November 30, 2016

ಸೂತಕದ ಕಣ್ಣಿಗೆ ಕಾಗೆಯೇ ಶ್ರೇಷ್ಟ...!!!

ನವೆಂಬರ್ 8 ಎಂಬ ದಿನಾಂಕ ಭಾರತೀಯರೆಲ್ಲರಿಗೂ ಮರೆಯಲಾಗದಂತಹ ದಿನ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 500, 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಕಾಳಧನಿಕರ ವಿರುದ್ಧ ಅಕ್ಷರ ಸಹ 'ಸರ್ಜಿಕಲ್ ಸ್ಟ್ರೈಕ್' ಮಾಡಿದಂತಹ ದಿನ. ಇಡೀ ದೇಶದಲ್ಲಿ ಈ ವಿಚಾರ ಸಾಕಷ್ಟು ಚರ್ಚಾಸ್ಪದವಾಗಿದೆ. ಬ್ಯಾಂಕಿನಿಂದ ದೂರವೇ ಇದ್ದವರಿಗೆ ದುಗುಡ, ಬ್ಯಾಂಕು, ಎ.ಟಿ.ಎಂ, ಕ್ರೆಡಿಟ್ ಕಾರ್ಡ್ ಬಳಸುದಾರರಿಗೆ ಸಂತಸ, ಬ್ಯಾಂಕಿನ ವ್ಯವಹಾರವೆಲ್ಲ ತಿಳಿದೂ ಅದರಿಂದ ದೂರವಿದ್ದು ಹಣವನ್ನು ಅಕ್ರಮವಾಗಿ ಕೂಡಿಟ್ಟವರು ಪತರುಗುಟ್ಟುವಂತಾಗಿದೆ. ಬಹುತೇಕ ಜನರಿಗೆ ನೋಟು ಬದಲಾವಣೆ, ಎ.ಟಿ.ಎಂ ನಿಂದ ಹಣ ಪಡೆಯಲು ತುಂಬ ಹೊತ್ತು (ಗರಿಷ್ಟ 4 ತಾಸು) ಸಾಲಿನಲ್ಲಿ ನಿಲ್ಲಲು ಖಂಡಿತವಾಗಿಯೂ ಸಮಸ್ಯೆ ಆಗಿದೆ ಆದರೆ ಹೆಮ್ಮೆ ಇದೆ. ಆದರೆ ಈ ವಿಚಾರವನ್ನು ರಾಜಕೀಯವಾಗಿ ಹಾಗು ವೈಯಕ್ತಿಕವಾಗಿ (ಕಾರಣಗಳು ಬಹಳ) ಮೋದಿಯವರನ್ನು ವಿರೋಧಿಸುವವರು, ಕಮ್ಯೂನಿಸ್ಟ್‌ರು ವಿರೋಧಿಸುತ್ತ ಗೊಂದಲ ಎಬ್ಬಿಸುತ್ತಿದ್ದಾರೆ ಅನ್ನುವುದು ನಮ್ಮ ದೇಶದ ದೌರ್ಭಾಗ್ಯ.
 

