ಕರೋನಾ ಬಂದ ನಂತರ 2020ರ ತನಕ ತನ್ನ ಮನಸೋ ಇಚ್ಛೆ ಆಟವಾಡುತ್ತಿದ್ದ ಚೀನಾ ಈ ವರ್ಷ ಜಗತ್ತಿನೆದುರು ತಣ್ಣಗಾದಂತೆ ಇದೆ. ಈ ವರ್ಷ ನಡೆದ ವಿಶ್ವಸಂಸ್ಥೆಯ ಅಧಿವೇಶನದಲ್ಲಾಗಲಿ, ಜಿ-20 ಸಮಾವೇಶದಲ್ಲಾಗಲಿ, ಕಳೆದ ವಾರ ನಡೆದ ಗ್ಲಾಸ್ಗೋ ಹವಾಮಾನ ಸಮ್ಮೇಳನದಲ್ಲಾಗಲಿ ಚೀನಾದ ಹಾಜರಾತಿ ಇರಲಿಲ್ಲ! ಚೀನಾ ಒಂದು ಕಡೆ ತೈವಾನ್ ಮೇಲೆ ದಾಳಿ ಮಾಡುವ ಪ್ರಯತ್ನದಲ್ಲಿದೆ, ಮತ್ತೊಂದು ಕಡೆ ಪಾಕಿಸ್ತಾನಕ್ಕೆ ಅತ್ಯಾಧುನಿಕವಾದ, ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಯುದ್ಧನೌಕೆಯೊಂದನ್ನು ಕೊಟ್ಟಿದೆ, ಮತ್ತು ಇನ್ನೂ ಎರಡು ನೌಕೆಗಳನ್ನು ಕೊಡುವ ಯೋಜನೆ ಇದೆ. ಇದಲ್ಲದೆ ಚೀನಾ ಪಾಕಿಸ್ತಾನಕ್ಕೆ ದೊಡ್ಡಮೊತ್ತದ ಸಾಲವನ್ನು ಕೊಟ್ಟಿದೆ. ನೆನಪಿಡಿ, ಯೂರೋಪು ಸಾಲದ ಮೇಲೆ ಹಾಕುವ ಬಡ್ಡಿ ಶೇ1.1 ಆದರೆ, ಚೀನಾ ಹಾಕಿರುವ ಬಡ್ಡಿ ಶೇ3.5 ರಷ್ಟು! ಅಮೆರಿಕಾವೇನಾದರೂ ವಿರಮಿಸಿದರೆ ಜಗತ್ತನ್ನು ಆಳುತ್ತೇವೆ ಎನ್ನುತ್ತಿದ್ದ ಚೀನಾ ಈಗ ಜಾಗತಿಕ ಮಟ್ಟದ ಸಭೆ ಮತ್ತು ವ್ಯವಹಾರಗಳಿಂದ ದೂರ ಉಳಿಯುತ್ತಿದೆ ಎಂಬುದು ಅಚ್ಚರಿಯ ಸಂಗತಿ. ಜಾಗತಿಕ ಸಭೆಗಳಿಗೆ ಗೈರಾಗುತ್ತಿರುವ ಚೀನಾ ಮಾಡುತ್ತಿರುವುದಾದರು ಏನು? ಹಾಗೆಂದು ಆಂತರಿಕವಾಗಿ ಚೀನಾದಲ್ಲಿ ಎಲ್ಲವೂ ಸರಿ ಇದೆ ಎನ್ನಬಹುದ ಎಂಬುದು ಪ್ರಶ್ನೆ.
