May 15, 2021

ಪ್ರೇಮಾಂತರ್ಧ್ವನಿ


ಕಾರ್ಮುಗಿಲ ಮಡಿಲಲ್ಲಿ ಭರವಸೆಯ ಮಿಂಚು
ಆ ಮಿಂಚಲ್ಲಿ ಹುದುಗಿತ್ತು ವಿಧಿಯಾಟದ ಸಂಚು
ಕಣ್ಣಲ್ಲಿ ಕಂಡೆನು ಹೂ ಮನಸಿನ ಒಲವು
ನಾನಿರಲಿಲ್ಲ ಅವಳಾ... ಮನದಲ್ಲಿ ಕಲೆತು |

ಬಾಳೆಂಬ ಪಯಣದಲಿ ಒಲವೆಂಬುದು ಮಾಯೆ
ಉಳಿದಿತ್ತು ನನ್ನಲ್ಲಿ ನೆನಪುಗಳ ಛಾಯೆ ||

ಮೌನದಲಿ ಕೇಳುವುದು ಅವಳ ಮಾತಿನ ಲಹರಿ 
ಸ್ವಪ್ನದಲೂ ಪೂಜಿಸುವೆ ನೂರೆಂಟು ಬಾರಿ
ಚೂರಾಯಿತು ಕನಸು... ಬರಿದಾಯಿತು ಮನಸು
ಅವಳಿಲ್ಲದ ಬದುಕಲಿ... ಕಾಣಲೆಂತು ಸೊಗಸು |

ವೈಣಿಕನೇ ಇಲ್ಲದ ವೀಣೆಯಾಯ್ತು ಬದುಕು
ನೋವನ್ನು ಮರೆಮಾಚಿತು ನಗುವಿನ ಮುಸುಕು ||

ಒಂದೊಂದು ಮಾತಿನಲೂ ಅವಳದೇ ನೆನಪು
ಮನದಾಳದ ತೋಟದಲಿ ನೆನಪುಗಳ ಕಂಪು
ಕನಸಲ್ಲೂ ಅವಳೇ... ನನಸಲ್ಲೂ ಅವಳೇ
ಹೃದಯದ ಪ್ರತಿ ಬಡಿತದ ಧ್ವನಿಯಲ್ಲೂ ಅವಳೇ |

ಪ್ರೀತಿಸಿದೆ ಪ್ರೇಮಿಸಿದೆ ಮನಸಿನ ದನಿ ಕೇಳಿ
ಸಾವನ್ನೂ ಬಿಗಿದಪ್ಪುವೆ ಅವಳದೆ ಹೆಸರೇಳಿ ||
 

Audio Clip (click the link below)

1.  Male_Version Kashyap Karthik
2. Female_Version - 1 - Prajwala Chandrashekar
3. Female_Version - 2 - Shobha Padmanabh

Music Courtesy - 'ರಾಜು ಕನ್ನಡ Medium' ಚಿತ್ರದ "ಕೊಡೆಯೊಂದರ ಆಡಿಯಲ್ಲಿ" ಹಾಡು.

5 comments: