November 28, 2015

ಖಾರ(ನ್)ಭಾತ್

ಪ್ರಸ್ತಾವನೆ:

ಇಲ್ಲಿ ನಾ ಹೇಳುತ್ತಿರುವ ಮಾತುಗಳನ್ನು ದಯವಿಟ್ಟು ಓದಬೇಡಿ. ಓದುವ ಹಾಗಿದ್ದಲ್ಲಿ...
  • ಯಾವುದೇ ವ್ಯಕ್ತಿ ಮೇಲೆ (ಪ್ರಮುಖವಾಗಿ ಆಮಿರ್ ಖಾನ್) ಕುರುಡು ಅಭಿಮಾನವಿರಬಾರದು
  • ವಿವೇಕವಾಣಿಯ (ಸ್ವಾಮಿ ವಿವೇಕಾನಂದರ ಮಾತು) ಬಗ್ಗೆ ಅಪಸ್ವರವಿರಬಾರದು
ಹಾಗೂ ಓದಿದಲ್ಲಿ ಅದು ತಮ್ಮ ನೈತಿಕತೆಗೆ ಮಾಡಿಕೊಳ್ಳುವ ದ್ರೋಹ.

ಅಭಿಪ್ರಾಯ:

ಕೆಲ ದಿನಗಳಿಂದ ಶ್ರೀಯುತ ಆಮಿರ್ ಖಾನ್ ರವರ ದೇಶದಲ್ಲಿನ ಅಸಹಿಶ್ಣುತೆ ಕುರಿತ ಹೇಳಿಕೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆದಿದೆ ಹಾಗು ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಕುರಿತಂತೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಎಲ್ಲರೂ ಮಾತಾಡುತ್ತಿದ್ದಾರೆ ನನ್ನದೇನಪ್ಪ ಎಂದುಕೊಳ್ಳಬಹುದು. ಆದರೆ, ಇದು ದೇಶದ ಕುರಿತಂತೆ ಆಡಿದ ಮಾತು, ಆದ್ದರಿಂದ ನನ್ನ ಅಭಿಪ್ರಾಯ ಕೆಲವರಿಗೆ ಪ್ರಶ್ನೆ ಹಾಗು ಉತ್ತರ ರೂಪದಲ್ಲಿ ಹಂಚಿಕೊಳ್ಳುವುದು ನನ್ನ ಕರ್ತವ್ಯ ಎಂದು ನಂಬಿದ್ದೇನೆ.

ಆಮಿರ್ ಖಾನ್ ಏನು ಹೇಳಿದರು ಎಂದು ಎಲ್ಲರಿಗೂ ತಿಳಿದಿದೆ. 'ಅಸಹಿಶ್ಣುತೆ' ಎಂಬುದು ಯಾವುದರ ಬಗ್ಗೆ ಎಂಬುದು ಸ್ಪಷ್ಟ ಪಡಿಸಲಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಹೆದರಿರುವ ಇವರುಗಳು ತಾವು ಎದುರಿಸುತ್ತಿರುವ ತೊಂದರೆಗಳಾದರು ಏನು? ಹಾಗೊಂದು ವೇಳೆ ಸಮಸ್ಯೆ ಇದ್ದಲ್ಲಿ ಅದನ್ನು ಬಗೆ ಹರಿಸಿಕೊಳ್ಳಬೇಕೆ ಹೊರತು ದೇಶ ಬಿಟ್ಟು ಹೋಗುವ ಮಾತಾಡುವುದು ಲಜ್ಜೆಗೇಡು ಹಾಗು ಪರಮ ಹೇಡಿತನ. ನಮ್ಮ ಮನೆಯಲ್ಲಿ ಕಸವಿದ್ದಲ್ಲಿ ಸ್ವಚ್ಚ ಮಾಡಬೇಕೆ ಪರಂತು ಮನೆ ಬಿಟ್ಟು ಹೊರಡುವುದಲ್ಲ. ಹಾಗೆ ಯೋಚನೆ ಮಾಡಿದ್ದೇ ಆದಲ್ಲಿ, ಅದು ಪರಮ ಮೂರ್ಖತನ. ಇಲ್ಲಿ ಈತ ಪ್ರಸ್ಥಾಪಿಸಿರುವುದು ದೇಶದ ಕುರಿತು, ಆದ್ದರಿಂದ ಈತನನ್ನು 'ದೇಶದ್ರೋಹಿ' ಎಂದು ಸಾರಬಹುದು. ಇಂತಹವರ ಪರವಾರಿ ಸಮಜಾಯಿಶಿ ಕೊಟ್ಟು ಮಾತಾಡುವವರಿಗೆ ಏನು ಹೇಳಬೇಕೋ ತಿಳಿಯದು. ಇನ್ನು ಸ್ವಲ್ಪ ಉಗ್ರತೆ (ಉಗ್ರವಾದ ಅಲ್ಲ) ಇಂದ ಹೇಳುವುದಾದರೆ ಇವರೂ ಸಹ ದೇಶ ದ್ರೋಹಿಗಳೇ. ಅಪರಾಧಿಗೆ ಸಹಾಯ ಮಾಡಿದವನು ಅನ್ನುತ್ತಾರಲ್ಲ ಹಾಗೆ...!!!

ಆಮಿರ್ ಖಾನನ ಬಗ್ಗೆ ನನಗೆ ಖಂಡಿತ ಗೌರವವಿತ್ತು. 'ಲಗಾನ್', 'ಮಂಗಲ್ ಪಾಂಡೆ', 'ತಾರೆ ಜ಼ಮೀನ್ ಪರ್', 'ರಂಗದೇ ಬಸಂತಿ', ಇಂತಹ ಒಳ್ಳೆ ಸಿನಿಮಾಗಳನ್ನು ಕೊಟ್ಟ ಇವನ ಬಗ್ಗೆ ಹೆಮ್ಮೆ ಇತ್ತು. 'ಧೂಮ್ 3' ಸಿನಿಮಾವನ್ನು ಇವರು ನಟಿಸಿದ್ದಾನೆ ಎಂಬ ಕಾರಣಕ್ಕೆ ನೋಡಿದವರಲ್ಲಿ ನಾನೂ ಒಬ್ಬ. ಇಷ್ಟಾದ ಮೇಲೆ ಈತ 'ಪಿ.ಕೆ.' ಎಂಬ ಸಿನಿಮಾವನ್ನು ಮಾಡಿದ. ಅದನ್ನು ನೋಡಿ ನನಗೆ ಇವನಲ್ಲಿ ಇದ್ದ ಗೌರವ ಕೊಂಚ ಕಡಿಮೆ ಆಯಿತು. ಧರ್ಮದ ಕುರಿತು ವಿಡಂಬನಾತ್ಮಕವಾಗಿ ಮಾಡಿರುವ ಚಿತ್ರ. ಧರ್ಮದ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸುವುದು ನನ್ನ ಮಟ್ಟಿಗೆ ಭಾರತದಲ್ಲಿ ಈತನ ಯೋಗ್ಯತೆಗೆ ಶೋಭೆ ತರುವುದಿಲ್ಲ. ಇರಲಿ, ಅದರ ಬಗ್ಗೆ ಮಾತು ನಂತರ. ಆದರೆ, ಈಗ ಮಾತಾಡಿರುವುದು ದೇಶದ ಕುರಿತಂತೆ. ಇದು ಖಡಾಖಂಡಿತವಾಗಿ 'ಧರ್ಮ ದ್ರೋಹಿ'ಯೂ ಹೌದು.

ಇಲ್ಲಿ 'ಧರ್ಮದ್ರೋಹಿ' ಎಂದು ಹೇಳಲು ಕಾರಣವಿದೆ. 'ಸ್ವಾಮೀ ವಿವೇಕಾನಂದ'ರು ಹೇಳುವಂತೆ -
  • ಭಾರತದ ಅಂತಸತ್ವ ಅಡಗಿರುವುದು 'ಆಧ್ಯಾತ್ಮ' ಹಾಗು 'ಧರ್ಮ'ದ ಅಡಿಯಲ್ಲಿ.
  • ಎಲ್ಲಾ ದೇಶಕ್ಕು ಕೆಲವು ಸಿದ್ಧಾಂತವಿರುತ್ತದೆ ಹಾಗೆ, ಭಾರತದ ಸಿದ್ಧಾಂತ ಅಡಗಿರುವುದು 'ಧರ್ಮ'ದಲ್ಲಿ.
ಹಾಗೆ ವಿಶ್ಲೇಷಿಸಿ ನೋಡುವುದಾದರೆ ಭಾರತದಲ್ಲಿ, 'ಧರ್ಮ' ಎಂಬ ಪದಕ್ಕೆ 'ದೇಶ' ಎಂಬ ಅರ್ಥವೂ ಬರುತ್ತದೆ. ಇದರ ಅಡಿಯಲ್ಲಿ ಈತ 'ದೇಶದ್ರೋಹಿ' ಹಾಗು 'ಧರ್ಮದ್ರೋಹಿ' ಎಂದು ನಾನು ಧೈರ್ಯವಾಗಿ ಹೇಳುತ್ತೇನೆ .

ಈತನ ಮಾತಿನ ಹಿನ್ನಲೆಗೆ ಬರೋಣ.
'ಅಸಹಿಶ್ಣುತೆ' ಎಂಬುದು ಒಬ್ಬ ವ್ಯಕ್ತಿಯ ಕುರಿತಾಗಿಯೋ ಅಥವಾ ದೇಶದ ಪರಿಸ್ಥಿತಿಯೋ ತಿಳಿಯದಾಗಿದೆ. ನನಗನ್ನಿಸುವ ಪ್ರಕಾರ ಪ್ರಧಾನ ಮಂತ್ರಿಯಾದ ಸನ್ಮಾನ್ಯ ನರೇಂದ್ರ ಮೋದಿಯ ವಿರುದ್ಧವಾಗಿ ಈ 'ಅಸಹಿಶ್ಣುತೆ ' ಪದವನ್ನು ಬಳಸಿದ್ದಾನೆ. ಒಬ್ಬ ವ್ಯಕ್ತಿಯನ್ನು ವಿರೋಧ ಮಾಡಲು ದೇಶದ ಬಗ್ಗೆ ಮಾತಡುವುದು ಎಷ್ಟರ ಮಟ್ಟಿಗೆ ಸರಿ? ನಾನು ಹೀಗೆ ಹೇಳಲು ಕಾರಣ ನಾನು ಮೋದಿ ಪರ ಎನ್ನುವುದಲ್ಲ. ಕಾರಣಗಳನ್ನು ಕೆಳಗಿನ ವಾಕ್ಯಗಳಲ್ಲಿ ತಿಳಿಸ ಬಯಸುತ್ತೇನೆ.

ಈತ ವಾಸ ಮಾಡುವ ಮುಂಬೈನ ಘಟನೆಗಳನ್ನು ಮೆಲಕು ಹಾಕೋಣ
  • 1993 Serial Blast
  • 2003 Train Attacks
  • 2006 Serial Train Blast
  • 2008 Taj Hotel Attack





ಈ ಎಲ್ಲ ಘಟನೆಗಳು ನಡೆದಾಗ ಎಲ್ಲಿ ಅಡಗಿತ್ತು ಇವನ 'ಅಸಹಿಶ್ಣುತೆ'ಯ ಕೂಗು? ಆಗ, ಈತನಿಗೆ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಬರಲಿಲ್ಲವೇ? ಇಷ್ಟೆಲ್ಲ ಆದಾಗ ದೇಶ ಬಿಟ್ಟು ಹೋಗಬೇಕು ಎನ್ನಿಸಲ್ಲಿಲ್ಲವೇ? ಆಗ, ಇವನ ಬುದ್ಧಿ ಕತ್ತೆ ಹಲ್ಲು ಉಜ್ಜುತ್ತಿತ್ತೇ?

'ಯಾಕುಬ್' ಅಂತಹ ಭಯೋತ್ಪಾದಕನನ್ನು ನೇಣಿಗೆ ಹಾಕಿದಾಗ 'ನೇಣು ಶಿಕ್ಷೆ' ಹಾಗು 'ಮಾನವ ಹಕ್ಕು'ಗಳ ಬಗ್ಗೆ ಸಲ್ಮಾನ್ ಖಾನ್ ಮಾತಾಡುತ್ತಾನೆ. ಭಯೋತ್ಪಾದಕನೊಬ್ಬನ ಪರವಾಗಿ ಮಾತಾಡುವವನ ವಿರುದ್ಧ ಯಾಕೆ ಈತನ ಮಾತು ಬರುವುದಿಲ್ಲ? 'ಯಾಕುಬ್'ನ ಅಂತ್ಯಕ್ರಿಯೆ ಸಮಯದಲ್ಲಿ ಇದ್ದ ಜನ (ಭಯೋತ್ಪಾದಕರಿರಬಹುದು) ಸಂಖ್ಯೆ ನೋಡಿ ನನಗೆ ಗಾಬರಿ ಆಯಿತು. ಅಂದು 'ಡಾ. ಕಲಾಮ್'ರ ಅಂತ್ಯಕ್ರಿಯೆ ಕೂಡ ಇತ್ತು. ಆಗ ಈತನ 'ಅಸಹಿಶ್ಣುತೆ' ಕೂಗು ಎಲ್ಲಿ ಹೋಗಿತ್ತು? ಇತನೇನು ಮಣ್ಣು ತಿನ್ನುತ್ತಿದ್ದನೆ?


ನಮ್ಮ ದೇಶವನ್ನು ಇಷ್ಟು ವರ್ಷ ಆಳಿದ (ಹಾಳು ಮಾಡಿದ) 'ಕಾಂಗ್ರೇಸ್'ಗೆ 'ಮೋದಿ'ಯ ವೀಸಾ ವಿಚಾರವಾಗಿ ಪತ್ರ ಬರೆದವರ ಪಟ್ಟಿಯಲ್ಲಿ ಇತನ ಹೆಸರೇ ಮೊದಲು. ಶ್ರೀ ನರೇಂದ್ರ ಮೋದಿಯವರು ಗುಜ್ರಾತ್ ಹತ್ಯಾಕಂಡದ ವಿಚಾರದಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ತಿಳಿದಿದೆ
(ಇಲ್ಲವಾದಲ್ಲಿ ತಿಳಿಯಿರಿ: India Today Report).

ಆಗ ಮಾತ್ರ ಈತ ಅಗ್ರಣಿಯಲ್ಲಿ ಯಾಕೆ ಬಂದ?


'Better late than never' ಎನ್ನುವ ಬದಲು 'Nothing is better than Nonsense' ಎನ್ನುವುದು ಈತನ ವಿಚಾರದಲ್ಲಿ ಹೆಚ್ಚು ಸಮಂಜಸ.

PK:
ಈ ಚಿತ್ರದಲ್ಲಿ ತಪಸ್ವಿ ಮಹರಾಜ್ (ಸೌರಭ್ ಶುಕ್ಲ) ಪಾತ್ರವನ್ನು ದೇವರನ್ನು ದರ್ಶಿಸುವ ವಿಚಾರದಲ್ಲಿ ತಪ್ಪು (ಅವಹೇಳನ) ಎಂದು ಬಿಂಬಿಸುತ್ತಾರೆ. ಇವರಿಗೆ ಭಾರತದಲ್ಲಿ ಆಧ್ಯಾತ್ಮದ ಔನತ್ಯ ಸಾಧಿಸಿದ 'ಶ್ರೀ ರಾಮಕೃಷ್ಣ ಪರಮಹಂಸ'ರ ಬಗ್ಗೆ ತಿಳಿದಿರಲಿಲ್ಲವೇ?

ಚಿತ್ರದ ನಿರ್ದೇಶಕ: ರಾಜಕುಮಾರ್ ಹೇಳುವಂತೆ 'ಪಿ.ಕೆ ಒಂದು ಹಿಂದು ಧರ್ಮದ ಬಗ್ಗೆ ವಿಡಂಬನಾತ್ಮಕ ಚಿತ್ರ' (ನೋಡಿ: PK Film). ಇಂತಹ ಚಿತ್ರ ಮಾಡಿದ ಮೇಲು ಇನ್ನು ಜೀವಂತವಾಗಿರುವುದೇ ಭಾರತದ 'ಸಹಿಶ್ಣುತೆ'ಯ ಸಂಕೇತ. ಎಲ್ಲರೂ ಹೇಳುವಂತೆ, ಇಸ್ಲಾಂ ಧರ್ಮದ (ಈತ ಮುಸಲ್ಮಾನ ಆದ್ದರಿಂದ) ಕುರಿತಂತೆ ಇಂತಹ ಒಂದು ಚಿತ್ರ ಮಾಡಿ (ಹಾಗೆ ಮಾಡುವುದು ಬೇಡ, ಆದರೆ ಮಾತಿಗೆ ಹೇಳುವುದಾದರೆ) ಪಾಕಿಸ್ತಾನದಂತಹ ಹೊರದೇಶಕ್ಕೆ ಒಮ್ಮೆ ಭೇಟಿಕೊಟ್ಟು ಜೀವಂತವಾಗಿ ಬರಲಿ ನೋಡುವ. ಕೆಲವರು ಈ ಚಿತ್ರದ ಬಗ್ಗೆ ಸಮರ್ತಿಸಿಕೊಂಡು ಮಾತಾಡುವವರಿಗೆ ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ (ಅವರಿಗೆ ದೇವರಲ್ಲಿ ನಂಬಿಕೆ ಇದ್ದಲ್ಲಿ (ಹಿಂದು ದೇವರಲ್ಲದ್ದಿದ್ದರೂ ಪರವಾಗಿಲ್ಲ)).

ಆಮೀರ್ ಖಾನರ ಹೆಂಡತಿ ಈ ಮಾತನ್ನು ಹೇಳಿದರು ಆದರೆ, ಆಮೀರ್ ಅಲ್ಲ ಎಂಬುದು ಸತ್ಯ. ಗಂಡ, ಹೆಂಡತಿ, ಮಕ್ಕಳನ್ನು ಒಂದು ಕುಟುಂಬವಾಗಿ ನೋಡುವ ಹಿಂದು ಧರ್ಮ ನಮ್ಮದು. ಯಾರೇ ಈ ಮಾತನ್ನು ಹೇಳಿದರೂ, ಕುಟುಂಬದ ಯಜಮಾನ ಆ ಮಾತಿಗೆ ಜವಾಬ್ದಾರನಾಗಿರುತ್ತಾನೆ. ಆಗಲಿ, ಆಮೀರ್ ಈ ಮಾತನ್ನು ಹೇಳಿಲ್ಲ ಒಪ್ಪಿಕೊಳ್ಳೋಣ. ಆದರೆ, ಸಮಾಜದ ಎದುರಿಗೆ ದೇಶದ ಕುರಿತಾಗಿ ಮಾತಾಡುವ ಮುನ್ನ ಯೋಚಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲವ? ಇರಲಿಕ್ಕಿಲ್ಲ, ಬಹುಶಃ 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂಬ ಗಾದೆ ತಿಳಿದಿಲ್ಲ ಅಂತ ಕಾಣುತ್ತೆ.

ಮುಕ್ತಾಯ:

ಇದು ಸಾಮಾನ್ಯ ಪ್ರಜ್ಞೆ ಇರುವಂತಹ ಬುದ್ದಿವಂತರಿಗೆ ಮಾತ್ರ...!!!
  • ಎಲ್ಲಾ ವಿಚಾರವನ್ನು ಅರ್ಥಮಾಡಿಕೊಂಡು ಇಂತಹ ದೇಶ ದ್ರೋಹಿಗೆ, ದೇಶಬಿಟ್ಟು ಹೋಗಲು ಅಣುವು ಮಾಡಿಕೊಡಬೇಕು.
  • ಆತನ ಸಿನಿಮಾಗಳನ್ನು ಇನ್ನು ಮುಂದೆ ತಯಾರಿಸಲು ಅವಕಾಶವಿರಬಾರದು.
  • ಈವರೆಗು ನಟಿಸಿರುವ ಚಿತ್ರವನ್ನು ನೋಡಬಾರದು
  • ಆತನು ಪ್ರಚಾರ ಮಾಡುವ ವಸ್ತುಗಳನ್ನು ಭಹಿಷ್ಕರಿಸಬೇಕು.
  • ದೇಶದ ವಿಚಾರವಾದ್ದರಿಂದ ಆತನ್ನನ್ನೆ (ಕುಟುಂಬ ಸಮೇತ) ಭಹಿಷ್ಕರಿಸಬೇಕು.
'ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ' ಎಂಬ ಗಾದೆ ಇಲ್ಲಿ ಪ್ರಸ್ತಾಪಿಸುವುದು ಸೂಕ್ತ ಎನ್ನಿಸುತ್ತದೆ. 'ನೀನೊಬ್ಬ ಬದಲಾಗು, ಜಗತ್ತಿನಲ್ಲಿರುವ ಮೂರ್ಖರಲ್ಲಿ ಒಂದು ಸಂಖ್ಯೆ ಕಮ್ಮಿಯಾಗುತ್ತದೆ' ಎಂಬ ವಿವೇಕಾನಂದರ ಮಾತು ನೆನಪಿಗೆ ಬರುತ್ತಿದೆ.

