September 15, 2023

ಭಾರತದಲ್ಲಿ ಜಿ20, ಯೂರೋಪಿನಲ್ಲಿ 4...!

ಈ ಬಾರಿಯ ಜಿ20 ಶೃಂಗಸಭೆ ನಿಜಕ್ಕೂ 'ಭಾರತ'ದ ಗೆಲುವು. 'ವಸುದೈವ ಕುಟುಂಬ' ಎಂಬ ಋಷಿ ವಾಕ್ಯದ ತಳಹದಿಯಲ್ಲಿ ನಡೆದ ಶೃಂಗಸಭೆಯ ಮೂಲಕ ಇಡಿಯ ಜಗತ್ತಿಗೆ ಮತ್ತೊಮ್ಮೆ ಭಾರತೀಯತೆಯ ಪರಿಚಯವಾಯಿತು. ಸಭೆಯನ್ನು ಆಯೋಜಿಸಿದ ರೀತಿ, 115 ವಿಷಯಗಳೊಳಗೊಂಡ ವಿಸ್ತೃತ ಘೋಷಣೆಯನ್ನು ಸದಸ್ಯರಾಷ್ಟ್ರಗಳ ಸರ್ವಸಮ್ಮತಿಯೊಂದಿಗೆ ಮಂಡಿಸಿದ ಭಾರತದ ರಾಜತಂತ್ರಿಕತೆ ನಿಜಕ್ಕೂ ಹೆಮ್ಮೆಪಡುವಂತಹ ವಿಚಾರವೇ. ಇಷ್ಟಾದರೂ ಈ ಸಭೆಯಲ್ಲಿ ಮಂಡಿಸಿದ ಕೆಲವು ವಿಚಾರಗಳು ಚೀನಾವನ್ನು ನಖಶಿಖಾಂತ ಉರಿಸಿರಲಿಕ್ಕೂ ಸಾಕು. ಚೀನಾದ ಹೊಟ್ಟೆಗೆ ಬಿದ್ದಿರುವ ಬೆಂಕಿಯ ಕಾವು ಯೂರೋಪ್ ನಲ್ಲಿ ರಾಹುಲ್ ಗಾಂಧಿಯ ಮಾತಿನಲ್ಲಿ ಪ್ರತಿಫಲನಗೊಂಡಿತು ಅಷ್ಟೇ!

Narendra Modi showing the mural of Konark Sun Temple Wheel
from Odisha to US President Joe Biden

ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು; ಸಮಾರೋಪದವರೆಗೆ ತನ್ನ 60 ನಗರಗಳಲ್ಲಿ 200ಕ್ಕೂ ಹೆಚ್ಚು ಕಾರ್ಯಕ್ರಮ ಹಾಗೂ ಚರ್ಚಾಕೂಟಗಳನ್ನು ಏರ್ಪಡಿಸಿತು. ಸದಸ್ಯ ರಾಷ್ಟ್ರಗಳಲ್ಲದೇ ಈಜಿಪ್ಟ್, ಮಾರಿಷಸ್, ನೆದರ್ಲಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ, ಸ್ಪೇನ್, ಅರಬ್ ರಾಷ್ಟ್ರಗಳ ಒಕ್ಕೂಟ ಹಾಗೂ ಬಾಂಗ್ಲಾದೇಶಗಳನ್ನು ಭಾರತ ಈ ಸಭೆಗೆ ಅಥಿತಿಗಳಾಗಿ ಆಹ್ವಾನಿಸಿತು. ನಮ್ಮ ಜೊತೆ ಸೌಹಾರ್ದಯುತವಾದ ಬಾಂಧವ್ಯ ಇದ್ದಿದ್ದರೆ ಪಾಕೀಸ್ತಾನವನ್ನು ಸಹ ಭಾರತ ಆಹ್ವಾನಿಸುತ್ತಿತ್ತೇನೊ! ಇಷ್ಟೇ ಅಲ್ಲದೇ ಆಫ್ರಿಕನ್ ಯೂನಿಯನ್, ಆಫ್ರಿಕನ್ ಯೂನಿಯನ್ ಡೆವೆಲಪ್ಮಂಟ್ ಏಜನ್ಸಿ, ಅಸೀಯಾನ್, ಅಂತರರಾಷ್ಟ್ರೀಯ ಸೌರ ಒಕ್ಕೂಟ, ಏಷಿಯನ್ ಡೆವೆಲಪ್ಮಂಟ್ ಬ್ಯಾಂಕ್ ಅಂತಹ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಸಹ ಭಾರತ ಆಹ್ವಾನಿಸಿತ್ತು. ಇಲ್ಲಿಯವರೆಗೆ ಆಫ್ರಿಕಾ ಖಂಡದಿಂದ ದಕ್ಷಿಣ ಆಫ್ರಿಕಾ ಮಾತ್ರವೇ ಜಿ20 ಯ ಸದಸ್ಯ ರಾಷ್ಟ್ರವಾಗಿತ್ತು. ಆದರೆ, ಈ ಬಾರಿ ಐರೋಪ್ಯ ಒಕ್ಕೂಟದ ರೀತಿಯಲ್ಲಿ ಆಫ್ರಿಕಾದ ಒಕ್ಕೂಟವನ್ನು ಜಿ20 ಒಳಗೆ ಕರೆದು ತಂದದ್ದು ಭಾರತ. ಈ ಕ್ರಮಕ್ಕೆ ಯಾವ ಸದಸ್ಯ ರಾಷ್ಟ್ರಗಳೂ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದು ಭಾರತದ ರಾಜತಾಂತ್ರಿಕತೆಯ ಗೆಲುವು. ಗಮನಿಸಿ, ಈಕ್ವಟಾರ್ ಗೆರೆಯ ಕೆಳಗೆ ಬರುವ ರಾಷ್ಟ್ರಗಳು ಸಾಮಾನ್ಯವಾಗಿ ಜಾಗತಿಕ ಮಟ್ಟದಲ್ಲಿ ಗಣನೆಗೆ ಬರುತ್ತಿರಲಿಲ್ಲ ಹಾಗೂ ಬಹುತೇಕ ಬಡರಾಷ್ಟ್ರಗಳೇ ಆಗಿವೆ. ಅಂತಹ ರಾಷ್ಟ್ರಗಳ ಪ್ರತಿನಿಧಿಯಾಗಿ ಭಾರತ ನಿಂತಿದೆ ಎಂಬ ಸ್ಪಷ್ಟ ಸಂದೇಶ ಈ ಸಭೆಯ ಮೂಲಕ ಕೊಟ್ಟಿದೆ.