ಮೋದಿಯವರ ಈ ನಡೆಯಿಂದ ನಮ್ಮ ಸುತ್ತ ಮುತ್ತಲು ಆಗಿರುವ ಬದಲಾವಣೆಗಳನ್ನು ತಿಳಿಸಲು ಇಚ್ಚಿಸುತ್ತೇನೆ.
  1. ಬ್ಯಾಂಕುಗಳಿಗೆ ಹಣ ಹರಿದು ಬಂತು.
  2. ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲೆಸೆತ ಕಮ್ಮಿ ಆಯಿತು.
  3. ಎಲ್ಲಿಯೂ ಪ್ರತಿಭಟನೆ ವ್ಯಕ್ತವಾಗಿಲ್ಲ (ರಾಷ್ಟಪತಿ ಭವನಕ್ಕೆ ತೆರಳಿದ 30 ಜನ ಬಿಟ್ಟರೆ).
  4. ಕೆಲವು ರಾಜಕೀಯ ಪಕ್ಷಗಳಂತು ಬಾಡಿಗೆ ಗೂಂಡಗಳನ್ನು ಕರೆದು ತಂದು ಪ್ರತಿಭಟಿಸಲು ಒತ್ತಾಯ ಮಾಡಿದ್ದಾರೆ.
  5. ಒರಿಸ್ಸ, ಆಂಧ್ರ, ಬಿಹಾರ, ಮಧ್ಯ ಪ್ರದೇಶಗಳಲ್ಲಿ ೪೫೦ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗತರಾಗಿದ್ದಾರೆ (ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಇದು ಗರಿಷ್ಟ ಪ್ರಮಾಣದ ಶರಣಾಗತಿ).
  6. ಆಕ್ರೋಶ ದಿವಸವನ್ನು ಮಾಡುತ್ತೇವೆ ಎಂದವರ ಮುಖಕ್ಕೆ ಮಸಿ ರಾಚಿದಂತಾಯಿತು.
  7. ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗುವುದೆಡೆಗೆ ಒಂದು ಹೆಜ್ಜೆ.
  8. ನೆರೆ ರಾಷ್ಟಗಳಿಂದ ಹರಿದು ಬರುವ ನಕಲಿ ನೋಟುಗಳ ಮೇಲೆ ಕಡಿವಾಣ.
  9. ಕೆಲ ದಿನಗಳು ದೈನಂದಿನ ವ್ಯವಹಾರಗಳು ಕುಂಟಿತವಾಯಿತು. (2% ಜಿ.ಡಿ.ಪಿ ಕಡಿತ)
ಹೀಗೆ ಅನೇಕ ವಿಚಾರಗಳನ್ನು ಗಮನಿಸಬಹುದು. ಇನ್ನು ಆಳಕ್ಕೆ ಇಳಿಯುವುದಾದರೆ ಶ್ರೀ ಅನಿಲ್ ಬೋಕಿಲ್ ರವರ 'ಅರ್ಥಕ್ರಾಂತಿ ಪ್ರಸ್ಥಾವನೆ'ಯ ಐದನೇ ಒಂದು ಭಾಗವನ್ನು ಮಾತ್ರ ಈಗ ಮೋದಿ ಕಾರ್ಯರೂಪಕ್ಕೆ ತಂದಿರುವುದು ಎಂದು ಅರಿವಾಗುತ್ತದೆ.

ಇದೆಲ್ಲದರ ನಡುವೆ ಸಾಮಾನ್ಯವಾಗಿ ನಮ್ಮನ್ನು ಕಾಡುವ ಪ್ರಶ್ನೆಗಳು ಮತ್ತು ಅದಕ್ಕೆ ನನಗೆ ತಿಳಿದ ಉತ್ತರವನ್ನು ಇಲ್ಲಿ ತಿಳಿಸುತ್ತೇನೆ.

1. 500, 1000 ರೂ ಮುಖಬೆಲೆಯ ನೋಟು ನಿಷೇಧ ಮಾಡಿದರು ಸರಿ. ಆದರೆ 2000 ರೂ ನೋಟು ಯಾಕೆ ?
ಉ: ದೇಶದಲ್ಲಿ ನಗದು ವ್ಯವಹಾರ ಹೆಚ್ಚು ನಡೆಯುತ್ತಿದ್ದುದು 100, 500 ನೋಟುಗಳಲ್ಲೆ. 1000 ರೂ ಕೂಡ ತಕ್ಕ ಮಟ್ಟಿಗೆ ಇತ್ತು. ಈಗ ಏಕಾಏಕಿ ಇವುಗಳನ್ನು ತೆಗೆದಾಗ ವ್ಯವಹಾರ ಕುಂಟಿತವಾಗುವುದು ಸಹಜ. ಅದನ್ನು ಸರಿದೂಗಲು 2000 ಮುಖಬೆಲೆಯ ನೋಟು ತಂದಿದ್ದಾರೆ. ಮಿಕ್ಕ 10, 20, 50, 100 ರ ನೋಟುಗಳು ಇದ್ದೇ ಇದೆ. 4 ದಿನ 500 ರೂ ಗಳ ವ್ಯವಹಾರ ಮಾಡುವ ಬದಲು 2000 ರೂ ಕೊಟ್ಟು 4 ದಿನ ವರ್ತನೆ ಮಾಡಿಕೊಂಡರೆ ಆಯ್ತು.

