November 5, 2021

ದೀಪಾವಳಿ ಹೊತ್ತು ಮಾತ್ರ ಪರಿಸರ ಕಾಳಜಿ ಯಾಕೆ...?

ಕೆಲವರಿಗೆ ಹಿಂದೂ ಹಬ್ಬಗಳು ಬಂದರೆ ಯಾವತ್ತೂ ಇಲ್ಲದ ಸಾಮಾಜಿಕ ಕಾಳಜಿ, ಪರಿಸರ ಕಾಳಜಿ ಬರುತ್ತದೆ. ಅದರಲ್ಲೂ ದೀಪಾವಳಿ ಹಬ್ಬ ಬಂತೆಂದರೆ 'ಪಟಾಕಿ ಹೊಡೆಯಬೇಡಿ, ಪರಿಸರ ಹಾಳು ಮಾಡಬೇಡಿ' ಎಂದೆಲ್ಲಾ ಉಪದೇಶ ಮಾಡಲು ಮುಂದಾಗುತ್ತಾರೆ. ಇತ್ತೀಚೆಗೆ ವಿರಾಟ್ ಕೋಹ್ಲಿ ನಮಗೆಲ್ಲಾ ಉಪದೇಶ ಮಾಡಲು ಮುಂದಾದನ್ನು ನಾವು ಗಮನಿಸಬಹುದು. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಹೊಸವರ್ಷ ಅಥವಾ ಜಾಗತಿಕ ಮಟ್ಟದಲ್ಲಿ ನಡೆಯುವ ಇವೆಂಟ್ಗಳಾದ ಒಲಂಪಿಕ್ಸ್, ಫ಼ೂಟ್ಬಾಲ್ ಅಥವಾ ಕ್ರಿಕೇಟ್ ವಿಶ್ವಕಪ್ ನಡೆಯುವ ಸಂದರ್ಭಗಳಲ್ಲಿ ಲೆಕ್ಕವಿಲ್ಲದಷ್ಟು ಪಟಾಕಿ ಹೊಡೆಯುತ್ತಾರೆ ಆಗ ಮಾತ್ರ ಇದೇ ಗಣ್ಯರು ಮಾತಾಡುವುದಿಲ್ಲ. ಇವರದ್ದೆಲ್ಲಾ ಬರೀ ಬೂಟಾಟಿಕೆ, ಹಿಂದೂ ಧರ್ಮದ ವಿರುದ್ಧ ಯಾರೇನೇ ಮಾತಾಡಿದರು ದಕ್ಕಿಸಕೊಳ್ಳಬಹುದು ಎಂಬ ದಾರ್ಷ್ಟ್ಯ. ಇರಲಿ ಬಿಡಿ ವಿಚಾರ ಅದಲ್ಲ, ನಮ್ಮ ಪರಿಸರ ಹಾಳಾಗುತ್ತಿರುವುದಕ್ಕೆ ನೈಜ ಕಾರಣಗಳನ್ನು ನಾವು ವಿಷ್ಲೇಶಿಸಬೇಕಿದೆ.

