎಂದಾಯಿತು. ಈ ಸಂಗ್ರಾಮದ ನೂರು ವರ್ಷಕ್ಕೆ ಹಿಂದೆ ಆಂಗ್ಲರು ಬಂಗಾಳದಲ್ಲಿ ನೆಲೆಯೂರಿದ್ದು ಪ್ಲಾಸೀ ಕದನದ ನಂತರ. ಮೀರ್ ಜಾಫರ್ ಮಾಡಿದ ಮೋಸದ ಕಾರಣ ರಾಬರ್ಟ್ ಕ್ಲೈವ್ ನ ಪುಟ್ಟ ಸೇನೆ ಎದುರು ಸಿರಾಜ್ಜುದೌಲನ ದೊಡ್ಡ ಸೇನೆ ಶರಣಾಗಿತ್ತು.

ಪ್ಲಾಸೀ ಕದನದ ಸೋಲಿನಿಂದ ಭಾರತದ ಸ್ವಾತಂತ್ರ್ಯ ಕಳೆದುಕೊಂಡಿತು ಎನ್ನುವುದಾದರೆ ಸಿರಾಜ್ಜುದೌಲ ಭಾರತದ ಪ್ರತಿನಿಧಿ ಆಗಿದ್ದನಾ? ಸಾಧ್ಯವೇ ಇಲ್ಲ. ಇಸ್ಲಾಂ ಈ ದೇಶದ ಮತವಲ್ಲ ಎಂದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅರಬ್ ದೇಶದಲ್ಲಿ ಹುಟ್ಟಿಕೊಂಡ ಈ ಪಂಥ ಮಧ್ಯ ಏಷ್ಯಾ ಭಾಗ, ಆಫ್ರಿಕಾ ಖಂಡದ ಉತ್ತರ ಭಾಗ ಹಾಗೂ ಯೂರೋಪ್ ದೇಶಗಳ ಮೇಲೆ ಏರಿ ಹೋಗಿ ಅಲ್ಲಿನ ಸಂಸ್ಕೃತಿಗಳನ್ನು ನಾಶ ಮಾಡಿ ಆ ದೇಶಗಳನ್ನು ಕಬ್ಜಾ ಮಾಡಿತು. ನಂತರ 8 ನೇ ಶತಮಾನದ ಹೊತ್ತಿಗೆ ಅವರ ಗಮನ ಸೆಳದದ್ದು ವಿಸ್ತಾರವಾದ ಶ್ರೀಮಂತ ಭಾರತ! ಇದಕ್ಕೂ ಮುನ್ನ ಭಾರತದ ಮೇಲೆ ಆರ್ಕಮಣ ನಿರಂತರವಾಗಿ ನಡೆದೇ ಇತ್ತು. ಮೊಘಲರು, ಅಫ್ಗನ್ನರು, ಟರ್ಕಿಗಳು, ಅರಬ್ಬರು, ಹೂಣರು, ಕುಶಾನರು, ಶಖರು, ಗ್ರೀಕರೆಲ್ಲರೂ ಭಾರತದ ಮೇಲೆ ಆರ್ಕಮಣ ಮಾಡಿದವರೆ. ಒಬ್ಬರಿಗಿಂತಲೂ ಮತ್ತೊಬ್ಬರು ಕ್ರೂರಿಗಳು. ಮೊದಲು ಆಕ್ರಮಣ ಮಾಡಿದ ಗ್ರೀಕರು, ಶಖರು, ಕುಶಾನರು, ಹೂಣರು ಭಾರತದ ಶೌರ್ಯ ಮತ್ತು ಸಂಸ್ಕೃತಿಗೆ ಸೋತು ನಮ್ಮೊಳಗೆ ಏಕರಸವಾರದರು. ಆದರೆ, ಭಾರತದ ಉತ್ಕೃಷ್ಟವಾದ, ಶ್ರೇಷ್ಠವಾದ ಹಿಂದೂ ಸಂಸ್ಕೃತಿಯನ್ನೂ ಒಪ್ಪಿಕೊಳ್ಳದೇ ತಮ್ಮ ಪಂಥವನ್ನೇ ಹಬ್ಬಿಸುವ ಉದ್ದೇಶದಿಂದ, ಇಲ್ಲಿನ ಸಂಪತ್ತನ್ನು ಲೂಟಿ ಮಾಡಲು ಬಂದವರೇ ಅರಬ್ ಮೂಲದ ಮುಸಲ್ಮಾನರು. ಇಂದಿಗೂ ಸಹ ಒಂದು ಜನಾಂಗವಾಗಿ ಮುಸಲ್ಮಾನರು ಭಾರತದೊಂದಿಗೆ ಒಂದಾಗಿದ್ದಾರೆ ಅನ್ನಿಸುವುದಿಲ್ಲ. ಅವರ ನಿಷ್ಟೆ ಇರುವುದು ಅರಬ್ ದೇಶದೊಂದಿಗೆ!

