June 29, 2022

ಇಬ್ಬರನ್ನು ಕೊಂದು ಎಲ್ಲರನ್ನು ಹೆದರಿಸುವುದೇ ಒಂದು ತತ್ವ

ರಾಜಸ್ತಾನದ ಉದಯ್ ಪುರದಲ್ಲಿ ನೂಪುರ್ ಶರ್ಮರವನ್ನು ಬೆಂಬಲಿಸಿದ ಒಬ್ಬ ದರ್ಜಿ ಕನ್ಹಯ್ಯಲಾಲ್ ಅನ್ನುವವರನ್ನು ಇಬ್ಬರು 'ಮುಸಲ್ಮಾನ್' ಭಯೋತ್ಪಾದಕರು ಬರ್ಬರವಾಗಿ ಕೊಂದು, ಸಾಮಾಜಿಕ ಜಲತಾಣಗಳಲ್ಲಿ ವೀಡಿಯೋ ಹಂಚಿಕೊಂಡು ನೆನ್ನೆ ಕ್ರೌರ್ಯ ಮೆರೆದಿದ್ದಾರೆ. ನೂಪುರ್ ಶರ್ಮರವರನ್ನು ಬೆಂಬಲಿಸಿ ತನ್ನ ಫೇಸ್ಬುಕ್ ಖಾತೆಯಲ್ಲಿ ಚಿತ್ರ ಹಾಕಿಕೊಂಡ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಆತನನ್ನು ಕೊಂದಿದ್ದಾರೆ ಎಂದರೆ ಮುಸಲ್ಮಾನರ ಮನಸ್ಥಿತಿಯನ್ನು ಊಹಿಸಿಕೊಳ್ಳಿ. ಇದು ಅಚಾನಕ್ಕಾಗಿ ನಡೆದ ಘಟನೆ ಅಲ್ಲವೇ ಅಲ್ಲ. ತನಗೆ ಬೆದರಿಕೆ ಕರೆ ಬರುತ್ತಿದೆ ಎಂಬ ಕಾರಣಕ್ಕೆ ಕಳೆದ ಐದು ದಿನಗಳಿಂದ ಅಂಗಡಿಯನ್ನು ಮುಚ್ಚಿದ್ದ ಕನ್ಹಯ್ಯಲಾಲ್ ನೆನ್ನೆ ತನ್ನ ಅಂಗಡಿಯನ್ನು ತೆರೆಯುತ್ತಾನೆ. ಬಟ್ಟೆಯನ್ನು ಹೊಲಿಗೆಗೆ ಹಾಕುವ ಸೋಗಿನಲ್ಲಿ ಬಂದ 'ಮುಸಲ್ಮಾನ' ಕಟುಕರು ಅಳತೆ ತೆಗೆದುಕೊಳ್ಳಬೇಕಾದರೆ ಕತ್ತಿಯಿಂದ ಆತನ ಶಿರಶ್ಛೇದಿಸಿ ಕೊಲೆ ಮಾಡುವುದನ್ನು ಸಹ ವಿಡಿಯೋ ಮಾಡುತ್ತಾರೆ! ಇದು ಪೂರ್ವನಿಯೋಜಿತವೂ ಹೌದು ಹಾಗೂ ಇಬ್ಬರನ್ನು ಕೊಂದು ಇಪ್ಪತ್ತು ಜನರನ್ನು ಹೆದರಿಸು ಎಂಬ ತಾತ್ವಿಕ ಷಡ್ಯಂತ್ರವೂ ಹೌದು!

Islamic Terrorists

ಕನ್ಹಯ್ಯಲಾಲ್ ಕೊಲೆ ಒಂದು ಸಾಮಾನ್ಯ ಕೊಲೆ ಪ್ರಕರಣ ಅಲ್ಲವೇ ಅಲ್ಲ. ಇದು ಮುಸಲ್ಮಾನರ ಮನಸ್ಥಿತಿ ಹಾಗೂ ಮತೀಯ ಮೂಲಭೂತವಾದವನ್ನು ಎತ್ತಿ ತೋರಿಸುತ್ತದೆ. ಹಿಂದೂ ಧರ್ಮದಲ್ಲಿ ನಿರ್ಬಂಧಗಳೇ ಹೆಚ್ಚು. ಹಬ್ಬಗಳಲ್ಲಿ ಪೂಜೆಯ ಮುಂಚೆ ಉಪವಾಸ, ಏಕಪತಿವ್ರತಸ್ತ ಶ್ರೀರಾಮ ಆದರ್ಶ, ಸಹನೆ, ತಾಳ್ಮೆ, ಶಾಂತಿ ಹಿಂದೂಗಳಿಗೆ ಚಿಕ್ಕ ವಯಸ್ಸಿನಿಂದಲೇ ಪಾಠವಾಗಿರುತ್ತದೆ. ಈ ಘಟನೆಯ ಸುದ್ಧಿ ತಿಳಿದ ತಕ್ಷಣ ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಚಿಂತಾಕ್ರಾಂತರಾಗಿರುತ್ತಾರೆ. ದುಷ್ಟರ ಕಂಡರೇ ದೂರವಿರು ಎಂಬ ಹಿತವಚನ ಹೇಳಿರುತ್ತಾರೆ. ಅದೇ ಮುಸಲ್ಮಾನರಲ್ಲಿ ಗಮನಿಸಿ. ಹೆಣ್ಣು, ಹೊನ್ನು, ಮಣ್ಣು ಇರುವುದೇ ಭೋಗಿಸಲು. ಒಬ್ಬ ಗಂಡಸು ನಾಲ್ಕು ಮದುವೆಯಾಗಬಹುದು, ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲದ್ದಿದ್ದರೂ ಹಿಜಾಬ್ ಧರಿಸಬೇಕು, ಖಾಫೀರರ ತಲೆಕಡಿಯಬೇಕು. ಒಟ್ಟಿನಲ್ಲಿ ಭೋಗಿಸುವುದೇ ಜೀವನ. ಇವೆಲ್ಲವೂ ಅವರ ಧರ್ಮಗ್ರಂಥದ ಮೂಲಕ ಅವರು ಕರೆಯಲ್ಪಡುವ ಭಗವಂತ ಕೊಟ್ಟ ಆಜ್ಞೆ! ಇಷ್ಟೂ ಇದ್ದರೆ ಸಹಜವಾಗಿ ಕ್ರೌರ್ಯ ಮೈದೆಳೆಯುತ್ತದೆ. ಇರುವ ಭೂಮಿಯನ್ನು ನರಕವಾಗಿಸಿ, ಕಲ್ಪನೆಯಲ್ಲಿನ 72 ಕನ್ಯೆಗಳಿರುವ ಸ್ವರ್ಗಕ್ಕೆ ಹಾತೊರೆಯುವ ಜನಾಂಗ ಮುಸಲ್ಮಾನರದ್ದು. ಪ್ರತಿ ದಿನವೂ ಮೆಕ್ಕಾ ಕಡೆ ತಿರುಗಿ ಐದು ಬಾರಿ ನಮಾಜ್ ಮಾಡಬೇಕು, ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು, ಅಲ್ಲಾಹ್ ಒಬ್ಬನೇ ದೇವರು ಎಂಬ ಶ್ರೇಷ್ಟತೆಯನ್ನು ಒಪ್ಪದ ಕಾಫೀರರ ತಲೆ ಕಡಿಯಬೇಕು, ಜಗತ್ತಿನ ಶ್ರೇಷ್ಟ ರಾಷ್ಟ್ರ ಅರಬ್ ಎಂದು ಒಪ್ಪಿಕೊಳ್ಳುವುದು ಪ್ರತಿಯೊಂದು ಮುಸಲ್ಮಾನನ ಕರ್ತವ್ಯ. ಜಗತ್ತಿನ ಯಾವ ಭಾಗದಲ್ಲಿದ್ದರೂ ಮುಸಲ್ಮಾನನೊಬ್ಬನ ನಿಷ್ಠೆ ಅರಬ್ ಕಡೆ. ಆತ ಯಾವುದೇ ದೇಶದ ಪ್ರಜೆಯಾಗಿದ್ದರೂ ಅವನ ಶ್ರದ್ಧೆ ಇರುವುದು ಅರಬ್ ದೇಶಕ್ಕೆ. ಇದನ್ನು ಅನ್ವರ್ ಶೇಖ್ ತಮ್ಮ ಪುಸ್ತಕದಲ್ಲಿ ವಿಶ್ಲೇಷಿಸುತ್ತಾರೆ. ಮುಸಲ್ಮಾನರ ಮನಸ್ಥಿತಿ ಹೀಗಿರಬೇಕಾದರೆ ನೆಲದ ಕಾನೂನಿನ ಬಗ್ಗೆ ಗೌರವವಾಗಲಿ, ಭಯವಾಗಲಿ ಹೇಗೆ ಸಾಧ್ಯವಾತೀತು?

