ಈ ವರ್ಷದ ಮಹಾತ್ಮ ಗಾಂಧಿ ಜಯಂತಿಯಂದು ಬಾಲಿವುಡ್ ಕಾ ಬಾದ್ ಷಾ ಅನ್ನಿಸಿಕೊಳ್ಳುವ ಶಾರುಖ್ ಖಾನ್ ಪುತ್ರ, 23 ವರ್ಷದ ಆರ್ಯನ್ ಖಾನ್ ಅನ್ನು ಎನ್.ಸಿ.ಬಿ ಬಂಧಿಸಿದ್ದಾರೆ. ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ, ಮಾದಕ ದ್ರವ್ಯಗಳ ಬಳಕೆ, ಮಾರಾಟ ಮತ್ತು ಖರೀದಿಯ ಆರೋಪ ಆತನ ಮೇಲಿರುವುದು. ಸಾಮಾನ್ಯವಾಗಿ ಮಾದಕ ವಸ್ತುಗಳ ಕೇಸಿನಲ್ಲಿ ಜಾಮೀನು ಸಿಗುವುದಿಲ್ಲ, ಅದರಂತೆ ಮುಂಬೈ ಹೈಕೋರ್ಟು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದೇನು ಹೊಸತಲ್ಲ, ಬಾಲಿವುಡ್ ಜೊತೆಗೆ ಮಾದಕ ದ್ರವ್ಯ ಆಗಾಗ ಕೇಳಿ ಬರುತ್ತಲೇ ಇದೆ. ಸಂಜಯ್ ದತ್ ತನ್ನ ಕಾಲೇಜ್ ದಿನಗಳಿಂದ 9 ವರ್ಷಗಳ ಕಾಲ ಡಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಫರ್ದೀನ್ ಮಾದಕ ವ್ಯಸನಿಯಾಗಿದ್ದರು. ಆತನನ್ನು ಮುಂಬೈ ಪೊಲೀಸರು ಮೇ 5, 2001 ರಂದು ಬಂಧಿಸಿದ್ದರು. ಜೂನ್ 2018 ರಲ್ಲಿ ಥಾಣೆ ಪೊಲೀಸರು ನಟಿ ಮಮತಾ ಕುಲಕರ್ಣಿ ಭಾರತದ ಅತಿದೊಡ್ಡ ಡಗ್ಸ್ ಕೇಸಿನ ಆರೋಪಿಯೆಂದು ಹೆಸರಿಸಿದರು. ಕಳೆದ ವರ್ಷ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ ಲಿಂಬಾಚಿಯಾರನ್ನು ಇದೇ ಕೇಸಿನಲ್ಲಿ ಬಂಧಿಸಲಾಯಿತು. ಈ ವರ್ಷ ಆಗಸ್ಟ್‌ನಲ್ಲಿ ಅರ್ಮಾನ್ ಕೊಹ್ಲಿಯನ್ನು ಎನ್.ಸಿ.ಬಿ ಬಂಧಿಸಿತ್ತು! ಇಷ್ಟಲ್ಲದೇ ಅನೇಕ ವಿಚಾರದಲ್ಲಿ ಬಾಲಿವುಡ್ ಭಾರತೀಯತೆಗಿಂತ ದೂರವಾಗಿರುವುದನ್ನು ಗಮನಿಸಬಹುದು. ಇದರ ಕುರಿತ ಒಂದು ಅವಲೋಕನವೇ ಈ ಲೇಖನ.