ನಮ್ಮ ಭೂಮಿಯನ್ನು ಆ ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತಿರುವುದು ಓಝೋನ್ ಪರದೆ. ಇದು ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಪರದೆ. ಸೂರ್ಯನ ಅಪಾಯಕಾರಿ ಅತೀನೇರಳೆ ಕಿರಣಗಳನ್ನು ಹೀರಿಕೊಂಡು, ಅದು ಮುಂದುವರೆಯದಂತೆ ಭೂಮಿಯನ್ನು ರಕ್ಷಿಸುತ್ತದೆ. ಈ ಪರದೆಯ ಕಾರಣ ನಾವು ಅನೇಕ ಭೀಕರ ರೋಗಗಳಿಂದ ಪಾರಾಗಿದ್ದೇವೆ. ಆದರೆ, ಜಗತ್ತು ಆಧುನೀಕರಣವಾಗಿ ಕೈಗಾರಿಕಾ ಕ್ರಾಂತಿಯಾದವು, ಅನೇಕ ಕಾರ್ಖಾನೆಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ನಮ್ಮ ಪರಿಸರ ಮಲಿನವಾಗತೊಡಗಿತು. ಕ್ಲೋರೋಫ಼್ಲೋರೊ ಕಾರ್ಬನ್ (CFC) ಎಂಬ ರಾಸಾಯನಿಕ ಈ ಓಝೋನ್ ಪರದೆಯನ್ನು ಬಹುವಾಗಿ ನಾಶ ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಈ ರಾಸಾಯನಿಕ ಅನಿಲ ಓಝೋನ್ ಪರದೆಯನ್ನು ನಾಶಮಾಡಲು ತಂಪು ವಾತಾವರಣದ ಅವಶ್ಯಕತೆ ಇದೆ. ಅಂತಹ ವಾತಾವರಣವಿರುವುದು ದಕ್ಷಿಣ ಧ್ರುವದಲ್ಲಿ. ಜಗತ್ತಿನ ಎಲ್ಲಾ ಮೂಲೆಗಳಿಂದ ಹರಿದುಬರುವ ಮಾಲಿನ್ಯಕಾರಕ ಅನಿಲಗಳು ದಕ್ಷಿಣ ಧ್ರುವದಲ್ಲಿ ಓಝೋನ್ ಪರದೆಯನ್ನು ನಾಶಮಾಡಲು ಶುರುಮಾಡಿತು. ಕ್ಲೋರೋಫ಼್ಲೋರೋ ಕಾರ್ಬನ್ ಹೆಚ್ಚಲು ಮೂಲಕಾರಣವೇ ಕೈಗಾರಿಕಾ ಕ್ರಾಂತಿ. ನಮ್ಮ ಅನುಕೂಲಕ್ಕೆ ತಕ್ಕಂತೆ ಏ.