ಹಿಂದೂ ಎನ್ನುಸಿಕೊಂಡವರು ಇವರಿಗೆ ತದ್ವಿರುದ್ಧ. ರಾಜಾಸ್ತಾನದ ಮುಖ್ಯಮಂತ್ರಿ ಘಟನೆ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮಾತಾಡುವ ಬದಲು 'ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಶಾಂತಿ ಕಾಪಾಡುವಂತೆ ಮಾತಾಡಬೇಕು' ಎಂದು ಹೇಳಿರುವುದು ನಾಚಿಗೆಗೇಡಿನ ಸಂಗತಿ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಮುಸಲ್ಮಾನನ ಕಲ್ಲಂಗಡಿ ಅಂಗಡಿ ಹಾಳು ಮಾಡಿದ್ದಕ್ಕೆ ತಮ್ಮ ಎದೆ ಬಡಿದು ಕೊಂಡು, ಕಣ್ಣಿಗೆ ವಿಕ್ಸ್ ಹಾಕಿಕೊಂಡಾದರೂ ಅಳುವ ನಾಯಕರು ಅನ್ನಿಸಿಕೊಂಡವರು ಈಗ ಬಾಯಲ್ಲಿ ಫೆವಿಕಾಲ್ ಹಾಕಿಕೊಂಡಿದ್ದಾರೆ. ಅವರಿಗೆ ವೋಟ್ ಅಷ್ಟೇ ಮುಖ್ಯ, ಮುಸಲ್ಮಾನರ ಒಲೈಕೆ ಅಷ್ಟೇ ಮುಖ್ಯ. ತಮ್ಮ ಮನೆಯಲ್ಲಿ ಅವಘಡ ಮಾಡಿದವರು ಮುಸಲ್ಮಾನರಾದರೇ ಅವರಿಗೆ ಸನ್ಮಾನ ಮಾಡುವಂತಹ ನಾಲಯಕರು ನಮ್ಮಲ್ಲಿದ್ದಾರೆ. ನಿರ್ಭಯಾ ಅತ್ಯಾಚಾರದ ಅಪರಾಧಿ ಬಿಡುಗಡೆಯಾದಾಗ ಅವನಿಗೆ ಹತ್ತು ಸಾವಿರ ರೂಪಾಯಿ ಹಾಗೂ ಹೊಲಿಗೆ ಯಂತ್ರವನ್ನು ಕೊಟ್ಟ ಐಐಟಿ ಪದವಿಧರ ಅರವಿಂದ್ ಕೇಜ್ರಿವಾಲ್ ನೆನಪಿರಬೇಕಲ್ಲ? ಪ್ರಜ್ಞೆ ಎಂಬುದು ಇದ್ದಲ್ಲಿ, ಒಳ್ಳೆಯ ಮುಸಲ್ಮಾನರು ಅಂತ ಯಾರಾದರೂ ಇದ್ದರೆ, ಧರ್ಮಗುರುಗಳು ಅನ್ನಿಸಿಕೊಂಡವರು ಮುಂದೆ ಬಂದು ಈ ಘೋರ ಕೃತ್ಯವನ್ನು ಖಂಡಿಸಲಿ! ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಂದಾಗ 'ಇದೊಂದು ಕಟ್ಟುಕಥೆ, ಸತ್ಯಕ್ಕೆ ವಿರುದ್ಧವಾದದ್ದು' ಎಂದೆಲ್ಲಾ ಮಾತಾಡಿದವರು ಈಗ ಎಲ್ಲಿ ಅಡಗಿಕೊಂಡಿದ್ದಾರೆ? ಅಸಹಿಷ್ಣುತೆ ಬಗ್ಗೆ ಎಲ್ಲರ ಮುಂದೆ ಬಾಯಿ ಬಡಿದುಕೊಂಡ ಆಮಿರ್ ಖಾನ್, ಅವಕಾಶವಾದಿ ಪ್ರಕಾಶ್ ರೈ ಎಲ್ಲಿ ಭೂಗತವಾಗಿದ್ದಾರೆ? ಮಾನವೀಯ ಮೌಲ್ಯದ ಬಗ್ಗೆ ಮಾತಾಡುತ್ತಾ ಟೌನ್ ಹಾಲ್ ಮುಂದೆ ಬೊಗಳುವ ಕಮ್ಯೂನಿಸ್ಟ್ ಅಯೋಗ್ಯರು, ಸ್ವಯಂಘೋಷಿತ ಓ(ಹೋ)ರಾಟಗಾರರು, ಬುದ್ಧಿ(ಇಲ್ಲದ) ಜೀವಿಗಳು ಈಗ ಎಲ್ಲಿ ಅಡಗಿದ್ದಾರೆ? ಈ ಘಟನೆಯ ಮೂಲ ನೂಪುರ್ ಶರ್ಮ ಅನ್ನುತ್ತಾರೆ ವಿನಹ ಘಟನೆಯನ್ನು ಖಂಡಿಸುವ ಯೋಗ್ಯತೆ ಅವರಿಗಿಲ್ಲ.

ನಾನು ಹಿಂದೂ... ಅದಕ್ಕಾಗಿಯೇ ನನ್ನನ್ನು ಕೊಲ್ಲಬೇಡಿ

ಕೊಲೆ ಮಾಡಿದ ಈ ಪಾತಕಿಗಳಿಗೆ ಕಿಂಚಿತ್ತೂ ಭಯವಿಲ್ಲ, ಪಶ್ಚಾತ್ತಾಪವಿಲ್ಲ. ಹೇಗೆ ಬರಬೇಕು ಹೇಳಿ? ಧರ್ಮದ ಅಫೀಮು ತಲೆಗೇರಿರುವಾಗ ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು ಇತರರಿಗೂ ಪ್ರಚೋದಿಸುವ ಮನಸ್ಥಿತಿ ಮುಸಲ್ಮಾನ್ ಮೂಲಭೂತವಾದಿಗಳದ್ದು. ಇತ್ತ ಹಿಂದೂಗಳ ಮನಸ್ಥಿತಿ ಗಮನಿಸಿ. ಕೆಲವಷ್ಟು ಮಂದಿಗೆ ನಡೆದಿರುವ ಘಟನೆ ಬಗ್ಗೆ ಅರಿವೇ ಇಲ್ಲ, ಬಹಳಷ್ಟು ಮಂದಿಗೆ ವಿಚಾರ ಗೊತ್ತಿದ್ದರೂ ಸಹ ಕಟುಕರ ಸಹವಾಸ ನಮಗೇಕೆ ಎಂದು ಮೌನವಾಗಿದ್ದಾರೆ! ಕೆಲವು ಸಂಘಟನೆಗಳು ಕಾನೂನಾತ್ಮಕ ಹೋರಾಟ ಮಾಡಬೇಕು ಎನ್ನುತ್ತಿದೆ. ಆದರೆ ಒಂದು ಗಮನಿಸಿ, ನೂಪುರ್ ಶರ್ಮಾ ವಿರುದ್ಧ ಬೀದಿಗಿಳಿದ ಲಕ್ಷಾಂತರ ಮುಸಲ್ಮಾನರಂತೆ ಹಿಂದೂಗಳು ಪ್ರತಿಭಟನೆಗೆ ಮುಂದೆ ಬರುವುದಿಲ್ಲ. ಇದನ್ನು ಗಮನಿಸಿಯೇ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎನ್ಕೌಂಟರಿನ ಮಾತಾಡುತ್ತಿದ್ದಾರೆ. ಹೈದರಾಬಾದಿನ ಅತ್ಯಾಚಾರ ಪ್ರಕರಣದಲ್ಲಿ ನಡೆದ ಎನ್ಕೌಂಟರ್ ಅಂತೆ ಇದು ಸಹ ಆಗಬೇಕು ಎಂಬುದು ಹಲವರ ಆಶಯವಾಗಿದೆ. ಆಕಸ್ಮಾತ್ ಎನ್ಕೌಂಟರ್ ಆಗಿದ್ದೇ ಆದರೆ ಇದೇ ಕಾಂಗ್ರೇಸ್, ಎಡಚರರು ಬೀದಿ ನಾಯಿಗಿಂತಲೂ ಕಡೆಯಾಗಿ ರಸ್ತೆಗಿಳಿದು ಊಳಿಡುತ್ತಾರೆ.

ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ. ಹಿಂದೂ ಜಾಗೃತನಾಗಲೇ ಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಹಿಂದೂಗಳ ವ್ಯಾಪಾರ ಹಾಗೂ ವ್ಯವಹಾರ ಹಿಂದೂಗಳ ಜೊತೆ ಮಾತ್ರ ಎಂಬುದನ್ನು ಸಂಕಲ್ಪವಷ್ಟೇ ಅಲ್ಲದೇ ವ್ರತವನ್ನಾಗಿ ಆಚರಿಸಬೇಕಾಗಿದೆ. ತಮ್ಮ ಧರ್ಮದ ಬಗ್ಗೆ ಮಾತಾಡಿದವರನ್ನು ಬಂಬಲಿಸಿದರು ಎಂಬ ಕಾರಣಕ್ಕೆ ಕತ್ತಿ ಮೂಲಕ ತಮ್ಮ ಮನಸ್ಥಿತಿ ಮತ್ತು ಉದ್ದೇಶವನ್ನು ಮುಸಲ್ಮಾನರು ಸ್ಪಷ್ಟ ಪಡಿಸಿದ್ದಾರೆ. ಅವರ ಯೋಗ್ಯತೆಗೆ ತಕ್ಕ ಉತ್ತರ ಕೊಡುವ ಸಂದರ್ಭ ಈಗ ಬಂದಿದೆ. ಭಾರತವನ್ನು ಭಾರತವಾಗಿಯೇ ಉಳಿಸುವ ಅಗತ್ಯ ಬಂದಿದೆ. ಹೋರಾಟದ ಸಂದರ್ಭವಿದು ಗಟ್ಟಿಯಾಗಿ ನಿಂತು ಎದುರಿಸಿ ತಕ್ಕ ಪ್ರತಿಕ್ರಿಯೆ ಕೊಡಲಿಲ್ಲವೆಂದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಕೊಲೆಗಡುಕ ಭಯೋತ್ಪಾದಕರಿಗೆ ಧರ್ಮವೇ ಮುಖ್ಯ. ನೆನಪಿರಲಿ, ಆ ಇಬ್ಬರು ಭಯೋತ್ಪಾದಕರ ಹೆಸರು ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಸ್ ಅಖ್ತಾರಿ.
 

***********************************************************

 

June 17, 2022

ಸಾರ್ವಜನಿಕರ ಹಣವೆಂದರೆ ಇವರಪ್ಪನ ಆಸ್ತಿ ಅಲ್ಲ!

ಗೆದ್ದಲು ತನ್ನ ವಾಸಕ್ಕೆಂದು ಕಷ್ಟಪಟ್ಟು ಮಣ್ಣು ಸಂಗ್ರಹಿಸಿ ಹುತ್ತವನ್ನು ಕಟ್ಟುತ್ತದೆ. ಆದರೆ, ಕಾಲಕ್ರಮೇಣ ಹುತ್ತದಲ್ಲಿ ವಾಸಿಸುವುದು ಹಾಗೂ ಪಾರುಪತ್ಯ ನಡೆಸುವುದು ಮಾತ್ರ ಹಾವು. ಮುಂದೊಂದು ದಿನ ಆ ಹಾವನ್ನು ಆಗಸದಲ್ಲಿ ಹಾರಾಡುವ ಗರುಡ ಕೊಲ್ಲುತ್ತದೆ. ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಜಗದ ನಿಯಮ. ಈ ನಿಯಮವನ್ನು ನಾನು ಒಪ್ಪುವುದಿಲ್ಲ, ಈ ನಿಯಮದಿಂದ ನನಗೆ ವಿನಾಯಿತಿ ಬೇಕು, ಈ ನಿಯಮ ನನಗೆ ಅನ್ವಯಿಸುವುದಿಲ್ಲ ಎಂದು ಹಾವು ಕೂಗಾಡಿದರೆ ಗರುಡವಾಗಲಿ, ಪ್ರಕೃತಿಯಾಗಲಿ ಕೇಳುವುದುಂಟೆ? ದೇಶದಲ್ಲಿ ಕಾಂಗ್ರೇಸಿನ ಪರಿಸ್ಥಿತಿ ಕೂಡ ಹಾವಿನಂತೆ ಆಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಷ್ಟಪಟ್ಟು ದುಡಿದ ಹಣದಲ್ಲಿ  ಕಟ್ಟಿದ ಸಂಸ್ಥೆಯನ್ನು ಕಾಂಗ್ರೇಸಿನ ಅಧಿನಾಯಕಿ, ನೆಹರು ವಂಶಸ್ಥರು ಸ್ವಾಧೀನಪಡಿಸಿಕೊಂಡರು. ಈಗ ಕಾನೂನು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀಯ ಕಾಂಗ್ರೇಸ್ ಪಕ್ಷ ಒಂದು ಪರಿವಾರದ ಆಳಿನ ರೀತಿ ಪ್ರತಿಭಟನೆ ಮಾಡುತ್ತಿದೆ. ಇದು ಗುಲಾಮಿ ಮಾನಸೀಕತೆ ಅಲ್ಲದೇ ಮತ್ತೇನು?

