ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಒಂದು ವಿಚಾರವನ್ನು ಗಮನಿಸಬೇಕು. ದೇಶದಲ್ಲಿ ವಿಧಾನಸಭೆ ಚುಣಾವಣೆ ಬಂದಾಗಲೆಲ್ಲಾ ಪ್ರತಿಪಕ್ಷಗಳು, ಚೀನಾ ಪ್ರೇರಿತ ಕಮ್ಯುನಿಸ್ಟರು ಯಾವುದಾದರು ಒಂದು ವಿವಾದವನ್ನು ತಂದು, ಅದನ್ನು ಕೇಂದ್ರ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುವುದು, ಚುಣಾವಣೆ ಮುಗಿದ ನಂತರ ಆ ವಿಚಾರವನ್ನು ಮರೆತೆ ಬಿಡುವುದು. ಸುಮಾರು 2015 ರಿಂದ ಇವತ್ತಿನವರೆಗೂ ಅಂತಹುದೇ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ಲೇಖಕ ಎಂ.ಕಲಬುರ್ಗಿ ಹತ್ಯೆ ಪ್ರಕರಣ, ಅಸಹಿಸ್ಣುತೆ ಮತ್ತು ಅವಾರ್ಡ್ ವಾಪ್ಸಿ ಎಂಬ ನಾಟಕ, ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು, ಸಿಎಎ ಮತ್ತು ಎನ್.ಆರ್.ಸಿ ನೆಪದಲ್ಲಿನ ಶಹೀನ್ ಭಾಗ್ ಪ್ರಕರಣ. ಈಗ ಬಂಗಾಳ ಚುಣಾವಣೆ ಬಂದಿದೆ, ಜೊತೆಗೆ ಕೋವಾಕ್ಸಿನ್ ಮೂಲಕ ಜಗತ್ತಿಗೆ ಒಳಿತು ಮಾಡುತ್ತಿದೆ ಭಾರತ. ಈ ಸಂದರ್ಭದಲ್ಲಿ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲಿ ಆಂದೋಲನ ಅಥವಾ ಷಡ್ಯಂತ್ರ ನಡೆಯುವ ಸಾಧ್ಯತೆ ಇತ್ತು. ಅದೀಗ ರೈತರ ಹೋರಾಟದ ರೂಪದಲ್ಲಿ ಬಂದು ಎದುರಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧ ಮಾಡುವುದು ಇದರ ಮೂಲ ಉದ್ದೇಶವಾದರೂ ಕಳೆದ ಕೆಲವು ತಿಂಗಳುಗಳಿಂದ ನಡೆದಿರುವ ಘಟನೆಗಳನ್ನು ಅವಲೋಕಿಸಿದರೆ ರೈತರ ಆಂದೋಲನದ ಉದ್ದೇಶ ಬೇರೆಯೆ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಕಳೆದ ವರ್ಷ ಪ್ರಧಾನಿ ಮೋದಿ ಕೋವಿಡ್ ಪರಿಹಾರಾರ್ಥ 20 ಲಕ್ಷ ಕೋಟಿ ಘೋಷಿಸಬೇಕಾದರೆ ಕೃಷಿ ಕಾಯ್ದೆ ಜಾರಿಗೆ ತರುವ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ. ಭಾರತೀಯ ಕಿಸಾನ್ ಯೂನಿಯನ್ನಿನ ನಾಯಕ ರಾಕೇಶ್ ತಿಕಾಯ್ತ್ ಕೃಷಿ ಕಾಯ್ದೆಯನ್ನು ಸ್ವಾಗತಿಸುತ್ತಾರೆ. ತಮ್ಮ ಬೆಳೆಗೆ ಹೆಚ್ಚಿನ ಮಾರುಕಟ್ಟೆ ಸಿಗುವುದನ್ನು ಯಾವ ರೈತ ತಾನೆ ವಿರೋಧಿಸುತ್ತಾನೆ? ಹಾಗಾಗಿ ಕಾಯ್ದೆಯನ್ನು ಸ್ವಾಗತಿಸುವುದು ತೀರ ಸಹಜವಾಗೆ ಇತ್ತು.
