May 17, 2022

ಸೃಷ್ಟಿ ಮಾಡಲಾಗದವರು ನಾಶಕ್ಕೆ ಮುಂದಾದರು!

ಜಗತ್ತಿನಾದ್ಯಂತ ಯಾರ ಮೇಲೂ ಆಕ್ರಮಣ ಮಾಡದೇ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಎಲ್ಲೆಡೆ ಪಸರಿಸಿರುವ ಏಕೈಕ ದೇಶ ಭಾರತ ಹಾಗೂ ಹಿಂದೂ ಧರ್ಮ. ಭಾರತಾದ್ಯಂತ ಎಲ್ಲಿ ನೋಡಿದರೂ ಧಾರ್ಮಿಕ ಕೇಂದ್ರಗಳೇ ಹೆಚ್ಚು. ಊರಿಗೊಂದು ಅರಳಿಕಟ್ಟೆ, ಗ್ರಾಮ ದೇವತೆ ಹಾಗೂ ಅದಕ್ಕೊಂದು ದೇವಸ್ಥಾನ, ದೇವಾಲಯಗಳ ಮುಂದೆ ಕಲ್ಯಾಣಿ ಹಾಗೂ ಹಲವು ದೇವಸ್ಥಾನಗಳಲ್ಲಿ ಅನ್ನ ದಾಸೋಹ. ಅನೇಕ ದೇವಾಲಯಗಳು ಧಾರ್ಮಿಕ ಶ್ರದ್ಧ ಕೇಂದ್ರ ಮಾತ್ರ ಆಗದೇ ಅಯಾ ಕಾಲಘಟ್ಟದ ಸಾಂಸ್ಕೃತಿಕ ಮತ್ತು ಕಲಾ ಕುರುಹುಗಳು ಸಹ ಆಗಿವೆ. ಈಗಲೂ ಹೊಯ್ಸಳ ವಂಶ ಎಂದೊಡೆ ಬೇಲೂರು, ಹಳೇಬೀಡು, ಸೋಮನಾಥ ಕಣ್ಣು ಮುಂದೆ ಬರುತ್ತದೆ. ಕಲ್ಯಾಣದ ಚಾಲುಕ್ಯರು ಎಂದರೆ ಲಕ್ಕುಂಡಿಯ ದೇವಸ್ಥಾನಗಳು ಹಾಗೂ ಇಟಗಿಯ ದೇವಾಲಯಗಳ ಚಕ್ರವರ್ತಿ ಎಂದು ಕರೆಯಲ್ಪಡುವ ಮಹಾದೇವ ಮಂದಿರ ನಮ್ಮ ಮುಂದೆ ಭವ್ಯವಾದ ಸಾಕ್ಷಿಯಾಗಿ ನಿಲ್ಲುತ್ತದೆ. ವಿಜಯನಗರದ ಹಂಪಿ, ಅಮೃತಾಪುರದ ಅಮೃತೇಶ್ವರ, ಬಳ್ಳಿಗಾವಿಯ ಕೇದಾರೇಶ್ವರ, ಬೆಳವಾಡಿಯ ವೀರನಾರಾಯಣ, ಕಿಕ್ಕೇರಿ ಬ್ರಹ್ಮೇಶ್ವರ. ಇದು ಕರ್ನಾಟಕದಲ್ಲಿರುವ ಕೆಲವು ಪ್ರಮುಖ ದೇವಸ್ಥಾನಗಳ ಪಟ್ಟಿ ಅಷ್ಟೇ. ಇನ್ನು ಇಡೀ ಭಾರತವನ್ನು ಗಣನೆಗೆ ತೆಗೆದುಕೊಂಡರೆ ದೇವಾಲಯಗಳು ಅಸಂಖ್ಯ. ಆದರೆ, ಹಲವು ದೇವಾಲಯಗಳ ಸಮೀಪ ಅಥವಾ ಪ್ರಾಂಗಣದಲ್ಲಿ ಅಥವಾ ದೇಗುಲಕ್ಕೆ ಅಂಟಿಕೊಂಡಂತೆ ಮಸೀದಿಗಳು ನಿರ್ಮಾಣವಾಗಿವೆ! ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.