ಹೌದು, ಇದು ನ್ಯಾಷನಲ್ ಹೆರಾಲ್ಡ್ ಪ್ರಕರಣವೇ. ನ್ಯಾಷನಲ್ ಹೆರಾಲ್ಡ್ ಎಂಬುದು ನೆಹರೂ ಹಾಗೂ ಇತರ 5000 ಸ್ವಾತಂತ್ರ್ಯ ಹೋರಾಟಗಾರರು 1938 ರಲ್ಲಿ ಸ್ಥಾಪಿಸಿದ ಕಾಂಗ್ರೇಸ್ ಸಂಘಟನೆಯ ಮುಖವಾಣಿ. ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ಎಂಬ ಸಂಸ್ಥೆ ಈ ಪತ್ರಿಕೆಯನ್ನು ನಡೆಸುತ್ತಿತ್ತು. ಈ ಸಂಸ್ಥೆ ಆಂಗ್ಲದಲ್ಲಿ ನ್ಯಾಷನಲ್ ಹೆರಾಲ್ಡ್, ನವಜೀವನ್ ಎಂದು ಹಿಂದಿಯಲ್ಲಿ ಹಾಗೂ ಕ್ವಾಮಿ ಆವಾಜ್ ಎಂಬ ಉರ್ದು ಪತ್ರಿಕೆಗಳನ್ನು ಪ್ರಕಟಿಸುತ್ತಿತ್ತು. ಆದರೆ, ಈ ಸಂಸ್ಥೆ ಒಬ್ಬ ವ್ಯಕ್ತಿಯ ಮಾಲಿಕತ್ವಕ್ಕೆ ಒಳಪಟ್ಟಿರಲಿಲ್ಲ ಬದಲಾಗಿ ಸಾರ್ವಜನಿಕ ಸಂಸ್ಥೆಯಾಗಿತ್ತು. 1942 ರಲ್ಲಿ 'ಭಾರತ ಬಿಟ್ಟು ತೊಲಗಿ' ಆಂದೋಲನದ ಕಾರಣ ನಿಷೇಧಕ್ಕೊಳಾಗಾದ ಪತ್ರಿಕೆ 1945 ರಲ್ಲಿ ಮತ್ತೆ ಕಾರ್ಯರೂಪಕ್ಕೆ ಬರುತ್ತದೆ. ಸ್ವಾತಂತ್ರ್ಯ ನಂತರವೂ ಸಣ್ಣ ಮಟ್ಟದಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಬಂದ ಈ ಸಂಸ್ಥೆಗೆ ಕಾಂಗ್ರೇಸ್ ಸರ್ಕಾರ ದೆಹಲಿಯ ಮಧ್ಯಭಾಗದಲ್ಲಿ ಕಛೇರಿಗಾಗಿ ಅರ್ಧ ಎಕರೆ ಜಾಗವನ್ನು ಮಂಜೂರು ಮಾಡಿತು. ದೆಹಲಿ ಅಷ್ಟೇ ಅಲ್ಲದೆ ಮುಂಬೈ, ಕೊಲ್ಕೊತ್ತಾ ಹಾಗೂ ಇತರ ಕಡೆ ಪತ್ರಿಕೆ ನಡೆಸುವ ಸಲುವಾಗಿ ಆಸ್ತಿಗಳನ್ನು ಮಂಜೂರು ಮಾಡಿತು. ಈ ಸಂಸ್ಥೆಗೆ 2002 ರಿಂದ ಮೊತಿಲಾಲ್ ವೋರಾ, 2010 ರಿಂದ ಆಸ್ಕರ್ ಫರ್ನಾಂಡಿಸ್, ಸಾಂ ಪಿತ್ರೋಡಾ, ಸುಮನ್ ಡುಬೆ ಹಾಗೂ 2015 ರಿಂದ ದೀಪೆಂದರ್ ಸಿಂಗ್ ಮತ್ತು ದೀಪಕ್ ಕುಮಾರ್ ಬಬಾರಿಯಾ ನಿರ್ದೇಶಕರಾದರು. ಮೊತಿಲಾಲ್ ವೋರಾ ನಿಧನದ ನಂತರ ಅವರ ಜಾಗಕ್ಕೆ ನೇಮಕವಾದವರೇ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ಇಲ್ಲಿರುವ ಇಷ್ಟೂ ಜನ ಕಾಂಗ್ರೇಸ್ ಪಕ್ಷಕ್ಕೆ ಸಂಬಂಧಪಟ್ಟವರೇ.

The Accused

2008 ರ ಹೊತ್ತಿಗೆ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ಎಂಬ ಸಾರ್ವಜನಿಕ ಸಂಸ್ಥೆ ಸುಮಾರು 90 ಕೋಟಿ ರೂಪಾಯಿಯಷ್ಟು ಸಾಲವಿದ್ದ ಕಾರಣ ಪತ್ರಿಕೆಯ ಮುದ್ರಣವನ್ನು ನಿಲ್ಲಿಸಿತು. ಆಗಲೂ ಸಹ 1057 ಷೇರುದಾರರು ಈ ಸಂಸ್ಥೆಯಲ್ಲಿ ಪಾಲುಹೊಂದಿದ್ದರು. ಇಲ್ಲಿಂದಲೇ ಈ ಪ್ರಕರಣ ಶುರುವಾಗುವುದು. ಮೂರು ವರ್ಷಗಳ ನಂತರ 2011 ರಲ್ಲಿ 5 ಲಕ್ಷ ರೂ ಬಂಡವಾಳದೊಂದಿಗೆ 'ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಎಂಬ ಮತ್ತೊಂದು ಖಾಸಗಿ ಕಂಪನಿ ಆರಂಭವಾಗುತ್ತದೆ. ಯಂಗ್ ಇಂಡಿಯಾದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಸೇರಿ ಶೇ 76ರಷ್ಟು ಪಾಲು ಹೊಂದಿದ್ದರೆ ಉಳಿದ ಶೇ 24ರಷ್ಟು ನಿರ್ದೇಶಕರ ನಡುವೆ ಹಂಚಿಕೆಯಾಗಿದೆ. ಹೀಗೆ ಶುರುವಾದ ಯಂಗ್ ಇಂಡಿಯಾ ಕಂಪನಿ ಕಾಂಗ್ರೇಸ್ ಪಕ್ಷವನ್ನು 90 ಕೋಟಿ ರೂ ಸಾಲವನ್ನು ಕೇಳುತ್ತದೆ. ಕಾಂಗ್ರೇಸ್ ಪಕ್ಷ ಬಡ್ಡಿರಹಿತ ಸಾಲವನ್ನು ಈ ಖಾಸಗಿ ಕಂಪನಿಗೆ ನೀಡುತ್ತದೆ. ಕಾಂಗ್ರೇಸ್ ನಲ್ಲಿದ್ದ ಸೋನಿಯಾ, ರಾಹುಲ್, ಮೋತಿಲಾಲ್ ವೋರಾ ಅದೇ ಸೋನಿಯಾ, ರಾಹುಲ್ ಮತ್ತು ಮೋತಿಲಾಲ್ ವೋರಾ ಇದ್ದ ಯಂಗ್ ಇಂಡಿಯಾಗೆ ಸಾಲ ನೀಡಿತು. ವಾಹ್! ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದರೆ ಇದೇ ಇರಬೇಕು. ಇದಲ್ಲದೇ ಪ್ರಾರಂಭವಾದ ಒಂದೇ ತಿಂಗಳಲ್ಲಿ ಡೋಟೆಕ್ಸ್ ಮರ್ಚೆನ್ಡೈಸ್ ಎಂಬ ಕಂಪನಿ ಒಂದು ಕೋಟಿ ರೂಪಾಯಿಗಳಷ್ಟು ಸಾಲ ಕೊಡುತ್ತದೆ. ಕೇವಲ ಐದು ಲಕ್ಷ ಬಂಡವಾಳ ಹಾಕಿದ ಕಂಪನಿಗೆ ಒಂದೇ ತಿಂಗಳಲ್ಲಿ ಕೋಟಿ ರೂಪಾಯಿಗಳಷ್ಟು ಯಾರಾದರು ಕೊಡುತ್ತಾರ ಎಂಬುದು ಯೋಚಿಸಬೇಕಾದ ಸಂಗತಿ. ಹೀಗೆ ಪಡೆದುಕೊಂಡ 90 ಕೋಟಿ ಸಾಲವನ್ನು ಉಪಯೋಗಿಸಿಕೊಂಡು ಅಸೋಸಿಯೇಟ್ ಜರ್ನಲ್ಸ್ ನ ಷೇರು ಖರೀದಿ ಮಾಡಿ ಅದರ ಮೇಲಿದ್ದ ಸಾಲವನ್ನು ಮನ್ನ ಮಾಡಿತು. ಈ ಮೂಲಕ ಅಸೋಸಿಯೇಟ್ ಜರ್ನಲ್ಸ್ ನ ಮಾಲಿಕತ್ವ ಸೋನಿಯಾ ಮತ್ತು ರಾಹುಲ್ ನೇತೃತ್ವದ ಯಂಗ್ ಇಂಡಿಯಾದ ಪಾಲಾಯಿತು. ಸಾರ್ವಜನಿಕ ಸಂಸ್ಥೆಯಾಗಿದ್ದ ಅಸೋಸಿಯೇಟ್ ಜರ್ನಲ್ಸ್ ಸಂಸ್ಥೆ ಮತ್ತದರ ಐದು ಸಾವಿರ ಕೋಟಿ ಮೌಲ್ಯದ ಆಸ್ತಿ ಸೋನಿಯಾ, ರಾಹುಲ್ ಮತ್ತು ಕಾಂಗ್ರೇಸ್ ಪಕ್ಷದ ಕೆಲವರ ಪಾಲಾಯಿತು! ದೇಶದ ಆಸ್ತಿಯನ್ನು ಎಷ್ಟು ನಯವಾಗಿ ನುಂಗಿ ನೀರು ಕುಡಿಯಬೇಕು ಎಂಬುದನ್ನು ನೆಹರು ಕುಟುಂಬವನ್ನು ನೋಡಿ ಕಲಿಯಬೇಕು!