ಇದಾದ 2-3 ತಿಂಗಳಾದ ಮೇಲೆ ಹೈದರಾಬಾದ್ ಮತ್ತು ಪಂಜಾಬಿನ ಕೆಲ ಭಾಗಗಳಲ್ಲಿ ಕಾಯ್ದೆ ವಿರುದ್ದದ ಮಾತುಗಳು ಹೊರಬರಲು ಶುರುವಾಗಿತ್ತು. ನಂತರ 17-20 ಸೆಪ್ಟಂಬರ್ 2020ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಯ ಬಿಲ್ ಪಾಸಾಗುತ್ತದೆ. ಈ ಸಮಯದಲ್ಲಿ ಆಹಾರ ಸಂಸ್ಕರಣ ಸಚಿವ ಹರ್ಸಿಮತ್ ಬಾದಲ್ ರಾಜಿನಾಮೆ ಕೊಡುತ್ತಾರೆ ಮತ್ತು ಅಕಾಲಿ ದಳ ಎನ್.ಡಿ.ಏ ಒಕ್ಕೂಟದಿಂದ ಹೊರಬರುತ್ತದೆ. ಇದೇ ಸಮಯದಲ್ಲಿ ರಾಹುಲ್ ಗಾಂಧಿ ಹೋರದೇಶಕ್ಕೆ ಹೋದರು ಎಂಬುದು ನೆನಪಿಡಬೇಕಾದ ಸಂಗತಿ.
25 ಸೆಪ್ಟಂಬರ್ ಹೊತ್ತಿಗೆ ಕಾಯ್ದೆ ವಿರುದ್ಧದ ಪ್ರತಿಭಟನೆ ರಾಷ್ಟ್ರಮಟ್ಟದ ಬಂದಾಗಿ ಉಲ್ಬಣಗೊಳ್ಳುತ್ತದೆ. ಜನವರಿ 21ರ ತನಕ 11 ಬಾರಿ ಕೃಷಿ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ಮಾಡುವ ಪ್ರಯತ್ನ ಮಾಡಿತು. ಕೇಂದ್ರ ಸರ್ಕಾರ ಎ.ಪಿಎಂ.ಸಿ ಗಳನ್ನು ಮುಚ್ಚುವುದಿಲ್ಲ, ಎಂ.ಎಸ್.ಪಿ ಮತ್ತು ಕಾಯ್ದೆಯಲ್ಲೂ ಕೂಡ ಕೆಲವು ಮಾರ್ಪಾಡು ಮಾಡಲು ಮುಂದಾಯಿತು. ಆದರೆ, ಕೃಷಿ ಸಂಘಟನೆಗಳು ಯಾವ ಬದಲಾವಣೆಗಳನ್ನು ಒಪ್ಪಲಿಲ್ಲ. ಬದಲಾಗಿ ಕಾಯ್ದೆಯನ್ನು ಹಿಂಪಡೆಯುವ ಆಗ್ರಹವನ್ನು ಮಾತ್ರ ಮುಂದಿಟ್ಟರು. ಜನವರಿಯಲ್ಲಿ ಸುಪ್ರೀಂ ಕೋರ್ಟು ಸಮಿತಿಯೊಂದನ್ನು ರಚಿಸಿ ಕಾಯ್ದೆಯ ತಿದ್ದುಪಡಿಯ ಬಗ್ಗೆ ಚರ್ಚಿಸುವ ಪ್ರಸ್ತಾವವನ್ನೂ ರೈತ ಸಂಘಟನೆ ತಿರಸ್ಕರಿಸಿತು. ಕೇಂದ್ರ ಸರ್ಕಾರ 18 ತಿಂಗಳಗಳ ಕಾಲ ಕಾದ್ದೆಯನ್ನು ತಡೆಹಿಡಿದು ಮಾತುಕತೆಗೆ ಮಾಡುವ ಪ್ರಸ್ತಾವವನ್ನೂ ಸಹ ಸಂಘಟನೆ ತಿರಸ್ಕರಿಸಿತು.