2. ಏ.ಟಿ.ಎಂ ಮುಂದೆ ಬಹಳ ಮಂದಿ ತುಂಬಾ ಹೊತ್ತಿನಿಂದ ಹಣಕ್ಕಾಗಿ ಕಾಯಬೇಕಾಗಿ ಬಂತಲ್ಲ?
ಉ: ಈ ಪ್ರಶ್ನೆಗೆ ನಗರ ಮತ್ತು ಹಳ್ಳಿಗಳ ವಿಚಾರದ ಅಡಿಯಲ್ಲಿ ಉತ್ತರ ಕೊಡಬೇಕಾಗುತ್ತದೆ.

ನಗರ: ಏ.ಟಿ.ಎಂ ಕಾರ್ಡ್ ಇದೆ ಎಂದ ಮೇಲೆ ಅದನ್ನು ಸ್ವೈಪ್ ಮಾಡಿ ವ್ಯವಹಾರ ಮಾಡುವ ಬದಲು ಸಾಲಿನಲ್ಲಿ ಏಕೆ ನಿಲ್ಲಬೇಕು? ಕಾರ್ಡ್ ಮತ್ತು ಮೊಬೈಲ್ ಇರುವಾಗ ಕೈಯಲ್ಲಿ ನಗದು ಯಾಕೆ ಬೇಕು?
ಹಳ್ಳಿ: ಏ.ಟಿ.ಎಂ ಕಾರ್ಡ್ ಇರುವುದಾದರೆ ಬ್ಯಾಂಕಿಗೆ ಹೋಗಿ ಕಾರ್ಡ್ ಮೂಲಕ ನಿಮಗೆ ಬೇಕಾದವರಿಗೆ ನಿಮ್ಮ ಖಾತೆಯಿಂದ ಹಣ ತಲುಪಿಸಬಹುದು. ಈ ಸೌಲಭ್ಯ ಎಸ್.ಬಿ.ಐ ಅಲ್ಲಿ ಇದೆ. ಮಹಾರಾಷ್ಟ್ರದ ಹಳ್ಳಿ ಒಂದರ ಹೋಟೆಲ್ ಉದ್ಯಮಿಯೊಬ್ಬರ ವಿಚಾರವನ್ನು ಮೋದಿ 'ಮನ್ ಕೀ ಬಾತ್' ಅಲ್ಲಿ ಹೇಳಿದ್ದು ಗೊತ್ತಲ್ಲ. ಈ ಮೊಬೈಲ್ ಯುಗದಲ್ಲಿ ಇವೆಲ್ಲ ಕಷ್ಟವೇ ಅಲ್ಲ.

3. 2000 ರೂ ನೋಟು ನಕಲಿ ಆಗಲ್ಲವೋ ?
ಉ: ಅಗುತ್ತೆ ಖಂಡಿತ ಇನ್ನು 1 ವರ್ಷ ಈ ನೋಟುಗಳು ಚಲಾವಣೆಯಲ್ಲಿ ಇದ್ದರೆ. ಇನ್ನು 8-9 ತಿಂಗಳುಗಳಲ್ಲಿ ಇದನ್ನು ಕೂಡ ನಿಷೇಧ ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ. (ಅರ್ಥಕ್ರಾಂತಿಯ 3ನೇ ಪ್ರಸ್ಥಾವನೆ ಪ್ರಕಾರ ೫೦ರ ಮೇಲಿನ ನೋಟುಗಳನ್ನು ನಿಷೇಧಿಸಬೇಕು ಎಂದು).