ಕಾಮನ್ ವೆಲ್ತ್ ಗೇಮ್ಸ್, 2ಜಿ ಹಗರಣ ಸೇರಿದಂತೆ ಭ್ರಷ್ಟಾಚಾರದ ಕೂಪವಾಗಿದ್ದ ಯೂಪಿಎ-2 ಸರ್ಕಾರದ ಅವಧಿಯಲ್ಲಿ ಇಂತಹದೊಂದು ಹಗರಣ ನಡೆದದ್ದು ಅನೇಕರಿಗೆ ಗೊತ್ತು ಆಗಲಿಲ್ಲ. 1057 ಜನ ಮಾಲಿಕತ್ವದ, 5000 ಕೋಟಿ ಮೌಲ್ಯದ ಆಸ್ತಿಯನ್ನು ಕಾಂಗ್ರೇಸ್ ಪಕ್ಷಕ್ಕೆ ದೇಣಿಗೆ ಎಂದು ಕೊಟ್ಟ ಸಾರ್ವಜನಿಕರ ಹಣದಲ್ಲಿ ಸೋನಿಯಾ, ರಾಹುಲ್ ಮತ್ತು ಇತರರು 90 ಕೋಟಿ ರೂ ಕೊಟ್ಟು ಖರೀದಿ ಮಾಡಿದರು. ಆಗ 2012 ರಲ್ಲಿ ಅಸೋಸಿಯೇಟ್ ಜರ್ನಲ್ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಪ್ರಕ್ರಿಯೆ ಅಕ್ರಮ ಎಂದು ಸುಬ್ರಮಣ್ಯಂ ಸ್ವಾಮೀ ಕೋರ್ಟಿನ ಮೆಟ್ಟಿಲೇರಿದರು. 2015 ರಲ್ಲಿ ನಡೆದ ವಿಚಾರಣೆಯಲ್ಲಿ ಸೋನಿಯಾ ಮತ್ತು ರಾಹುಲ್ ಗೆ ಕೋರ್ಟು ಜಾಮೀನು ನೀಡುತ್ತದೆ. ನೆನಪಿಡಿ, ಕಾಂಗ್ರೇಸಿಗರು ಹೇಳುವಂತೆ ಪ್ರರಕಣ ಇನ್ನೂ ಮುಗಿದಿಲ್ಲ. ನಂತರ, ಪ್ರಕರಣವನ್ನು ವಜಾ ಮಾಡುವ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿತು. 2019 ರಲ್ಲಿ 64 ಕೋಟಿ ಮೌಲ್ಯದ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ಇ.ಡಿ. ಇಲಾಖೆ ಜಫ್ತಿ ಮಾಡಿದ ನಂತರ ಶುರುವಾಗಿದ್ದು ಮಲ್ಲಿಖಾರ್ಜುನ ಖರ್ಗೆ ರವರ ವಿಚಾರಣೆ. ಮತ್ತೀಗ ಶುರುವಾಗಿರುವುದು ರಾಹುಲ್ ಮತ್ತು ಸೋನಿಯಾ ರವರ ವಿಚಾರಣೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಅಸೋಸಿಯೇಟ್ ಜರ್ನಲ್ ಕೂಡ ಕಾಂಗ್ರೇಸ್ ನದ್ದು, ಯಂಗ್ ಇಂಡಿಯಾ ಸಹ ಸೋನಿಯಾ, ರಾಹುಲ್ ಮತ್ತಿತರ ಕಾಂಗ್ರೇಸ್ ನಾಯಕರಿಗೆ ಸೇರಿದ್ದು ತನ್ಮೂಲಕ ಇದು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು ಎಂಬುದು ರಾಜಕೀಯವಾಗಿ ಕಾಂಗ್ರೇಸ್ ಮಾಡುತ್ತಿರುವ ವಾದ. ಇದಕ್ಕಾಗಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಗುಲಾಮಿ ಮಾನಸಿಕತೆ ಹೊಂದಿರುವ ಕಾಂಗ್ರೇಸ್ ಪಕ್ಷದವರ ದೃಷ್ಟಿಯಲ್ಲಿ ಹಾಗೂ ಭಾವನಾತ್ಮಕವಾಗಿ ಸೋನಿಯಾ ಕುಟುಂಬ ಹಾಗೂ ಕಾಂಗ್ರೇಸ್ ಪಕ್ಷ ಒಂದೇ ಇರಬಹುದು. ಆದರೆ, ಕಾನೂನು, ವ್ಯವಹಾರ ಮತ್ತು ಸ್ವಾಭಿಮಾನದ ದೃಷ್ಟಿಯಲ್ಲಿ ಕುಟುಂಬ ಮತ್ತು ಪಕ್ಷ ಅಥವಾ ಸಂಘಟನೆ ಬೇರೆ ಬೇರೆ.

ತಾನು ದಲಿತರ ಪರ ಎಂದು ಬಿಂಬಿಸಿಕೊಳ್ಳುವ ಕಾಂಗ್ರೇಸ್ ಈ ಪ್ರಕರಣದಲ್ಲಿ ಯಾವ ಪಾಲೂ ಹೊಂದಿರದಿದ್ದ, ಹೆಸರಿಗಷ್ಟೇ ನಿರ್ದೇಶಕರಾಗಿರುವ ಕರ್ನಾಟಕದ ದಲಿತ ನಾಯಕ ಖರ್ಗೆ ಅವರನ್ನು ಸಿಲುಕಿಸಿದೆ. ಖರ್ಗೆ ಅವರ ವಿಚಾರಣೆ ನಡೆದದ್ದು ಸುದ್ದಿಯಾಗಲೇ ಇಲ್ಲ. ಆದರೆ, ಸೋನಿಯಾರನ್ನು ವಿಚಾರಣೆಗೆ ಕರೆದಾಗ ಕರೋನಾ ಬರುತ್ತದೆ, ರಾಹುಲ್ ರನ್ನು ವಿಚಾರಣೆಗೆ ಕರೆದಾಗ ಎಲ್ಲಡೆ ಪ್ರತಿಭಟನೆ ವ್ಯಕ್ತವಾಗುತ್ತದೆ. ಹಾಗಿದ್ದಲ್ಲಿ ದಲಿತ ನಾಯಕರಿಗೆ ಇವರು ಕೊಡುವ ಬೆಲೆ ಇಷ್ಟೆಯೇ? "I'm not Savarkar. I'm Rahul Gandhi" ಎಂದೆಲ್ಲಾ ಪ್ಲಕಾರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಾವರ್ಕರ್ ಆಗುವ ಯೋಗ್ಯತೆ ಇಲ್ಲ ಅನ್ನುವುದು ಬೇರೆ ಮಾತು. ಆದರೆ ಎಲ್ಲ ಬಿಟ್ಟು ರಾಹುಲ್ ಗಾಂಧಿ! ನೆಹರೂ ಕುಟುಂಬವೆಂದರೆ ಗಾಂಧಿ ಕುಟುಂಬ ಎಂದು ಬಿಂಬಿಸುವುದರಿಂದ ಹಿಡಿದು ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಕ ನಡೆದಿರುವುದು ಬರಿ ಹಗರಣಗಳೇ. ಸ್ವಾತಂತ್ರ್ಯ ಹೋರಾಟಗಾರರು ಕೊಟ್ಟ ಹಣವನ್ನೂ ತಮ್ಮ ಸ್ವಂತ ಆಸ್ತಿ ಎಂದು ಭಾವಿಸುವ ಕುಟುಂಬವನ್ನು ಈ ದೇಶದಿಂದ ಓಡಿಸುವ ಕಾಲ ಹತ್ತಿರವಾಗುತ್ತಿದೆ. ಸಾರ್ವಜನಿಕರ ಹಣ, ಆಸ್ತಿ ಎಂದರೆ ನಮ್ಮಪ್ಪನ ಆಸ್ತಿ ಎಂದು ಭಾವಿಸುವವರ ಸಂತತಿ ಇಲ್ಲಿಗೆ ಕೊನೆಯಾಗಬೇಕಿದೆ.