![]() |
| china delivers largest, most advanced warship to Pakistan |
ಈ ವರ್ಷದ ಪ್ರಾರಂಭದಲ್ಲಿ ದೃಢತೆ ಮತ್ತು ಬೆಳೆವಣಿಗೆ ತೋರಿಸುತ್ತಿದ್ದ ಚೀನಾದ ಆರ್ಥಿಕತೆ ಮೂರನೇ ತ್ರೈಮಾಸಿಕದಲ್ಲಿ ಅತ್ಯಂತ ಕಡೆಮೆ ಬೆಳವಣಿಗೆಯಾಗಿದೆ. ಇದಕ್ಕೆ ಒಂದು ಕಡೆ ಪ್ರಕೃತಿ ಕಾರಣವಾದರೆ ಮತ್ತೊಂದು ಕಡೆ ಇದು ಚೀನಾ ಸರ್ಕಾರದ ಸ್ವಯಂಕೃತಾಪರಾಧ ಕೂಡ. ಸೆಪ್ಟಂಬರ್ ಅಲ್ಲಿ ಚೀನಾದ ಪೂರ್ವಭಾಗದಲ್ಲಿ ಭೀಕರವಾದ ಮಳೆ, ಪ್ರವಾಹ ಮತ್ತು ಭೂಕುಸಿತ ಉಂಟಾಯಿತು. ಬೇಸಿಗೆ ಕಾಲದಲ್ಲೂ ಸಹ ಹಿಮ ಬಿದ್ದಿದೆ! ಇದನ್ನು ಚೀನಾ ನಿರೀಕ್ಷಿಸಿರಲಿಲ್ಲ. ಚೀನಾ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಹೆಚ್ಚಾಗಿ ಅವಲಂಬಿಸಿದೆ. ತಾನು ಕಲ್ಲಿದ್ದಲ ಬೃಹತ್ ಉತ್ಪಾದಕನಾಗಿದ್ದರೂ ಸಹ ಪ್ರಮುಖವಾಗಿ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಕ್ವಾಡ್ ಮೇಲಿನ ಕೋಪದಿಂದಲೋ ಅಥವಾ ಸ್ಕಾಟ್ ಮೋರಿಸನ್ ಕರೋನಾ ವಿಚಾರವಾಗಿ ಚೀನಾ ವಿರುದ್ಧ ಮಾತಾಡುತ್ತಿದ್ದ ಎಂಬ ಕಾರಣಕ್ಕೋ ಚೀನಾ ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತು. ಇದರಿಂದ ದೇಶದಲ್ಲಿ ವಿದ್ಯುತ್ ಉತ್ಪಾದನೆ ಇಳಿಯಿತು. ಇದರ ಹೊಡೆತ ಸಾಮಾನ್ಯ ಜನತೆ ಮೇಲೆ ಬಿತ್ತು. ಇದಕ್ಕಾಗಿ ಬೇರೆ ದೇಶದಿಂದ ಕಲ್ಲಿದ್ದಲು ತರಿಸಿದರಾದರೂ ಅವುಗಳ ಗುಣಮಟ್ಟ ತಕ್ಕದ್ದಾಗಿರಲಿಲ್ಲ. ಇದೇ ಸಮಯಕ್ಕೆ ಚಳಿಗಾಲವೂ ಬಂತು. ಸರ್ಕಾರ ಡೀಸೆಲ್ ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯಕ್ಕೆ ಮುಂದಾಯಿತು. ತನ್ನ ಮಿಲಿಟರಿ ಉತ್ಪಾದನಾ ಘಟಕಗಳನ್ನು ಮಧ್ಯಚೀನಾ ಪ್ರಾಂತ್ಯಕ್ಕೆ ವರ್ಗಾಯಿಸಿತು. ಆಗಸ್ಟಿನಲ್ಲಿ ಕೆಲವು ಹೈಪರ್ಸಾನಿಕ್ ಮಿಸೈಲ್ಗಳನ್ನು ಸಹ ಅದು ಪರೀಕ್ಷಿಸಿದೆ. ಇದಲ್ಲದೇ ಉತ್ತರ ಚೀನಾ ಭಾಗದಲ್ಲಿ 300ಕ್ಕೂ ಹೆಚ್ಚು