ಸ್ವಾತಂತ್ರ್ಯದ ನಂತರ ಭಾರತ - ಪಾಕೀಸ್ತಾನ ನಡುವೆ 1949, 1965, 1971 ಮತ್ತು 1999 ರಲ್ಲಿ 4 ಬಾರಿ ಯುದ್ಧ ನಡೆದಿದೆ. ಯುದ್ಧವೆಂದರೆ ದುಃಖದ ವಿಚಾರವೇ ಹೌದು. ಭಾರತ ನಾಲ್ಕೂ ಯುದ್ಧದಲ್ಲೂ ಗೆದ್ದಿದೆ ಎಂಬುದು ಸಂಭ್ರಮಕ್ಕಿಂತಲೂ ಸಮಾಧಾನಕರವಾದ ವಿಚಾರ. ಇಷ್ಟು ಯುದ್ಧಗಳಲ್ಲಿ ಭಾರತ ಗೆದ್ದರೂ ಪಾಕೀಸ್ತಾನ ಆಕ್ರಮಿತ ಕಾಶ್ಮಿರ ಭೂಭಾಗ ಸಮಸ್ಯೆಯಾಗೆ ಉಳಿದಿದೆ. 1949 ಇರಲಿ, 1999 ಇರಲಿ ಅಥವಾ 2021 ಇರಲಿ ಭಾರತದ ಸೈನ್ಯ ಬಲಾಢ್ಯವಾಗೆ ಹೋರಾಡಿದೆ ಆದರೆ, ಜಗತ್ತಿನ ಮುಂದೆ ಭಾರತ ಹಿನ್ನಡೆ ಅನುಭವಿಸಿದ್ದರೆ ಅದಕ್ಕೆ ಕಾರಣ ರಾಜಕೀಯ!
 
1949 - ಪಾಕೀಸ್ತಾನ ಗೆಲ್ಲುವ ಸ್ಥಿತಿಯಲ್ಲಿತ್ತು ಅದರೆ ಭಾರತದ ಸೈನಿಕರು ಅದಕ್ಕೆ ಅವಕಾಶಕೊಡಲಿಲ್ಲ. ಕಾರ್ಗಿಲ್, ಲೇಹ್ ಗುಡ್ಡಗಳನ್ನು ವಶಪಡಿಸಿಕೊಂಡು, ಹೆದ್ದಾರಿಯನ್ನು ಭದ್ರ ಪಡಿಸಿದ್ದರು. ಮೌಂಟ್ಬಾಟನ್ ಒತ್ತಡಕ್ಕೆ ಮಣಿದು, ಗೃಹಮಂತ್ರಿ ಸರ್ದಾರರ ಮಾತನ್ನು ಕೇಳದೆ ನೆಹರು ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋದರು. ಅಲ್ಲಿಗೆ ಭಾರತ ಯುದ್ಧವನ್ನು ಮೇಜಿನ ಮೇಲೆ ಸೋಲಿತು. ನೆನಪಿಡಿ, ಭಾರತ 3000 ಸೈನಿಕರನ್ನು ಕಳೆದುಕೊಂಡಿತು.
 