Senseless Poster from Congressmen

***********************************************************

References:

June 9, 2022

ಮುನ್ನೆಲೆ



ಮನಸ್ಸೆಂಬ ಕಡಲಿನಾಳದಲ್ಲಿ ಉದಯಿಸಿತು ಪ್ರೀತಿ
ಭಾವದ ನೌಕೆಯನ್ನೇರಿ ಸಾಗಿತು ಬದುಕು
ತೇಲಿ ಹೋದಳು ಅವಳು... ನಾವಿಕ ನಾನಾಗಲಿಲ್ಲ
ಮನದಾಳದಲ್ಲಿ ಮುಳುಗಿಹೋದ ನೆನಪು ನಾನಾದೆ
ನೆನಪಿಗೇ ಬಾರದ ನೆನಪು ನಾನಾದೆ!

ನೆನೆನೆನೆದು ಬತ್ತು ಹೋಯಿತು ಕಣ್ಣು
ಆಲಿಸಿದಲ್ಲೆಲ್ಲಾ ನೀರವ ಮೌನ
ಹೃದಯದಲ್ಲೊಂದು ಹಸಿಯಾದ ಹುಣ್ಣು
ಸುಳಿಯೊಂದರಲ್ಲಿ ಸಿಲುಕಿಹುದು ಮನ

ಕಮರಿ ಹೋದ ನೆತ್ತರಿನ ಕಾವು
ಯಾವ ಹೂವು ಯಾರ ಮುಡಿಗೊ...?
ಎದುರಿಗಿಹುದು ವಿಧಿಯಾಟದ ನಗು
ಬಾಳದಾರಿ... ಮದುವೆಗೋ ಮಸಣಕೋ...?

ಅವಿತಿಟ್ಟ ಭಾವ ಮುನ್ನೆಲೆಗೆ ಬರಬೇಕಿದೆ
ನನ್ನಿರುವನ್ನೇ ಮರೆಸುವ ಒಲವು ಬೇಕಿದೆ
ಭಾರವಾದ ಬದುಕು ಹಗುರಾಗಬೇಕಿದೆ
ಅವಳ ಮಡಿಲಲ್ಲಿ ಪವಡಿಸುವ ಪ್ರೀತಿ ನಾನಾಗಬೇಕಿದೆ

ಕಣ್ಣಂಚಲಿ ಕಾಣುವ ಪ್ರೀತಿ ಮನತುಂಬಬೇಕಿದೆ
ಮನದಲ್ಲಿ ಆಕೆಯ ಬಿಂಬ ಅಚಲವಾಗಬೇಕಿದೆ
ನನ್ನ ಬದುಕಿನ ಸ್ಫೂರ್ತಿ ಅವಳಾಗಬೇಕಾಗಿದೆ
ನಾ ಸೋತರು ಅವಳು ನನ್ನ ಗೆಲುವಾಗಬೇಕಿದೆ !

June 6, 2022

ಪಠ್ಯ ಪರಿಷ್ಕರಣೆ... ಇಷ್ಟೇ ಸಾಕೆ...?

ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕದ ಪರಿಷ್ಕರಣೆ ಕಾರ್ಯ ಪೂರ್ಣವಾಗಿ ಪಠ್ಯಪುಸ್ತಕಗಳು ಪ್ರಕಟವಾಗುತ್ತಿವೆ. ಈ ಹಿನ್ನಲೆಯಲ್ಲಿ ಚರ್ಚೆಗಿಂತಲೂ ವಿವಾದವೇ ಹೆಚ್ಚಾಗಿದೆ. ಪರಿಷ್ಕೃತಗೊಂಡಿರುವ ವಿಚಾರಗಳ, ಗುಣಾತ್ಮಕ ಅಂಶಗಳ ಬಗ್ಗೆ ಅದರ ಸತ್ಯಾಸತ್ಯತೆಗಳ ಬಗ್ಗೆ ಚರ್ಚೆಯಾಗಬೇಗಕಿತ್ತು. ಅದರೆ, ಪೂರ್ವಾಗ್ರಹ ಪೀಡಿತರಾಗಿ, ವಿಚಾರಗಳನ್ನು ಹೊರತು ಪಡಿಸಿ ವ್ಯಕ್ತಿ ಕೇಂದ್ರಿತವಾಗಿ ವಿವಾದವನ್ನು ಹುಟ್ಟು ಹಾಕುತ್ತಿರುವುದು ಸೋಚನೀಯ. ಎಡಪಂಕ್ತಿಯರು, ತಮ್ಮನ್ನು ತಾವು ಬುದ್ಧಿಜೀವಿ ಎಂದು ಕರೆದುಕೊಳ್ಳುವವರು, ರಾಜಕೀಯ ನಾಯಕರು ತಿರುಗಿ ಬೀಳುತ್ತಿರುವುದನ್ನು ಗಮನಿಸಿದರೆ ಸತ್ಯವನ್ನು ಮರೆಮಾಚುವ ಪ್ರಯತ್ನದಂತೆ ತೋರುತ್ತದೆ. ಕಾಂಗ್ರೇಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಗೂಂಡಾ ಪ್ರವೃತ್ತಿ ತೋರಿದೆ. ತಿಪಟೂರಿನಲ್ಲಿರುವ ಮಾನ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಯ ಮೇಲೆ ಎನ್.ಎಸ್.ಯೂ.ಐ. ಸಂಘಟನೆ ದಾಳಿ ಮಾಡಿದೆ. ಒಂದಂತೂ ಸತ್ಯ, ಕಾಂಗ್ರೇಸ್ ಮತ್ತು ಕಮ್ಮ್ಯೂನಿಸ್ಟರು ವಿರೋಧ ಮಾಡುತ್ತಿದ್ದಾರೆಂದರೆ ಮಾಡಿದ ಕೆಲಸ ನಿಜಕ್ಕೂ ಸರಿಯಾಗಿದೆ ಎಂದರ್ಥ. ಈ ದೃಷ್ಟಿಯಲ್ಲಿ ನೋಡುವುದಾದರೆ, ರೋಹಿತ್ ಚಕ್ರತೀರ್ಥರವರ ನೇತೃತ್ವದಲ್ಲಿ ನಡೆದಿರುವ ಪಠ್ಯ ಪುಸ್ತಕ ಪರಿಷ್ಕರಣೆ ಕಾರ್ಯವನ್ನು ಖಂಡಿತವಾಗಿಯೂ ಸಮಾಜ ಒಪ್ಪಬಹುದು.