ರಾಮನ ಜನ್ಮಸ್ಥಾನ ಅಯೋಧ್ಯೆ ಎಂದು ಗೊತ್ತಿದ್ದರೂ ಅಲ್ಲಿ ದೇವಾಲಯವಿರಲಿಲ್ಲ ಎಂದು ಬಾಬ್ರಿ ಮಸೀದಿಯ ಪ್ರಕರಣವನ್ನು ನೂರಾರು ವರ್ಷ ಎಳೆದರು. ಕಾಶಿ ವಿಶ್ವದೊಡೆಯ ಶಿವನ ಸನ್ನಿಧಾನ ಎಂದು ಗೊತ್ತಿದ್ದರೂ ಅಲ್ಲಿ ಗ್ಯಾನವಾಪಿ ಮಸೀದಿ ಇದೆ. ಗ್ಯಾನವಾಪಿ ಎಂಬುದು ಸಂಸೃತ ಪದ ಎಂಬುದು ಸಹ ಪರಿಗಣಿಸದೆ ವಾದ ಮಾಡುತ್ತಾರೆ. ಮಥುರಾ ಶ್ರೀ ಕೃಷ್ಣನ ಜನ್ಮಸ್ಥಾನ ಆದರೂ ಅಲ್ಲೊಂದು ಶಾಹಿ ಇದ್ಗಾ ಮಸೀದಿ ಇದೆ! ನಮ್ಮ ಕರ್ನಾಟಕದ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಕೆಡವಿ ಟಿಪ್ಪೂ ಸುಲ್ತಾನ ಮಸೀದಿಯನ್ನು ನಿರ್ಮಿಸಿದ್ದಾನೆ ಅದನ್ನೇ ನಾವು ಇಂದಿಗೂ ಜಾಮಿಯಾ ಮಸೀದಿ ಎನ್ನುತ್ತೇವೆ. ಇದನ್ನು ಟಿಪ್ಪೂ ಸ್ವತಃ ಪರ್ಶಿಯಾದ ಖಲೀಫ ಎಂಬುವನಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾನೆ. ಜಾಮಿಯಾ ಮಸೀದಿಯನ್ನು ಒಂದು ಸುತ್ತು ಹಾಕಿದರೆ ಸಾಕು ಪ್ರತಿಯೊಂದು ಕಲ್ಲು ಸಹ ಅಲ್ಲಿ ಮಂದಿರ ಇತ್ತು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

Extract from 'Maasir i Alamgiri' by Saqi Mustad Khan

ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಹೇಳುವ ಇತಿಹಾಸಕಾರರಿದ್ದಾರೆ. ಸಾಕ್ಷಿ ಪುರಾವೆಗಳನ್ನು ಕೊಟ್ಟು ಕಾನೂನಿನ ಪ್ರಕಾರ ಒಪ್ಪಿಸಬೇಕು ಅಷ್ಟೇ. ಸ್ತಂಭದ ಪ್ರವೇಶದ್ವಾರ ಮುಖ ಮಾಡಿರುವುದು ಉತ್ತರಕ್ಕೆ. ಸಾಮಾನ್ಯವಾಗಿ ಮುಸಲ್ಮಾನರ ಶ್ರದ್ಧೆ ಇರುವುದು ಮೆಕ್ಕಾದ ಕಡೆ. ಉತ್ತರ ಮತ್ತು ಪೂರ್ವ ಶ್ರೇಷ್ಠ ಎಂದು ನಂಬಿರುವವರು ಹಿಂದೂಗಳು. ಪ್ರವೇಶದ್ವಾರದ ಎರಡೂ ಬದಿಯಲ್ಲಿ ಕಮಲದ ಕೆತ್ತನೆಗಳಿವೆ. ಹಿಂದೂ ದೇವಾಲಯಗಳಲ್ಲಿ ಅಥವಾ ಕಟ್ಟಡಗಳಲ್ಲಿ ಇದು ಸಾಮಾನ್ಯ ಆದರೆ, ಮುಸ್ಲಮಾನರ ಯಾವ ಕಟ್ಟಡದಲ್ಲೂ ಇಲ್ಲದ ಹೂವಿನ ಕೆತ್ತನೆ ಇಲ್ಲಿ ಮಾತ್ರ ಯಾಕೆ? ದೆಹಲಿಯಲ್ಲಿರುವ ಹುಮಾಯೂನ್ ಸಮಾಧಿ ವಿಷ್ಣು ದೇವಾಲಯವಾಗಿತ್ತು ಎನ್ನುತ್ತಾರೆ. ಇದು ಸಹ ಸತ್ಯವೇ ಇರಬೇಕು ಇಲ್ಲವಾದಲ್ಲಿ ಆ ಕಟ್ಟಡದಲ್ಲಿ ವಿಷ್ಣುಪಾದ, ಹಿಂದೂ ಶೈಲಿಯ ಕಂಬಗಳು, ಮಂಟಪಗಳು ಹೇಗೆ ಬಂತು?

