ತಾಲಿಬಾನ್ ಅಫ್ತಾನಿಸ್ತಾನವನ್ನು ವಶಪಡಿಕೊಳ್ಳುವುದರೊ೦ದಿಗೆ ಆಧುನಿಕ ಜಗತ್ತಿನಲ್ಲಿ ಭಯೋತ್ಪಾದಕ ಕೇಂದ್ರ ಸ್ಥಾನಕ್ಕೆ ಮರುಹುಟ್ಟು ಕೊಟ್ಟಂತಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ತೆಗೆದುಕೊಂಡ ನಿರ್ಧಾರ ಬಿನ್ ಲಾಡನ್ ಮತ್ತು 9/11 ದಾಳಿ ನಡೆಸಿದ ಭಯೋತ್ಪಾದಕರು ಬಯಸಿದ ಇಸ್ಲಾಮಿಕ್ ಆಡಳಿದ ವ್ಯವಸ್ಥೆಗೆ ಅಡಿಪಾಯವಾಗಲಿದೆ. ಈ ಪ್ರಕ್ರಿಯೆ ಅಂತಾರಾಷ್ಟ್ರೀಯ ಜಿಹಾದಿ ಚಳುವಳಿಗೆ ಉತ್ತೇಜನವನ್ನು ನೀಡುತ್ತದೆ, ತಾಲಿಬಾನ್ ಸ೦ಘಟನೆಗೆ ಹೊಸಬರು ಸೇರಿಕೊಳ್ಳುವುದು ಹೆಚ್ಚಲಿದೆ, ಮಧ್ಯಪ್ರಾಚ್ಯ-ದಕ್ಷಿಣ ಯೂರೋಪಿನಿಂದ ಆಫ್ರಿಕಾ ಮತ್ತು ಏಷ್ಯಾದ ಭಾಗಗಳಲ್ಲಿ ಭಯೋತ್ಪಾದನ ಕೃತ್ಯವನ್ನು ಮಟ್ಟಹಾಕುವುದು ಮತ್ತಷ್ಟು ಕಠಿಣವಾಗುತ್ತದೆ. ಅಮೇರಿಕಾದಲ್ಲಿ ಕಳೆದ ಒಂದು ತಿಂಗಳಿನಿ೦ದ ದಿನನಿತ್ಯ ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇ೦ಗ್ಲೆ೦ಡ್ ಅಲ್ಲೂ ಸಹ ಕಳೆದ 3-4 ತಿಂಗಳಿ೦ದ ಪ್ರತಿದಿನವೂ ಸರಾಸರಿ 35 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಫ್ರಾನ್ಸ್, ಇರಾನ್, ಟರ್ಕಿ ದೇಶಗಳಲ್ಲೂ ಪರಿಸ್ಥಿತಿ ಹೆಚ್ಚು ಕಮ್ಮಿ ಇದೇ ರೀತಿ ಇವೆ. ಅವರಲ್ಲಿರುವ ಜನಸಂಖ್ಯೆಗೆ ಹೊರಬರುತ್ತಿರುವ ಪ್ರಕರಣಗಳು ಹೆಚ್ಚು ಎ೦ದೇ ಹೇಳಬೇಕು. ಭಾರತದಲ್ಲಿ ಜುಲೈ ತಿಂಗಳಲ್ಲಿ ದಿನಕ್ಕೆ 40 ಸಾವಿರ ಪ್ರಕರಣವಿತ್ತು, ಅದೀಗ 30 ಸಾವಿರಕ್ಕೆ ಇಳಿದಿದೆ ಎ೦ಬುದು ಸಮಾಧಾನಕರ ವಿಚಾರ. ಸಾವಿನ ಸ೦ಖ್ಯೆಯೂ ಸಹ ಭಾರತದಲ್ಲಿ ಗಣನೀಯವಾಗಿ ಇಳಿದಿದೆ. ಇನ್ನು ಲಸಿಕೆ ನೀಡುವ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಮಾನದಲ್ಲಿದೆ. ಇಲ್ಲಿಯವರೆಗೆ ದೇಶದ ಶೇಕಡ 44 ರಷ್ಟು ಜನರಿಗೆ ಕನಿಷ್ಠ ಒ೦ದು ಡೋಸ್ ಲಸಿಕೆಯನ್ನು ಭಾರತ ನೀಡಿದೆ. ಪ್ರಧಾನಿ ಮೋದಿಯವರ ಜನ್ಮದಿನದ೦ತೂ 2.5 ಕೋಟಿ ಜನರಿಗೆ ಲಸಿಕೆ ನೀಡಿ ವಿಕ್ರಮ ಮೆರೆಯಿತು. ಈ ತಿ೦ಗಳಲ್ಲಿ ಮೂರು ಬಾರಿ ದಿನಕ್ಕೆ ಒಂದು ಕೋಟಿಗೂ ಅಧಿಕ ಮಂದಿಗೆ ಭಾರತ ಲಸಿಕೆ ನೀಡಿದೆ.