ಮೇಲೆ ತಿಳಿಸಿದಂತೆ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀ ಉಪೇಂದ್ರ ರವರು ಹೇಳುವಂತೆ ಇದು 'ಬುದ್ಧಿವಂತರಿಗೆ ಮಾತ್ರ', 'ತಲೆ ಇಲ್ಲದವರಿಗಲ್ಲ'. ನನ್ನ ಮಾತಿನಲ್ಲಿ ಹೇಳುವುದಾದರೆ 'ಅತೀ ಬುದ್ಧಿವಂತರಿಗಲ್ಲ'

ಈ ಎಲ್ಲಾ ಜಂಜಡಗಳಿಂದ ಮುಕ್ತವಾಗಿ, ಇಂತಹ ದ್ರೋಹಿಗಳು ದೇಶದಿಂದ ತೊಲಗಿ, ಇಂತಹವರನ್ನು ಬೆಂಬಲಿಸುವ ದ್ರೋಹಿಗಳು ನಿರ್ನಾಮವಾಗಿ ಭಾರತ ಮತ್ತಷ್ಟು ಭವ್ಯವಾಗಿ ಬೆಳೆಯಲಿ. ಭಾರತ 'ವಿಶ್ವಗುರು' ಪಟ್ಟದಲ್ಲಿ ವಿರಾಜಮಾನವಾಗಿ ಅಲಂಕೃತ ಎಂಬುದು ನನ್ನ ಮನದಾಳದ ಹಾರೈಕೆ.

October 19, 2015

LOC ಸಾಹಸ ಯಾತ್ರೆ

ಕೊನೆಗೂ ಆ ದಿನ ಬಂದೇ ಬಂದ್ದುಬಿಟ್ಟಿತ್ತು, ಅಂದು 01 Oct 2015. ಯುವಾ ಬ್ರಿಗೇಡ್ ಆಯೋಜಿಸಿದ್ದ 'LOC ಸಾಹಸ ಯಾತ್ರೆ'ಗೆ ಹೊರಡುವ ದಿನ ಬಂದ್ದೇಬಿಟ್ಟಿತು. ಹೊರಡುವ  3-4ಗಳ ಹಿಂದಿನಿಂದ ನಾನಂತೂ ತುಂಬ ಉತ್ಸುಕನಾಗಿದ್ದೆ. ರಾತ್ರಿ ಮಲಗುವಾಗ ಅನ್ನುವುದಕ್ಕಿಂತ ದಿನವಿಡಿ ಯಾತ್ರೆ ಹೇಗಿರಬಹುದು ಎಂಬುದರ ಬಗ್ಗೆಯೆ ಯೋಚಿಸುತ್ತಿದ್ದೆ. ಯಾತ್ರೆಗಿಂತಲೂ ಮಿಗಿಲಾಗಿ 'ಚಕ್ರವರ್ತಿ' ಅಣ್ಣ ನಮ್ಮೊಂದಿಗೆ ಬರುತ್ತಾರೆ ಎಂಬುದು ಹೆಚ್ಚು ಖುಷಿ ತರುತ್ತಿದ್ದ ವಿಚಾರ. ಹಿಂದಿನ ದಿವಸ ಆಫೀಸಿನಿಂದ ಬೇಗ ಬಂದು ಹೊರಡಲು ತಯಾರಿ ಮಾಡಿಕೊಂಡೆ. ಹೇಳಬೇಕಾಗಿಲ್ಲ ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ...!!!

The Logo

ಅಂದು ಮಧ್ಯಾಹ್ನ 1:40 ಕ್ಕೆ ರೈಲನ್ನು ಹತ್ತುವ ಮೂಲಕ ನಮ್ಮ ಯಾತ್ರೆ ಶುರುವಾಯಿತು. ಮೊದಲು ಮೊಳಗಿತು 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆ. ನಮ್ಮ ಬೋಗಿಯಲ್ಲಿ ಭೈರವಿ (ನನ್ನ ಚಿಕ್ಕಮ್ಮನ ಮಗಳು) ಶಾಲೆಯ ಮಕ್ಕಳು ಇದ್ದರು. ಆ ಮಕ್ಕಳು ಇದ್ದಿದ್ದರಿಂದ ನಮಗೂ ಪ್ರಯಾಣ ಬೇಸರವಾಗಲಿಲ್ಲ. ಇದಕ್ಕಾಗಿ ಆ ಮಕ್ಕಳಿಗೆ ಧನ್ಯವಾದಗಳು. ರೈಲಿನಲ್ಲಿ 'ಸ್ವಚ್ಚ ಭಾರತ ಅಭಿಯಾನ' ಮಾಡಲಾಯಿತು. ಹಾಡುಗಳೊಂದಿಗೆ ಮಕ್ಕಳ ಜೊತೆಗೂಡಿದೆವು. ಸಾವರ್ಕರ್ ಮತ್ತು ಮದನ್ ಲಾಲ್ ಧಿಂಗ್ರನ ನಾಟಕ ಮಾಡಿದೆವು. ಬರೋಬ್ಬರಿ 48 ಗಂಟೆಗಳ ಪಯಣ ಸುಗಮವಾಗಿ ಮುಗಿದಿತ್ತು. ಎಲ್ಲರೂ ದೆಹಲಿ ತಲುಪಿದೆವು. ಮತ್ತೆ 1 ದಿನದಲ್ಲಿ ಶ್ರೀನಗರ ತಲುಪಿದೆವು. ಅಲ್ಲಿ ಸಿಕ್ಕಿದರು ನಮಗೆ 'ಚಕ್ರವರ್ತಿ' ಅಣ್ಣ. ದಿನಚರಿಯಂತೆ ಹೇಳುವುದಕ್ಕಿಂತ ನೋಡಿದ ಸ್ಥಳಗಳ ಹಾಗು ಅಲ್ಲಿ ನನಗಾದ ಅನುಭವವನ್ನು ತಿಳಿಸಲು ಇಷ್ಟಪಡುತ್ತೇನೆ.
 
ಜಮ್ಮು ಮತ್ತು ಕಾಶ್ಮೀರ
ಭಾರತದ ಶಿರ ಎಂದು ಕರೆಯಲ್ಪಡುವ ಈ ಭೂಭಾಗವನ್ನು 'ಭೂ ಲೋಕದ ಸ್ವರ್ಗ' ಎಂದು ಕರೆಯಬಹುದು. ಆಹ, ಆ ಪರ್ವತ ಶ್ರೇಣಿಗಳು, ಕಣ್ಣು ಹಾಯಿಸದಲ್ಲೆಲ್ಲ ನದಿ, ಬೆಟ್ಟ. ಆ ಬೆಟ್ಟಗಳು ಭಯಂಕರವೂ ಹೌದು, ರಮಣೀಯವೂ ಹೌದು ಮತ್ತು ವರ್ಣಾತೀತವೂ ಹೌದು. ಕಣ್ಣಿಗಂತು ಹಬ್ಬವೇ ಹಬ್ಬ. ಶ್ರೀನಗರದ ಆ ಉದ್ಯಾನವನಗಳನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಅಣ್ಣ ಹೇಳಿದಂತೆ ಬೆಂಗಳೂರಿಗಿಂತ ಶ್ರೀನಗರಕ್ಕೆ 'ಉದ್ಯಾನ ನಗರ' ಎಂದು ಹೆಚ್ಚು ಸೂಕ್ತವೆನ್ನಿಸುತ್ತದೆ.

ಶಂಕರಾಚಾರ್ಯಯರ ಪೀಠ ಕೂಡ ಸುಂದರವಾಗಿತ್ತು. ಅಲ್ಲಿ, ಅಣ್ಣ ಆಚಾರ್ಯರು ಬರೆದಿರುವ ಶ್ಲೋಕವನ್ನು ಅರ್ಥಗರ್ಭಿತವಾಗಿ ಹೇಳಿಕೊಟ್ಟರು. ಭಕ್ತಿ ಎಂಬುದು ನನಗರಿವಿಲ್ಲದಂತೆ ಮನಸ್ಸನ್ನು ತುಂಬಿಕೊಂಡಿತು. ಆ ಸ್ಥಳದ ಮಹತ್ವನವನ್ನು ತಿಳಿದುಕೊಂಡೆವು. ಆ ಪೀಠದ ಮೇಲೆ ನಿಂತು ನೋಡಿದಾಗ ಇಡೀ ಶ್ರೀನಗರವನ್ನು ನೋಡಿದ ಹಾಗಾಯಿತು.

ದಾಲ್ ಸರೋವರ
ಇಲ್ಲಿ ದೋಣಿ ವಿಹಾರ ಮಾಡಿದೆವು. ಬೆಟ್ಟಗಳ ನಡುವಿನಲ್ಲಿ, ನೀರಿನ ಮಧ್ಯದ್ದಲ್ಲಿ ಮನಸ್ಸಿಗೆ ನೆಮ್ಮದಿಯ ಅನುಭವವಾಯಿತು. ತಿಳಿ ನೀರಿನಲ್ಲಿ ಕೈ ಆಡಿ ಸುತ್ತ ಇದ್ದೇವು. ಎಲ್ಲರೂ ತಮ್ಮದೇ ಆದ ಲೋಕದಲ್ಲಿ ಮೈ ಮರೆತ್ತಿದ್ದರು. ಹಲವರು ಫೋಟೊ ತೆಗೆಯುವುದರಲ್ಲಿ ತಲ್ಲೀನವಾಗಿದ್ದರು. ಸೂರ್ಯಾಸ್ತವಂತೂ ತುಂಬ ಕಾವ್ಯಮಯವಾಗಿತ್ತು. ಕವಿಗಳಿಗೆ ಸ್ಪೂರ್ತಿದಾಯಕ ಸ್ಥಳ ಎಂದನ್ನಿಸಿತು.
 
ಖೀರ್ ಭವಾನಿ ದೇವಸ್ಥಾನ
ಇದು ಕಾಶ್ಮೀರದಲ್ಲಿರುವ ಒಂದು ಹಿಂದು ದೇವಾಲಯ. ಇಲ್ಲಿಗೆ ಬಂದಿದ್ದು ನಮ್ಮ ಪ್ರವಾಸದ ಕಡೆಯ ದಿನಗಳಲ್ಲಿ. ಯಾರೊ 'ಗೋರಿಪಾಳ್ಯದಿಂದ ಬಸವನಗುಡಿಗೆ ಬಂದಹಾಗಾಯಿತು' ಎಂದರು.  ಅ ದೇವಾಲಯ ನೋಡಲು ಸಾಧಾರಣವಾಗಿ ಇತ್ತು. ಅಂತಹ ವಿಶೇಷವಾಗಿರಲಿಲ್ಲ. ಆದರೆ ಅಲ್ಲಿ ಮರಗಳ ಸಮೂಹವಿದೆ. ಅಲ್ಲಿ ಕತ್ತೆತ್ತು ನೋಡಿದಾಗ ಭಾರತ ಕಾಣಿಸುತ್ತದೆ. ಇದನ್ನು Facebook ಅಲ್ಲಿ ನೋಡಿದ್ದೆ, ಈಗ ಕಣ್ಣಾರೆ ನೋಡುವ ಭಾಗ್ಯ ಸಿಕ್ಕಿತು. ಭಾರತ ದರ್ಶನವಾದಂತಾಯಿತು. ಆ ದೇವಾಲಯದ ಹಿನ್ನಲೆಯನ್ನು ಅಣ್ಣ ನಮಗೆ ತಿಳಿಸಿಕೊಟ್ಟರು.
 
ಅಷ್ಟರಲ್ಲಿ, ಮುಸಲ್ಮಾನರ 'ಅಲ್ಲಾ ಹೋ...' ಶುರುವಾಯಿತು. ಅದೇ ಸಮಯಕ್ಕೆ ದೇವಾಲಯದಲ್ಲಿ 'ಓಂ' ಶುರುವಾಯಿತು. ಅದು ವಿಶೇಷವಾಗಿತ್ತು. ಇದೆಲ್ಲಕ್ಕಿಂತ ವಿಶೇಷ ಆ ಜಾಗದಲ್ಲಿ 'ಸ್ವಾಮೀ ವಿವೇಕಾನಂದ'ರು ತಮ್ಮ ಕೊನೆಯ ಕೆಲವು ದಿನಗಳು ಅಲ್ಲಿ ಕಳೆದಿದ್ದರು ಎಂಬುದು. ಈ ಪ್ರದೇಶದಲ್ಲಿ ಸೈನಿಕರನ್ನು ಕಂಡರೆ ಕಲ್ಲು ಹೊಡೆಯುತ್ತಾರೆ ಎಂದು ಕೇಳಿದ್ದೆ. ಈ ದೇವಾಲಯವೊಂದು ಸೈನಿಕರ ಬೇಸ್ ಕ್ಯಾಂಪ್. ದೇವಾಲಯಕ್ಕೆ ಸೈನಿಕರು ಕಾವಲು, ಸೈನ್ಯಕ್ಕೆ ದೈವ ಕಾವಲು. ಇದನ್ನೆ 'ಧರ್ಮೋ ರಕ್ಷತಿ ರಕ್ಷಿತಃ' ಎನ್ನುವುದು ಎಂದು ಅಣ್ಣ ನಮಗೆ ತಿಳಿಸಿಕೊಟ್ಟರು. 
 
ಕಾರ್ಗಿಲ್
ಯುದ್ಧ ಭುಮಿಯಲ್ಲಿ ನಿಲ್ಲುವುದೇ ಒಂದು ಪುಣ್ಯ. 'ಚಕ್ರವರ್ತಿ' ಅಣ್ಣನ ಮಾತುಗಳಲ್ಲಿ ಕಾರ್ಗಿಲ್ ಯುದ್ಧದ ಬಗ್ಗೆ ಹೇಳುವುದನ್ನು ಕೇಳಿದ್ದೆ, ಈಗ, ಆ ಜಾಗದಲ್ಲಿ ನಿಂತಾಗ ಆ ಘಟನೆಗಳು ನನ್ನ ಕಣ್ಮುಂದೆ ಬಂದವು. ಆ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕಾಗುವುದಿಲ್ಲ, ಅನುಭವಿಸಬೇಕಷ್ಟೆ. ಅಲ್ಲಿ ಸೈನಿಕನೊಬ್ಬ ಕಾರ್ಗಿಲ್ ಯುದ್ಧದ ಘಟನೆಗಳನ್ನು ವರ್ಣನೆ ಮಾಡಿದಾಗ ಬಹುತೇಕ ಮಂದಿಯ ಕಣ್ಣು ತೇವವಾಗಿತ್ತು. ಒಂದು ಕ್ಷಣದಲ್ಲಿ 'ವಿಕ್ರಂ ಬಾತ್ರ, ಮನೋಜ್ ಕುಮಾರ ಪಾಂಡೆ, ಯೋಗಿಂದರ್ ಸಿಂಗ್, ಸೌರಭ್ ಕಾಲಿಯ, ಅಜಯ್ ಅಹುಜ, ಸಂಜಯ್ ಕುಮಾರ್' ಮತ್ತಿತರು ಕಣ್ಮುಂದೆ ಹಾದು ಹೋದರು. ನಾನು ರೈಲಿನಲ್ಲಿ ಅಣ್ಣನ 'ಕಾರ್ಗಿಲ್ ಕದನ ಕಥನ' ಓದುತ್ತಾ ಬಂದೆ. ಅದು ಕೂಡ ನನ್ನ ಭಾವನೆಗಳು ಉಕ್ಕುವುದಕ್ಕೆ ಪೂರಕವಾಗಿತ್ತು.




ಖಾರ್ದುಂಗ್ಲ ಪಾಸ್
ಇದು ಜಗತ್ತಿನಲ್ಲಿ ಅತೀ ಎತ್ತರವಾದ ಗಾಡಿ ಓಡಿಸಬಹುದಾದ ಜಾಗ (18264 ಅಡಿ). ಇಲ್ಲಿಗೆ ಹೋಗಿ ಬರುವುದು ಎಂದರೆ ಎರಡೆರಡು ಜನ್ಮ ಪಡೆದಂತೆ. ಅಲ್ಲಿ ಆಮ್ಲ ಜನಕ ಕಡಿಮೆ, ನಮಗಂತೂ ಉಸಿರಾಟವೇ ಕಷ್ಟವಾಯಿತು. ಅಲ್ಲಿದ್ದ ಸೈನಿಕರೊಬ್ಬರು ಬಂದು ನಮಗೆ ಬೇಗ ಅಲ್ಲಿಂದ ಹೊರಡಲು ಹೇಳಿದರು. ಆಗ ನನಗನ್ನಿಸಿತು 'ನಮಗೆ ಅರ್ಧ ತಾಸು ಇರುವುದು ಕಷ್ಟ. ಇನ್ನು ಅಲ್ಲಿ ಕಾವಲು ಕಾಯುವುದು ಮತ್ತು ಅದಕ್ಕಿಂತ ಕಠಿಣವಾದ ಪ್ರದೇಶ ಸಿಯಾಚಿನಲ್ಲಿ ಯುದ್ಧ ಮಾಡುವುದು ಹೇಗಪ್ಪ?' ಎಂದು. ಈ ಕಾರಣಕ್ಕಾಗಿ ಭಾರತದ ಸೈನಿಕರಿಗೆ ನನ್ನ ಮನಸ್ಪೂರಕವಾದ ಧನ್ಯವಾದಗಳು. ಅವರನ್ನು ನೆನೆದಾಗಲೆಲ್ಲ ನನ್ನ ಕಣ್ಣು ತೇವವಾಗುತ್ತದೆ. ಇಲ್ಲಿಂದಲೇ ಅವರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.



ಆರ್ಮಿ ಬೇಸ್ ಕ್ಯಾಂಪ್
ನಾವು ಕಾರ್ಗಿಲ್ ಹಾಗು ಲಡಾಕ್ ನಲ್ಲಿ 3 ಬೇಸ್ ಕ್ಯಾಂಪ್ ಗಳಿಗೆ ಬೇಟಿ ಕೊಟ್ಟಿದೆವು. ಇದರ ಜೊತೆಗೆ 'ಅಮನ್ ಕಮಾನ್ ಸೇತು' ಗೆ ಹೋಗಿದ್ದೆವು.

ಅಮನ್ ಕಮನ್ ಸೇತು ಎಂಬುದು 'ಭಾರತ' ಮತ್ತು 'ಪಿ.ಒ.ಕೆ' ನಡುವಿನ ಸೇತು. ಅಲ್ಲಿ ಪಾಕೀಸ್ತಾನದ ಸೈನಿಕರು ನಮ್ಮನ್ನು ಗಮನಿಸುತ್ತಿದ್ದರು. ಅಲ್ಲಿ ನಮ್ಮ ಪಾಕೀಸ್ತಾನದ ನಡುವೆ ನಡೆಯುವ ವ್ಯಾಪಾರವನ್ನು ನೋಡುವ ಭಾಗ್ಯ ನಮ್ಮದಾಯಿತು. ಅಲ್ಲಿಂದ ಬಂದ ಲಾರಿಗಳನ್ನು ನೋಡಿದರೆ ಜಾತ್ರೆ ಲಾರಿ ನೋಡಿದ ಹಾಗಾಯಿತು.

ಧೃವ ಎಂಬ ಹೇಲಿಕಾಪ್ಟರ್ ನಲ್ಲಿ ನಮ್ಮನ್ನು ಕೂರಿಸಿ ಅದರ ಕಾರ್ಯಾಚರಣೆಯನ್ನು ನಮಗೆ ತಿಳಿಸಿಕೊಟ್ಟರು. ಅಲ್ಲಿ ಸೈನಿಕರಿಂದ ಸಿಕ್ಕ ಸ್ವಾಗತ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಅವರ ಪ್ರೀತಿ ಹಾಗು ನಮ್ಮನ್ನು ತಬ್ಬಿಕೊಂಡಾಗ ಆಗ ಆನಂದ ಮತ್ತೆಂದು ಅನುಭವಿಸಲು ಸಾಧ್ಯವಿಲ್ಲ...!!! ಅವರೊಂದಿಗೆ ಮಾತಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದೆ ಹೇಳಬೇಕು.