ಪರಿಷ್ಕರಣಾ ಸಮಿತಿಗೆ ರೋಹಿತ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ದಿನದಿಂದಲೇ ಬರಗೂರು ರಾಮಚಂದ್ರಪ್ಪ ಮತ್ತವರ ಗುಂಪು ವಿರೋಧ ಮಾಡಲು ಪ್ರಾರಂಭಿಸಿತು. ಪಠ್ಯದಲ್ಲಿ ರೋಹಿತ್ ಮಾಡಬಹುದಾದ ಬದಲಾವಣೆಗಳೇನು ಎಂಬುದು ತಿಳಿಯದೇ ವ್ಯಕ್ತಿಗತವಾಗಿ ವಿರೋಧ ಮಾಡಲು ಪ್ರಾರಂಭಿಸಿದರು. ಪಠ್ಯದಲ್ಲಿ ಹೆಗಡೆವಾರರ ಭಾಷಣ, ಚಕ್ರವರ್ತಿಯವರ ಲೇಖನ, ಬನ್ನಂಜೆ ಗೋವಿಂದಾಚಾರ್ಯರ ಬರಹ, ಶತಾವಧಾನಿ ಗಣೇಶರ ಮಾತುಗಳನ್ನು ಪಾಠವಾಗಿ ಸೇರಿಸಿದ್ದಾರೆ ಎಂದು ತಿಳಿದ ಮೇಲಂತೂ ಎಲ್ಲಿಲ್ಲದ ಗಲಾಟೆ ಶುರುವಾಯಿತು. ಆ ಪಠ್ಯಗಳಲ್ಲಿರುವ ವಿಚಾರವೇನು ಎಂಬುದನ್ನು ಓದದೇ ವ್ಯಕ್ತಿರಿಕ್ತವಾದ ವಿರೋಧವೇ ಮೇಲಾಯ್ತು! ಆದರ್ಶ ಪುರುಷ, ಭಾರತಾಂಬೆಯ ಅಮರಪುತ್ರರು, ಭಾರತೀಯ ಚಿಂತನೆಗಳು, ರಾಮಾಯಣದಲ್ಲಿ ಬರುವ ಶುಕಾಸನನ ಉಪದೇಶವನ್ನು ಪಠ್ಯವಾಗಿ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಸಮುದಾಯದ ಓಲೈಕೆಯಾಗಲಿ, ಜಾತಿ ನಿಂದನೆಯಾಗಲಿ ಇರದೇ ಮಕ್ಕಳಿಗೆ ಬೇಕಾದ ವಿಚಾರಗಳನ್ನೇ ಕೊಟ್ಟಿದ್ದಾರೆ. ಕುವೆಂಪುರವರ 'ಕಿಂದರಿ ಜೋಗಿ' ಪದ್ಯವನ್ನು ಸೇರಿಸಿದ್ದೇವೆ ಎಂದು ಸ್ವತಃ ರೋಹಿತ್ ಅವರು ಅನೇಕ ಚರ್ಚೆಗಳಲ್ಲಿ ಹೇಳಿದ್ದಾರೆ. ಪಠ್ಯದಲ್ಲಿರುವ ವಿಚಾರಗಳು ಸತ್ವಯುತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಚಟ ವಿರೋಧಿಗಳದ್ದು!

ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕದಲ್ಲಿ ಮಾಡಿದ 'ಎಡ'ವಟ್ಟುಗಳನ್ನು ಒಮ್ಮೆ ನೋಡೋಣ. ಕರ್ನಾಟಕದ ವಿಕಾಸಕ್ಕೆ ಮುನ್ನುಡಿ ಬರೆದ ಮೈಸೂರಿನ ಅರಸರನ್ನು ನಿರ್ಲಕ್ಷಿಸಿದರು, ಹಿಂದೂ ಧರ್ಮದ ಬಗ್ಗೆ ನಕಾರಾತ್ಮಕ ಅಂಶಗಳನ್ನೇ ಪಠ್ಯದಲ್ಲಿ ತುಂಬಿದರು, ರೈತರ ಗೀತೆಯಾದ 'ನೇಗಿಲ ಯೋಗಿ' ಹಾಡನ್ನು ತೆಗೆದರು, ಭಗತ್ ಸಿಂಗನ ಬಗ್ಗೆ ಇದ್ದದ್ದು ಒಂದು ಪರಿಚ್ಛೇದ ಮಾತ್ರ, ಅದು ಕಮ್ಯುಸಿಸ್ಟರು ಬರೆದದ್ದು. ಬೆಂಗಳೂರನ್ನು ಕಟ್ಟಿದ ಕೆಂಪೆಗೌಡರ ಪಾಠ ಇರಲಿಲ್ಲ, ಬಸವಣ್ಣ ಹಾಗೂ ಜೇಡರ ದಾಸಿಮಯ್ಯರ ವಚನಗಳನ್ನು ಕೈಬಿಟ್ಟಿದ್ದರು, ವಿವೇಕಾನಂದರ ವಿಚಾರಗಳನ್ನು ತದ್ವಿರುದ್ಧವಾಗಿ ಪ್ರಸ್ತುತ ಪಡಿಸಿದ್ದರು, ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂವನ್ನು ಮಾತ್ರ ಹೋರಾಟಗಾರ ಎಂದು ಬಿಂಬಿಸಿದ್ದರು. ಈಗ ನಡೆದಿರುವ ಪರಿಷ್ಕರಣೆಯನ್ನು ಗಮನಿಸೋಣ. 17 ವರ್ಷ ಆಳಿದ ಟಿಪ್ಪೂವಿನ ನೈಜ ಇತಿಹಾಸ ತಿಳಿಸಿದ್ದಾರೆ, ಹಿಂದೂ, ಬೌದ್ಧ, ಜೈನ ಧರ್ಮದ ಬಗ್ಗೆ ಸೇರಿಸಿದ್ದಾರೆ, ರಾಷ್ಟ್ರವಾದಿ ಚಕ್ರವರ್ತಿ ಸೂಲಿಬೆಲೆ ವಿರಚಿತ ಭಗತ್ ಸಿಂಗ್ ಜೀವನದ ಸಮಗ್ರ ಚಿತ್ರಣ ಸೇರಿಸಿದ್ದಾರೆ, ನಾಡಪ್ರಭು ಕೆಂಪೇಗೌಡರ ಬಗ್ಗೆ ಕಥೆಯ ಮೂಲಕ ತಿಳಿಸಿದ್ದಾರೆ, ಮೆಣಸಿನ ರಾಣಿ ಚೆನ್ನಭೈರಾದೇವಿ ಹಾಗೂ ಇತರ ಹೋರಾಟಗಾರರ ಕುರಿತು ಪಠ್ಯದಲ್ಲಿ ಸೇರಿಸಲಾಗಿದೆ, ಕೈಬಿಟ್ಟ ವಚನಗಳನ್ನು ಮತ್ತೆ ಸೇರಿಸಲಾಗಿದೆ. ಈಗ ನಡೆದಿರುವ ಪಠ್ಯ ಪರಿಷ್ಕರಣೆ ಖಂಡಿತ ಭಾರತೀಯತೆಯನ್ನು ಎತ್ತಿ ಹಿಡಿಯುತ್ತಿದೆ. ಇದೇ ಕಮ್ಯುಸಿಸ್ಟರ, ಕಾಂಗ್ರೇಸ್ ಕೃಪಾಪೋಷಿತ ಓ(ಹೋ)ರಾಟಗಾರರ ಹೊಟ್ಟೆ ಉರಿಗೆ ಕಾರಣವಾಗಿದೆ.