ಸಿ, ರೆಫ಼್ರಿಜಿರೇಟರ್ಗಳಂತಹ ಸೌಲಭ್ಯಗಳು ಹೆಚ್ಚಿತು. ಓಝೋನ್ ರಂಧ್ರ ಎಂದರೆ ಅದು ಅಕ್ಷರಶಃ ರಂಧ್ರವಲ್ಲ. ಪದರದ ಒಂದು ಭಾಗ ತೆಳುವಾಗಿದೆ ಎಂದರ್ಥ. ಇದು 1985 ರಲ್ಲಿ ದಕ್ಷಿಣಧ್ರುವದಲ್ಲಿ ಕಂಡುಬಂತು. ಮಾನವ ನಿರ್ಮಿತ ಈ ಅನಾಹುತವನ್ನು ತಡೆಗಟ್ಟಲು ಜಾಗತಿಕ ಮಟ್ಟದಲ್ಲಿ 1987 ರಲ್ಲಿ ಮಾಂಟ್ರಿಯಾಲ್ ಒಪ್ಪಂದವನ್ನು ಜಾರಿಗೆ ತರುತ್ತಾರೆ. ಈ ಒಪ್ಪಂದದ ಪ್ರಕಾರ ಓಝೋನ್ ಗೆ ಹಾನಿಮಾಡುವ ಸಿ,ಎಫ಼್.ಸಿ.ಯಂತಹ ಅನಿಲಗಳನ್ನು ಹೊರಸೂಸುವ ಉಪಕರಣಗಳನ್ನು ತಯಾರು ಮಾಡದಂತೆ ಉದ್ಯಮಗಳಿಗೆ ತಾಕೀತು ಮಾಡಿತು. ಇದರ ಪ್ರಕಾರ ಏ.ಸಿ., ಫ಼್ರಿಡ್ಜ್ ತಯಾರಿಕೆ ನಿಲ್ಲಿಸಬೇಕಿತ್ತು. ಆದರೆ, ಮಾನವ ಅನುಕೂಲ ಸಿಂಧುವಾಗಿಬಿಟ್ಟಿದ್ದ. ಸಿ.ಎಫ಼್.ಸಿ ರಹಿತ ಉಪಕರಣಗಳನ್ನು ತಯಾರು ಮಾಡಲು ಮುಂದಾದ. ಈ ಒಪ್ಪಂದದ ಮಹತ್ವವನ್ನು ಸಾರುತ್ತಾ ಪ್ರತಿವರ್ಷ ಸೆಪ್ಟಂಬರ್ 16 ಓಝೋನ್ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಒಳ್ಳೆಯ ಸಂಗತಿ ಎಂದರೆ ಪ್ರಸಕ್ತ ಸನ್ನಿವೇಶದಲ್ಲಿ ಓಝೋನನ್ನು ಹಾಳುಮಾಡುವ ಅನಿಲಗಳನ್ನು ಬಿಡುಗಡೆ ಮಾಡದ ವಿದ್ಯುತ್ ಉಪಕರಣಗಳನ್ನು, ಯಂತ್ರಗಳು ತಾಯಾರಾಗಿವೆ ಮತ್ತು ಬಳಕೆಯಲ್ಲಿವೆ. ವೈಜ್ಞಾನಿಕ ಸಮೀಕ್ಷೆಗಳ ಪ್ರಕಾರ ಈಗಿರುವ ವಾತಾವರಣದ ಗುಣಮಟ್ಟ ಮುಂದುವರೆದರೆ 2060 ವೇಳೆಗೆ ಓಝೋನ್ ರಂಧ್ರ ಕಾಣೆಯಾಗುತ್ತದೆ ಮತ್ತು ಪರದೆ ಅದರ ಹಿಂದಿನ ಅರೋಗ್ಯವಾದಂತಹ ಸ್ಥಿತಿ ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಓಝೋನ್ ಪದರಗಳನ್ನು ಸರಿಪಡಿಸುವ ಅಥವಾ ತೆಳ್ಳಗಾಗಿಸುವ ಯಾವುದೇ ಪ್ರಕ್ರಿಯೆ ಸಹ ತಲೆಮಾರುಗಳ ಸಮಯವನ್ನು ಬೇಡುತ್ತದೆ ಎಂಬ ಎಚ್ಚರ ನಮಗೆ ಮೂಡಬೇಕಿದೆ. ಓಝೋನ್ ತೆಳುವಾದರೆ ಮುಂದಿನ ತಲೆಮಾರುಗಳ ಭವಿಷ್ಯವೂ ತೆಳುವಾದಂತೆಯೇ.