4. ಇದರಿಂದ ನಮಗಾಗುವ ಉಪಯೋಗವೇನು ?
ಉ. ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗುತ್ತದೆ. ವ್ಯವಹಾರ ಬ್ಯಾಂಕುಗಳ ಮೂಲಕ ನಡೆಸಿದಷ್ಟು ಪಾರದರ್ಶಕತೆ ಹೆಚ್ಚುತ್ತದೆ. ಬ್ಯಾಂಕಿಗೆ ಹಣ ಸೇರಿದಷ್ಟೂ ಜನರಿಗೆ ಅನುಕೂಲ ಜಾಸ್ತಿ. ಹೆಚ್ಚಿನ ಮಾಹಿತಿಗಾಗಿ Arthakranthi ನೋಡಿ.

ರಾಜಕೀಯವಾಗಿ ನೋಡುವುದಾದರೆ ಮೋದಿಯವರ ಧೈರ್ಯ ಮೆಚ್ಚಲೇ ಬೇಕು. ಚುಣಾವಣೆ ಸಮಯದಲ್ಲಿ ಇಂತಹ ಗಟ್ಟಿ ನಿರ್ಧಾರ ಮಾಡುವುದು ಸುಲಭದ ಮಾತಲ್ಲ. ಅಕಸ್ಮಾತ್ ಈ ನಡೆ ಹಾದಿ ತಪ್ಪಿದರೆ ಅವರ ರಾಜಕೀಯ ಜೀವನವೇ ಮುಗಿದಂತೆ. ಹಾಗಾದರೆ ಮೋದಿಯವರು ಪಕ್ಷದವರಿಗೆ ಅಥವಾ ತಮಗೆ ಬೇಕಾದವರಿಗೆ ಮೊದಲೆ ಹೇಳಿದ್ದರೆ? ಇಲ್ಲ, ಹೇಳಿರಲಿಕ್ಕೆ ಸಾಧ್ಯವಿಲ್ಲ. ಹೇಳಿದ್ದರೆ ಜನರಿಗೆ ಹೇಗೊ ವಿಚಾರ ಮುಟ್ಟುತ್ತಿತ್ತು ಮತ್ತು ಈ ನಡೆ ಫ಼್ಲಾಪ್ ಆಗುತ್ತಿತ್ತು. ಇಂತಹ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಗರಿಷ್ಟ ಪ್ರಮಾಣದ 'ನೈತಿಕತೆ' ಇರಬೇಕು. ಸುಖಾಸುಮ್ಮನೆ ಸಾಧ್ಯವೇ ಇಲ್ಲ.

ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ರವರು ಇದರ ಬಗ್ಗೆ "ಮಾತಾಡಿರುವುದೇ" ದೊಡ್ಡ ವಿಚಾರ. ಅದು ಹಾಗಿರಲಿ. ಪರರ ಕೆಲಸಗಳನ್ನು ಧೂಷಿಸುವ ಮುನ್ನ ನಾವು ಮಾಡಿದ್ದೇನು ಎಂದು ಕೇಳಿಕೊಳ್ಳಬೇಕು.
  • 1972 - 76: ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ
  • 1982 - 85: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್
  • 1985 - 87: ಭಾರತೀಯ ಪ್ಲಾನಿಂಗ್ ಕಮಿಷನ್ನಿನ ಡೆಪ್ಯುಟಿ ಚೇರ್ಮನ್
  • 1991 - 95: ಭಾರತದ ಹಣಕಾಸು ಸಚಿವ
  • 2004 - 14: ಭಾರತದ ಪ್ರಧಾನಿಗಳು
ಇಷ್ಟೂ ಹುದ್ದೆಗಳನ್ನು ನಿರ್ವಹಿಸಿದವರ ವಿದ್ಯಾರ್ಹತೆ ಬಗ್ಗೆ ಎರಡು ಮಾತಿಲ್ಲ. ಆದರೆ ೬೦% ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಇಟ್ಟುಕೊಂಡಿಲ್ಲ ಎಂದು ಪ್ರಶ್ನೆ ಮಾಡಿದಾಗ ಇವರು 1972 - 2014 ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಹುಟ್ಟುವುದು ಸಹಜ. ಇವರು ಪ್ರಧಾನಿ ಆಗಿದ್ದಾಗ 2G, CWG, Coal Gate ಹಗರಣಗಳು ನಡೆದಾಗ ಮೌನವಹಿಸಿದ್ದು ಯಾಕೆ ? ವೈಯಕ್ತಿಕವಾಗಿ ಒಳ್ಳೆಯವರಾಗಿರಬಹುದು ಆದರೆ, ದೇಶದಲ್ಲಿನ ಹಗರಣದ ವಿಚಾರ ಬಂದಾಗ ಮೌನವೂ ಸಹ ಅಪರಾಧ. ಕರ್ಣ ಕೌರವರ ಜೊತೆ ಇದ್ದ ಹಾಗೆ. ಇವರ ವಿದ್ಯಾರ್ಹತೆ ಬಗ್ಗೆ ಎರಡು ಮಾತಿಲ್ಲ ಆದರೆ, ನೈತಿಕತೆ ಇದ್ದಿದ್ದರೆ ಹಗರಣಗಳು ನಡೆಯಲು ಬಿಡುತ್ತಿರಲಿಲ್ಲ ಮತ್ತು ರಾಷ್ಟ್ರೀಯತೆಯ ಭಾವ ಇದ್ದಿದ್ದರೆ ಭಾರತೀಯನಾಗಿ ಭಾರತದಲ್ಲಿ ಹಗರಣ ನಡೆಯಲು ಬಿಡುತ್ತಿರಲಿಲ್ಲ ಅಥವಾ ಕನಿಷ್ಟ ಪಕ್ಷ ಖಂಡಿಸುತ್ತಿದ್ದರು. ಇವರನ್ನು ನೋಡಿದಾಗ ನನಗನ್ನಿಸಿದ್ದು "Morality and Nationality is more important than Degrees".

