ಯುದ್ಧವೆಂಬುದು ರಣಾಂಗಣದಲ್ಲಿ ಶಸ್ತ್ರಾಸ್ತಗಳೊಂದಿಗೆ ಮಾಡುವ ಕಾಲ ಈಗ ದೂರವಾಗಿದೆ. ವಿಜ್ಞಾನ ಮುಂದುವರೆದಂತೆಲ್ಲಾ ಯುದ್ಧದ ಸ್ವರೂಪವೂ ಬದಲಾಗಿದೆ. ಸೈನಿಕರು ಮುಖಾಮುಖಿಯಾಗಿ ಪರಸ್ಪರ ಆಯುಧಗಳಿಂದ ಸೆಣಸಾಡುತ್ತಿದ್ದ ಕಾಲವೊಂದಿತ್ತು. ನಂತರ ವಿವಿಧ ಬಗೆಯ ತುಪಾಕಿಗಳು, ಬಂದೂಕುಗಳು ಉಪಯೋಗಕ್ಕೆ ಬಂದವು. ವಿಶ್ವಯುದ್ಧದ ಶತಮಾನದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್ಗಳ ಬಳಕೆ ಶುರುವಾಯಿತು. ಪ್ರತ್ಯಕ್ಷ ಯುದ್ಧಕ್ಕೆ ಮುನ್ನ ಶತ್ರು ರಾಷ್ಟ್ರದ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವುದು ಯುದ್ಧದ ಒಂದು ತಂತ್ರವೇ. ಇದು ಈ ಕಾಲದ ಯುದ್ಧ ತಂತ್ರ. ಶತ್ರುರಾಷ್ಟ್ರಗಳು ತಮ್ಮ ಸೈನಿಕರ ಮೂಲಕ ನಮ್ಮ ಗಡಿಯಲ್ಲೋ ಅಥವಾ ಗಡಿಯನ್ನು ದಾಟಿ ನಮ್ಮನ್ನು ಎದುರಿಸುವುದಿಲ್ಲ ಬದಲಾಗಿ, ನಮ್ಮ ದೇಶದ ಕೆಲವು ಜನರನ್ನು ನಮ್ಮ ವಿರುದ್ಧವೇ ಆಯುಧಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಮಾತು ಕೇಳುವ ಈ ಗುಂಪು ನಮ್ಮ ನಡುವೆ ಅಶಾಂತಿ, ಅವಿಶ್ವಾಸ, ಅಂತಃಕಲಹಗಳನ್ನು ಸೃಷ್ಟಿಸಿ ದೇಶವನ್ನು ಬಲಹೀನ ಮಾಡುವುದು. ಭಾರತದಲ್ಲಿರುವ ಕಮ್ಯೂನಿಸ್ಟರು, ಮವೋವಾದಿಗಳು ಮಾಡುವ ಕೆಲಸವನ್ನು ಗಮನಿಸಿ. ಕೇಂದ್ರದಲ್ಲಿ ಸ್ಪಷ್ಟ ಬಹುಮತವಿರುವ ಸರ್ಕಾರವಿದ್ದರೂ ಕೃಷಿಕಾಯ್ದೆಯನ್ನು ಹಿಂಪಡೆಯಬೇಕಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದದ್ದು ಪ್ರತ್ಯಕ್ಷ ಕದನವಾದರೆ, ತನ್ನ ಮೇಲೆ ಸೈಬರ್ ಅಟ್ಯಾಕ್ ಆಗಿದೆ ಎಂದು ಹೇಳಿಕೊಂಡ ಚೀನಾ ಮಾತು ಸತ್ಯವೇ ಆದರೆ ಅದು ಪರೋಕ್ಷವಾಗಿ ನಡೆಯುವ ಕದನ.