Ancient Hindu Temple Architecture at so called Humayun's Tomb

ಕರ್ನಾಟಕದ ವಿಜಯಪುರ (ಹಿಂದೆ ಬಿಜಾಪುರ) ಅನ್ನು ಆದಿಲ್ ಶಾಹಿಗಳು ವಶಪಡಿಸಿಕೊಂಡು ಆಳ್ವಿಕೆ ನಡೆಸಿದರು. ಗೋಲ್ ಗುಂಬಜ್ ಎಂದು ಕರೆಯಲ್ಪಡುವ ಕಟ್ಟಡ ಪುರಾತನ ಶಿವ ದೇವಾಲಯವಾಗಿತ್ತು ಎಂಬ ಅಭಿಪ್ರಾಯವಿದೆ. ಕಟ್ಟಡ ಸುತ್ತ ಉತ್ಖನನ ಮಾಡಿದಾಗ ಸಿಕ್ಕ ಕೆಲವು ಹಿಂದೂ ವಿಗ್ರಹಗಳನ್ನು ಸಮೀಪದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ನಾಟ್ಯಪ್ರಿಯನಾದ ಶಿವನನ್ನು ಆರಾಧಿಸುವ ಶಿವರಾತ್ರಿಯ ಹಬ್ಬದಂದು ಚರ್ಮವಾದ್ಯಗಳ ನಾದವನ್ನು ಪ್ರತಿಧ್ವನಿಸಲು ನಿರ್ಮಿಸಿದ ಕಟ್ಟಡ ಇದಾಗಿದೆ. ನಾಗಪುರದ ವಾಸ್ತುಶಿಲ್ಪಿ ಶ್ರೀ ಜೋಷಿಯವರು ಮುಸಲ್ಮಾನರ ಆಕ್ರಮಣಕ್ಕೂ ಹಿಂದೆ ಪ್ರಾಚೀನ ಶಿಲ್ಪ ಶಾಸ್ತ್ರದ ಪ್ರಕಾರ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಗೋಲ್ ಗುಂಬಜ್ ಕಟ್ಟಡದ ಕುರಿತ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವಿದೆ. ಮೇಲೆ ಹೇಳಿರುವ ಎಲ್ಲಾ ಕಟ್ಟಡಗಳು ಮುಸಲ್ಮಾನರೇ ನಿರ್ಮಿಸಿದ್ದಾರೆ ಎನ್ನುವುದಾದರೆ ಅರಬ್ ದೇಶದಲ್ಲಾಗಲಿ ಅಥವಾ ಇತರ ಯಾವುದೇ ಮುಸಲ್ಮಾನ್ ರಾಷ್ಟ್ರಗಳಲ್ಲಿ ಇಂತಹ ಒಂದೇ ಒಂದು ಕಲಾ ಕುಸುರಿ ಸಹ ನಿರ್ಮಿಸಿಲ್ಲ ಯಾಕೆ? ವೈಭವವನ್ನು ಸೃಷ್ಟಿ ಮಾಡಲಾಗದವರು ನಾಶ ಮಾಡಲು ಮುಂದಾದರು ಅಷ್ಟೇ!

