ನಿಜಕ್ಕೂ ಇದು ದುಃಖಕರವಾದ ಸನ್ನಿವೇಶವೇ ಸರಿ. ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಜನ ಸೈನಿಕರು ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಹುತಾತ್ಮರಾಗಿದ್ದಾರೆ. ಮನೆ ಕಟ್ಟುವ ಸಂದರ್ಭದಲ್ಲಿ ಮನೆಯೊಡೆಯ ತೀರಿಕೊಂಡಂತಹ ಸ್ಥಿತಿ ಭಾರತದ ಸೈನ್ಯದ್ದು. ಡಿಸೆಂಬರ್ 6 ರಂದು ರಷ್ಯಾದ ಅಧ್ಯಕ್ಷ ಭಾರತಕ್ಕೆ ಬಂದು ಪ್ರಧಾನಿ ಮೋದಿಯ ಜೊತೆ ಅನೇಕ ವಿಚಾರಗಳನ್ನು ಚರ್ಚಿಸಿ ಹೋಗಿದ್ದಾರೆ. ಭಾರತ ಮತ್ತು ರಷ್ಯಾದ ಈ ಭೇಟಿಯನ್ನು ಸೂಕ್ಷ್ಮವಾಗಿ ಮತ್ತು ಕುತೂಹಲದಿಂದ ಗಮನಿಸಿದ್ದು ಅಮೇರಿಕಾ ಮತ್ತು ಚೀನಾ. ರಷ್ಯಾ ಜೊತೆಗಿನ ಭೇಟಿಗೂ, ಇಲ್ಲಿ ನಡೆದ ವೈಮಾನಿಕ ಅಪಘಾತಕ್ಕೂ ಸಂಬಂಧ ಇದೆಯಾ? ಇಲ್ಲ ಎಂದನ್ನಿಸಿದರೂ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೌದು, ಹೀಗೆ ಹೇಳಲು ಕಾರಣವಿದೆ. ಇತಿಹಾಸ ಇದಕ್ಕೆ ಪೂರಕ.
| Chief of Defense Staff General Bipin Rawat |
ನೆಹರೂ ತೀರಿಕೊಂಡ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಯಾದರು. ಚೀನಾ ವಿರುದ್ಧ ಸೋತು, ನೆಹರುವನ್ನು ಕಳೆದುಕೊಂಡಿದ್ದ ಭಾರತವನ್ನು ಸುಲಭವಾಗಿ ಮಣಿಸಬಹುದು ಎಂಬುದು ಪಾಕೀಸ್ತಾನದ ಲೆಕ್ಕಾಚಾರ. ಅಮೇರಿಕಾ ಕೊಟ್ಟಿದ್ದ ಪೆಟನ್ ಟ್ಯಾಂಕ್ಗಳನ್ನು ಬಳಸಿ ಭಾರತವನ್ನು ಸೋಲಿಸುವ ಉತ್ಸಾಹದಲ್ಲಿತ್ತು. ಆದರೆ, ಯಾರೂ ಊಹಿಸದ ರೀತಿಯಲ್ಲಿ ಶಾಸ್ತ್ರಿ ನಿರ್ಧಾರ ತೆಗೆದುಕೊಂಡಿದ್ದರು. ಲಾಹೋರಿನವರೆಗೂ ಸೈನ್ಯವನ್ನು ನುಗ್ಗಿಸಿದರು. ಅಮೇರಿಕಾಕ್ಕಾಗಲಿ, ವಿಶ್ವಸಂಸ್ಥೆಗಾಗಲಿ ಹೆದರಲಿಲ್ಲ. ಭಾರತ ಪಾಕೀಸ್ತಾನ ನಡುವೆ ಹತ್ತಿದ್ದ ಈ ಬೆಂಕಿಯನ್ನು ಶಮನ ಮಾಡಲು ರಷ್ಯಾ ಮುಂದೆ ಬಂತು. ತಾಷ್ಕೆಂಟ್ ಒಪ್ಪಂದ ನಡೆಯಿತು. ಪ್ರಧಾನಿ ಶಾಸ್ತ್ರಿ ತೀರಿಕೊಂಡರು. ಅವರ ಮರಣದ ಪ್ರಕರಣ ಈಗಲೂ ನಿಗೂಢ! ತೊಂಬ್ಬತ್ತರ ದಶಕದಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವ ಪ್ರಯತ್ನದಲ್ಲಿತ್ತು. ಅಮೇರಿಕಾ ಭಾರತದ ಏಳಿಗೆಯನ್ನು ಸಹಿಸದ ರಾಷ್ಟ್ರವಾಗಿತ್ತು ಮತ್ತು ರಷ್ಯಾದ ವಿರುದ್ಧವಾಗಿತ್ತು. ರಾಕೆಟ್ ಉಡಾವಣೆಗೆ ಬೇಕಾದಂತಹ ಇಂಜಿನ್ ಅನ್ನು ರಷ್ಯಾ ಭಾರತಕ್ಕೆ ಕೊಡಲು ಒಪ್ಪಿ ಮೊದಲನೆ ಹಂತದಲ್ಲಿ ಇಂಜಿನ್ನನ್ನು ರವಾನೆ ಮಾಡಿತ್ತು. ಆಗಲೇ ಇಸ್ರೋದ ವಿಜ್ಞಾನಿ ನಂಬಿ ನಾರಯಣನ್ ಬಂಧನಕ್ಕೆ ಒಳಗಾಗಿದ್ದು. ಅಲ್ಲೊಂದು ಷಢ್ಯಂತ್ರ ನಡೆದಿತ್ತು ಎಂದು ತಿಳಿಯಲು 25 ವರ್ಷಗಳೇ ಬೇಕಾಯಿತು!
ಡಿಸೆಂಬರ್ 6 ರಂದು ಪುತಿನ್-ಮೋದಿ ಭೇಟಿಯಾಯಿತು. ಎರಡೂ ದೇಶಗಳ ನಡುವೆ ಅನೇಕ ಒಪ್ಪಂದಗಳು ನಡೆಯಿತು. ನಾಗಾಲಾಂಡಿನಲ್ಲಿ ನುಸುಳುಕೊರರಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ, ಆರ್ಮಿ ಚಕ್ಪೋಸ್ಟ್ನಲ್ಲಿ ಟ್ರಕ್ ನಿಲ್ಲದ ಕಾರಣ ಸೈನಿಕರು ಗುಂಡು ಹಾರಿಸಿದ್ದಾರೆ. ಅವರು ಸಾಮಾನ್ಯ ನಾಗರೀಕರು ಎಂದು ನಂತರ ತಿಳಿದಮೇಲೆ ಒಂದಷ್ಟು ಗದ್ದಲವಾಗಿದೆ. ಇದಾದ ಎರಡೇ ದಿನಕ್ಕೆ ಬಿಪಿನ್ ರಾವತ್ ರವರ ಹೆಲಿಕಾಪ್ಟರ್ ಅಪಘಾತಕ್ಕೀಡಾಗುತ್ತದೆ. ನೆನಪಿಡಿ, ಕಳೆದ ವರ್ಷ ಹೆಲಿಕಾಪ್ಟರ್ ಅಪಘಾತದಲ್ಲಿ ಮಿಲಿಟರಿ ಮುಖ್ಯಸ್ಥ ಸೇರಿದಂತೆ 8 ಜನರು ತೈವಾನ್ ಅಲ್ಲಿ ಸಾವನ್ನಪ್ಪಿದ್ದರು. ತೈವಾನಿಗೂ ಚೀನಾಕ್ಕೂ ಸಂಬಂಧ ಕೆಡಲು ಪ್ರಾರಂಭವಾಗಿತ್ತು. ಭಾರತ ಮತ್ತು ರಷ್ಯಾದ ನಡುವೆ ಸಂಬಂಧ ಹೆಚ್ಚಾದಾಗಲೆಲ್ಲ ಭಾರತಕ್ಕೆ ಏನಾದರೂ ಆಘಾತ ಉಂಟಾಗಿದೆ. ಈ ಹಿನ್ನಲೆಯಲ್ಲಿ ಗಮನಿಸಿದಾಗ ಸಣ್ಣದೊಂದು ಅನುಮಾನ ಕಾಡುವುದು ಸಹಜ. ಇದು ನಿಜವೇ ಆಗಿದ್ದರೆ ಆಂತರಿಕ ಶತ್ರುಗಳ ಪಾಲು ಅದರಲ್ಲಿರುವ ಸಾಧ್ಯತೆಗಳು ಇವೆ. ಈ ಅಪಘಾತ ಆಕಸ್ಮಿಕ, ಇದರಲ್ಲಿ ಯಾವುದೇ ಷಢ್ಯಂತ್ರವಿಲ್ಲ ಎಂದಾಗಲಿ ಎಂಬುದೇ ಎಲ್ಲಾ ಭಾರತೀಯರ ಆಶಯ.