26 ಜನವರಿ - ಗಣತಂತ್ರ ದಿವಸದಂದು ರೈತರು ಟ್ರಾಕ್ಟರ್ ರ್ಯಾಲಿ ಮಾಡುವುದಾಗಿ ಘೋಷಿಸಿದರು. ಅಂದು ದೆಹಲಿಯ ಕೆಂಪುಕೋಟೆಯನ್ನು ಹತ್ತಿ, ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿ, ರಾಷ್ಟ್ರಧ್ವಜಕ್ಕಿಂತಲೂ ಮೇಲು ಎಂಬಂತೆ ತಮ್ಮ ಸಂಘಟನೆಯ ಬಾವುಟವನ್ನು ಹಾರಿಸಿದರು. ಸರ್ಕಾರ ಮತ್ತು ಸುಪ್ರೀಂ ಕೋರ್ಟು ತಮ್ಮ ಮುಂದಿಟ್ಟ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ, ರಾಷ್ಟ್ರಕ್ಕೆ ಅವಮಾನ ಮಾಡುವಂತಹ, ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿ ತಮ್ಮ ಮೇಲಿನ ಗೌರವವನ್ನು ತಾವೆ ಕಳೆದುಕೊಂಡು, ಇವರೆಲ್ಲರೂ ರೈತರ? ಎಂಬ ಅನುಮಾನ ದಟ್ಟವಾಗುವಂತೆ ಮಾಡಿಕೊಂಡರು.
ಭಾರತದ ಒಳಗೆ ನಡೆದ ಘಟನೆಗಳು ಹೀಗಾದರೆ, ಜಾಗತಿಕ ಮಟ್ಟದಲ್ಲೂ ಕೆಲವು ಘಟನೆಗಳು ಭಾರತದ ವಿರುದ್ಧವಾಗಿದ್ದವು. ಜೂನ್ ತಿಂಗಳಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಕೊರೋನಾವನ್ನು 'ಚೀನಾ ವೈರಸ್' ಎಂದು ಕರೆದು, ಹಲವು ದೇಶಗಳಿಗೆ ಹುವಾಯ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡು, ಇತರರೊಂದಿಗೆ 5G ತಂತ್ರಜ್ಞಾನದ ಕುರಿತು ಕೆಲಸ ಮಾಡುವ ಕರೆಕೊಟ್ಟರು. ಇಷ್ಟೇ ಅಲ್ಲದೆ, ಹುವಾಯ್ ಮತ್ತು ZTE ಕಂಪನಿಗಳು ಭದ್ರತಾ ವಿಚಾರದಲ್ಲಿ ದೇಶಕ್ಕೆ ಮಾರಕ ಎಂದು ಸಹ ಹೇಳಿ ಇತರ ದೇಶಗಳಿಗೂ ಚೀನಿ ಕಂಪನಿ ವಿರುದ್ಧ ಕ್ರಮಕೈಗೊಳ್ಳಲು ಕರೆಕೊಡುತ್ತಾರೆ.
ಜೂನಿನಲ್ಲಿ ನಡೆದ ಗಲ್ವಾನ್ ಪ್ರಕರಣದ ವಿರುದ್ಧ ಕ್ರಮವಾಗಿ ಪಬ್ ಜಿ, ವೀ ಚಾಟ್ ಸೇರಿದಂತೆ 59 ಚೀನಿ ಆಪ್ಗಳನ್ನು ಬ್ಯಾನ್ ಮಾಡಿ ಚೀನಾದ ವಿರುದ್ಧ ಭಾರತ ಡಿಜಿಟಲ್ ಸ್ಟ್ರೈಕ್ ಮಾಡಿತು.
ಬ್ರಿಟನ್ ಕೂಡ ಚೀನಾದ ಕಂಪನಿಯೊಂದಿಗಿನ ಸಂಬಂಧ ತೊರೆದು 2027ರ ಹೊತ್ತಿಗೆ ಹುವಾಯ್ಗೆ ಸಂಬಂಧಿಸಿರುವ ಎಲ್ಲಾ ಬಿಡಿಭಾಗಗಳನ್ನು ತೆರುವು ಮಾಡುವುದಾಗಿ ಒಂದು ಹೆಜ್ಜೆ ಮುಂದೆ ಹೋಯಿತು.
ಇದೇ ಸಮಯಕ್ಕೆ ಸರಿಯಾಗಿ ಮುಖೇಶ್ ಅಂಬಾನಿ ಭಾರತದ್ದೆ ಆದ ಜಿಯೋ 5G ಬಗೆಗಿನ ಘೋಷಣೆ ಮಾಡುತ್ತಾರೆ. ಈ ಕ್ರಮ ಚೀನಾಗೆ ತಲೆಕೆಡಿಸುತ್ತದೆ.