ಕಳೆದ ವರ್ಷ ಸಂಸತ್ತಿನಲ್ಲಿ ಕೃಷಿಕಾಯ್ದೆ ಬಿಲ್ ಪಾಸಾಯಿತು. ಅಧಿವೇಶನದ ಮುನ್ನ ಕೋವಿಡ್ ಪರಿಹಾರಾರ್ಥ 20 ಲಕ್ಷ ಕೋಟಿ ಘೋಷಿಸಿದಾಗಲೇ ಕೃಷಿ ಕಾಯ್ದೆಯ ಬಗ್ಗೆ ಪ್ರಧಾನಿ ಹೇಳಿದ್ದರು. ನೆನಪಿಡಿ, ಕಿಸಾನ್ ಯೂನಿಯನ್ ನಾಯಕ ರಾಕೇಶ್ ತಿಕಾಯತ್ ಈ ಕಾಯ್ದೆಯನ್ನು ಕೂಡ ಸ್ವಾಗತಿಸಿದ್ದ. ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ಶುರುವಾದ ನಂತರ ಮಾತು ಕಥೆಗಾಗಲಿ, ಕಾಯ್ದೆಯಲ್ಲಿನ ತಿದ್ದುಪಡಿಗಾಗಿ ಸುಪ್ರೀಂ ಕೋರ್ಟ್ ಸಮಿತಿ ರಚಿಸುವ ಪ್ರಸ್ತಾವವನ್ನು ತಿರಸ್ಕರಿಸಿದರು. ಜನವರಿ 26 ರಂದು ಇಡೀ ದೇಶವೇ ತಲೆತಗ್ಗಿಸುವಂತಹ ಪ್ರತಿಭಟನೆ ಮಾಡಿದರು. ಇದಕ್ಕೆ ಕಾಂಗ್ರೇಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂಲ್ಕಿಟ್ ಮೂಲಕ ಬೆಂಬಲ ವ್ಯಕ್ತವಾಯಿತು. ಕಾಯ್ದೆಯ ಬಿಲ್ ಪಾಸಾದ ಒಂದು ವರ್ಷವಾದರೂ ಪ್ರತಿಭಟನೆ ನಿಲ್ಲಲಿಲ್ಲ. ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಮುನ್ನುಡಿಯಂತಿದ್ದ ಈ ಪ್ರತಿಭಟನೆಯನ್ನು ನಿಲ್ಲಿಸಲು ಪ್ರಧಾನಿ ಮೋದಿ ಈ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದರು. ಅವರ ಭಾಷಣದಲ್ಲಿ 'ರೈತರಿಗಾಗಿ ಕಾಯ್ದೆಯನ್ನು ತಂದೆ. ದೇಶಕ್ಕಾಗಿ ಈಗ ಹಿಂಪಡೆಯುತ್ತಿದ್ದೇನೆ. ದೇಶದ ಜನರು ನನ್ನನ್ನು ಕ್ಷಮಿಸಬೇಕು' ಎಂದರು. ದೇಶಕ್ಕಾಗಿ ಕಾಯ್ದೆಯನ್ನು ಹಿಂಪಡೆಯುತ್ತಿದ್ದೇನೆ ಎಂಬುದಷ್ಟನ್ನೇ ಮುಂದಿಟ್ಟು ಮೋದಿಯನ್ನು ವಿರೋಧ ಮಾಡಲು ಕಮ್ಯೂನಿಸ್ಟರು ಮರೆಯಲಿಲ್ಲ.