![]()  | 
| Vaccination Trend In India - 2021 | 
ಕೊರೋನಾದ ಎರಡನೆ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಹೆಣಗಳನ್ನು ಸುಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದ ಅಮೇರಿಕಾಕ್ಕೆ ಈಗ ಅದೇ ರೀತಿಯ ಪರಿಸ್ಥಿತಿ ಬಂದಿದೆ. ಸೆಪ್ಟೆಂಬರ್ ಅಲ್ಲಿ ಬರಬಹುದು ಎನ್ನಲಾಗಿದ್ದ ಮೂರನೆ ಅಲೆಗೆ ಮುನ್ನ ಭಾರತ ತನ್ನ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 15000 ಟನ್ಗಳಿಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡು ಅದರ ಪ್ರಕಾರ ಕೆಲಸ ಮಾಡುತ್ತಿದೆ. ಕೊರೋನಾದ ಸಂದರ್ಭದ ಈ ಎರಡು ವರ್ಷಗಳಲ್ಲಿ 70 ಸಾವಿರ ಮೆಗಾವ್ಯಾಟ್ಗಳಷ್ಟು ಸೌರ ವಿದ್ಯುತ್ ಉತ್ಪಾದನೆ ಮಾಡಿದೆ. ದೇಶದಲ್ಲಿ ಲಸಿಕೆ ಉತ್ಪಾದನೆಯು ಎರಡು ಪಟ್ಟು ಹೆಚ್ಚಾಗಿದೆ ಮತ್ತು ಮುಂದಿನ ತಿಂಗಳು ನಾಲ್ಕು ಪಟ್ಟು ಅಂದರೆ 300 ಮಿಲಿಯನ್ಗಳಷ್ಟು ಆಗಲಿದೆ. ನಮಗೆ ಬೇಕಾದಷ್ಟನ್ನು ಬಳಸಿಕೊಂಡು ಹೆಚ್ಚುವರಿ ಲಸಿಕೆಯನ್ನು ಹೊರದೇಶಕ್ಕೆ ರಫ್ತು ಮಾಡುತ್ತೇವೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಫೆಬ್ರವರಿ 2021 ಹೊತ್ತಿಗೆ ಒಟ್ಟು 9,242 ಕಿಮೀ ಅಷ್ಟು ಹೆದ್ದಾರಿಯನ್ನು ಭಾರತ ನಿರ್ಮಾಣ ಮಾಡಿದೆ. 2020-21ರ ಅವಧಿಯಲ್ಲಿ ದೈನಂದಿನ ಸರಾಸರಿ 29 ಕಿಲೋಮೀಟರ್ ನಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕೊರೋನಾ ಕಾಲದಲ್ಲೂ ಹೆದ್ದಾರಿ ನಿರ್ಮಾಣ ಕಾರ್ಯ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ನಡೆದಿದೆ. 2021-22 ರಲ್ಲಿ, ಸರ್ಕಾರವು 12,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ ಅಡಿಯಲ್ಲಿ ಭಾರತ ಪೃಥ್ವಿ, ಅಗ್ನಿ, ಆಕಾಶ್, ತ್ರಿಶೂಲ್, ನಾಗ ಎಂಬ ಐದು ಕ್ಷಿಪಣಿಗಳನ್ನು ತಯಾರಿಸಿದೆ. "ಕ್ಷಿಪಣಿ ತಂತ್ರಜ್ಞಾನದಲ್ಲಿ ನಾವು ಸಂಪೂರ್ಣ ಆತ್ಮನಿರ್ಭರವಾಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ ಮತ್ತು ನಾವು ದೇಶದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ತಂತ್ರಜ್ಞಾನದ ಮೇಲೆ ಕೆಲಸ ಮಾಡಬೇಕಾಗಿದೆ" ಎಂದು ಡಿ.