![]() |
| Indian PM Atal Bihari Vajapayee greeting Pakistan counter part Nawaz Sharif |
![]() |
| Pokhran Nuclear Test 1998 |
ಫೆಡರೇಶನ್ ಆಫ್ ಅಮೇರಿಕನ್ ಸೈಂಟಿಸ್ಟ್ಸ್ನ ಗುಪ್ತಚರ ತಜ್ಞ ಜಾನ್ ಪೈಕ್ ಈ ಪ್ರಸಂಗವನ್ನು "ಅಮೇರಿಕಾದ ಗುಪ್ತಚರ ಇಲಾಖೆಯ ದಶಕದ ವೈಫಲ್ಯ" ಎಂದು ಬಣ್ಣಿಸಿದ್ದಾನೆ. ಭಾರತ ಪರಮಾಣು ಪರೀಕ್ಷೆ ನಡೆಸಿದ ಬೆನ್ನಲ್ಲೆ 1998 ಮೇ ತಿಂಗಳಲ್ಲಿ ಅಮೇರಿಕಾದ ಸಹಾಯದೊಂದಿಗೆ ಪಾಕೀಸ್ತಾನವೂ ಸಹ ಬಲೂಚೀಸ್ತಾನದಲ್ಲಿ ಪರಮಾಣು ಪರೀಕ್ಷೆ ನಡೆಸುತ್ತದೆ. ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳು ಪರಮಾಣು ಪ್ರಕ್ರಿಯೆಯಲ್ಲಿ ನಿರತರಾಗಿರುವುದನ್ನು ನೋಡಿ ಜಗತ್ತು ಅಚ್ಚರಿಪಟ್ಟಿತು. ಇದದೊಟ್ಟಿಗೆ ಭಾರತವೂ ಸಶಕ್ತ ಮತ್ತು ಸ್ವಾಭಿಮಾನಿ ರಾಷ್ಟ್ರ ಎಂಬ ಸ್ಪಷ್ಟ ಸಂದೇಶ ಜಗತ್ತಿಗೆ ರವಾನೆಯಾಯಿತು. ಶಾಂತಿ ಸೌಹಾರ್ದತೆ ಇನ್ನು ಸಾಧ್ಯವಿಲ್ಲ ಎಂದು ಬಹುತೇಕರು ಅಂದುಕೊಂಡರು. ಅದೇ ಸಮಯದಲ್ಲಿ 'ಸಮರಕ್ಕೂ ಸಿದ್ಧ, ಸ್ನೇಹಕ್ಕೂ ಬದ್ಧ' ಎಂಬ ಸಂದೇಶ ಜಗತ್ತು ಅಚ್ಚರಿ ಪಡುವಂತೆ ಅಟಲ್ಜೀಯ ಮೂಲಕ ಭಾರತ ನೀಡಿತು.
ಭಾರತ ಮತ್ತು ಪಾಕೀಸ್ತಾನಗಳ ನಡುವೆ ಸ್ನೇಹ ಗಟ್ಟಿಯಾಗಿರಬೇಕೆಂದು ಅಟಲ್ಜೀ 17 ಜನ ಭಾರತೀಯರೊಂದಿಗೆ ದೆಹಲಿಯಿಂದ ಲಾಹೋರಿಗೆ ಬಸ್ಸಲ್ಲಿ ತೆರಳಿದರು. ಪಾಕೀಸ್ತಾನದ ಪ್ರಧಾನಿ ನವಾಜ್ ಶರೀಫ಼್ ರನ್ನು ಸ್ನೇಹದ ಸಂಕೇತವಾಗಿ ತಬ್ಬಿಕೊಳ್ಳುತ್ತಾರೆ. ಅಟಲ್ಜೀ ಅವರೊಂದಿಗೆ ಚಲನಚಿತ್ರ, ಕಲೆ, ಸಂಸ್ಕೃತಿ ಮತ್ತು ಕ್ರಿಕೆಟ್ ಕ್ಷೇತ್ರಗಳ ಪ್ರಖ್ಯಾತರುಗಳಾದ ಶತ್ರುಘನ್ ಸಿನ್ಹಾ, ಮಲ್ಲಿಕಾ ಸರಭಾಯ್, ಅರುಣ್ ಶೌರಿ, ಜಾವೇದ್ ಅಖ್ತರ್, ಸತೀಶ್ ಗುಜ್ರಾಲ್, ಕುಲದೀಪ್ ನಾಯರ್ ಮತ್ತು ಕಪಿಲ್ ದೇವ್ ಸಹ ಹೋಗಿದ್ದರು. ಅಟಲ್ಜೀ ಅವರ ಕುಟುಂಬದೊಂದಿಗೆ ಮೊಮ್ಮಗಳು ನಿಹರಿಕಾ, ಸಾಕು-ಮಗಳು ನಮಿತಾ ಮತ್ತು ಅವರ ಪತಿ ರಂಜನ್ ಭಟ್ಟಾಚಾರ್ಯರನ್ನು ಕರೆದುಕೊಂಡು ಹೋಗಿದ್ದರು. ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ವಿದೇಶಾಂಗ ಕಾರ್ಯದರ್ಶಿ ಕೆ. ರಘುನಾಥ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯ ಇತರ ಹಿರಿಯ ಅಧಿಕಾರಿಗಳು ತೆರಳಿದ್ದರು. ವಾಗಾ ಗಡಿಭಾಗದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಎರಡೂ ದೇಶಗಳ ನಡುವಿನ 21 ವರ್ಷಗಳ ದ್ವೇಷದ ಕೊಳೆ ತೊಳೆದುಹಾಕುವ ಇರಾದೆ ಭಾರತದ್ದಾಗಿತ್ತು. "ಉಭಯ ದೇಶಗಳ ನಡುವೆ ಬಸ್ ಸೇವೆಯನ್ನು ನಡೆಸುವುದು ನಮ್ಮ ಸಂಬಂಧವನ್ನು ಸುಧಾರಿಸುವ ಮತ್ತು ನಮ್ಮ ಜನಗಳನ್ನು ಒಗ್ಗೂಡಿಸುವ ಸಂಕೇತವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧ ಹಿಂಸಾಚಾರದ ಮೂಲಕ ಅಲ್ಲ ಬದಲಾಗಿ ಶಾಂತಿ ಮತ್ತು ಸ್ನೇಹದಿಂದ ಪರಿಹರಿಸಿಕೊಳ್ಳಬಹುದು" ಎಂದು ಅಟಲ್ಜೀ ಹೇಳಿದ್ದರು.
