ಇತ್ತೀಚೆಗೆ ಈ ರಾಷ್ಟ್ರೀಯತೆ ಎಂಬ ಪದ ಬಹಳವಾಗಿ ಬಳಕೆಗೆ ಬರುತ್ತಿದೆ. ಇದರ ಬಗ್ಗೆ ಸಾಕಷ್ಟು ವಾದಗಳೂ ನಡೆದಿವೆ. ನಮ್ಮ ವೆಬ್ ಬ್ರೌಸರ್ ಗಳು ಕೊಡುವ ವ್ಯಾಕ್ಯೆಗಳನ್ನು ನೋಡಿದರೆ ಭಯವಾಗುತ್ತದೆ.
"a feeling that people have of being loyal to and proud of their country often with the belief that it is better and more important than other countries"
"Nationalism is always confused with Patriotism"
 
ಹೀಗೆ ಹಲವು ಸಿಗುತ್ತದೆ. ಇವೆಲ್ಲ ಒಂದು ರೀತಿ ಸಂಕುಚಿತ ಎಂಬ ಭಾವ ಕೊಡುತ್ತದೆ. ನಾವೇ ಶ್ರೇಷ್ಟ ಎಂಬ ಅಹಂ ಭಾವನೆ ಕೂಡ ವ್ಯಕ್ತವಾಗುತ್ತದೆ. ಕೆಲವರು ಇಂತಹದ್ದನ್ನು ತಿಳಿದುಕೊಂಡು 'ರಾಷ್ಟ್ರೀಯತೆ' ಪರ ವಾದಿಸುವವರನ್ನೇ ಧೂಷಿಸುತ್ತಾರೆ. ಸುಭಾಷ್ ಬೋಸರು ರಾಷ್ಟ್ರೀಯರು ಎಂಬ ಕಾರಣಕ್ಕೆ ಅವರನ್ನು ಇಂದಿಗೂ ವಿರೋಧಿಸುವವರು ಇದ್ದಾರೆ. ಆದರೆ, ಭಾರತದಲ್ಲಿ ರಾಷ್ಟ್ರೀಯತೆ ಎಂಬುದು ಒಂದು ಒಳ್ಳೆಯ ಸಂಕೇತ. ಅಂದರೆ ಇಲ್ಲಿ ನಮ್ಮದೇ ಆದ ಒಂದು ವ್ಯಾಕ್ಯೆ ಇರಬೇಕು, ನಮ್ಮದೇ ಆದ ಒಂದು ದೃಷ್ಟಿಕೋನವಿರಬೇಕು. ಅಲ್ಲವೇ? ವ್ಯಾಕ್ಯೆ ಕೊಡುವಷ್ಟು ಬುದ್ಧಿವಂತ ನಾನಲ್ಲ. ಆದರೆ ಉದಾಹರಣೆ ಕೊಟ್ಟು ಹೇಳುವುದು ಹೆಚ್ಚು ಸಮಂಜಸ.
ಯೋಚಿಸಿನೋಡಿ, ನಮ್ಮ ಮನೆಯಲ್ಲಿ ನಾವು, ಅಪ್ಪ, ಆಮ್ಮ, ಅಣ್ಣ, ಅಕ್ಕ, ತಂಗಿ ಎಲ್ಲರೂ ಇರುತ್ತಾರೆ (ಒಂದೇ ಮನೆ ಅಲ್ಲದಿದ್ದರೂ ಒಂದೇ ಕುಟುಂಬಕ್ಕೆ ಸೇರಿರುತ್ತಾರೆ). ಒಂದೇ ಮನೆಯವರಾದರೂ ಸಹ ಎಲ್ಲರಿಗೂ ಅವರದೇ ಆದಂತಹ ಕಲ್ಪನೆಗಳು, ಭಾವನೆಗಳು ಇರುತ್ತದೆ. ಮಕ್ಕಳು ತಪ್ಪು ಮಾಡಿದಾಗ ಹಿರಿಯರು ತಿದ್ದುತ್ತಾರೆ, ಎಲ್ಲರ ಭಾವನೆಗಳು ವ್ಯಕ್ತಿರಿಕ್ತವಾದರು ಸಹ ಆಲ್ಲಿ ಒಂದು ಕೌಟುಂಬಿಕ ಚೌಕಟ್ಟು ಇರುತ್ತದೆ. ಸಮಾಜದ ಮುಂದೆ ತಮ್ಮ ಕುಟುಂಬದ ಗೌರವ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿರುತ್ತದೆ. ಇಲ್ಲವಾದಲ್ಲಿ ಆ ಕುಟುಂಬ ಎಲ್ಲರೆದುರಿಗೆ ನಗೆಪಾಟಲಾಗುತ್ತದೆ.
 