ಇನ್ನು ಈ ದೇಶದ ಕಮ್ಯೂನಿಷ್ಟರ ಬಗ್ಗೆ ಹೇಳಲೇಬೇಕಾಗಿಲ್ಲ. ನಮ್ಮ ಸ್ವಾತಂತ್ಯ್ರ ನಂತರದ ಇತಿಹಾಸವನ್ನು ಗಮನಿಸಿದಾಗ (ಮುಖ್ಯವಾಗಿ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ), ಇವರುಗಳು ಎಷ್ಟು ನೀಚರು ಎಂದು ತಿಳಿಯುತ್ತದೆ. ಇದರ ಮುಖಂಡ ಶ್ರೀ ಸೀತಾರಾಂ ಎಚುರಿ (ಸಿ.ಪಿ.ಐ(ಎಮ್) ನಾಯಕ). ಇವನಿಗೆ ಬೆಂಬಲ ಕೊಡುವುದು N.D.T.V ಎಂಬ ಖಾಸಗಿ ವಾಹಿನಿ. ಈ ವಾಹಿನಿಯ ಯೋಗ್ಯತೆ ಎಲ್ಲರಿಗೂ ತಿಳಿದಿರುವುದೆ. 'ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ' ಎನ್ನುವ ಹಾಗಿದೆ ಇವರ ಸಂಭಂದ. ಇವನ ಹೇಳಿಕೆಗಳನ್ನು ಮುಂದಿಟ್ಟುಕೊಂಡು ವಾದ ಮಾಡುವವರಿಗೆ ಏನು ಹೇಳುವುದೋ ನಾ ಕಾಣೆ.
ಇವರೊಟ್ಟಿಗೆ ಇವರ ಬೆಂಬಲಿಗರು ಹೇಳಿಕೊಂಡು ತಿರುಗುವುದು ಈ ರೀತಿ:
  • Humanity is the only religion
  • Nothing wrong with anti-nationalistic thought as long as it causes public inconvenience
  • Nationalistic thoughts have anything to do with economic reforms is bullshit
ಇವರ ಯೋಚನೆಗೂ, ಇಟ್ಟುಕೊಂಡಿರುವ ಸಿದ್ಧಾಂತಕ್ಕೂ ಸಂಭಂದವೇ ಇಲ್ಲ.
  • ಮನುಷ್ಯತ್ವಕ್ಕೆ ಅಷ್ಟು ಬೆಲೆ ಕೊಡುವವರ ಕಣ್ಣಿಗೆ ಕಮ್ಯೂನಿಷ್ಟರ ಕಗ್ಗೊಲೆಗಳು ಕಾಣಲಿಲ್ಲ ಪಾಪ. ದೇಶದ ಸೈನಿಕರು ಹುತಾತ್ಮರಾದಾಗ ಎಲ್ಲಿ ಅಡಗಿತ್ತೋ ಇವರ ಪದಪುಂಜಗಳು ?
  • 'Anti National' ಅಂದರೆ ದೇಶ ವಿರೋಧಿ ಎಂದರ್ಥ. ಅದನ್ನ ಹೆಮ್ಮೆ ಇಂದ ಹೇಳಿಕೊಳ್ಳುವುದು ಬೇರೆ. ಇದು ಹೇಗೆ ಎಂದರೆ 'Cancer is not injurious as long as it doesn't kill' ಅನ್ನೋ ತರಹ.
  • ದೇಶವೇ ಸರ್ವಸ್ವ ಎನ್ನುವುದು 'ರಾಷ್ಟ್ರೀಯತೆ' ಎಂಬ ಪದಕ್ಕೆ ಭಾರತೀಯನೊಬ್ಬ ಕೊಡಬಹುದಾದ ವ್ಯಾಖ್ಯಾನ. ಹಾಗಾಗಿ ನಮ್ಮ ಯಾವುದೇ ಕೆಲಸ ದೇಶದ ಪರವಾಗಿರುವಂತೆ ನೋಡಿಕೊಳ್ಳಬೇಕು.
ಒಟ್ಟಾರೆ ಹೇಳೋದಾದರೆ ಮೋದಿಯವರ ಈ ನಡೆಯಿಂದ ದೇಶಕ್ಕೆ ಮತ್ತು ಶ್ರೀಸಾಮಾನ್ಯನಿಗೆ ಆಗುವ ಲಾಭ ಮತ್ತು ಮೂಡುವ ಸೌಹಾರ್ದತೆ ಗಮನಾರ್ಹ. ಈ ದಿಕ್ಕಿನಲ್ಲಿ ಯೋಚಿಸಿ ನಾವೆಲ್ಲರೂ ಮೋದಿಯವರನ್ನು ಭಾರತದ ಪ್ರಧಾನಿಯಾಗಿ (ಪಕ್ಷಾತೀತವಾಗಿ) ಬೆಂಬಲಿಸೋಣ. ಅವರ ಈ ನಡೆ ಯಶಸ್ವಿಯಾಗುವಂತೆ ಮಾಡೋಣ. ಇಲ್ಲವಾದಲ್ಲಿ ಸುಮ್ಮನಿರೋಣ, ಅಡ್ಡಗಲ್ಲು ಹಾಕುವುದು ಬೇಡ. ಇಷ್ಟರ ಮೇಲೂ ನಾವು ಯಾರದೋ (ಸೀತಾರಾಂ ಎಚುರಿ) ಮಾತುಗಳನ್ನು ಆಧಾರವಾಗಿಟ್ಟುಕೊಂಡು ಇಲ್ಲ ಸಲ್ಲದ ಮಾತಾಡುವವರಿಗೆ ನನ್ನ ಕಡೆ ಇಂದ 1 ಸಾಲನ್ನು ಆರ್ಪಿಸಿ ಬಿಡುತ್ತೇನೆ: 'ಸೂತಕದ ಕಣ್ಣಿಗೆ ಕಾಗೆಯೇ ಶ್ರೇಷ್ಟ'...!!!

No comments:

Post a Comment