Prime Minister Narendra Modi greets Chairperson of the
African Union (AU) at G20

2023 ಸಾಲಿನ ಜಿ20 ಸಭೆಯಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚೀನಾಕ್ಕೆ ಟಕ್ಕರ್ ಕೊಡುವಂತಹುದೇ. ಆಫ್ರಿಕಾ ಖಂಡ ನೈಸರ್ಗಿಕ ಸಂಪನ್ಮೂಲಗಳ ಆಗರ. ಅಲ್ಲಿನ ಅನೇಕ ರಾಷ್ಟ್ರಗಳನ್ನು ತನ್ನ ಸಾಲದ ಸಂಕೋಲೆಯಲ್ಲಿ ಹಿಡಿದುಕೊಂಡಿದ್ದು; ತನ್ಮೂಲಕ ಅಲ್ಲಿನ ಸಂಪತ್ತನ್ನು ಲೂಟಿ ಹೊಡೆಯುವುದು ಚೀನಾದ ಷಡ್ಯಂತ್ರವಾಗಿದೆ.  ಅದಾಗಲೇ ರಷ್ಯಾ ಹಾಗೂ ಅಮೇರಿಕಾ ಆಫ್ರಿಕಾಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿವೆ. ಈಗ ಭಾರತ ಆಫ್ರಿಕಾವನ್ನು ತನ್ನ ಜೊತೆ ತೆಗೆದುಕೊಂಡು ಮುಂದುವರೆಯುತ್ತಿರುವುದು ಒಳಿತೇ. ಇದು ಚೀನಾಕ್ಕೆ ಅಸಹನೀಯ! ಚೀನಾದ ಮೋಸದ ಸುಳಿಯಲ್ಲಿ ಸಿಲುಕಿರುವ ದೇಶಗಳ ಮನಸ್ಥಿತಿಯನ್ನು ಬದಲಿಸಿ ತನ್ನತ್ತ ಸೆಳೆದುಕೊಳ್ಳುವುದು ಮೋದಿ ನೇತೃತ್ವದ ಭಾರತ ಸರ್ಕಾರಕ್ಕಿರುವ ಸವಾಲು. ಆಫ್ರಿಕಾ ಒಕ್ಕೂಟವನ್ನು ಜಿ2೦ ಯ ಸದಸ್ಯರನ್ನಾಗಿ ಮಾಡಿಕೊಂಡಿದ್ದು ಬಹುಶಃ ಆಫ್ರಿಕಾದ ಅನುಮಾನಗಳಿಗೆ ಉತ್ತರವಾಗಬಹುದು. 