Satellite monitoring revealing that the area of ozone depletion at south pole

ಕಳೆದ ವಾರ ಗ್ಲಾಸ್ಗೋವ್ ನಲ್ಲಿ ನಡೆದ ಜಿ20 ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹವಾಮಾನ ವೈಪರಿತ್ಯವನ್ನು ತಡೆಗಟ್ಟುವಲ್ಲಿ ನಮ್ಮ ದೇಶದ ದೃಷ್ಟಿಕೋನ ಮತ್ತು ಹೆಜ್ಜೆಗಳ ಕುರಿತು ಜಗತ್ತನ್ನು ಉದ್ದೇಶಿಸಿ ಮಾತಾಡಿದರು. ನಮ್ಮ ಎಲ್ಲಾ ಯೋಜನೆಗಳು ಕೂಡ ಪ್ರಪಂಚಕ್ಕೆ ಒಳಿತು ಮಾಡುವ ಯೋಜನೆಗಳೇ ಆಗಿವೆ ಮತ್ತು 2070 ರ ವೇಳೆಗೆ ಕಾರ್ಬನ್ ಹೊರಸೂಸುವ ಪ್ರಮಾಣವನ್ನು ಶೂನ್ಯಕ್ಕೆ ತರುವುದು ನಮ್ಮ ಗುರಿಯಾದೆ ಎಂದರು. ಇದು ಸೇರಿದಂತೆ ಇತರ ಬೇರೆ ಬೇರೆ ವಿಚಾರವನ್ನು ಹಂಚಿಕೊಂಡರು. ಭಾರತೀಯ ಜೀವನಶೈಲಿ ಮತ್ತು ಸಂಸ್ಕೃತಿ ಪರಿಸರದಿಂದ ಪ್ರೇರೇಪಿತವಾಗಿದೆ. ಜಗತ್ತು ಭಾರತೀಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳನ್ನು ಉದ್ದೇಶಿಸಿತ್ತಾ ಭಾರತ ತನ್ನ ಗುರಿ ಹಾಕಿಕೊಂಡಂತೆ ಜಗತ್ತಿನ ದೊಡ್ಡ ರಾಷ್ಟ್ರಗಳೂ ಕೂಡ ಪರಿಸರ ಕಾಳಜಿ ಮತ್ತು ತಂತ್ರಜ್ಞಾನ ವರ್ಗಾವಣೆಯ ಕುರಿತು ಸ್ಪಷ್ಟ ಗುರಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಭಾರತ 2030 ರ ವೇಳೆಗೆ ಫ಼ಾಸಿಲ್ ಫ಼್ಯೂಲ್ ರಹಿತ ಇಂಧನದ ಮೂಲಗಳಿಂದ 500 ಗಿಗಾವ್ಯಾಟ್ ಶಕ್ತಿ ಉತ್ಪಾದಿಸುವ ಗುರಿ ಹೊಂದಿದೆ, ಅದೇ ವೇಳೆಗೆ ಭಾರತವು ತನ್ನ ಅಗತ್ಯತೆಯ 50% ಶಕ್ತಿಯನ್ನು ನವೀಕರಿಸಹುದಾದ ವಸ್ತುಗಳಿಂದ ಪೂರೈಕೆ ಮಾಡಿಕೊಳ್ಳುತ್ತದೆ. ಈ ಗುರಿಯನ್ನು ತಲುಪಲು 2030 ಹೊತ್ತಿಗೆ 1 ಬಿಲಿಯನ್ ಟನ್ ಅಷ್ಟು, ಕಾರ್ಬನನ್ನು ಹೊರಸೂಸುವುದನ್ನು ಮತ್ತು ಇಂಗಾಲದ ಮೇಲೆ ಹೂಡುವ ಹಣವನ್ನು 45% ಭಾರತ ಕಮ್ಮಿ ಮಾಡುತ್ತದೆ ಎಂದು ಘೋಷಿಸಿದರು. ಇದೇ ವೇಳೆಗೆ ರೈಲ್ವೇ ಇಲಾಖೆ 40 ಬಿಲಿಯನ್ ಟನ್ ಅಷ್ಟು ಕಾರ್ಬನನ್ನು ಹೊರಸೂಸುವುದನ್ನು ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿದೆ. ಚೀನಾ ಮತ್ತು ಇತರ ದೇಶಗಳನ್ನು ಕುರಿತು 'ಭಾರತ ಜಗತ್ತಿನ 17% ರಷ್ಟು ಹೊಂದಿದ್ದರೂ ಇಂಧನ ಹೊರಸೂಸುತ್ತಿರುವುದು 5% ರಷ್ಟು ಮಾತ್ರ' ಎಂದು ಪರೋಕ್ಷವಾಗಿ ಎಚ್ಚರಿಸುತ್ತಾರೆ. ಜಗತ್ತಿಗೆ ಮಾದರಿಯಾಗಿ, ಗುರುವಾಗಿ ಮಾರ್ಗದರ್ಶನ ಮಾಡುವ ಮಟ್ಟಕ್ಕೆ ಭಾರತ ಬೆಳೆದಿರುವುದನ್ನು ನಾವಿಂದು ಗಮನಿಸಬಹುದು. ಜಗತ್ತಿನ ಅನೇಕ ದೇಶಗಳು ಪ್ಲಾಸ್ಟಿಕನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿ ಸಾಗರವನ್ನು ಕಲುಷಿತಗೊಳಿಸುತ್ತಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ ಅಮೇರಿಕಾ, ಜರ್ಮನಿ, ಬ್ರಜಿಲ್, ಜಪಾನ್ ಕ್ರಮವಾಗಿ ಮುಂದಿನ ಐದು ಸ್ಥಾನದಲ್ಲಿದೆ ಪಾಕೀಸ್ತಾನ ಮತ್ತು ರಷ್ಯಾ ಕೂಡ ಮೊದಲ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಓಝೋನ್ ಪರದೆ ತೆಳುವಾಗಲು ಅತ್ಯಂತ ಹೆಚ್ಚು ಕೊಡುಗೆ ನೀಡುತ್ತಿರುವ ರಾಷ್ಟ್ರ ಯಾವುದು ಗೊತ್ತೇ? ಚೀನಾ. ಆದರೆ, ಚೀನಾ ಮಾತ್ರ ಹವಾಮಾನ ವೈಪರಿತ್ಯಕ್ಕೆ ತಾನು ಕಾರಣವಲ್ಲ, ತಾನು ಆಧುನಿಕತೆಗೆ ತೆರೆದುಕೊಳ್ಳುವ ಮುನ್ನ ಈ ಸಮಸ್ಯೆಯಿತ್ತು ಎಂಬತಹ ಬೇಜವಾಬ್ದಾರಿ ಮಾತುಗಳನ್ನು ಆಡಿದೆ. ಜಗತ್ತಿಗೆ ಒಳಿತು ಮಾಡುವ ಯೋಗ್ಯತೆ ಇಲ್ಲದಿದ್ದರೂ ಈ ರೀತಿಯ ಮಾತಾಡುವುದರಲ್ಲಿ ಎತ್ತಿದ ಕೈ ಚೀನಾ.

