ಓ ಒಲವೇ ನೀ ನೋಡುವ ನೋಟ
ಹೃದಯವ ಕೆಣಕಿದೆ ಕೇಳಿದೆಯಾ...
ನಿನ್ನ... ನನ್ನ ಜನುಮದ ಗೆಳೆತನ
ಯುಗಯುಗದಿಂದಲಿ ಆಲಿಸೆಯಾ...
ಮರೆತರೆ ನಿನ್ನ ನನ್ನಿಂದಲೇ ನಾ
ದೂರಾಗುವೆ..ನು ಊಹಿಸೆಯಾ...
ನನ್ನ ಕಲ್ಪನೆ... ನನ್ನ ಕವಿತೆನೆ
ಪ್ರತಿ ಉಸಿರಿನಾ... ಪರಿತಪವುನೀ...
ಜೀವ ನೀ... ನರನಾಡಿ ನೀ
ನನ್ನ ಕಂಬನಿ... ಹನಿ ಬಿಂಬ ನೀ...
ಓ ಒಲವೇ ನೀ ಆಡಿಸೋ ಆಟ
ಜೇವವ ಹಿಂಡಿದೆ ಕೇಳಿದೆಯಾ...
ಮೊದಲೇ ಸತ್ತು ಹೋದ ಈ ಮನಕೆ
ಮತ್ತೆ ಬಲಿಯನೇ ನೀಡುವೆಯಾ...
ಇಂದು ಕಲಿತಿರುವೆ ಹೊಸ ಪ್ರೀತಿಯನು
ಇದಕೆಲ್ಲವು ಕಾರಣ ನೀನೆ... ಹ್ಮ್ಮ್ಮ್ಮ್...
ನನ್ನ ಕಲ್ಪನೆ... ನನ್ನ ಕವಿತೆನೆ
ಪ್ರತಿ ಉಸಿರಿನಾ... ಪರಿತಪವುನೀ...
ಜೀವ ನೀ... ನರನಾಡಿ ನೀ
ನನ್ನ ಕಂಬನಿ... ಹನಿ ಬಿಂಬ ನೀ...
ಓ ಒಲವೇ ನೀ... ಓ ಒಲವೇ ನೀ...
ಒಂದೇ ಒಂದು ಆಸೆ ಇಂದೂ
ನಿನ್ನಲ್ಲಿಯೇ... ಜೀವವಿಹುದು...
ನನ್ನೆಲ್ಲ ನೋವನ್ನು ನೀನು ಮರೆಸು
ಈ ಬಾಳ ತುಂಬ ನೀನೇ ಆವರಿಸು
ನನ್ನ ಸಾವಲ್ಲೂ ನಾ ನಿನ್ನೆ ನೆನೆದು
ನಗುನಗುತಾ ಸಾಯುವೆ ನಾನೂ...

No comments:
Post a Comment