ಇದೆಲ್ಲದರ ಜೊತೆಗೆ ಬಹುಮುಖ್ಯವಾದ ಅಂಶವೊಂದಕ್ಕೆ ಈ ಸಮಾವೇಶದಲ್ಲಿ ಭಾರತ ನಾಂದಿ ಹಾಡಿತು. ಚೀನಾದ ಕುಖ್ಯಾತ ಬಿಆರ್​ಐ ಯೋಜನೆಗೆ ವಿರುದ್ಧವಾಗಿ ಭಾರತ-ಮಧ್ಯಪ್ರಾಚ್ಯ-ಯೂರೋಪಿಯನ್ ಕಾರಿಡಾರ್ ಸ್ಥಾಪಿಸಲು ಅದಕ್ಕೆ ಸಂಬಂಧಿಸಿದ ರಾಷ್ಟ್ರಗಳು ನಿರ್ಧರಿಸಿವೆ. ಈ ಯೋಜನೆಗೆ ಅಮೇರಿಕಾ ಸಹ ಸಹಕಾರ ನೀಡುವುದಾಗಿ ಹೇಳಿದೆ. ಚೀನಾ ಜೊತೆಗಿದ್ದ ಜಿ7 ನ ಏಕೈಕ ದೇಶ ಇಟಲಿಯ ಪ್ರಧಾನಿ 'ಬಿಆರ್​ಐ ನ ಸದಸ್ಯತ್ವದಿಂದ ನಮ್ಮ ದೇಶದ ಆರ್ಥಿಕತೆಗೆ ಅಷ್ಟೇನು ಪ್ರಯೋಜನವಿಲ್ಲ. ಹಾಗಾಗಿ, ಅದರಿಂದ ಹೊರಬರುವ ಯೋಚನೆಯಲ್ಲಿದ್ದೇವೆ' ಎಂದಿದ್ದಾರೆ. ಈ ನಡೆ ಚೀನಾಕ್ಕೆ ಸಹಿಸಲಸಾಧ್ಯ ಅನ್ನುವುದಂತೂ ಸತ್ಯ! ಭಾರತದ ಚೀನಾ ವಿರುದ್ಧದ ನಡೆಗೆ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಬಾರದೆ ಉಳಿದ ಅಧ್ಯಕ್ಷ ಜಿಂಪಿಂಗ್ ನ ಗೈರುಹಾಜರಿ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳಲಿಲ್ಲ. 'ಚೀನಾದ ಅಧ್ಯಕ್ಷನ ಅನುಪಸ್ಥಿತಿ ಶೃಂಗಸಭೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ' ಎಂದು ಹೇಳುವ ಮೂಲಕ ವಿದೇಶಾಂಗ ವ್ಯವಹಾರ ಸಚಿವ ಶ್ರೀ ಜಯಶಂಕರ್ ಜಿಂಪಿಂಗ್ ನ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದಾರೆ.

Proposed Indo - Middle East - European Corridor 

ಜಿ20 ಯ ಯಶಸ್ಸು ಚೀನಾದ ಹೊಟ್ಟೆಯಲ್ಲಿ ಎಷ್ಟು ಕಿಚ್ಚು ಹೊತ್ತಿಸಿದೆಯೋ ಇಲ್ಲವೋ ತಿಳಿಯದು ಆದರೆ, ಆ ದೇಶದ ಪರವಾಗಿ ಬಿಂಬಿತವಾಗುವ ರಾಹುಲನ ಉದರಕ್ಕೆ ಬೆಂಕಿ ಬಿದ್ದಿರುವುದಂತೂ ಸ್ಪಷ್ಟ! ಆತನ ಹೊಟ್ಟೆಗೆ ಬೆಂಕಿ ಬಿದ್ದರೆ ಬಿತ್ತು ನಮಗಾಗುವ ನಷ್ಟವೇನಿಲ್ಲ. ಆದರೇ, ಯೂರೋಪಿನ ಪ್ರವಾಸದಲ್ಲಿ ವಿದೇಶಿಯರ ಮುಂದೆ ಭಾರತದ ಆಂತರಿಕ ವಿಚಾರಗಳನ್ನು ಮಾತಾಡುತ್ತಾ, ಚೀನಾದ ಬಿಆರ್​ಐ ಅನ್ನು ನಾಚಿಕೆಯಿಲ್ಲದೆ ಹೊಗಳುತ್ತಾನೆ! ಆ ದೇಶದ ಬೆಳವಣಿಗೆಗೆ ಅಲ್ಲಿರುವ ರಾಜಕೀಯ ಸ್ವಾತಂತ್ರ್ಯ ಕಾರಣ ಎಂದು ಚೀನಾಕ್ಕಿಂತಲೂ ಹೆಚ್ಚು ಚೀನಾ ಪರವಾಗಿ ಮಾತಾಡಿದ್ದಾನೆ! ಪ್ರತಿಯೊಂದು ದೇಶಕ್ಕೂ ಜಾಗತಿಕ ವಿದ್ಯಮಾನಗಳ ಕುರಿತು ತನ್ನದ್ದೇ ಆದ ನಿಲುವು ಹೊಂದಿರುತ್ತದೆ. ಅದಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾದುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದರೆ, ರಾಹುಲ್ ಮಾಡುತ್ತಿರುವ ಕೆಲಸ ನಿಜಕ್ಕೂ ಅಕ್ಷಮ್ಯ! ಭಾರತ ಚೀನಾಕ್ಕೆ ಎದುರಾಗಿ ಸ್ಪಷ್ಟವಾದ ಹೆಜ್ಜೆ ಇಡಬೇಕಾದರೇ ಚೀನಾದ ಗುಲಾಮರಿಗೆ ಸಂಕಟವಾಗಲೇ ಬೇಕಲ್ಲವೇ? ಅದಕ್ಕೆ ಸ್ಪಷ್ಟ ನಿದರ್ಶನ ರಾಹುಲ್! ಅಷ್ಟೇ ಅಲ್ಲದೇ ಇಲ್ಲಿನ ಕಾಂಗ್ರೇಸ್ ನಾಯಕರು ರಾಹುಲನ ಈ ನಡೆಯನ್ನು ಸಮರ್ಥಿಸಿಕೊಳ್ಳುವುದು ತೀರ ಅಸಹ್ಯಕರ! ಜಿ20 ಯ ನಾಯಕತ್ವದ ಬಗ್ಗೆ ಇತ್ತ ಜಗತ್ತಿನ ನಾಯಕರು ಭಾರತವನ್ನು ಹೊಗಳುತ್ತಿದ್ದಾರೆ, ಇಟಲಿ ಭಾರತದ ಪರ ಮಾತಾಡುತ್ತಿದೆ ಆದರೆ, ಅತ್ತ ಅದೇ ಇಟಲಿಯಮ್ಮನ ಮಗ ರಾಹುಲ್ ವಿದೇಶದಲ್ಲಿ ಭಾರತವನ್ನೇ ತೆಗಳುತ್ತಿದ್ದಾನೆ. ಥತ್!!

ಸನಾತನ ಧರ್ಮದ ಅಡಿಪಾಯವಾಗಿರುವ ಋಷಿವಾಕ್ಯದ ಆಧಾರದ ಮೇಲೆ ಜಗತ್ತಿನೆದುರು ಭಾರತ ವಿಜೃಂಭಿಸಿದೆ. ಜಗತ್ತಿನ ಒಳಿತಿಗೆ ಭಾರತ ಉಳಿಯುವುದು ಅವಶ್ಯಕವೆಂಬ ವಿಚಾರ ಭಾರತೀಯರೆಲ್ಲರಿಗೂ ಮನದಟ್ಟಾಗಲಿ, ದೇಶವನ್ನು ಕೊರೆಯುವ ಹುಳ(ಲ)ಗಳು ಅಳಿದು ಭಾರತ ಮತ್ತಷ್ಟು ಬಲಿಷ್ಠವಾಗಲಿ ಹಾಗೂ ಜಗತ್ತಿಗೆ ಗುರುವಾಗಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ.

***********************************************************

References

September 8, 2023

ಅವನೆಂದರೆ ಕಾಂಗ್ರೇಸ್ಸಿಗೇಕೆ ಉರಿ?