ಮಿಸೈಲ್ಗಳನ್ನು ಸಹ ತಯಾರಿಸಿದೆ. ಈ ರೀತಿ ಬಹುಪಾಲು ವಿದ್ಯುತ್ತನ್ನು ಮಿಲಿಟರಿ ಉದ್ದೇಶಗಳಿಗೆ ಬಳೆಸಲಾಯಿತು. ಈ ಕಾರಣದಿಂದಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಡೀಸೆಲ್ಲಿನ ಬೆಲೆ ಹೆಚ್ಚಾದ ಕಾರಣ ಟ್ರಕ್ಗಳಿಗೆ ಡೀಸೆಲ್ ಸಿಗಲಿಲ್ಲ ಹಾಗಾಗಿ, ಅವುಗಳ ಸಂಚಾರ ನಿಂತು ಆಹಾರ ಪೂರೈಕೆಯ ಸಮಸ್ಯೆ ಎದುರಾಯಿತು. ಇದನ್ನು ಸುಧಾರಿಸಲು ತನ್ನ ಆಹಾರ ಸುಧಾರಣ ಕ್ರಮವನ್ನು ಚೀನಾ ಬದಲಾಯಿಸಿತು. ಅತೀ ಹೆಚ್ಚು ಆಹಾರವನ್ನು ಆರ್ಡರ್ ಮಾಡುವುದು ಅಥವಾ ಅತೀಯಾಗಿ ತಿನ್ನುವ ವೀಡಿಯೊಗಳನ್ನು ಹಂಚಿಕೊಂಡರೆ 1500 ಡಾಲರ್ಗಳಷ್ಟು ದಂಡ ಹಾಕುವ ನಿಯಮಗಳನ್ನು ಸಹ ತಂದರು! ಇಷ್ಟೆಲ್ಲಾ ಇದ್ದರೂ ಸಹ ಚೀನಾ ತೈವಾನ್ ವಿರುದ್ಧ ದಾಳಿ ಮಾಡಲು ತಯಾರಿ ನಡೆಸಿಯೇ ಇದೆ. ಆದರೆ, ತೈವಾನಿನ ಭದ್ರತಾ ಅಧಿಕಾರಿಯ ಮಾತಿನಂತೆ ಇನ್ನು 4 ವರ್ಷ ಚೀನಾ ತೈವಾನಿನ ಮೇಲೆ ದಾಳಿ ಮಾಡುವುದಿಲ್ಲ ಎಂಬುದು ತಕ್ಕ ಮಟ್ಟಿಗೆ ಸಮಾಧಾನಕರವಾದ ವಿಚಾರ.
ಚೀನಾದ ಈಗಿನ ಸೈನಿಕರಿಗೆ ಯುದ್ಧದ ಅನುಭವ ಕಮ್ಮಿ. ಚೀನಾ ಕೊನೆಯ ಬಾರಿ ಯುದ್ಧ ಮಾಡಿದ್ದು 1979ರಲ್ಲಿ ವಿಯಟ್ನಾಂ ವಿರುದ್ಧ. ಅದನ್ನು ಸಹ ಚೀನಾ ಸೋತಿತ್ತು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಭಾರತದ ವಿರುದ್ಧ ಕೂಡ ಅದಕ್ಕೆ ಸೋಲಾಯಿತು. ಮೊದಲು ಯಾರು ಸತ್ತಿಲ್ಲ ಎಂದ ಚೀನಾ ಎಂಟು ತಿಂಗಳ ನಂತರ ನೂರಕ್ಕೂ ಹೆಚ್ಚು ಸೈನಿಕರು ತೀರಿಕೊಂಡಿದ್ದಾರೆ ಎಂದಿತು. ಬೆಟ್ಟದ ಕಣಿವೆಗಳಲ್ಲಿ ಯುದ್ಧ ಮಾಡುವ ಸಾಮರ್ಥ್ಯ ಚೀನಾದ ಇಂದಿನ ಸೈನಿಕರಿಗೆ ಇಲ್ಲ. ಸೈನಿಕ ದಳದ ಈ ದೌರ್ಬಲ್ಯದ ಕಾರಣ ತನ್ನ ವಾಯುಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹಸರಿಸಿತು. ಮಧ್ಯ ಮತ್ತು ಪಶ್ಚಿಮ ಟಿಬೆಟ್ ಭಾಗದಲ್ಲಿ 10 ಏರ್ಸ್ಟ್ರಿಪ್ಗಳನ್ನು ನಿರ್ಮಿಸಿದೆ ಮತ್ತು 20 ಸಾವಿರ ಟಿಬೆಟ್ಟಿಯರನ್ನಿಗೆ ಸೈನಿಕ ತರಬೇತಿಯನ್ನು ಕೊಟ್ಟು ಸೈನ್ಯಕ್ಕೆ ಸೇರಿಸಿಕೊಂಡಿದೆ. ಒಂದು ಮೂಲದ ಪ್ರಕಾರ ಚೀನಾಕ್ಕಿಂತ ಪಾಕಿಸ್ತಾನಕ್ಕೆ ಯುದ್ಧದ ಅನುಭವ ಹೆಚ್ಚಿರುವ ಕಾರಣ ಚೀನಾದ ಸೈನಿಕದಳಗಳನ್ನು ಪಾಕಿಸ್ತಾನದ ಕರ್ನಲ್ಗಳು ಮುನ್ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಅಲ್ಲಿ 300 ಸೈನಿಕರು ಭಾರತದ ಗಡಿಯ ಹತ್ತಿರ ಗಸ್ತು ಹೊಡೆದ್ದಿದ್ದಾರೆ. ಅಕ್ಟೋಬರಿನಲ್ಲಿ ಅರುಣಾಚಲದಲ್ಲಿ 100 ಸೈನಿಕರು ಈ ರೀತಿ ಗಸ್ತು ಹೊಡೆದಿದ್ದಾರೆ. ಅಂದರೆ, ಗಡಿ ಪ್ರದೇಶದಲ್ಲಿ ಚೀನಾ ಭಾರತದ ವಿರುದ್ಧ ಮತ್ತು ಅತ್ತ ತೈವಾನ್ ಜೊತೆ ಯುದ್ಧದ ತಯಾರಿಯಲ್ಲಿರುವಂತಿದೆ. ಏನೇ ಆದರೂ ಭಾರತ ಸಿದ್ಧವಾಗಿದೆ ಎಂಬುದು ಸಮಾಧಾನಕರವಾದ ಸಂಗತಿ. ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ 'ನಮಗೆ ಪಾಕಿಸ್ತಾನಕ್ಕಿಂತಲೂ ಚೀನಾ ಪ್ರಮುಖ ಶತ್ರು ಮತ್ತು ಭದ್ರತಾ ತೊಡಕಾಗಿದೆ' ಎಂದು ಚೀನಾದ ನಡೆಗಳನ್ನು ಗಮನಿಸುತ್ತಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಇನ್ನು ಸಾಗರದ ವಿಚಾರಕ್ಕೆ ಬಂದರೆ ಭಾರತ ಇಂಡಿಯನ್ ಓಷನ್ ಭಾಗದಲ್ಲಿ ಬಹಳಷ್ಟು ಬಲವಾಗಿದೆ ಮತ್ತು ಚೀನಾವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಸೆಪ್ಟಂಬರ್ ನಲ್ಲಿ ಥೈಲ್ಯಾಂಡ್ ಕ್ರಾ ಕಾಲುವೆ ಯೋಜನೆಯನ್ನು ರದ್ದುಗೊಳಿಸಿರುವುದು ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದನ್ನು ಗಮನಿಸಿ ಚೀನಾ ಭಾರತವನ್ನು ತಡೆಯಲು ಪಾಕಿಸ್ತಾನಕ್ಕೆ ಸಹಕಾರ ಕೊಡುತ್ತಾ ಮತ್ತೆ ಹಳೆ ಚಾಳಿಯನ್ನು ಶುರುಮಾಡಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನಕ್ಕೆ ಯುದ್ಧನೌಕೆಯೊಂದನ್ನು ಕೊಟ್ಟಿದ್ದು. 'ನಾಯಿ ಹಸಿದಿತ್ತು, ರೊಟ್ಟಿ ಹಲಸಿತ್ತು' ಎನ್ನುವಂತಿದೆ ಚೀನಾ-ಪಾಕಿಸ್ತಾನದ ಸಂಬಂಧ.