ಚಕ್ರವರ್ತಿ ಅಣ್ಣನ ಬೈಠಕ್...
ಅಣ್ಣನ ಮಾತುಗಳು ಒಂದು ಗ್ರಂಥವೇ ಸರಿ. ಅವರು ಹೇಳಿಕೊಟ್ಟ ವಿಚಾರಗಳು ಒಂದು ಪಠ್ಯ ಪುಸ್ತಕ ಓದಿದಂತಾಯಿತು. ಕೆಲವು ಪ್ರಶ್ನೆಗಳು ಕೇಳಿದೆ, ಅಣ್ಣನಿಂದ ಸಮರ್ಥವಾದ ಉತ್ತರವೂ ಸಿಕ್ಕಿತು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು ಎಂದು 1008 'ರಾಮ ನಾಮ' ಜಪ ಮಾಡಿದೆವು. ಅದಕ್ಕು ಮುಂಚೆ ಎಲ್ಲರೂ 'ಓಂಕಾರ' ಹೇಳಿದೆವು. ಅಲ್ಲೊಂದು ಅದ್ಭುತ ಲೋಕ ಸೃಷ್ಟಿಯಾಗಿತ್ತು. ಸಿಂಧು ನದಿ ಕೂಡ ಭಾರತಕ್ಕೆ ಸೇರಲೇಂದು ಆ ನದಿಯ ದಡದಲ್ಲಿ ಪೂಜೆ ಮಾಡಿದೆವು. ಪವಿತ್ರವಾದ ಸಿಂಧು ನದಿಯ ನೀರನ್ನು ತೆಗೆದುಕೊಂಡು ಬಂದೆ ತೀರ್ಥವೆಂದು ಸೇವಿಸಲು. ಇಡೀ ಯಾತ್ರೆಗೆ ಒಂದು ಧಾರ್ಮಿಕ ನೆಲೆಗಟ್ಟು ಮೂಡಲು ಅಣ್ಣನ ಸಾನಿಧ್ಯ ಕಾರಣವಾಗಿತ್ತು.

ಇದರೊಂದಿಗೆ ಕಾಶ್ಮೀರ ನೆಲದ ಕಾವು ನಮಗೆ ತಿಳಿಯಿತು. ನಾವು ಹೋಗಿದ್ದ 'Winger ಮತ್ತು Tempo traveler' ಅನ್ನು ಸುಟ್ಟುಹಾಕಿದ್ದರು. ಅದನ್ನು ನೋಡಿ ಅಲ್ಲಿನ ಜನ ಜೀವನ ಅರ್ಥವಾಯಿತು. ಅಲ್ಲಿನ ಭೀಕರತೆ ನಮಗೆ ಅರ್ಥವಾಯಿತು.



 
ಒಂದೇ ಮಾತಿನಲ್ಲಿ ಹೇಳಬೇಕಾದರೆ ಈ ಯಾತ್ರೆಗೆ ಹೋಗಿ ಬಂದ್ದಿದ್ದು ಹಲವು ಜನ್ಮಗಳ ಪುಣ್ಯ. ನಾನು ಪುಣ್ಯ ಮಾಡಿದ್ದೇನೆ ಎಂಬುದು ಖಾತ್ರಿಯಾಯಿತು. ಭಾರತದ ಕೋಟ್ಯಾಂತರ ಜನಗಳ ನಡುವೆ ಈ ಯಾತ್ರ ಮಾಡಿದ ನಾವು 104 ಜನರು ಪುಣ್ಯವಂತರೆ ಸರಿ. ಹೋಗಬೇಕಾದರೆ 'India Gate' ನೋಡಿದೆವು. ವಾಪಸ್ಸು ಬರಬೇಕಾದರೆ ದೆಹಲಿಯಲ್ಲಿ 1 ದಿನ ಸಮಯವಿತ್ತು. ನಾವು ಆಗ್ರ ಮತ್ತು ಮಥುರ ಗೆ ಹೋಗಿ ಬಂದೆವು. ತಾಜ್ ಮಹಲ್, India gate ಎಲ್ಲ ನೀರಸ ಎನ್ನಿಸಿತು. ಸೈನಿಕರ ಜೀವನದ ಮೌಲ್ಯಕ್ಕೂ ಈ ಕಟ್ಟಡಕ್ಕೂ ಹೋಲಿಕೆ ಮಾಡುವುದೇ ಸರಿ ಇಲ್ಲ. ಸೈನಿಕನ ಜೀವನ ದೈವತ್ವಕ್ಕೆ ಸಮಾನವಾದುದು.

ಸೈನಿಕನಿಗೊಂದು ಸಲಾಮ್... ಭಾರತ್ ಮಾತಾ ಕೀ ಜೈ... ವಂದೇ ಮಾತರಂ...

September 20, 2015

ನಾವ್ಯಾಕೆ ಹೀಗೆ...? - ಸುತ್ತಮತ್ತಲಿನ ಜನ

ಇತ್ತೀಚೆಗೆ ನಮ್ಮ ಸುತ್ತಮತ್ತಲಿನ ಜನಗಳ, ನಮ್ಮ ಸಂಬಂಧಿಕರ ಮತ್ತು ನನ್ನ ಸ್ನೇಹಿತರ ಜೀವನದ ಕ್ರಮಗಳನ್ನು, ಅವರುಗಳ ಗುಣ ಸ್ವಭಾವವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇವರಲ್ಲಿ ನನ್ನ ವಯ್ಯಸ್ಸಿನವರು, ಹಿರಿಯರು, ಕಿರಿಯರು ಎಲ್ಲ ವಯೋಮಾನದವರು ಸೇರಿದ್ದಾರೆ. ಗಮನಿಸಿದಂತ್ತೆಲ್ಲ ಹಲವು ವಿಚಾರಗಳು ತಿಳಿಯುತ್ತಾ ಹೋಯಿತು. ಈ ಕೆಲವು ವಿಚಾರಗಳು ಎಲ್ಲರಿಗೂ ಅನ್ವಯಿಸುತ್ತದೆ ಅಂತ ಆಲ್ಲ ಆದರೆ ಬಹುತೇಕ ಜನಗಳಲ್ಲಿ ನಾ ಹೇಳುವ ವಿಚಾರಗಳು ಕಂಡುಬರುತ್ತದೆ. ಇದರಲ್ಲಿ ಕೆಲವು ನನಗೂ ಅನ್ವಯಿಸುತ್ತದೆ.
  • ವಯಸ್ಸಾದಂತ್ತೆಲ್ಲ ವಿವೇಕ ಹೆಚ್ಚಾಗಬೇಕು, ಆದರೆ ನಾ ಕಂಡಂತೆ ಅದು ಕ್ಷೀಣಿಸುತ್ತಿದೆ.
  • ಸಣ್ಣ ಪುಟ್ಟ ವಿಚಾರಗಳಿಗೆ ವೈಮನಸ್ಯ, ದುಃಖಿತರಾಗುವುದು.
  • ನಾ ಒಬ್ಬ ಚೆನ್ನಾಗಿದ್ದರೆ ಸಾಕು ಅನ್ನುವಂತಹ ಭಾವನೆ. ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ Self Centered.
  • ಹಣ ನಮ್ಮ ಬದುಕಿನ ಎಲ್ಲ ಸುಖಗಳನ್ನು ಪೂರೈಸುತ್ತದೆ ಎಂಬ ಚಿಂತನೆ.
  • ಸತ್ಯವನ್ನು / ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಕೆ.
  • ಸ್ವಾಭಿಮಾನದ ಕೊರತೆ. ಸ್ವಾಭಿಮಾನ ಮತ್ತು ಅಹಂಕಾರ ಗುಣಗಳ ನಡುವಿನ ವ್ಯತ್ಯಾಸದ ತಿಳುವಳಿಕೆಯ ಕೊರತೆ.
ಈ ವಿಚಾರಗಳ ಬಗ್ಗೆ ನನಗೆ ನಾನೆ ಹಲವು ಸಲ ಪ್ರಶ್ನೆ ಕೇಳಿಕೊಂಡಿದ್ದೇನೆ 'ನಾವ್ಯಾಕೆ ಹೀಗೆ?' ಎಂದು. ಕೆಲವು ಉತ್ತರಗಳು ಮನಸ್ಸಿಗೆ ಬಂದಿತಾದರೂ ಯಾವುದು ನನಗೆ ಸಮರ್ಪಕ ಎಂದನ್ನಿಸಲಿಲ್ಲ. ಆ ಉತ್ತರಗಳು ಹೀಗಿವೆ.

ನಾವು ಬೆಳೆದ ವಾತಾವರಣ

ಈ ಉತ್ತರವನ್ನು ಹಲವರು, ಹಲವಾರು ಸಮಸ್ಯೆಗಳಿಗೆ ಕಾರಣವಾಗಿ ಕೊಡುತ್ತಾರೆ. ಆದರೆ ನನಗನ್ನಿಸುವುದು, ಒಂದೇ ಮನೆಯಲ್ಲಿ ಬೆಳೆದ ಮಕ್ಕಳಿಗೆ ಬಿನ್ನ ರೀತಿಯ ವಾತಾವರಣ ಸೃಷ್ಟಿಯಾಗುವುದಾರು ಹೇಗೆ? ಮಕ್ಕಳನ್ನು ಹೆತ್ತ ತಂದೆ ತಾಯಂದಿರು ತಮ್ಮ ಸ್ವಂತ ಮಕ್ಕಳಿಗೆ ಮಲ ತಾಯಿ ಧೊರಣೆ ತೋರಿದರೆ ಇಂತಹ ಸ್ಥಿತಿ ಬರಬಹುದು. ಇದು ಸತ್ಯವಾದರೆ ಬೇಲಿಯೆ ಎದ್ದು ಹೊಲ ಮೇಯ್ದಂತೆ. ಮಾತೃತ್ವವನ್ನೇ ಪ್ರಶ್ನೆ ಮಾಡಿದಂತೆ. ಈ ದಿಕ್ಕಿನಲ್ಲಿ ಯೋಚಿಸುವುದು ಸರಿ ಇಲ್ಲ. ಹಾಗಿದಲ್ಲಿ ಒಂದೆ ಮನೆಯಲ್ಲಿ ಬೆಳೆದ ಮಕ್ಕಳು ಬಿನ್ನ ರೀತಿಯ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವೇನು? ಈ ಪ್ರಶ್ನೆಯನ್ನು ನಾವುಗಳು ಸ್ವಲ್ಪ ಗಂಭಿರವಾಗಿ ಪರಿಗಣಿಸಬೇಕು.  ನನಗಂತು ಇದು ಹೇಗೆ ಸಾಧ್ಯವೆಂದು ಇದುವರೆಗು ಅರ್ಥವಾಗಿಲ್ಲ. ಹಾಗಾಗಿ 'ವಾತಾವರಣ' ಎಂಬ ಕಾರಣವನ್ನು ನಾನಂತು ಒಪ್ಪಿಕೊಳ್ಳಲು ತಯಾರಿಲ್ಲ.

ಶಿಕ್ಷಣದ ಕೊರತೆ

ಇಲ್ಲಿ ನಾ ಹೇಳುವುದು ಭೌತ್ತಿಕವಾದ ಶಿಕ್ಷಣದ ಬಗ್ಗೆ ಅಲ್ಲ ಬದಲಾಗಿ, ಮನೆಯಲ್ಲಿ, ಶಾಲೆಗಳಲ್ಲಿ, ಅಜ್ಜ, ಅಜ್ಜಿಂದಿರ ಮಡಿಲಲ್ಲಿ ಕೊಡಬೇಕಾದ 'ಸಂಸ್ಕಾರ' ಎಂಬುದರ ಬಗ್ಗೆ. ಇವತ್ತಿನ ದಿನಗಳಲ್ಲಿ ಅಪ್ಪ, ಅಮ್ಮ ಕೆಲಸಕ್ಕೆಂದು ಹೋಗುತ್ತಾರೆ. ಮಕ್ಕಳ ಬಗ್ಗೆ ಎಷ್ಟರ ಮಟ್ಟಿಗೆ ಗಮನ ಕೊಡುತ್ತಾರೊ ಗೊತ್ತಿಲ್ಲ.
ಅಜ್ಜ, ಅಜ್ಜಿಯರು ಯಾವುದೋ ಹಳ್ಳಿಯಲ್ಲಿ ಅಥವ ವೃಧ್ದಾಶ್ರಮದಲ್ಲಿ ಇರುತ್ತಾರೆ. ಇನ್ನು ಶಾಲೆಗಳು, ಹಣ ಪಡೆಯುವ ಆದಾಯ ತೆರಿಗೆ ಇಲಾಖೆ ಎಂಬಂತಾಗಿದೆ. ಕೆಲವು ಘಟನೆಗಳನ್ನು ನೆನೆದರಂತೂ ಮಕ್ಕಳನ್ನು ಶಾಲೆಗಳಿಗೆ ಕಳಿಸದಿರುವುದೆ ಲೇಸು ಎನ್ನಿಸುತ್ತದೆ.

ಸ್ವಾರ್ಥ

ನಾನೊಬ್ಬ ಸರಿ ಇದ್ದರಾಯಿತು, ಇತರರು ಏನಾದರು ಪರವಾಗಿಲ್ಲ. ಇಂತಹ ಮಾನಸಿಕ ಸ್ಥಿತಿಯನ್ನು ನಾವು ಸರ್ವೇಸಾಮಾನ್ಯವಾಗಿ ಕಣಬಹುದು. ಇಂತಹ ಚಿಂತನೆಗಳು ಸಮಾಜದ ಮೌಲ್ಯವನ್ನು ಕೆಡಿಸುತ್ತದೆ. ಸರ್ವೇ ಜನಃ ಸುಖಿನೋ ಬವಂತು ಎಂಬ ಅತ್ಯಂತ ದೊಡ್ಡ ವೇದಾಂತ ತತ್ವವನ್ನು ಭಾರತದ ಸನಾತನ ಧರ್ಮ ಪ್ರತಿಪಾದಿಸಿತ್ತು. ಇದನ್ನು ಮರೆತು ಇಂದಿನ ಬಹಿತೇಕ ಜನರು ಬದುಕಿದ್ದಾರೆ. ತ್ಯಾಗದಿಂದ ಮಾತ್ರ ಸಾತ್ಷಾತ್ಕಾರ ಸಾಧ್ಯ ಎಂಬ ಸ್ವಾಮೀ ವಿವೇಕಾನಂದರ ಮಾತು ಎಷ್ಟು ಜನರಿಗೆ ತಿಳಿದಿದೆ ಎಂಬುದೇ ಒಂದು ಪ್ರಶ್ನೆ.

ದುಡ್ಡೇ ದೊಡ್ಡಪ್ಪ!

ಹಣವೊಂದಿದ್ದರೆ ಸಾಕು ಎಲ್ಲವನ್ನು ಕೊಳ್ಳಬಲ್ಲೆ, ಎಲ್ಲರನ್ನು ಆಳಬಲ್ಲೆ ಎಂಬ ಚಿಂತನೆ ಬಹಳಷ್ಟು ಮಂದಿಗೆ ಇದೆ. ಅಂಗ್ಲ ಭಾಷೆಯಲ್ಲಿ ಒಂದು ವಾಕ್ಯವಿದೆ "You can dominate me but not my ideologies". ಯಾರಾದರು ನಮ್ಮನ್ನು ಹತ್ತಿಕ್ಕಬಹುದೇ ಹೊರತು ನಮ್ಮ ಚಿಂತನೆಗಳನ್ನಲ್ಲ.  ನಮ್ಮಲ್ಲಿ ಸ್ವಾಭಿಮಾನವೆಂಬುದು ಧೃಡವಾಗಿ ಜಾಗೃತವಾದರೆ ಬಹುಶಃ ನಮ್ಮನ್ನು ಯಾರು ಹತ್ತಿಕ್ಕಲು ಸಾಧ್ಯವಿಲ್ಲ ಎನ್ನಿಸಿಸುತ್ತದೆ. ಹಣದ ಮದವೇರಿದ್ದರೆ ಯೋಚನಾ ಶಕ್ತಿ ಇರುವುದ್ದುಇಲ್ಲ ಎಂದು ತಿಳಿದಿದ್ದೆ. ಆದರೆ ಕೆಲವರಿಗೆ ಹಣ (ಶಕ್ತಿ) ಇಲ್ಲದ್ದಿದ್ದರು ದರ್ಪ, ಅಹಂಕಾರಕ್ಕೆ ಏನು ಕಮ್ಮಿ ಇಲ್ಲ. ಹಾಗಾಗಿ ಅಹಂಕಾರ ಕೆಲವರ ಹುಟ್ಟು ಗುಣ, ಆದ್ದರಿಂದ ಅಂತಹವರಿಂದ ದೂರವಿರುವುದೇ ಲೇಸು. 'ಅಹಂಕಾರಕ್ಕೆ ಉದಾಸೀನವೆ ಮದ್ದು' ಅಂತಾರಲ್ಲ ಹಾಗೆ.

ಸ್ವಾಭಿಮಾನದ ಕೊರತೆ

ಅನುಕೂಲವಾಗುತ್ತದೆ ಎಂದರೆ ಸಾಕು ಜನರು ತಮ್ಮನ್ನು ತಾವೆ ಮಾರಿಕೊಂಡು ಬಿಡುತ್ತಾರೆ. ಈ ಮಟ್ಟಕ್ಕೆ ನಮ್ಮಲ್ಲಿನ ಸ್ವಾಭಿಮಾನ ಕುಸಿದು ಹೋಗಿದೆ. ನಮ್ಮ ಸಮಾಜನ್ನು ವಿಷದಂತೆ ವ್ಯಾಪಿಸಿಕೊಂಡಿರುವ 'ಬ್ರಷ್ಟಾಚಾರ'ಕ್ಕೆ ಮೂಲ ಕಾರಣ ಸ್ವಾಭಿಮಾನದ ಕೊರತೆ. ಒಬ್ಬರ ಮುಂದೆ ಕೈ ಚಾಚುವುದಕ್ಕೆ ಹೇಗೆ ಸಾಧ್ಯವೋ ನಾ ಕಾಣೆ.ನಾವು ಸಂಪಾದನೆ ಮಾಡಲು ಶುರುಮಾಡಿದ ಮೇಲೆ ಸ್ವತಃ ನಮ್ಮ ತಂದೆ ತಾಯಿಯ ಹತ್ತಿರ ಹಣ ಕೇಳಲು ಹೇಗಾದರು ಮನಸ್ಸು ಬರುತ್ತದೋ? ವರದಕ್ಷಿಣೆ (ಇತ್ತೀಚಿನ ವಧುದಕ್ಷಿಣೆ) - ಇದಂತೂ ಸ್ವಾಭಿಮಾನ ಎಂಬ ಪದದ ಪರಿಚಯವೇ ಇಲ್ಲ ಎಂಬುದಕ್ಕೆ ನಿದರ್ಶನ. ಒಬ್ಬರ ಹತ್ತಿರ ಹಣವನ್ನು ನಮ್ಮ ಕಷ್ಟಕಾಲದಲ್ಲಿ ಸಹಾಯ ಎಂದು ಪಡೆದಾಗ ನಮಗೆ ಆದಾಗ ಹಿಂದಿರುಗಿಸಬೇಕು ಎಂಬ ಕನಿಷ್ಟ ಪ್ರಜ್ಞೆ ಕೂಡ ಇಲ್ಲದಂತಾಗಿದೆ. ಇಂತಹ ಘಟನೆಗಳಿಗೆ ಕಾರಣ ಒಂದೆ, 'ಸ್ವಾಭಿಮಾನದ ಕೊರತೆ'. ಸ್ವಾಮೀ ವಿವೇಕಾನಂದರ ಮಾತು 'ಉತ್ತಿಷ್ಟತ ಜಾಗೃತ' ಎಂಬುದು ಪ್ರಪಂಚದಾದ್ಯಂತ ಹರಡಬೇಕು. ಆಗ ಮಾತ್ರ ಈ ಬವಣೆಗಳಿಂದ ಮುಕ್ತಿ, ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಚಕ್ರವರ್ತಿ ಸೂಲಿಬೆಲೆ ಅಣ್ಣ ಸ್ವಾಭಿಮಾನ ಮತ್ತು ಅಹಂಕಾರಕ್ಕೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಹೇಳಿದ್ದಾರೆ. ಮೇಲುನೋಟಕ್ಕೆ, ಅಹಂಕಾರಿ ಮತ್ತು ಸ್ವಾಭಿಮಾನಿ ಒಂದೇ ತರಹ ಕಾಣಿಸುತ್ತಾರೆ. ಆದರೆ, ಇಬ್ಬರಿಗೂ ಆಂತರ್ಯದಲ್ಲಿ ವ್ಯತ್ಯಾಸವಿರುತ್ತದೆ. ಸ್ವಾಭಿಮಾನಿ ಆಂತರ್ಯ ಬಹಳವಾಗಿ ಬೆಳೆದಿರುತ್ತಾನೆ. ಆಂತರಿಕವಾಗಿ ನೋಡುವ ಪ್ರಯತ್ನ ಮಾಡಬೇಕು ಅಷ್ಟೇ.

ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಕೆ

ನಾವೆಲ್ಲರು ಒಂದು ಮಾತನ್ನು ಕೇಳ್ಳಿದ್ದೇವೆ 'ಸತ್ಯ ಯಾವಾಗಲು ಕಹಿ'. ಕಹಿ ಎಂದರೇನು? ಕಹಿಯೇ ಯಾಕೆ? ಎಂಬ ಪ್ರಶ್ನೆ ಹಲವು ಸಲ ನನ್ನನ್ನು ನಾನೆ ಕೇಳಿಕೊಂಡಿದ್ದೇನೆ. ಕಹಿ ಎಂಬುದು ನಮಗೆ ಸಾಹ್ಯವಿಲ್ಲದಿರುವುದು ಎಂಬುದನ್ನು ಸೂಚಿಸುತ್ತದ್ದೆ. ಸತ್ಯ ಬಹಳಷ್ಟು ಸಲ ನಮಗೆ ಹಿಡಿಸುವುದಿಲ್ಲ ಹಾಗು ನಮ್ಮ ಇಚ್ಚೆಗೆ ವಿರುದ್ಧವಾಗಿರುತ್ತದೆ ಹಾಗಾಗಿ ಇದನ್ನು ಕಹಿ ಎಂದು ಜನ ಕರೆದಿರಬಹುದು. ಉದಾಹರಣೆ ಕೊಡುವುದು ಒಳ್ಳೆಯದು ಎನ್ನಿಸಿತು.

ನಾನು 'ನಾಗರಹಾವು',  'ಹಂಸಗೀತೆ' ಚಲನಚಿತ್ರಗಳನ್ನು ಹಾಗು ಇದರ ಆಧಾರ ಕೃತಿಗಳನನ್ನೂ ಸಹ ಓದಿದ್ದೇನೆ. ಚಿತ್ರಗಳಿಗಿಂತ, ಪುಸ್ತಕವೇ ಹೆಚ್ಚು ಆಕರ್ಶಿಸಿದವು. ನಾ ಈ ಚಲನಚಿತ್ರಗಳನ್ನು ಪುಸ್ತಕಗಳನ್ನು ಓದುವ ಮುಂಚೆಯೆ ನೊಡಿದ್ದೆ ಎಂಬುದು ಗಮನಿಸ ಬೇಕಾದ ಸಂಗತಿ. ಇಲ್ಲಿ ಚಿತ್ರವನ್ನು ಎದುರಿಗೆ ಕಾಣುವ ಸತ್ಯ ಎನ್ನುವುದಾದರೆ, ಪುಸ್ತಕದ ವಾಕ್ಯಗಳು ಕಲ್ಪನೆಯ ಸುಳ್ಳು ಎನ್ನಬಹುದು. ಪುಸ್ತಕದಲ್ಲಿನ ವಾಕ್ಯಗಳು ನಮಗೆ ತಕ್ಕಂತೆ ಕಲ್ಪಿಸಿಕೊಳ್ಳಬಹುದು ಹಾಗಾಗಿ ನಮಗೆ ಹೆಚ್ಚು ಹಿಡಿಸುತ್ತದೆ. ಚಿತ್ರಗಳು ಬೇರೊಬ್ಬರ ಕಲ್ಪನೆಯ ದೃಶ್ಯ ರೂಪ. ಅದನ್ನು ನಮ್ಮ ಕಲ್ಪನೆಯೊಂದಿಗೆ ಹೊಂದಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆಯೆ ಜೀವನದಲ್ಲಿ ನಮ್ಮ ಕಲ್ಪನೆಯ ಸುಳ್ಳು ಹಾಗು ಬೇರೊಬ್ಬರ ಕಲ್ಪನೆಯ (ದೈವ) ಸತ್ಯ. ಈ ಸತ್ಯವನ್ನು ಒಪ್ಪಿಕೊಳ್ಳಲು ನಮಗೆ ಖಂಡಿತ ತಾಕತ್ತುಬೇಕು.

ಸ್ವಾಮೀಜಿ ಹೇಳಿರುವಂತೆ ಭಾರತದ ತಾತ್ವಿಕ ಆಧಾರವಾದಂತಹ 'ಆಧ್ಯಾತ್ಮಿಕತೆ'ಯನ್ನು ಜಾಗೃತ ಗೊಳಿಸಿಕೊಳ್ಳಬೇಕು. ಕಣ್ಣು ಮುಚ್ಚಿ ನಮ್ಮೊಳಗೆ ನಾವು ನೋಡಿಕೊಳ್ಳಬೇಕು. ಸತ್ಯವನ್ನು ನಾವು ಸಾತ್ಷಾತ್ಕಾರ ಮಾಡಿಕೊಳ್ಳಬೇಕು. ಮತ್ತೊಮ್ಮೆ ಹೇಳುವೆ ಸ್ವಾಭಿಮಾನ ಜಾಗೃತ ಗೊಳಿಸಿಕೊಳ್ಳಬೇಕು. ಮತ್ತೊಬ್ಬರ ಹಂಗಿನಲ್ಲಿ ಬದುಕಬಾರದು. ಇಷ್ಟಾದರೆ, ಭಾರತ ಜಗತ್ಗುರು ಆಗುವುದರಲ್ಲಿ ಸಂದೇಹವಿಲ್ಲ.

August 19, 2015

ಆಧ್ಯಾತ್ಮದ ತಳಹದಿಯಲ್ಲಿ ಉಪೇಂದ್ರ ಮತ್ತು ಉಪ್ಪಿ 2

 
ಹೋದ ವಾರ ಬಿಡುಗಡೆಯಾದ 'ಉಪ್ಪಿ 2' ಚಲನಚಿತ್ರದ ಬಗ್ಗೆ ತುಂಬ ಚರ್ಚೆ ನಡೆಯುತ್ತಿದೆ. ಇದರೊಟ್ಟಿಗೆ 15 - 16 ವರ್ಷಗಳ ಹಿಂದೆ ಬಿಡುಗಡೆಯಾದ 'ಉಪೇಂದ್ರ' ಚಿತ್ರದ ಬಗ್ಗೆಯೂ ಮಾತಾಡುತ್ತಾರೆ. ಹಲವು ಜನರಿಗೆ ಈ ಚಿತ್ರಗಳು ಅರ್ಥವಾಗುವುದೇ ಅನುಮಾನ. ಇದೇ ಕಾರಣ ಹಲವರು ಚಿತ್ರಗಳನ್ನು ಚೆನ್ನಾಗಿಲ್ಲ ಎಂದಿರುವುದು ಉಂಟು. ಚಿತ್ರಗಳು ಅರ್ಥವಾಗಲಿ ಬಿಡಲಿ, ಸಮಯ ಕಳೆಯುವ ದೃಷ್ಟಿಯಿಂದ ಚಿತ್ರಗಳನ್ನು ನೋಡುವ ಹಲವರಿದ್ದಾರೆ. ಆದರೆ, ನನಗೆ ಈ ಚಿತ್ರಗಳನ್ನು 'ಆಧ್ಯಾತ್ಮಿಕ' ದೃಷ್ಟಿಕೋನದಲ್ಲಿ ನೋಡಲು ಬಯಸುತ್ತೇನೆ.

ಈ ಎರಡು ಚಿತ್ರಗಳ ಕೆಲವು ಸಂಭಾಷಣೆಗಳನ್ನು ಗಮನಿಸಿದ್ದೇನೆ. ಸಾಧ್ಯವಾದಾಗ ಎಲ್ಲರು ಗಮನಿಸಿ...
  • ''ನಾನು' ಎಂಬುದು ಹೋದರೆ ಉಳಿಯೋದೆ 'ನೀನು''
  • ''ನಾನು' ಎನ್ನುವ ಇವನು ಯಾರು?'
  • 'ನನಗೆ ಗೊತ್ತು ಎನ್ನುವವನಿಗೆ ಏನು ಗೊತ್ತಿರುವುದಿಲ್ಲ, ನನಗೆ ಗೊತ್ತಿಲ್ಲ ಎನ್ನುವವನಿಗೆ ಎಲ್ಲವೂ ಗೊತ್ತಿರುತ್ತದೆ.'
  • 'ತುಂಬ ಯೋಚಿಸಿ ಹೇಳುತ್ತಿದ್ದೇನೆ, ಯೋಚಿಸಬೇಡ.'
  • 'ಯೋಚಿಸದೆ ಇದ್ದರೆ ಪ್ರತಿ ಕ್ಷಣ ಬದುಕಬಹುದು.'
ಇಲ್ಲಿ ನಾವು ಗಮನಿಸಿದರೆ ತಿಳಿಯುತ್ತದ್ದೆ, 'ನಾನು' ಎಂಬ ಅಹಂ ಭಾವನೆಯನ್ನು ತೊರೆದಾಗ ಉಳಿಯುವುದೇ 'ನೀನು'. ಇಲ್ಲಿ ನೀನು ಎಂಬುದು ಆ ದೈವತ್ವದ ಕುರಿತಾದದ್ದು. ಎಲ್ಲ ನೀನು, ನಿನ್ನದು ಎಂಬುದು ದೇವರಿಗೆ ಸಮರ್ಪಣಾ ಮನೋಭಾವವನ್ನು ಸೂಚಿಸುತ್ತದೆ. ಉಪೇಂದ್ರ ಚಿತ್ರದಲ್ಲಿ 'ನಾನು' ಎಂಬ ಭಾವ ಹಾಗು ಅತಿಯಾದ ಕಾಮನೆಗಳು ಮನುಷ್ಯನನ್ನು ಪ್ರಪಾತಕ್ಕಿಳಿಸುತ್ತದೆ ಎಂಬ ವಿಚಾರವನ್ನು ಚೆನ್ನಾಗಿ ಚಿತ್ರಿಸಲಾಗಿದೆ.

'ನಾನು' ಯಾರು ಎಂಬುವ ವಿಚಾರ ಭಾರತೀಯರಾದ ನಮ್ಮನ್ನು ಕಾಡಿದಷ್ಟು ಬೇರೆಯವರಿಗೆ ಕಾಡಿದಿಲ್ಲ. ಈ ವಿಚಾರವೂ ಎರಡೂ ಚಿತ್ರಗಳ ಹಲವು ಭಾಗಗಳಲ್ಲಿ ಕಾಣಿಸುತ್ತದ್ದೆ. ನಮ್ಮನ್ನು ಯಾರು? ಎಂದು ಕೇಳಿದರೆ ನಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ ಮೂಲಕ ಅಥವಾ ನಮ್ಮ ವೃತ್ತಿ ಅಥವಾ ನಮ್ಮ ಶ್ರೀಮಂತಿಕೆ ಅಥವಾ ನಮ್ಮ ಪದವಿ ಗಳ ಮೂಲಕ ನಮ್ಮನ್ನು ನಾವು ಪರಿಚಯಿಸಿಕೊಳ್ಳುತ್ತೇವೆ.  ಅಂದರೆ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಒಂದು ಆಧಾರ ಬೇಕು, ಆಧಾರವಿಲ್ಲದೇ ನಾವು ಏನು ಮಾತಾಡುವುದಿಲ್ಲ, ಹಾಗು ಮಾತಾಡಲು ಸಾಧ್ಯವಿಲ್ಲ. ಈ ಮಹಾವಿಶ್ವದಲ್ಲಿ ನಾವಾದರು ಯಾರು? ಈ ಆಧಾರಗಳಾದರು ಯಾವುದು? ಇದಕ್ಕೆಲ್ಲ ಬೆಲೆ ಏನು? ಇಂತಹ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿರುವುದಿಲ್ಲ. ಆಧ್ಯಾತ್ಮಿಕವಾಗಿ ಮೇಲೇರಿದಂತ್ತೆಲ್ಲ ಇವುಗಳಿಗೆ ಉತ್ತರ ಸಿಗುತ್ತದೆ ಎಂದು ನನ್ನ ನಂಬಿಕೆ.

ನಮಗೆ ಏನು ತಿಳಿದಿಲ್ಲ ಎನ್ನುವುದು ಮತ್ತೆ ದೈವತ್ವದೆಡೆಗಿನ ಸಮರ್ಪಣ ಭಾವಕ್ಕೆ ಹೋಲಿಸಬಹುದು. 'ಇದ್ದರೂ ಇರದಂತಿರಬೇಕು' ಎಂಬ ಮಾತಿನಂತೆ. ಎಲ್ಲ ತಿಳಿದವನು ಏನು ತಿಳಿಯದಂತೆ ಇರುವುದನ್ನು ಪ್ರತಿಪಾದಿಸುತ್ತದೆ. ಕಣ್ಣನ್ನು ತೆರೆದಾಗ ಎದುರಿಗಿರುವುದು ಮಾತ್ರ ಕಾಣಿಸುತ್ತದೆ. ಧ್ಯಾನದಿಂದ ಆಧ್ಯಾತ್ಮದಲ್ಲಿ ಔನ್ನತ್ಯ ಸಾಧಿಸಿ, ಕಣ್ಮುಚ್ಚಿದರೆ ಇಡೀ ವಿಶ್ವವೇ ಕಾಣಿಸುತ್ತದೆ. ಸೃಷ್ಟಿಯ ರಹಸ್ಯಗಳಿಲ್ಲವೂ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.

'ಯೋಚನೆ ಮಾಡಬಾರದು' ಎಂಬ ವಾಕ್ಯಗಳು 'ಸ್ಥಿತಪ್ರಜ್ಞ' ಎಂಬ ಮನಸ್ಥಿತಿಯನ್ನು ಪ್ರತಿಪಾದಿಸುತ್ತದೆ. ಆಧ್ಯಾತ್ಮದ ಮೂಲ ತತ್ವವೇ ನಮ್ಮನ್ನು ಸ್ಥಿತಪ್ರಜ್ಞರಾಗಿಸುವುದು. 'ಉಪ್ಪಿ 2' ನಲ್ಲಿ ಆತನ ಮನೆಯವರ ಸಾವಿನ ನಾಟಕದ ಪ್ರಸಂಗವು ಈ ತತ್ವವನ್ನು ಸೂಚಿಸುತ್ತದೆ. ಇದೊಂದೆ ಅಲ್ಲದೆ ಚಿತ್ರದ ಹಲವಾರು ಸನ್ನಿವೇಶಗಳು ಈ ತತ್ವವನ್ನು ಪ್ರತಿಪಾದಿಸಿತ್ತದೆ. ಇರುವ ಸತ್ಯವನ್ನು ಇದ್ದ ಹಾಗೆ ಒಪ್ಪಿಕೊಳ್ಳಲು 'ಸ್ಥಿತಪ್ರಜ್ಞ'ನೊಬ್ಬನಿಗೆ ಮಾತ್ರ ಸಾಧ್ಯವಾಗುವಂತಹುದು. ಸನ್ನಿವೇಶ ಓಳ್ಳೆಯದಾದರು ಸರಿ, ಕೆಟ್ಟದಾದರೂ ಸರಿ ಎರಡರಲ್ಲೂ ಹಿಗ್ಗದೇ, ಕುಗ್ಗದೇ ಬದುಕುವುದನ್ನು ನಾವು ಕಲಿಯಬೇಕು. ಆಗ ಮಾತ್ರ ನಮ್ಮ ಬದುಕನ್ನು ಪ್ರತಿ ಕ್ಷಣ ಆನಂದದಿಂದ ಬದುಕಬಹುದು. ನಾವುಗಳು 'ಆನಂದ' ಮತ್ತು 'ಸಂತೋಷ, ಸುಖ' ಪದಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಆನಂದ ಆತ್ಮಕ್ಕೆ ಸಂಭಂದಿಸಿದ್ದು. ಸಂತೋಷ, ಸುಖ ದೇಹಕ್ಕೆ ಸೀಮಿತವಾದದ್ದು. ಸೌಂದರ್ಯವೆನ್ನುವುದು ಆತ್ಮದಿಂದ ನೋಡಿ ಆನಂದಿಸಬೇಕೆ ಹೊರತು, ಇಂದ್ರೀಯಗಳಿಂದ ಅನುಭವಿಸಿ ಸುಖಿಸುವುದಲ್ಲ. ಈ 'ಆನಂದ ಮತ್ತು ಆತ್ಮಜ್ಞಾನ'ವೆಂಬ ವಿಚಾರಗಳು ಈ ಎರಡು ಚಿತ್ರಗಳಲ್ಲಿ ಮನೋರಂಜನಾತ್ಮಕವಾಗಿ ಚಿತ್ರಿಸಲಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ, ಚಿತ್ರಗಳ ಮೂಲ ಸತ್ವ ಅರ್ಥವಾಗದಿದ್ದರೇ 'ಆಧ್ಯಾತ್ಮ'ದ ಕಡೆ ವ್ಯಕ್ತಿಯ ಮನಸ್ಸು ಹೊರಳಿಲ್ಲ ಎಂದು ನನ್ನ ಅಭಿಪ್ರಾಯ. ತುಂಬ ದಿನಗಳ ನಂತರ ಒಂದು ಒಳ್ಳೆ ಸಿನಿಮಾ ನೋಡಿದ ಹಾಗಾಯಿತು. ಉಪೇಂದ್ರರವರಿಗೆ ಈ ಮೂಲಕ ನನ್ನ ಧನ್ಯವಾದಗಳು.

June 20, 2015

ಕನ್ಯಾಕುಮಾರಿ

ಕನ್ಯಾಕುಮಾರಿ - ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ...

ಈ ಸಾಲುಗಳು ಅಕ್ಷರ ಸಹ ನಿಜವೆಂದು ಸ್ವಾಮೀಜಿಯ ಬಂಡೆಯ ಮೇಲೆ ನಿಂತಾಗ ಅನುಭವಕ್ಕೆ ಬರುತ್ತದೆ. #InspirePravas ತಂಡದ ಮೊದಲ ಪ್ರವಾಸ ಕನ್ಯಾಕುಮಾರಿಯಾಗಿತ್ತು. ನಾನು ಬದುಕಿನಲ್ಲಿ ಸ್ವಯಂಪ್ರೇರಿತನಾಗಿ, ಮನಸ್ಪೂರ್ತಿಯಾಗಿ  ಹೊರಟ ಮೊದಲನೆ ಪ್ರವಾಸ ಇದಾಗಿತ್ತು. ಹಿಂದೆ ಕೂಡ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಹೋಗಿದ್ದೇನಾದರೂ ಅದು ಪ್ರವಾಸ ಎಂದಷ್ಟೇ ಕರೆಯಬಹುದು. ಇದು ಕಹಿ ಎನಿಸಿದರೂ ಸತ್ಯ. ಅಂದಹಾಗೆ, ಸತ್ಯ ಯಾವಾಗಲು ಕಹಿ.


11-06-2015 ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಡುವುದಾಗಿತ್ತು. ಅನೂಪ್ ಒಬ್ಬ ಮಾತ್ರ ನನಗೆ ಪರಿಚಯವಿದ್ದ. ನಾನು, ಅವನು ಮೆಜಸ್ಟಿಕ್ ರೈಲು ನಿಲ್ದಾಣಕ್ಕೆ ಹೋದೆವು. ಅಲ್ಲಿ ಹೋದಾಗ ಕೆಲವು ಜನ ಬಂದ್ದಿದ್ದರು. ಚಕ್ರವರ್ತಿ ಅಣ್ಣ, ನಿತ್ಯಾ ಅಣ್ಣ ಬರುವರು ಎಂದು ನಂಬಿಕೆ ಇತ್ತು ಆದರೆ ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವರುಗಳು ಬರುವುದಿಲ್ಲ ಎಂದು. ನಿರಾಸೆ ಆಯಿತು, ಇರಲಿ ನಾವು ನಾವೇ ಹೋಗುವ ಎಂದು ಅಂದುಕೊಂಡೆ. ಮನಸ್ಸು ಉತ್ಸಾಹದಿಂದ ತುಂಬಿಹೋಗಿತ್ತು.  ಸುಮಾರು 40 - 45 ಜನ ಬಂದಿದ್ದರು, ರೈಲು ಹತ್ತುವಷ್ಟರಲ್ಲೇ ಒಂದ್ದಿಬ್ಬರು ಪರಿಚಯವಾದರು. ಪರಿಚಯವೆಂದರೇ ಮುಖ ಪರಿಚಯವಷ್ಟೆ, ಹೆಸರು ಖಂಡಿತ ನೆನಪಿನಲ್ಲಿ ಉಳಿಯಲಿಲ್ಲ. ರಾತ್ರಿ ತನಕ ಬೇರೆಯವರಾರು ಪರಿಚಯವಾಗಲ್ಲಿಲ್ಲ. ಊಟವಾಯಿತು, ನಾ ಪುಸ್ತಕ ಓದುತ್ತಿದ್ದೆ, ಸಂದೇಶ್ (Conductor) ಬಂದು ಹಾಡಿನ ಕಾರ್ಯಕ್ರಮ ನಡೆಯುತ್ತಿದ್ದೆ ಬನ್ನಿ ಎಂದ. ಎಲ್ಲರೂ ಇದ್ದ ಬೋಗಿಗೆ ಹೋದೆ. ದೇಶ ಭಕ್ತಿ, ಭಾವ ಗೀತೆ ಹಾಡುಗಳನ್ನು ಮಾತ್ರ ಹೇಳುತ್ತಿದ್ದರು. ಕೇಳಿ ಬಹಳ ಸಂತೋಷವಾಯಿತು. ಹೀಗೆ ಹೇಳುತ್ತಾ ಹೋದರೆ ಸರಿ ಬರುವುದಿಲ್ಲ. ವಿಷಯಗಳನ್ನು ವಿಂಗಡಿಸಿ ಮಾತಾಡುವುದು ಸರಿ ಎಂದನಿಸುತ್ತದೆ.

ಮಾತು ಕಥೆ (ಹರಟೆಯ ಮೆಲಕು)...
ನಮ್ಮ ಮನೆಗಳಲ್ಲಿ ನಾವುಗಳು ಹೇಗೊ ತಿಳಿಯದು ಆದರೆ ಇಲ್ಲಿ ಮಾತ್ರ ತುಂಬ ಮಾತಾಡಿದೆವು. ರಾತ್ರಿ ಎಲ್ಲ ಮಾತಾಡಿದೆವು. ನಿದ್ರೆ ಎಂಬುದನ್ನು ಮಾತಿನ ಓಘದಲ್ಲಿ ಮರೆತೇ ಹೋದೆವು. ಮಾತಿನ ವಿಚಾರಗಳು ವಿಧ ವಿಧವಾಗಿರಲಿಲ್ಲ ಆದರೆ ಏನೇ ಮಾತಾಡಿದರೂ ಅದು ದೇಶ ಮತ್ತು ಧರ್ಮದ ಕುರಿತಾಗಿತ್ತು.
  •  ವಾಪಸ್ಸು ಬರಬೇಕಾದರೆ ನಮ್ಮ ನಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದೆವು, ಆ ಮಾತು ಕೂಡ ಧರ್ಮದೆಡೆಗೆ ಹೋಯಿತು.
  •  ನಡೆದು ಹೋಗಬೇಕಾದರೂ ಸಹ ಅದರದ್ದೇ ಮಾತು.
  •  ರಾತ್ರಿ  12-1 ಗಂಟೆ ತನಕ ಸಹ ಮತ್ತೆ ಅದೇ ಮಾತು.
  •  ಮತಾಂತರ (ಇದರ ಬಗ್ಗೆ ಮುಂದೆ ಮಾತಾಡುತ್ತೇನೆ)
  •  ಅಣ್ಣನ 'ಜಾಗೋ ಭಾರತ್', 'ವಿಶ್ವಗುರು', 'ನರೇಂದ್ರ ಮೋದಿ'... ಇತಂಹುದೇ ಮಾತು
ಕೆಲವರಿಗೆ ಸಾಹ್ಯವಾಗಿತ್ತೋ ಏನೋ ನನಗೆ ಗೊತ್ತಿಲ್ಲ ಆದರೆ ನನಗೆ ಮಾತ್ರ ಅದು ನನ್ನ ಮನಸ್ಸಿನ ಮಾತಾಗಿತ್ತು. ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಮನಸ್ಸಿಗೆ ಬರಲಿಲ್ಲ. ಒಂದು ರೀತಿ ನಾನು ನಾನಾಗಿ ಇದ್ದೆ ಎಂಬುದು ಸಂತೋಷಕರವಾದ ವಿಷಯ.

ಮರುತ ಮಲೈ...
ಭಾರತಮಾತೆಯ ಪಾದದಲ್ಲಿರುವ ಒಂದು ಬೆಟ್ಟ. ಅದನ್ನು ಹತ್ತಿವುದೆ ಒಂದು ರೀತಿ ಮಜ. ನಮ್ಮೆಲ್ಲರಿಗೂ ಹಿರಿಯರದಂತಹ ಚಂದ್ರಣ್ಣ ನಮ್ಮೆಲ್ಲರನ್ನು ನಾಚಿಸುವ ರೀತಿಯಲ್ಲಿ ಹತ್ತಿದರು. ಅವರನ್ನು ನಾವು ರಾಕ್ಷಸ ಎಂದಿದ್ದು ಉಂಟು. ತುಂಬ ದಿನಗಳಾದ ಮೇಲೆ ನಾ ಈ ರೀತಿ ಬೆಟ್ಟ ಹತ್ತಿದ್ದು. ವಿಶೇಷವೆಂದರೆ ಅದನ್ನು ಹತ್ತಿದ ಮೇಲು ನನಗೆ ಸುಸ್ತು ಕಾಣಿಸಲಿಲ್ಲ. ಮೇಲೆ ನಾವು ಚಂದ್ರಣ್ಣನ ಶಾಲನ್ನೇ (ಆ ಬಟ್ಟೆಯನ್ನು ಏನೆಂದು ಹೇಳಬೇಕು ಎಂದು ನನಗೆ ತಿಳಿದಿಲ್ಲ ಹಾಗಾಗಿ ಶಾಲು ಎಂದುಬಳಸಿದ್ದೇನೆ) ಒಂದು ಕೋಲಿಗೆ ಕಟ್ಟಿ ಭಗವದ್ವಜದ ತರಹ ಕಾಣುವಂತೆ ಮಾಡಿದೆವು. ಅದನ್ನು ಹಿಡಿದು ಹಾರಾಡಿಸಬೇಕಾದರೆ ಆನಂದವೋ ಆನಂದ. ಹಾರಾಡುವ ಧ್ವಜವನ್ನು ನೋಡಿದಾಗ ಹಿಂದುತ್ವ ಮೇಲೆಳುತ್ತದೆ, ಭಾರತ ಖಂಡಿತ ಭವ್ಯವಾಗುತ್ತದೆ ಎಂದು ಮನಸ್ಸಿಗನ್ನಿಸಿತು. ಇಳಿಯಬೇಕದರೆ ನಾನು, ಮನೋಜ, ಸಂದೇಶ ಮತ್ತೊಬ್ಬರು ಒಟ್ಟಿಗೆ ಬಂದೆವು (ಮತ್ತೊಬ್ಬರ ಹೆಸರು ನೆನಪಿಲ್ಲ ಕ್ಷಮಿಸಿ).  ನಮ್ಮಗಳ ಸ್ವಂತ ಪರಿಚಯ ಮಾಡಿಕೊಂಡೆವು. ಹಲವು ವಿಚಾರಗಳನ್ನು ಹಂಚಿಕೊಂಡೆವು. ಅವರಿಗೆ ಧನ್ಯವಾದಗಳು.

Photo ಹಾಗು Selfie ಭರಾಟೆ...
ಇದರ ಬಗ್ಗೆಯಂತೂ ಹೇಳಲೇಬೇಕು. ನಮ್ಮ ಬದುಕಿನ ಅಪೂರ್ವ ಕ್ಷಣಗಳನ್ನು ನೆನಪಿಸುವುದೇ ಇವುಗಳು.ಹೊರಟಾಗಿಂದಲೂ, ವಾಪಸ್ಸು ರೈಲು ಹತ್ತುವ ತನಕ ಫೋಟೊ ತೆಗೆದಿದ್ದೆ ತೆಗೆದ್ದಿದ್ದು. ನಮ್ಮ ತಂಡದಲ್ಲಿ 3 ಜನರ ಬಳಿ DSLR ಕ್ಯಾಮೆರ ಇತ್ತು. ಇದು ಕಾರಣ ಹೊದಲೆಲ್ಲ ಸಮಯ ಜಾಸ್ತಿಯಾಗುತ್ತಿತ್ತು. ಸುಂದರ ದೃಶ್ಯಗಳ ಜೊತೆಗೆ ನಮ್ಮ ಚಿತ್ರಗಳನ್ನು ತೆಗೆಯುವುದು ಒಂದು ಪ್ರಮುಖ ವಿಚಾರವಾಗಿತ್ತು. 'ಪದ್ಮನಾಭ ಅರಮನೆ'ಯಲ್ಲಿ ನಾನು, ಅರುಣ, ಸಂದೇಶ ಫೋಟೊ ತೆಗೆಯುತ್ತಾ ಹಿಂದೆ ಉಳಿದೆವು. ಎಲ್ಲರು ಮುಂದೆ ಮುಂದೆ ನೋಡಿಕೊಂಡು ಹೋಗುತ್ತಿದ್ದರು. ನಾವು ಮಾತ್ರ ಬೇರೆಯೆ ಗುಂಪಾಗಿ ಉಳಿದೆವು. ಅಲ್ಲಿ ಬಂದವಲ್ಲಿ ಒಬ್ಬರು 'Are you guys professional photographers?' ಎಂದು ಕೇಳಿದುಂಟು.

ಅದಲ್ಲದೇ ನಾವು 'Engineers' ಎಂದು ಅವರು ಹೇಳಿದರು. ನಾನು ಮತ್ತು ಅರುಣ ಇಂಜಿನೀರಿಂಗ್ ಪದವಿಧರರು ಆದರೆ ಸಂದೇಶ್ 'CA'  ಮಾಡುತ್ತಿದ್ದವನು. ಜನರ ದೃಷ್ಟಿಯಲ್ಲಿ ಇಂಜಿನೀರಿಂಗ್ ಓದಿದವರೆಲ್ಲ ಫೋಟೊ ತೆಗೆಯುವುದು ಹವ್ಯಾಸ ಮಾಡಿಕೊಂಡಿರುತ್ತಾರೆ ಎಂಬುದಾಗಿದೆ. ಇದು '3 Idiots' ಸಿನಿಮಾದ ಪ್ರಭಾವ ಎಂದುಕೊಂಡೆ.

ಇನ್ನು Selfie... ಛಾಯಾಗ್ರಹಣ ಮಾಡಲು ಬೇಸರ ಬರಬೇಕು ಅಷ್ಟರ ಮಟ್ಟಿಗೆ ಇದು ಜೋರಾಗಿತ್ತು. ವಾಪಸ್ಸು ಬೆಂಗಳೂರಿಗೆ ಬಂದು ರೈಲು ಇಳಿದ ಮೇಲೂ ಇದರ ಭರಾಟೆ ನಿಲ್ಲಲಿಲ್ಲ....!!!

ಊಟ... ತಿಂಡಿ...
ಇದರ  ಬಗ್ಗೆ ಎರಡು ಮಾತೇ ಇಲ್ಲ. ಒಂದೆ ಮಾತಲ್ಲಿ ಹೇಳುವುದಾದರೆ 'ಅದ್ಭುತ'. ಬೇರೆ ಏನು ಹೇಳಲು ಪದಗಳು ಸಿಗುತಿಲ್ಲ. ವಾಪಸ್ಸು ಹೊರಡುವ ದಿನವಂತು ಹಬ್ಬದಡಿಗೆ ಮಾಡಿದ್ದರು. ಪಲ್ಯ, ಕೊಸಂಬರಿ, ಹೋಳಿಗೆ, ಜಾಮೂನು, ಅನ್ನ ಹುಳಿ, ಮೊಸರು ಇದೆಲ್ಲಕ್ಕಿಂತಲೂ ಚೆನ್ನಾಗಿದ್ದದ್ದು ಉಪ್ಪಿನಕಾಯಿ. ಭಟ್ಟಗುಗಳಿಗೆ ನನ್ನ ಧನ್ಯವಾದಗಳು ಈ ಮೂಲಕ.

ಮತಾಂತರ...
ನಾವು ಇಲ್ಲಿಂದ ಹೊರಟಾಗಲೇ ರೈಲಿನಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಂಡ್ಡಿದ್ದ ಒಬ್ಬ ವ್ಯಕ್ತಿ ಸಿಕ್ಕಿದ. ನಮ್ಮಗಳ ಜೊತೆ ವಾದ ಮಾಡಲು ಬಂದ. ನಮ್ಮ ತಂಡದಲ್ಲಿ ಓದಿಕೊಂಡಿದ್ದವರು ಜಾಸ್ತಿ. ಮೊದಲೆ ಅಣ್ಣನ ಮಾತುಗಳಿಂದ ಪ್ರೇರೆಪಣೆಗೊಂಡಿದ್ದವರು. ಅವ ಒಬ್ಬ, ನಾವು 6 ಜನ, ವಾದದಲ್ಲಿ ಅವನೇ ಸೋಲಬೇಕಾಯಿತು. ವಾದದ ವಿಚಾರಗಳು ಎಲ್ಲರಿಗು ತಿಳಿದ್ದದ್ದೆ, ಅದನ್ನು ಮತ್ತೆ ಬಿಡಿಸಿ ಹೇಳುವ ಅಗತ್ಯವಿಲ್ಲ.

ನಾವುಗಳು ಇಳಿದು ಕೊಂಡಿದ್ದ ಸ್ಥಳದ ಮುಂದಿನ ರಸ್ತೆಯಲ್ಲಿಒಂದು ಈಗರ್ಜಿ (Church) ಇತ್ತು. ಅಲ್ಲಿ ಎನೋ ಸಮಾರಂಭವಂತೆ, ಆದ ಕಾರಣ ಜೋರಾಗಿ ಮೈಕ್ ಹಾಕಿದ್ದರು. ನಮಗೆ ಮೊದಲೇ ಕೇಳಲು ಇಷ್ಟವಿಲ್ಲ, ಅದರೊಂದಿಗೆ ಅದು ಕೇಳಲು ಸಹನೀಯವಾಗಿರಲಿಲ್ಲ. ನಮ್ಮ ಹುಡುಗರು ಮಾರನೆ ದಿವಸ ಅದರ ತಂತಿಗಳನ್ನು ಕಿತ್ತುಹಾಕಿದರು.
  • ನಮ್ಮ ದೇವಸ್ಥಾನಗಳಲ್ಲಿ 'ಗರುಡ ಕಂಬ'ದ ಮಾದರಿಯಲ್ಲೇ ಅವರುಗಳೂ ಕಂಬವನ್ನು ನೆಟ್ಟಿದ್ದರು.
  •  ನಾದಸ್ವರವೂ ಉಪಯೋಗಿಸುತ್ತಿದ್ದರು, ಒಂದು ಹಂತದಲ್ಲಿ 'ಗಟ್ಟಿಮೇಳವೂ' ಕೇಳಿಬಂತು...!!!
  •  ನಮ್ಮಲ್ಲಿ ಪಲ್ಲಕ್ಕಿ ಉತ್ಸವ ಮಾಡುವ ಹಾಗೆ ಅವರು ಕೂಡ ಏಸುವಿನ ವಿಗ್ರಹದೊಂದಿಗೆ ಮಾಡಿದರು....!!! ನಾವು ಉಳಿದುಕೊಂಡಿದ್ದ ಹೊಟೇಲಿನಿಂದ ಅವರುಗಳಿಗೆ ಉಚಿತ ನೀರು ಸರಭರಾಜು. ಅವರುಗಳೋ, ನೀರು ಕುಡಿದು ಬಾಟೆಲುಗಳನ್ನು ಅಲ್ಲಿ ಎಸೆದು ಹೋದರು. ಅವರ ಯೋಗ್ಯತೆಯೆ ಅಷ್ಟು ಎಂದುಕೊಡೆ.
  •  ಸಮುದ್ರ ಕಡೆಗೆ ಹೊದಾಗ ಅಲ್ಲೊಬ್ಬ ಏನೋ ಚೀಟಿ ಕೊಡುತ್ತಿದ್ದ. ಏನು ಎಂದು ನೋಡಿದಾಗ ಅದೊಂದು ಸಣ್ಣ 'ಬೈಬಲ್'. ಎಷ್ಟರ ಮಟ್ಟಿಗೆ ತಮ್ಮ ಧರ್ಮ ಪ್ರಚಾರ ಹಾಗು ಮತಾಂತರ ನಡೆದಿದೆ ಎಂದು ಅಂದಾಜು ಮಾಡಿದೆ. ಅದನ್ನು ನೆನೆದೆ ಗಾಬರಿಯಾಯಿತು.
  • ನಮ್ಮ ಮಾತುಗಳಲ್ಲಿ ಹೆಚ್ಚು ಕಮ್ಮಿ ಈ ವಿಚಾರವಾಗಿಯೇ ಇತ್ತು. ಈ ವಿಚಾರವೂ ಕೆಲವರಿಗೆ ಸಹನೀಯವಾಗಿರಲಿಲ್ಲ.

ಹಾಸ್ಯ ಸನ್ನಿವೇಶ....
ಇದರ ಬಗ್ಗೆ ಮಾತಾಡುವುದು ಎಂದರೆ ಮನೋಜನ ಬಗ್ಗೆ ಹೇಳುವುದು ಎಂದರ್ಥ. ಇದು ನನ್ನ ಅನಿಸಿಕೆ ಅಷ್ಟೆ, ಇದು ತಪ್ಪು ಇರಬಹುದು. ತಪ್ಪಿದಲ್ಲಿ ಮನೋಜರವರು ಕ್ಷಮಿಸಬೇಕು.

 - ಉಪವಾಸ:
ಏಕಾದಶಿಯ ಕಾರಣ ಮನೋಜ ಎರಡನೇ ದಿವಸ ಊಟ, ತಿಂಡಿ ಮಾದಲಿಲ್ಲ. ಆದರೆ ರಾತ್ರಿ 2 ಚಪಾತಿ ತಿಂದ (ನಮಗೆ ಗೊತ್ತಿರುವ ಹಾಗೆ. ಹೆಚ್ಚು ತಿಂದನೋ ತಿಳಿಯದು..!!!). ಈ ವಿಚಾರದಲ್ಲಿ ಅವನ ಕಾಲೆಳೆಯಲು ಶುರುಮಾಡಿದೆವು. ಅದು ಅವನ್ನನ್ನು ಆಡಿಕೊಂಡ ಹಾಗಿತ್ತು. ಆದರೂ ಅದು ನಗು ತರಿಸುವ ವಿಚಾರವಾಗಿತ್ತು.

 - ಉನೋ (UNO):
ಈ ಆಟವಾಡಬೇಕಾದರೆ ನಾ ಇರಲ್ಲಿಲ್ಲ. ಸಂದೇಶ್ ಹೇಳಿದಹಾಗೆ, ನಾ ಅರ್ಥ ಮಾಡಿಕೊಂಡ ಹಾಗೆ ಹೇಳುತ್ತೇನೆ. ಆಡಬೇಕಾದರೆ ಅನೂಪ್ 'Selfie' ತೆಗಿಯಲು ಶುರುಮಾಡಿದ. ಹಾಗಿ ಮಾಡುವುದರೊಂದಿಗೆ ಮನೋಜನ ಹತ್ತಿರವಿರುವ ಕಾರ್ಡ್ ಯಾವುದು ಎಂದು ತಿಳಿಯುತ್ತಿತ್ತು. ಈ ವಿಚಾರ ಅವನಿಗೆ ಗೊತ್ತಾಗಲೇ ಇಲ್ಲ.  ಒಟ್ಟಿನಲ್ಲಿ ಆಟಾಡಿದ ಮಂದಿ ತುಂಬ ಸಂಭ್ರಮಿಸಿದ್ದಾರೆ.

 - ಚಡ್ಡಿ ಪ್ರಸಂಗ:
ನಾವು ತಿಂಡಿ ತಿನ್ನುತ್ತಿದ್ದೆವು. ಮೇಲೆ ಕೋಣೆಯ ಗೋಡೆಗೆ ಮನೋಜ ತನ್ನ ಚಡ್ಡಿಯನ್ನು ಲಾಡಿಯಿಂದ ಕಟ್ಟಿ ಒಣಗಲು ಹಾಕಿದ್ದ. ಹೊರಗೆ ಹೊರಡುವ ಮುನ್ನ ಯಾರೊ ಒಬ್ಬರು ಅದನ್ನು ಒಳಗೆ ಇಡುತ್ತಿದ್ದರು ಅಂತ ಕಾಣುತ್ತದೆ. ಅವರು ಲಾಡಿಯ ಗಂಟು ತೆಗೆಯುತ್ತಿದ್ದರು. ಮನೋಜ ಇದನ್ನು ಗಮನಿಸಿದ. 'ಚಡ್ಡಿ ಬಿಚ್ಚಬೇಡ, ಚಡ್ಡಿ ಬಿಚ್ಚಬೇಡ' ಎಂದು ಕೂಗಿದ. ಅದನ್ನು ಕೇಳಿ ನಮಗೆ ನಗುವೊ ನಗು. ಅದನ್ನು ನೆನಸಿಕೊಂಡರೆ ಈಗಲು ನಗು ಬರುತ್ತದೆ.