ಗೌತಮ್ ಅದಾನಿ - ಈ ಹೆಸರು ಕಿವಿಗೆ ಬಿದ್ದ ತಕ್ಷಣ ಕಾಂಗ್ರೇಸ್ಸಿಗರಿಗೆ ಉರಿ ಶುರುವಾಗುತ್ತದೆ. ವಿಚಾರ ಸ್ವಲ್ಪ ಹಳೆಯದಾದರೂ ಗಂಭೀರವಾದದ್ದು ಎಂಬ ಕಾರಣಕ್ಕೆ ಬರೆಯುತ್ತಿದ್ದೇನೆ. ಭಾರತದಲ್ಲಿ ಸಾಹುಕಾರರ ಸಾಲಲ್ಲಿ ಇರುವವರು ಆರ್ಸೆಲ್ಲರ್ ನ ಲಕ್ಷ್ಮೀ ಮಿತ್ತಲ್, ಮಹಿಂದ್ರಾ ಕಂಪನಿಯ ಆನಂದ್ ಮಹಿಂದ್ರಾ, ಬಿರ್ಲಾದ ಕುಮಾರ್ ಬಿರ್ಲಾ, ರಿಲಯನ್ಸ್ ನ ಅಂಬಾನಿ, ಇನ್ಫೋಸಿಸ್ ನ ನಾರಯಣ ಮೂರ್ತಿ, ವಿಪ್ರೋನ ಅಜೀಂ ಪ್ರೇಂಜೀ, ಗೌತಮ್ ಅದಾನಿ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುವುದು. ಇಷ್ಟೆಲ್ಲಾ ಶ್ರೀಮಂತರು, ಕೋಟ್ಯಾಧಿಪತಿಗಳಿದ್ದರೂ ಕಾಂಗ್ರೇಸ್ ಅದಾನಿಯನ್ನೇ ಗುರಿಯಾಗಿಸುತ್ತಿರುವುದೇಕೆ? 

Ports under control of Adani Group

ಈ ಪ್ರಶ್ನೆಗೆ ಉತ್ತರ ಹುಡುಕುವುದಾದರೆ ನಾವು ಸುಮಾರು 2000 ವರ್ಷಕ್ಕೂ ಹಿಂದಿನ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಇದು ರಸ್ತೆ, ರೈಲು ಹಾಗೂ ಬಹು ಮುಖ್ಯವಾಗಿ ಸಮುದ್ರ ಮಾರ್ಗದ ಮೂಲಕ ಜಾಗತಿಕ ವ್ಯಾಪಾರದ ಪ್ರಾಬಲ್ಯದ ಇತಿಹಾಸ. "ಸಮುದ್ರದ ಮೇಲೆ ಅಧಿಪತ್ಯ ಹೊಂದಿರುವವನು ಚಕ್ರವರ್ತಿಯಾಗಿರುತ್ತಾನೆ" ಎಂದು ಅಥೆನ್ಸಿನ ರಾಜಕಾರಣಿ ಥೆಮಿಸ್ಟೋಕಲ್ಸ್ ಹೇಳಿದ ಮಾತನ್ನು ಅಕ್ಷರಶಃ ಪಾಲಿಸಿದವರು ಚೀನಿಯರು! ಕ್ರಿ.ಪೂ 14 ರ ಸಮಯದಲ್ಲಿ ತನ್ನ ದೇಶ ಹಾಗೂ ಪಶ್ಚಿಮದ ನಡುವಿನ ವ್ಯಾಪಾರವನ್ನು ಸುಗಮಗೊಳಿಸಲು ಚೀನಾ 6400 ಕಿ.ಮೀ ರಷ್ಟು ಉದ್ದದ ಸಿಲ್ಕ್ ರೋಡನ್ನು ನಿರ್ಮಿಸುತ್ತದೆ. ಇದು ಸಾ.ಶ.ವ 1500 ವರೆಗೆ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾಗಿತ್ತು. ನಂತರ ಇದನ್ನೇ ಒನ್ ಬೆಲ್ಟ್ ಒನ್ ರೋಡ್ ಎಂದು ಚೀನಾ ಮರುನಾಮಕರಣ ಮಾಡಿತು. ಸುಮಾರು 155 ದೇಶಗಳಲ್ಲಿ ಮೂಲ ಸೌಕರ್ಯದ ನಿರ್ಮಾಣದ ಕಾರ್ಯಕ್ರಮವಿದು ಎಂದು ಇಡೀ ಜಗತ್ತನ್ನು ನಂಬಿಸುತ್ತಾ ತನ್ನ ವ್ಯಾಪಾರದ ಅನುಕೂಲಕ್ಕಾಗಿ ರಸ್ತೆ, ರೈಲ್ವೆ ಹಳಿ, ಪೈಪ್ ಲೈನ್, ಬಂದರುಗಳು, ವಿದ್ಯುತ್ ಸ್ಥಾವರಗಳು, ಎಸ್.ಇ.ಝಡ್ ಗಳನ್ನು ನಿರ್ಮಿಸುತ್ತಿದೆ. 