8 ನೇ ಶತಮಾನದ ಹೊತ್ತಿಗೆ ಭಾರತದ ಮೇಲೆ ಅರಬ್ಬರು ಆಕ್ರಮಣ ಮಾಡಿದರೂ ಸಹ ಇಲ್ಲಿ ತಮ್ಮ ನೆಲೆಯೂರಲು ಐದು ಶತಮಾನಗಳೇ ಬೇಕಾದವು. ಅರಬ್ಬಿನ ದೊರೆಯ ಗುಲಾಮನಾದ ಕುತುಬ್ ಉದ್ದಿನ್ ಐಬಕ್ ದೆಹಲಿಗೆ ಬಂದು ಆಳ್ವಿಕೆ ಪ್ರಾರಂಭಿಸಿದ್ದು 13 ನೇ ಶತಮಾನದಲ್ಲಿ. ಈ ಐದು ಶತಮಾನಗಳು ಭಾರತದ ಗಡಿಭಾಗಗಳ ಮೇಲೆ ಆಕ್ರಮಣ ಮಾಡಿ ಸೋತು ಹಿಂತಿರುಗಿದ್ದಾರೆ. ಆಕ್ರಮಣ ಮಾಡಿದಲ್ಲೆಲ್ಲಾ ಜಯವನ್ನೇ ಕಂಡಿದ್ದ ಇಸ್ಲಾಂ, ಭಾರತದಲ್ಲಿ ಸೋಲು ಕಂಡಿತು. ಅವರ ಆಕ್ರೋಶ ನೂರ್ಮಡಿಯಾಯಿತು. ಹಾಗಾಗಿ, ಇನ್ನಷ್ಟು ಕ್ರೋಧದಿಂದ ಮತ್ತೆ ಮತ್ತೆ ಆಕ್ರಮಣ ಮಡುತ್ತಲೇ ಸಾಗುತ್ತಾರೆ. ಗಡಿಯಲ್ಲಿ ಕೆಲವು ಭಾಗಗಳನ್ನು ಗೆದ್ದರಾದರೂ ಮುಂದೆ ಬಂದಂತೆ ಜಾಠರು ಮುಸ್ಲ್ಮಾನರನ್ನು ಹೀನಾಯವಾಗಿ ಸೋಲಿಸುತ್ತಾರೆ. ನಂತರ ಬಂದ ಆಕ್ರಮಣಕಾರರನ್ನು ರಾಜ ದಾಹಿರ ಮತ್ತವನ ಮಗ ಜಯಸಿಂಹ ಸೋಲಿಸಿ ಹಿಮ್ಮೆಟ್ಟುತ್ತಾರೆ. ಧರ್ಮದ ಅಮಲಿನಲ್ಲಿ ಮತ್ತಷ್ಟು ಆವೇಗದಿಂದ ಆಕ್ರಮಣ ಮಾಡಿದ್ದು ಮೊಹಮ್ಮದ್ ಬಿನ್ ಕಾಸಿಂ. ಆನಂತರವೇ ಭಾರತದಲ್ಲಿ ಯುದ್ಧ ನಂತರ ಜನಸಾಮಾನ್ಯರನ್ನು ಲೂಟಿಗೈದು, ಗುಲಾಮರನ್ನಾಗಿ ಎಳೆದುಕೊಂಡು ಹೋಗುವ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಪ್ರಕ್ರಿಯೆ ಶುರುವಾಯಿತು. ಮಾನವನ್ನು ಉಳಿಸಿಕೊಳ್ಳುವ ಸಲುವಾಗಿ ನಮ್ಮಲ್ಲಿ ಸತಿ ಗಂಡನೊಟ್ಟಗೆ ಬೆಂಕಿಗೆ ಆಹುತಿಯಾಗುವ ಜವ್ಹಾರ್ ಪದ್ದತಿ ಶುರುವಾಯಿತು. ಅಲ್ಲಿಂದಾಚೆಗೆ ಭಾರತದ ಜನಜೀವನ, ಸಂಸ್ಕೃತಿ ಹಾಗೂ ಮಂದಿರಗಳನ್ನು ಲೂಟಿಗೈದು ಉದ್ವಸ್ಥಗೊಳಿಸುವ ಪರ್ವ ಶುರು ಮಾಡುತ್ತಾರೆ.