ಚೀನಾ ಆಂತರಿಕವಾಗಿ ಕುಸಿಯುತ್ತಿದೆ ಎಂಬುದಕ್ಕೆ ಇನ್ನೂ ಒಂದು ನಿದರ್ಶನವಿದೆ. ಅಕ್ಟೋಬರ್ 21 ರಿಂದ ಒಂದು ವಾರದಲ್ಲಿ ಹತ್ತು ಕಡೆ ಬಾಂಬ್ ಸ್ಫೋಟಗಳಾಗಿವೆ. ರಸ್ತೆಯಲ್ಲಿನ ಟ್ರಕ್ಗಳಲ್ಲಿ, ರೆಸ್ಟುರಾಗಳಲ್ಲಿ, ಎರಡು ಪ್ರಮುಖ ವಿಶ್ವವಿದ್ಯಾಲಯದ ಲ್ಯಾಬ್ಗಳಲ್ಲಿ ಸ್ಫೋಟಗಳಾಗಿವೆ. ಈ ಬಾಂಬ್ ಸ್ಫೋಟಗಳಿಗೆ ಕಾರಣ ತಿಳಿದುಬಂದಿಲ್ಲ. ಜನರ ಹಿತಾಸಕ್ತಿಯನ್ನು ಕಡೆಗಣಿಸಿ ತನ್ನ ಪ್ರಭುತ್ವವನ್ನು ಉಳಿಸಿಕೊಂಡು ಇತರರ ಮೇಲೆ ಯುದ್ಧ ಮಾಡುವ ಮನಸ್ಥಿತಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನದ್ದು. ಬದುಕಿರುವವರೆಗೂ ತಾನೇ ಅಧ್ಯಕ್ಷನಾಗಿರಬೇಕು ಎಂಬುದು ಆತನ ಉದ್ದೇಶ. ಅಲ್ಲಿನ ಜನರು ಆತನ ವಿರುದ್ಧ ತಿರುಗಿಬಿದ್ದಿದ್ದಾರ ಎಂಬ ಪ್ರಶ್ನೆ ಮೂಡುತ್ತಿದೆ. ಸೆಪ್ಟೆಂಬರ್ ನಲ್ಲಿ ಕ್ಸಿ ಹತ್ಯೆ ಮಾಡುವ ಸಂಚು ನಡೆದಿತ್ತು ಎಂಬ ಸುದ್ಧಿ ಸಹ ಇದೆ! ಇದರ ಮುಂದುವರೆದ ಭಾಗವಾಗಿ ಅಲ್ಲಿನ ಪಶ್ಚಿಮ ಕಮಾಂಡರನ್ನು ಹತ್ಯೆ ಮಾಡಿಸಲಾಗಿದೆ.
ಇದೆಲ್ಲವನ್ನು ಗಮನಿಸಿದರೆ ಚೀನಾದೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಗೋಚರವಾಗುತ್ತಿದೆ. ಆದರೂ ಭಾರತ ಮತ್ತು ತೈವಾನ್ ವಿರುದ್ಧ ಅದು ಯುದ್ಧ ತಯಾರಿ ಮಾಡಿಕೊಳ್ಳುತ್ತಿದೆ. ಜಗತ್ತಿಗೆ ಕರೋನಾವನ್ನು ರಫ್ತು ಮಾಡಿ ಸಾವು, ನಷ್ಟಗಳಿಗೆ ಕಾರಣವಾದ ಚೀನಾ ಈಗ ಒಳಗಿಂದಲೇ ಒಡೆಯುತ್ತಿದೆ. ಒಬ್ಬರಿಗೆ ಕೇಡು ಬಗೆದರೆ ನಮಗೆ ಕೇಡಾಗುತ್ತದೆ ಎಂಬುದಕ್ಕೆ ಚೀನಾ ಇತ್ತೀಚಿನ ನಿದರ್ಶನ.
![]() |
| 10 bomb blasts across china in a week of October month |
- china Delivers New Warship to Pakistan
- Now, it is Illegal to Order Too Much Food in china
- Explosion at Restaurant in NE china
- High Intensity Blasts Rock china before CCP's 6th Plenary
- Big Blow to china as Thailand Scraps KRA Canal Project
- chinese President xi jinping Escaped an Assassination?
- china Power Cuts: What is Causing Country's Blackouts?


Sir, there is a saying "What you sow so shall you reap" which best suits China's current situation. India has to get prepared for war on 2 1/2 fronts as our Army chief has said earlier, 1 Pakistan, 2 China and 1/2 China's Dogs (sleeper cell stooges - commies/LeLis/Jihadis) who are staying/eating/enjoying comforts in India but working for China/Pakistan and these traitors are getting paid for this by China.If all nationalist join hands together & get ready to fight for our nation, nobody can beat or stop us, not even China. Together we win, divided we fail.��
ReplyDelete