One Belt One Road (OBOR) Initiative by china

ಎರಡನೇ ವಿಶ್ವಯುದ್ಧದ ನಂತರ ಅಮೇರಿಕಾ ವಿಶ್ವದ ದೊಡ್ಡಣ್ಣ ಅನ್ನಿಸಿಕೊಂಡಿತು. ಜಾಗತೀಕರಣದ ಕಾರಣ ಅಮೇರಿಕಾ ಭಯೋತ್ಪಾದನೆ, ಹವಾಮಾನದ ವೈಪರಿತ್ಯ, ಹಾಗೂ ಇತರ ಜಾಗತಿಕ ಸಮಸ್ಯೆಗಳ ಕುರಿತು ಗಮನ ಹರಿಸಿತು. ಏತನ್ಮಧ್ಯೆ, ಚೀನಾ ಕಳೆದ ಮೂರು ದಶಕಗಳಲ್ಲಿ ಸದ್ದಿಲ್ಲದೆ ತನಗೆ ಬೇಕಾದ, ಆಯ್ದ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಾ, ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು. ಇದಷ್ಟೇ ಅಲ್ಲದೇ ಚೀನಾ 149 ದೇಶಗಳಲ್ಲಿ ಆಕ್ರಮಣಕಾರಿಯಾಗಿ ಭಾರಿ ಮೊತ್ತದ ಹೂಡಿಕೆ ಮಾಡಿತು ತನ್ಮೂಲಕ ಕೀನ್ಯಾ, ಜಾಂಬಿಯಾ, ಲಾಒಸ್, ಮಂಗೋಲಿಯಾ, ಪಾಕೀಸ್ತಾನ ಸೇರಿದಂತೆ ಅನೇಕ ಬಡ ರಾಷ್ಟ್ರಗಳನ್ನು ತನ್ನ ಸಾಲದ ಸುಳಿಯಲ್ಲಿ ಸಿಲುಕಿಸಿತು. ಚೀನಾ ಪಾಲಿಗೆ ಎಲ್ಲವೂ ಸರಿ ಇತ್ತು, ತನಗೆ ಪ್ರತಿಸ್ಪರ್ಧಿಯೇ ಇಲ್ಲದಂತೆ ಮೆರೆಯುತ್ತಿತ್ತು. ಆದರೆ, 2019 ನಂತರ ಶನಿ ಚೀನಾದ ಹೆಗಲೇರಿ ಎಲ್ಲವೂ ಬದಲಾಯಿತು!

ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಬಂದರು. ಭಾರತವನ್ನು ವ್ಯಾಪಾರ, ಸಂಸ್ಕೃತಿ ಮೂಲಕ ಜಾಗತಿಕ ಶಕ್ತಿಯಾಗಿ ರೂಪಿಸಲು ಸಂಕಲ್ಪಬದ್ಧರಾಗಿ ಇಂದಿಗೂ ದುಡಿಯುತ್ತಿದ್ದಾರೆ. ರಾಷ್ಟ್ರದ ನಾಯಕರ ಸಂಕಲ್ಪವನ್ನು ಸಾಕಾರಗೊಳಿಸಲು ಸಹಕರಿಸುವುದು ದೇಶದ ವ್ಯಾಪಾರಸ್ಥರು. ಚೀನಾದ ಕ್ಸಿ ಜಿನ್‌ಪಿಂಗ್‌ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು - ಚೀನಾ ಓಷನ್ ಶಿಪ್ಪಿಂಗ್ ಕಂಪನಿ, ಚೀನಾ ಮರ್ಚೆಂಟ್ಸ್ ಪೋರ್ಟ್ ಹೋಳ್ಡಿಂಗ್ಸ್, ಚೀನಾ ರೈಲ್ವೇ ಗ್ರೂಪ್, ಚೀನಾ ರೈಲ್ವೇ ಕನ್ಸ್ಟ್ರಕ್ಷನ್ ಕಾರ್ಪೋರೇಷನ್ ತರಹದ ಕಂಪನಿಗಳು. ಇದಲ್ಲದೇ ಡಿ.ಹೆಚ್.ಎಲ್, ಹೆಚ್.ಪಿ, ಜನರಲ್ ಎಲೆಕ್ಟ್ರಿಕ್ ನಂತಹ ವಿದೇಶಿ ಕಂಪನಿಗಳು ಸಹ ತಮ್ಮ ಲಾಭಕ್ಕಾಗಿ ಚೀನಾದ ಕಂಪನಿಗಳ ಜೊತೆಗೆ ಕೈಜೋಡಿಸಿದೆ. ಭಾರತದಲ್ಲೂ ಸಹ ಇಂತಹ ಕಂಪನಿಗಳು ದೇಶದ ಏಳಿಗೆಗಾಗಿ ಕೆಲಸ ಮಾಡುತ್ತಿವೆ. ಓ.ಎನ್.ಜಿ.ಸಿ, ಜಿ.ಏ.ಐ.ಎಲ್, ರಿಲಯನ್ಸ್, ಎಲ್&ಟಿ ಹಾಗೂ ಬಹು ಮುಖ್ಯವಾಗಿ ಅದಾನಿ ಗ್ರೂಪ್! 