ರಾವತ್ ರವರು ದೇಶಭಕ್ತಿಯುಳ್ಳ ಮತ್ತು ಕರುವಾಕ್ಕಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವದವರಾಗಿದ್ದರು. ಭಾರತದ ಮೂರು ಸೈನಿಕದಳಗಳ ನಡುವೆ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿದ್ದರು. 2015 ರಲ್ಲಿ ಮಯನ್ಮಾರ್ ಗಡಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ನಕ್ಸಲರ ಹುಟ್ಟಡಗಿಸುವ ಕಾರ್ಯಾಚರಣೆಯ ಹಿಂದಿದ್ದದ್ದು ರಾವತ್. ಸರ್ಕಾರದಿಂದ ಸೈನ್ಯಕ್ಕೆ ಬೇಕಾದ ಸ್ವಾತಂತ್ರ್ಯ ಸಿಕ್ಕ ನಂತರ ಭಾರತದ ತಂಟೆಗೆ ಬಂದರೆ ಪಾಕೀಸ್ತಾನದ ಗಡಿಯೊಡಳಗೆ ನುಗ್ಗಿ ಹೊಡೆಯುತ್ತೇವೆಂಬ ಸ್ಪಷ್ಟ ಸಂದೇಶ ರಾವತ್ ಶತ್ರುಗಳಿಗೆ ಕೊಟ್ಟಿದ್ದರು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಚೀನಾವನ್ನು ಹಿಮ್ಮೆಟ್ಟಿದ ನಂತರ "ಗಾಲ್ವಾನ್ ನಂತರ ಉತ್ತಮ ತರಬೇತಿಯ ಅಗತ್ಯವಿದೆ ಎಂದು ಚೀನಾ ಅರಿತುಕೊಂಡಿದೆ" ಎಂದು ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದರು. ನಮ್ಮ ಸೈನ್ಯವನ್ನು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಲಾಢ್ಯಗೊಳಿಸಿದ ಕೀರ್ತಿ ರಾವತ್ತರದ್ದೇ. ರಷ್ಯಾದ ಎಸ್-400 ಯುದ್ಧೋಪಕರಣ ಖರೀದಿಯಲ್ಲಿ ಅವರ ಪಾತ್ರವಿತ್ತು. ಶತ್ರು ದೇಶದ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಉಪಕರಣದ ಅವಶ್ಯಕತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ವಾಯುಸೇನೆಗೆ ಅಧುನಿಕ ಯುದ್ಧ ವಿಮಾನದ ಅವಶ್ಯಕತೆ ಮನಗಂಡು ರಫೇಲ್ ಖರೀದಿ ವಿಚಾರದಲ್ಲಿ ತೊಡಗಿದ್ದರು. ದೋಖ್ಲಾಂ ವಿಚಾರದಲ್ಲಿ ಭಾರತ ನೇಪಾಳದ ಪರವಾಗಿ ದನಿ ಎತ್ತಿತ್ತು. ಎಲ್ಲಿ ಸೈನ್ಯ ಜಮಾವಣೆ ಮಾಡಿದರೆ ಸರಿ ಎಂಬುದರ ಅರಿವಿದ್ದದ್ದು ರಾವತ್ ರವರಿಗೆ. ಕಾಶ್ಮಿರದಲ್ಲಿ ಕಲ್ಲು ತೂರುತಿದ್ದವನೊಬ್ಬನನ್ನು ಸೇನಾ ವಾಹನದ ಮುಂಭಾಗಕ್ಕೆ ಕಟ್ಟಿ ಎಳತಂದದ್ದು ನೆನಪಿರಬೇಕಲ್ಲ. ಆ ಸೈನಿಕನ ದಿಟ್ಟತನವನ್ನು ಮೆಚ್ಚಿ ಬಹಿರಂಗವಾಗಿ ಕೊಂಡಾಡಿದ್ದು ಇದೇ ರಾವತ್. ಈ ಮೂಲಕ ಆಂತರಿಕ ಶತ್ರುಗಳು ಮತ್ತು ಎಡಚರರಿಗೆ ಎಚ್ಚರಿಕೆ ನೀಡಿದ್ದರು. ಭಾರತದ ಸೈನ್ಯಕ್ಕೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವಂತಹ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ರಾವತ್ ಮುಂದಿದ್ದರು.
ಕೊರೋನಾ ನಂತರ ಮೊದಲ ಬಾರಿಗೆ ವಿದೇಶದ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿಕೊಟ್ಟದ್ದು ರಷ್ಯಾದ ಪುತಿನ್. ಕಳೆದ ವಾರ ನಡೆದ ಭೇಟಿಯಲ್ಲಿ ಭಾರತ ಮತ್ತು ರಷ್ಯಾ 28 ಒಪ್ಪಂದಗಳಿಗೆ ಸಹಿ ಹಾಕಿದವು. ಒಂಬತ್ತು ಸರ್ಕಾರಗಳ ನಡುವಿನ ಒಪ್ಪಂದಗಳಾದರೆ ಇತರ 19 ವಾಣಿಜ್ಯ ಒಪ್ಪಂದಗಳಾಗಿವೆ. 2021-2031 ನಡುವಿನ ಮಿಲಿಟರಿ-ತಾಂತ್ರಿಕ ಸಹಕಾರದ ಕಾರ್ಯಕ್ರಮ. ಇದರ ಅಡಿಯಲ್ಲಿ ಅಮೇಥಿಯ ಸ್ಥಾವರದಲ್ಲಿ ಏಕೆ-203 ರೈಫಲ್ಗಳನ್ನು ತಯಾರಿಸಲು ಒಪ್ಪಂದ, ಬಾಹ್ಯಾಕಾಶದ ಸಂಶೋಧನೆ ಮತ್ತು ಸಹಕಾರ, ವಿಜ್ಞಾನ,-ತಂತ್ರಜ್ಞಾನ-ನಾವೀನ್ಯತೆ ಕುರಿತು ಎರಡು ದೇಶಗಳ ನಡುವಿನ ಸಹಕಾರಕ್ಕಾಗಿ ಮಾರ್ಗಸೂಚಿ ಕುರಿತ ಒಪ್ಪಂದಗಳು ಎರಡು ಸರ್ಕಾರದ ನಡುವಿನ ಮಾಡಿಕೊಂಡ ಮೂರು ಪ್ರಮುಖ ಒಪ್ಪಂದಗಳು. ಈ ಭೇಟಿಯಿಂದಾಗಿ ಭಾರತ ಮತ್ತು ರಷ್ಯಾ ನಡುವೆ ಕ್ವಾಡ್ ಮತ್ತು ಅಮೇರಿಕಾ ಮತ್ತು ಭಾರತ ನಡುವಿನ ಸಂಬಂಧದ ಕುರಿತು ಇರಬಹುದಾಗಿದ್ದ ತಪ್ಪುಗ್ರಹಿಕೆಗಳು ತಕ್ಕ ಮಟ್ಟಿಗೆ ನಿವಾರಣೆಯಾಗಿರುವುದು ಚೀನಾಕ್ಕೆ ಅಸಹನಿಯವಾದ ವಿಚಾರ.