ಭಾರತದ ಸ್ವಾತಂತ್ರ್ಯ ಹೋರಾಟವೆಂದರೆ 1857-1947 ನಡುವೆ ನಡೆದ ಶಾಂತಿಯುತ ಹೋರಾಟ ಎಂಬುದನ್ನು ಬ್ರಿಟೀಷರು ನಮ್ಮನ್ನು ನಂಬಿಸಿದರು. ಸ್ವಾತಂತ್ರ್ಯ ನಂತರ ರಚನೆಯಾದ ಕಾಂಗ್ರೇಸ್ ಮತ್ತು ಕಮ್ಯುನಿಸ್ಟ್ ಪ್ರೇರಿತ ಪಠ್ಯ ಪುಸ್ತಕಗಳಲ್ಲೂ ಸಹ ಇದನ್ನೇ ತುಂಬಿದರು. ದುರಾದೃಷ್ಟವಶಾತ್ ಇಂದಿಗೂ ನಾವು ಅದನ್ನೇ ಓದುತ್ತಿದ್ದೇವೆ. ಹಾಗಾಗಿ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಲು ಮುಂದಾದರೆ ತಾವು ಇಷ್ಟು ದಿನ ಹೇಳಿಕೊಂಡು ಬಂದದ್ದು ಸುಳ್ಳು ಎಂದು ಎಲ್ಲರಿಗೂ ತಿಳಿಯುತ್ತದೆ ಎಂದು ಹಿಂದಿನ ತಲೆಮಾರಿನ ಅನೇಕರಿಗೆ ತಳಮಳ. ಭಾರತ ಸ್ವಾತಂತ್ರ್ಯದ ಹೋರಾಟ ಬ್ರಿಟೀಷರ ವಿರುದ್ಧ ಎಂದು ಬಿಂಬಿಸುವುದರ ಮೂಲಕ ಮುಸಲ್ಮಾನರು ಈ ದೇಶದ ಮೇಲೆ ಮಾಡಿದ ಅತ್ಯಾಚಾರವನ್ನು ಸಂಪೂರ್ಣ ಮುಚ್ಚಿಡಲಾಯಿತು. ಯೂರೋಪಿಯನ್ನರ ಆಕ್ರಮಣಕ್ಕೂ ಮುನ್ನ ಭಾರತದಲ್ಲಿ ಇದ್ದ ವೈಭವ, ಅದನ್ನು ಮುಸಲ್ಮಾನರು ಅತಿಕ್ರಮಿಸಿದ ಬರ್ಬರವಾದ ರೀತಿ, ಈ ಅತಿಕ್ರಮಣದ ವಿರುದ್ಧ ಭಾರತೀಯರ ಹೋರಾಟವನ್ನು ಮುಚ್ಚಿಡಲಾಯಿತು. ನಮ್ಮ ಪಠ್ಯದಲ್ಲಿ ಮೊಘಲರ ಅತ್ಯಾಚಾರ, ಅನಾಚಾರವನ್ನು ಮುಚ್ಚಿಟ್ಟು ಅವರ ಇತಿಹಾವನ್ನು ವೈಭವೀಕರಿಸಲಾಯಿತೇ ಹೊರತು ಇಲ್ಲಿ ಆಳ್ವಿಕೆ ಮಾಡಿದ ರಾಜ ದಾಹಿರ, ಮಹಾರಾಣ ಪ್ರತಾಪ, ಹರ್ಷವರ್ಧನ, ಇಮ್ಮಡಿ ಪುಲಿಕೇಶಿ, ಚೋಳ, ಅಹೋಮ್, ಚಾಲುಕ್ಯ, ಪಲ್ಲವ, ಗುಪ್ತ ಸಾಮ್ರಾಜ್ಯಗಳ ಬಗ್ಗೆ ತಿಳಿಸಲೇ ಇಲ್ಲ.

ನೆನಪಿರಲಿ, ಆಂಗ್ಲರು ಮತ್ತು ಅರಬ್ಬಿನ ಮುಸಲ್ಮಾನರ ಆಕ್ರಮಣ ಸಂಸೃತಿಯನ್ನು ಬದಲಾಯಿಸುವಂತಹ ಆಕ್ರಮಣ. 10% ರಷ್ಟು ಜನರಿರಬೇಕಾದರೆ ಹೊಂದಿಕೊಂಡು ಹೋಗುವ ಪೊಳ್ಳು ಮಾತಾಡುತ್ತಾರೆ, 15% ಆದಾಗ ತಮ್ಮ ಪಂಥದ ಪ್ರಕಾರವೇ ನಿಯಮಗಳು ನಡೆಯಬೇಕೆಂದು ತಾಕೀತು ಮಾಡುತ್ತಾರೆ, 20% ಮೀರಿದರಂತೂ ಶರಿಯಾ ಕಾನೂನಿನ ಪ್ರಕಾರ ಯಾರನ್ನು ಬೇಕಾದರೂ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ. ಇತ್ತೀಚೆಗೆ ಜಾರ್ಖಂಡ್ ನಲ್ಲಿ ಶಾಲೆಗೆ ಶುಕ್ರವಾರ ರಜೆ ಘೋಷಿಸಿ ಭಾನುವಾರ ತೆರೆಯುವಂತೆ ತಾಕೀತು ಮಡಿದ್ದು ನೆನಪಿರಬೇಕಲ್ಲ. ರಾಜಾಸ್ತಾನದ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಕೂಡ ಇದಕ್ಕೆ ಪೂರಕವಾದದ್ದೇ. ಮಸೀದಿಯೊಳಗೆ ಶಿವಲಿಂಗವನ್ನು ಹುಡುಕುವುದಕ್ಕಿಂತ ಇತಿಹಾಸದಲ್ಲಿನ ಘಟನೆಗಳನ್ನು ಅರಿತು, ಅದರಿಂದ ಪಾಠ ಕಲಿಯುವುದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಲ್ಲಿ ಮುಖ್ಯವಾಗುತ್ತದೆ.

State-run schools pressurized to remain shut on Friday as 70% children are Muslims
 

***********************************************************

Further Reading:

No comments:

Post a Comment