ಅರ್.ಡಿ.ಒ. ಅಧ್ಯಕ್ಷ ಸತೀಶ್ ರೆಡ್ಡಿ ಜೆ.ಎನ್.ಯು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಅಗ್ನಿ-5 ಕ್ಷಿಪಣಿಯನ್ನು ಮತ್ತೆ ಪರೀಕ್ಷೆ ಮಾಡುವ ಉದ್ದೇಶ ಭಾರತ ಹೊಂದಿದೆ. ಇದರ ತೂಕ ಸುಮಾರು 50 ಸಾವಿರ ಕೇಜಿ ಇದ್ದು 5000 ಕೀ.ಮೀ ವ್ಯಾಪ್ತಿಯನ್ನು ತಲುಪಬಹುದಾದ ಶಕ್ತಿ ಹೊಂದಿದೆ. ಇದರ ಅರ್ಥ ಚೀನಾದ ರಾಜಧಾನಿ ಸೇರಿದಂತೆ ಬಹುತೇಕ ಪ್ರಮುಖ ಪಟ್ಟಣಗಳು ಅಗ್ನಿಯ ವ್ಯಾಪ್ತಿಗೆ ಬರುತ್ತದೆ! ಭಾರತ ಪರೀಕ್ಷೆ ಮಾಡುವ ಈ ಪ್ರಕ್ರಿಯೆ ಚೀನಾಕ್ಕೆ ನಿದ್ದೆಗೆಡಿಸಿದೆ. "ಭಾರತ ಪರಮಾಣು ಕ್ಷಿಪಣಿಯನ್ನು ತಯಾರಿಸುವ ಕುರಿತು ಯು.ಎನ್.ಎಸ್.ಸಿ.ಆರ್ 1172 ನಿಬಂಧನೆಗಳಿವೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೀಜಿಯಾನ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ಅಲ್ಲಿ ಭಾರತ ಹಿಂದೆಂದಿಗಿಂತಲೂ ಅದ್ಭುತವನ್ನು ಸಾಧಿಸಿದೆ. ಭಾರತದ ಜನತೆ ಮತ್ತು ಸರ್ಕಾರ ಸಾಧಕರನ್ನು ಶ್ರೇಷ್ಠ ರೀತಿಯಲ್ಲಿ ಗೌರವಿಸಿದೆ. ಭಾರತ ಕ್ರಿಕೇಟ್ ಹೊರತು ಬೇರೆ ಕ್ರೀಡೆಯನ್ನು ಒಂದು ರೀತಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ, ಈ ಐದಾರು ವರ್ಷಗಳಲ್ಲಿ ಇತರ ಕ್ರೀಡೆಗೆ ಸಿಕ್ಕಿರುವ ಉತ್ತೇಜನದ ಫಲಿತಾಂಶ ಈ ವರ್ಷದ ಒಲಂಪಿಕ್ಸಲ್ಲಿ ಕಾಣಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ವಾರ ಅಮೇರಿಕಾದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಕೊರೋನಾ ವಿರುದ್ಧದ ಲಸಿಕೆಗಳ ಮೇಲಿನ ಜಾಗತಿಕ ಪೇಟೆಂಟ್ ಅನ್ನು ಮನ್ನ ಮಾಡುವ ಪ್ರಸ್ತಾವವನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. 'ಸರ್ವೇ ಜನ ಸುಖಿನೋ ಭವಂತು' ಎಂಬ ಧ್ಯೇಯವಾಕ್ಯವನ್ನು ಭಾರತ ಎತ್ತಿಹಿಡಿಯುವ ಪ್ರಕ್ರಿಯೆ ಇದಾಗಿದೆ.
ಅಮೇರಿಕಾ, ಇಂಗ್ಲೆಂಡ್, ಭಾರತ ಮತ್ತು ಇತರ ದೇಶಗಳು ಅಫ್ಘಾನಿಸ್ತಾನದಿಂದ ರಾಜತಾಂತ್ರಿಕ ಮತ್ತು ತಮ್ಮ ದೇಶದ ನಾಗರೀಕರನ್ನು ಸ್ಥಳಾಂತರಿಸಿದರೂ ಚೀನಾ ಕಾಬೂಲಿನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರವು ಮಾಡಲಿಲ್ಲ. ತಾಲಿಬಾನಿನೊಂದಿಗೆ ತಮ್ಮ ಸಹಕಾರ ಇದೆ ಎಂಬ ಹೇಳಿಕೆಯನ್ನು ನೀಡಿತು. ತನ್ನ ಯೋಜನೆಗಳಿಗೆ ಮೂಲಸೌಕರ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಉಯ್ಘರ್ ಮುಸ್ಲ್ಮಾನರನ್ನು ಪ್ರತ್ಯೆಕಿಸಲು ಚೀನಾ ತಾಲಿಬಾನಿಗಳ ಸಹಕಾರವನ್ನು ಪಡೆಯಲು ಮುಂದಾಗಿದೆ. ಚೀನಾದ ವಾಯುವ್ಯ ಪ್ರದೇಶದ ಕ್ಸಿಂಜಿಯಾಂಗ್‌ನ ಶಿಬಿರಗಳಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಉಯ್ಘರ್ ಮುಸ್ಲಿಮರನ್ನು ಬಂಧಿಸಿ, ಅಲ್ಲಿನ ಜನರ ಮೇಲೆ ಆಕ್ರಮಣ ಮತ್ತು ಅತ್ಯಾಚಾರದ ಆರೋಪವನ್ನು ಚೀನಾ ಎದುರಿಸುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಈ ದೌರ್ಜನ್ಯವನ್ನು ಚೀನಾ ಪದೇ ಪದೇ ನಿರಾಕರಿಸಿದೆ. ಈ ಆರೋಪದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಾಲಿದೊಂದಿಗಿನ ಸಂಬಂಧ ಬೆಳೆಸಲು ಚೀನಾ ಮುಂದಾಗಿದೆ. ಪಾಕೀಸ್ತಾನವಂತೂ ತಾಲಿಬಾನ್ ಜೊತೆಗಿನ ಇದೆ ಎಂಬ ವಿಚಾರ ಈಗ ಹೊಸತಲ್ಲ. ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೇನಾ ಸಿಬ್ಬಂದಿಗಳು ತಾಲಿಬಾನಿಗಳೊಂದಿಗೆ ಹೋರಾಡುತ್ತಿದ್ದಾರೆ, ಅದಕ್ಕೆ ಪುರಾವೆ ಸಂಘರ್ಷದ ಸ್ಥಳದಲ್ಲೇ ಪತ್ತೆಯಾಗಿದೆ. ಪಂಜಶೀರ್‌ನಲ್ಲಿ ಪ್ರತಿರೋಧ ಪಡೆಗಳ ಪ್ರತಿದಾಳಿಯಲ್ಲಿ ಹುತಾತ್ಮರಾದ ಪಾಕೀಸ್ತಾನಿ ಸೈನಿಕನ ಗುರುತಿನ ಚೀಟಿ ಪತ್ತೆಯಾಯಿತು. ಇದನ್ನು ಪಾಕೀಸ್ತಾನ ಅಲ್ಲಗೆಳೆಯಿತು. ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತಮ್ಮ ಸೈನಿಕರನ್ನೇ ಒಪ್ಪಿಕೊಳ್ಳದ ಪಾಕೀಸ್ತಾನ ಈಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತದೆ ಎಂಬುದು ಸಾಧ್ಯವೇ ಇಲ್ಲ. ಜಗತ್ತು ಕಳೆದ 3-4 ವರ್ಷದಿಂದ ಭಯೋತ್ಪಾದನೆ ಕುರಿತು ಪಾಕೀಸ್ತಾನವನ್ನು ತೆಗಳುತ್ತಾ ಬಂದಿದೆ. ಇಸ್ಲಾಮಿಕ್ ಸಹಕಾರದ ಸಂಘಟನೆ (ಒ.ಐ.ಸಿ.) ಮತ್ತು ಅರಬಿ ದೇಶಗಳು ಪಾಕೀಸ್ತಾನದ ವಿರುದ್ಧ ಮಾತಾಡಿದೆ. ಈ ದೇಶವನ್ನು ಬೆಂಬಲಿಸುತ್ತಿರುವುದು ಚೀನಾ ಮಾತ್ರ ಎಂಬುದನ್ನು ನೆನಪಿಡಬೇಕಾದ ವಿಚಾರ. ಕಳೆದ ವಾರ ನ್ಯೂಜಿಲಾಂಡ್, ಇಂಗ್ಲೆಂಡ್ ತಮ್ಮ ಆಟಗಾರರ ಸುರಕ್ಷತೆಯ ಕಾರಣದಿಂದ ಕ್ರಿಕೇಟ್ ಪ್ರವಾಸವನ್ನು ರದ್ದು ಮಾಡಿದೆ. ಪಾಕೀಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳು ಕ್ರಿಕೇಟ್ ವಿಶ್ವಕಪ್ ನಲ್ಲಿ ಆಡುವುದು ಈಗ ಆನುಮಾನವಾಗಿದೆ. ಇಸ್ಲಾಂ ವಿರೋಧಿ ಚಿಂತನೆಗಳಿವೆ ಎಂಬ ಕಾರಣಕೊಟ್ಟು ತಾಲಿಬಾನಿಗಳು ಐಪಿಎಲ್ 2021 ಪ್ರಸಾರವನ್ನು ಅಫ್ಘಾನಿಸ್ತಾನದಲ್ಲಿ ನಿಷೇಧ ಮಾಡಿದ್ದಾರೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ತೆರಳಲು ಸಹ ಗಂಡಸೊಬ್ಬನನ್ನು ಕರೆದುಕೊಂಡು ಬರಬೇಕು ಎಂದು ತಾಲಿಬಾನಿನ ಕಾನೂನು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಾಗಿದೆ. ತಾಲಿಬಾನಿಗಳ ಆಡಳಿತದೊಂದಿಗೆ ಅಫ್ಘಾನಿಸ್ತಾನ ಅಧುನಿಕ ಆಯುಧಗಳೊಂದಿಗೆ ಮಧ್ಯಕಾಲಕ್ಕೆ ಸಾಗಿದೆ. ತಮ್ಮ ದೇಶವನ್ನು ಜಾಗತಿಕವಾಗಿ ಮುಂದುವರೆಸಬೇಕು ಎಂಬ ಉದ್ದೇಶ ಅವರಲ್ಲಿ ಇಲ್ಲ. ಉಳಿದಂತೆ ಆಫ್ರಿಕಾ ಖಂಡದ ಅನೇಕ ರಾಷ್ಟ್ರಗಳು ನಾಗರೀಕತೆಯ ವಿಚಾರದಲ್ಲಿ ಇನ್ನೂ ಕತ್ತಲೆಯಲ್ಲೇ ಉಳಿದಿದೆ.