ನಮ್ಮ ನಡುವಿನ ರಾಜಕೀಯದ ನಾಯಕರು ಸಹ ಈ ರೀತಿಯ ಸ್ಥಿತಿಗೆ ಕಾರಣವಾಗಿದ್ದಾರೆ. ಕೃಷಿಕಾಯ್ದೆ ಜಾರಿಗೆ ತಂದ ದಿನದಿಂದ ಈವರೆಗೂ ಭಾಜಾಪದ ಯಾವ ನಾಯಕರೂ ಜನರಿಗೆ ಮತ್ತು ರೈತರಿಗೆ ಈ ಕಾಯ್ದೆಯ ಕುರಿತು ತಿಳಿಸಿಕೊಡಲಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಕಾಯ್ದೆಯ ಬಗೆಗೆ ಕರಪತ್ರಗಳಾಗಲಿ, ಪುಸ್ತಕಗಳಾಗಲಿ ಹೊರತರಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹೊರಬರಲಿಲ್ಲ. ಟೀವಿ ಡಿಬೇಟ್ಗಳನ್ನು ಗಮನಿಸಿದರೆ ಸ್ಥಳಿಯ ನಾಯಕರಿಗೆ ಕಾಯ್ದೆ ಬಗೆಗಿನ ಸ್ಪಷ್ಟತೆ ಇದ್ದದ್ದೇ ಅನುಮಾನ. ಇದಕ್ಕೆ ತದ್ವಿರುದ್ಧ ವಿರೋಧ ಪಕ್ಷ ಮತ್ತು ಕಮ್ಯೂನಿಸ್ಟರ ನಡೆ. ಮೊದಲಿಂದಲೂ ಕಾಯ್ದೆ ಅರ್ಥವಾಗದಿದ್ದರೂ ಅದರ ವಿರುದ್ಧ ಮಾತುಗಳು, ಲೇಖನಗಳು, ಜಾಲತಾಣಗಳಲ್ಲಿನ ಪೋಸ್ಟ್ಗಳು ಸದಾ ಇರುವಂತೆ ನೋಡಿಕೊಂಡರು. ಕೇಂದ್ರ ಸರ್ಕಾರ ನವೆಂಬರ್ 29 ರಂದು ಅಧಿಕೃತವಾಗಿ ಕಾಯ್ದೆಯನ್ನು ಹಿಂಪಡೆಯಿತು. ಇಷ್ಟಾದರೂ ಖಾಲಿಸ್ತಾನಿ ಪ್ರೇರೇಪಿತ ಸೋಕಾಲ್ಡ್ ನಾಯಕರು ಪ್ರತಿಭಟನೆ ಮುಂದುವರೆಸುವ ಸೂಚನೆ ಕೊಟ್ಟಿದ್ದಾರೆ. ಡಿಬೇಟ್ ಮಾಡದೇ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಏನಾದರೂ ಸರಿ ಮೋದಿಯನ್ನು ವಿರೋಧ ಮಾಡಬೇಕು, ಅರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಷ್ಟೇ ಇವರ ಉದ್ದೇಶ.
ಗಡಿಭಾಗದಲ್ಲಿ ನಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದರೂ ಭಾರತದ ಪತ್ರಿಕೆಗಳಲ್ಲಿ ತಮ್ಮ ಪರವಾಗಿನ ಸಕಾರಾತ್ಮಕ ಸುದ್ಧಿಯನ್ನು ಪ್ರಕಟ ಮಾಡಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ಭಾರತದ ಪತ್ರಿಕೋದ್ಯಮದಲ್ಲಿ ಮತ್ತು ವಾರ್ತಾವಾಹಿನಿಗಳ ಮೇಲೆ ನೀತಿಸಂಹಿತೆ ಮತ್ತು ಸ್ವಯಂ-ನಿಯಂತ್ರಣ ಕಾರ್ಯವಿಧಾನಗಳ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತಿದೆ. 'ದಿ ಹಿಂದೂ' ಪತ್ರಿಕೆ ಕಳೆದ ವರ್ಷ ಪುಟಗಟ್ಟಲೆ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸಿತ್ತು. ನವೆಂಬರ್ 26 ರಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ನಾಲ್ಕು ಪುಟಗಳಗಳಲ್ಲಿ ಚೀನಾದ ಮಾಧ್ಯಮ ಸಂಬಂಧಿತ ವಿಚಾರವನ್ನು ಪ್ರಕಟಿಸಿದೆ.