 - ಮಾವಿನಕಾಯಿ ಪ್ರಸಂಗ:
ಇದಕ್ಕೆ ನಾನು, ಸಂದೇಶ್, ಅರುಣ ಪ್ರತ್ಯಕ್ಷ ಸಾಕ್ಷಿಗಳು.

ವಿವೇಕಾನಂದರ ಬಂಡೆ ನೋಡಿಕೊಂಡು ವಾಪಸ್ಸು ಬಂದೆವು. ಕೆಲವರು 'ಶಾಪಿಂಗ್' ಎಂದು ಹೋದರು. ನಾವು 4 ಜನ (ನಾನು, ಮನೋಜ, ಸಂದೇಶ್, ಅರುಣ)  ಮಾವಿನಕಾಯಿ ತಿನ್ನುತ್ತಾ ಬರುತ್ತಿದ್ದೆವು. ಮನೋಜ ಬೇಗ ತಿಂದು ಮುಗಿಸಿ ಕಸವನ್ನು ಎಸೆಯಲು ಹೋಗಿತ್ತಿದ್ದ. ದಾರಿಯಲ್ಲಿ ಯಾರೋ ಮಾವಿನಕಾಯಿ ಹಿಡಿದು ಬರುತ್ತಿದ್ದರು. ಇವ ನೋಡಲಿಲ್ಲ ಎಂದು ತೊರುತ್ತದೆ, ಅದನ್ನು ತೆಗೆದುಕೊಳ್ಳಲು ಹೋದ. ಅವರು ಇವನಿಗಲ್ಲ ಎಂದು ತಿರುಗಿಸಿಕೊಂಡರು. ಇವ ಬಿಡಲಿಲ್ಲ, ನನಗೆ ಬೇಕೇ ಬೇಕು ಎನ್ನುವ ರೀತಿ ಒಂದು ಚೂರು ತೆಗೆದುಕೊಂಡ. ಆ ವ್ಯಕ್ತಿ ಒಂದು ರೀತಿ ಯಾರಿವನು ಎಂದು ವಿಚಿತ್ರವಾಗಿ ನೋಡುತ್ತಿದ್ದ.

ಇವ ತಿನ್ನಲು ಹೋಗಿ ತಲೆ ಎತ್ತಿದ, ಇವರು ಯಾರೊ ಅಪರಿಚಿತರು ಎಂದು ತಿಳಿದು 'ಸಾರಿ, ಸಾರಿ' ಎಂದು ವಾಪಸ್ಸು ಇಡಲು ಮುಂದಾದ. ಅವರು ಇರಲಿ ಪರವಾಗಿಲ್ಲ ಎಂದು ಹೊರಟುಹೋದರು. ಇವನು ಆ ಮಾವಿನ ಚೂರನ್ನು ತಿಂದೆಬಿಟ್ಟ. ನಮಗೆ ನಗು ತಡೆಯಲಾಗಲಿಲ್ಲ. ನಂತರ ಇದನ್ನೇ ಎಲ್ಲರಿಗೂ ಹೇಳುತ್ತ ಮನೋಜನನ್ನ ರೇಗಿಸಲು ಪ್ರಾರಂಭಿಸಿದೆವು.

ಸಮುದ್ರ ತೀರ...
ಕನ್ಯಾಕುಮಾರಿಯ ಸಮುದ್ರ ತೀರ ತುಂಬ ವಿಶಿಷ್ಟವಾದದ್ದು, ಅಷ್ಟೆ ಭಯಾನಕವೂ ಹೌದು. ಕಾರಣ ಬಂಡೆಗಳು ಜಾಸ್ತಿ.

 - ಹಿಂದು ಮಹಾಸಾಗರ, ಅರಬ್ಬಿ ಸಮುದ್ರ, ಬಂಗಾಳ ಸಮುದ್ರಗಳು ಸೇರುವ ಜಾಗವಿದು. ಜಗತ್ತಿನ ಯಾವುದೇ ಭಾಗದಲ್ಲಿ ಇಂತಹ ಅದ್ಭುತ ಕಾಣಲು ಸಾಧ್ಯವಿಲ್ಲ ಎನ್ನಿಸುತ್ತದೆ. ಚಕ್ರವರ್ತಿ ಅಣ್ಣ ಹೇಳುವ ಮಾತು 'ಸಮುದ್ರ ಬೇಕೆಂದರೆ ದಕ್ಷಿಣಕ್ಕೆ ಬನ್ನಿ, ತಾಯಿ ಭಾರತಿಯ ಪಾದಗಳನ್ನು 3 ಸಮುದ್ರಗಳು ತೊಳೆಯುತ್ತದೆ.'. ಈ ಮಾತುಗಳ ದೃಶ್ಯವನ್ನು ಅಕ್ಷರ ಸಹ ಅಲ್ಲಿ ಕಾಣಬಹುದು. ಒಂದು ರೀತಿಯಲ್ಲಿ ಸತ್ಯದ ಸಾತ್ಷಾತ್ಕಾರವಾದಂತಾಗುತ್ತದೆ.

 - 1.5 - 2 ಕೀ.ಮಿ ಅಂತರದಲ್ಲಿ ಸುರ್ಯಾಸ್ತ, ಸುರ್ಯೋದಯ, ಎರಡೂ ಕಾಣಬಹುದಾದ ಅಪರೂಪದ ಸ್ಥಳ. ಬೆಳ್ಳಗ್ಗೆ 5:30 ಹೊತ್ತಿಗೆ ಸುರ್ಯೋದಯ ನೋಡಲು ಹೋದೆವು. ಸ್ವಲ್ಪ ಮೋಡವು ಇತ್ತು. ಸುರ್ಯನ ಬೆಳಕೆನ ಆಟವನನ್ನು ನೋಡುವುದೇ ಚೆನ್ನ. ರವಿ ಪೂರ್ವ ದಿಕ್ಕಿನಲ್ಲಿ ಏಳುವುದನ್ನು ನೋಡಿದಾಗ 'ಅಂಬರವೇರಿ, ಅಂಬರವೇರಿ ಸೂರ್ಯನು ಬಂದಾನೊ...' ಎಂಬ ಹಾಡು ನೆನಪಿಗೆ ಬಂತು.
ಹಿಂದುತ್ವದ ಸೂರ್ಯ ಹೀಗೆ ಬೆಳಗಬೇಕು ಎನ್ನುವ ಆಸೆ ಮನಸಲ್ಲಿ ಮೂಡಿತು. ಅಂದಿನ ಸೂರ್ಯ ತುಂಬಾ ವಿಶೇಷವಾಗಿ ಕಾಣಿಸಿದ. ಕೈ ಎತ್ತಿ ಮುಗಿಯುವ ಹಾಗಿತ್ತು ಆ ದೃಶ್ಯ. ಸುಮಾರು ಅರ್ಧ ಗಂಟೆಗಳ ಕಾಲ ಆ ಪ್ರಕೃತಿ ಸೌಂದರ್ಯವನ್ನು ಸವಿದೆವು.

ಸ್ವಾಮಿ ವಿವೇಕಾನಂದರ ಬಂಡೆ...
ಇದೊಂದು ಪವಾಡ ಮಾಡಬಹುದಾದಂತಹ ಸ್ಥಳ. ಹೌದು, ಅದು ಸ್ವಾಮೀಜಿಯವರ ಶಕ್ತಿಯೇ ಇರಬೇಕು. 3  ದಿನಗಳಿಂದ ಆ ಬಂಡೆಯಮೇಲೆ ಹೋಗುವುದಾದರು ಎಂದು? ಎಂದನ್ನಿಸುತ್ತಿತ್ತು. ಅಲ್ಲಿಗೆ ಹೋಗಲು ಮನಸ್ಸು ಹಾತೊರೆಯುತ್ತಿತ್ತು. ಹೊರಗೆ ತೋರಿಸಿಕೊಳ್ಳಲಿಲ್ಲ ಅಷ್ಟೆ. ಆ ಬಂಡೆಯ ಮೇಲಿ ನಿಂತು ಭಾರತ ಮಾತೆಯನ್ನು ನೋಡಬೇಕೆಂಬ ಕನಸು ನನಸಾಯಿತು. ಬಿಸಿಲು ಹೆಚ್ಚು ಆದರೂ ತಂಪಾಗಿತ್ತು, ಕಾರಣ ವಿವೇಕಾನಂದರು. ಆ ಬಿಸಿಲಿನಲ್ಲಿ ಆ ಪುಣ್ಯಾತ್ಮ, ಸಮುದ್ರದಲ್ಲಿ ಈಜಿ, 3 ದಿವಸ ತಾಯಿ ಭಾರತಿಗಾಗಿ ಕಣ್ಣೀರಿಟ್ಟು ಧ್ಯಾನ ಮಾಡಿದನ್ನು ಅಲ್ಲಿ ನಿಂತು ನೆನೆಯುವುದೆ ಒಂದು ಅದ್ಭುತ ಅನುಭವ.

ವಿವೇಕಾನಂದರ ಮೂರ್ತಿಯನ್ನು ನೋಡಿ, ಧ್ಯಾನ ಮಂದಿರದಲ್ಲಿ ಧ್ಯಾನಮಾಡಿ, ಬಂಡೆಯ ಮೇಲೆ ನಿಂತಾಗ ಆಗುವ ಅನುಭವವನ್ನು ಅನುಭವಿಸಿಯೇ ತಿಳಿಯಬೇಕು. ನನಗಂತು ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆ ಅನುಭವ ನಮ್ಮ ಕಲ್ಪನೆಗೂ ಮೀರಿದ್ದು. ಒಂದು ರೀತಿ ವಿದ್ಯುತ್ ಸಂಚಾರವಾದಂತಾಯಿತು. ಹೃದಯ ಹಗುರವಾಗಿತ್ತು. ಮನಸ್ಸು ತಿಳಿಯಾಗಿತ್ತು. ಸ್ವಲ್ಪ ಎಚ್ಚರಿಕೆಯಿಂದ ಧ್ಯಾನ ಮಾಡಿದ್ದಿದ್ದೆ ಆದರೆ ಸಾಕ್ಷಾತ್ ವಿವೇಕಾನಂದರೆ ಕಾಣಿಸುತ್ತಿದ್ದರು ಆನ್ನಿಸುತ್ತದೆ. ಮನಸ್ಸಿನ ಜಡತ್ವ ನಿವಾರಣೆ ಆಗಿತ್ತು. ಬೇರೆಯವರಿಗೆ ನನ್ನಲ್ಲಿ ಆದ ಬದಲಾವಣೆ ಕಾಣುತ್ತದೋ ಏನೊ ತಿಳಿಯದು ಆದರೆ ನನ್ನೊಳಗಾದ ಬದಲಾವಣೆ ನನಗೆ ಚೆನ್ನಾಗೆ ಅನುಭವಕ್ಕೆ ಬಂತು. ಸ್ವಾಮೀಜಿಯವರ ಶಕ್ತಿ ಅಪಾರ ಎಂದು ಕೇಳಿದ್ದೆ, ಈಗ ಅನುಭವಕ್ಕೆ ಬಂತು.

ವಾಪಸ್ಸು ಹೊರಡಬೇಕಾದರೆ 3 ದಿನಗಳು ಇಷ್ಟು ಬೇಗ ಮುಗಿಯಿತಲ್ಲ ಎಂಬ ಭಾವ ಆವರಿಸಿತ್ತು. ಬೆಂಗಳೂರಿನಿಂದ ಹೋಗಬೇಕಾದರೇ ಒಬ್ಬ ಸ್ನೇಹಿತ (ಅನೂಪ್) ಮಾತ್ರ ಪರಿಚಯವಿದ್ದ. ವಾಪಸ್ಸು ಬರಬೇಕಾದರೆ 45 ಅಣ್ಣ/ತಮ್ಮ/ಅಕ್ಕ/ತಂಗಿಯರು ಸಿಕ್ಕಿದರು! ಇದು ಆ ದೇವತಾ ಮನುಷ್ಯನ ಪ್ರೇರಣೆಯೆ ಸರಿ. ಅದರಲ್ಲೂ ಕೆಲವರು ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದ್ದರು. ಇಂತಹ ಅನುಭವಕ್ಕೆ ಜೊತೆಯಾದ ಎಲ್ಲರಿಗೂ ನನ್ನ ಅತ್ಯಂತ ಪ್ರೀತಿ ಪೂರಕವಾದ ಧನ್ಯವಾದಗಳು.

April 18, 2015

ನಾವ್ಯಾಕೆ ಹೀಗೆ...? - ಮದುವೆಯ ಮಾತು

ನಮ್ಮ ಮನೆಗಳಲ್ಲಿ ಕೆಲವು ದಿನಗಳಿಂದ ಮದುವೆ ಬಗ್ಗೆ ಮಾತು ಕಥೆ ನಡೆಯುತ್ತಿತ್ತು. ಅದೃಷ್ಟವಶಾತ್ ನನ್ನ ಮದುವೆ ವಿಚಾರವಂತೂ ಅಲ್ಲ. ಇಲ್ಲಿ ಅದೃಷ್ಟವಶಾತ್ ಅನ್ನಲು ಕಾರಣವಿದೆ. ಮದುವೆ ಎಂಬುದು ಎರಡು ಮನಸ್ಸುಗಳ, ಎರಡು ಹೃದಯಗಳ, ಎರಡು ಕುಟುಂಬಗಳ ಸಮ್ಮಿಲನ ಎಂದು ನಾನು ತಿಳಿದು ಕೊಂಡಿದ್ದೆ. ಇತ್ತೀಚೆಗೆ ಅದೆಲ್ಲವೂ ಸುಳ್ಳು ಎಂದು ಅನ್ನಿಸಲು ಶುರುವಾಗಿದೆ.
 
ಮೇಲೆ ನಾ ಹೇಳಿದ ಪದಗಳು; "ಮನಸ್ಸು, ಹೃದಯ, ಕುಟುಂಬ" ಇವುಗಳಿಗೆ ಇವತ್ತಿನ  ದಿನಗಳಲ್ಲಿ ನಮ್ಮ ಸಮಾಜ ಕೊಟ್ಟಿರುವ ಅರ್ಥವೇನು ಎಂದು ಕಂಡುಕೊಳ್ಳಲು ನನಗೆ ಆಗುತ್ತಿಲ್ಲ. ನಾನು ಅರ್ಥ ಮಾಡಿಕೊಂಡಿರುವ ಮಟ್ಟಿಗೆ ಇದಕ್ಕೆಲ್ಲ ಒಂದು ಪದದಲ್ಲಿ ಉತ್ತರ ಕೊಡಬಹುದು. ಆ ಪದ ಹೇಳಲು ನೋವಾಗುತ್ತದೆ, ಅದನ್ನು 'ವ್ಯವಹಾರ' ಎಂದು ಕರೆಯುತ್ತಿದ್ದೇನೆ!
 
ಮನೆಯಲ್ಲಿ ಇಂತಹ ಮಾತುಗಳನ್ನು ಕೇಳಬೇಕಾಗಿ ಬಂತಲ್ಲ ಎಂಬುದು ನನ್ನ ನೋವು. ನನ್ನ ಸಂಬಂಧಿಕರೊಬ್ಬರಿಗೆ ಹುಡುಗನನ್ನು ಹಾಗು ಅವರ ಅಣ್ಣನಿಗೆ ಹುಡುಗಿಯನ್ನು ಹುಡುಕುತ್ತಿದ್ದರು. ಇದೇ ವಿಚಾರವಾಗಿ ಅಮ್ಮ ತನ್ನ ಅಕ್ಕ, ತಂಗಿಯರು, ಅಣ್ಣ ತಮ್ಮಂದಿರೊಂದಿಗೆ ಮಾತು ನಡೆಯುತ್ತಿದ್ದವು. ಕೆಲವು ಗಂಡುಗಳನ್ನು ಬೇಡವೆಂದಿದ್ದರು. ಕಾರಣಗಳು ನನ್ನ ಮಟ್ಟಿಗೆ ವಿಚಿತ್ರ
  • ಹುಡುಗ KMF ನಲ್ಲಿ ಕೆಲಸ ಮಾಡಿಕೊಂಡಿದ್ದ ಹಾಗಾಗಿ, ಆತ ಮುಂದೆ ಕೆಲಸ ಬದಲಾಯಿಸಲು ಸಾಧ್ಯವಿಲ್ಲ ಎಂಬ ಕಾರಣ.
  • ಹುಡುಗ  BE / MBA ಮಾಡಿರಲ್ಲಿಲ್ಲ ಎಂಬುದು ಅವರು ಕೊಟ್ಟ ಪ್ರಮುಖ ಕಾರಣ.
  • ಹುಡುಗಿ ಕೆಲೆಸದಲ್ಲಿಲ್ಲ ಹಾಗಾಗಿ ಬೇಡ ಎಂದು ನಮ್ಮಮ್ಮನೇ ನಿರ್ಧಾರ ಮಾಡಿಬಿಟ್ಟಳು.
  • ಹುಡುಗ ನೋಡಲು ಸ್ವಲ್ಪ ವಯಸ್ಸಾಗಿ (30 ವರ್ಷ) ಕಾಣಿಸುತ್ತಿದ್ದ ಎಂಬ ಕಾರಣ.
  • ಸ್ವಂತ ಮನೆ ಇರಲ್ಲಿಲ್ಲ ಬೆಂಗಳೂರಿನಲ್ಲಿ ಎಂಬ ಮತ್ತೊಂದು ಕಾರಣ. ಅತ್ತೆ ಮಾವ ಒಟ್ಟಿಗಿದ್ದಾರೆ ಹಾಗಾಗಿ ಹುಡುಗ ಬೇಡ.
ಈ ರೀತಿಯ ಮಾತುಗಳನ್ನು ಕೇಳಿ ನನಗಂತೂ ಸಾಕಾಗಿ ಹೋಗಿದೆ. ಸಂಬಂಧಗಳನ್ನು ವ್ಯಾವಹಾರಿಕ ದೃಷ್ಟಿಯಲ್ಲಿ ನೋಡುವುದು ಅತೀ ಕ್ರೂರ ಎಂದು ನನ್ನ ಅಭಿಪ್ರಾಯ. ಯಾಕೆ ಈ ರೀತಿ ನಿಮ್ಮ ಯೋಚನೆ ಎಂದು ಕೇಳಬೇಕು ಎಂದು ಹಲವು ಸಲ ಅಂದುಕೊಂಡಿದ್ದೇನೆ. ಆದರೆ, ನನಗೆ ಸಮಾಜಾಯಿಶಿ ಕೊಡುತ್ತಾರೆ ಹೊರತು ಸಮರ್ಪಕವಾದ ಉತ್ತರ ಬರುವುದಿಲ್ಲ ಎಂದು ನನ್ನ ನಂಬಿಕೆ.