| India Russia signs 28 investment deals |
ರಾವತ್ ರವರ ನಿಧನದ ಕುರಿತು ಬ್ರಹ್ಮ ಚೆಲಾನಿಯವರು ಕೆಲವು ಅನುಮಾನಗಳನ್ನು ಟ್ವಿಟ್ಟರಲ್ಲಿ ವ್ಯಕ್ತ ಪಡಿಸಿದರು. ಅವರ ಮಾತನ್ನು ರಷ್ಯಾದ ಎಸ್-400 ಕ್ಷಿಪಣಿ ರವಾನೆ, ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದ ಮುಂದುವರೆಯುತ್ತಿರುವುದನ್ನು ಅಮೇರಿಕಾ ಬಲವಾಗಿ ವಿರೋಧಿಸುತ್ತಿದೆ, ಅದು ಕಾರಣ ರಾವತ್ ರವರ ಅಪಘಾತ ಪ್ರಕರಣದಲ್ಲಿ ಅಮೇರಿಕದ ಪಾತ್ರವನ್ನು ಶಂಕಿಸಲಾಗಿದೆ ಎಂದು ಚೀನಾದ ಮುಖವಾಣಿಯಾದ ಗ್ಲೊಬಲ್ ಟೈಮ್ಸ್ ಹೇಳಿತು. ಎಲ್ಲದರಲ್ಲೂ ಕೆಟ್ಟದ್ದು ಕಾಣುವ, ಇತರರ ನಡುವೆ ಹುಳಿಹಿಂಡುವ ಬುದ್ಧಿ ಚೀನಾದ್ದು.
| Global Times spin over Gen Bipin Rawat's death |
ರಾವತ್ ರವರ ಸಾವನ್ನು ಸಂಭ್ರಮಿಸುವ ಕೆಟ್ಟ ಹುಳಗಳು ಕೆಲವು ಭಾರತದಲ್ಲಿ ಇವೆ. ಅವರನ್ನು ಕಮ್ಯುನಿಷ್ಟರು ಮತ್ತು ದ್ರೋಹಿಗಳು ಎನ್ನಬಹುದು. ಅಂತಹವರಿಗೆ ಶಿಕ್ಷೆ ಕೊಡುವುದಾಗಿ ಸರ್ಕಾರಗಳು ಮುಂದಾಗಿರುವುದು ಸಮಾಧಾನಕರವಾದ ಸಂಗತಿ. ಕೆಲವು ಘಟನೆಗಳು ಹೀಗೆ. ಕೆಟ್ಟದ್ದನ್ನು ಗುರುತಿಸಲು ಸಹಾಯ ಮಾಡುತ್ತದೆ. ಏನೇ ಇರಲಿ, ರಾವತ್ ರವರನ್ನು ಕಳೆದುಕೊಂದದ್ದು ದೇಶಕ್ಕೆ ನಿಜಕ್ಕೂ ನಷ್ಟವಾಗಿದೆ. ಹುತಾತ್ಮರಾದ ರಾವತ್ ಮತ್ತು ಇತರರ ಆತ್ಮಕ್ಕೆ ಸದ್ಗತಿ ದೊರೆಯಲಿ. ಆಸ್ಪತ್ರೆಯಲ್ಲಿರುವ ಗ್ರೂಪ್ ಕಾಪ್ಟನ್ ವರುಣ್ ರವರು ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.
| Perverted Minds posting derogatory remarks |
***********************************
References:
I respect your different view sir, but to know the truth behind this incident either Group captain Varun Singh should recover soon & clear our doubts or a thorough investigation from our Tri-services can give us a clear picture as to what exactly caused the fatal accident & answer all our questions/doubts. Thanks for your blog sir��
ReplyDelete