1962 - ಚೀನಾ ಯುದ್ಧ ಶುರುಮಾಡಿತು, ಜೊತೆಗೆ ಯುದ್ಧಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು. ನೆಹರು ಮಾತ್ರ ಹಿಂದಿ-ಚೀನಿ ಭಾಯಿ ಭಾಯಿ ಎಂಬ ಮಂತ್ರವನ್ನು ಜಪಿಸುತ್ತಿದ್ದರು. ಶಸ್ತ್ರಾಸ್ತ್ರಗಳಿರಲಿ ನಮ್ಮ ಸೈನಿಕರಿಗೆ ಬೇಕಾದ ಬಟ್ಟೆ, ಶೂ, ಆಹಾರ ಪದಾರ್ಥ ಕೂಡ ಶೇಖರಣೆ ಮಾಡಿರಲಿಲ್ಲ. ಚೀನಾದ ಸೈನಿಕರು ಗಡಿಯೊಳಗೆ ನುಗ್ಗಿರುವುದು ಖಚಿತವಾಗಿ, ಸರ್ಕಾರದ ಮೇಲೆ ಒತ್ತಡ ಬಿದ್ದಾಗ ನೆಹರು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸೇನೆಗೆ 'ಚೀನಿಯರನ್ನು ಹೊರದಬ್ಬಿ' ಎಂದು ಆದೇಶ ಮಾಡಿಯೇ ಬಿಟ್ಟರು. ಸೈನಿಕರ ಹತ್ತಿರವಿದ್ದದ್ದು ಕೇವಲ 32 ಸುತ್ತುಗಳ ಗುಂಡುಗಳು ಮಾತ್ರ. ಭಾರತ ಯುದ್ಧದಲ್ಲಿ ಸೋತು, ಚೀನಾ 32 ಸಾವಿರ ಚದುರ ಕಿ.ಮೀ. ನೆಲವನ್ನು ಆಕ್ರಮಿಸಿಕೊಂಡಿತು. ಈ ಯುದ್ಧ ಭಾರತದ 2000 ಕ್ಕೂ ಹೆಚ್ಚು ಸೈನಿಕರನ್ನು ಬಲಿಪಡೆಯಿತು.
  | 
| Jawaharlal Nehru with chinese premier Zhou Enlai, (courtesy: Outlook India) | 
 
1965 - ಪಂಜಾಬಿನ ಭಾಗದಲ್ಲಿ ಯುದ್ಧ ಶುರುವಾದ ಮೇಲೆ ಕಾರ್ಗಿಲ್ ಕಡೆ ಇಂದ ನುಗ್ಗಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಹುನ್ನಾರ ಪಾಕೀಸ್ತಾನ ಮಾಡಿತ್ತು. ಭಾರತದ ಸೈನ್ಯ ಪಂಜಾಬಿನಲ್ಲಿ ಕಾದಾಡುತ್ತಾ ಪಾಕೀಸ್ತಾನದೊಳಗೆ ನುಗ್ಗೆಬಿಟ್ಟಿತು. ಅತ್ಯುನ್ನತ ಸಾಹಸ ಮತ್ತು ಪರಾಕ್ರಮದಿಂದ ಹಾಜಿಪೀರ್ ಕಣಿವೆಯನ್ನು ವಶಪಡಿಸಿಕೊಂಡರು. ಪಾಕೀಸ್ತಾನ ಅಮೇರಿಕಾ ಮತ್ತು ರಷ್ಯಾದ ಮೊರೆ ಹೋಯಿತು. ರಷ್ಯಾ ಮಧ್ಯಸ್ಥಿಕೆ ವಹಿಸುತ್ತಾ ಭಾರತ ಮತ್ತು ಪಾಕೀಸ್ತಾನದ ಸರ್ಕಾರವನ್ನು ತಾಷ್ಕೆಂಟಿಗೆ ಆಹ್ವಾನಿಸಿತು. ಅಲ್ಲಿ ನಡೆದ ಘಟನೆಗಳು ನಿಗೂಢ, ಅನುಮಾಸ್ಪದ ರೀತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಸುನೀಗಿದರು. ಕದನ ವಿರಾಮ ಘೋಷಣೆಯಾಗಿ ಕಷ್ಟ ಪಟ್ಟು ವಶಪಡಿಸಿಕೊಂಡ ಹಾಜಿಪೀರ್ ಕಣಿವೆಯನ್ನು ಭಾರತದ ಸೈನ್ಯ ಬಿಟ್ಟು ಬರಬೇಕಾಯಿತು. ಈಗ ನಾವು ಕಳೆದುಕೊಂಡ ಸೈನಿಕರ ಸಂಖ್ಯೆ 20 ಸಾವಿರ!
  | 
Indian Prime Minister is dead and Shastri ji on war tank with soldiers after war
  | 
 