![]() |
| chinese ad in 'The Indian Express' |
ದೇಶದ ಹೊರಗೆ ಮತ್ತು ಒಳಗೆ ಇಷ್ಟೆಲ್ಲಾ ನಡೆಯುತ್ತಿದ್ದು, ಭಾರತ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಎರಡು ತಿಂಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ನಡೆದಿರುವ ಬೆಳವಣಿಗೆ ಗಮನಾರ್ಹವಾದದ್ದು. ಕಳೆದ ವಾರ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಉಪಕರಣಗಳನ್ನು ಹಸ್ತಾಂತರಿಸಿದರು. ಹೆಚ್ಏಎಲ್ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಲೈಟ್ ಕಾಂಬಾಟ್ ಹೆಲಿಕಾಪ್ಟರ್ ಅನ್ನು ವಾಯುಪಡೆಗೆ, ಭಾರತೀಯ ಸ್ಟಾರ್ಟಪ್ಗಳು ವಿನ್ಯಾಸಗೊಳಿಸಿದ ಡ್ರೋನ್ಗಳನ್ನು ಆರ್ಮಿ ಮುಖ್ಯಸ್ಥರಿಗೆ, ಡಿ.ಅರ್.ಡಿ.ಓ ವಿನ್ಯಾಸ ಮಾಡಿದ, ಬಿಇಎಲ್ ನಿರ್ಮಿಸಿದ ಆತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅನ್ನು ನೌಕಾಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದ್ದಾರೆ. ರಕ್ಷಣಾ ವಿಭಾಗದಲ್ಲಿ ಭಾರತ ಆತ್ಮನಿರ್ಭರವಾಗುವುದು ಆರ್ಥಿಕ ಸದೃಢತೆಯ ಸಂಕೇತ. ಕಳೆದ ತಿಂಗಳು ಅಗ್ನಿ-5 ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಚೀನಾಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಭಾರತದ ರಕ್ಷಣೆಯ ದೃಷ್ಟಿಯಿಂದ ಕೃಷಿಕಾಯ್ದೆ ಹಿಂಪಡೆದಿದ್ದಾರೆ. ಅಜಿತ್ ದೋವಲ್ 'ಹೊಸಬಗೆಯ ಯುದ್ಧನೀತಿಯನ್ನು ಗಮನಿಸಿ ಭಾರತವನ್ನು ರಕ್ಷಣೆ ಮಾಡುವುದು ನಿಮ್ಮ ಹೊಣೆ' ಎಂದು ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸುತ್ತಾ ಹೇಳಿದ್ದರು. ಸೈನಿಕರಷ್ಟೇ ಅಲ್ಲ, ವೈಚಾರಿಕವಾಗಿ ನಾವು ಸಹ ದೇಶಕ್ಕಾಗಿ ಯುದ್ಧ ಮಾಡಬೇಕಾಗಿದೆ.
***********************************
References:


ಅದ್ಭುತವಾಗಿದೆ ಅಣ್ಣ ಅಂಕಣ
ReplyDeleteಈ ಬಾರಿ ತುಂಬಾ ವಿಸ್ತಾರವಾಗಿ ಬರೆದಿದ್ದೀರ
Thanks for your deep analysis sir, every citizen of India (nationalist) needs to be aware, awake and ready to do our bit in nation building. It's now or never situation we are facing.
ReplyDeleteArthPrakash is one of the most popular Hindi newspaper site which provides you latest and breaking news in Hindi.
ReplyDeletevande bharat train una to delhi ticket price
karva chauth festival
panjab university
know your property tax chandigarh
e sampark property tax
haryana hindi news
chief vigilance commissioner punjab office address
mata mansa devi mandir story
mirrcle in up
16 ministries under gati shakti
threatened with death
allahabad high court news
threatened with death
gurmeet ram rahim latest parole
ram rahim news
tirupati balaji temple history
vit ap ties up
uttarakhand news
petrol and diesel price in lucknow
female anaconda kills partner after sex