ಅದಾನಿ ಪೋರ್ಟ್ಸ್ & ಎಸ್ಇಜೆಡ್ ಲಿಮಿಟೆಡ್ 1998 ರಲ್ಲಿ ಪ್ರಾರಂಭವಾಗೊಂಡು ಗುಜರಾತಿನ ಮುಂದ್ರಾ ಬಂದರು ಸೇರಿದಂತೆ ಭಾರತದ ಪ್ರಮುಖ ಬಂದರುಗಳನ್ನು ನಿರ್ವಹಿಸುತ್ತಿದೆ. ಇದೇ ಸಂಸ್ಥೆ ತನ್ನ ಸ್ವಾಮ್ಯದ ಕಂಪನಿಯೊಂದನ್ನು 2020 ರಲ್ಲಿ ಸಿಂಗಾಪುರದಲ್ಲಿ ಕಟ್ಟಿತು ಹಾಗೂ 2030 ರ ವೇಳೆಗೆ ವಿಶ್ವದ ಅತಿದೊಡ್ಡ ಬಂದರು ನಿರ್ಮಿಸುವ ಕಂಪನಿಯಾಗುವುದಾಗಿ ಘೋಷಿಸಿಕೊಂಡಿತು. ಈ ನಡೆ ಭಾರತವನ್ನು ಜಾಗತಿಕ ಶಕ್ತಿಯಾಗಿಸುವತ್ತ ಒಂದು ಪ್ರಮುಖ ಹೆಜ್ಜೆಯಾಯ್ತು. ಈ ರೀತಿಯ ನಡೆಯನ್ನು ಚೀನಾ ನಿರೀಕ್ಷಿಸಿರಲಿಲ್ಲ. ಮುಂದಿನ ಹಂತದಲ್ಲಿ ಮಯನ್ಮಾರ್, ಬಾಂಗ್ಲಾದೇಶಗಳಲ್ಲಿ ಅದಾನಿ ಸಂಸ್ಥೆ ತನ್ನ ವ್ಯಾಪರದ ಬಾಹುಗಳನ್ನು ಚಾಚಿತು, 2022 ರಲ್ಲಿ ಪಕ್ಕದ ಶ್ರೀಲಂಕಾವನ್ನು ಪ್ರವೇಶಿಸಿತು. ಇದರಿಂದ ಚೀನಾ ಕೆಂಡಾಮಂಡಲವಾಯಿತು. ಕಾರಣ, ಅಲ್ಲಿಯವರೆಗೆ ಲಂಕಾದ ಬಂದರು ಚೀನಾದ ನಿಯಂತ್ರಣದಲ್ಲಿತ್ತು ಹಾಗೂ ಆ ಬಂದರು ಚೀನಾದ ಸೈನ್ಯದ ದೃಷ್ಟಿಯಿಂದ ಆಯಾಕಟ್ಟಿನ ಪ್ರದೇಶವಾಗಿತ್ತು. 