ಈಗ ಚುಕ್ಕಿಗಳನೆಲ್ಲ ಜೋಡಿಸಿಕೊಳ್ಳಿ. ಕೃಷಿ ಕಾಯ್ದೆ ಘೋಷಣೆಯಾದ 2 ತಿಂಗಳವರೆಗೂ ಅಂದರೆ ಜೂನ್ ರಿಂದ ಆಗಸ್ಟಿನವರೆಗೆ ಯಾವ ಪ್ರತಿಭಟನೆ ಇರಲಿಲ್ಲ. ಆದರೆ, ಭಾರತ 5G ಕುರಿತು ಒಂದು ಬಲವಾದ ಹೆಜ್ಜೆ ಮುಂದ್ದಿಟ್ಟೊಡನೆ ಎಲ್ಲಾ ಘಟನೆಗಳು ಶುರುವಾದವು! ಕೃಷಿ ಸಂಘಟನೆಯೊಟ್ಟಿಗೆ ಪ್ರತಿಪಕ್ಷಗಳು, ಕಮ್ಯುನಿಸ್ಟರು ಜಿಯೋ ಮತ್ತು ರಿಲಿಯನ್ಸ್ ಉತ್ಪನ್ನಗಳ ವಿರುದ್ಧ ಇದ್ದಕ್ಕಿದ್ದ ಹಾಗೆ ದನಿ ಎತ್ತಲು ಶುರು ಮಾಡುತ್ತಾರೆ. ಕೃಷಿ ಕಾಯ್ದೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅಂಬಾನಿ ಹೇಳಿದರೂ ಜಿಯೋದ 1500 ಟವರ್ಗಳನ್ನು ಪ್ರತಿಭಟನಾಕಾರರು ಹಾಳು ಮಾಡುತ್ತಾರೆ.
ಇದನ್ನೇ ಭಾರತದ ನೆಮ್ಮದಿ ಕೆಡಿಸುವ ಅವಕಾಶವನ್ನಾಗಿ ಚೀನಾ ಉಪಯೋಗಿಸಿಕೊಳ್ಳುತ್ತದೆ. ಪ್ರತಿಭಟನೆಕಾರರಿಗೆ ಖಾಲಿಸ್ತಾನದ ಮೂಲಕ ಹಣ ಕೊಟ್ಟು, ಬ್ರಿಟನ್ ಮತ್ತು ಕೆನಡಾ ಮೂಲಕ ಭಾರತದ ಕೃಷಿಕಾಯ್ದೆ ವಿರುದ್ಧ ದನಿ ಎತ್ತುವಂತೆ ನೋಡಿಕೊಳ್ಳುತ್ತದೆ. ಕಳೆದ ವಾರ ಅಮೇರಿಕಾದ ಪಾಪ್ ಗಾಯಕಿ ರಿಹಾನ, ಪೋರ್ನ್ಸ್ಟಾರ್ ಮಿಯಾ ಖಲೀಫ಼ಾ ಭಾರತದ ಪ್ರತಿಭಟನೆ ಪರವಾಗಿ ಟ್ವೀಟ್ ಮಾಡಿ ಭಾರಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಗ್ರೇಟಾ ಥುನ್ಬರ್ಗ್ ಎಂಬ ಸ್ವೀಡನ್ನಿನ ಹೆಣ್ಣು ಮಗಳು ಭಾರತದಲ್ಲಿ ನಡೆಯಬೇಕಾಗಿರುವ ಪ್ರತಿಭಟನಾ ಕ್ರಮಗಳ ಕಡತಗಳನ್ನು ಅಚಾನಕ್ಕಾಗಿ ಅನಾವರಣಗೊಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾಳೆ. ಆಸ್ಟ್ರೇಲಿಯಾದಲ್ಲಿರುವ ಚೀನಾದ ಕೆಲವು ಸಂಸ್ಥೆಗಳು ಅದಾನಿ ವಿರುದ್ಧ ಪ್ರತಿಭಟನೆ ಮತ್ತು ದನಿ ಎತ್ತುವಂತೆ ನೋಡಿಕೊಂಡಿತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ನಡುವೆ ಈ ರೀತಿ 'ಸ್ಟಾಪ್ ಅದಾನಿ' ಎಂಬ ಫ಼ಲಕ ಹಿಡಿದುಕೊಂಡು ಕ್ರೀಡಾಂಗಣದಲ್ಲೂ ಒಡಾಡಿದ್ದನ್ನು ಗಮನಿಸಬಹುದು!










No comments:
Post a Comment