ಈಗ ಕಾಶಿಯ ವಿಚಾರಕ್ಕೆ ಬರೋಣ. ಗ್ಯಾನವಾಪಿ ಮಸೀದಿಯ ಸರ್ವೇ ಮಾಡಲು ಮುಂದಾದಾಗ ಕಾಶಿಯಲ್ಲಿದ್ದ ಮುಸಲ್ಮಾನರು ಅಡ್ಡ ಬಂದರು. ಕೋರ್ಟು ಖಡಾಖಂಡಿತವಾಗಿ ಸರ್ವೇ ಮಾಡಬೇಕು ಎಂದಾಗ 1991 ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಮುಂದಿಟ್ಟುಕೊಂಡು ವಾದ ಮಾಡುತ್ತಿದ್ದಾರೆ. 1991 ರಲ್ಲಿ ಕಾಂಗ್ರೇಸ್ ಸರ್ಕಾರ 'ದಿ ಪ್ಲೇಸಸ್ ಆಫ್ ವರ್ಶಿಪ್ ಅಕ್ಟ್' ಅನ್ನುವ ಕಾಯ್ದೆಯನ್ನು ಜಾರಿಗೆ ತಂದಿತು. ಅದರ ಅನುಸಾರ ರಾಮಮಂದಿರ ಹೊರತು ಪಡಿಸಿ ಎಲ್ಲಾ ಧಾರ್ಮಿಕ ಕಟ್ಟಡಗಳು 1947 ಆಗಸ್ಟ್ 15 ಹೊತ್ತಲ್ಲಿ ಇರುವ ರೀತಿಯಲ್ಲೇ ಮುಂದುವರೆಯಬೇಕು ಎಂದಾಗಿದೆ. ಇದು ಮುಸಲ್ಮಾರ ಒಲೈಕೆ ಮಾಡಲಿಕ್ಕಾಗಿಯೇ ಜಾರಿಗೆ ತಂದ ಕಾಯ್ದೆ ಎಂದು ಬಾಬ್ರಿ ಮಸೀದಿ ಪ್ರಕರಣವನ್ನು ಅಧ್ಯಯನ ಮಾಡಿದಾಗ ನಮಗೆ ಅರಿವಾಗುತ್ತದೆ. ತಮ್ಮ ಪಕ್ಷ ಇರುವುದೇ ಮುಸಲ್ಮಾನರಿಗಾಗಿ ಎಂದು ಕಾಂಗ್ರೇಸ್ ಪಕ್ಷದ ವಕ್ತಾರರೇ ಹೇಳಿದನ್ನು ನಾವೆಲ್ಲರೂ ಕೇಳಿದ್ದೇವೆ. ಇತಿಹಾಸದಲ್ಲಿ ನಡೆದ ಪ್ರಮಾದಗಳನ್ನು ಸರಿ ಪಡಿಸಲು ಈ ಕಾಯ್ದೆಯನ್ನು ಸರ್ಕಾರ ಹಿಂಪಡೆಯುವುದಾದರೆ ಅದು ಒಳ್ಳೆಯ ನಡೆಯೇ ಸರಿ. ಪಂಜಾಬಿನ ರೈತರಿಗೆ ಮಾತ್ರ ಕೆಟ್ಟದ್ದಾಗಿ ಕಂಡು ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕಾಗಿ ಕೃಷಿ ಕಾಯ್ದೆಯನ್ನು ಹಿಂಪಡೆದಂತೆ ಬಹುಸಂಖ್ಯ ಹಿಂದುಗಳ ಆಶಯದಂತೆ 1991 ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಹಿಂಪಡೆಯಬೇಕು.

ಈ ವಿಚಾರದಲ್ಲಿ ಪ್ರಗತಿಪರರು ಎನ್ನಿಸಿಕೊಂಡವರ ವಾದ ಕೇಳಲಿಕ್ಕೆ ಚಂದ. 'ದೇವರು ಎಲ್ಲೆಡೆ ಇದ್ದಾನೆ, ಮಸೀದಿ ಒಳಗೆ ನೀವು ಲಿಂಗ ಪೂಜೆ ಮಾಡಬೇಕಾ?' ಎಂಬುದು ಅವರ ವಾದ. ಮುಸಲ್ಮಾನರಿಗೆ ಅನೇಕ ದೇಶವಿರುವಾಗ ಭಾರತದಲ್ಲೇ ಯಾಕಿರಬೇಕು ಎಂದು ತಿರುಗಿ ಕೇಳಿದರೆ ಅವರ ಬಳಿ ಉತ್ತರವಿಲ್ಲ. ಮೆಕ್ಕಾ ಹೇಗೆ ಮುಸಲ್ಮಾನರ ಶ್ರದ್ಧಾ ಕೇಂದ್ರವೋ ಹಾಗೇ ಕಾಶಿ, ಮಥುರಾ, ಅಯೋಧ್ಯೆ ಹಿಂದೂಗಳ ಶ್ರದ್ಧಾ ಕೇಂದ್ರಗಳು ಎಂಬುದನ್ನು ಬೇಕಂತಲೇ ಮರೆಯುತ್ತಾರೆ. ಇತಿಹಾಸದ ಘಟನೆಗಳ ಮೂಲಕ ಪಾಠ ಕಲಿಯುವಂತಾಗಲಿ, ಧರ್ಮಕ್ಕೆ ಜಯವಾಗಲಿ ಎಂಬುದು ನಮ್ಮ ಆಶಯ ಅಷ್ಟೇ!

No comments:

Post a Comment