ಇನ್ನು ಕೆಲವು ಮಾತುಗಳು ಮತ್ತು ಇವರುಗಳ ಕಾರ್ಯಗಳನ್ನು ನೋಡುತ್ತಿದ್ದೇನೆ, ಪುನರಾವರ್ತನೆ ಎನಿಸಿದರೂ ನನಗೆ ಇವುಗಳು ಅಸಹನೀಯ. ಇನ್ನು ಹೇಳಬೇಕೆಂದರೆ ಇದು ಸಹನೆಯ ಮಿತಿಯನ್ನು ಮೀರಿ ಅಸಹ್ಯ ಎನಿಸುತ್ತಿದ್ದೆ.
  • ಹುಡುಗನ Biodata ವನ್ನು ಕೊಡಬೇಕಾಗುತ್ತದೆ ಎಂದು ಹಣಕೊಟ್ಟು MBA Certificate ಪಡೆದುಕೊಳ್ಳುವುದು.
  •  ಅದರಲ್ಲಿ ತಪ್ಪು ಮಾಹಿತಿ ಕೊಡಬೇಡಿ, ಮುಂದೆ ತೊಂದರೆಯಾಗಬಹುದು. ಇವರ ಅರ್ಥದಲ್ಲಿ ತೊಂದರೆ ಎಂದರೆ ಹುಡುಗಿ ಮದುವೆ ಬೇಡ ಎನ್ನಬಹುದು ಅಥವಾ ಬಿಟ್ಟು ಹೋಗಬಹುದು ಎಂದು.
  • ಕೆಲಸ ಸರಿ ಹೋಗಲಿ ಬಿಡಲಿ ಸಂಬಳ ಜಾಸ್ತಿ ಬರೋಕಡೆ ಸೇರಿಕೊ. ಇಲ್ಲವಾದಲ್ಲಿ ಹುಡುಗೀಯರು ಒಪ್ಪುವುದಿಲ್ಲ ಎಂಬ ಉಪದೇಶ.
  •  ಬ್ಯಾಂಕಿನಲ್ಲಿರುವ ಹಣದ ಬಗ್ಗೆ ಒಂದಷ್ಟು ಮಾತು.
  •  ನಾವು ನೋಡಲು ಚೆನ್ನಾಗಿ ಕಾಣಬೇಕು. ಆರೋಗ್ಯದ ಕಥೆ ಆಮೇಲಿನದು. ಕಾರಣ; ದಪ್ಪವಾಗಿರುವುದು, ಗಡ್ಡಬಿಡುವುದರಿಂದ ಹುಡುಗಿಯರು ಒಪ್ಪುವುದಿಲ್ಲ.
ಇದರಿಂದ ನನಗೆ ಹಲವು ಪ್ರಶ್ನೆಗಳು ಮನಸ್ಸಲ್ಲಿ ಹುಟ್ಟುತ್ತದೆ.
  •   ಮನುಷ್ಯ ಇದಕ್ಕಿಂತಲೂ ಕ್ರೂರವಾಗಿರಲು ಸಾಧ್ಯವ?
  •   ವ್ಯವಹಾರ ಮಾಡುವುದರಲ್ಲೂ ಮೌಲ್ಯವೆನುವುದು ಇರುತ್ತದೆ. ಇದು ಏನು?
  •   ಬದುಕಿನಲ್ಲಿ ಹಣಕ್ಕೆ, ಸೌಂದರ್ಯಕ್ಕೆ ಈ ಮಟ್ಟದ ಪ್ರಾಮುಖ್ಯತೆ ಕೊಡಬೇಕಾ?
  •   ಇಂತಹ ಚಿಂತನೆಗಳಿಂದ ನಮ್ಮ ಸಮಾಜವನ್ನು ಏನು ಮಾಡುತ್ತಿದ್ದೇವೆ?
  •   ಮುಂದಿನ ಪೀಳಿಗೆಗೆ ಹೇಳಿಕೊಡುವುದಾದರು ಏನನ್ನು?
ಒಳ್ಳೆ ಸಂಬಳ ಬರುತ್ತದೆ, ಸ್ವಂತ ಮನೆ ಇದೆ, ಬ್ಯಾಂಕಿನಲ್ಲಿ ಇಷ್ಟೇ ಹಣವಿದೆ ಎಂಬ ಕಾರಣಕ್ಕೆ ಮದುವೆಗೆ ಒಪ್ಪುತ್ತಾರೆ. ಹಾಗಾದರೆ, ನಾವು ಹುಡುಕುತ್ತಿರುವುದು ಬಾಳ ಸಂಗಾತಿಯನ್ನೊ? ಅಥವಾ ವ್ಯವಹಾರವನ್ನು ಹಂಚಿಕೊಳ್ಳಲೊ?

MBA / BE / MS ಮಾಡಿದ್ದಾರೆ ಎಂಬ ಕಾರಣಕ್ಕೆ ಮದುವೆ ಒಪ್ಪಿಕೊಳ್ಳುತ್ತಾರೆ. ಹಾಗಾದರೆ, ನಾವು ಹುಡುಕುತ್ತಿರುವುದು ವಧು, ವರರನ್ನೊ ಅಥವಾ ನಮ್ಮ ಕಚೇರಿಗೆ ಕೆಲಸ ಮಾಡುವವರನ್ನೊ?

ಅವರು ನೋಡಲು ಸುಂದರವಾಗಿದ್ದಾರೆ ಎಂಬ ಕಾರಣಕ್ಕೆ ಒಪ್ಪಿಕೋಳ್ಳುತ್ತಾರೆ. ಹಾಗಾದರೆ, ನಾವು ಮದುವೆ ಎಂದು ಆಗುವುದು ಜೀವನದಲ್ಲಿ ಜೊತೆಯಾಗಿ ಹೆಜ್ಜೆ ಇಡಲೊ ಅಥವಾ ಫ಼್ಯಾಶನ್ ಪ್ರದರ್ಶನದಲ್ಲಿ ಬೆಕ್ಕಿನ ನಡಿಗೆ ಮಾಡಲೊ?

ಇದು ಹೀಗೆ ಮುಂದುವರೆದರೆ ನಮ್ಮ ಸಮಾಜದ ಆರೋಗ್ಯ ಎಷ್ಟರ ಮಟ್ಟಿಗೆ ಹಾಳಾಗಬಹುದು ಎಂಬುದು ಯೊಚಿಸಬೇಕಾದ ಸಂಗತಿ. ಬದುಕಲು ಹಣದ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿಲ್ಲ. ಆದರೆ, ಹಣವೇ ಮುಖ್ಯವಲ್ಲ. ನಾವು ಹಣದ ಕೊರತೆ, ಊಟದ ಕೊರತೆ, ಮಾಹಿತಿಗಳ ಕೊರತೆ ಹಾಗು ಇನ್ನು ಇತರೆ ಯಾವುದೇ ರೀತಿಯ ಕೊರತೆಗಳನ್ನು ತುಂಬಿಕೊಳ್ಳಬಹುದು. ಆದರೆ, ಪ್ರೀತಿಗೆ ಬರ ಬಂದರೆ ಸಮಾಜ ಜೀವಂತ ಶವವಾಗುತ್ತದೆ. ಅಂತಹ ಸಮಾಜದ ಕಲ್ಪನೆಯೆ ನನ್ನಲ್ಲಿ ಭಯ ಹುಟ್ಟಿಸುತ್ತಿದೆ.

ಈ ಮೂಲಕ ನಾನು ಕೇಳಿಕೊಳ್ಳುವುದು ಒಂದೆ, ದಯವಿಟ್ಟು ಪ್ರೀತಿಸುವುದನ್ನು ಕಲಿಯಿರಿ.

March 7, 2015

ನಾವ್ಯಾಕೆ ಹೀಗೆ...? - ಗತಿ

ಇತ್ತೀಚೆಗೆ ಶ್ರೀ ಸೇತುರಾಂರವರ 'ಗತಿ' ಎಂಬ ನಾಟಕವನ್ನು ನೋಡಿದೆ. ಆ ನಾಟರ್ಕದ ಕಥಾವಸ್ತು ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಅದರ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಬೇಕು ಎಂದು ನಾ ಅಂದುಕೊಂಡಿದ್ದು ಉಂಟು ಮತ್ತು ನನ್ನ ಅಣ್ಣ (ಮಾವನ ಮಗ) ಸಿಂಹ ಕೇಳಿದ್ದು ಉಂಟು. ನಾಟಕ ನೋಡಿದ ದಿನವಂತು ಮಾತಾಡದೆ ಮೌನಿಯಾಗಿದ್ದೆ. ಬರೆಯ ಬೇಕು ಎಂದು ಕೊತಾಗ ಹೇಗೆ, ಏನು ಎಂಬುದು ಹೊಳೆಯಲು ಕೆಲ (ತುಂಬ) ಹೊತ್ತು ಹಿಡಿಯಿತು. ಬರಯಲೇ ಬೇಕು ಎಂದು ಹಟ ಹಿಡಿದು ಕೂತಾಗ ವಿಚಾರಗಳು ಹೊರಬಂತು.
 
 
'Green Tea' ಕುಡಿದಾಗ ನಮ್ಮ ಉದರ ಹೇಗೆ ಶುಚಿಯಾಗುತ್ತದೋ ಹಾಗೆ ಈ ನಾಟಕ ನೋಡಿ ಮನಸ್ಸು ಶುಚಿಯಾದ ಭಾವನೆ ನನ್ನನ್ನು ಆವರಿಸಿತು. ಸಂಭಾಷಣೆಗಳಂತೂ ತುಂಬಾ ನೇರ ಮತ್ತು ಹರಿತವಾಗಿತ್ತು. ಅವುಗಳನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗಿತ್ತು. ಬದುಕಿನ ಕಹಿ ಸತ್ಯವನ್ನು ನೇರವಾಗಿ ಹೇಳಲಾಗಿತ್ತು. ನಾವು ನಮ್ಮ ಪಾಪ ಪುಣ್ಯಗಳ ವಿಮರ್ಶೆ ಮಾಡಿಕೊಳ್ಳುವುದು ಅವಶ್ಯಕ ಅನ್ನಿಸಿತು. ನಾವುಗಳು ಸಾತ್ವಿಕರಾಗಿದ್ದರೂ ನಮ್ಮ ಎದುರಿಗೆ ಅನ್ಯಾಯ ನಡೆದರೆ, ಆ ಪಾಪದಲ್ಲಿ ನಮ್ಮ ಪಾಲು ಇದೆ ಎಂದು ಅನ್ನಿಸಿತು, ಮನುಷ್ಯ ಜವಾಬ್ದಾರಿಯಯನ್ನು ಮರೆತು, ಸತ್ಯ ಅಸತ್ಯಗಳ ಅರಿವಿಲ್ಲದೆ, ಪ್ರಜ್ಞಾ ಶೂನ್ಯರಾಗಿ, ಬಾಳುವುದನ್ನು ಜೀವಂತ ಶವ ಎಂಬುವುದಕ್ಕೆ ಹೋಲಿಸಬಹುದು.
 
ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮೊಮ್ಮಕ್ಕಳ ನಡುವಿನ ಸಂಬಂಧಗಳ ಅರ್ಥ, ಮೌಲ್ಯಗಳ ಬಗ್ಗೆ ಚರ್ಚಿಸುವುದು ಇತ್ತೀಚಿನ ದಿನಗಳಲ್ಲಿ ಖಂಡಿತ ಅವಶ್ಯಕ. ನಾವುಗಳು 'Generation Gap' ಎಂಬ ಹಾರಿಕೆ ಉತ್ತರವನ್ನು ಕೊಟ್ಟು ಮತ್ತೊಂದು ಪೀಳಿಗೆಯವರನ್ನು ದೂರವಿಡುತ್ತಿದ್ದೇವೆ. ಅವರುಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅಜ್ಜಿ ಅಜ್ಜಂದಿರ ಪ್ರೀತಿ (ಮುದ್ದು) ಮಕ್ಕಳಿಗಾಗಲಿ, ಮೊಮ್ಮಳಿಗಾಗಲಿ ಸಹ್ಯವಾಗುವುದಿಲ್ಲ. ಹಾಗೆಂದು ಮನಸ್ಸಿಗೆ ಅನ್ನಿಸಿದಾಗ ಅವರುಗಳನ್ನು ದೂರವಿಡುತ್ತಾರೆ. ಹತ್ತಿರವಿದ್ದರೂ ದೂರ. ಅವರನ್ನು ನೋಡಿಕೊಳ್ಳುವುದಿಲ್ಲ ಬದಲಾಗಿ ಸಾಕುತ್ತಾರೆ. ಸಾಕುವುದು ಪ್ರಾಣಿಗಳನ್ನು ಎಂದು ಮರತುಹೋಗಿಬಿಡುತ್ತಾರೆ. ಇದು ಕ್ರೌರ್ಯದ ಪರಮಾವಧಿ. ಅದು ಸಾಧ್ಯಾವಾಗದಿದ್ದಾಗ ವೃದ್ಧಾಶ್ರಮದ ದಾರಿ ಹುಡುಕುತ್ತಾರೆ. ಇದು 5 - 10 ವರ್ಷದ ಹಿಂದಿನ ಮಾತಾಯಿತು. ವೃದ್ಧಾಶ್ರಮದಲ್ಲಿದ್ದಾರೆ ಎಂದು ಹೊರಗಿನವರಿಗೆ (ಸಂಬಂಧಿಕರಿಗೆ) ಗೊತ್ತಾದರೆ...? ಅವಮಾನ, ತಮ್ಮಗಳ ಪ್ರತಿಷ್ಠೆಯ ಪ್ರಶ್ನೆ. ಹಾಗಾಗಿ ವೃದ್ಧರು 70 -75 ಮೀರಿದ ಮೇಲೆ ಮಕ್ಕಳು ಮೊಮ್ಮಕ್ಕಳ ದೃಷ್ಠಿಯಲ್ಲಿ ಬದುಕುವ ಅರ್ಹತೆ ಕಳೆದುಕೊಳ್ಳುತ್ತಾರೆ...!!! ಇದನ್ನು ಮಕ್ಕಳೇ ತೀರ್ಮಾನಿಸಿಬಿಡುತ್ತಾರೆ...!!!
 
ಈ ಮೇಲಿನ ಮಾತುಗಳು ಕಟುವಾದರೂ, ಸಹಜವಾದ ಸತ್ಯ. ಇದರ ಪರಿಣಾಮವಾಗಿ ಅವರುಗಳಿಗೆ ಊಟವನ್ನು, ಪಥ್ಯವನ್ನು ಕೊಟ್ಟೋ, ಕೊಡದೆಯೋ ಕೊಲ್ಲುತ್ತಾರೆ. ಮೊಮ್ಮಕ್ಕಳು, ಅಜ್ಜಂದಿರ ಪ್ರೀತಿ, ಮಮತೆಯನ್ನು ಕಳೆದುಕೊಳ್ಳುತ್ತರೆ. ಆದ್ದರಿಂದ ಪ್ರೀತಿಯನ್ನು ಬೇರೆಲ್ಲೋ ಹುಡುಕುತ್ತಾರೆ. ಹೀಗೆ ಸಿಗುವ ಪ್ರೀತಿ/ಸ್ನೇಹದ ಪಾವಿತ್ರ್ಯತೆ ಎಷ್ಟರ ಮಟ್ಟಿದ್ದೋ ನಮಗೆ ತಿಳಿಯುವುದಿಲ್ಲ. ಅಲ್ಲಿ ನಾವುಗಳು compromise ಆಗಲು ತಯಾರಾಗಿಬಿಡುತ್ತೇವೆ. ಇದರ ವಿಚಾರದ ಬಗ್ಗೆ ನಾವು ಯೋಚೆಸುವುದೇ ಇಲ್ಲ.
 
ಹೊರದೇಶಗಳಲ್ಲಿ ಮಕ್ಕಳಿಗೆ 14-18 ವರ್ಷಗಳಾದ ಮೇಲೆ ತಂದೆ ತಾಯಂದರಿಂದ ದೂರ ಹೋಗಿ ಸ್ವತಂತ್ರ್ಯರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಅದು ಅಲ್ಲಿನ ಸಂಸೃತಿ ಅಥವಾ ಜೀವನ ಪದ್ದತಿ. ಅವರುಗಳನ್ನು ಅನುಸರಿಸಲು (ಅನುಕರಣೆ) ಹೋಗಿ ನಮ್ಮತನವನ್ನು ನಾವು ನಾಶಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಭಾರತೀಯತೆ ಹಾಳಾಗುತ್ತಿದೆ. ಇದೆಲ್ಲಾ ನೋಡುತ್ತಾ ಹೋದರೆ ನಾವು ಯಾವ ಸ್ಥಿತಿ ಮುಟ್ಟುತ್ತೇವೆ ಎಂಬುದು ಮುಖ್ಯವಾದ ಪ್ರಶ್ನೆ. ಇಂತಹ ಜನಗಳ ಮಧ್ಯೆ ಒಂಟಿಯಾಗಿರುವುದೇ ಲೇಸು ಎಂಬ ಭಾವ ನಮ್ಮನ್ನು ಆವರಿಸುವುದು ಸಹಜ. ಸಂಬಂಧಗಳ ಮೌಲ್ಯ ಅರ್ಥವಾಗಲಿ, ಹೋದಿಕೊಂಡು ಬಾಳುವ ಮನಸ್ಥಿತಿ ನಮ್ಮದಾಗಲಿ, ಭಾರತೀಯತೆ ಮೆರೆಯಲಿ, ಭಾರತ ಮತ್ತೊಮ್ಮೆ ಜಗದ್ಗುರುವಾಗಲಿ ಎಂದು ಆಶಿಸುತ್ತೇನೆ.

January 17, 2015

ಮತಾಂತರ - ಒಂದು ವಿಷಸರ್ಪ

1. ಇತ್ತೀಚೆಗೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದಾಗ ಆ ಮನೆಯ ಮಗಳು 'ಸಾಂತ ಕ್ಲಾಸ್'ನ ವೇಷವನ್ನು ಧರಿಸಿ ನಮ್ಮ ಶಾಲೆಯಲ್ಲಿ 'Christmas' ಅನ್ನು ಆಚರಿಸಿದೆವು ಎಂದು ಹೇಳಿದಳು. ಆ ಮಗುವಿನ ಮುಖದಲ್ಲಿ ಸಂತೋಷ, ತಾನು ಧರಿಸಿದ್ದ ವೇಷದ ಬಗ್ಗೆ ಹೆಮ್ಮೆ ಕಾಣುತ್ತಿತ್ತು. ಜೊತೆಗೆ ಆ ಮಗು ನನ್ನ ಕೈಯಲ್ಲಿ 'The Bible' ಎಂಬ ಸಣ್ಣ ಪುಸ್ತಕವೊಂದನ್ನು ತಂದು ಕೊಟ್ಟಿತು.

2. ಕೆಲವು ದಿನಗಳ ಹಿಂದೆ ನಗರದ ವಿಜಯನಗರದಲ್ಲಿರುವ ಶಾಲೆಯ ಮುಂದೆ ಯಾವುದೋ ಕೆಲಸಕ್ಕಾಗಿ ಹೋಗುತ್ತಿದ್ದೆ. ಅಲ್ಲೊಂದು ಮುಸಲ್ಮಾನ ಹುಡುಗರ ಗುಂಪು ಒಬ್ಬ ಹುಡುಗನೊಂದಿಗೆ ಜಗಳವಾಗುತ್ತಿತ್ತು (ಬಹುಶಃ ಹಿಂದು ಹುಡುಗನೆಂದು ತೋರುತ್ತಿತ್ತು). ಏನೆಂದು ವಿಚಾರಿಸಲು ಹೊರಟೆ, ಅಷ್ಟರಲ್ಲಿ ಆ ಶಾಲೆಯ ಕೆಲವರು ಬಂದು ಅವರನೆಲ್ಲ ಚದುರಿಸಿದರು. ಈ ವಿಚಾರವಾಗಿ ಅಲ್ಲಿದ್ದ ಅಂಗಡಿಯೊಬ್ಬನನ್ನು ವಿಚಾರಿಸಿದೆ. "ಯಾರೋ ಒಬ್ಬ ಹಿಂದು ಹುಡುಗ, ಮುಸಲ್ಮಾನರ ಒಬ್ಬ ಹುಡುಗಿಯನ್ನು ಶಾಲೆಯಲ್ಲಿ ಮಾತಾಡಿಸಿದ ಎಂಬ ಕಾರಣಕ್ಕೆ ಈ ಗಲಾಟೆ. ಈ ರೀತಿ ಇಲ್ಲಿ ತುಂಬ ದಿನಗಳಿಂದ ನಡೆಯುತ್ತಿದೆ. ಶಾಲೆಯ ಪ್ರಾಂಶುಪಾಲರು ಯಾವುದೇ ಕ್ರಮವನ್ನು ಕೈಗೊಳ್ಳುತಿಲ್ಲ. ಬದಲಾಗಿ ಈ ವಿಚಾರ ಶಾಲಾ ಆವರಣದಿಂದ ಹೊರಗೆ ನಡೆಯುವ ವಿಚಾರ ಆದ್ದರಿಂದ ನಮಗೂ ಈ ಘಟನೆಗಳಿಗೂ ಯಾವುದೇ ಸಂಭಂದವಿಲ್ಲ ಎಂದು ಸುಮ್ಮನ್ನಿದ್ದಾರೆ".
 