ಇನ್ನು ಸ್ವಲ್ಪ ವಿಸ್ತರಿಸಿ ಹೇಳುವುದಾದರೆ ಊರಿಗೊಂದು ದೊಡ್ಡಮನೆ ಇರುತ್ತದೆ. ಸಹಜವಾಗೆ ಆ ಮನೆಯವರಿಗೆ ಊರಿನ ಸವಾಬ್ದಾರಿ ಹೆಚ್ಚು ಹಾಗು ಸಹಜವಾಗೆ ಆ ಮನೆಯವರಿಗೆ ತಮ್ಮ ಕುಟುಂಬದ ಬಗ್ಗೆ ಹೆಮ್ಮೆ ಇರುತ್ತದೆ.
ಈ ವಿಚಾರವನ್ನೇ ದೇಶಕ್ಕೆ ಹೋಲಿಸಿ ನೋಡಿ. ಭಾರತ ದೇಶ ಒಂದು ಮನೆ ಎನ್ನುವುದಾದರೆ ನಾವು ಆ ತಾಯಿ ಮಕ್ಕಳು, ಒಂದೇ ಕುಟುಂಬಕ್ಕೆ ಸೇರಿದವರು. ಎಲ್ಲರೂ ಸೇರಿ ಈ ಕುಟುಂಬದ ಗೌರವವನ್ನು ಪ್ರಪಂಚವೆಂಬ ಸಮಾಜದ ಎದುರು ಕಾಪಾಡುವುದು ನಮ್ಮ ಕರ್ತವ್ಯ. ಭಾರತವು ಪ್ರಪಂಚವೆಂಬ ಊರಿನ ದೊಡ್ಡಮನೆ. ಅದು ಕಾರಣ ನಮಗೂ ಜವಾಬ್ದಾರಿ ಹೆಚ್ಚು. ನಮ್ಮಲ್ಲಿ ಯಾರಾದರೂ ತಪ್ಪು ಮಾಡಿದಾಗ ತಿದ್ದುವುದು ನಮ್ಮದೇ ಆದ ಕರ್ತವ್ಯ. ಅದು ಬಿಟ್ಟು ಊರಿನ ಮುಂದೆ ಪಂಚಾಯ್ತಿ ಮಾಡುವುದಲ್ಲ. ದೊಡ್ಡಮನೆ ಆದ ಕಾರಣ ಭಾರತವೆಂದರೆ ಸಹಜವಾಗೆ ಹೆಮ್ಮೆ ಜಾಸ್ತಿ.
ಸಂಕ್ಷಿಪ್ತವಾಗಿ ಭಾರತೀಯನಾಗಿ ಹೇಳುವುದಾದರೆ
ದೇಶವನ್ನು ಪ್ರೀತಿಸುವುದು; ದೇಶಪ್ರೇಮ
ದೇಶವನ್ನು ಪೂಜಿಸುವುದು; ದೇಶಭಕ್ತಿ
ದೇಶವೇ ಸರ್ವಸ್ವವಾದರೆ ಅದು 'ರಾಷ್ಟ್ರೀಯತೆ'
ಎಲ್ಲರೂ ಒಟ್ಟಾಗಿ ಬಾಳಬೇಕು ಮತ್ತೆ ಭಾರತವನ್ನು ಭವ್ಯವಾಗಿಸಬೇಕು.
ಮತ್ತೆ ಭಾರತ #ವಿಶ್ವಗುರು ಆಗಿ ಮೆರೆಯಬೇಕು.

No comments:
Post a Comment