![]() |
| Bollywood and Drugs |
ಚಕ್ದೇ ಇಂಡಿಯಾ! 2007 ರಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತದ ಮಾಜಿ ಹಾಕಿ ಆಟಗಾರ ರಂಜನ್ ನೇಗಿ ಅವರ ಜೀವನವನ್ನು ಹೋಲುತಿತ್ತು. ಆದರೆ, ಚಿತ್ರದಲ್ಲಿ ನಾಯಕನ ಹೆಸರನ್ನು ಕಬೀರ್ ಖಾನ್ ಎಂದಾಗಿತ್ತು. ಶೇರ್ನಿ! ಈ ವರ್ಷ ತೆರೆಕಂಡ ಚಿತ್ರವಿದು. ಈ ಚಿತ್ರದ ವಸ್ತು ಕೂಡ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಂತಿದೆಯಾದರೂ ಇದರಲ್ಲಿ ವ್ಯತ್ಯಾಸವಿದೆ. ಅಸ್ಗರ್ ಅಲಿ ಖಾನ್ ಚಿತ್ರದಲ್ಲಿ ಕಲಾವಾ ಧರಿಸಿದ ರಂಜನ್ ರಾಜನ್ ಎಂಬ ಹೆಸರಿನಿಂದ ಚಿತ್ರದಲ್ಲಿ ಖಳನಟನಾಗಿದ್ದಾರೆ. ಅರಣ್ಯಾಧಿಕಾರಿ ಅಭರ್ನಾ ಅವರನ್ನು ಚಿತ್ರದಲ್ಲಿ ವಿದ್ಯಾ ವಿನ್ಸೆಂಟ್ ಎಂಬ ಕ್ರೈಸ್ತ ಪಂಥದವರ ಹೆಸರಿನಿಂದ ಚಿತ್ರಿಸಲಾಗಿದೆ. ಪಿ.ಕೆ - ನಿರ್ದೇಶಕ ರಾಜಕುಮಾರ್ ಹೇಳುವಂತೆ 'ಪಿ.ಕೆ ಒಂದು ಹಿಂದು ಧರ್ಮದ ಬಗ್ಗೆ ವಿಡಂಬನಾತ್ಮಕ ಚಿತ್ರ'. ಚಿತ್ರವನ್ನು ವಿಡಂಬನಾತ್ಮಕ ಎನ್ನುವುದಕ್ಕಿಂತ ಅಪಹಾಸ್ಯ ಸೂಚಕ ಎನ್ನಬಹುದಾಗಿದೆ. ತಪಸ್ವಿ ಮಹರಾಜ್ (ಸೌರಭ್ ಶುಕ್ಲ) ಪಾತ್ರವನ್ನು ದೇವರನ್ನು ದರ್ಶಿಸುವ ವಿಚಾರವನ್ನು ತಪ್ಪಾಗಿ ಬಿಂಬಿಸಿದ್ದಾರೆ, ಹಿಂದೂ ದೇವರನ್ನು ಹಾಸ್ಯಾಸ್ಪದವಾಗಿ ಚಿತ್ರಿಸಲಾಗಿದೆ. ಗಂಗಾ ಕೀ ಸೌಗಂಧ್ - ಹಿಂದೂ ಪುರೋಹಿತರು ಕೇಸರಿ ಬಟ್ಟೆ ಧರಿಸಿ, ರುದ್ರಾಕ್ಷ ಧರಿಸಿ, ಜಪ ಮಾಡುವಾಗ ಮುಜರೆಯನ್ನು ನೋಡುತ್ತಿರುವಂತೆ ಚಿತ್ರಿಸಿದ್ದಾರೆ. ಚಿತ್ರದ ಹಾಡಿನಲ್ಲಿ ಹಿಂದೂ ಧರ್ಮದ ಮೂರ್ತಿ ಪೂಜೆಯನ್ನು ಆಡಿಕೊಂಡಿದ್ದಾರೆ. ಪುರೋಹಿತರು ಧರ್ಮದ ಹೆಸರಿನಲ್ಲಿ ಲೂಟಿ ಮಾಡುತ್ತಾರೆ, ದೇವರ ಹೆಸರಿನಲ್ಲಿ ಅಪರಾಧಿಗಳನ್ನು ರಕ್ಷಿಸುವವರು ಇವರು ಎಂಬಂತೆ ಚಿತ್ರಿಸಲಾಗಿದೆ. ಇದು ಕೆಲವು ಉದಾಹರಣೆಯಷ್ಟೇ. ಬಾಲಿವುಡ್ ನಲ್ಲಿ ಒಂದು ಧರ್ಮ ನಿಂದಕ ಚಿತ್ರಗಳನ್ನು ಮಾಡುವಂತಹ ಕೆಟ್ಟ ಚಟ ಬೆಳೆದಿದೆ ಎಂದೇ ಹೇಳಬಹುದು. ಸಾಂವಿಧಾನಿಕವಾಗಿ ಭಾರತೀಯರೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಹೌದು. ಹಾಗೆಂದು, ಒಂದು ಧರ್ಮ ಅಥವಾ ಪಂತದ ಓಲೈಕೆ ಮತ್ತೊಂದು ಧರ್ಮದ ಅವಹೇಳನ ಎಷ್ಟು ಸಲ್ಲ ಎಂಬುದನ್ನು ಬಾಲಿವುಡ್ ಆವರು ತಮಗೆ ತಾವು ಕೇಳಿಕೊಳ್ಳಬೇಕು. ಹಿಂದೂಸ್ಥಾನದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವುದು ನಿಜಕ್ಕೂ ಭಾರತೀಯತೆ ಅಲ್ಲ!