Religious conversion by Christian Missionaries

ಮೇಲಿನ ಎರಡೂ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೇ, 'ಮತಾಂತರದ' ಕಪ್ಪು ಚಾಯೆ ನಮ್ಮ ಸಮಾಜವನ್ನು ಆಕ್ರಮಿಸುತ್ತಿರುವುದು ಗೊಚರವಾಗುತ್ತದೆ. ಈ ಮುಲಕ ನಮ್ಮ ಸಮಾಜವನ್ನು, ಭಾರತೀಯರ ಏಕತೆಯ ಭಾವನೆಯನ್ನು ಒಡೆಯುವ ಪ್ರಯತ್ನವೆಂದೇ ಹೇಳಬಹುದು. ಹಾಗು ಒಬ್ಬ ದುರ್ಬಲ ಮನಸ್ಸಿನ ವ್ಯಕ್ತಿಯು ತನ್ನ ತಾಯಿ ಧರ್ಮವನ್ನು (ಹಿಂದುತ್ವ) ತೊರೆದು, ಬೇರೊಂದು (೧. ಕ್ರೈಸ್ತ ೨. ಇಸ್ಲಾಮ್) ಧರ್ಮಕ್ಕೆ ಮಾತಾಂತರಗೊಳ್ಳಲು ಪ್ರೇರೆಪಿಸುತ್ತದೆ. ಈ ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು 'ವಿಭಜಿಸಿ ಆಳುವ' ತಂತ್ರ ಆಂಗ್ಲರ ಪದ್ದತಿಯಾಗಿತ್ತು. ಆದರೆ ಈಗ ಅಂದರೆ ಸ್ವಾತಂತ್ರ್ಯ ಬಂದು ೬೭ ವರ್ಷಗಳಾದರೂ ನಾವು ನಮ್ಮವರ ಕೆಳಗೇ ಗುಲಾಮರು...!!!

ಹಿಂದುಸ್ತಾನವೆಂಬ ದೇಶವನ್ನು 'ಇಂಡಿಯ' ಎಂದು ಬದಲಾಯಿಸಿದವರು ಆಂಗ್ಲರು. ಇದಕ್ಕೆ ಕಾರಣ ಮುಲತಃ ಕಾರಣ ಆಂಗ್ಲ ನಾಡಿನಿಂದ ಬಂದ ಕ್ರೈಸ್ತ ಪಾದ್ರಿಗಳು ಹಾಗು ಇಸ್ಲಾಮ್ ರಾಜ್ಯಗಳಿಂದ ಬಂದ ಮೊಘಲರು. ಹೊರನೊಟಕ್ಕೆ ಇಬ್ಬರ ಉದ್ದೇಶ ಸಾಮ್ರಾಜ್ಯ ಸ್ಥಾಪನೆ ಹಾಗು ವ್ಯಾಪಾರವಾಗಿದ್ದರೂ ಸಹ ಮೂಲ ಉದ್ದೇಶ; ಧರ್ಮ ಪ್ರಚಾರ ಹಾಗು ಮತಾಂತರ. ಹೊರದೇಶದವರು ಈ ಮತಾಂತರದ ತತ್ವವನ್ನು ಚೆನ್ನಾಗಿ ಉಪಯೋಗಿಸಿಕೊಂಡರು.
 
ಇದೇ ಬೇದಭಾವದಿಂದಲೆ ಗಂಡುಗಲಿಗಳ ನಾಡಾದ ಚಿತ್ರದುರ್ಗವನ್ನು ಆಳಿದ 'ಮದಕರಿನಾಯಕ'ನನ್ನು ಹೈದರಲಿ ಸೋಲಿಸುವಂತಾಯಿತು. ಆಂಗ್ಲರು ಕೂಡ ಭಾರತವನ್ನು ೨೫೦ ವರ್ಷಗಳು ಆಳಿ, ಲೂಟಿ ಮಾಡುವಂತಾಯಿತು. ಇದು ಸ್ವಾತಂತ್ರ್ಯ ಪೂರ್ವದ ಕಥೆಯಾದರೆ, ಮೇಲೆ ಹೇಳಿದ ೨ ಘಟನೆಗಳು ಇಂದಿನ ಸಮಾಜದ ಸಣ್ಣ ನಿದರ್ಶನವಷ್ಟೇ. ೧೯೪೭ ಆಗಸ್ಟ್ ೧೫ರ ನಂತರ, ಸ್ವಾತಂತ್ರ್ಯದ ಕಿಚ್ಚನ್ನ ಉಳಿಸಿಕೊಂಡು ಭಾರತವನ್ನು ಬೆಳಗಿಸಿ ಮತ್ತೆ ಜಗದ್ಗುರುವನ್ನಾಗಿ ಬೆಳಗಿಸಬೇಕಿತ್ತು. ಆದರೆ, ಇಂದಿನ ಸ್ಥಿತಿಯನ್ನು ಗಮನಿಸಿದರೆ 'ಸ್ವಾತಂತ್ರ್ಯದ ಕಿಚ್ಚು' ಎಂಬ ಪದದ ಅರ್ಥವನ್ನೆ ಮರೆತಂತಿದೆ. ಇದಕ್ಕೆಲ್ಲ ಮುಲಭೂತ ಕಾರಣವೆಂದರೆ ಮತ ಹಾಗು ಧರ್ಮಗಳ ಮೇಲೆ ನಮ್ಮ ಸಮಾಜದ ಒಗ್ಗಟ್ಟನ್ನು ಮುರಿಯುತ್ತಿದ್ದಾರೆ.

ಹಾಗಾಗಿ ನಾವು ಒಂದಾಗಬೇಕು, 'ಅನೇಕತೆಯಲ್ಲಿ ಏಕತೆ' ಎಂಬ ಮಂತ್ರವನ್ನು ಜಪಿಸಬೇಕು.ಈ ರೀತಿಯ ಮಾತುಗಳನ್ನು ಉಪಯೋಗಿಸಿಕೊಂಡು ಎಲ್ಲ ರಾಜಕೀಯ ವ್ಯಕ್ತಿಗಳು, ಬುದ್ಧಿಜೀವಳು ನಮ್ಮಲ್ಲಿ ಒಡಕು ತರುತ್ತಿದ್ದರೇ ಹಾಗು ತಾವುಗಳು ಬೆಳೆಯುತ್ತಿದ್ದಾರೆ. ಇವರುಗಳ ಮಾತು ನಂಬಿಕೊಂಡು ನಾವುಗಳು ಹಾಳಾಗುತ್ತಿದ್ದೇವೆ. ನಮ್ಮ ಮೂಲಕ ಮತ್ತೆ ನಮ್ಮವರ ಕೆಳಗೆ ಭಾರತವನ್ನು ದಾಸರನ್ನಾಗಿ ಮಾಡುತ್ತಿದ್ದಾರೆ.

ಇದಕ್ಕೆಲ್ಲ ಪರಿಹಾರವೇನು? ಎಂಬ ಪ್ರಶ್ನೆ ನನ್ನನ್ನು ಹಲವು ಸಲ ಕಾಡಿದೆ. ಇದಕ್ಕೆ ಉತ್ತರವಾಗಿ ನನಗೆ ಹೊಳೆದಿದ್ದು
  • ಭಾರತದಲ್ಲಿ ಮತ್ತೆ ಹಿಂದುತ್ವವನ್ನು ಸ್ಥಾಪಿಸಬೇಕು.
  • 'ಇಂಡಿಯ'ವನ್ನು ಮತ್ತೆ 'ಹಿಂದುಸ್ಥಾನ'ವನ್ನಾಗಿ ಪರಿವರ್ತಿಸಬೇಕು.
ಇದು ಸಾಧ್ಯವೇ? ಎಂಬ ಪ್ರಶ್ನೆಯೂ ನನ್ನನ್ನು ಕಾಡಿತು. ಸಾಧ್ಯ ಎಂಬ ಆತ್ಮವಿಶ್ವಾಸವಿತ್ತು. ಇದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸಿದಾಗ ನನಗೆ ಹಲವು ತೊಡಕುಗಳು ಕಾಣಿಸಿದವು. ಈಗಿನ ತಲೆಮಾರಿನವರನ್ನು ತಿದ್ದುವುದಕ್ಕಿಂತ ಮುಂದಿನ, ಎಳೆವಸ್ಸಿನ ತಲೆಮಾರಿನವರನ್ನು ತಿದ್ದುವುದು ಹೆಚ್ಚು ಸಮಂಜಸವೆನ್ನಿಸಿತು. ಆದೆರೆ ಈ ಕಾರ್ಯಕ್ಕೂ ಹಲವು ತೊಡಕುಗಳು ಕಾಣಿಸಿತು. ಆ ತೊಡಕುಗಳು ಹೊರಗಿನಿಂದ ಬಂದವುಗಳಲ್ಲ, ಬದಲಾಗಿ ನಮಗೆ ನಾವೇ ಸೃಷ್ಠಿಸಿಕೊಂಡಿರಿವುದು. ನಮ್ಮ ಸ್ಥಿತಿ ಚಕ್ರವ್ಯುಹದಲ್ಲಿ ಸಿಕ್ಕಿಹಾಕಿಕೊಂಡಿರುವ ಅಭಿಮನ್ಯುವಂತಾಗಿದೆ.

ಕೆಲವೊಂದು ಉದಾಹರಣೆಗಳನ್ನು ಕೊಡಲುಬಯಸುತ್ತೇನೆ.

1. ನಮ್ಮಲ್ಲಿ  ಹಲವು ಶಾಲೆಗಳಲ್ಲಿ 'Chirstmas' ಹಬ್ಬವನ್ನು ಆಚರಿಸುವುದನ್ನು ನೋಡಿದ್ದೇವೆ. ನಾನು ಸಹ ಅಂತಹುದೆ ಶಾಲೆ ಇಂದ ಬಂದವನು. ಆದರೆ ಯಾವುದಾರು ಶಾಲೆಯಲ್ಲಿ ಗಣೇಶ ಹಬ್ಬವನ್ನಾಗಲಿ, ಶಿವಾಜಿ ಮಹರಾಜರ ಜಯಂತಿಯನ್ನಾಗಲಿ, ಗುರುನಾಕರ ಜಯಂತಿಯಾಗಲಿ ಆಚರಿಸುವುದುಂಟೆ?

2. ಭಾರತಕ್ಕೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಚಂದ್ರಶೇಖರ ಆಜ಼ಾದ್, ಭಗತ್ ಸಿಂಗ್, ವಿನಾಯಕ ದಾಮೊದರ್ ಸಾವರ್ಕರ್, ರಾಂ ಪ್ರಸಾದ್ ಬಿಸ್ಮಿಲ್ ಮತ್ತು ಮುಂತಾದವರು. ಇಂತವರನ್ನು ನಾವು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಲು ಯಾವುದಾದರು ಶಾಲೆ ಅಥವಾ ಶಿಕ್ಷಕರಾಗಲಿ ಪ್ರಯತ್ನ ಪಟ್ಟಿದ್ದಾರೆಯೇ? ನನ್ನ ಮಟ್ಟಿಗೆ ಹೇಳುವುದಾದರೆ ನಾನು ಓದಿದ ಶಾಲೆಯ ಶಿಕ್ಷಕರಿಗೆ ಮೇಲೆ ಹೇಳಿರುವ ಹೆಸರುಗಳ ಪರಿಚಯವುದೇ ಅನುಮಾನ. ಭಾರತದ ಸ್ವಾತಂತ್ಯ ಇತಿಹಾಸ ನನಗೆ ಪರಿಚಯವಾದದ್ದೆ ನಾನು ಶಾಲ ಪುಸ್ತಕದ ಹೊರತಾಗಿ ಇತರ ಪುಸ್ತಕಗಳನ್ನು ಓದಿದ ಮೇಲೆಯೆ.

3. ನಮ್ಮ ದೇಶದ ಹಬ್ಬವಾದ: ಸ್ವಾತಂತ್ರ್ಯ ದಿವಸವನ್ನು ಇತ್ತೀಚೆಗೆ ಕೆಲವು ಶಾಲೆಗಳು  ಆಚರಿಸದೇ ಆ ದಿನ ರಜೆಯನ್ನಾಗಿ ಘೋಷಣೆ ಮಾಡಿರುವುದನ್ನು ಕಾಣಬಹುದಾಗಿದೆ. ವಿದ್ಯಾ ದೇವತೆಯಾದ ಸರಸ್ವತಿಯನ್ನು ಆರಾಧಿಸುವ ಹಬ್ಬವಾದ: ಸರಸ್ವತಿ ಪೂಜೆಯನ್ನು ಎಷ್ಟು ಶಾಲೆಗಳು ಆಚರಿಸುತ್ತದೆ?

4. ನಮ್ಮ ಸರ್ಕಾರ ಕೂಡ ಹಾಗೆಯೇ ಇದೆ. ಒಂದರಿಂದ ಹತ್ತನೇ ತರಗತಿಯವರೆಗೂ ಭಾರತದ ಸ್ವಾತಂತ್ಯ್ರ ಇತಿಹಾಸವೆಂದರೆ ಬರಿ ಗಾಂಧಿ, ನೆಹರು. ೧೮೫೭ರಲ್ಲಿ ನಡೆದ 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ವನ್ನು ಸಿಪಾಯಿ ದಂಗೆ ಎಂದು ಆಂಗ್ಲರು ಕರೆದರು. ಆದರೆ, ನಾವು ಇಂದಿಗೂ ಸಹ ಅದನ್ನು ಸಿಪಾಯಿ ದಂಗೆ ಎಂದೇ ಪಠಿಸುತ್ತೆದ್ದೇವೆ ಎಂಬುದು ವಿಷಾದನೀಯ. ಶಾಲೆಗಳಲ್ಲಿ ಹೇಳಿಕೊಟ್ಟದ್ದಷ್ಟೇ ಸತ್ಯವೆಂದು ನಂಬಿದ್ದರೆ ನಾನು ಸಹ ಇಂದಿಗೂ ಎಲ್ಲರ ತರಹ ಸಿಪಾಯಿ ದಂಗೆ ಎಂದೆ ಭಾವಿಸುತ್ತಿದ್ದೆ.

5. ನಮ್ಮಲ್ಲಿ ಸರ್ವಧರ್ಮ ಸಮ್ಮೇಳನಗಳು ನಡೆಯುವುದನ್ನು ನೋಡಿದ್ದೇವೆ. ವೇದಿಕೆಯ ಮೇಲೆ ಎಲ್ಲಾ ಧರ್ಮದ ಪ್ರಚಾರಕರು ತಮ್ಮ ತಮ್ಮ ಧರ್ಮದ ಬಗ್ಗೆ ಮಾತಾಡುತ್ತಾರೆ. ಆದರೆ, ಅದನ್ನು ಕೇಳಿಸಿಕೊಳ್ಳುವ ಮಂದಿ ಮಾತ್ರ ಹಿಂದುಗಳು. ಇದೇ ಸರ್ವಧರ್ಮ ಸಮ್ಮೇಳನವನ್ನು ಚರ್ಚಿನಲ್ಲೋ ಅಥವ ಮಸೀದಿಯಲ್ಲೊ ಮಾಡಿರುವ ನಿದರ್ಶನ ಒಂದು ಇಲ್ಲ. ಎಲ್ಲಾ ಧರ್ಮದ ವಿಚಾರವನ್ನು ಹಿಂದುಗಳಿಗೆ ಮಾತ್ರವೋ? ಇತರ ಧರ್ಮಗಳಿಗೆ ನಮ್ಮ ವಿಚಾರವನ್ನು ಏಕೆ ತಿಳಿಸಿಕೊಡುವುದಿಲ್ಲ?

6. ಇತ್ತಿಚೆಗೆ ಕೇರಳದಲ್ಲಿ ನಡೆದ ಮರುಮತಾಂತರದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದ್ದೆ. ಮೂಲತಃ ಹಿಂದುಗಳಾಗಿದ್ದ ಬೇರೆ ಧರ್ಮವನ್ನು ಪಾಲಿಸುತ್ತಿದ್ದವರನ್ನು ಮತ್ತೆ ಹಿಂದು ಧರ್ಮಕ್ಕೆ ಕರೆತರುತ್ತಿದ್ದಾರೆ. ಇದರಲ್ಲಿ ಏನು ತಪ್ಪು? ಗೂಡು ಬಿಟ್ಟು ಹೋದ ಹಕ್ಕಿಯನನ್ನು ಮತ್ತೆ ತನ್ನ ಗೂಡಿಗೆ ಕರೆತರುವುದು ತಪ್ಪೆ? ಇದನ್ನು ತಪ್ಪು, ಅಪರಾಧ ಎನ್ನುವುದಾದರೆ. ಹಿಂದುಗಳನ್ನು ಬೇರೆ ಧರ್ಮಕ್ಕೆ ಮತಾಂತರಗೊಳಿಸುವುದು ಅಷ್ಟೇ ಅಥವಾ ಅದಕ್ಕಿಂತಲೂ ಘೋರವಾದ ಅಪರಾಧ.

ಈ ಮರು ಮತಾಂತರ ಎಂಬ ವಿಚಾರ ಶುರುವಾದದ್ದು ಇಂದಲ್ಲ. ೧೯೨೦-೩೦ರ ಆಸಿನಲ್ಲಿ, ಅಂಡಮಾನ್ ಜೈಲಿನಲ್ಲಿ 'ಕಾಲಾ ಪಾನಿ' (ಕರಿ ನೀರು) ಎಂಬ ಶಿಕ್ಷೆಗೆ ಒಳಗಾಗಿದ್ದ 'ವಿನಾಯಕ ದಾಮೋದರ ಸಾವರ್ಕರ್' ರವರು ಅಲ್ಲಿ ನಡೆಯುತ್ತಿದ್ದ ಮತಾಂತರವೆಂಬ ಪಿಡುಗನ್ನು ಕಂಡು 'ಮರುಮತಾಂತರ' ಕ್ಕೆ ಚಾಲನೆ ನೀಡಿದರು. ಇದು ಆಂಗ್ಲರ ಮಟ್ಟಿಗೆ ತಪ್ಪಿರಬಹುದು ಆದರೆ, ನಮ್ಮದೇ ದೇಶ, ನಮ್ಮದೇ ಧರ್ಮದವರಾದಂತಹ 'ಕಾಂಗ್ರೇಸ್' ಪಕ್ಷದವರಿಗೆ ಇದು ತಪ್ಪಾಗಿ ಕಾಣಿಸುತ್ತಿದೆ! ಅವರಿಗೆ ಹಿಂದುಗಳನ್ನು ಮತಾಂತರ ಮಾಡುವುದು ತಪಲ್ಲ, ಆದರೆ, ನಮ್ಮವರನ್ನು ವಾಪಸ್ಸು ನಮ್ಮ ಧರ್ಮಕ್ಕೆ ಕರೆತಂದರೇ, ಅದು ತಪ್ಪು. 
 
ಇದರ ನಡುವೆ ತಮ್ಮ ರಾಜಕೀಯದ ಕುರ್ಚಿಯನ್ನು ಭದ್ರಗೊಳಿಸಿಕೊಳ್ಳಲು, ಹಿಂದುಗಳ ಒಗ್ಗಟ್ಟನ್ನು ಒಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. BHP - ಭಾರತೀಯ ಹಿಂದು ಪರಿಷತ್ ಎಂಬ ಹೊಸ ಸಂಸ್ಥೆಯನ್ನು ಜನವರಿ ೧೫, ೨೦೧೬ ರಂದು ಹುಟ್ಟುಹಾಕುತ್ತಿದ್ದಾರೆ. ಇದು 'ವಿಶ್ವ ಹಿಂದು ಪರಿಷತ್' ಸಂಸ್ಥೆಯ ವಿರುದ್ಧ ಪಕ್ಷದಂತೆ ಕೆಲಸಮಾಡುತ್ತೆ ಎಂದು ಯಾರಾದರು ಊಹಿಸಬಹುದು.

ಇದೆಲ್ಲದರ ನಡುವೆಯೂ ಭಾರತವನ್ನು 'ಜಗದ್ಗುರು' ಮಾಡಬೇಕಾದರೆ ಯಾವುದೇ ರಾಜಕೀಯದ ಆಮಿಷಕ್ಕೆ ಒಳಗಾಗದೆ, ನಾವೆಲ್ಲರೂ ಭಾರತಿಯರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಹಿಂದು ಧರ್ಮಕ್ಕೆ ಬರುವವರನ್ನು ಸ್ವಾಗತಿಸಿ. ಇತರ ಧರ್ಮದವರನ್ನು ಒಪ್ಪಿಕೊಳ್ಳಿ, ಆದರೆ, ಅವರು ನಮ್ಮ ಮೇಲೆ ಸವಾರಿ ಮಾಡದ ಹಾಗೆ ನಮ್ಮ ಸತ್ವವನ್ನು ಉಳಿಸಿಕೊಳ್ಳೋಣ. 'ಇಂಡಿಯಾ'ವನ್ನು ಮತ್ತೆ 'ಹಿಂದುಸ್ತಾನ'ವನ್ನಾಗಿಸಿ ಮತ್ತೊಮ್ಮೆ ಭಾರತ ಜಗದ್ಗುರುವನ್ನಾಗಿಸೋಣ.