Top most countries contributing with plastic pollution

chinese media stating that it is not responsible for Climatic Issues

ಪರಿಸರ ಮಾಲಿನ್ಯ ಮತ್ತು ಅದರ ಸಂರಕ್ಷಣೆ ಎಂದರೆ ಬಹಳ ಸೂಕ್ಷ್ಮವಾದ ವಿಚಾರ. ಜಾಗತಿಕ ಮಟ್ಟದಲ್ಲಿ ಇದರ ಕುರಿತು ಬಹಳಷ್ಟು ಚರ್ಚೆ ಮತ್ತು ತಕ್ಕ ಕ್ರಮಗಳು ಆಗುತ್ತಿರುವುದು ಒಳ್ಳೆಯ ಸಂಗತಿ. ಭಾರತ ಜಾಕತಿಕವಾಗಿ ಈ ವಿಚಾರದಲ್ಲೂ ಮುಂದಾಳತ್ವ ವಹಿಸುವುದು ಒಳಿತು. ಕರೋನಾದ ಕಾರಣ 2 ವರ್ಷದಿಂದ ಸ್ಥಗಿತಗೊಂಡಿದ್ದ ಪಟಾಕಿ ಉದ್ಯಮ ಈಗ ಮತ್ತೆ ಗರಿಗೆದರಿದೆ. ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಭಾರತದಲ್ಲಿ ಆದ ವಹಿವಾಟು 1.25 ಲಕ್ಷ ಕೋಟಿ! ವ್ಯಾಪಾರಿಗಳ ಮನೆಯವರಿಗೆ ಇದು ನಿಜಕ್ಕೂ ದೀಪಾವಳಿಯೇ ಸರಿ. ಎಲ್ಲಾ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ. ಹಾಗೆ ಜಾಗತಿಕ ಮಟ್ಟದಲ್ಲಿ ಪರಿಸರ ಕುರಿತು ಚರ್ಚೆ ನಡೆಯಬೇಕಾದರೆ ಕೆಲವು ಮಂದಿ ದೀಪಾವಳಿ ಹಬ್ಬದ ದಿನಗಳಂದು ಮಾತ್ರ ಪರಿಸರ ಮಲಿನವಾಗುತ್ತದೆ ಎನ್ನುವ ರೀತಿ ಮಾತಾಡುತ್ತಿದ್ದಾರೆ. ನಮ್ಮ ಪ್ರಧಾನಿ 50 ವರ್ಷಗಳಷ್ಟು ಮುಂದಿನ ಯೋಜನೆ ಮಾಡುತ್ತಿದ್ದರೆ ಇಲ್ಲಿನ ಕೆಲವು ನಾಯಕರು ಅನ್ನಿಸಿಕೊಂಡವರು 2024 ರ ಚುಣಾವಣೆ ಎದುರಿಸುವ ಬಗ್ಗೆ ಚಿಂತಿಸುತ್ತಿದ್ದಾರೆ! ನಾಯಕರು ಧೀರ್ಘವಾದದ್ದನ್ನು ಯೋಚಿಸಬೇಕು. ಹಿಂದೂ ಧರ್ಮವನ್ನು ತೆಗಳುವುದು, ಕೆಲವು ಸಾಮಾಜಿಕ ಸಂಘ ಸಂಸ್ಥೆಗಳ ಸೆಲೆಕ್ಟೀವ್ ಕಾಳಜಿ ನಿಲ್ಲಬೇಕು. ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಮ್ಮದಾಗಬೇಕು.

CAIT statement on business during Deepavali across India

1 comment:

  1. Well said sir. What I feel is these film actress & actors, Cricketer, fake environmentalists, so called champions of human rights as well as rights of animal activists/PETA....etc.,are all hypocrites who give gyan to only Hindus on all Hindu festivals, but are responsible for pollution by using chartered planes, AC in cars, AC in all rooms@house/office/shooting spots/gym, using high end cars and bikes which burns more fuel and gives less milage, use make up made out of animal byproducts and eat meats of different animals & birds which inturn adds on to carbon footprints to the environment, so ultimately we can say that Hindus don't need these hypocrites gyan & they should follow what they preach and not burst crackers on their destination wedding/sports events/New Year/Christmas celebrations.

    ReplyDelete