ಮೊದಲ ಬಾರಿಗೆ ಮೋದಿ ಪ್ರಧಾನಿಯಾದ ಸಮಯವದು. ಭಾರತದಲ್ಲಿ ಅಸಹಿಶ್ಣುತೆ ಇದೆ ಎಂದು 2015 ರಲ್ಲಿ ಕೆಲವರು ಬೊಬ್ಬೆ ಇಟ್ಟರು. ಅದರಲ್ಲಿ ಬಾಲಿವುಡ್ಡಿನ ಆಮಿರ್ ಖಾನ್ ಕೂಡ ಇದ್ದರು. ವ್ಯಕ್ತಿ ಅಥವಾ ಪಕ್ಷವೊಂದರ ಮೇಲೆ ವಿರೋಧವಿದ್ದರೆ ಅವರ ವಿರುದ್ಧ ಮಾತಾಡುವುದು ಸರಿ. ಆದರೆ, ದೇಶ ಮತ್ತು ದೇಶದ ಜನರ ವಿರುದ್ಧ ಮಾತಾಡುವುದು ಸರಿನಾ ಎಂಬಂತಹ ಆತ್ಮವಿಮರ್ಶೆ ಮಾಡಿಕೊಳ್ಳಲಿಲ್ಲ. ಮುಂಬೈನಲ್ಲಿ 1993 ರಲ್ಲಿ ನಡೆದ ಸರಣಿ ಸ್ಪೋಟ, 2003 ಮತ್ತು 2006 ರಲ್ಲಿ ನಡೆದ ರೈಲು ಸ್ಪೋಟಗಳು, 2008 ರಲ್ಲಿ ತಾಜ್ ಹೋಟೆಲ್ಲಿನಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ಇದೇ ಆಮಿರ್ ಖಾನ್ ಅಸಹಿಶ್ಣುತೆಯ ಮಾತು ಆಡಿರಲಿಲ್ಲ. 2005ರಲ್ಲಿ ಮೋದಿಗೆ ಅಮೇರಿಕಾ ವೀಸಾ ನಿರಾಕರಿಸುವ ವಿಚಾರದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯ ಸಭೆಯಲ್ಲಿ ಮೋದಿ ಪರವಾಗಿ ಇದ್ದರು. ಮೋದಿಯ ವಿರುದ್ಧ, ಮನಮೋಹನ್ ಸಿಂಗರು ಕ್ಷಮೆ ಬೇಡುವಂತೆ ಒತ್ತಾಯಿಸಿ ಬರೆದ ಪತ್ರಕ್ಕೆ ಆಮಿರ್ ಖಾನ್, ಅಮಲಾ ಅಕ್ಕಿನೇನಿ, ಆನಂದ್ ಪಟವರ್ಧನ್ ರವರುಗಳು ಸಹಿ ಹಾಕಿದ್ದರು. ನಮ್ಮ ಮನೆಯವರೊಬ್ಬರು ತಪ್ಪು ಮಾಡಿದಾಗಲೂ ಸಹ ನಮ್ಮ ಮನೆಯ ಮರ್ಯಾದೆ ಎಂದು ಬೇರೆಯವರ ಮುಂದೆ ನಾವು ಮಾತಾಡುವುದಿಲ್ಲ. ವಿದೇಶಿ ಸಂಸ್ಥೆಯ ಮುಂದೆ ನಮ್ಮದೇ ದೇಶದ ನಾಯಕನೊಬ್ಬ ತಪ್ಪು ಮಾಡಿಲ್ಲವಾದರೂ ಈ ರೀತಿ ಅವಹೇಳನಕಾರಿಯಾಗಿ ನಡೆದುಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ಇದು ಬಾಲಿವುಡ್ ನವರಿಗೆ ತಿಳಿದಿಲ್ಲವ?