![]()  | 
| Kiwis and England cancels its tour to Pakistan | 
ಪ್ರಧಾನಿ ಮೋದಿಯವರ 5 ದಿನದ ಅಮೇರಿಕಾದ ಪ್ರವಾಸ ಮಹತ್ವ ಪಡೆದುಕೊಂಡಿದೆ. ಅಲ್ಲಿರುವ ಭಾರತೀಯ ಉದ್ಯಮಿಗಳೊಂದಿಗೆ ಚರ್ಚೆ, ಕ್ವಾಡ್ ಶೃಂಗ ಸಭೆ, ಯು.ಎನ್. ಸಭೆ, ಬೈಡನ್ ಜೊತೆಗಿನ ಮೊದಲ ದ್ವಿಪಕ್ಷೀಯ ಮಾತುಕತೆ ಬಹಳ ಮುಖ್ಯವಾಗಿದೆ. ಅಫ್ಘಾನ್ ಬಿಕ್ಕಟ್ಟು ಮತ್ತದರ ಪರಿಣಾಮಗಳು, ಚೀನಾದ ವಿಸ್ತರಣಾವಾದ, ಪರಿಸರ ರಕ್ಷಣೆ ಮತ್ತು ಶುದ್ಧಶಕ್ತಿಯ ಪಾಲುದಾರಿಕೆಯ ಕುರಿತು ಚರ್ಚೆಗಳು ನಡೆಯುವುದರಲ್ಲಿದೆ. ಜಗತ್ತನ್ನು ಗಮನಿಸಿದರೆ ಭಾರತ ಒಂದು ರೀತಿ ನೆಮ್ಮದಿಯಾಗಿದೆ, ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೆ ಮತ್ತು ಪ್ರತಿ ಹಂತದಲ್ಲೂ ಬೆಳವಣಿಗೆ ಕಾಣುತ್ತಿದೆ. ಲಸಿಕೆ ಪಡೆದ ಕೆಲವೇ ನಿಮಿಷಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರ ನಮ್ಮ ಮೊಬೈಲ್ ಅಲ್ಲೇ ನೋಡಬಹುದಾಗಿದೆ. ಮುಂದುವರೆದ ದೇಶ ಎಂದು ಕರೆಸಿಕೊಳ್ಳುವ ಅಮೇರಿಕಾ ಮತ್ತು ಇಂಗ್ಲೆಂಡ್ ಇನ್ನೂ ಕೈಬರಹದ ಪ್ರಮಾಣಪತ್ರ ನೀಡುತ್ತಿದೆ. ಭಾರತದಲ್ಲಿ ಒಳ್ಳೆಯದಿದ್ದರೂ, ಎಲ್ಲಾ ಅನುಕೂಲವನ್ನು ಪಡೆದುಕೊಂಡು ತಮ್ಮಷ್ಟಕ್ಕೆ ತಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೂ ವಿರೋಧ ಪಕ್ಷಗಳು, ಚೀನಾದ ಗುಲಾಮರಾದ ಕಮ್ಯುನಿಸ್ಟರು ಮನಸ್ಸಿಗೆ ಬಂದಂತೆ ಮಾತಾಡುತ್ತಿದ್ದರೆ. ಲೆಕ್ಕವನ್ನು ನೋಡದೆ ಲಸಿಕೆಯನ್ನು ಕಾಯ್ದಿರಿಸಿ ಮೋದಿಯವರ ಹುಟ್ಟು ಹಬ್ಬದಂದು ಕೊಟ್ಟಿದ್ದಾರೆ ಎಂದೆಲ್ಲಾ ಅರ್ಥವಿಲ್ಲದ ಮಾತಾಡಿದ್ದಾರೆ. ಇಂತಹವರ ಮಾತಿಗೆ ಬೆಲೆಕೊಡದೆ ದೇಶವನ್ನು ಗಮನಿಸುತ್ತಾ, ಅದರ ಬೆಳವಣಿಗೆಗೆ ನಾವು ಜೊತೆಯಾಗಬೇಕಿದೆ.
![]()  | 
| Hand Written Covid Vaccination Certificates in America and United Kingdom | 



ಎಂದಿನಂತೆ ಅಂಕಣ ಚೆನ್ನಾಗಿದೆ
ReplyDelete