ವೈಚಾರಿಕವಾಗಿ ಯಾವಾಗ ಚರ್ಚೆ ಸಾಧ್ಯವಾಗಲಿಲ್ಲವೋ ಆಗ ವಿರೋಧಿಗಳು ಜಾತಿವಾದವನ್ನು ಎಳೆತಂದರು. ಪಠ್ಯಪುಸ್ತಕದಲ್ಲಿ ಬ್ರಾಹ್ಮಣ್ಯ ಹೆಚ್ಚಾಗಿದೆ ಎಂದು ಊಳಿಟ್ಟರು. ಭಗತ್ ಸಿಂಗ್ ಅವರನ್ನು ಕೈಬಿಟ್ಟಿದ್ದಾರೆ, ಕುವೆಂಪು ಬಗ್ಗೆ ಬರೆದಿರುವ ಸಾಲುಗಳು ಸರಿಯಿಲ್ಲ ಎಂಬತಹ ಸುಳ್ಳುಗಳನ್ನು ಹರಡಲು ಪ್ರಾರಂಭಿಸಿದರು. ರಾಮಚಂದ್ರಪ್ಪನವರ ಸಮಿತಿಯ ಸದಸ್ಯ ಆಂಗ್ಲ ಪತ್ರಿಕೆಯಲ್ಲಿ ವಿಜ್ಞಾನದ ಪಠ್ಯದಲ್ಲಿ ನಡೆದಿರುವ ಪರಿಷ್ಕರಣೆ ಬಗ್ಗೆ ಅಸಮಾಧಾನವಿದೆ ಎಂದು ಬರೆದರು. ಸ್ವಯಂಘೋಷಿತ ಶಿಕ್ಷಣ ತಜ್ಞರೊಬ್ಬರು ವಿಜ್ಞಾನ ಪಠ್ಯದ ಪರಿಷ್ಕರಣೆ ಬಗ್ಗೆ ಮನಸ್ಸಿಗೆ ಬಂದಂತೆ ಬರೆದರು. ಅಸಲಿಗೆ ರೋಹಿತ್ ಅವರ ಸಮಿತಿ ವಿಜ್ಞಾನ ಪಠ್ಯವನ್ನು ಮುಟ್ಟೇ ಇಲ್ಲ. ವಿರೋಧಿಸುವವರ ಬೌದ್ಧಿಕ ದಿವಾಳಿತನಕ್ಕೆ ಇದೊಂದು ಸಾಕ್ಷಿ! ಈ ವಾದವೆಲ್ಲ ನೆಲಕಚ್ಚಿದ ನಂತರ ಶುರುವಾದದ್ದೇ ಅನುಮತಿ ವಾಪ್ಸಿ ಪರ್ವ. ತಾವು ಬರೆದಿರುವ ಗದ್ಯವನ್ನೋ ಪದ್ಯವನ್ನೋ ಪಠ್ಯದಲ್ಲಿ ಬಳಸಿಕೊಳ್ಳುವ ಅನಿಮತಿಯನ್ನು ಹಿಂಪಡೆಯುತ್ತಿದ್ದೇವೆ ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯಲು ಶುರು ಮಾಡಿದರು. ನೆಹರು ರಾಜಿನಾಮೆ ಬೆದರಿಕೆಯಂತೆ ಇದೂ ಕೂಡ!

ಬರಗೂರು ಸಮಿತಿಯ ಸದಸ್ಯರ ಅರ್ಥವಿಲ್ಲದ ಲೇಖನ

ಚಿನ್ನಸ್ವಾಮಿ ಎನ್ನುವವರು ಫೇಸ್ಬುಕ್ ಅಲ್ಲಿ ತಾವು ಅನುಮತಿ ಪಡೆದಿರುವ ಕವಿತೆಯ ಚಿತ್ರವನ್ನು ಹಾಕಿಕೊಂಡಿದ್ದಾರೆ. ಅದು ಕವಿತೆ ಹೌದೋ ಅಲ್ಲವೋ ಅನ್ನೋದು ಬೇರೆ ಚರ್ಚೆ ಆದರೆ, ಅವರ ಬರಹದಲ್ಲಿ 'ಕೃಷ್ಣನ ರಸಿಕತೆಯೂ ಬೇಕು' ಎಂಬ ಸಾಲನ್ನು ಗಮನಿಸಿ. ಆ ವ್ಯಕ್ತಿಗೆ ಗೀತಾಚಾರ್ಯನಾದ ಕೃಷ್ಣನ ವಿಶ್ವಗುರುತ್ವ ಕಾಣಲಿಲ್ಲ, ಕಂಸನನ್ನು ಕೊಂದ ಮೇಲೆ ಅಧಿಕಾರವನ್ನು ತನ್ನ ತಂದೆಗೆ ಕೊಟ್ಟು ಧರ್ಮಸಂಸ್ಥಾಪನೆಗೆ ನಿಂತ ತ್ಯಾಗ ಕಾಣಲಿಲ್ಲ, ಅಂತಸ್ತಿನ ಭೇದ ಮರೆತು ಕುಚೇಲನೊಂದಿಗೆ ವರ್ತಿಸಿದ ಸರಳತೆ ಕಾಣಲಿಲ್ಲ, ರಾಧೆಯೊಂದಿಗಿನ ಪ್ರೇಮ ಕಾಣಲಿಲ್ಲ ಬದಲಾಗಿ, ಇವರಿಗೆ ಕಂಡದ್ದು ರಸಿಕತೆಯೇ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಇಂತಹವರನ್ನು ನೋಡಿಯೇ ಹೇಳಿರಬೇಕು.

ಸ್ವಯಂಘೋಷಿತ ಕವಿತೆ

ಇಷ್ಟೆಲ್ಲಾ ವಾದ ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರವಾದದ ಮಾತಾಡುವವರು, ನುರಿತ ಶಿಕ್ಷಣ ತಜ್ಞರು, ಭಾಜಾಪಾ ಪಕ್ಷದ ನೇತಾರಾರು ರೋಹಿತ್ ಮತ್ತವರ ಸಮಿತಿ ಪರವಾಗಿ ಗಟ್ಟಿಯಾದ ದನಿ ಎತ್ತುತ್ತಿಲ್ಲ ಎಂಬುದೇ ಬೇಸರದ ಸಂಗತಿ. ರೋಹಿತ್ ಅವರನ್ನು ಪದವಿ ಪೂರ್ವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಸದಸ್ಯರನ್ನಾಗಿ ಮಾಡಿ ಪರೋಕ್ಷವಾಗಿ ಬೆಂಬಲ ಸೂಚಿಸಿದರೂ ನೇರವಾದ, ಸ್ಪಷ್ಟವಾದ ದನಿ ಎತ್ತುವ ಅಗತ್ಯ ಖಂಡಿತ ಇದೆ. ಈ ಎಡಚರರು ಗೊಂದಲ ಸೃಷ್ಟಿ ಮಾಡುವುದರಲ್ಲಿ ನಿಸ್ಸೀಮರು. ತಮ್ಮ ಪತ್ರಗಳಿಂದ ಹಾಗೂ ಜೋರಾದ ದನಿಯಿಂದ ಮಕ್ಕಳು ಹಾಗೂ ಪೋಷಕರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಷ್ಕರಣೆ ಕುರಿತ ತಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು.

 
ಸಿದ್ಧಾಂತಗಳನ್ನು ಹೇಳಲೆಂದೇ ಬಳಕೆಯಾಗುತ್ತಿದ್ದ ಪಠ್ಯಪುಸ್ತಕದಲ್ಲಿ ಹೊಸತನದ ಅವಶ್ಯಕತೆ ಖಂಡಿತ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮಲ್ಲಿ ವಿವಾದಗಳು ಹುಟ್ಟುವುದು ಸಾಮಾನ್ಯವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯೂ ರಾಜಕೀಯದ ಕೆಸರಾಟಕ್ಕೆ ಬಲಿಯಾಗದೆ ನೈಜತೆ, ಕ್ರಿಯಾಶೀಲತೆ ಹೆಚ್ಚಿಸುವ ಸಂಜೀವಿನಿಯಾಗಲಿ. ಈಗ ನಡೆದಿರುವುದು ಪರಿಷ್ಕರಣೆ ಮಾತ್ರ ಅದು ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಮಾತ್ರ. ನನಗಿರುವ ಪ್ರಶ್ನೆ ಪಠ್ಯ ಪರಿಷ್ಕರಣೆ ಇಷ್ಟೇ ಸಾಕೆ...?