ಡ್ರಗ್ಸ್ ಕೇಸು, ಸಿನಿಮಾ ಮೂಲಕ ಧರ್ಮ ನಿಂದನೆ, ದೇಶ ಮತ್ತು ಅದರ ನಾಯಕರ ವಿರುದ್ಧ ಮಾತಾಡುವುದು ಒಂದು ಕೆಟ್ಟತನವಾಗಿ ಬಾಲಿವುಡ್ಡಿನಲ್ಲಿ ಬೆಳೆದಿದೆ. ತನ್ನ ಮಗ ಯಾರ ಜೊತೆ ಬೇಕಾದರೂ ಓಡಾಡಲಿ, ಏನು ಬೇಕಾದರೂ ಮಾಡಲಿ ಎಂದು 1999 ರಲ್ಲಿ ಮಾತಾಡಿದ್ದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ತಂದೆಯಾದವನೊಬ್ಬ ಮಕ್ಕಳನ್ನು ಬೆಳಸುವ ರೀತಿ ಇದಲ್ಲ. ವಿಶ್ವವಿಖ್ಯಾತ ಜಾಕೀ ಚಾನ್ ಮಗನೂ ಸಹ ಇಂತಹುದೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ಜಾಕೀ ಚಾನ್ ಆತನ ಮಗನನ್ನು ವಹಿಸಿಕೊಂಡು ಬರಲ್ಲಿಲ್ಲ ಎಂಬುದು ನಮಗೆ ಆದರ್ಶವಾಗಬೇಕಿತ್ತು. ಸಿನಿಮಾ, ಕಲೆ ಎಂಬುದು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆ ಹೊರತಾಗಿ ಯಾವುದೋ ಒಂದು ಪಂಥದ ಒಲೈಕೆ ಅಥವಾ ಧರ್ಮನಿಂದನೆ ಮಾಡವುದು ಸರಿ ಇಲ್ಲ. ಇದೆಲ್ಲವನ್ನು ಗಮನಿಸಿದರೆ ಬಾಲಿವುಡ್ ಎಂಬುದು ನಮ್ಮ ಸಂಸ್ಕೃತಿಯಿಂದ ದೂರ ಆದಂತಿದೆ. ಆ ಕ್ಷೇತ್ರವನ್ನು ನೋಡಿದರೆ ಭಾರತೀಯತೆ ಇದೆಯಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಇದು ಬದಲಾಗಬೇಕು ಮತ್ತು ನಮ್ಮ ಸಂಸ್ಕೃತಿಗೆ ಪೂರಕವಾಗಬೇಕು ಎಂಬುದು ನಮ್ಮ ಆಶಯ.


Thank you sir for writing your opinion on Bollywood.Since the Bollywood got badly exposed and caught red handed on anti India, drugs, anti Hindu, hawala racket run by Dawood & gang, underworld mafia funding movies to defame our religion, culture & country, today's youngsters have awakened & opened their eyes to a new normal & not anymore blindly following filmy Heroes as their idol and have recognised as to who the real heroes are and should be their role model. I can feel the change in the air & change is good for the nation & it's citizens too. Thanks for taking up this topic sir.
ReplyDeleteಚೆನ್ನಾಗಿ ಮೂಡಿ ಬಂದಿದೆ ಅಂಕಣ
ReplyDelete