1971 - ಭಾರತ ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು. ನಮ್ಮ ಸೈನಿಕರು ಪಾಕೀಸ್ತಾನದ ವಿರುದ್ಧ ವಿರಾವೇಶದಲ್ಲಿ ಕಾದಾಡಿ 93 ಸಾವಿರಕ್ಕೂ ಹೆಚ್ಚು ಶತ್ರು ಸೈನಿಕರನ್ನು ಸೆರೆ ಹಿಡಿದರು. ಜಗತ್ತಿನ ಯುದ್ಧ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಶತ್ರು ಸೈನಿಕರನ್ನು ಸೇರೆಹಿಡಿದ್ದದ್ದು ಇದೇ ಮೊದಲ ಬಾರಿಗೆ. ಈ ಯುದ್ಧದಲ್ಲಿ ಭಾರತ ಖಡಾಖಂಡಿತವಾಗಿಯೂ ಮೇಲುಗೈ ಸಾಧಿಸಿತ್ತು. ಪಾಕೀಸ್ತಾನಕ್ಕೆ ಜಗತ್ತಿನೆದುರಿಗೆ ಭಾರಿ ಮುಖಭಂಗವಾಗಿತ್ತು. ಯುದ್ಧ ಖೈದಿಗಳ ಬಿಡುಗಡೆಗೆ ಪೂರ ಕಾಶ್ಮೀರವನ್ನು ಬಿಟ್ಟು ತೊಲಗಬೇಕೆಂಬ ಷರತ್ತು ಪಾಕೀಸ್ತಾನಕ್ಕೆ ಹಾಕಬೇಕಿತ್ತು ಆದರೆ, ಭುಟ್ಟೋ ಕಣ್ಣೀರಿಟ್ಟರು ಎಂಬ ಕಾರಣಕ್ಕೆ ಇಂದಿರಾಗಾಂಧಿ ಯುದ್ಧ ಕೈದಿಗಳನ್ನು ಬಿಟ್ಟು ಪಾಕೀಸ್ತಾನಕ್ಕೆ ಗೆಲುವು ಖಾತ್ರಿ ಪಡಿಸಿಬಿಟ್ಟರು! ನಮ್ಮದಲ್ಲದ ಕಾರಣಕ್ಕೆ ಆದ ಈ ಯುದ್ಧದಲ್ಲಿ 11 ಸಾವಿರ ಜನ ಪ್ರಾಣ ಕಳೆದುಕೊಂಡರು.
 
  | 
| Front page of The Statesman. Picture Courtesy: National Herald | 
 
1999 ರ ಕಾರ್ಗಿಲ್ ಕದನ - ಪ್ರಧಾನಿ ಅಟಲ್ಜೀ ಪಾಕೀಸ್ತಾನಕ್ಕೆ ಬಸ್ಸಿನಲ್ಲಿ ತೆರಳಿ, ನವಾಜ್ ಶರೀಫರನ್ನು ತಬ್ಬಿಕೊಂಡಿದ್ದೆ ತಡ ಭಾರತ ಮತ್ತು ಗುಪ್ತಚರ ಇಲಾಖೆ ಮೈಮರೆಯಿತು. ಸರ್ಕಾರವೂ ಸಹ ಪಾಕೀಸ್ತಾನದ ವಿರುದ್ಧ ಮಾತುಗಳನ್ನು ಕೇಳಿಸಿಕೊಳ್ಳಲು ತಯಾರಿರಲಿಲ್ಲ. ಮೇ ತಿಂಗಳಲ್ಲಿ ನಮಗೆ ಆಕ್ರಮಣದ ಸುದ್ದಿ ಮುಟ್ಟುವ ವೇಳೆಗೆ ಪಾಕಿಸ್ತಾನದ ಸೇನೆ ಬಂಕರ್ಗಳನ್ನು ತೋಲೋಲಿಂಗ್ ಬೆಟ್ಟದಲ್ಲಿ ನಿರ್ಮಾಣ ಮಾಡಿತ್ತು. ತೊಲೋಲಿಂಗ್ ಬೆಟ್ಟ ವಶಪಡಿಸಿಕೊಳ್ಳುವುದೆಂದರೆ ಶ್ರೀನಗರ ಮತ್ತು ಲದಾಖ್ ಪ್ರದೇಶವನ್ನು ಜೋಡಿಸುವ ಏಕೈಕ ಹೆದ್ದಾರಿಯನ್ನು ವಶಪಡಿಸಿಕೊಂಡಂತೆ! ಸ್ಥಳಿಯರು
 ಕೊಟ್ಟ ಮಾಹಿತಿಯ ಮೇರೆಗೆ ಸೌರಭ್ ಕಾಲಿಯಾ ಮತ್ತು ತಂಡವನ್ನು ಕಳಿಸಿ ಅವರ ತುಂಡು ತುಂಡಾದ
 ದೇಹವನ್ನು ಪಡೆದ ಮೇಲೆ ಭಾರತದ ಸರ್ಕಾರ ಮತ್ತು ಗುಪ್ತಚರ ಇಲಾಖೆ ಎಚ್ಚೆತ್ತುಕೊಂಡಿದ್ದು! 
 
ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ, ಸಾರ್ಜೆಂಟ್ ಪಿಳ್ಳಾ ವೆಂಕಟ್ ನಾರಾಯಣ್ ರವಿ, ಫ್ಲೈಟ್ ಲೆಫ್ಟಿನೆಂಟ್ ಮುಹಿಲಿನ್ ರ ಪ್ರಾಣಾರ್ಪಣೆ ಮೊದಲಾಯಿತು. ಲೇಸರ್ ನಿರ್ದೇಶಿಸಿದ ಬಾಂಬುಗಳನ್ನು ಹಾಕಿ ಶತ್ರುಗಳನ್ನು ಬಗ್ಗು ಬಡಿಯುವ ಸ್ಪಷ್ಟ ಸಂದೇಶವನ್ನು ಪಾಕೀಸ್ತಾನಕ್ಕೆ ಕೊಟ್ಟಿತ್ತು. ಅಷ್ಟರಲ್ಲಿ ಗುಪ್ತಚರ ಇಲಾಖೆಗೆ ಮಹತ್ವದ ಮಾಹಿತಿ ಸಿಕ್ಕಿತು. ದಿನಕಳೆದಂತೆ ಪಾಕೀಸ್ತಾನದ ಷಡ್ಯಂತ್ರದ ಬಗ್ಗೆ ಸಾಕ್ಷಿ ದೊರೆಯಿತು. ಇದರ ಆಧಾರದ ಮೇಲೆ ಭಾರತ 'ಆಪರೇಷನ್ ವಿಜಯ್' ಘೋಷಣೆ ಮಾಡಿತು ಮತ್ತು ಸೈನ್ಯ ಸಂಪೂರ್ಣ ಯುದ್ಧಕ್ಕೆ ಸಜ್ಜಾಯಿತು. 
 
ಮಾಧ್ಯಮದವರಿಗೆ ಯುದ್ಧದ ಲೈವ್ ಕವೆರೆಜ್ ಮಾಡಲು ಜಗತ್ತಿನಲ್ಲಿ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ಆಣುವು ಮಾಡಿಕೊಡಲಾಯಿತು. ಭಾರತದ ಜನತೆ ಯುದ್ಧವನ್ನು ನೇರವಾಗಿ ನೋಡುವಂತಾಯಿತು. ಬೋಫೋರ್ಸ್ ಫಿರಂಗಿಗಳನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಮೇಜರ್ ರಾಜೇಶ್ ಆಧಿಕಾರಿ, ಮೇಜರ್ ವಿವೇಕ್ ಗುಪ್ತ, ಕ್ಯಾಪ್ಟನ್ ವಿಕ್ರಂ ಬಾತ್ರ, ಮೇಜರ್ ಪದ್ಮಪಾಣಿ ಆಚಾರ್ಯ, ಕ್ಯಾಪ್ಟನ್ ವಿಜತಯಂತ್, ಕ್ಯಾಪ್ಟನ್ ಕೆಂಗುರಸೆ, ಗ್ರೆನೆಡಿಯರ್ ಯೋಗೆಂದ್ರ ಸಿಂಗ್ ಯಾದವ್, ರೈಫಲ್ ಮ್ಯಾನ್ ಸಂಜಯ್ ಕುಮಾರ್, ಕ್ಯಾಪ್ಟನ್ ಅನೂಜ್ ನಾಯರ್, ಮೇಜರ್ ಶರವಣನ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅಮೋಲ್ ಕಾಲಿಯಾ, ಮೇಜರ್ ಸೋನಮ್ ವಾಂಗ್ಚುಕ್, ವಿವೇಕ್ ಗುಪ್ತ, ನವೀನ್ ನಗಪ್ಪ, ಲೆಫ್ಟೀನೆಂಟ್ ಬಲ್ವಾನ್ ಸಿಂಗ್ ಮುಂತಾದ ಅನೇಕ ಸೈನಿಕರ ಬಲಿದಾನ ಮತ್ತು ಕೆಚ್ಚೆದೆಯ ಹೋರಾಟದ ನಂತರ ಕಾರ್ಗಿಲ್ ಕದನವನ್ನು ಅಧಿಕೃತವಾಗಿ ಜುಲೈ 26 ರಂದು ಭಾರತ ಗೆದ್ದಿತು. 
 