ಅದಾನಿ ಅಲ್ಲಿಗೆ ನಿಲ್ಲಲಿಲ್ಲ. ಅರಬ್ ಒಕ್ಕೂಟ ರಾಷ್ಟ್ರಗಳ ಜೊತೆಗೂಡಿ ತಾಂಜಾನಿಯಾ ತನ್ಮೂಲಕ ಆಫ್ರಿಕಾಕ್ಕೆ ಲಗ್ಗೆ ಇಟ್ಟರು. ತಾಂಜಾನಿಯಾದಲ್ಲಿ ಚೀನಾ ಅದಾಗಲೇ ಒಂದು ವರ್ಷದಿಂದ ಬಾಗಮೊಯೋ ಬಂದರು ನಿರ್ಮಣದ ಪ್ರಯತ್ನದಲ್ಲಿತ್ತು. ಅದಾನಿ ಮೊರಾಕೊಗೆ ಹೋದರು ಅಲ್ಲೂ ಸಹ ಚೀನಾ ಅದಾಗಲೇ ತನ್ನ ಕಬಂದ ಬಾಹುಗಳನ್ನು ಚಾಚಿತ್ತು. ಇದೆಲ್ಲಕ್ಕೂ ಮಿಗಿಲಾಗಿ ಅದಾನಿ ಚೀನಾಕ್ಕೆ ಹೊಡೆದ ನೀಡಿದ್ದು ಇಸ್ರೇಲ್‌ನಲ್ಲಿ. ಜನವರಿ 2023 ರಲ್ಲಿ ಅದಾನಿ ಇಸ್ರೇಲ್‌ನ ಹೈಫಾ ಬಂದರುಗಳಲ್ಲೊಂದನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಚೀನಾ ಈ ಬಂದರನ್ನು ಪಡೆಯಲು ಶತಪ್ರಯತ್ನ ಮಾಡಿ ವಿಫಲವಾವಾಗಿತ್ತು. ಅದೇ ಸಮಯಕ್ಕೆ ಜಾರ್ಜ್ ಸೊರೋಸ್ ನ ಹಿಂಡೆನ್ಬರ್ಗ್ ವರದಿ ಬಂದದ್ದು! ಇದರ ನಂತರ ಅದಾನಿ ಈಜಿಪ್ಟಿಗೂ ಕಾಲಿಟ್ಟರು ಹಾಗೂ ಇತ್ತೀಚೆಗೆ ಗ್ರೀಸಿನ ಬಂದರಿಗಾಗಿ ಸಹ ಮಾತು ನಡೆಸುತ್ತಿದ್ದಾರೆ. ನೆನಪಿಡಿ, ನರೇಂದ್ರ ಮೋದಿ ಕಳೆದ ವಾರ ಬ್ರಿಕ್ಸ್ ಶೃಂಗಸಭೆ ನಂತರ ಗ್ರೀಸಿಗೆ ಭೇಟಿಕೊಟ್ಟರು. ಚೀನಾದ ನಿಯಂತ್ರಣದಲ್ಲಿರುವ ಪಿರಾಯಸ್ ಬಂದರನ್ನು ಭಾರತ ಪಡೆಯುವ ಪ್ರಯತ್ನದಲ್ಲಿದೆ.

Adani Group Enters Israel After Haifa Port Acquisition

ಜಾಗತಿಕ ಮಾಧ್ಯಮಗಳು ಚೀನಾ ವಿರುದ್ಧ ಭಾರತ ಹಿಂದಿಕ್ಕಿದೆ ಎಂದು ಹೇಳಲಾರಂಭಿಸಿವೆ. ಮತ್ತೀಗ ಕಾಂಗ್ರೇಸ್ ನ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಅದಾನಿಯ ಗ್ರೀಸಿನ ನಡೆಯ ಕುರಿತು ಪ್ರಶ್ನೆ ಎತ್ತುತ್ತಿದೆ. ಈ ಹಿಂದೆಯೂ ರಾಹುಲ್ ಅದಾನಿ ಸಂಸ್ಥೆಯ ಮೇಲೆ ಕೂಗಾಡಿದ್ದಾನೆ, ಅದನ್ನೇ ಆಧಾರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅದಾನಿಯನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. 2009 ರಲ್ಲಿ ರಾಹುಲ್ ಹಾಗೂ ಚೀನಾ ನಡುವೆ ಆದ ಒಪ್ಪಂದದ ವಿಚಾರ ಇಂದಿಗೂ ನಿಗೂಢವಾಗಿದೆ. ಚೀನಾ ಭಾರತದ ಗಡಿ ತಿದ್ದಿದರೆ ರಾಹುಲ್ ಇಲ್ಲಿನ ಕೇಂದ್ರ ಸರ್ಕಾರದ ವಿರುದ್ಧ ಮಾತಾಡುತ್ತಾನೆ. ಭಾರತದ ಪ್ರಧಾನಿಯಾಗಬೇಕೆಂಬ ಕನಸು ಕಾಣುತ್ತಿರುವ ವ್ಯಕ್ತಿ ಚೀನಾದ ಗುಲಾಮ. ಇವನನ್ನು ಕೂಡಿಕೊಂಡಿರುವವರು ದೇಶವನ್ನು ತುಂಡರಿಸಬೇಕೆಂಬ ಕನಸು ಕಾಣುತ್ತಿರುವ ಡಾಟ್ ಪಾರ್ಟಿಗಳು! ಇವರೆಲ್ಲರೆದುರು ನಿಂತು ಭಾರತವನ್ನು ಗೆಲ್ಲಿಸಬೇಕಾಗಿರುವುದು ನಾವು ಮತ್ತು ನೀವು.

***********************************************************

References