![]() |
| Prime Minister Atal Bihari Vajapayee and team towards Pakistan |
ಎಲ್ಲವೂ ಸರಿಯಾಗಿತ್ತು, 1947 ರಲ್ಲಿ ಭಾರತ ತುಂಡಾಗಿ, 3 ಯುದ್ಧಗಳು ನಡೆದ ನಂತರ ಎರಡೂ ದೇಶಗಳು ಪರಸ್ಪರ ಹೊಂದಿಕೊಂಡು ಶಾಂತವಾಗಿ ಮುಂದುವರೆಯುವ ಭಾವನೆ ಭಾರತವನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಇಂಗ್ಲೆಂಡಿನಲ್ಲಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವುದರಲ್ಲಿತ್ತು. ಜಗತ್ತಿನ ಗಮನ ಕ್ರಿಕೆಟ್ ಕಡೆ ಹರಿದಿತ್ತು. ಮೇ ತಿಂಗಳಲ್ಲಿ ಕಾರ್ಗಿಲ್ ಕಣಿವೆಯಲ್ಲಿ ಭಾರತಕ್ಕೆ ಬಂದು ಅಪ್ಪಳಿಸಿತು ನಂಬಿಕೆ ದ್ರೋಹದ ಭಯಂಕರ ಸುದ್ಧಿ! ಚಳಿಗಾಲ ಮುಗಿಯುವ ಮುನ್ನವೇ ಪಾಕೀಸ್ತಾನದ ಸೇನೆ ಭಯೋತ್ಪಾದಕರ ವೇಷದಲ್ಲಿ ಕಾರ್ಗಿಲ್ ಬೆಟ್ಟವನ್ನು ಹತ್ತಿ ಭಾರತದ್ದೇ ಬಂಕರ್ಗಳಲ್ಲಿ ಅವಿತು ಕುಳಿತಿದ್ದರು. ಕಾರ್ಗಿಲ್ ಬೆಟ್ಟದ ಮೇಲೆ ಭಾರತೀಯರಲ್ಲದವರು ಬಂದಿದ್ದಾರೆ ಎಂಬ ಸೂಚನೆಯನ್ನು ಆ ಊರಿನ ದನ ಕಾಯುವ ಹುಡುಗರು ಸೈನ್ಯಕ್ಕೆ ಕೊಡುತ್ತಾರೆ. ಅನುಮಾನದಿಂದ ಸೌರಭ್ ಕಾಲಿಯಾ ನೇತೃತ್ವದಲ್ಲಿ 5 ಜನರ ಪಡೆಯನ್ನು ಭಜರಂಗಿ ಪೋಸ್ಟ್ ಕಡೆಗೆ ಸೇನೆ ಕಳಿಸುತ್ತದೆ. ಪಾಕೀಸ್ತಾನ ಐದು ಜನ ಸೈನಿಕನ್ನೂ ಸೆರೆಹಿಡಿದು ಎಳೆದೊಯ್ಯುತ್ತದೆ. ಭಾರತೀಯ ಸೈನಿಕರಿಗೆ ಅತ್ಯಂತ ಬರ್ಬರವಾಗಿ ಹಿಂಸೆ ಮಾಡಲಾಗುತ್ತದೆ. ಸೈನಿಕರ ಮೂಗು-ನಾಲಿಗೆ ಕತ್ತರಿಸಿ, ಕಣ್ಣು ಕಿತ್ತೆಸೆದು, ಕೈಕಾಲು ಬೆರಳುಗಳನ್ನು ಕತ್ತರಿಸಿ, ಸೌರಭ್ ಕಾಲಿಯಾ ಜೀವಂತವಾಗಿರುವಾಗಲೇ ಅವರ ಮರ್ಮಾಂಗವನ್ನು ಕತ್ತರಿಸಿ ತುಂಡು ತುಂಡಾದ ದೇಹವನ್ನು ಭಾರತಕ್ಕೆ ಪಾಕೀಸ್ತಾನ ಕಳಿಸಿತು! ಭಾರತ ಸರ್ಕಾರಕ್ಕೆ ಆಗ ಅರ್ಥವಾಗಿತ್ತು ತನ್ನ ಬೆನ್ನಿಗೆ ಪಾಕಿಸ್ತಾನ ಚೂರಿ ಇರಿದಿದೆ ಎಂದು!



History has taught us many lessons, only thing is we should learn from our own mistakes and should never repeat it again. Pakistan is not a country to be trusted anymore, it's a terrorists producing factory
ReplyDeleteಲೇಖನ ಚೆನ್ನಾಗಿ ಮೂಡಿ ಬಂದಿದೆ
ReplyDelete