  | 
| Kargil War Memorial at Tololing | 
  | 
Indian Soldiers celebrate victory of 'Operation Vijay'
  | 
ಈ ಯುದ್ಧದಲ್ಲಿ ಭಾರತ 527 ವೀರ ಸೈನಿಕರನ್ನು ಕಳೆದುಕೊಂಡಿತು. ಯುದ್ಧದ ಸಮಯದಲ್ಲಿ ಸುಮಾರು 5 ಬಿಲಿಯನ್ ಅಷ್ಟು ಕಳ್ಳಸಾಗಣೆ ಗಡಿಯುದ್ದಕ್ಕೂ ನಡೆಯಿತು. ಭಾರತಕ್ಕೆ ಸುಮಾರು ವಾರಕ್ಕೆ 3-4 ಬಿಲಿಯನ್ ಅಷ್ಟು ನಷ್ಟವಾಯ್ತು ಎಂದು ಅಂದಾಜಸಲಾಗಿದೆ. 2014 ನಂತರ ಭಾರತ ಹಿಂದೆ ನಡೆದ ಘಟನೆಗಳಿಂದ ಪಾಠ ಕಲಿತಂತೆ ಕಾಣಿಸುತ್ತಿದೆ. ಪಾಕೀಸ್ತಾನದ ಪ್ರಧಾನಿ ನವಾಜ್ ಶರೀಫರ ಮೊಮ್ಮಗಳ ಮದುವೆಗೆ ಮೋದಿ ಹೋಗಿ ಬಂದರೂ ಸೈನ್ಯ ಮಾತ್ರ ಮೈಮರೆಯಲಿಲ್ಲ. ಉರಿ ಮತ್ತು ಪುಲ್ವಾಮಾ ದಾಳಿ ನಡೆಯಿತಾದರೂ ಭಾರತ ಸರ್ಜಿಕಲ್ ಸ್ಟ್ರೈಕ್ಗಳ ಮೂಲಕ ಪರಿಣಾಮಕಾರಿಯಾದ ಪ್ರತ್ಯುತ್ತರವನ್ನೇ ಕೊಟ್ಟಿದೆ. ಭಾರತದ ಕಾರಣಕ್ಕಾಗಿಯೇ ಪಾಕೀಸ್ತಾನ ಎಫ್.ಎ.ಟಿ.ಎಫ್ ಅಲ್ಲಿ ಗ್ರೇ ಪಟ್ಟಿಯಲ್ಲಿ ಇದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಇಷ್ಟಾದರೂ ವಿರೋಧ ಪಕ್ಷಗಳು ಸರ್ಜಿಕಲ್ ದಾಳಿ ಬಗ್ಗೆ ಸಾಕ್ಷಿ ಕೇಳುವ ಮಟ್ಟದಲ್ಲಿದೆ. ಭಾರತದ ಸೈನಿಕರು ಸಂಬಳಕ್ಕೆ ದುಡಿಯುವುದಕ್ಕಿಂತ ದೇಶಕ್ಕಾಗಿ ದುಡಿಯುತ್ತಾರೆ. ಯಾವುದೇ ಯುದ್ಧವಾಗಲಿ ಸೈನ್ಯ ಗೆದ್ದಿದೆ ಆದರೆ, ಸೋತಿರುವುದು ರಾಜಕೀಯ ಮಾತ್ರ!